ಪೋರ್ನ್ ಸ್ಟಾರ್ ಆದ ನಟಿ ರಮ್ಯಾಕೃಷ್ಣ......

  ನಟಿ ರಮ್ಯಾಕೃಷ್ಣ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ರಮ್ಯಾಕೃಷ್ಣ ಮೊದಲ ಬಾರಿಗೆ ಪೋರ್ನ್  ಸ್ಟಾರ್ ಆಗಿ ನಟಿಸುತ್ತಿದ್ದಾರೆ.

ಚೆನ್ನೈ: ತಮಿಳಿನಲ್ಲಿ ತ್ಯಾಗರಾಜನ್ ಕುಮಾರರಾಜ್ ನಿರ್ದೇಶನ ಮಾಡುತ್ತಿರುವ ‘ಸೂಪರ್ ಡಿಲೆಕ್ಸ್’ ಚಿತ್ರದಲ್ಲಿ ರಮ್ಯಾಕೃಷ್ಣ ಮೊದಲ ಬಾರಿಗೆ ನೀಲಿತಾರೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಲೀಲಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಇತ್ತೀಚೆಗೆ ರಮ್ಯಾಕೃಷ್ಣ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿ, “ನನಗೆ ಈ ಪಾತ್ರ ಮಾಡುವಾಗ ಮೊದಲು ತುಂಬಾ ಮುಜುಗರ ಆಯಿತು. ಈ ಪಾತ್ರ ತುಂಬಾ ಚಾಲೆಂಜಿಂಗ್ ಆಗಿದೆ. ಏಕೆಂದರೆ ಈ ಚಿತ್ರದ ಕಥೆಯಲ್ಲಿ ತುಂಬಾ ತಾಕತ್ ಇದೆ. ನಾನು ಈ ಪಾತ್ರವನ್ನು ಹಣಕ್ಕಾಗಿ ಮಾಡಿಲ್ಲ” ಎಂದು ಹೇಳಿದ್ದಾರೆ.ಈ ಚಿತ್ರದ ಸೀನ್‍ವೊಂದು ಓಕೆ ಮಾಡಲು ನಿರ್ದೇಶಕರಿಗಾಗಿ ನಾನು ಎರಡು ದಿನ ಬರೋಬ್ಬರಿ 37 ರೀ-ಟೇಕ್ ತೆಗೆದುಕೊಂಡಿದ್ದೇನೆ. ನಾನು ರೀ-ಟೇಕ್ ತೆಗೆದುಕೊಂಡು ಅಭಿನಯಿಸುವಾಗ ಅಲ್ಲಿದ್ದ ಸಹಾಯಕರು ಅದನ್ನು ನೋಡಿ ಆಶ್ಚರ್ಯಪಟ್ಟರು ಎಂದರು.ಈ ಚಿತ್ರದ ಪಾತ್ರಕ್ಕಾಗಿ ರಮ್ಯಾಕೃಷ್ಣ ಅವರ ಬದಲು ಹಿರಿಯ ನಟಿ ನಾದಿಯಾ ಅವರನ್ನು ಸಂಪರ್ಕಿಸಲಾಗಿತ್ತು. ಬಳಿಕ ಈ ಪಾತ್ರಕ್ಕೆ ರಮ್ಯಾಕೃಷ್ಣ ಅವರೇ ಸೂಕ್ತ ಎಂದು ಸ್ವತಃ ಚಿತ್ರದ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ್ ಹೇಳಿದ್ದಾರೆ.

ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಇದೇ ತಿಂಗಳು 29ರಂದು ಬಿಡುಗಡೆಯಾಗಲಿದೆ

Share this article

About Author

Madhu
Leave a comment

Write your comments

Visitors Counter

252211
Today
Yesterday
This Week
This Month
Last Month
All days
316
143
618
3136
5621
252211

Your IP: 44.220.247.152
2024-09-19 14:23

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles