
Madhu
ನನ್ನ ಮಂಡ್ಯ ಜನತೆ ಮಾದ್ಯಮಗಳ ಎಪಿಸೋಡ್ ಗೆ ಬದಲಾಗಲ್ಲಾ..ಸಿಎಂ ಕುಮಾರಸ್ವಾಮಿ..
ನನ್ನ ಮಂಡ್ಯ ಜನತೆ ಮಾದ್ಯಮಗಳ ಎಪಿಸೋಡ್ ಗೆ ಬದಲಾಗಲ್ಲಾ.ಮೇ 23ಕ್ಕೆ ಫಲಿತಾಂಶ ಬಂದಾಗ ವಾಹಿನಿಗಳ ಮಾಲೀಕರು ನಿರಾಸೆಗೊಳಗಾಗುತ್ತೀರಿ.ಮಾಧ್ಯಮಗಳ ವಿರುದ್ಧ ಸಿಎಂ ಅಸಮಾಧಾನ.
ಹಾಸನ: ಚನ್ನರಾಯಪಟ್ಟಣ ದಲ್ಲಿ ಇಂದು ಸಿಎಂ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವು ಏನೇ ಪ್ರಯತ್ನ ಪಟ್ಟರೂ, ಎಷ್ಟೇ ಅಪಪ್ರಚಾರ ಮಾಡಿದರೂ ಮಂಡ್ಯ ಜನತೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ದಿನ ಬೆಳಗಾದರೆ ಮಂಡ್ಯದ್ದೇ ಸುದ್ದಿ. ಚುನಾವಣೆ ಬರಿ ಮಂಡ್ಯದಲ್ಲಿ ನೆಡಯುತ್ತಿದೆ ದೇಶದಲ್ಲಿ ನೆಡಯುತ್ತಿಲ್ಲ ಎಂಬತ್ತೆ ಬಿಂಬಿಸಿ ಎಪಿಸೋಡ್ ಮಾಡಿ ಮಂಡ್ಯ ಜನರನ್ನು ಬದಲಿಸಲು ನೊಡತ್ತಿದ್ದು ವಾಹಿನಿಗಳ ಮಾಲೀಕರು ನಿರಾಸೆಗೊಳಗಾಗುತ್ತೀರಿ. ನಾನೇನು ಗಾಬರಿ ಆಗಿಲ್ಲ ಹಾಗೂ ಆತಂಕಗೊಂಡಿಲ್ಲ. ಮೇ 23ಕ್ಕೆ ಫಲಿತಾಂಶ ಬಂದಾಗ ಎಲ್ಲವೂ ಗೊತ್ತಾಗುತ್ತದೆ. ಮಂಡ್ಯದಲ್ಲಿ ಕೆಲವು ಸಮಸ್ಯೆಗಳಾಗುತ್ತಿವೆ. ಇದರಿಂದ ಅಕ್ಕಪಕ್ಕದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಮಸ್ಯೆಯಾಗದಂತೆ ನಾನೇ ಖುದ್ದು ಬಗೆಹರಿಸುತ್ತಿದ್ದೇನೆ ಎಂದು ಹೇಳಿದರು.
ನರೇಂದ್ರ ಮೋದಿಗೂ ಇದು ಸುಲಭದ ಚುನಾವಣೆ ಅಲ್ಲ. ಏಕೆಂದರೆ 2014ಕ್ಕೂ 2019ಕ್ಕೂ ಸಾಕಷ್ಟು ಬದಲಾವಣೆ ಆಗಿದೆ. ನಮ್ಮನ್ನು ಕಿಚಡಿ ಪಾರ್ಟಿ ಅಂತಾರೆ. ಅವರು ಕಳೆದ ಐದು ವರ್ಷದಲ್ಲಿ ಅಭಿವೃದ್ಧಿ ಮಾಡಿದರೆ ಪ್ರಾದೇಶಿಕ ಪಕ್ಷಗಳ ಮುಂದೆ ಹೋಗಿ ನಿಲ್ಲಬೇಕಿರಲಿಲ್ಲ. ರೈತರು ಈ ಬಿಜೆಪಿ ಅಧಿಕಾರದಿಂದ ನೊಂದಿದ್ದಾರೆ. ದೇವೇಗೌಡರಿಗೆ ರಾಷ್ಟ್ರ ರಾಜಕಾರಣದಲ್ಲಿ ವಿಶೇಷ ಶಕ್ತಿ ಬರೋ ವಾತಾವರಣ ಬರಲಿದೆ. ಹಾಗಂತ ಪ್ರಧಾನಿ ಆಗ್ತಾರೆ ಎಂದು ನಾನು ಹೇಳುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮುಖ್ಯಮಂತ್ರಿ ಕಾರನ್ನು ತಡೆದು ಪರಿಶೀಲನೆ ನಡೆಸಿದ ಚುನಾಚಣಾ ಸಿಬ್ಬಂದಿ.!!
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾರನ್ನು ಹಾಸನ ಗಡಿ ಹಿರೀಸಾವೆ ಚೆಕ್ ಪೋಸ್ಟ್ ನಲ್ಲಿ ತಡೆದು ಚುನಾಚಣಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಹಾಸನ: ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಹಿರೀಸಾವೆ ಚೆಕ್ ಪೋಸ್ಟ್ ಬಳಿ ಸಿಎಂ ಕಾರು ಬರುತ್ತಿದ್ದಂತೆಯೇ, ಅದನ್ನು ತಡೆದು ಪೊಲೀಸ್ ಹಾಗೂ ಚುನಾವಣಾ ಸಿಬ್ಬಂದಿ ವಾಹನವನ್ನು ತಪಾಸಣೆ ಮಾಡಿದ್ದಾರೆ.ಕುಮಾರಸ್ವಾಮಿ ಅವರು ಶಿವಮೊಗ್ಗಕ್ಕೆ ಹೋಗುವ ಮಾರ್ಗದಲ್ಲಿ ಚನ್ನರಾಯಪಟ್ಟಣದಲ್ಲಿರುವ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಮನೆಗೆ ಹೋಗಿದ್ದರು. ಅಲ್ಲಿ ಉಪಹಾರ ಸೇವನೆ ಬಳಿಕ ಕಾರ್ಯಕರ್ತರೊಂದಿಗೆ ಚುನಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ಬಳಿಕ ಅರಸೀಕೆರೆ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳಲಿದ್ದಾರೆ.
ಚನ್ನರಾಯಪಟ್ಟಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಇಂದು ಶಿವಮೊಗ್ಗದಲ್ಲಿ ಮದುಭಂಗಾರಪ್ಪ ನಾಮಪತ್ರ ಸಲ್ಲಿಸಲಿದ್ದಾರೆ. ಅಲ್ಲಿಂದ ಕುಂದಾಪುರದಲ್ಲಿ ಮೀನುಗಾರರ ಸಮಾವೇಶ ಇದೆ. ಹೀಗಾಗಿ ಗೋಕರ್ಣದಲ್ಲಿ ವಾಸ್ತವ್ಯ ಮಾಡುತ್ತೇನೆ. ಇಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮೆಲ್ಲ ಅಭ್ಯರ್ಥಿಗಳು ಯಾರು ಕಣದಲ್ಲಿದ್ದಾರೆ. ಅವರೆಲ್ಲರ ಕ್ಷೇತ್ರಗಳಿಗೂ ಭೇಟಿ ನೀಡುತ್ತೇನೆ. ನಮಗೆ ಹೆಲಿಕಾಪ್ಟರ್ ಭೇಟಿ ಬಳಸುವುದಕ್ಕೆ ಬಿಜೆಪಿ-ಕೇಂದ್ರ ಸರ್ಕಾರ ತಡೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಅತೀ ವೇಗವಾಗಿ ಚಲಿಸಿ ನಿಯಂತ್ರಣ ತಪ್ಪಿ ಅಟೊಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಕಾರು
ಅತೀ ವೇಗವಾಗಿ ಚಲಿಸಿ ನಿಯಂತ್ರಣ ತಪ್ಪಿ ಅಟೊಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಕಾರು.ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆ ಕೊಪ್ಪಲು ಗೆಟ್ ಬಳಿ ಅತೀ ವೇಗವಾಗಿ ಬಂದು ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿ ಹೊಗುತ್ತಿದ್ದ ಅಟೊಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಹಾರಿ ರಸ್ತೆ ಪಕ್ಕದಲ್ಲಿ ಮಗುಚಿ ಬಿದ್ದಿದೆ .ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಅಟೊದಲ್ಲಿ ಪ್ರಯಾಣಿಸುತ್ತಿದ್ದ ಅಪ್ಪನಹಳ್ಳಿ ಒಬ್ಬ ವ್ಯಕ್ತಿಯ ಕಾಲಿ ಸ್ವಲ್ಪ ಪ್ರಮಾಣದ ಗಾಯಗಾಳಾಗಿದೆ. ಗಾಯಾಳು ಅಟೋ ಡ್ರೈವರ್ ನಾಗರಾಜು ವನ್ನು ಸಂತೇಬಾಚಹಳ್ಳಿ ಅರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ.ಒಟ್ಟು ಕಾರಿನಲ್ಲಿ ಐದ ಜನ ಯುವಕರು ಇದ್ದು ಪಾನಮತ್ತರಾಗಿದ್ದು ಸ್ಥಳದಿಂದ ಪೇರಿ ಕಿತ್ತಿದ್ದಾರೆ . ಅತೀ ವೇಗವಾಗಿ ಕಾರು ಚಾಲಾಯಿಸಿದ್ದೆ ಅಪಘಾತಕ್ಕೆ ಕಾರಣ .ಸದ್ಯಕ್ಕೆ ಕಾರು ಅನುವಿನಕಟ್ಟೆ ಗ್ರಾಮದ ಸಾಗರ್ ಎಂಬುವರದ್ದು ಎಂಬ ಮಾಹಿತಿ ಇದ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯಬೇಕು..ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣ.
ಮಂಡ್ಯ ಜಿಲ್ಲಾ ಬಿಜೆಪಿ ಘಟಕವು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಜಿಲ್ಲಾಧ್ಯಕ್ಷರಾದ ನಾಗಣ್ಣನವರು ಮನವಿ ಮಾಡಿದರು .
ಮಂಡ್ಯ: ಜಿಲ್ಲಾ ಜನರ ಸ್ವಾಭಿಮಾನವನ್ನು ಎತ್ತಿ ಹಿಡಿಯಲು ಸುಮಲತಾ ಅವರನ್ನು ಬೆಂಬಲಿಸಿ ವಿಜಯಮಾಲೆಯನ್ನು ತೊಡಿಸಿ ಹೊಸ ಇತಿಹಾಸವನ್ನು ನಿರ್ಮಾಣ ಮಾಡುವಂತೆ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು . ವಂಶಪಾರಂಪರ್ಯ ಆಡಳಿತವನ್ನು ಕೊನೆಗಾಣಿಸಿ ಮಂಡ್ಯ ಜಿಲ್ಲೆಯ ಜನರ ಸ್ವಾಭಿಮಾನವನ್ನು ಎತ್ತಿ ಹಿಡಿಯಲು ನಮ್ಮ ಮನೆ ಮಗಳಾದ ಸಮಲತಾ ಅಂಬರೀಶ್ ಅವರನ್ನು ಗೆಲ್ಲಿಸಿ ಜಿಲ್ಲೆಯಲ್ಲಿ ಹೊಸ ರಾಜಕೀಯ ಮನ್ವಂತರಕ್ಕೆ ನಾಂಧಿ ಹಾಡಬೇಕು ಎಂದು ನಾಗಣ್ಣಗೌಡ ಕರೆ ನೀಡಿದರು.
ಅಪ್ಪ ಮಕ್ಕಳು ಮೊಮ್ಮಕ್ಕಳು ಎಲ್ಲ ಸೇರಿ ದೇಶವನ್ನು ಆಡಬೇಕು ಎಂದು ಪಣ ತೊಟ್ಟಿದ್ದಾರೆ .ಬೇರೆಯವರಿಗೆ ನಮ್ಮ ಮಂಡ್ಯದಲ್ಲಿ ಟಿಕೆಟ್ ಕೊಟ್ಟಿದ್ದರೆ ನಮ್ಮ ಅಭ್ಯಂತರ ಆಗುತ್ತಿರಲಿಲ್ಲ .ಅಪ್ಪ ಪ್ರಧಾನಿ ಮಗ ಮುಖ್ಯಮಂತ್ರಿ ಮಕ್ಕಳು ಸಂಸದರು ಸೊಸೆಯರು ಸಂಸದರು ಆಗಬೇಕು ಎಂದು ಅವರ ಅನಿಸಿಕೆ ,ಹೀಗಾಗಿ ಅವರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಕಿವಿಮಾತು ಹೇಳಿದರು .
ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್, ಮುಖಂಡರಾದ ವರದರಾಜೇಗೌಡ, ಬೂಕಹಳ್ಳಿ ಹರೀಶ್, ಭರತ್ ಕುಮಾರ್, ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು..
ರಾತ್ರೊ ರಾತ್ರಿ ಲಾಯರ್ ಕೂಲೆ .! ಮಾಡಿದ್ದು ಯಾರು.???
ರಾತ್ರೊ ರಾತ್ರಿ ಲಾಯರ್ ಕೂಲೆ .! ಮಾಡಿದ್ದು ಯಾರು.??? ಆಸ್ತಿಗಾಗಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿರುವ ಶಂಕೆ...
ಕೆ.ಆರ್.ಪೇಟೆ :ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದ ಸತೀಶ್ (೩೮) ಕೊಲೆಯಾಗಿರೊ ವಕೀಲ.ಚನ್ನರಾಯಪಟ್ಟಣ, ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ವಕೀಲ ಸತೀಶ್ ಸೋಮವಾರ ರಾತ್ರಿ ನಾಗರಘಟ್ಟ ಗ್ರಾಮಕ್ಕಾಗಿ ಬಂದಿದ್ದಾಗ ನಡೆದಿರುವಂಥ ಘಟನೆ.
ಘಟನೆ ವಿವರಣೆ: ನಾಗರಘಟ್ಟ ಗ್ರಾಮದ ಲೇ ರಾಜೇಗೌಡ್ ರ ಮಕ್ಕಳಾದ ಸತೀಶ್ ಮತ್ತು ಉಮೇಶ್ ಎಂಬ ಇಬ್ಬರೂ ಮಕ್ಕಳು ಮೂಲತಹ ಸತೀಶ್ ವಕೀಲ ಕೆಲಸಮಾಡತ್ತಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ವಾಸವಾಗಿದ್ದು. ಚನ್ನರಾಯಪಟ್ಟಣ, ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು.ಗ್ರಾಮದಲ್ಲಿ ಹಬ್ಬವಿರುವ ಕಾರಣ ಸೋಮವಾರ ರಾತ್ರಿ ನಾಗರಘಟ್ಟ ಗ್ರಾಮಕ್ಕೆ ಬಂದಿದ್ದಾಗ ನಡೆದಿರುವಂಥ ಘಟನೆ .
ತಮ್ಮ ನ ಹೇಳಿಕೆ : ಮನೆಯಲ್ಲಿ ಅಣ್ಣ ಮತ್ತು ತಮ್ಮ ಇಬ್ಬರೆ ಇದ್ದು ನಾನು ಮೇಲಿನ ರೂಮಿನಲ್ಲಿ ಇದ್ದೆ. ಸುಮಾರು ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಯಾರೊ ನಾಲ್ಕು ಜನ ನಮ್ಮ ಅಣ್ಣ ಬಳಿ ಬಂದು ಹಣಕಾಸಿನ ವಿಚಾರವಾಗಿ ಗಲಾಟೆ ಮಾಡುತ್ತಿದ್ದರು ನಾನು ನಮ್ಮ ಅಣ್ಣ ಮಾತನಾಡತ್ತಿರಲ್ಲಿಲಾ ಅದ್ದರಿಂದ ನಾನು ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ನಾನು ಹೊಗಲಿಲ್ಲಾ ಬೆಳ್ಳಗೆ ನೊಡಿದ್ದಾಗ ನನ್ನ ಅಣ್ಣ ರಕ್ತ ದ ಮಡುವಿನಲ್ಲಿ ಬಿದ್ದಿದ್ದರು ನಂತರ ಗ್ರಾಮಸ್ಥರಿಗೆ ತಿಳಿಸಿದೆ ಎಂದು ಹೇಳಿಕೆ ನೀಡಿದ್ದು.
ಸಹೋದರನ ಹೇಳಿಕೆಯ ಮೇಲೆ ಸಂಶಯ ವ್ಯಕ್ತಪಡಿಸಿರುವ ಪೊಲೀಸರು ಮೃತ ವಕೀಲನ ಸಹೋದರನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.ಹತ್ಯೆಸ್ಥಳಕ್ಕೆ ಹಾಸನ ಜಿಲ್ಲಾ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಆಗಮಿಸಿ ಕೊಲೆ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯಕೈಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡು .ಗ್ರಾಮದಲ್ಲಿ ಉದ್ವಿಗ್ನ ವಾತಾವರಣವಿದೆ. ಪೋಲಿಸ್ ರ ತನಿಖೆ ಯಿಂದ ಅಪರಾಧಿಯಾರು ಎಂದು ತಿಳಿಯಬೇಕಿದೆ.ಕೃಷ್ಣರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಮಡುವಿನಕೋಡಿ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ.
ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವದ ಸಂಭ್ರಮ. ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಭಾಗಿ
ಕೃಷ್ಣರಾಜಪೇಟೆ :ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಗ್ರಾಮರಕ್ಷಕ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮ ಸಡಗರದಿಂದ ಜರುಗಿತು.ಉಘೇ..ಆಂಜನೇಯ ಉಘೇ ಉಘೇ ಎಂದು ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು. ಶಾಸಕ ಡಾ.ನಾರಾಯಣಗೌಡ ರಥದಲ್ಲಿ ವಿರಾಜಮಾನವಾಗಿದ್ದ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗೆ ಸಾಂಕೇತಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿ. ರಥದಲ್ಲಿ ವಿರಾಜಮಾನವಾಗಿದ್ದ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗೆ ಸಾಂಕೇತಿಕ ಪೂಜೆ ಸಲ್ಲಿಸಿದರು.ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆನಂದೇಗೌಡ ಅವರ ನೇತೃತ್ವದಲ್ಲಿ ಬಿಗಿಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಾಲೇಜು ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕ ವರ್ಗದವರಿಂದ ಹಲ್ಲೆ.! ಹಿಗ್ಗಾಮುಗ್ಗಾ ಥಳಿಸೊ ವೀಡಿಯೋ ವೈರಲ್ .
ಪ್ರಾಂಶುಪಾಲರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ ವಿದ್ಯಾರ್ಥಿಗಳನ್ನು ಅಮಾನುಷವಾಗಿ cರೊ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಹಾಸನ: ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದಕ್ಕೆ ಕಾಲೇಜು ಪ್ರಾಧ್ಯಾಪಕ ವರ್ಗದವರಿಂದ ವಿದ್ಯಾರ್ಥಿಗಳ ದ್ವಿಚಕ್ರವಾಹನದ ಗಾಳಿ ಬಿಟ್ಟು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಘಟನೆ ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ನಡೆದಿದೆ.ಇಂದು ಸರ್ಕಾರಿ ಕಲಾ ಕಾಲೇಜಿಗೆ ರಜೆ ಘೋಷಣೆ ಆಗಿದ್ದರೂ ಕೂಡಾ, ವಿದ್ಯಾರ್ಥಿಗಳು ಹೋಳಿ ಹಬ್ಬ ಆಚರಣೆ ಮಾಡಲೆಂದು ಕೆಲ ವಿದ್ಯಾರ್ಥಿಗಳು ಕಾಲೇಜು ಬಳಿ ಬಂದಿದ್ದರು. ಹೋಲಿ ಆಚರಣೆಗೆ ಬಂದ ವಿದ್ಯಾರ್ಥಿಗಳು ಎಂದಿನಂತೆ ತಮ್ಮ ಕಾಲೇಜು ಆವರಣದ ದ್ವಿಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿದ್ದಾರೆ.
ವಾಹನ ನಿಲ್ಲಿಸಿದ್ದಕ್ಕೆ ಆಕ್ರೋಶಗೊಂಡ ಕೆಲ ಪ್ರಾಧ್ಯಾಪಕರು ಕಾಲೇಜು ಇಲ್ಲದಿದ್ದರೂ ಕಾಲೇಜು ಆವರಣದಲ್ಲಿ ಬೈಕ್ ನಿಲ್ಲಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ವಿದ್ಯಾರ್ಥಿಗಳ ಬೈಕ್ ನ ಟೈಯರ್ ನ ಗಾಳಿ ಬಿಟ್ಟಿದ್ದಾರೆ. ಹೋಳಿ ಮುಗಿಸಿಕೊಂಡು ವಾಹನವನ್ನು ತೆಗೆದುಕೊಳ್ಳಲು ಬಂದ ವಿದ್ಯಾರ್ಥಿಗಳಿಗೆ ದ್ವಿಚಕ್ರವಾಹನದ ಗಾಡಿ ಬಿಟ್ಟಿರುವ ಕಂಡು ಸಿಟ್ಟಾಗಿದ್ದಾರೆ. ಯಾರೋ ಕಿಡಿಗೇಡಿಗಳು ಇಂತಹ ಕೃತ್ಯವನ್ನು ಮಾಡಿದ್ದಾರೆ ಅಂತ ಸಿಟ್ಟಿನಲ್ಲಿ ಸ್ಥಳದಲ್ಲೇ ಕೆಲ ಅವ್ಯಾಚ ಶಬ್ದಗಳಿಂದ ಬೈಯ್ದಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿಯೇ ಇದ್ದ ಬರುವ ಪ್ರಾಧ್ಯಾಪಕ ತನ್ನ ಮಾತನ್ನು ಕೇಳಿಸಿಕೊಂಡ ಬಳಿಕ ಕುಪಿತಗೊಂಡು ಆತನಿಗೆ ಹಲ್ಲೆ ಮಾಡಿದ್ದಾನೆ. ಇದನ್ನ ಪ್ರಶ್ನೆ ಮಾಡಿದ ವಿದ್ಯಾರ್ಥಿ ಮೇಲೆ ಮತ್ತೆ ಅದೇ ಪ್ರಾಧ್ಯಾಪಕ ಮರು ಹಲ್ಲೆ ಮಾಡಿದ್ದಾನೆ. ಆದರೆ ಇದನ್ನು ಅಲ್ಲೇ ಸ್ಥಳದಲ್ಲಿದ್ದ ಮತ್ತು ಇಬ್ಬರು ವಿದ್ಯಾರ್ಥಿಗಳು ಪ್ರಶ್ನೆ ಮಾಡಿ ಸರ್ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಬೇಡಿ ಎಂದು ಹೇಳಿದ್ದಾರೆ ನಾವು ನಿಲ್ಲಿಸುತ್ತಿರಲಿಲ್ಲ ಆದರೆ ಈಗ ಗಾಳಿ ಇಲ್ಲದ ವಾಹನ ತಳ್ಳುವುದು ತುಂಬಾ ಕಷ್ಟ ಅಂತ ಪ್ರಶ್ನೆ ಮಾಡಿದ್ದಾರೆ.ಇದೆ ವೇಳೆ ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲ ರಾಜಪ್ಪ ಮತ್ತು ದೈಹಿಕ ಶಿಕ್ಷಕ ಮಹೇಂದ್ರಪ್ಪ, ಸತ್ಯಮೂರ್ತಿ ಹಾಗೂ ಗಿರೀಶ್ ನಮ್ಮನ್ನೇ ಪ್ರಶ್ನೆ ಮಾಡುತ್ತೀಯ ಎಂದು ಆ ನಾಲ್ಕು ಮಂದಿ ಸೇರಿ ಚಂದ್ರಶೇಖರ್ ಎಂಬ ವಿದ್ಯಾರ್ಥಿಯ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ ಜೊತೆಗೆ ಕಾಲಿನಿಂದ ಒದೆಯೂವ ಮೂಲಕ ಗೂಂಡಾ ವರ್ತನೆ ತೋರಿದ್ದಾರೆ.
ಘಟನೆಯ ವಿಡಿಯೋವನ್ನ ಸ್ಥಳದಲ್ಲಿದ್ದ ಕೆಲ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಚಿತ್ರಿಕರಿಸಿ ಕ್ಷಣ ಮಾತ್ರದಲ್ಲಿ ನೂರಾರು ವಿದ್ಯಾರ್ಥಿಗಳ ಮೊಬೈಲ್ ಗಳಿಗೆ ಹಾಗೂ ಜಾಲತಾಣಗಳ ಮೂಲಕ ಹರಿ ಬಿಟ್ಟಿದ್ದಾರೆ. ಜೊತೆಗೆ ಕಾಲೇಜು ಮತ್ತು ಪ್ರಾಧ್ಯಾಪಕ ವರ್ಗದವರ ವಿರುದ್ಧ ಕೂಡ ವಿದ್ಯಾರ್ಥಿಗಳು ದೂರು ದಾಖಲು ಮಾಡಲು ಸಾಧ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ವಿದ್ಯಾರ್ಥಿಗಳು ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಹೇಳಬೇಕಾದರೆ ಗುರುಗಳೇ ರೌಡಿಗಳು ರೀತಿಯಲ್ಲಿ ವರ್ತನೆ ಮಾಡಿದ್ದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಆದರೆ ಇಲ್ಲಿ ಪ್ರಾಧ್ಯಾಪಕರೊಂದಿಗೆ ಪ್ರಾಂಶುಪಾಲರು ಕೂಡ ಸೇರಿ ವಿದ್ಯಾರ್ಥಿಗೆ ಹಲ್ಲೆ ಮಾಡಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ.
ನಿಖಿಲ್ ಕುಮಾರಸ್ವಾಮಿ ನಾಮಿನೇಷನ್ ದಿಢೀರ್ ರದ್ದು..!
ಇಂದು ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿಯಾಗಿ ನಾಮಿನೇಷನ್ ಮಾಡಬೇಕಿತ್ತು. ಆದರೆ ದಿಢೀರ್ ಎಂದು ನಾಮಪತ್ರ ಸಲ್ಲಿಕೆಯನ್ನು ರದ್ದು ಮಾಡಿದ್ದಾರೆ.
ಮಂಡ್ಯ: ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಚುನಾವಣೆಗೆ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆಗೆ ನಿರ್ಧಾರವಾಗಿತ್ತು. ಇಂದಿನ ನಾಮಪತ್ರ ಸಲ್ಲಿಕೆ ರದ್ದು ಮಾಡಿ, ಒಟ್ಟಿಗೆ 25ರಂದು ನಾಮಪತ್ರ ಸಲ್ಲಿಕೆಗೆ ನಿರ್ಧಾರ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್ ಮಾಹಿತಿ ನೀಡಿದ್ದಾರೆ.ಜ್ಯೋತಿಷಿಗಳ ಸಲಹೆಯಂತೆ ಸಮಯ ನಿಗದಿಪಡಿಸಲಾಗಿದ್ದು, ಗುರುವಾರ ನಾಮಪತ್ರ ಸಲ್ಲಿಸಿದರೆ ಗುರುಬಲ ಕೂಡಿಬರಲಿದೆ ಅನ್ನೋ ನಂಬಿಕೆಯಿಂದಾಗಿ ಇಂದು ನಾಮಿನೇಷನ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ 25 ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ನಾಮಪತ್ರ ಸಲ್ಲಿಕೆಯನ್ನು ರದ್ದು ಮಾಡಿದ್ದಾರೆ.ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾರ್ಚ್ 25ರಂದು ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ 80 ಸಾವಿರಕ್ಕೂ ಹೆಚ್ಚು ಜನರ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಸಿಎಂ, ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಜಿಲ್ಲೆಯ ಶಾಸಕರು, ಸಚಿವರು ಭಾಗಿಯಾಗಲಿದ್ದಾರೆ. ಅಷ್ಟೇ ಅಲ್ಲದೇ ಬುಧವಾರದ ಸುಮಲತಾ ನಾಮಪತ್ರ ಕಾರ್ಯಕ್ರಮಕ್ಕೆ ಸೆಡ್ಡು ಹೊಡೆಯಲು ಜೆಡಿಎಸ್ ಚಿಂತನೆ ನಡೆಸಿದ್ದು, ಕಳೆದ ದಿನಕ್ಕಿಂತಲು ಹೆಚ್ಚಿನ ಜನ ಸೇರಿಸಲು ಪ್ಲಾನ್ ಮಾಡುತ್ತಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರದಿಂದಲೂ ಕನಿಷ್ಟ ಹತ್ತು ಸಾವಿರ ಜನ ಕರೆತರಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬ್ಯಾಂಕ್ ವ್ಯವಹಾರದ ಮೇಲೆ ಚುನಾವಣಾ ಆಯೋಗದ ಹದ್ದಿನ ಕಣ್ಣು...! ಹಣ ತೆಗೆಯೋ ಮುನ್ನ ಎಚ್ಚರ.!!
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಣಕಾಸು ವ್ಯವಹಾರದ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಡಿದೆ.ಹಣ ತೆಗೆಯೋ ಮುನ್ನ ಎಚ್ಚರ.!
ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಬ್ಯಾಂಕ್ ವ್ಯವಹಾರ ಸೂಕ್ಷ್ಮವಾಗಿಸಲು ಆಯೋಗ ನೋಟಿಸ್ ನೀಡಿದೆ. ಈ ಪ್ರಕಾರ ಖಾತೆಯಿಂದ 1 ಲಕ್ಷಕ್ಕಿಂತ ಹೆಚ್ಚು ಹಣವನ್ನ ವಿತ್ ಡ್ರಾ ಮಾಡುವ ಖಾತೆದಾರರ ಮಾಹಿತಿಯನ್ನ ಚುನಾವಣಾ ಸಿಬ್ಬಂದಿ ಪಡೆಯಲಿದ್ದಾರೆ. ಹಾಗೇ 10 ಲಕ್ಷಕ್ಕಿಂತ ಹೆಚ್ಚು ಹಣವನ್ನ ವಾಪಸ್ ಪಡೆದರೆ ತೆರಿಗೆ ಇಲಾಖೆಗೆ ನೇರವಾಗಿ ಮಾಹಿತಿ ಹೋಗುತ್ತದೆ.ಈ ಪ್ರಕಾರ ಮುಂದಿನ ಒಂದುವರೆ ತಿಂಗಳು ಖಾತೆಗಳ ಮೇಲೆ ನಿಗಾ ಇಡಲಾಗುತ್ತದೆ. ಇನ್ನು ಅಭ್ಯರ್ಥಿಗಳ ದೈನಂದಿನ ಖರ್ಚನ್ನ ನೇರವಾಗಿ ಚುನಾವಣಾ ಕ್ಯಾಮಾರಾ ಸಿಬ್ಬಂದಿ ಸೆರೆ ಹಿಡಿದ ದೃಶ್ಯಗಳ ಆಧಾರದಲ್ಲಿ ಆಡಿಟ್ ಮಾಡಲಾಗುತ್ತದೆ. ನಿಗದಿಗಿಂತ ಹೆಚ್ಚು ಖರ್ಚು ಮಾಡಿದರೆ 24 ಗಂಟೆಯೊಳಗೆ ಕಠಿಣ ಕ್ರಮ ವಹಿಸಲಾಗುತ್ತದೆ.ಒಂದು ವೇಳೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಡ್ರಾ ಮಾಡಿದರೆ ಆದಾಯ ಇಲಾಖೆ ಖಾತೆದಾರರನ್ನು ಕರೆಸಿ ವಿಚಾರಣೆ ಮಾಡುತ್ತಾರೆ. ಯಾವ ಖರ್ಚಿಗೆ ಹಣ ಡ್ರಾ ಮಾಡಿದ್ದೀರ, ಯಾವುದಕ್ಕೆ ಎಷ್ಟೆಷ್ಟು ಖರ್ಚು ಮಾಡಿದ್ದೀರಾ? ಎಂದು ಅವರ ಬಳಿ ಸಂಪೂರ್ಣ ಮಾಹಿತಿಯನ್ನು ಪಡೆಯಲಾಗುತ್ತದೆ.
ಹಾಸನದ ದಶಕದ ರಾಜಕೀಯ ದ್ವೇಷ ಕೊನೆಯಾಗುತ್ತಾ.! ರೇವಣ್ಣ ವಿರುದ್ಧ ಕಾಂಗ್ರೆಸ್ಸಿಗರ ‘ಆಣೆ ಅಸ್ತ್ರ..
ಹಾಸನದ ದಶಕದ ರಾಜಕೀಯ ದ್ವೇಷ ಕೊನೆಯಾಗುತ್ತಾ.! ರೇವಣ್ಣ ವಿರುದ್ಧ ಕಾಂಗ್ರೆಸ್ಸಿಗರ ‘ಆಣೆ ಅಸ್ತ್ರ.
ಹಾಸನ : ಹಾಸನದ ರಾಜಕಾರಣದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಾಜಿ ಸಂಧಾನದ ಮಾತುಕತೆಗೆ ಕುಳಿತುಕೊಳ್ಳಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಸಂಧಾನ ನಡೆಯುತ್ತಿದ್ದು, ಹಳೆಯ ದ್ವೇಷ ಮರೆತು ಜೆಡಿಎಸ್ ಬೆಂಬಲಿಸುವಂತೆ ಮನವೊಲಿಸಲು ಮುಂದಾಗಿದ್ದಾರೆ.
ಸಚಿವ ಹೆಚ್.ಡಿ.ರೇವಣ್ಣರ ಸಮ್ಮುಖದಲ್ಲಿ ಜೆಡಿಎಸ್ ನಾಯಕರಿಂದ ಕಾಂಗ್ರೆಸ್ ಮುಖಂಡರುಗಳಿಗೆ, ಕಾರ್ಯಕರ್ತರಿಗೆ ಏನೆಲ್ಲಾ ಸಮಸ್ಯೆ ಆಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ತೀರ್ಮಾನಿಸಿದ್ದಾರೆ. ಈ ವೇಳೆ ವಿಪರೀತ ದೇವರನ್ನು ನಂಬುವ ರೇವಣ್ಣ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದೆ ಯಾವುದೇ ತೊಂದರೆ ಕೊಡಲ್ಲ ಅಂತ ಸಚಿವರು ಆಣೆ ಪ್ರಮಾಣ ಮಾಡಲಿ ಎಂದು ಒತ್ತಾಯಿಸಲು ಕೈ ಪಡೆ ಸಜ್ಜುಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇತ್ತ ದೋಸ್ತಿಗಳು ಕೈ ಕೊಟ್ಟರೆ ಮಗನ ಗೆಲುವು ಕಷ್ಟ ಎಂದು ಭಾವಿಸಿದ ರೇವಣ್ಣ ಸಿದ್ದರಾಮಯ್ಯ ನಿವಾಸದಲ್ಲಿ ಇಂದು ರಾಜೀ ಪಂಚಾಯ್ತಿಗೆ ಹಾಜರಾಗಲು ಒಪ್ಪಿದ್ದಾರೆ. ಕೇವಲ ಬಾಯಿ ಮಾತಿಗೆ ಹಾಸನದ ದಶಕದ ರಾಜಕೀಯ ದ್ವೇಷ ಕೊನೆಯಾಗುತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.