
Madhu
ನಾಲ್ಕು ಯುವಕರಿಂದ ಸಾಮಾಜಿಕ ಜಾಲತಾಣದಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ಲೈಂಗಿಕ ಕಿರುಕುಳ...
ನಾಲ್ಕು ಯುವಕರಿಂದ ಸಾಮಾಜಿಕ ಜಾಲತಾಣದಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ಲೈಂಗಿಕ ಕಿರುಕುಳ.ಮಾಹಿಳಾ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ .
ಚೆನ್ನೈ: ನಾಲ್ಕು ಯುವಕರ ಗುಂಪೊಂದು ಸಾಮಾಜಿಕ ಜಾಲತಾಣದಲ್ಲಿ 50ಕ್ಕೂ ಹೆಚ್ಚು ಮಹಿಳೆಯರನ್ನು ಆಕರ್ಷಿಸಿ, ಲೈಂಗಿಕ ಕಿರುಕುಳ ನೀಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಇದು ಸದ್ಯ ರಾಜಕೀಯ ತಿರುವು ಪಡೆದುಕೊಂಡು ಭಾರೀ ಚರ್ಚೆಗೆ ಕಾರಣವಾಗಿದೆ.ತಿರುನಾವುಕ್ಕರಸು (26), ಸತೀಶ್ (29), ಸಬರಿರಾಜನ್ ಮತ್ತು ವಸಂತ್‍ಕುಮಾರ್ ಬಂಧಿತ ಆರೋಪಿಗಳು. ತಮಿಳುನಾಡಿನ ವಿವಿಧ ಭಾಗದ ಯುವತಿಯರು, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥ ಮಹಿಳೆಯರಿಗೆ ಆರೋಪಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.ತಮಿಳುನಾಡಿನ 19 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕುತ್ತಿದ್ದ ಪ್ರಕರಣದಲ್ಲಿ ಯುವಕರನ್ನು ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ 50ಕ್ಕೂ ಹೆಚ್ಚು ಮಹಿಳೆಯರು, ಯುವತಿಯರಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಆರೋಪಿಗಳ ಮೊಬೈಲ್ ಫೋನ್‍ಗಳನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಸುಮಾರು 50 ಮಹಿಳೆಯರ ಫೋಟೋಗಳಿದ್ದವು ಎಂದು ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿರುವ ಆರೋಪಿಗಳಾದ ತಿರುನಾವುಕ್ಕರಸು ಹಾಗೂ ಸತೀಶ್ ಆರು ವರ್ಷಗಳಿಂದ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿ, ವಿಡಿಯೋ ಮಾಡುತ್ತಿದ್ದರು. ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ ಎಂದು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಈ ಗುಂಪಿಗೆ ಇತ್ತೀಚೆಗೆ ಸಬರಿರಾಜನ್ ಮತ್ತು ವಸಂತ್‍ಕುಮಾರ್ ಸೇರಿಕೊಂಡಿದ್ದರು.ಆರೋಪಿ ಯುವಕರು ಮಹಿಳೆಯರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್ ತೆರೆದು, ಹುಡುಗಿಯರ ಜೊತೆಗೆ ಸ್ನೇಹ ಬೆಳೆಸುತ್ತಿದ್ದರು. ಬಳಿಕ ಸ್ನೇಹಿತರಂತೆ ಚಾಟ್ ಮಾಡುತ್ತಾ ಅವರೊಂದಿಗೆ ಬೆರೆಯುತ್ತಿದ್ದರು. ಚಾಟಿಂಗ್ ವೇಳೆ ಸೆಕ್ಸ್, ಲೆಸ್ಬಿನ್ (ಸಲಿಂಗಕಾಮ) ಸಂಬಂಧಿಸಿದ ವಿಚಾರವಾಗಿ ಮಾತನಾಡುತ್ತಿದ್ದರು. ಹೀಗೆ ಹುಡುಗಿಯರನ್ನು ನಂಬಿಸಿ, ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದರು. ಅಷ್ಟೇ ಅಲ್ಲದೆ ಭೇಟಿಯಾದ ಯುವತಿಯರನ್ನು ಅಣ್ಣಾ ಮಲೈ ಅರಣ್ಯ ಪ್ರದೇಶದ ತೋಟದ ಮನೆಗೆ ಕೆರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು.ಚೆನ್ನೈ, ಕೊಯಮತ್ತೂರು, ಸೇಲಂ ಮತ್ತು ತಮಿಳುನಾಡಿನ ಅನೇಕ ಭಾಗದ ಯುವತಿಯರು, ಮಹಿಳೆಯರು ಯುವಕರ ಮೋಸಕ್ಕೆ ಒಳಗಾಗಿದ್ದಾರೆ. ಅವರಲ್ಲಿ ಹೆಚ್ಚಾಗಿ ಶಾಲೆ ಮತ್ತು ಕಾಲೇಜು ಶಿಕ್ಷಕಿಯರು, ವೈದ್ಯರು, ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿನಿಯರಿದ್ದಾರೆ. ಯುವಕರ ಮೋಸಕ್ಕೆ ಒಳಗಾದ ಅನೇಕ ಯುವತಿಯರು ಕುಟುಂಬದ ಮರ್ಯಾದೆಗೆ ಅಂಜಿ ದೂರು ನೀಡಲು ಹಿಂದೇಟು ಹಾಕಿದ್ದಾರೆ. ಆರೋಪಿಗಳಿಂದ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆಯರಲ್ಲಿ ನಾಲ್ವರು ಅನೌಪಚಾರಿಕವಾಗಿ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕರ ವಿರುದ್ಧ ಠಾಣೆಯೊಂದರಲ್ಲಿ ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ಆರೋಪಿಗಳ ಪೈಕಿ ಓರ್ವ ಯುವಕ 19 ವರ್ಷದ ಯುವತಿಯ ಜೊತೆಗೆ ಫೇಸ್‍ಬುಕ್‍ನಲ್ಲಿ ಸ್ನೇಹ ಬೆಳೆಸಿ ಆತ್ಮೀಯವಾಗಿ ನಡೆದುಕೊಂಡಿದ್ದ. ಬಳಿಕ ನಿನ್ನನ್ನು ಭೇಟಿಯಾಗಬೇಕು ಎಂದು ಕೇಳಿದ್ದನು. ಹೀಗಾಗಿ ಯುವತಿ ಫೆಬ್ರವರಿ 12ರಂದು ಕಾಲೇಜಿನ ಊಟದ ವಿರಾಮದ ವೇಳೆ ಭೇಟಿಯಾಗುವುದಾಗಿ ತಿಳಿಸಿದ್ದಳು. ಅಂದುಕೊಂಡಂತೆ ಅಂದು ಯುವತಿ ಬಂದಿದ್ದಳು, ಬಳಿಕ ಯುವತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಮಾತನಾಡುತ್ತಿದ್ದ. ಈ ವೇಳೆ ಅಲ್ಲಿಗೆ ಬಂದ ಆತನ ಮೂವರು ಸ್ನೇಹಿತರು ಕಾರಿನಲ್ಲಿ ಕುಳಿತು ಚಾಲನೆ ಮಾಡಲು ಆರಂಭಿಸಿದರು. ಇತ್ತ ಭೇಟಿಯಾಗಲು ಕರೆದಿದ್ದ ಯುವಕ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಈ ದೃಶ್ಯವನ್ನು ಇತರರು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಬಳಿಕ ವಿಡಿಯೋ ಮೂಲಕ ಬೆದರಿಕೆ ಹಾಕಿ ಯುವತಿಯನ್ನು ಭೇಟಿಯಾಗುವಂತೆ ಹಾಗೂ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಕುರಿತು ಯುವತಿ ತನ್ನ ಪೋಷಕರ ಮುಂದೆ ಹೇಳಿಕೊಂಡಿದ್ದಳು. ವಿಡಿಯೋವನ್ನು ಡಿಲೀಟ್ ಮಾಡುವಂತೆ ಯುವತಿಯ ಸಹೋದರ ಆರೋಪಿಗಳಿಗೆ ಕೇಳಿಕೊಂಡಿದ್ದಾನೆ. ಆದರೆ ಇದಕ್ಕೆ ಒಪ್ಪದ ಆರೋಪಿಗಳು ಆತನಿಗೆ ಬೆದರಿಕೆ ಹಾಕಿದ್ದರು. ಬಳಿಕ ಈ ಸಂಬಂಧ ಯುವತಿಯ ಪೋಷಕರು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಎ. ನಾಗರಾಜ್ ಎಐಎಡಿಎಂಕೆ ಮಂತ್ರಿ ಜೊತೆ ತೆಗೆಸಿಕೊಂಡಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ಎಚ್ಚೆತ್ತುಕೊಂಡ ಪಕ್ಷದ ನಾಯಕರು ನಾಗರಾಜ್‍ನನ್ನು ಪಕ್ಷದ ಸದಸ್ಯತ್ವದಿಂದ ಕಿತ್ತುಹಾಕಿದ್ದಾರೆ. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಐಎಡಿಎಂಕೆ ನಾಯಕರು ಹಾಗೂ ಇತರೆ ರಾಜಕಾರಣಿಗಳು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ನಾಲ್ವರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 354(ಎ) ಹಾಗೂ 354(ಬಿ), ಸೆಕ್ಷನ್ 66 ಮಾಹಿತಿ ತಂತ್ರತ್ಞಾನ ಕಾಯ್ದೆ 2000 ಮತ್ತು ಸೆಕ್ಷನ್ 4ರ ತಮಿಳುನಾಡು ಮಾಹಿಳಾ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೋರ್ನ್ ಸ್ಟಾರ್ ಆದ ನಟಿ ರಮ್ಯಾಕೃಷ್ಣ......
ನಟಿ ರಮ್ಯಾಕೃಷ್ಣ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ರಮ್ಯಾಕೃಷ್ಣ ಮೊದಲ ಬಾರಿಗೆ ಪೋರ್ನ್ ಸ್ಟಾರ್ ಆಗಿ ನಟಿಸುತ್ತಿದ್ದಾರೆ.
ಚೆನ್ನೈ: ತಮಿಳಿನಲ್ಲಿ ತ್ಯಾಗರಾಜನ್ ಕುಮಾರರಾಜ್ ನಿರ್ದೇಶನ ಮಾಡುತ್ತಿರುವ ‘ಸೂಪರ್ ಡಿಲೆಕ್ಸ್’ ಚಿತ್ರದಲ್ಲಿ ರಮ್ಯಾಕೃಷ್ಣ ಮೊದಲ ಬಾರಿಗೆ ನೀಲಿತಾರೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಲೀಲಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಇತ್ತೀಚೆಗೆ ರಮ್ಯಾಕೃಷ್ಣ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿ, “ನನಗೆ ಈ ಪಾತ್ರ ಮಾಡುವಾಗ ಮೊದಲು ತುಂಬಾ ಮುಜುಗರ ಆಯಿತು. ಈ ಪಾತ್ರ ತುಂಬಾ ಚಾಲೆಂಜಿಂಗ್ ಆಗಿದೆ. ಏಕೆಂದರೆ ಈ ಚಿತ್ರದ ಕಥೆಯಲ್ಲಿ ತುಂಬಾ ತಾಕತ್ ಇದೆ. ನಾನು ಈ ಪಾತ್ರವನ್ನು ಹಣಕ್ಕಾಗಿ ಮಾಡಿಲ್ಲ” ಎಂದು ಹೇಳಿದ್ದಾರೆ.ಈ ಚಿತ್ರದ ಸೀನ್‍ವೊಂದು ಓಕೆ ಮಾಡಲು ನಿರ್ದೇಶಕರಿಗಾಗಿ ನಾನು ಎರಡು ದಿನ ಬರೋಬ್ಬರಿ 37 ರೀ-ಟೇಕ್ ತೆಗೆದುಕೊಂಡಿದ್ದೇನೆ. ನಾನು ರೀ-ಟೇಕ್ ತೆಗೆದುಕೊಂಡು ಅಭಿನಯಿಸುವಾಗ ಅಲ್ಲಿದ್ದ ಸಹಾಯಕರು ಅದನ್ನು ನೋಡಿ ಆಶ್ಚರ್ಯಪಟ್ಟರು ಎಂದರು.ಈ ಚಿತ್ರದ ಪಾತ್ರಕ್ಕಾಗಿ ರಮ್ಯಾಕೃಷ್ಣ ಅವರ ಬದಲು ಹಿರಿಯ ನಟಿ ನಾದಿಯಾ ಅವರನ್ನು ಸಂಪರ್ಕಿಸಲಾಗಿತ್ತು. ಬಳಿಕ ಈ ಪಾತ್ರಕ್ಕೆ ರಮ್ಯಾಕೃಷ್ಣ ಅವರೇ ಸೂಕ್ತ ಎಂದು ಸ್ವತಃ ಚಿತ್ರದ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ್ ಹೇಳಿದ್ದಾರೆ.
ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಇದೇ ತಿಂಗಳು 29ರಂದು ಬಿಡುಗಡೆಯಾಗಲಿದೆ
ಒಂದು ಲೋಕಸಭೆ ಕ್ಷೇತ್ರ, ಮೂರು ಹಂತದ ಮತದಾನ: ಇತಿಹಾಸದಲ್ಲಿ ಇದೇ ಮೊದಲು!
ಒಂದೇ ಒಂದು ಲೋಕಸಭೆ ಕ್ಷೇತ್ರದಲ್ಲಿ ಹಲವು ಹಂತಗಳಲ್ಲಿ ಮತದಾನ ,ಇತಿಹಾಸದಲ್ಲಿ ಇದೇ ಮೊದಲು!
ನವದೆಹಲಿ: ಸಾಮಾನ್ಯವಾಗಿ ಯಾವುದೇ ಒಂದು ರಾಜ್ಯದಲ್ಲಿ ಹಲವು ಹಂತಗಳಲ್ಲಿ ಮತದಾನ ನಡೆಯುತ್ತದೆ. ಆದರೆ, ಒಂದೇ ಒಂದು ಲೋಕಸಭೆ ಕ್ಷೇತ್ರದಲ್ಲಿ ಹಲವು ಹಂತಗಳಲ್ಲಿ ಮತದಾನ ನಡೆಯುವುದನ್ನು ನಾವು ಕೇಳಿರಲು ಸಾಧ್ಯವೇ ಇಲ್ಲ. ಭಾರತೀಯ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಒಂದು ಘಟನೆಗೆ ಈ ಲೋಕಸಭೆ ಚುನಾವಣೆ ಸಾಕ್ಷಿಯಾಗಲಿದೆ.
ಭದ್ರತೆಯ ಕಾರಣದಿಂದಾಗಿ ಅತ್ಯಂತ ಸೂಕ್ಷ್ಮ ಲೋಕಸಭೆ ಕ್ಷೇತ್ರವಾಗಿರುವ ಅನಂತನಾಗ್ ಕ್ಷೇತ್ರದಲ್ಲಿ ಮೂರು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಸಲಾಗುತ್ತಿದೆ. ಇಲ್ಲಿ ಚುನಾವಣೆ ನಡೆಸುವುದು ಎಷ್ಟು ಸವಾಲಿನ ಕೆಲಸ ಎಂಬುದನ್ನು ನೀವು ಊಹಿಸಬಹುದು. ಇದೇ ಕಾರಣದಿಂದಾಗಿಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸಲಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ತಿಳಿಸಿದ್ದಾರೆ.
ಅನಂತನಾಗ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 16 ವಿಧಾನಸಭೆ ಕ್ಷೇತ್ರಗಳಿದ್ದು, ಅನಂತನಾಗ್, ಶೋಪಿಯಾನ್, ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳನ್ನು ಒಳಗೊಂಡಿದೆ. ಈ ಜಿಲ್ಲೆಗಳಲ್ಲಿ ಪ್ರತ್ಯೇಕತಾವಾದಿಗಳ ಚಟುವಟಿಕೆ ಹೆಚ್ಚಿದೆ. ಜತೆಗೆ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅನಂತನಾಗ್ ಲೋಕಸಭೆ ಕ್ಷೇತ್ರದಲ್ಲಿ ಏಪ್ರಿಲ್ 23, ಏಪ್ರಿಲ್ 29 ಮತ್ತು ಮೇ 6 ರಂದು ಮತದಾನ ನಡೆಯಲಿದೆ.
ಇದನ್ನು ಹೊರತುಪಡಿಸಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಮತ್ತು ಜಮ್ಮು ಕ್ಷೇತ್ರಗಳಲ್ಲಿ ಏಪ್ರಿಲ್ 11 ರಂದು, ಶ್ರೀನಗರ ಮತ್ತು ಉಧಮ್ಪುರ ಕ್ಷೇತ್ರಗಳಲ್ಲಿ ಏಪ್ರಿಲ್ 18 ರಂದು ಮತ್ತು ಲಡಾಕ್ ಕ್ಷೇತ್ರದಲ್ಲಿ ಮೇ 6 ರಂದು ಮತದಾನ ನಡೆಯಲಿದೆ.ಭಾನುವಾರ ಸಂಜೆ ಸುನಿಲ್ ಅರೋರಾ ಅವರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಲೋಕಸಭೆ ಕ್ಷೇತ್ರದಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಘೋಷಿಸಿದ್ದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾ.ಪಂ ಹಂತದಲ್ಲಿ ಬೋಧಕರ ತರಬೇತಿ ಕಾರ್ಯಕ್ರಮ.
ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ಆದೇಶದ ಮೇರೆಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲ್ಲೂಕು ಲೋಕ ಶಿಕ್ಷಣ ಸಮಿತಿಯ ವತಿಯಿಂದ ಗ್ರಾಮ ಲೋಕ ಶಿಕ್ಷಣ ಸಮಿತಿ ಬೀರವಳ್ಳಿ. ಅಕ್ಕಿಹೆಬ್ಬಾಳು. ಆಲಂಬಾಡಿ ಕಾವಲ್ ಶೀಳನೆರೆ ಗ್ರಾ.ಪಂ ಹಂತದಲ್ಲಿ ಬೋಧಕರ ತರಬೇತಿ ಕಾರ್ಯಕ್ರಮ ನಡೆಯಿತು.
ಕೆ.ಆರ್.ಪೇಟೆ: ಕಾರ್ಯಕ್ರಮ ಉದ್ಘಾಟನೆ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಸಂಯೋಜಕ ಮರುವನಹಳ್ಳಿ ಬಸವರಾಜು ನಮ್ಮ ತಾಲ್ಲೂಕಿನಲ್ಲಿ 2011ರ ಜನಗಣತಿಯಂತೆ 27829 ಜನ ಅನಕ್ಷರಸ್ಥರು ಇದ್ದು , ಇದು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಆದ್ದರಿಂದ ಎಲ್ಲಾ ಬೋಧಕರು ತಮ್ಮ ತಮ್ಮ ವ್ಯಾಪ್ತಿಯ ಅನಕ್ಷರಸ್ಥರ ಬಾಳಿಗೆ ಅಕ್ಷರ ಕಲಿಸುವುದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಿಮ್ಮ ಶಕ್ತಿ ಮೀರಿ ಪ್ರಯತ್ನಿಸಬೇಕು ಆ ಮೂಲಕ ಸಂಪೂರ್ಣ ಸಾಕ್ಷರತೆಯ ಪಂಚಾಯತಿಯನ್ನಾಗಿ ಘೋಷಣೆ ಮಾಡಲು ಕಟಿಬದ್ದರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಡಾ.ಅಂ.ಚಿ.ಸಣ್ಣಸ್ವಾಮಿಗೌಡ ಮಾತನಾಡಿ ನಿಮಗೆ ಗುರುಗಳ ಗುರುಮಾತೆಯ ಸ್ಥಾನ ನೀಡಲಾಗಿದ್ದು ಅನಕ್ಷರಸ್ಥರ ಮನವೊಲಿಸಿ ಅವರ ಬಿಡುವಿನ ವೇಳೆಯಲ್ಲಿ ಅವರಿಗೆ ಕಲಿಸುವುದರ ಮೂಲಕ ಹೆಬ್ಬೆಟ್ಟಿನ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಬೇಕು ತಾವುಗಳು ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಸ್ವಯಂ ಸೇವಕರಾಗಿಅಕ್ಷರ ಕಲಿಸುವ ಗುರುತರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಪುಣ್ಯದ ಕೆಲಸ ಮಾಡಬೇಕು. ಇದೇ ನೀವು ಉತ್ತಮ ಸಮಾಜಕ್ಕೆ ನೀಡುವ ಕೊಡುಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿಡಿಓಗಳಾದ ಬೀರವಳ್ಳಿ ಅರವಿಂದ್.ಅಕ್ಕಿಹೆಬ್ಬಾಳು ಪಿಡಿಓ.ರವಿಕುಮಾರ್. ಆಲಂಬಾಡಿ ಪಿಡಿಓ ರವಿ. ಪ್ರೇರಕರಾದ ರವಿಕುಮಾರ್. ಕಾವ್ಯ. ತೇಜಸ್ವಿನಿ.ಆಶಾ.ಹೇಮಾ.ಭಾರತಿ.ಸಿ.ಆರ್.ಪಿ.ಲೋಕೇಶ್. ಮುಖ್ಯಶಿಕ್ಷಕರಾದ ಗೋವಿಂದರಾಜು.ಕುಮಾರಸ್ವಾಮಿ. ರವಿ.ಸಂಪನ್ಮೂಲ ಶಿಕ್ಷಕರಾದ ಜಿ.ಎಸ್.ಮಂಜು.ಜೆ.ವಿ.ರಾಮಚಂದ್ರ.ರಾಘವೇಂದ್ರ. ಹೆಚ್.ಎಸ್.ನಾರಾಯಣ. ರಾಜೇಶ್ ಎಸ್.ಬಿ. ಹಾಗೂ ಬೋಧಕರು ಗಳು ಹಾಜರಿದ್ದರು.
ಪ್ರಜ್ವಲ್ ನಿಂತ್ರೆ ಬಿಜೆಪಿಗೆ ಹೋಗ್ತೀನಿ...ಎ.ಮಂಜು.
ಬೇರೆಯವರ ಹೆಗಲು ಇದು, ಎಷ್ಟು ದಿನ ಅಂತ ದೆಹಲಿಗೆ ಹೋಗಲಿ...
ಮೈತ್ರಿ ಧರ್ಮ ಅಂತ ಮೊಮ್ಮಕ್ಕಳನ್ನು ತರುವುದಾದರೆ ನಮ್ಮ ಸಮ್ಮತಿ ಇಲ್ಲ
ಆದರೆ ಜೆಡಿಎಸ್ನವರು ವಚನ ಕೊಟ್ರೆ ಸಾಕೇ. ಕಾಂಗ್ರೆಸ್ ಕೂಡ ಇದಕ್ಕೆ ಸಮ್ಮತಿ ಸೂಚಿಸಬೇಕು. ಯಾಕಂದ್ರೆ ಇದು ಮೈತ್ರಿ ಸರ್ಕಾರ. ಆದರೆ ಕೆಲವರಿಗೆ ಮೈತ್ರಿ ಸರ್ಕಾರದ ಕೆಲವು ನಿರ್ಣಯಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾಜಿ ಸಚಿವ ಎ.ಮಂಜು, ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧೆ ಮಾಡಿದರೆ ನಮ್ಮ ಪಕ್ಷದಿಂದ ಒಮ್ಮತವಿದೆ. ಅದನ್ನು ಬಿಟ್ಟು ಮೈತ್ರಿ ಸರ್ಕಾರ ಎಂಬ ಕಾರಣಕ್ಕೆ ಮೊಮ್ಮಕ್ಕಳನ್ನ ಚುನಾವಣೆಯಲ್ಲಿ ಗೆಲ್ಲಿಸುವುದಾದರೆ ನಮ್ಮ ಸಹಮತವಿಲ್ಲ ಎಂದು ಮೊದಲಿನಿಂದಲೂ ಕೂಡ ವಿರೋಧಿಸುತ್ತಲೇ ಬಂದಿದ್ದಾರೆ. ಈಗಲೂ ವಿರೋಧಿಸುತ್ತಿದ್ದಾರೆ.ಈ ನಡುವೆ ಕಾಂಗ್ರೆಸ್ನ ಮತ್ತೊಬ್ಬ ಮಾಜಿ ಸಚಿವ ಬಿ.ಶಿವರಾಂ ಕೂಡ, ನಾವು ಅಪ್ಪಟ ಜೆಡಿಎಸ್ ವಿರೋಧಿಗಳು. ಹೈಕಮಾಂಡ್ ನಿರ್ಧಾರದಂತೆ ಚುನಾವಣೆಯಲ್ಲಿ ನಾವು ಕೆಲಸ ಮಾಡುತ್ತೇವೆ. ಆದರೆ ಮೊಮ್ಮಕ್ಕಳನ್ನು ಚುನಾವಣೆಯಲ್ಲಿ ನಿಲ್ಲಿಸಿದರೆ, ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ನನಗೂ ಇಲ್ಲ. ನಮ್ಮ ಕಾರ್ಯಕರ್ತರಿಗೂ ಇಲ್ಲ ಎಂದು ನೇರವಾಗಿಯೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ರು.
ಎ.ಮಂಜು ಸೆಳೆಯಲು ಬಿಜೆಪಿ ಪ್ರೀತಂಗೌಡರ ನಾನಾ ಕಸರತ್ತು...
ಇವೆಲ್ಲದರ ನಡುವೆ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ, ಎ.ಮಂಜುರನ್ನ ಬಿಜೆಪಿಗೆ ಸೆಳೆಯುವ ಕಸರತ್ತು ನಡೆಸುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಈ ಬಾರಿ ಮೈತ್ರಿ ಅಭ್ಯರ್ಥಿಯನ್ನಾಗಿ ಪ್ರಜ್ವಲ್ ರೇವಣ್ಣರನ್ನ ನಿಲ್ಲಿಸುವುದು ಬಹುತೇಕ ಖಚಿತವಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಎ.ಮಂಜು ಎದುರಾಳಿಯಾಗಿ ನಿಲ್ಲಲು ಸಮರ್ಥ ಅಭ್ಯರ್ಥಿ ಎಂದು ಬಿಜೆಪಿಗೆ ತಿಳಿದಿದೆ. ಹೀಗಾಗಿ ಬಿಜೆಪಿ ನಾಯಕರು ಮಂಜುರನ್ನ ಪಕ್ಷಕ್ಕೆ ಹೇಗಾದರೂ ಮಾಡಿ ಕರೆತರಲೇಬೇಕೆಂದು ಹಲವು ಬಿಜೆಪಿ ನಾಯಕರ ಜೊತೆ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ನಿಂತ್ರೆ ಬಿಜೆಪಿಗೆ ಹೋಗ್ತೀನಿ...
ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಬಹಿರಂಗವಾಗಿಯೇ ನಾನು ಬಿಜೆಪಿಯವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದವರಿಗೆ ಮಂಜು ಶಾಕ್ ಕೊಟ್ಟಿದ್ದಾರೆ. ದೇವೇಗೌಡರನ್ನು ಬಿಟ್ಟು ಪ್ರಜ್ವಲ್ ನಿಂತರೆ, ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ತಳಮಟ್ಟಕ್ಕೆ ಹೋಗುತ್ತದೆ. ಹೀಗಾಗಿ ಪಕ್ಷ ಸಂಘಟನೆ ಮಾಡುವುದು ತುಂಬಾ ಕಷ್ಟವಾಗುತ್ತದೆ ಎಂಬುದನ್ನು ಅರಿತ ಎ.ಮಂಜು, ಪಕ್ಷ ತೊರೆದು ಬಿಜೆಪಿಗೆ ಹೋಗುವ ಪ್ಲಾನ್ ಕೂಡ ಮಾಡಿದ್ದಾರೆ.ಇನ್ನು ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೂಡ ಎ.ಮಂಜು ದೇವೇಗೌಡರಿಗೆ ಪ್ರಬಲ ಪ್ರತಿಸ್ಪರ್ಧಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ದೇವೇಗೌಡರ ಗೆಲುವಿನ ಅಂತರವನ್ನು ಒಂದು ಲಕ್ಷಕ್ಕಿಳಿಸಿ ಪರಭಾವಗೊಂಡಿದ್ದರು. ಈ ಬಾರಿ ಕುಟುಂಬ ರಾಜಕಾರಣದ ವಿಷಯವನ್ನು ಆಧಾರವಾಗಿಟ್ಟುಕೊಂಡು ಬಿಜೆಪಿಗೆ ಹೋಗಿ ಸಂಸದರಾಗುವ ಪಣ ತೊಟ್ಟಿರುವುದು ಅಷ್ಟೇ ಸತ್ಯ. ಆದರೆ ಎ.ಮಂಜುರವರ ಮುಂದಿನ ದಾರಿ ಏನೆಂಬುದು ಒಂದೆರಡು ದಿನಗಳಲ್ಲಿ ಗೊತ್ತಾಗಲಿದ್ದು, ಅಲ್ಲಿಯತನಕ ಕಾದು ನೋಡಬೇಕಿದೆ.
ಪ್ರಾಥಮಿಕ ಶಾಲೆ 75 ವರ್ಷದ ವಜ್ರ ಮಹೋತ್ಸವ.
ಮಾನವನಾಗಿ ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು ಅದಕ್ಕಾಗಿ ವಿದ್ಯಾಭ್ಯಾಸ ವನ್ನು ಪ್ರತಿಯೊಬ್ಬರು ಮಾಡುವಂತೆ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಹಾಗೂ ಡಾ.ಲೋಹಿಯಾ ರಾಮಮನೋಹರ ವಿಚಾರ ವೇದಿಕೆಯ ಸಂಸ್ಥಾಪಕ ಡಾ.ದಡದಪುರ ಶಿವಣ್ಣ ತಿಳಿಸಿದರು.
ಮಳವಳ್ಳಿ: ತಾಲ್ಲೂಕಿನ ದಡದಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 75 ವರ್ಷದ ವಜ್ರ ಮಹೋತ್ಸವ ಹಾಗೂ 4 ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ವನ್ನು ಡಾ.ದಡದಪುರ ಶಿವಣ್ಣ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೂ ಇಂಗ್ಲಿಷ್ ಭಾಷೆಯನ್ನು ಕಲಿಯಬೇಕಾಗಿದೆ. ಹಳ್ಳಿಗಾಡು ಅಭಿವೃದ್ಧಿ ಯಾದರೆ ಮಾತ್ರ ದೇಶ ಪ್ರಗತಿಯಾಗುತ್ತದೆ. ಎಂದ ಅವರು ತಾನು ಓದಿದ ಶಾಲೆಯ ಸಮಾರಂಭದಲ್ಲೇ ನಾನು ಸತ್ತ ಮೇಲೆ ನನ್ನ ಸರ್ವಾಂಗ ದೇಹವನ್ನು ಧಾನ ಮಾಡುವುದಾಗಿ ಘೋಷಣೆ ಮಾಡಿದ್ದು ಅದಲ್ಲದೆ ಶಾಲಾ ವತಿಯಿಂದ ಮಾಡುವ ಸನ್ಮಾನ ವನ್ನು ಮಾಡಿಸಿಕೊಳ್ಳದೆ ಅದನ್ನು ತನ್ನ ತಾಯಿಗೆ ಸ್ವತಃ ಅವರ ಕೈಯಲ್ಲಿ ಸನ್ಮಾನಮಾಡಿ ಕಾಲಿಗೆ ನಮಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರದರು. ಇನ್ನೂ ಶಾಲಾ ಅಭಿವೃದ್ಧಿಗೆ ನನ್ನ ಕೈಲಾದ ಅಳಿಲು ಸೇವೆ ಮಾಡುವುದಾಗಿ ಜೊತೆ ಗ್ರಾಮದ ಅಭಿವೃದ್ಧಿ ಗೂ ಸಹಕಾರ ನೀಡುವುದಾಗಿ ತಿಳಿಸಿದರು ಈ ಶಾಲೆಯಲ್ಲಿ ಓದಿದ್ದಂತಹ ಹಾಗೂ ನನ್ನಂತಹ ವಿದ್ಯಾರ್ಥಿಗಳು ಬಹಳ ಮಂದಿ ಇದ್ದಾರೆ ಅವರು ಸಾಕಷ್ಟು ಆರ್ಥಿಕವಾಗಿ ಪ್ರಗತಿ ಕಂಡಿದ್ದಾರೆ ಅವರು ಸಹ ಹಳ್ಳಿಗಾಡಿನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವಂತಹ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಅವರು ನಾನು ಹಾಗೂ ಒಬ್ಬ ಉನ್ನತ ಅಧಿಕಾರಿ ಸೇರಿ ಬೆಂಗಳೂರಿನಲ್ಲಿ ಐಎಎಸ್ ಹಾಗೂ ಕೆಎ ಎಸ್ ತರಬೇತಿ ಪ್ರಾರಂಭ ಮಾಡಿದ್ದೇವೆ ಇದರಿಂದ ಪ್ರತಿಯೊಬ್ಬರು ಉನ್ನತ ಅಧಿಕಾರಿಯಾಗಲಿ ಎನ್ನುವುದೇ ನಮ್ಮ ಉದ್ದೇಶ ಎಂದರು ಇನ್ನೂ ಕಾರ್ಯಕ್ರಮ ದಲ್ಲಿ ಶಾಲಾ ಪ್ರಗತಿಗೆ ಕಾರಣ ಶಾಲಾ ಶಿಕ್ಷಕರಿಗೆ ದಡದಪುರಶಿವಣ್ಣರವರು ಸನ್ಮಾನಿಸಿ ಗೌರವ ಸೂಚಿಸಿದರು ಇನ್ನೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ಹಾಗೂ ತಾ.ಪಂ ಮಾಜಿ ಚಿಕ್ಕಲಿಂಗಯ್ಯ, ಮರೀಗೌಡ, ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು, ಸರ್ಕಾರಿ ಶಾಲಾ ಶಿಕ್ಷಕರಸಂಘದ ನಿರ್ದೇಶಕ ರುಗಳು ಸೇರಿದಂತೆ ಅನೇಕ ಅನೇಕ ಗಣ್ಯರು ಉಪಸ್ಥಿತರಿದ್ದರು
ವಾಟ್ಸಾಪ್ ಗ್ರೂಪ್ ನಲ್ಲಿ 'ಎಲೆಕ್ಷನ್' ಪ್ರಚಾರ ಮಾಡಿದ್ರೆ ಅಡ್ಮಿನ್ ಗಳಿಗೆ ಜೈಲು ಊಟ ಫಿಕ್ಸ...'?!
ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 11 ರಿಂದ ಆರಂಭವಾಗಿ ಮೇ 19 ವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ.
ನವದೆಹಲಿ: ಇನ್ನು ಕಳೆದ ಬಾರಿ ಕರ್ನಾಟಕದಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆದಿದ್ದರೆ, sಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏ.18 ಗುರುವಾರ ಮೊದಲ ಹಂತ ನಡೆದರೆ ಏ.23 ಮಂಗಳವಾರ ಎರಡನೇ ಹಂತದ ಚುನಾವಣೆ ನಡೆಯಲಿದೆ.ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.ಇನ್ನೂ ವಾಟ್ಸಾಪ್ ಗ್ರೂಪ್ ಗಳಲ್ಲಿ ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಒಂದು ವೇಳೆ ನಿಯಮ ಮೀರಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಎಲೆಕ್ಷನ್ ಪ್ರಚಾರ ನಡೆಸಿದ್ರೆ ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಆಯೋಗ ಎಚ್ಚರಿಕೆ ನೀಡಿದೆ.
ಚುನಾವಣಾ ಆಯೋಗದ ಹೆಲ್ಪ್ ಲೈನ್ ಸಂಖ್ಯೆ '1950' ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸಲಿದೆ. ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘಿಸಿದ್ರೆ ಮೊಬೈಲ್ ಮೂಲಕ ದೂರು ನೀಡಬಹುದು. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿರಿಸಲಾಗುವುದು. ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು ಎಂದು ಹೇಳಿದ್ದಾರೆ.ಇನ್ನು ಪಾನ್ ಕಾರ್ಡ್ ನಂಬರ್ ನಮೂದಿಸದಿದ್ದರೆ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲಾಗುವುದು. ದಿವ್ಯಾಂಗರು ಮತ ಚಲಾಯಿಸಲು ವೀಲ್ ಚೇರ್ ವ್ಯವಸ್ಥೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ತಲಾ 14 ಕ್ಷೇತ್ರಗಳಿಗೆ 2 ಹಂತಗಳಲ್ಲಿ ಮತದಾನ ನಡೆಯಲಿದೆ.
ಮಹಾ ಶಿವರಾತ್ರಿ ಹಬ್ಬದ ಮಹತ್ವ ..
ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ.
ಮಹಾ ಶಿವರಾತ್ರಿ: ಈ ವರ್ಷ ಶಿವರಾತ್ರಿ ಮಾರ್ಚ್ 4 ರಂದು ಬಂದಿದೆ ಕೈಲಾಸವಾಸಿ ಶಿವನಿಗೆ ಇದು ಮಂಗಳಕರ ರಾತ್ರಿ! ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ. ಅಲ್ಲದೆ, ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು. ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು,
ಬನ್ನಿ ಇಂದಿನ ಲೇಖನದಲ್ಲಿ ಶಿವರಾತ್ರಿ ಆಚರಣೆಗೆ ಸಂಬಂಧ ಪಡೆದಿರುವ ಕೆಲವೊಂದು ಐತಿಹಾಸಿಕ ಕಥೆಗಳನ್ನು ತಿಳಿಸಿಕೊಡಲಿದ್ದೇವೆ. ಶಿವರಾತ್ರಿ ಏಕೆ ಅತಿ ಮಹತ್ವದ್ದು ಮತ್ತು ಪವಿತ್ರವಾದುದು ಎಂಬುದನ್ನು ನಿಮಗಿಲ್ಲಿ ತಿಳಿದುಕೊಳ್ಳಬಹುದಾಗಿದೆ. ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ ಹೆಚ್ಚು ಜನಜನಿತವಾಗಿರುವ ಶಿವರಾತ್ರಿಯ ಕಥೆಯು ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ತಮ್ಮಲ್ಲಿ ಯಾರು ಶ್ರೇಷ್ಠರು ಎಂಬುದಾಗಿ ಇಬ್ಬರಲ್ಲಿ ಸಂಘರ್ಷ ನಡೆಯುತ್ತಿತ್ತು. ಈ ರೀತಿ ಜಗಳ ಮುಂದುವರಿಯುತ್ತಿದ್ದರೆ ಇದು ವಿನಾಶಕ್ಕೆ ಕಾರಣವಾಗಬಹುದು ಎಂದು ಭಾವಿಸಿದ ದೇವತೆಗಳು ಬ್ರಹ್ಮ ಮತ್ತು ವಿಷ್ಣುವಿನ ವಿರಸದ ಕುರಿತಾಗಿ ಶಿವನಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಇಬ್ಬರು ದೇವರನ್ನು ಸಂತೈಸಲು ಶಿವ ಆಗಮಿಸುತ್ತಾರೆ.ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು? ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ ಶಿವನು ಬೆಂಕಿಯಿಂದ ಕೂಡಿದ ಲಿಂಗಧಾರಣೆಯನ್ನು ಮಾಡಿಕೊಂಡು ಲಿಂಗದ ಮೇಲ್ಭಾಗ ಮತ್ತು ತಳಭಾಗವನ್ನು ಹೋಗಿ ಯಾರು ಶ್ರೇಷ್ಠರು ಎಂಬುದನ್ನು ನೋಡಲು ಇಬ್ಬರಲ್ಲೂ ತಿಳಿಸುತ್ತಾರೆ. ಬ್ರಹ್ಮನು ಬಾತುಕೋಳಿಯ ರೂಪದಲ್ಲಿ ಮೇಲ್ಭಾಗಕ್ಕೂ ವಿಷ್ಣುವು ಹಂದಿಯ ರೂಪದಲ್ಲಿ ಲಿಂಗದ ಕೆಳಭಾಗವನ್ನು ಗುರುತಿಸಲು ಮುಂದಾಗುತ್ತಾರೆ. ಆದರೆ ಇವರಿಬ್ಬರಿಗೂ ಕೊನೆ ಮತ್ತು ಆರಂಭ ದೊರೆಯುವುದೇ ಇಲ್ಲ. ಸ್ಪರ್ಧೆಯಲ್ಲಿ ಸೋಲಲು ಇಷ್ಟಪಡದ ಬ್ರಹ್ಮನು ಕೇತಕಿ ಪುಷ್ಪವನ್ನು ತೆಗೆದುಕೊಂಡು ಬಂದು ಬೆಂಕಿಯ ಮೇಲ್ಭಾಗದಲ್ಲಿ ಇದು ದೊರಕಿತು ಎಂದಾಗಿ ಸುಳ್ಳು ಹೇಳುತ್ತಾರೆ. ಕೇತಕಿ ಪುಷ್ಪ ಕೂಡ ಬ್ರಹ್ಮನನ್ನು ಬೆಂಬಲಿಸುತ್ತದೆ. ಇದರಿಂದ ಕೋಪಗೊಂಡ ಶಿವನು ಬ್ರಹ್ಮನು ಸುಳ್ಳು ಹೇಳಿದ್ದಕ್ಕಾಗಿ ಬ್ರಹ್ಮನನ್ನು ಯಾರೂ ಪೂಜಿಸಬಾರದು ಎಂದಾಗಿ ಶಪಿಸುತ್ತಾರೆ. ಅಂತೆಯೇ ಪೂಜೆ ಸಮಯದಲ್ಲಿ ಕೇತಕಿ ಹೂವನ್ನು ಯಾರೂ ಬಳಸಬಾರದು ಎಂಬುದಾಗಿ ಶಾಪವನ್ನೀಯುತ್ತಾರೆ. ಶಿವ-ಸರಸ್ವತಿ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು! ಮಹಾಶಿವರಾತ್ರಿ ಹಬ್ಬದ ಮಹತ್ವ ಮಹಾಶಿವರಾತ್ರಿಯ ಮಧ್ಯರಾತ್ರಿಯಂದು ಮಹಾದೇವನು ಲಿಂಗ ಸ್ವರೂಪವನ್ನು ಧರಿಸುತ್ತಾರೆ. ಫಲ್ಗಣ ಮಾಸದ 14 ನೇ ಗಾಢ ಮಾಸದಂದು ಇದು ಸಂಭವಿಸುತ್ತದೆ. ಶಿವನು ಪ್ರಥಮ ಬಾರಿ ಲಿಂಗ ರೂಪವನ್ನು ಧರಿಸುವುದು ಎಂಬುದಾಗಿ ಇದನ್ನು ಕಾಣಲಾಗುತ್ತದೆ. ಆ ದಿನವನ್ನೇ ಮಹಾಶಿವರಾತ್ರಿಯಾಗಿ ಆಚರಿಸಲಾಗುತ್ತದೆ. ಈ ದಿನಂದು ಶಿವನನ್ನು ಪೂಜಿಸುವುದು ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿದೆ ಮತ್ತು ಸುಖ ಸಂತೋಷವನ್ನು ತರಲಿದೆ ಎಂಬುದು ಪ್ರತೀತಿಯಾಗಿದೆ.
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ.
ಜ್ಞಾನದ ವಿಕಾಸವೆ ವಿಜ್ಞಾನ ಮತ್ತು ತಂತ್ರಜ್ಞಾನ. ನೂತನ ಆವಿಷ್ಕಾರಗಳಿಗೆ ತೆರೆದುಕೊಳ್ಳುವ ವಿಶಾಲ ಭೂಮಿಕೆ ಜ್ಞಾನ ಮತ್ತು ತಂತ್ರಜ್ಞಾನದಲ್ಲಿದೆ. ಆದ್ದರಿಂದ ಪ್ರತಿತೊಬ್ಬರೂ ಕೂಡಾ ವಿಜ್ಞಾನದ ಜೊತೆಯಾಗಿ ನಿಲ್ಲಬೇಕು ಎಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಂಪತ್ಕುಮಾರನ್ ಹೇಳಿದರು.
ಕೆ.ಆರ್.ಪೇಟೆ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಭಾರತ ದೇಶವು ಅತ್ಯಂತ ವೇಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಹೊಂದಿದೆ. ಇಡಿ ಜಗತ್ತು ಇಂದು ಭಾರತೀಯ ವಿಜ್ಞಾನಿಗಳ ಸಹಕಾರಕ್ಕಾಗಿ ತುದಿಗಾಲ ಮೇಲೆ ನಿಂತಿದೆ. ಭರತೀಯ ತಂತ್ರಜ್ಞಾನದ ಮೂಲಬೇರುಗಳು ವಿಜ್ಞಾನದ ವಿಕಾಸದಲ್ಲಿದೆ. ಇಂದು ದೇಶವು ಸಂದಿಗ್ಧತೆಯಲ್ಲಿದೆ. ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಯುವಕರು ಹೆಚ್ಚು ವಿಜ್ಞಾನಕ್ಕೆ ಪ್ರೋತ್ಸಾಹವನ್ನು ನೀಡಬೇಕು. ಜನರಿಗಾಗಿ ವಿಜ್ಞಾನ-ವಿಜ್ಞಾನಕ್ಕಾಗಿ ಜನರು ಎಂಬ ಸತ್ಯವನ್ನು ಮನಗಾಣಬೇಕು ಎಂದು ಸಂಪತ್ಕುಮಾರನ್ ಕಿವಿಮಾತು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಡ್ಯ ಬಾಲಕರ ಸರಕಾರಿ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಕುಮಾರಸ್ವಾಮಿ ಮಾತನಾಡಿ ಇಡಿ ಜಗತ್ತಿಗೆ ಭಾರತ ದೇಶಧಲ್ಲಿನ ವಿಜ್ಞಾನದ ಆವಿಷ್ಕಾರವನ್ನು ತೋರಿಸಿಕೊಟ್ಟವರು ಸರ್.ಸಿ.ವಿ.ರಾಮನ್. ರಾಮನ್ ಅವರ ಆವಿಷ್ಕಾರವು ಇಂದು ವಿಜ್ಞಾನ ಕ್ಷೆತ್ರದಲ್ಲಿ ರಾಮನ್ ಎಫೆಕ್ಟ್ ಎಂದೆ ಖ್ಯಾತಿಯಾಗಿದೆ. ಬೆಳಕಿನ ಚಮತ್ಕಾರದಿಂದ ಸಾಧಿಸಬಹುದಾದ ಮಹತ್ಕಾರ್ಯಗಳನ್ನು ಜಗತ್ತಿಗೆ ತೋರಿಸಿಕೊಡುವ ಮೂಲಕ ನೊಬೆಲ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಭಾರತಕ್ಕಷ್ಟೆ ಅಲ್ಲದೆ ಏಷ್ಯಾಖಂಡಕ್ಕೆ ಮೊದಲಿಗರಾಗಿ ಕೀತರ್ಿಯನ್ನು ತಂದಿದ್ದಾರೆ. ಆದ್ದರಿಂದಲೆ ಫೆಬ್ರವರಿ 28ರಂದು ರಾಮನ್ ಎಫೆಕ್ಟ್ ಜಗತ್ತಿಗೆ ತೋರಿಸಿದ್ದರಿಂದ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ನಮ್ಮ ದೇಶದ ವಿಜ್ಞಾನ ಕ್ಷೇತ್ರದಲ್ಲಿ ಹೊಸಹೊಸ ಸಂಶೋಧನೆಗಳು ನಡೆಯುವ ಮೂಲಕ ಪ್ರಪಂಚವೆ ಗುರುತಿಸುವಂತಹ ಸಾಧನೆಯನ್ನು ಮಾಡಿದರೂ ಕೂಡಾ ಸರ್ ಸಿ.ವಿ.ರಾಮನ್ ಅವರನ್ನು ಹೊರತುಪಡಿಸಿ ಇದುವರೆವಿಗೂ ಬೇರೆ ಯಾರಿಗೂ ನೊಬೆಲ್ ಪ್ರಶಸ್ತಿಯು ದೊರಕಿಲ್ಲ. ಹಾಗೆಂದು ನಾವು ಸಾಧನೆಯನ್ನು ಮಾಡಿಲ್ಲವೆಂದಲ್ಲ. ಸಾಧನೆಯು ಅಪಾರವಾಗಿದೆ. ಮುಂದೊಂದು ದಿನ ಮತ್ತೊಮ್ಮೆ ಭಾರತಕ್ಕೆ ನೊಬೆಲ್ ಪ್ರಶಸ್ತಿಯು ಹುಡುಕಿಕೊಂಡು ಬರುತ್ತದೆ ಎಂಬ ವಿಶ್ವಾಸವಿದೆ. ಯುವಕರು ಹೆಚ್ಚಿನ ಆಸಕ್ತಿಯನ್ನು ವಿಜ್ಞಾನದ ಕಲಿಕೆಗೆ ತೋರಿಸಬೇಕು ಎಂದು ಡಾ.ಶಿವಕುಮಾರಸ್ವಾಮಿ ಒತ್ತಾಯಿಸಿದರು.
ಸಹಾಯಕ ಪ್ರಾಧ್ಯಾಪಕ ಡಾ.ರಾಜೀವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆಂಪಯ್ಯ ರಸಪ್ರಸ್ನೆ ವಿಜೇತ ವಿದ್ಯಾತರ್ಿಗಳಿಗೆ ಬಹುಮಾನವನ್ನು ವಿತರಣೆ ಮಾಡಿದರು. ಬೆಂಗಳೂರಿನ ಪ್ರೆಸಿಡೆನ್ಸಿಯಲ್ ಯೂನಿವಸರ್ಿಟಿ ಪ್ರಾಧ್ಯಾಪಕ ನ್ಯಾನೋ ತಂತ್ರಜ್ಞಾನದ ಬಗೆಗೆ ಉಪನ್ಯಾಸವನ್ನು ನೀಡಿದರೆ ಮಂಡ್ಯ ಸರಕಾರಿ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶಿವಲಿಂಗಸ್ವಾಮಿ ಗುರುತ್ವ ಅಲೆಗಳನ್ನು ಕುರಿತು ಉಪನ್ಯಾಸ ನೀಡಿದರು.ವೇದಿಕೆಯಲ್ಲಿ ಐಕ್ಯುಎಸಿ ಸಂಚಾಲಕ ಎಂ.ಕೆ.ರಮೇಶ್, ಅಧೀಕ್ಷಕ ಬಿ.ಎ.ಮಂಜುನಾಥ್ ಸೇರಿದಂತೆ ವಿಜ್ಞಾನ ವಿಭಾಗದ ಉಪಸ್ಥಿತರಿದ್ದರು.
35ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಕೆ.ಕಾಳೇಗೌಡ ಅವರಿಗೆ ಬೀಳ್ಕೊಡುಗೆ.
35ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾದ ಕೆ.ಆರ್.ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಕೆ.ಕಾಳೇಗೌಡ ಅವರಿಗೆ ಅಭಿನಂದನೆ ಬೀಳ್ಕೊಡುಗೆ.
ಕೆ.ಆರ್.ಪೇಟೆ : ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ಸೇವೆ ಆರಂಬಿಸಿದ ಕಾಲೇಜಿನಲ್ಲಿಯೇ ಪ್ರಾಂಶುಪಾಲರಾಗಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ನಿವೃತ್ತರಾಗುತ್ತಿರುವ ಡಾ.ಕಾಳೇಗೌಡ ಅವರಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ವತಿಯಿಂದ ಆತ್ಮೀಯವಾಗಿ ಅಬಿನಂಧಿಸಿ ಬೀಳ್ಕೊಡಲಾಯಿತು.ಪ್ರಜಾವಾಣಿ ದಿನಪತ್ರಿಕೆಯ ವರದಿಗಾರರಾಗಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಸಾಹಿತಿಗಳಾಗಿ, ಲೇಖಕರಾಗಿ, ಜಿಲ್ಲಾ ಲೋಕಶಿಕ್ಷಣ ಇಲಾಖೆಯ ಅಧಿಕಾರಿಯಾಗಿ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಕಾರ್ಯನಿರ್ವಹಿಸಿ ತಾಲೂಕಿನಾಧ್ಯಂತ ಮನೆ ಮಾತಾಗಿ ಜನಪ್ರಿಯರಾಗಿರುವ ಕಾಳೇಗೌಡರು ತಮ್ಮ 35ವರ್ಷಗಳ ವೃತ್ತಿಬದುಕಿನಲ್ಲಿ ಒಂದೇ ಒಂದು ಕಪ್ಪುಚುಕ್ಕಿಯಿಲ್ಲದಂತೆ ಕೆಲಸ ಮಾಡಿ ಕರ್ತವ್ಯಕ್ಕೆ ಸೇರಿದ್ದ ಕಾಲೇಜಿನಲ್ಲಿಯೇ ನಿವೃತ್ತರಾಗುತ್ತಿರುವುದು ಸಂತಸ ತಂದಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ಅಂ.ಚಿ.ಸಣ್ಣಸ್ವಾಮಿಗೌಡ ಅಭಿಮಾನದಿಂದ ಹೇಳಿದರು. ಶ್ರೀಯುತರ ವಿಶ್ರಾಂತ ಜೀವನವು ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ.ಎಸ್.ಕೃಷ್ಣಮೂರ್ತಿ, ಪ್ರಾಂಶುಪಾಲ ಲಿಂಗಣ್ಣಸ್ವಾಮಿ, ಸಮಿತಿಯ ಸದಸ್ಯರಾದ ಡಾ.ಕೆ.ಎಸ್.ರಾಜೇಶ್, ಎ.ಬಿ.ನಾಗೇಶ್, ವೆಂಕಟಗಿರಿಯಪ್ಪ, ಪ್ರಾಂಶುಪಾಲರಾದ ಎಂ.ಮಲ್ಲಿಕಾರ್ಜುನ, ಡಿ.ಬಿ.ಸತ್ಯ, ಜೆ.ಜಿ.ರಾಜೇಗೌಡ,ಉಪ ಪ್ರಾಂಶುಪಾಲ ಸೂರ್ಯನಾರಾಯಣ ಮತ್ತಿತರರು ಭಾಗವಹಿಸಿದ್ದರು.