ಪೆಟ್ಟಿ ಅಂಗಡಿಯಲ್ಲಿ ಸಿಕ್ಕ ಅಕ್ರಮ ಮಧ್ಯವನ್ನು ಸೇವಿಸಿ ನಾಲ್ವರು ಅಸ್ವಸ್ಥ.

 ಪರವಾನಗಿ ಇಲ್ಲದ ಪೆಟ್ಟಿ ಅಂಗಡಿಯಲ್ಲಿ ಸಿಗುವ ಅವಧಿ ಮೀರಿದ ಅಕ್ರಮ ಮಧ್ಯವನ್ನು ಸೇವಿಸಿದ ನಾಲ್ವರು ಯುವಕರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

ಕೆ.ಆರ್.ಪೇಟೆ: ತಾಲೂಕಿನ ಕೃಷ್ಣಾಪುರ ಗ್ರಾಮದ ನಂಜೇಗೌಡರ ಮಗ ಮಹದೇವ್(50), ವೆಂಕಟರಾಂ ಅವರ ಮಗ ಸುರೇಶ್(29), ಲಿಂಗಾಪುರ ಗ್ರಾಮದ ಸಣ್ಣಯ್ಯ ಅವರ ಮಗ ತಮ್ಮಯ್ಯ(45), ಪರೇಗೌಡನಕೊಪ್ಪಲು ಗ್ರಾಮದ ಸಣ್ಣೇಗೌಡರ ಮಗ ಯೋಗೇಶ್(34) ಅವಧಿ ಮೀರಿದ ಮಧ್ಯೆ ಸೇವನೆ ಮಾಡಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಸ್ನೇಹಿತರಾಗಿದ್ದಾರೆ.


ಘಟನೆ ವಿವರ: ಕೃಷ್ಣಾಪುರ ಗ್ರಾಮದಲ್ಲಿ ಇರುವ ಹಲವು ಪೆಟ್ಟಿ ಅಂಗಡಿಗಳಲ್ಲಿ ಹಲವು ವರ್ಷಗಳಿಂದ ಪರವಾನಗಿ ಇಲ್ಲದೆ ಅವಧಿ ಮೀರಿದ ಮಧ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಅಕ್ರಮ ಮಧ್ಯ ಮಾರಾಟವನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ಹಲವು ಭಾರಿ ಹೋರಾಟ ಮಾಡಿ ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನ ವಾಗಿರುವುದಿಲ್ಲ. ಸ್ನೇಹಿತರಾದ ಮಹಾದೇವ್, ಸುರೇಶ್, ತಮ್ಮಯ್ಯ, ಯೋಗೇಶ್ ಅವರು ಮಂಗಳವಾರ ಮಧ್ಯಾಹ್ನ 4ಗಂಟೆ ಸಮಯದಲ್ಲಿ ಕೃಷ್ಣಾಪುರ ಗ್ರಾಮದಲ್ಲಿ ಸಿಗುವ ಮಧ್ಯವನ್ನು ಕೊಂಡು ಗ್ರಾಮದ ತೋಟವೊಂದರಲ್ಲಿ ಸೇವನೆ ಮಾಡಿದ ಕೆಲವೇ ನಿಮಿಷಗಳಲ್ಲಿ ಹೊಟ್ಟೆ ನೋವು, ವಾಂತಿ-ಬೇದಿ, ಕಾಣಿಸಿಕೊಂಡು ಅಸ್ವಸ್ಥಗೊಂಡರು. ತಕ್ಷಣ ಅವರನ್ನು ಕೆ.ಆರ್.ಪೇಟೆ ಪಟ್ಟಣ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಾಲ್ವರಿಗೂ ತೀವ್ರನಿಗಾ(ಐಸಿಯು) ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವಧಿ ಮೀರಿದ ಮಧ್ಯ ಸೇವನೆ ಇದಕ್ಕೆ ಕಾರಣವಿರಬೇಕೆಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದು, ಪೊಲೀಸರ ಪೂರ್ಣ ಪ್ರಮಾಣದ ತನಿಖೆಯಿಂದ ಇದರ ನಿಖರ ಕಾರಣ ತಿಳಿದು ಬರಬೇಕಾಗಿದೆ.


ಗ್ರಾಮಸ್ಥರ ಆಕ್ರೋಶ: ಕಳೆದ ಹಲವಾರು ವರ್ಷಗಳಿಂದ ಕೃಷ್ಣಾಪುರ ಗ್ರಾಮದಲ್ಲಿ ಕೆಲವು ಪೆಟ್ಟಿಗೆ ಅಂಗಡಿಗಳಲ್ಲಿ ಯಾವುದೇ ಲೈಸೆನ್ಸ್ ಪಡೆಯದೇ ಅಕ್ರಮವಾಗಿ ಕಳಫೆ ಗುಣಮಟ್ಟದ ಮಧ್ಯವನ್ನು ಮಾರಾಟಮಾಡುತ್ತಿರುವುದನ್ನು ತಡೆಗಟ್ಟುವಂತೆ ಹೋರಾಟ ಮಾಡಿದರೂ ಸಹ ಅಬಕಾರಿ ಅಧಿಕಾರಿಗಳಾಗಲಿ, ಪೊಲೀಸ್ ಅಧಿಕಾರಿಗಳಾಗಲು ಮಧ್ಯ ಮಾರಾಟವನ್ನು ತಡೆಗಟ್ಟುವಲ್ಲಿ ವಿಫಲವಾಗಿರುವುದೇ ಇಂದಿನ ದುರ್ಘಟನೆಗೆ ಕಾರಣವಾಗಿದೆ. ಗ್ರಾಮದಲ್ಲಿ ಸುಲಭವಾಗಿ ಸಿಗುವ ಮಧ್ಯವನ್ನು ಸೇವನೆ ಮಾಡಿ ಅಸ್ವಸ್ಥಗೊಂಡು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಮಹಾದೇವ್, ಸುರೇಶ್, ತಮ್ಮಯ್ಯ, ಯೋಗೇಶ್ ಅವರಿಗೆ ಏನಾದರೂ ಹೆಚ್ಚು-ಕಡಿಮೆಯಾದರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈಗಲಾದರೂ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟವನ್ನು ಬಂದ್ ಮಾಡಿಸಬೇಕು. ಅಕ್ರಮ ಮಧ್ಯ ಮಾರಾಟಗಾರರಿಂದ ಆಸ್ಪತ್ರೆಯ ಖಚರ್ು ವೆಚ್ಚಗಳನ್ನು ಭರಿಸಬೇಕೆಂದು ಕೃಷ್ಣಾಪುರ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

 

Share this article

About Author

Madhu
Leave a comment

Write your comments

Visitors Counter

223965
Today
Yesterday
This Week
This Month
Last Month
All days
366
393
1310
366
6704
223965

Your IP: 3.133.79.70
2024-05-01 12:22

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles