
Madhu
ಎಡ ಕಾಲು ಮುರಿದು ನರಕಯಾತನೆ ಪಡುತ್ತಿದ್ದ ಕಾಡನೆಗೆ ..ಚಿಕಿತ್ಸೆ.!
ಕಾಡಾನೆಯೊಂದು ಮುಂಭಾಗದ ಎಡ ಕಾಲು ಮುರಿದು ನರಕಯಾತನೆ ಪಡುತಿದ್ದು ನುರಿತ ವೈದ್ಯಕೀಯ ತಜ್ಞರು ಹಾಗೂ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ.
ಸುಳ್ಯ: ತಾಲೂಕಿನ ಬಾಳುಗೋಡು ಎಂಬಲ್ಲಿ ಕಾಡಾನೆಯೊಂದು ಮುಂಭಾಗದ ಎಡ ಕಾಲು ಮುರಿದು ನರಕಯಾತನೆ ಪಡುತಿದ್ದು ನುರಿತ ವೈದ್ಯಕೀಯ ತಜ್ಞರು ಹಾಗೂ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ.ಬಾಳುಗೋಡು ಗ್ರಾಮ ಸಮೀಪದ ಪದಕ ಎಂಬಲ್ಲಿ ಗಂಡು ಕಾಡಾನೆಯೊಂದು ಕಾಲು ಗಾಯಗೊಂಡು ನಡೆದಾಡಲೂ ಆಗದೆ ಯಾತನೆ ಪಡುತ್ತಿತ್ತು.
ಈ ಸ್ಥಳವು ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಪ್ರದೇಶವಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳ ಮೂರು ದಿನಗಳ ನಿರಂತರವಾದ ಪರಿಶ್ರಮದ ನಂತರ ಇಂದು ಚಿಕಿತ್ಸೆ ನೀಡಲಾಗಿದೆ.ನಾಗರಹೊಳೆಯಿಂದ ನುರಿತ ವೈದ್ಯಕೀಯ ತಜ್ಞರಾದ ಡಾಕ್ಟರ್ ಮುಜೀಬ್ ಹಾಗೂ ಗುತ್ತಿಗಾರು ಪಶುವೈದ್ಯ ಡಾಕ್ಟರ್ ವೆಂಕಟಾಚಲಪತಿಯವರ ಹಾಗೂ ಸುಬ್ರಹ್ಮಣ್ಯ ಮತ್ತು ಪಂಜ ವಲಯದ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾದರು.
ದಟ್ಟ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ತಜ್ಞರು ಅರಿವಳಿಕೆ ಔಷಧಿ ನೀಡುವ ಮೂಲಕ ಆನೆಯನ್ನು ತಮ್ಮ ನಿಯಂತ್ರಣಕ್ಕೆ ತಂದು ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಆನೆಯ ಚಲನವಲನಗಳನ್ನು ಗಮನಿಸಲು ಅರಣ್ಯಾಧಿಕಾರಿಗಳ ತಂಡವನ್ನು ಈ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಸುಬ್ರಹ್ಮಣ್ಯ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಆಸ್ಟೀನ್ ಪಿ ಸೋನ್ಸ್, ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಪಂಜ ಅರಣ್ಯ ರಕ್ಷಕ ಹಾಗೂ ಅರಣ್ಯ ವೀಕ್ಷಕರಾದ ಸಂತೋಷ್, ಸುಬ್ರಹ್ಮಣ್ಯ ಮತ್ತು ಪಂಜ ವಲಯಗಳ ಅರಣ್ಯ ರಕ್ಷಕರು, 25 ಕ್ಕೂ ಹೆಚ್ಚಿನ ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದರು.
ನಾನು ಗೆದ್ದಾಗಿದೆ ಅಧಿಕೃತವಾಗಿ ಘೋಷಣೆಯಾಗಬೇಕಷ್ಟೇ...ನಿಖಿಲ್ ಕುಮಾರಸ್ವಾಮಿ
ಚುನಾವಣೆಯಲ್ಲಿ ನಾನು ಗೆದ್ದಾಗಿದೆ. ನನಗೆ ಸಮೀಕ್ಷೆಗಳ ಮೇಲೆ ನಂಬಿಕೆಯಿಲ್ಲ.ನನ್ನ ಜನರು ಮತ್ತು ಕಾರ್ಯಕರ್ತರ ಮೇಲೆ ನನಗೆ ವಿಶ್ವಾಸವಿದೆ.ಕನಿಷ್ಠ 2ಲಕ್ಷ ಮತಗಳ ಅಂತರದಲ್ಲಿ ನಾನು ಗೆದ್ದಾಗಿದೆ.ಅಧಿಕೃತವಾಗಿ ಘೋಷಣೆಯಾಗಬೇಕಷ್ಟೇ ನಿಖಿಲ್ ವಿಶ್ವಾಸ.
ಕೆ.ಆರ್.ಪೇಟೆ: ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕೆ.ಆರ್.ಪೇಟೆ ಪುರಸಭೆ ಚುನಾವಣೆಯ ಆಕಾಂಕ್ಷಿಗಳ ಸಮಾಲೋಚನಾ ಸಭೆಯಲ್ಲಿ ಭಾಗಿ.ಮಂಡ್ಯದಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ನಿಖಿಲ್.ಚಲುವರಾಯಸ್ವಾಮಿ ಹಿರಿಯರಿದ್ದಾರೆ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ನಾನು.ಅವರು ಮೈತ್ರಿಧರ್ಮ ಪಾಲಿಸಿದ್ದಾರೆ ಎನ್ನುವ ವಿಶ್ವಾಸವಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ತಿಳಿಸಿದಂತೆ ಕನಿಷ್ಠ 2ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ನಿಖಿಲ್...ಮಂಡ್ಯದಲ್ಲಿ ಬಾಡಿಗೆ ಮನೆ ಮಾಡಲ್ಲ.ಸ್ವಂತ ತೋಟ, ಮನೆ ಮಾಡ್ತೀನಿ.ಹುಡುಕಾಟದಲ್ಲಿದ್ದೇನೆ.ತೋಟ ಕೊಂಡ ನಂತರ ಸ್ವಂತ ಮನೆಯ ಕೆಲಸ ಆರಂಬಿಸುತ್ತೇನೆ.ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸುತ್ತೇನೆ. ನನ್ನ ಗೆಲುವು ನಿಶ್ಚಿತವಾಗಿದೆ. ಉರಿ ಬಿಸಿಲಿನಲ್ಲಿಯೂ ನನ್ನ ಗೆಲುವಿಗಾಗಿ ದುಡಿದ ಕಾರ್ಯಕರ್ತರಿಗೆ ಋಣಿಯಾಗಿರುತ್ತೇನೆ.ಅವರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದು ನಿಖಿಲ್ ಹೇಳಿದರು.ಶಾಸಕ ನಾರಾಯಣಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉದಯಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಜೀವನದಲ್ಲಿ ಜಿಗುಪ್ಸೆ....ಕೆರೆಗೆ ಹಾರಿ ಆತ್ಮಹತ್ಯೆ..!
ಜೀವನದಲ್ಲಿ ಜಿಗುಪ್ಸೆ.ಕೃಷ್ಣರಾಜಪೇಟೆ ಪಟ್ಟಣದ ದೇವೀರಮ್ಮಣ್ಣಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಟೀ ಕ್ಯಾಂಟೀನ್ ಮಾಲೀಕ ರವಿ.
ಕೆ.ಆರ್.ಪೇಟೆ: ಪಟ್ಟಣದ ಐಯ್ಯಂಗಾರ್ಸ್ ಬೇಕರಿಯಲ್ಲಿ ಕಾಫಿ-ಟೀ ಅಂಗಡಿ ನಡೆಸುತ್ತಿದ್ದ ಪಟ್ಟಣದ ಬಸವೇಶ್ವರ ದೇವಸ್ಥಾನದ ಹಿಂಭಾಗದ ಬಡಾವಣೆಯ ನಿವಾಸಿ ಜಗನ್ನಾಥ ಅವರ ಪುತ್ರ ರವಿ(33)ದೇವೀರಮ್ಮಣ್ಣಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ರವಿ ಅವರು ಪತ್ನಿ ಕುಮಾರಿ, ಪುತ್ರಿ ಪವಿತ್ರ(13) ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬಲಗಾಲಿನ ಗ್ಯಾಂಗ್ರೀನ್ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ರವಿ ಕುಡಿತದ ಚಟಕ್ಕೆ ದಾಸನಾಗಿದ್ದನಲ್ಲದೇ ಪತ್ನಿಯು ತನ್ನ ತವರು ಮನೆಗೆ ತೆರಳಿ ಆರು ವರ್ಷಗಳಾದರೂ ಮರಳಿ ಬರದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಕುಡಿತವನ್ನೇ ಜೀವನವನ್ನಾಗಿ ಮಾಡಿಕೊಂಡಿದ್ದನು.ನಿನ್ನೆ ಸಂಜೆ ತನ್ನು ಶರ್ಟ್ ಅನ್ನು ಕಳಚಿ ಕೆರೆ ಏರಿಯ ಬಸವಣ್ಣನ ದೇವಸ್ಥಾನದ ಬಳಿ ಬಿಚ್ಚಿಟ್ಟು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಬೆಳಿಗ್ಗೆ ಕೆರೆಯಲ್ಲಿ ತೇಲುತ್ತಿದ್ದ ರವಿಯ ಮೃತದೇಹವನ್ನು ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳ ನೆರವಿನಿಂದ ನೀರಿನಿಂದ ಹೊರತೆಗೆದು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಸಂಬಂಧಿಗಳಿಗೆ ಪಾರ್ಥಿವ ಶರೀರವನ್ನು ಒಪ್ಪಿಸಲಾಯಿತು.
ಸುಮಲತಾ ಅಂಬರೀಶ್ ಗೆ ಸೋಲು: ಭವಿಷ್ಯನುಡಿದ ರಾಜಗುರು ದ್ವಾರಕಾನಾಥ್
ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣದಲ್ಲಿರುವ ಸುಮಲತಾ ಅಂಬರೀಶ್ ಅವರು ಸೋಲುತ್ತಾರೆ? ಹೌದು, ಇದೇ ತರನದ ಭವಿಷ್ಯವನ್ನು ರಾಜ ಗುರು ದ್ವಾರಕಾನಾಥ್ ಅವರು ಭವಿಷ್ಯ ನುಡಿಸಿದ್ದಾರೆ.
ಮಂಡ್ಯ : ಅವರು ಇಂದು ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ ಹಾಸನ, ತುಮಕೂರು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಕಾಣುತ್ತಾರೆ ಅಂತ ರಾಜ ಗುರು ದ್ವಾರಕಾನಾಥ್ ಭವಿಷ್ಯ ನುಡಿದಿದ್ದಾರೆ.
ಇನ್ನು ಇದೇ ವೇಳೆ ಅವರು ನನ್ನ ಸಿಎಂ ಭೇಟಿಯಾದ ವೇಳೆಯಲ್ಲಿ ಅವರೇನು ಕೇಳಲಿಲ್ಲ ನಾನೇ ನೀವು ಧೈರ್ಯ ಕೆಡಬೇಡಿ ಎಂದಿದ್ದೇನೆ ಅಂತ ಮಾತ್ರ ಹೇಳಿದ್ದೇನೆ ಅಂತ ಹೇಳಿದ ಅವರು ಮಾಧ್ಯಮ ಗಳ ಜತೆ ಯಾವತ್ತು ವಿಭಿನ್ನವಾಗಿ ಮಾತಾನಾಡಬೇಡಿ ಅಂತ ವಾಗ್ದಾನ ಮಾಡಿಕೊಂಡಿದ್ದೇನೆ ಧರ್ಮದ ಹೆಸರಿನಲ್ಲಿ ಯಾರು ಸಿಎಂ ಆಗಿದ್ದರೋ ಅವರನ್ನು ಕೆಳೆಗಡೆ ಇಳಿಸೋದು ಅಷ್ಟು ಸುಲಭ ಅಲ್ಲದೇವರನ್ನು ಪೂಜೆ ಮಾಡುವವರನ್ನು ದೇವರನ್ನು ಕಾಪಾಡುತ್ತಾರೆ. ಈಗಿನ ಸರ್ಕಾರ ಬಿದ್ದರೆ ನಂಗೆ ನೋವಾಗುತ್ತದೆ ಪದೇ ಪದೇ ಚುನಾವಣೆ ಎದುರಿಸೋಕೆ ಆಗಲ್ಲ ಅಂತ ಹೇಳಿದರು.
ಇದೇ ವೇಳೆ ಅವರು ಮಾತನಾಡುತ್ತ ಕೇಂದ್ರದಲ್ಲಿ ಮೋದಿ ಸರಕಾರ ಬರುವುದನ್ನು ಯಾರು ತಡೆಯುವುದಕ್ಕೆ ಸಾಧ್ಯವಾಗುವುದಿಲ್ಲ, ಆದರೆ ಬಹುಮತ ಮಾತ್ರ ಬಿಜೆಪಿಗೆ ಬರಲ್ಲ ಅಂತ ಅವರು ಹೇಳಿದರು.
ಪೆಟ್ಟಿ ಅಂಗಡಿಯಲ್ಲಿ ಸಿಕ್ಕ ಅಕ್ರಮ ಮಧ್ಯವನ್ನು ಸೇವಿಸಿ ನಾಲ್ವರು ಅಸ್ವಸ್ಥ.
ಪರವಾನಗಿ ಇಲ್ಲದ ಪೆಟ್ಟಿ ಅಂಗಡಿಯಲ್ಲಿ ಸಿಗುವ ಅವಧಿ ಮೀರಿದ ಅಕ್ರಮ ಮಧ್ಯವನ್ನು ಸೇವಿಸಿದ ನಾಲ್ವರು ಯುವಕರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.
ಕೆ.ಆರ್.ಪೇಟೆ: ತಾಲೂಕಿನ ಕೃಷ್ಣಾಪುರ ಗ್ರಾಮದ ನಂಜೇಗೌಡರ ಮಗ ಮಹದೇವ್(50), ವೆಂಕಟರಾಂ ಅವರ ಮಗ ಸುರೇಶ್(29), ಲಿಂಗಾಪುರ ಗ್ರಾಮದ ಸಣ್ಣಯ್ಯ ಅವರ ಮಗ ತಮ್ಮಯ್ಯ(45), ಪರೇಗೌಡನಕೊಪ್ಪಲು ಗ್ರಾಮದ ಸಣ್ಣೇಗೌಡರ ಮಗ ಯೋಗೇಶ್(34) ಅವಧಿ ಮೀರಿದ ಮಧ್ಯೆ ಸೇವನೆ ಮಾಡಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಸ್ನೇಹಿತರಾಗಿದ್ದಾರೆ.
ಘಟನೆ ವಿವರ: ಕೃಷ್ಣಾಪುರ ಗ್ರಾಮದಲ್ಲಿ ಇರುವ ಹಲವು ಪೆಟ್ಟಿ ಅಂಗಡಿಗಳಲ್ಲಿ ಹಲವು ವರ್ಷಗಳಿಂದ ಪರವಾನಗಿ ಇಲ್ಲದೆ ಅವಧಿ ಮೀರಿದ ಮಧ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಅಕ್ರಮ ಮಧ್ಯ ಮಾರಾಟವನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ಹಲವು ಭಾರಿ ಹೋರಾಟ ಮಾಡಿ ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನ ವಾಗಿರುವುದಿಲ್ಲ. ಸ್ನೇಹಿತರಾದ ಮಹಾದೇವ್, ಸುರೇಶ್, ತಮ್ಮಯ್ಯ, ಯೋಗೇಶ್ ಅವರು ಮಂಗಳವಾರ ಮಧ್ಯಾಹ್ನ 4ಗಂಟೆ ಸಮಯದಲ್ಲಿ ಕೃಷ್ಣಾಪುರ ಗ್ರಾಮದಲ್ಲಿ ಸಿಗುವ ಮಧ್ಯವನ್ನು ಕೊಂಡು ಗ್ರಾಮದ ತೋಟವೊಂದರಲ್ಲಿ ಸೇವನೆ ಮಾಡಿದ ಕೆಲವೇ ನಿಮಿಷಗಳಲ್ಲಿ ಹೊಟ್ಟೆ ನೋವು, ವಾಂತಿ-ಬೇದಿ, ಕಾಣಿಸಿಕೊಂಡು ಅಸ್ವಸ್ಥಗೊಂಡರು. ತಕ್ಷಣ ಅವರನ್ನು ಕೆ.ಆರ್.ಪೇಟೆ ಪಟ್ಟಣ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಾಲ್ವರಿಗೂ ತೀವ್ರನಿಗಾ(ಐಸಿಯು) ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವಧಿ ಮೀರಿದ ಮಧ್ಯ ಸೇವನೆ ಇದಕ್ಕೆ ಕಾರಣವಿರಬೇಕೆಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದು, ಪೊಲೀಸರ ಪೂರ್ಣ ಪ್ರಮಾಣದ ತನಿಖೆಯಿಂದ ಇದರ ನಿಖರ ಕಾರಣ ತಿಳಿದು ಬರಬೇಕಾಗಿದೆ.
ಗ್ರಾಮಸ್ಥರ ಆಕ್ರೋಶ: ಕಳೆದ ಹಲವಾರು ವರ್ಷಗಳಿಂದ ಕೃಷ್ಣಾಪುರ ಗ್ರಾಮದಲ್ಲಿ ಕೆಲವು ಪೆಟ್ಟಿಗೆ ಅಂಗಡಿಗಳಲ್ಲಿ ಯಾವುದೇ ಲೈಸೆನ್ಸ್ ಪಡೆಯದೇ ಅಕ್ರಮವಾಗಿ ಕಳಫೆ ಗುಣಮಟ್ಟದ ಮಧ್ಯವನ್ನು ಮಾರಾಟಮಾಡುತ್ತಿರುವುದನ್ನು ತಡೆಗಟ್ಟುವಂತೆ ಹೋರಾಟ ಮಾಡಿದರೂ ಸಹ ಅಬಕಾರಿ ಅಧಿಕಾರಿಗಳಾಗಲಿ, ಪೊಲೀಸ್ ಅಧಿಕಾರಿಗಳಾಗಲು ಮಧ್ಯ ಮಾರಾಟವನ್ನು ತಡೆಗಟ್ಟುವಲ್ಲಿ ವಿಫಲವಾಗಿರುವುದೇ ಇಂದಿನ ದುರ್ಘಟನೆಗೆ ಕಾರಣವಾಗಿದೆ. ಗ್ರಾಮದಲ್ಲಿ ಸುಲಭವಾಗಿ ಸಿಗುವ ಮಧ್ಯವನ್ನು ಸೇವನೆ ಮಾಡಿ ಅಸ್ವಸ್ಥಗೊಂಡು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಮಹಾದೇವ್, ಸುರೇಶ್, ತಮ್ಮಯ್ಯ, ಯೋಗೇಶ್ ಅವರಿಗೆ ಏನಾದರೂ ಹೆಚ್ಚು-ಕಡಿಮೆಯಾದರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈಗಲಾದರೂ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟವನ್ನು ಬಂದ್ ಮಾಡಿಸಬೇಕು. ಅಕ್ರಮ ಮಧ್ಯ ಮಾರಾಟಗಾರರಿಂದ ಆಸ್ಪತ್ರೆಯ ಖಚರ್ು ವೆಚ್ಚಗಳನ್ನು ಭರಿಸಬೇಕೆಂದು ಕೃಷ್ಣಾಪುರ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ಚಂಡಮಾರುತದಿಂದ ತತ್ತರಿಸಿದ ಒಡಿಶಾ ರಾಜ್ಯಕ್ಕೆ 1 ಕೋಟಿಯನ್ನು ದೇಣಿಗೆ ನೀಡಿದ..ಅಕ್ಷಯ್ ಕುಮಾರ್..
ನವದೆಹಲಿ: ಬಾಲಿವುಡ್ ನಟ ಕಿಲಾಡಿ ಅಕ್ಷಯ್ ಕುಮಾರ್ ಅವರು ಫೋನಿ ಚಂಡಮಾರುತದಿಂದ ತತ್ತರಿಸಿದ ಒಡಿಶಾ ರಾಜ್ಯಕ್ಕೆ 1 ಕೋಟಿಯನ್ನು ದೇಣಿಗೆಯಾಗಿ ನೀಡಿದ್ದಾರೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ನಿಧಿಗೆ ಈ 1 ಕೋಟಿಯನ್ನು ನೀಡಿದ್ದಾರೆ. ಈ ಮೂಲಕ ಫೋನಿ ಚಂಡಮಾರುತಕ್ಕೆ ಬಲಿಯಾದ ಒಡಿಶಾ ರಾಜ್ಯಕ್ಕೆ ಹಣ ಸಹಾಯ ಮಾಡಿದ ಮೊದಲ ನಟ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದಾರೆ. ಅಕ್ಷಯ್ ಕುಮಾರ್ ಅವರು ಮುಂಚಿನಿಂದಲೂ ದೇಶದ ಸಮಸ್ಯೆಗಳಿಗೆ ಬೇಗ ಸ್ಪಂದಿಸುತ್ತಾರೆ. ಹಿಂದೆ ಕೇರಳದಲ್ಲಾದ ಪ್ರವಾಹ ಮತ್ತು ಚೆನ್ನೈ ಪ್ರವಾಹಗಳಿಗೂ ಧನ ಸಹಾಯ ಮಾಡಿದ್ದರು. ಭಾರತೀಯ ಸೇನೆಯ ಬಗ್ಗೆ ವಿಶೇಷ ಅಸಕ್ತಿಯನ್ನು ಹೊಂದಿರುವ ಅವರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೂ ಧನ ಸಹಾಯ ಮಾಡಿದ್ದರು.
ಮಹಿಳಾ ಒಕ್ಕೂಟದಿಂದ ಧಾನ್ ಪೌಂಡೇಶನ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ.
ಗಗನಚುಕ್ಕಿ ಮಹಿಳಾ ಕಳಂಜಿ ಒಕ್ಕೂಟದ ಲಾಭಾಂಶವನ್ನು ಧಾನ್ ಪೌಂಡೇಶನ್ ಏಕೆ ಕೊಡಬೇಕು, ಕೊಡುವುದಿಲ್ಲ ಎಂದು ಒತ್ತಾಯಿಸಿ ಮಳವಳ್ಳಿ ಪಟ್ಟಣದ ಧಾನ್ ಪೌಂಡೇಶನ್ ಕಚೇರಿಗೆ ಬೀಗ ಜಡಿದು ಮಹಿಳಾ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.
ಮಳವಳ್ಳಿ: ಪಟ್ಟಣದ ಗಗನಚುಕ್ಕಿ ಮಹಿಳಾ ಕಳಂಜಿ ಒಕ್ಕೂಟ ಕಚೇರಿಯ ಮುಂದೆ ಒಕ್ಕೂಟದ ಅಧ್ಯಕ್ಷೆ ಸೌಭಾಗ್ಯಮ್ಮ ವಾಹಿನಿ ಜೊತೆ ಮಾತನಾಡಿ ಒಕ್ಕೂಟ ಸದಸ್ಯರಿಗೆ ಧಾನ್ ಪೌಂಡೇಶನ್ ವಂಚಿಸುತ್ತಿದ್ದಾರೆ ಒಕ್ಕೂಟದ ಲಾಭಾಂಶವನ್ನು ಧಾನ್ ಪೌಡೇಶನ್ ಕೊಡಬೇಕಂತೆ ಇದು ಯಾವ ನ್ಯಾಯನಾನು ಸಂಘ ಬೆಳೆಸಿದ್ದು, ಒಕ್ಕೂಟ ನಮ್ಮದು . ನಮ್ಮ ಹಣವನ್ನು ಏಕೆ ತಮಿಳುನಾಡಿನ ಸಂಸ್ಥೆಗೆ ನೀಡಬೇಕು ಎಂದು ಪ್ರಶ್ನಿಸಿದರು.ಮೊದಲು ಬೈಲಾ ವನ್ನು ಕನ್ನಡ ಮಾಡಿಸಿದ್ದರೂ ಈಗ ಇಂಗ್ಲಿಷ್ ಭಾಷೆಯಲ್ಲಿ ಮಾಡಿಸಿದ್ದು ನಮಗೆ ವಂಚನೆ ಮಾಡುತ್ತಿದ್ದಾರೆ.ನಮ್ಮ ಒಕ್ಕೂಟದ ಲಾಭಾಂಶವನ್ನು ತಮಿಳಿನಾಡಿನ ಸಂಸ್ಥೆ ಗೆ ಕಳುಹಿಸಬೇಕಂತೆ ಇದು ಯಾವ ನ್ಯಾಯಧಾನ ಪೌಂಡೇಶನ್ ಸಂಸ್ಥೆ ನಡೆಸುವ ಕಾರ್ಯಕ್ರಮ ಕ್ಕೆ ನಮ್ಮ ಒಕ್ಕೂಟ ಹಣ ಕೊಡಬೇಕು ಆದುದ್ದರಿಂದ ಇನ್ನೂ ಮುಂದೆ ನಮ್ಮ ಧಾನ್ ಪೌಂಡೇಶನ್ ಸಂಸ್ಥೆ ಯಿಂದ ಮುಕ್ತಗೊಳಿಸಿ ಎಂದು ಆರೋಪಿಸಿದರು.
ತಮಿಳುನಾಡಿನ ಮಧುರೈ ಮೂಲದ ಧಾನಫೌಂಡೇಶನ್ ಮಾರ್ಗದರ್ಶನದಲ್ಲಿ ಮಳವಳ್ಳಿ ಯಲ್ಲಿ ನಡೆಯುತ್ತಿರುವ ಸಂಸ್ಥೆ ಯಾಗಿದೆ ನಮ್ಮ ಒಕ್ಕೂಟದಲ್ಲಿ 172. ಸ್ತ್ರೀ ಶಕ್ತಿ ಸ್ವ ಸಹಾಯಸಂಘಗಳಿದ್ದು. ಇದುವರೆಗೂ 2 ಕೋಟಿ ರೂ ಯಷ್ಟು ಹಣವನ್ನು ಲಾಭ ಬಂದಿದೆ ಅದನ್ನು ವಂಚಿಸಲು ಯತ್ನ ಮಾಡುತ್ತಿದೆ ಎಂದು ಆರೋಪ ಮಾಡಿದರು
ಸ್ಥಳಕ್ಕೆ ಎ ಎಸ್ ಐ ಲೋಕೇಶ್ ಆಗಮಿಸಿ ಒಕ್ಕೂಟದವರನ್ನು ಮನವೊಲಿಸಲು ಯತ್ನಿಸಿ ದಾವ್ ಫೌಂಡೇಶನ್ ವಲಯಾಧಿಕಾರಿ ಗಜಾನನ ಹೆಗ್ಗೆಡೆ ಕಚೇರಿಗೆ ಬೇಟಿ ಸದಸ್ಯರ ಜೊತೆ ಮಾತನಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ ನಂತರ. ಒಕ್ಕೂಟದ ಎಲ್ಲಾ ನಿರ್ದೇಶಕರ ಜೊತೆ ಚರ್ಚೆ ಮಾಡಿ ದಿನಾಂಕ ನಿಗಧಿ ಪಡಿಸುವುದಾಗಿ ತಿಳಿಸಿದರು.
ಈ ಮಧ್ಯೆ ಒಕ್ಕೂಟದ ಅಧ್ಯಕ್ಷೆ ಸೌಭಾಗ್ಯ ರವರು ಮೇ 25 ರ ನಂತರ ದಿನಾಂಕ ನಿಗಧಿ ಪಡಿಸಿ ಎಂದರು.ಇದೇ ಸಂದರ್ಭದಲ್ಲಿ ಒಕ್ಕೂಟದ ಹಲವು ಸದಸ್ಯರು ಇದ್ದರು
ಇನ್ನೂ ದಾನ್ ಪೌಂಡೇಶನ್ ವಲಯಾಧಿಕಾರಿ ಗಜಾನನ ಹೆಗ್ಗಡೆ ಮಾತನಾಡಿ ಇದು ದಾನ್ ಪೌಂಢೇಶನ್ ಸಂಸ್ಥೆ ಕೆಟ್ಟ ಹೆಸರುಬರಲಿ ಎಂಬ ಪಿತೂರಿ . ನಮ್ಮ ಸಂಸ್ಥೆ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಿವಶಂಕರ್ ಹಾಗೂ ಮಹೇಂದ್ರ ರವರ ಕುತಂತ್ರವಿದು . ನಾವು ಯಾವುದೇ ರೀತಿಯ ಹಣ ವನ್ನೂ ಒಕ್ಕೂಟದಿಂದ ಪಡೆದಿಲ್ಲ. ಶಿವಶಂಕರ್ ರನ್ನು ಕೆಲಸದಿಂದ ತೆಗೆದಿದ್ದು ಹಾಗೂ ಮಹೇಂದ್ರ ರವರ ನ್ನು ವರ್ಗ ಮಾಡಿದ ಹಿನ್ನಲೆಯಲ್ಲಿ ಕೆಲವು ಸ್ವ ಸಹಾಯ ಗುಂಪುಗಳಿಗೆ ತಪ್ಪು ತಿಳುವಳಿಕೆ ನೀಡಿದ್ದಾರೆ. ಪ್ರತಿಯೊಂದಕ್ಕೂ ಲೆಕ್ಕವಿದೆ ಸದ್ಯದಲ್ಲೇ ಎಲ್ಲಾ ನಿರ್ದೆಶಕರ ಸಭೆ ಕರೆದು ಚರ್ಚೆ ಮಾಡಿ ನಂತರ ಎಲ್ಲಾ ಒಕ್ಕೂಟ ಸದಸ್ಯರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಮಳವಳ್ಳಿತಾಲ್ಲೂಕಿನಲ್ಲಿ ಬಸವಜಯಂತಿಯನ್ನು ಅದ್ದೂರಿ ಹಾಗೂ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಮಳವಳ್ಳಿತಾಲ್ಲೂಕಿನ ವಿವಿದ ಗ್ರಾಮಗಳಲ್ಲಿ ಬಸವಜಯಂತಿಯನ್ನು ಅದ್ದೂರಿ ಹಾಗೂ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಮಳವಳ್ಳಿ: ಕಾಯಕಯೋಗಿ ಕ್ರಾಂತಿಕಾರ ಜಗಜ್ಯೋತಿ ಶ್ರೀ ಬಸವೇಶ್ವರ ರವರ ಜಯಂತಿ ಕಾರ್ಯಕ್ರಮ ಹಲವು ಸಂಘಟನೆ ಗಳು , ವೀರಶೈವ ಲಿಂಗಾಯತ ಸಮುದಾಯದವರು ಸೇರಿದಂತೆ ಮಳವಳ್ಳಿತಾಲ್ಲೂಕಿನ ವಿವಿದ ಗ್ರಾಮಗಳಲ್ಲಿ ಬಸವಜಯಂತಿಯನ್ನು ಅದ್ದೂರಿ ಹಾಗೂ ವಿಜೃಂಭಣೆಯಿಂದ. ಆಚರಣೆ ಮಾಡಲಾಯಿತು. ಮಳವಳ್ಳಿ ಪಟ್ಟಣದ ಆದರ್ಶ ಕಾನ್ವೆಂಟ್ ರಸ್ತೆಯಲ್ಲಿರುವ ಶ್ರೀಬಸವೇಶ್ವರ ವೃತ್ತದಲ್ಲಿ ಬಸವಣ್ಣರವರ ಭಾವಚಿತ್ರ ವಿಟ್ಟು ಪೂಜೆ ಸಲ್ಲಿಸಿ ನಂತರ ಗಿಡಗಳನ್ನು ವಿತರಣೆ ಮೂಲಕ ಸಾಲುಮರನಾಗರಾಜು ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೀರಶೈವ ಮುಖಂಡರು , ಮಾಜಿ ಪುರಸಭೆ ಸದಸ್ಯರು ಸೇರಿದಂತೆ ಹಲವರು ಇದ್ದರು.
ಇನ್ನೂ ಶ್ರೀ ಬಸವೇಶ್ವರ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ತಮ್ಕ ಕಚೇರಿಯಲ್ಲಿ ಬಸವಣ್ಣರವರ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಬಸವ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ನಂಜುಂಡಸ್ವಾಮಿ. ಉಪಾಧ್ಯಕ್ಷ ಲೋಕೇಶ್ , ಕಾರ್ಯದರ್ಶಿ ರಾಜೇಶ್ , ಖಜಾಂಚಿ ಮಹೇಶ್, ನಾಗೇಂದ್ರ ಸೇರಿದಂತೆ ಮತ್ತಿತ್ತರರು ಇದ್ದರು ಇನ್ನೂ ತಾಲ್ಲೂಕು ವೀರಶೈವ ಯುವ ಬಳಗದವತಿಯಿಂದ. ಬಸವಣ್ಣರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಅಚರಿಸಲಾಯಿತು.
ಸುಮಲತಾ ಪರವಾಗಿ ನಟ ದರ್ಶನ್ ಪ್ರಚಾರ. ಜೋಡಿ ಜೆಸಿಬಿ ಮೇಲೆ ನಿಂತು ಅಭಿಮಾನಿಗಳು ಹೂಮಳೆ.
ಸುಮಲತಾ ಪರವಾಗಿ ನಟ ದರ್ಶನ್ ಪ್ರಚಾರ. ಜೋಡಿ ಜೆಸಿಬಿ ಮೇಲೆ ನಿಂತು ಅಭಿಮಾನಿಗಳು ಹೂಮಳೆ.ಏ.18 ರಂದು ಮತಗಳ ಮಳೆ ಸುರಿಸಬೇಕು ಎಂದು ಮನವಿ..
ಮಂಡ್ಯ: ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಇಳಿದಿರುವ ದಚ್ಚುಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಜೋಡಿ ಜೆಸಿಬಿ ಮೇಲೆ ನಿಂತು ಅಭಿಮಾನಿಗಳು ಹೂಮಳೆ ಸುರಿಸಿದ್ದಾರೆ.ನಟ ದರ್ಶನ್ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಪ್ರಚಾರ ಮಾಡುತ್ತಿದ್ದಾರೆ. ತಾಲೂಕಿನ ಸಂತೇಬಾಚಹಳ್ಳಿ ಕ್ರಾಸ್ ಬಳಿ ಪ್ರಚಾರದ ವೇಳೆ ಅಭಿಮಾನಿಗಳು ಎರಡು ಜೆಸಿಬಿ ತರಿಸಿ, ಮೇಲಿನಿಂದ ಹೂಮಳೆ ಸುರಿಸಿದರು.ಜೋಡಿ ಜೆಸಿಬಿ ಮೂಲಕ ಹೂಮಳೆ ಸುರಿಸುತ್ತಿರುವ ದಚ್ಚು ಅಭಿಮಾನಿಗಳು ಈ ವೇಳೆ ದರ್ಶನ್, ಈಗ ಹೇಗೆ ಹೂಮಳೆ ಸುರಿಸಿದ್ದೀರೋ ಹಾಗೇ ಏ.18 ರಂದು ಮತಗಳ ಮಳೆ ಸುರಿಸಬೇಕು ಎಂದು ಮನವಿ ಮಾಡಿದರು.
ನಂತರ ಕಿಕ್ಕೇರಿಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ನಟ ದರ್ಶನ್ ಪ್ರಚಾರಕ್ಕೆ ತೆರಿಳಿದ ವೇಳೆ ನೆಚ್ಚಿನ ನಟನನ್ನ ನೊಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಹೆಜ್ಜೇನು ದಾಳಿ ರೈತ ಸ್ಥಳದಲ್ಲಿಯೇ ಸಾವು...
ನೀರು ಹಾಯಿಸುತ್ತಿದ್ದಾಗ ಏಕಾ ಏಕಿ ಹೆಜ್ಜೇನುಗಳು ದಾಳಿ .ರೈತ ಲೋಕೇಶ್ ಸ್ಥಳದಲ್ಲಿಯೇ ಸಾವು..
ಕೃಷ್ಣರಾಜಪೇಟೆ: ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಜಮೀನಿನಲ್ಲಿ ನೀರು ಹಾಯಿಸುತ್ತಿದ್ದಾಗ ಏಕಾ ಏಕಿ ಹೆಜ್ಜೇನುಗಳು ದಾಳಿ ಮಾಡಿದ್ದರಿಂದ ಲೋಕೇಶ್ ಎಂದು ರೈತ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಮೃತ ಲೋಕೇಶ್ ಅವರ ರಕ್ಷಣೆಗೆ ಮುಂದಾಗಿದ್ದ ನಾಗರಾಜು ಮತ್ತು ಕಾಳಶೆಟ್ಟಿಯವರಿಗೂ ಜೇನುಗಳು ದಾಳಿ ಮಾಡಿವೆ ಅವರು ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಲೋಕೇಶ್ ಶೆಟ್ಟಿ ಮದುವೆಯಾಗಿ ಇಬ್ಬರು ಗಂಡು ಮಕ್ಕಳಿದ್ದರು ನಾಲ್ಕು ವರ್ಷದ ಮಗು ಮತ್ತು ಆರು ವರ್ಷದ ಮಗು ಇಬ್ಬರು ಗಂಡು ಮಕ್ಕಳಿದ್ದರು ಗ್ರಾಮದಲ್ಲಿ ಸೂತಕದ ಛಾಯಾ ನಿರ್ಮಾಣವಾಗಿದೆ