ಇತ್ತೀಚಿಗಿನ ಸುದ್ದಿಗಳು
- 27/09/2019 in ಹಾಸನ
- 10/09/2019 in ಮಂಡ್ಯ
- 10/09/2019 in ಹಾಸನ
- 10/09/2019 in ಹಾಸನ
- 09/09/2019 in ಮಂಡ್ಯ
- 09/09/2019 in ರಾಜ್ಯಸುದ್ದಿ
- 04/09/2019 in ಮಂಡ್ಯ
- 04/09/2019 in ರಾಜ್ಯಸುದ್ದಿ
- 04/09/2019 in ರಾಜ್ಯಸುದ್ದಿ
- 03/09/2019 in ಮಂಡ್ಯ
- 03/09/2019 in ರಾಜ್ಯಸುದ್ದಿ
- 03/09/2019 in ಮಂಡ್ಯ
- 03/09/2019 in ಮಂಡ್ಯ
- 03/09/2019 in ರಾಜ್ಯಸುದ್ದಿ
- 03/09/2019 in ಮಂಡ್ಯ
ಸುದ್ದಿಜಾಲ
ಕೂಡಲಕುಪ್ಪೆ ಗ್ರಾಮಕ್ಕೆ ಮೂಲಭೂತ ಸೌಕರ್ಯ ನೀಡಿದ್ದರೆ ಚುನಾವಣಾ ಬಹಿಷ್ಕಾರದ ಎಚ್ಚರಿಕೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ವಿಠಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೂಡಲಕುಪ್ಪೆ ಗ್ರಾಮ ಯಾವುದೇ ಅಭಿವೃದ್ಧಿ ಕಾಣದೆ ಕೆಸರು ಗದ್ದೆಯಾಗಿದೆ.ಈ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ಬೀದಿ ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಒಟ್ಟಿನಲ್ಲಿ ಹೇಳುವುದಾದರೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಅಭಿವೃದ್ಧಿ ಕಾಣದೆ ಸೊರಗಿ ಹೊಗಿದೆ.ಇಲ್ಲಿ ರಾಜಕೀಯ ಪಕ್ಷಗಳು ಮುಖಂಡರು ಚುನಾವಣಾ ಸಮಯದಲ್ಲಿ ಬರಿ ಮಾತಿನಲ್ಲಿ ಬರವಸೆ ನೀಡಿ ಒಟು ಪಡೆದು ನಂತರ ಗ್ರಾಮದ ಕಡೆ ಮುಖ ಕೂಡ ಮಾಡಿಲ್ಲಾ .ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ನಾರಾಯಣ ಗೌಡರಿಗೆ ಇ ಊರು ಎಲ್ಲಿದೆ ಎಂಬುದೆ ಗೊತ್ತಿಲ್ಲ.ಇದು ವಿಠಲಾಪುರ ಗ್ರಾಮ ಪಂಚಾಯತಿ ಸೇರಿದ್ದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಹ ಗಮನಹರಿಸುತ್ತಿಲ್ಲಾ.
ಗ್ರಾಮದಲ್ಲಿ ಮುಖ್ಯ ರಸ್ತೆ ಕೆಸರು ಗದ್ದೆಯಾಗಿದ್ದು ವೃದರು ,ಮಕ್ಕಳು ,ಮಹಿಳೆಯರು ನೆಡೆದಾಡುಲು ಭಯ ಪಡುವ ಪರಿಸ್ಥಿತಿ ಇದೆ .ಮಳೆ ಬಂದರೆ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ ,ರಸ್ತೆಗಳು ಕೆರೆಯ ರೀತಿ ಕಾಣುತ್ತದೆ. ಎಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಇತ್ತಕಡೆ ಗಮನ ಹರಿಸುತ್ತಿಲ್ಲಾ .ಇನ್ನೂ ನಮ್ಮ ಜನಪ್ರಿಯ ಶಾಸಕರಿಗೂ ಮನವಿ ನಿಡದರೂ ಇತ್ತಕಡೆ ಗಮನಕೊಡುತ್ತಿಲ್ಲ ಎಂದು ಗ್ರಾಮಸ್ಥರು ಶಾಸಕರು ಮತ್ತು ಅಧಿಕಾರಿಗಳು ಮೇಲೆ ಕೆಂಡಕಾರಿದ್ದರೆ .ಮತ್ತು ಗ್ರಾಮದ ರಸ್ತೆಗಳು ಕೆಸರು ಗುಂಡಿಯಾಗಿದ್ದು ಇ ಕೆಸರು ಗುಂಡಿಗೆ ಭತ್ತದ ನಾಟಿ ಮಾಡುವ ಮೂಲಕ ಪ್ರತಿಭಟನೆ ಮಾಡಲು ತೀರ್ಮಾನ ಕೈಗೊಂಡಿದ್ದಾರೆ. ಮತ್ತು ನಮ್ಮ ಗ್ರಾಮವನ್ನು ಅಭಿವೃದ್ಧಿ ಮಾಡದ್ದಿದರೆ ಎಲ್ಲಾ ಚುನಾವಣಾ ಬಹಿಷ್ಕಾರ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ಅಧಿಕಾರಿಗಳು ಮತ್ತು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇವಾಗಲಾದರು ಶಾಸಕರು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ಅಭಿವೃದ್ಧಿ ಮಾಡತ್ತಾರ ಕಾದುನೊಡಬೇಕಿದೆ..
ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಅದರ ಪ್ರವಾಹದಿಂದ ನೂರಾರು ಎಕರೆ ಭೂಮಿ ಮುಳಗಡೆಯಾಗಿದ್ದು ರೈತರ ಬೆಳೆಗಳು ಹಾಳಾಗಿದೆ ಅದರೆ ತಾಲ್ಲೂಕು ಆಡಳಿತ ಬಹಳ ನಿರ್ಲಕ್ಷ್ಯ ವಹಿಸಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅದ್ಯಕ್ಷರಾದ ಎನ್ ಎಲ್ ಭರತ್ ರಾಜ್ ಆರೋಪಿಸಿದ್ದಾರೆ.
ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾವೇರಿ ನದಿ ತೀರದಪ್ರದೇಶಗಳಿಗೆ ಬೇಟಿ ನಂತರ. ರಾಜ್ಯ ಮತ್ತು ನೆರೆ ರಾಜ್ಯಗಳಲ್ಲಿ ವಿಪರೀತ ಮಳೆ ಪರಿಣಾಮದಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಅದರ ಪ್ರವಾಹವು ನದಿಯಿಂದ ಕೆಲವು ಕಡೆ ಒಂದು ಕಿಲೊಮೀಟರ್ ಗಳವರೆಗೆ ಹುಲ್ಲಂಬಳ್ಳಿ.ಅಕ್ಕಮಲ್ಲಹುಂಡಿ .ಪೂರಿಗಾಲಿ.ಸೋಮನಹಳ್ಳಿ. ಬಿಳಿಜಗಲಿಮೊಳೆ.ಬೆಳಕವಾಡಿ ಜವನಗಳ್ಳಿಯ ರೈತರ ಭೂಮಿಯನ್ನ ಅವರಿಸಿಕೊಂಡು ರೈತರ ಬೆಳೆಗಳು ಮತ್ತು ನಾಟಿಗಾಗಿ ಭೂಮಿ ಅದಗೊಳಿಸಲು ಮಾಡಿರುವ ಹತ್ತಾರು ಸಾವಿರ ಹಣ ನಷ್ಟವಾಗಿದೆ
ಕೆಲವುಕಡೆ ಅರಿಸಿನ ಮೆಕ್ಕೆಜೋಳ. ರಾಗಿ.ಭತ್ತದ ವಟ್ಟಲು.ನಾಟಿ ಮಾಡಿರುವ ಬೆಳೆ ಹಾಳಾಗಿದೆ .ತಾಲೂಕಿನ ದಂಡಾಧಿಕಾರಿಗಳು ಬೇಜವ್ದಾರಿಯಾಗಿ ವರ್ತಿಸುತ್ತ ರೈತರ ಹಿತಕಾಯಲು ವಿಪಲವಾಗಿದ್ದಾರೆ ಅದ್ದರಿಂದ ಜಿಲ್ಲಾಧಿಕಾರಿ ಗಳು ತಕ್ಷಣ ಸ್ಪಂದಿಸಬೇಕು ರೈತರಿಗೆ ಆಗಿರುವ ನಷ್ಟವನ್ನು ವೈಜ್ಞಾನಿಕ ವಾಗಿ ಲೆಕ್ಕಹಾಕಿ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ ರೈತ ಸಂಘದ ನಿಯೋಗವು ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ರೈತರ ಅಭಿಪ್ರಾಯಗಳನ್ನು ಆಲಿಸಿದೆ.
ನಿಯೋಗದಲ್ಲಿ ಶಂಕರ್ ನವೀನ್ ಅನಿಲ್.ರವಿ ಮಲ್ಲೇಶ್ ಕುರಿ ನಿಂಗಯ್ಯ ಕೆಂಪರಾಜು.ವೆಂಕಟೇಶ. ಮಹೇಶ್. ಮುಂತಾದವರು ಭಾಗವಹಿಸಿದ್ದರು.
ಮಲ್ಲೇಗೌಡನಹಳ್ಳಿಯಲ್ಲಿ ಚಿರತೆ ದಾಳಿ ಮಾಡಿ ಎರಡು ಹಸುವಿನ ಕರುಗಳನ್ನು ಕೊಂದ ಘಟನೆ ನೆಡೆದಿದೆ.
ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೊನಕೆರೆ ಹೋಬಳಿಯ ಮಲ್ಲೇಗೌಡನಹಳ್ಳಿಯಲ್ಲಿ ಚಿರತೆ ದಾಳಿ ಮಾಡಿ ಎರಡು ಹಸುವಿನ ಕರುಗಳನ್ನು ಕೊಂದು ನಂತರ ಒಂದು ಹಸುವಿನ ಕರುವನ್ನು ಸ್ವಲ್ಪ ದೂರ ಎಳೆದ್ಯೊದು ತಿಂದಿರುವ ಘಟನೆ ನೆಡೆದಿದೆ. ಗ್ರಾಮದ ಕರಿಯಪ್ಪರವರ ಮಗ ವಸಂತ್ ಎಂಬುವರಿಗೆ ಸೇರಿದ ಹಸುಕರುಗಳು ರಾತ್ರಿ ಹೊರಗಡೆಯೆ ಕಟ್ಟಿ ಮಲಗ್ಗಿದ್ದ ವಸಂತ್ ಬೆಳ್ಳಗೆ ಎದ್ದು ನೋಡಿದರೆ ಎರಡು ಹಸು ಕರುಗಳು ಸತ್ತು ಬಿದ್ದಿವೆ.
ಒಂದು ಕರು ಸ್ಥಳದಲ್ಲಿ ಸತ್ತುಹೊಗಿದ್ದು ಮತ್ತೊಂದು ಕರುವನ್ನು ಸ್ವಲ್ಪ ದೂರ ಎಳೆದುಕೊಂಡು ಹೊಗಿ ಬೇಲಿಯ ಮಧ್ಯೆ ತಿಂದು ಹೋಗಿದೆ.ಗ್ರಾಮಸ್ಥರಲ್ಲಿ ಭಯದ ವಾತಾವರಣ ಮನೆಮಾಡಿದೆ ಕೂಡಲೇ ಅರಣ್ಯಧಿಕಾರಿಗಳು ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹೊತ್ತಾಯಿಸಿದ್ದರೆ.ಅರಣ್ಯಧಿಕಾರಿಗಳು ಇನ್ನೂ ಸ್ಥಳಕ್ಕೆ ಬೇಟಿ ನೀಡಿಲ್ಲ.
ಕೆ.ಅರ್.ಎಸ್. ಪೋಲಿಸ್ ಠಾಣೆ ವ್ಯಾಪ್ತಿಯ ನ್ಯೂ ಬ್ರಿಡ್ಜ್ ಕೆಳಭಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರುವ ವ್ಯಕ್ತಿಯ ಶವ ಪತ್ತೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಅರ್.ಎಸ್. ಪೋಲಿಸ್ ಠಾಣೆ ವ್ಯಾಪ್ತಿಯ ನ್ಯೂ ಬ್ರಿಡ್ಜ್ ಕೆಳಭಾಗದಲ್ಲಿ ವ್ಯಕ್ತಿಯ ಶವ ಸಿಕ್ಕಿದ್ದು ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರುತ್ತಾನೆ. ವ್ಯಕ್ತಿಯು ಕೆ.ಆರ್.ಸಾಗರ ಪೊಲೀಸ್ ಠಾಣಾ ಸರಹದ್ದಿನ ನ್ಯೂ ಬ್ರಿಡ್ಜ್ ಸೇತುವೆ ಕೆಳಭಾಗದಲ್ಲಿ ವಿಷ ಕುಡಿದು ಸತ್ತಿರುತ್ತಾನೆ ಈತನ ಹೆಸರು ವಿಳಾಸ ಗೊತ್ತಿರುವುದಿಲ್ಲ ಈತನಿಗೆ ಸುಮಾರು 40 ರಿಂದ 45 ವರ್ಷ ವಯಸ್ಸಾಗಿದ್ದು ನೀಲಿ ಬಣ್ಣದ. ತುಂಬು ತೋಳಿನ ಶರ್ಟ್ ಮತ್ತು ಡಾರ್ಕ್ ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಬಿಳಿಯ ಬನಿಯನ್ ಧರಿಸುತ್ತಾರೆ.
ನಿಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾವುದಾದರೂ ಗಂಡಸ್ಸು ಕಾಣೆಯಾಗಿರುವ ಪ್ರಕರಣ ದಾಖಲಾಗಿದ್ದಲ್ಲಿ ಈ ಕೆಳಕಂಡ ದೂರವಾಣಿ ನಂಬರ್ ಗೆ ಸಂರ್ಪಕಿಸಲು ಕೋರಿದೆ .
ಕೆ.ಆರ್.ಸಾಗರ ಪೊಲೀಸ್ ಠಾಣೆ
08236 -257233
Mobile no 9480804856
ಮಳವಳ್ಳಿ ಪಟ್ಟಣದಲ್ಲಿ ಸಾಲುಮರನಾಗರಾಜು ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ. ಅಜಾತಶತ್ರು ಹಾಗೂ ಮಾಜಿ ಪ್ರದಾನಿ ಅಟಲ್ ಬಿಹಾರ ವಾಜಪೇಯಿಯವರಿಗೆ ಭಾವ ಪೂರ್ವ ಶ್ರದ್ಧಾಂಜಲಿ ಸಭೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಮುಂಭಾಗ ಸಾಲುಮರನಾಗರಾಜು ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ. ಅಜಾತಶತ್ರು ಮಾಜಿ ಪ್ರದಾನಿ ಅಟಲ್ ಬಿಹಾರ ವಾಜಪೇಯಿಯವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿ ನಂತರ ಒಂದು ನಿಮಿಷ ಮೌನ ಅಚರಿಸಲಾಯಿತು. ನಂತರ ಬಿಜೆಪಿ ಮುಖಂಡ ಆಶೋಕ ಕ್ಯಾತನಹಳ್ಳಿ ಮಾತನಾಡಿ , ಅಟಲ್ ಬಿಹಾರ್ ವಾಜಪೇಯಿಯವರು ಅಜಾತಶತ್ರುವಾಗಿ ಹೆಸರುವಾಸಿಯಾಗಿದ್ದು, ದೇಶದಲ್ಲಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ, ವಾಜಪೇಯಿ ರವರು ಬಿಜೆಪಿ ಪಕ್ಷ ದಲ್ಲಿ ನಾಯಕರಾಗಿ ಹಲವು ಬಾರಿ ಕೇಂದ್ರ ಸಚಿವರಾಗಿ .ನಂತರ ಪ್ರಧಾನಮಂತ್ರಿ ಯಾಗಿ ದೇಶದ ಅಭಿವೃದ್ಧಿಗೆ ಸಾಕಷ್ಟು ಹೆಸರು ಮಾಡಿದರು ಇದಲ್ಲದೆ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಪ್ರಮುಖ ಕಾರಣರಾಗಿದ್ದರು ಎಂದರು.
ಸಭೆಯಲ್ಲಿ ಸಾಲುಮರನಾಗರಾಜು, ಕಸ್ತೂರಿಸಿರಿಗನ್ನಡ ವೇದಿಕೆ ಅಧ್ಯಕ್ಷೆ ನಾಗರತ್ನಮ್ಮ , ಸಂದೇಶ್, ನಾಗೇಗೌಡ, ಸೇರಿದಂತೆ ಮತ್ತಿತ್ತರರು ಇದ್ದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರುಗಳ ಸಿದ್ಧಾಂತ, ಆದರ್ಶಗಳನ್ನು ಯುವ ಸಮುದಾಯ ಮೈಗೂಡಿಸಿಕೊಂಡು ಜೀವನ ನಡೆಸಬೇಕು ಎಂದು ಶಾಸಕ ಕೆ.ಸಿ. ನಾರಾಯಣಗೌಡ ಕರೆ ನೀಡಿದರು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ.ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ 72 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಕೆ.ಸಿ. ನಾರಾಯಣಗೌಡರು,ಭಾರತ ದೇಶ ಹಿಂದಿನಿಂದಲೂ ಬಹಳ ಸಂಪತ್ಭರಿತ ದೇಶವಾಗಿದ್ದು, ಸಂಪತ್ತನ್ನು ವಿದೇಶಿಯರು ಲೂಟಿ ಮಾಡಲು ವ್ಯಾಪಾರದ ನೆಪದಲ್ಲಿ ಬಂದು ಇಲ್ಲಿನ ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ನೂರಾರು ವರ್ಷಗಳ ಕಾಲ ನಮ್ಮನ್ನು ಫರಕೀಯರು ಗುಲಾಮರಂತೆ ನಡೆಸಿಕೊಂಡು ಸ್ವತಂತ್ರ ಹೀನರನ್ನಾಗಿ ಮಾಡಿ, ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಬ್ರಿಟಿಷ್ ರೂಲ್ ತಂದು ನಮ್ಮನ್ನು ಆಳ್ವಿಕೆ ಮಾಡಿ ನಮ್ಮನ್ನ ಗುಲಾಮರನ್ನಾಗಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಬ್ರಿಟಿಷರು ದೇಶದ ಸಂಪತ್ತನ್ನು ಲೂಟಿ ಮಾಡಿದ್ದಾರೆ. ನಮ್ಮ ಲಕ್ಷಾಂತರ ಜನರ ರಕ್ತದ ಓಕುಳಿ ಆಡಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಎಲ್ಲರನ್ನೂ ಬಂಧನ, ಮರಣದಂಡನೆ ಅಂತಹ ಕಠಿಣ ಶಿಕ್ಷೆಯನ್ನು ನೀಡಿ ಧ್ವನಿ ಇಲ್ಲದಂತೆ ಮಾಡಿದ್ದರು. ಸ್ವಾತಂತ್ರಯ ಹೋರಾಟಗಾರರು ಬ್ರಿಟಿಷರ ಗುಂಡೇಟಿಗೂ ಹೆದರದೆ ಪ್ರಾಣಭಯ ತೊರೆದು ಬ್ರಿಟಿಷರ್ ವಿರುದ್ದ ಹೋರಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.ದೇಶದೊಳಗೆ ಯಾರು ನುಸಿಯದಂತೆ ಕಾಯುತ್ತಿರುವ ಸೈನ್ಯಕ್ಕೆ ಕುಟುಂದಲ್ಲಿ ಒಬ್ಬರಾದರೂ ಸೈನ್ಯಕ್ಕೆ ಸೇರುವ ಮನಸ್ಸು ಮಾಡಬೇಕು. ಈ ಮೂಲಕ ದೇಶದ ಗಡಿ ಭದ್ರತೆಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಪಟ್ಟಣದ ದೇವೀರಮ್ಮಣ್ಣಿ ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರ ಹಿತರಕ್ಷಣಾ ಸಂಘದ ವತಿಯಿಂದ ಶಾಸಕ ನಾರಾಯಣಗೌಡರಿಗೆ ಬಂಗಾರದ ಮನುಷ್ಯ ಎಂಬ ಬಿರುದನ್ನು ಪ್ರಾದನ ಮಾಡಿ ಗೌರವಿಸಲಾಯಿತು. ತಾಲೂಕು ಆಡಳಿತದ ವತಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ತಹಸೀಲ್ದಾರ್ ಶಿವಮೂತರ್ಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವದ ಸಂದೇಶ ನೀಡಿದರು. ಸರ್ಕಲ್ ಇನ್ಸ್ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಪಟ್ಟಣ ಠಾಣೆಯ ಪಿಎಸ್ಐ ವೆಂಕಟೇಶ್, ಗ್ರಾಮಾಂತರ ಠಾಣೆಯ ಪಿಎಸ್ಐ ಗಿರೀಶ್ಕುಮಾರ್ ರಾಷ್ಟ್ರದ್ವಜಕ್ಕೆ ವಂದನೆ ಸಲ್ಲಿಸಿದರು.ಶತಮಾನದ ಶಾಲೆಯ ಆವರಣದಿಂದ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ರಾಷ್ಟ್ರ ನಾಯಕರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣೆಗೆ ನಡೆಸಿ ಮುಖ್ಯ ವೇದಿಕೆ ಕರೆ ತರಲಾಯಿತು. ಮೆರವಣಿಗೆಯಲ್ಲಿ ಹಲವು ಜನಪದ ಪ್ರಕಾರದ ಕುಣಿತಗಳು ಮೆರವಣಿಗೆಗೆ ಸಾಥ್ ನೀಡಿದವು. ವಿವಿಧ ಶಾಲಾ ಮಕ್ಕಳು ಸ್ವಾತಂತ್ರ್ಯ ಹೋರಾಟದ ಸಂಗೀತಕ್ಕೆ ಹೆಜ್ಜೆ ಹಾಕಿ ನೃತ್ಯ ಸೇರಿದಂತೆ ಹಲವು ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾದವು.
ಜಿಪಂ ಸದಸ್ಯ ರಾಮದಾಸ್, ತಾ.ಪಂ ಅಧ್ಯಕ್ಷೆ ಜಯಲಕ್ಷ್ಮೀಸ್ವಾಮಿನಾಯಕ್, ಉಪಾಧ್ಯಕ್ಷ ಎ.ಎನ್.ಜಾನಕೀರಾಂ, ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಎಚ್.ಎಸ್. ರಾಜು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಂ, ತಾ.ಪಂ ಇಓ ವೈ.ಎಂ.ಚಂದ್ರಮೌಳಿ ಸೇರಿದಂತೆ ತಾಲೂಕಿನ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದಾರೆ ಬಡ ಮಹಿಳೆ ಮನೆಯಲ್ಲೇ ವಿಶ್ರಾಂತಿ ಶಾಲೆಯಿಂದಲು ಸಹ ಯಾವುದೇ ಆಸ್ಪತ್ರೆ ವೆಚ್ಚವನ್ನು ನೀಡಿಲ್ಲಾ.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಬಳ್ಳೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಬುಧವಾರ ಸಾಂಬಾರ್ ಕುಕ್ಕರ್ ಸಿಡಿದು ಅಡುಗೆ ತಯಾರಕಿ ಸುಜಾತ(೪೨) ಮೈ ಮೇಲೆ ಬಿದ್ದು ಇವರ ಕೈ, ಎದೆ, ಹೊಟ್ಟೆ, ಕಾಲು ಸಂಪೂರ್ಣ ದೇಹ ಸುಟ್ಟಿದೆ ಅಂದು ಶಾಲೆಯಲ್ಲಿ ಮುಖ್ಯ ಶಿಕ್ಷಕರಿಲ್ಲದ ಕಾರಣ, ಸಹ ಅಡುಗೆ ತಯಾರಕರು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಇವರ ಆಸ್ಪತ್ರೆ ಖರ್ಚಿಗೆ ಪರದಾಡುವ ಪರಿಸ್ಥಿತಿ ಇದೆ ಇವರು ಬಡ ರೈತ ಕುಟುಂಬದ ಮಹಿಳೆಯಾಗಿದ್ದು ಚಿಕಿತ್ಸೆ ಪಡೆಯಲು ಇವರ ಬಳಿ ಹಣವಿಲ್ಲಾ ಆದರಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಮಹಿಳೆ.
ಬಡ ಕುಟುಂಬದ ಮಹಿಳೆ ಆದರಿಂದ ಆಸ್ಪತ್ರೆ ಖರ್ಚಿಗೆ ಪರದಾಡುತ್ತಿದ್ದಾರೆ.ಒಮ್ಮೆಯೂ ತಾಲ್ಲೂಕು ಶಿಕ್ಷಣಾದಿಕಾರಿಗಳು ಕೂಡ ಮಹಿಳೆ ನೋಡಲು ತೆರಳಿಲ್ಲ.ಶಾಲೆ ವತಿಯಿಂದ ಯಾವುದೇ ಆಸ್ಪತ್ರೆ ವೆಚ್ಚವನ್ನು ನೀಡಿಲ್ಲ.ಸರ್ಕಾರದಿಂದ ಹಣ ಸಹಾಯದ ನಿರೀಕ್ಷೆಯಲ್ಲಿರುವ ಬಡ ಮಹಿಳೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷವಾದರೂ ದೇಶದ ಜನರ ಸಮಸ್ಯೆಗಳು ಇನ್ನೂ ಬಗೆಹರಿಯದಿರುವುದು ನೋವಿನ ಸಂಗತಿ ಎಂದು ಶಾಸಕ ಡಾ.ಕೆ.ಅನ್ನದಾನಿ ವಿಷಾದ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷವಾದರೂ ದೇಶದ ಜನರ ಸಮಸ್ಯೆಗಳು ಇನ್ನೂ ಬಗೆಹರಿಯದಿರುವುದು ನೋವಿನ ಸಂಗತಿ ,ಯಾರಿಗೆ ಬಂತು ಎಲ್ಲಿಗೆ ಬಂತ ಸ್ವಾತಂತ್ರ್ಯ ಎನ್ನುವ ಸ್ಥಿತಿಯಲ್ಲಿ ನಾವೆಲ್ಲರೂ ಇದ್ದೇವೆ. ಇಷ್ಠು ವರ್ಷವಾದರೂ ಇನ್ನೂ ಬಡತನ, ಮೂಲಭೂತ ಸೌಕರ್ಯಗಳು ಇನ್ನೂ ಸಿಗುತ್ತಿಲ್ಲ , ರೈತರು ಇನ್ನೂ ನೀರನ್ನು ಬಿಕ್ಷೆ ರೀತಿಯಲ್ಲಿ ಬೇಡವ ಪರಿಸ್ಥಿತಿ ಬಂದಿದೆ ಎಂದರೆ ನಮ್ಮ ಸ್ವಾತಂತ್ರ್ಯ ಎಲ್ಲಿದೆ ಎನ್ನುವ ಪ್ರಶ್ನೆ ಕಾಡುತ್ತದೆ ಎಂದರು. ಇದಕ್ಕೂ ಮುನ್ನ ತಾಲ್ಲೂಕು ಪಂಚಾಯಿತಿ ಮುಂಬಾಗದಿಂದ ಶಾಲಾ ಮಕ್ಕಳು ಸೇರಿದಂತೆ ಭಾರತಾಂಭೆ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಪ್ರಮುಖ ಬೀದಿಗಳ ಮೂಲಕ ಕ್ರೀಡಾಂಗಣಕ್ಕೆ ಕರೆತರಲಾಯಿತು. ನಂತರ ಧ್ವಜಾರೋಹಣ ವನ್ನು ತಹಸೀಲ್ದಾರ್ ದಿನೇಶ್ ಚಂದ್ ನೇರವರಿಸಿದರು.
ಕಾರ್ಯಕ್ರಮವನ್ಜು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್. ವಿಶ್ವಾಸ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಸದಸ್ಯ ರಾದ ಹನುಮಂತ, ಪುರಸಭಾಧ್ಯಕ್ಷ ರಿಯಾಜಿನ್, ಪುರಸಭೆಸದಸ್ಯರುಗಳು, ಜಿ.ಪಂಸದಸ್ಯರು. ತಾ.ಪಂ ಸದಸ್ಯರುಗಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.