ಇತ್ತೀಚಿಗಿನ ಸುದ್ದಿಗಳು

ಸುದ್ದಿಜಾಲ

ಸುದ್ದಿಜಾಲ

ಜಿಲ್ಲಾಡಳಿತದಿಂದ ನಾಡಹಬ್ಬ ಮೈಸೂರು ದಸರಾ 2018ರ ಅಧಿಕೃತ ಲಾಂಛನ ಬಿಡುಗಡೆ.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2018 ನೇ ಸಾಲಿನ ದಸರಾ ಮಹೋತ್ಸವದ ಲಾಂಛನ ಜಿಲ್ಲಾಡಳಿತದಿಂದ ಬಿಡುಗಡೆ ಮಾಡಿದೆ 'MysuruDasara2018' ಟ್ವಿಟರ್ ಖಾತೆ ಮೂಲಕ ಪ್ರಕಟಣೆ ಮೈಸೂರು ದಸರಾವನ್ನು ಈ ಬಾರಿ ಸರಳ ವ್ಯಕ್ತಿ ಸುಧಾಮೂರ್ತಿಯವರು ಚಾಲನೆ ನೀಡಲ್ಲಿದ್ದಾರೆ ಅ.10ರಿಂದ 19 ರವರೆಗೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ.

Rate this item
(0 votes)

 ಯುವತಿಯೊಬ್ಬರನ್ನು ಕಿಡ್ನಾಪ್ ಮಾಡಿ, ಅತ್ಯಾಚಾರ ಎಸುಗಿ ವಾಪಸ್ ಕಳುಹಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಅನುವಿನಕೋಡಿ ಗ್ರಾಮದ ಸಂಜು, ಮಹೇಶ್ ಸೇರಿದಂತೆ ಇನ್ನಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ. ತಾಲೂಕಿನ ಯುವತಿ ತಮ್ಮ ಗ್ರಾಮದಿಂದ ಪಟ್ಟಣಕ್ಕೆ ಬರಲು ಕಳೆದ ಮಂಗಳವಾರ ಗ್ರಾಮದ ಸಮೀಪದಲ್ಲಿರುವ ಗೇಟ್ ಬಳಿ ಬಸ್ಸಿಗೆ ಕಾಯುತ್ತಿರುವಾಗ, ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಬಾಯಿಗೆ ಬಟ್ಟೆ ತುರುಕಿ ಪಾಂಡವಪುರದ ತನಕ ಕರೆದೊಯ್ದಿದ್ದಾರೆ. ಅಲ್ಲಿಂದ ಮಂಡ್ಯಕ್ಕೆ ಬಸ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಸಂಜು ಮತ್ತು ಮಹೇಶ್ ಕಾರಿನಲ್ಲಿ ಕರೆದುಕೊಂಡು ಬೆಂಗಳೂರಿನ ಕೆಂಗೇರಿಯ ರೂಮ್ ಒಂದರಲ್ಲಿ ಕೂಡಿ ಹಾಕಿ, ಸಂಜು ಎಂಬುವರ ಅತ್ಯಾಚಾರ ಎಸಗಿ ಕೆ.ಆರ್.ನಗರದ ಸಂಬಂಧಿಕರ ಮನೆಗೆ ಬಿಟ್ಟು ಹೋಗಿದ್ದಾರೆ ಎಂದು ಯುವತಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದಲ್ಲದೆ, ಮಗಳು ಕಾಣುತ್ತಿಲ್ಲ ಎಂದು ಕಿಡ್ನಾಪ್ ಆದ ದಿನ ಪೋಷಕರು ಮಿಸ್ಸಿಂಗ್ ದೂರನ್ನು ನೀಡಿದ್ದರು. ಈ ಸಂಬಂಧ ಎರಡು ಪ್ರಕರಣಗಳು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿರುವ ಪ್ರಕರಣದ ತನಿಖೆಯನ್ನು ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶಯ್ಯ ನಡೆಸುತ್ತಿದ್ದು, ಸಂಜು, ಮಹೇಶ್ ಸೇರಿದಂತೆ ಪ್ರಕರಣಕ್ಕೆ ಸಹಕರಿಸಿದ ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Last modified on 02/09/2018

ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಶ್ರೀ ಆಭಯ ಆಂಜನೇಯ ಸ್ವಾಮಿ ಗೆಳೆಯರ ಬಳಗದ ವತಿಯಿಂದ ದೇಣಿಗೆ ಸಂಗ್ರಹ.

ತುಮಕೂರು: ಕೊಡಗು ನೆರೆ ಸಂತ್ರಸ್ತರಿಗೆ ತುಮಕೂರು ಜಿಲ್ಲೆಯ ಚಿಕ್ಕಸೀಬಿ ಗ್ರಾಮದಯುವಕರು ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ಗೆಳೆಯರ ಬಳಗದ ವತಿಯಿಂದ ದೇಣಿಗೆ ಸಂಗ್ರಹಿಸಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ಅವರ ಸ್ನೇಹಿತರ ಪಾಲ್ಗೊಂಡ ಸಂತ್ರಸ್ತರಿಗೆ ಸಹಾಯ ಮಾಡಿದರು.

Rate this item
(0 votes)

 ಮಳವಳ್ಳಿ ಸಾರ್ವಜನಿಕ ಶೌಚಾಲಯ ಉದ್ಘಾಟನಾ ನಾಮಪಲಕ್ಕೆ ಮಾಜಿ ಶಾಸಕ ನರೇಂದ್ರಸ್ವಾಮಿರವರ ಹೆಸರು ಕೈ ಬಿಟ್ಟಿದ್ದಾರೆ ಎಂದು ಮಳವಳ್ಳಿ ಬ್ಲಾಕ್ ಕಾಂಗ್ರೆಸ್‌ ಆರೋಪ.

ಮಳವಳ್ಳಿ:  ಶಂಕುಸ್ಥಾಪನೆ ನಾಮಪಲಕ ಹಾಕದೆ  ಉದ್ಘಾಟನೆ ನಾಮಫಲಕ ಮಾತ್ರ ಹಾಕಿ  ಮಾಜಿ ಶಾಸಕ ನರೇಂದ್ರಸ್ವಾಮಿರವರ ಹೆಸರನ್ನು  ಕೈಬಿಟ್ಟು   ಪುರಸಭೆ ಆಡಳಿತ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟನೆ ಮಾಡಲು ತಂತ್ರ ನಡೆಸಿದ್ದಾರೆ ಎಂದು ಮಳವಳ್ಳಿ  ಬ್ಲಾಕ್ ಕಾಂಗ್ರೆಸ್‌  ಆರೋಪಿಸಿದೆ.ಮಳವಳ್ಳಿಪಟ್ಟಣದ ಕೊಳ್ಳೇಗಾಲ ರಸ್ತೆಯಲ್ಲಿ  10 ಲಕ್ಷ ರೂ ವೆಚ್ಚದ  ಸಾರ್ವಜನಿಕ ಶೌಚಾಲಯವನ್ನು  ಈ ಹಿಂದೆ ಇದ್ದ ಶಾಸಕ ಪಿ. ಎಂ ನರೇಂದ್ರಸ್ವಾಮಿರವರಾಗಿದ್ದಾಗ. ಗುದ್ದಲಿಪೂಜೆ  ನೇರವೆರಿಸಿದ್ದರು.  ಇಂದು  ಈಗಿನ ಶಾಸಕ  ಡಾ.ಕೆ.ಅನ್ನದಾನಿರವರು ಉದ್ಘಾಟನೆ ಮಾಡುತ್ತಿದ್ದು, ಇದಕ್ಕೆ ಶಂಕುಸ್ಥಾಪನೆ ನಾಮಫಲಕವನ್ನು ಹಾಕದೆ  ಉದ್ಘಾಟನೆ ಮಾಡಲು ಹೊರಟಿದ್ದು, ಇದನ್ನು ಕೆಲವು ಕಾಂಗ್ರೆಸ್ ಪಕ್ಷದ ಮುಖಂಡರು , ಪುರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು.ಯಾವುದೇ ಸರ್ಕಾರಿ ಕಟ್ಟಡದ ಉದ್ಘಾಟನೆ ಯಾದರೆ ಶಂಕುಸ್ಥಾಪನೆ ನಾಮಫಲಕ ಹಾಗೂ ಉದ್ಘಾಟನೆ ನಾಮಫಲಕ ಎರಡು ಇರುತ್ತದೆ. ಆದರೆ  ಇಂದು ಉದ್ಘಾಟನೆ ಯಾಗುತ್ತಿರುವ  ಸಾರ್ವಜನಿಕ ಶೌಚಾಲಯ ಕ್ಕೆ ಕೇವಲ ಉದ್ಘಾಟನೆ ನಾಮಫಲಕ ವನ್ನು ಮಾತ್ರ ಹಾಕಿ ಉದ್ಘಾಟನೆ ಮಾಡುವ ಬಗ್ಗೆ  ನಮ್ಮ ಗಮನಕ್ಕೆ ಬಂದಿದೆ ಒಂದು ವೇಳೆ  ಶಂಕುಸ್ಥಾಪನೆ ನಾಮಫಲಕವನ್ನಯ ಹಾಕದೆ  ಉದ್ಘಾಟನೆ ಮಾಡಿದರೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ. ಕೆ.ಜೆ ದೇವರಾಜು ತಿಳಿಸಿದರು.  ಸರ್ಕಾರಿ  ಕಾರ್ಯಕ್ರಮದಲ್ಲಿ  ಪೋಟೊಕಾಲ್ ಪ್ರಕಾರ ಹಾಕದೆ ಶಾಸಕ ಡಾ.ಕೆ ಅನ್ನದಾನಿ ದುರಾಢಳಿತ ನಡೆಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿದ್ದರೂ  ಈ ರೀತಿ ನಡೆದುಕೊಂಡಿರುವುದು ಅವರ ಘನತೆಗೆ ಗೌರವವಲ್ಲ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ  ಅಂಬರೀಶ ಆರೋಪಿಸಿದರು.   ಪುರಸಭೆ ಸಾಮಾನ್ಯ ಸಭೆಗೆ ತರದೆ ಏಕಾಏಕಿ ಶೇ 3 ರ ಅನುದಾನದಲ್ಲಿ ವಿಕಲಚೇತನರಿಗೆ ಸ್ಕೂಟರ್ ವಿತರಣೆ ಮಾಡಲು ಶಾಸಕರುಹಾಗೂ ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಹೊರಟಿದ್ದಾರೆ ಇದು ಸರಿಯಲ್ಲ  ಎಂದು ಪುರಸಭೆ ಸದಸ್ಯ ಕಿರಣ್ ಶಂಕರ್ ಆರೋಪಿಸಿದರು. ಸಭೆಯಲ್ಲಿ ಯಾವುದೇ ಪಟ್ಟಿ ಆಯ್ಕೆಯಾಗದೆ ಈ ರೀತಿ  ವಿತರಣೆ ಮಾಡಿರುವ ಬಗ್ಗೆ ಈಗಾಗಲೇ  ಸಂಬಂದಪಟ್ಟ ಪೌರಾಢಳಿತ ಇಲಾಖೆಗೆ ಹಾಗೂ  ನ್ಯಾಯಾಲಯದಲ್ಲಿ ಮೊಕದ್ದಮೆ ಮೊರೆಹೋಗುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾರೇಹಳ್ಳಿ ಬಸವರಾಜು, ಕೃಷ್ಣಪ್ಪ ಸೇರಿದಂತೆ ಅನೇಕರು ಇದ್ದರು.

Last modified on 01/09/2018
Rate this item
(0 votes)

ಪ್ರೌಢಶಾಲಾ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಮಳವಳ್ಳಿ ಪಟ್ಟಣದ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು ಬಹುಪಾಲು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. 

ಮಳವಳ್ಳಿ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ನೆಡೆದ ಹೋಬಳಿ ಮಟ್ಟದ ಕ್ರೀಡಾ ಕೂಟ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳಿಗೆ ಭಾಗಿಯಾಗಿದ್ದರು ಪ್ರೌಢಶಾಲಾ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಮಳವಳ್ಳಿ ಪಟ್ಟಣದ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು ಬಹುಪಾಲು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.10 ನೇ ತರಗತಿಯ. ತ್ರಿವಿಧ ಜಿಗಿತದಲ್ಲಿ  ಕೆ. ಶಿವಕುಮಾರ. ಪ್ರಥಮ ಸ್ಥಾನ  ಬಹುಮಾನ ಪಡೆದರೆ, 200 ಮೀಟರ್ ಎತ್ತರಜಿಗಿತದಲ್ಲಿ ಮಹಮ್ಮದ್ ಶೋಹಬ್ ಪ್ರಥಮಸ್ಥಾನ ಬಹುಮಾನ, 4# 100 ರಿಲೇ ತಂಡ ಮಹಮ್ಮದ್ ನಿಯಾಜ್, ಶಿವಕುಮಾರ್ .ಕೆ, ಶೋಹಿಬ್, ಶ್ರೀನಿವಾಸ್   ಪ್ರಥಮಸ್ಥಾನ, ನಡಿಗೆ ಓಟದಲ್ಲಿ  ಡಿ.ರಘುರಾಜ್  (ಪ್ರಥಮ),  ಉದ್ದಜಿಗಿತದಲ್ಲಿ ಶಿವಕುಮಾರ್ ಕೆ,(ಪ್ರಥಮಸ್ಥಾನ) ಎಸ್.ಎಲ್ ಶಶಾಂಕ್  ಚಕ್ರ ಎಸೆತದಲ್ಲಿ ದ್ವಿತೀಯ ಹಾಗೂ ಭರ್ಜಿ ಎಸೆತದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು,  ಚೇತನ್ ಕುಮಾರ, ಉದ್ದಜಿಗಿತದಲ್ಲಿ ತೃತೀಯ ಸ್ಥಾನ ಡಿ.ಎಸ್ ಆನಂದ್  400 ಮೀಟರ್ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ,, ಶ್ರೀನಿವಾಸ್  ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಬಹುಮಾನಗಳ ಬಹುಪಾಲ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ತಮ್ಮ ಶಾಲೆಗೆ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಿಗೆ  ಆಡಳಿತಾಧಿಕಾರಿ ವೈ.ಎಸ್ ಚಲುವರಾಜು, ಮುಖ್ಯ ಶಿಕ್ಷಕ ರಮೀಜ್ ಪಾಷ, ದೈಹಿಕ ಶಿಕ್ಷಕ ಬಿ.ಶಿವಕುಮಾರ ಹಾಗೂ ಶಿಕ್ಷಕರು  ಅಭಿನಂದಿಸಿದ್ದರು.

Rate this item
(0 votes)

ಮಾವಿನಕಟ್ಟೆ ಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಭಾಗ್ಯಮ್ಮ ಉಪಾಧ್ಯಕ್ಷರಾಗಿ ಸುಜಾತ ಆಯ್ಕೆಯಾದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆ ಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಭಾಗ್ಯಮ್ಮ ರಂಗಸ್ವಾಮಿ ಅವಿರೊದವಾಗಿ ಆಯ್ಕೆಯಾದರು.ಒಟ್ಟು ಎಂಟು ಜನ ನಿರ್ದೇಶಕರು ಗಳಲ್ಲಿ ಯಾರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ಕಾರಣ ಭಾಗ್ಯಮ್ಮ ಅವಿರೊದವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುಜಾತ ಆಯ್ಕೆಯಾದರು ಮತ್ತು ನಿರ್ದೇಶಕರಾಗಿ ಸಣ್ಣತಾಯಮ್ಮ, ಸುನಂದಮ್ಮ, ರಂಗಮ್ಮ , ದೇವಮ್ಮ,ನೀಲಮ್ಮ, ಸಾವಿತ್ರಮ್ಮ ಆಯ್ಕೆಯಾದರು.

Last modified on 28/08/2018
Rate this item
(0 votes)

 ಗ್ರಾಮ ವಾಸ್ತವ್ಯ ಹೂಡುವುದರಿಂದ  ಜನರ ನಿಜಜೀವನ ಕಷ್ಟಸುಖಗಳನ್ನು ಹತ್ತಿರದಿಂದ ನೋಡುವುದಕ್ಕಾಗಿ ಮಾಡುತ್ತಿದ್ದೇನೆ ಬುಟಾಟಿಕೆಯಿಂದಲ್ಲ ಎಂದು ಶಾಸಕ ಡಾ.ಅನ್ನದಾನಿ ತಿಳಿಸಿದರು. 

ಮಳವಳ್ಳಿ: ತಾಲ್ಲೂಕಿನ ಹೂವಿನಕೊಪ್ಪಲು ಗ್ರಾಮದ ಸಿದ್ದಮ್ಮ ಎಂಬು ಬಡವರ ಮನೆಯಲ್ಲಿ ವಾಸ್ತವ್ಯ ಹೂಡಿ ನಂತರ ಪತ್ರಕರ್ತರ ಜೊತೆ ಮಾತನಾಡಿದ ಶಾಸಕ ಡಾ.ಅನ್ನದಾನಿ  ಇದುವರೆಗೂ ನಾನು ಶಾಸಕನಾದ ನಂತರ ನಾಲ್ಕು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದು  ಬೀದಿಬೀದಿಗಳ ಜನರ ಕಷ್ಟಗಳನ್ನು ತಿಳಿಯಬಹುದು,  ನಮ್ಮ ನಾಯಕ ಹೆಚ್.ಡಿ ಕುಮಾರಸ್ವಾಮಿರವರು ತಾಯಿ ಹೃದಯ ವುಳ್ಳವರು ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷದವರು ತಮ್ಮ ಸಹೋದರರಂತೆ ಕಾಣುತ್ತಾರೆ.  ಕಾಂಗ್ರೆಸ್ ರವರು ಸೇರಿ ಸಂಮಿಶ್ರ ಸರ್ಕಾರವನ್ನು ರಚಿಸಿದ್ದಾರೆ ಎಂದರು.  ಸಿದ್ದರಾಮಯ್ಯರವರು ಮುಂದಿನ ಮುಖ್ಯ ಮಂತ್ರಿಯಾಗುವ ಹೇಳಿಕೆಗೆ ಬಗ್ಗೆ ಕೇಳಿದ  ಪ್ರಶ್ನೆಗೆ ಉತ್ತರಿಸಿದ ಶಾಸಕ ಅನ್ನದಾನಿರವರು ಈಗಾಗಲೇ ರಾಹುಲ್ ಗಾಂಧಿರವರು  ಮುಂದಿನ 5 ವರ್ಷಗಳ ಕಾಲ ಕುಮಾರಸ್ವಾಮಿ ರವರು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದಾರೆ  ಸಿದ್ದರಾಮಯ್ಯ ಹೇಳಿಕೆಗೆ ಉತ್ತರ ಕೊಡುವ ಮಟ್ಟಕ್ಕೆ ನಾನು ಬೆಳೆದಿಲ್ಲ , ಅವರಿಗೆ ಮೇಲೆಮಟ್ಟದ ನಾಯಕರಾದ ದೇವೇಗೌಡಜೀ, ಕುಮಾರಣ್ಣ ಉತ್ತರ ನೀಡುತ್ತಾರೆ. ಸಮನ್ವಯ ಸಮಿತಿಯಲ್ಲಿ  ಮೂಡಿದರೆ ಎಂಬ ಪ್ರಶ್ನೆಗೆ ಸಮನ್ವಯ ಸಮಿತಿಯಲ್ಲಿ ಎರಡು ಪಕ್ಷದವರು ಇದ್ದಾರೆ ಎಂದಷ್ಟೇ ಹೇಳಿದರು.  ನಾಲೆಗಳಿಗೆ ನೀರು ಬಿಟ್ಟಿಲ್ಲ ಎಂಬ ಮಾತು ಕೇಳು ಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಅನ್ನದಾನಿರವರು ಸಮಸ್ಯೆಗಳನ್ನು ತಿಳಿದುಕೊಳ್ಳಲು  ಈ ಗ್ರಾಮ ವಾಸ್ತವ್ಯ  ಕೆಲವರು ಚುನಾವಣೆ ಸಂದರ್ಭದಲ್ಲಿ ಜನರ ಬಳಿ ಬರುತ್ತಾರೆ. ನಾನು ಗೆದ್ದ ನಂತರ ಪ್ರತಿ ಗ್ರಾಮಗಳಿಗೂ ತೆರಳಿ ನಮ್ಮ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಸಾಧ್ಯವಾದರೆ ಸ್ಥಳದಲ್ಲಿಯೇ ಬಗೆಹರಿಸಲು ಅಧಿಕಾರಗಳ ತಂಡವನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎಂದರು .    

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ನಟೇಶ್, ಮಾಜಿ ಸದಸ್ಯ ಪ್ರಕಾಶ್, ಜಯರಾಜು, ಕೃಷ್ಣಮೂರ್ತಿ, ಶೇಖರ್, ಹೂವಿನಕೊಪ್ಪಲು ಸ್ವಾಮಿ, ಸೇರಿದಂತೆ ಮತ್ತಿತ್ತರರು ಇದ್ದರು.

 

ಕೃಷ್ಣರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಕೆ.ಮಹೇಶ್ಚಂದ್ರ ಅಪಹರಣ ಪ್ರಕರಣ ಬೇಧಿಸಿದ ಕೆ.ಆರ್.ನಗರ ಪೋಲಿಸರು

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಕೆ.ಮಹೇಶ್ಚಂದ್ರ ಅಪಹರಣ ಪ್ರಕರಣ ಬೇಧಿಸಿದ ಕೆ.ಆರ್.ನಗರ ಪೋಲಿಸರು.ತಾಲೂಕಿನ ಶೀಳನೆರೆ ಗ್ರಾಮದವರಾದ ರೈಲ್ವೆ ಇಲಾಖೆಯಲ್ಲಿ ಸ್ಡೋರ್ ಕೀಪರ್ ಕೆಲಸ ಮಾಡುತ್ತಿದ್ದ ದಿ. ನಾಗಣ್ಣಗೌಡರ ಮಗ ಯೋಗೇಂದ್ರ ಕೆ.ಎನ್ (೩೦), ಶೀಳನೆರೆ ತಾ.ಪಂ ಸದಸ್ಯ ನಿಂಗರಾಜು ಎಸ್.ಕೆ. ಎಂಬುವರ ಮಗ ದೀಪು@ ದೀಪಕ್ ಎಸ್.ಎನ್. (೨೯), ದಿ.ಚಿಕ್ಕನಂಜೇಗೌಡರ ಮಗ ಚಂದು ಎಸ್.ಸಿ.(೨೪), ಪಟ್ಟಣದ ಮುಸ್ಲಿಂ ಬ್ಲಾಕ್ ನಿವಾಸಿ ನಾಗೇಗೌಡರ ಮಗ ಸೋಮಶೇಖರ್ (೩೧) ಮತ್ತು ಕಿಕ್ಕೇರಿ ಗ್ರಾಮದ ಲಕ್ಷ್ಮಣ ಎಂಬುವರ ಮಗ ಶ್ರೇಯಸ್ @ ಕರಿಯ್ಯ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ತಹಸೀಲ್ದಾರ್ ಕೆ.ಮಹೇಶ್ಚಂದ್ರ ಕೆಲಸ ಮುಗಿಸಿಕೊಂಡು ಕೆ.ಆರ್.ನಗರದ ಮನೆಗೆ ತೆರಳುವಾಗ ರಾತ್ರಿ ವೇಳೆ ಚಿಕ್ಕವಡ್ಡರಗುಡಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇವರನ್ನು ಅಪಹರಣ ಮಾಡಿದ್ದರು. ಬೆಳಗ್ಗೆ ಅಪಹರಣ ಮಾಡಿದವರು ತಾಲೂಕಿನ ತೆಂಡೇಕೆರೆ ಬಳಿ ಬಿಟ್ಟು ಪ್ರಾಣ ಬೆದರಿಕೆ ಹೊಡ್ಡಿ ತೆರಳಿದ್ದರು. ಮಹೇಶ್ಚಂದ್ರ ಅವರು ಪಟ್ಟಣದ ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಇವರನ್ನ ಡಿ.ಸಿ ರಾಧಿಕಾ ಧೀರ್ಘ ಕಾಲದ ರಜೆ ನೀಡಿ ಕಳಿಸಿದ್ದರು. ಕೆ.ಆರ್.ನಗರ ಪೊಲೀಸರು ಪ್ರಕರಣದ ಬೆನ್ನತ್ತಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆರೋಪಿಗಳೆಲ್ಲ ವಿದ್ಯಾವಂತರಾಗಿದ್ದು, ಎಲ್ಲಾ ರೈಲ್ವೆ ಇಲಾಖೆ ಸೇರಿದಂತೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅದರಲ್ಲೂ ಮೂವರು ಶೀಳನೆರೆ ಗ್ರಾಮದವರಾಗಿದ್ದಾರೆ. ಎಲ್ಲರೂ ಸ್ನೇಹಿತರಾಗಿದ್ದಾರೆ‌. ರೈತರ ಸಾಲ ಮನ್ನಾಗೆ ಒತ್ತಾಯಿಸಿ ತಹಸೀಲ್ದಾರರನ್ನು ಒತ್ತಾಯಾಗಿಟ್ಟುಕೊಂಡು ಸರ್ಕಾರಕ್ಕೆ ಒತ್ತಡ ತರುವ ಸಲುವಾಗಿ ಅಪಹರಣ ಮಾಡಿದ್ದಾಗಿ ಆರೋಪಿಗಳು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಪೊಲೀಸರು ಕೆ.ಆರ್.ನಗರದ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

Page 28 of 42

Visitors Counter

228863
Today
Yesterday
This Week
This Month
Last Month
All days
140
292
1617
5264
6704
228863

Your IP: 18.119.14.235
2024-05-18 12:54

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles