ಇತ್ತೀಚಿಗಿನ ಸುದ್ದಿಗಳು
- 27/09/2019 in ಹಾಸನ
- 10/09/2019 in ಮಂಡ್ಯ
- 10/09/2019 in ಹಾಸನ
- 10/09/2019 in ಹಾಸನ
- 09/09/2019 in ಮಂಡ್ಯ
- 09/09/2019 in ರಾಜ್ಯಸುದ್ದಿ
- 04/09/2019 in ಮಂಡ್ಯ
- 04/09/2019 in ರಾಜ್ಯಸುದ್ದಿ
- 04/09/2019 in ರಾಜ್ಯಸುದ್ದಿ
- 03/09/2019 in ಮಂಡ್ಯ
- 03/09/2019 in ರಾಜ್ಯಸುದ್ದಿ
- 03/09/2019 in ಮಂಡ್ಯ
- 03/09/2019 in ಮಂಡ್ಯ
- 03/09/2019 in ರಾಜ್ಯಸುದ್ದಿ
- 03/09/2019 in ಮಂಡ್ಯ
ಸುದ್ದಿಜಾಲ
ಹುಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದು ಒಂದು ಗೂಡ್ಸ್ ಆಟೋ ಸೇರಿದಂತೆ ನಾಲ್ಕು ಬೈಕ್‌ಗಳು, ಒಂದು ಅಂಗಡಿ ಜಖಂ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಹುಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದು ಒಂದು ಗೂಡ್ಸ್ ಆಟೋ ಸೇರಿದಂತೆ ನಾಲ್ಕು ಬೈಕ್‌ಗಳು ಮತ್ತು ಒಂದು ಅಂಗಡಿ ಜಖಂಗೊಂಡ ಘಟನೆ ನಡೆದಿದೆ.ಮಧ್ಯಾಹ್ನ ಮೇವು ತುಂಬಿದ್ದ ಲಾರಿಯ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದ್ದು, ಅಂಗಡಿಯಲ್ಲಿದ್ದ ಗ್ರಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿಯ ಹಿಂಭಾಗ ಗೂಡ್ಸ್ ಆಟೋಗೆ ಡಿಕ್ಕಿ ಹೊಡೆಯಲಾಗಿ, ಆಟೋ ರಸ್ತೆ ಬದಿಯಲ್ಲಿ ನಿಂತಿದ್ದ ಬೈಕ್‌ಗಳಿಗೆ ಗುದ್ದಿದೆ. ಈ ಸಂದರ್ಭದಲ್ಲಿ ಬೈಕ್, ಆಟೋ ಸೇರಿದಂತೆ ಅಂಗಡಿಯೂ ಜಖಂ ಆಗಿದೆ. ಎನ್ನಲಾಗಿದೆ.ಯಾವುದೇ ಪ್ರಾಣ ಹಾನಿಯಾಗಿಲ್ಲಾ.ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು,ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕೆ.ಆರ್.ಪೇಟೆ ತಾಲ್ಲೂಕಿನ ಗೊರವಿ ಗ್ರಾಮದಲ್ಲಿ ನೆನ್ನೆ ದಾಳಿಮಾಡಿದ ಚಿರತೆ ಇಂದು ಸಹ ಅದೆ ಹಸುವನ್ನು ಎಳೆದುಕೊಂಡು ಹೋಗಿ ತಿಂದ ಘಟನೆ ನೆಡದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಗೊರವಿ ಗ್ರಾಮದಲ್ಲಿ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಹಸುವನ್ನು ತಿಂದ ಘಟನೆ ನೆನ್ನೆ ನಡೆದಿತ್ತು. ಅದರೆ ರಾತ್ರಿ ಕೂಡಾ ಚಿರತೆ ಅಲ್ಲೆ ಇದ್ದ ಹಸುವಿನ ದೇಹವನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿ ನಂತರ ತಿಂದಿದೆ.
ನೆನ್ನೆ ಸಂಜೆ ವರೆಗೂ ಅಲ್ಲೆ ಕಾದುಕುಳಿತ್ತಿದ್ದ ಗ್ರಾಮಸ್ಥರು ಅರಣ್ಯದಿಕಾರಿಗಳು ಬಾರದ ಹಿನ್ನೆಲೆ ಮನೆಗೆ ತೆರಳಿದರು. ನಂತರ ಬೆಳ್ಳಿಗೆ ನೋಡಿದರೆ ಮತ್ತೆ ಚಿರತೆ ಹಸುವಿನ ದೇಹವನ್ನು ಸ್ವಲ್ಪ ದೂರ ಎಳೆದುಕೊಂಡು ಹೊಗಿ ನಂತರ ಕತ್ತಿನ ಭಾಗವನ್ನು ತಿಂದು ಹಾಕಿದೆ ಇದರಿಂದ ಗ್ರಾಮಸ್ಥರಲ್ಲಿ ಮತ್ತಷ್ಟು ಭಯ ಮನೆಮಾಡಿದೆ.
ಕೇವಲ ಬಂದು ನೋಡಿಕೊಂಡು ಹೊದ ಅಧಿಕಾರಿಗಳು ಚಿರತೆ ಹಿಡಿಯುವ ಯಾವುದೇ ಬೋನ್ ಕೂಡಾ ಅಳವಡಿಸಿಲ್ಲ ಕೇಳಿದರೆ ನಾಳೆ ಅಳವಡಿಸುತ್ತೆವೆ ಎಂದು ಉತ್ತರ ನೀಡುತ್ತಾರೆ.ಅದರೆ ಇಂದು ಹಸುವಿಗೆ ಹಾದ ಪರಿಸ್ಥಿತಿ ನಾಳೆ ಯಾರಾದರೂ ಗ್ರಾಮಸ್ಥರ ಅಥವಾ ಮಕ್ಕಳ ಮೇಲೆ ಚಿರತೆ ಅಲ್ಲೆ ಮಾಡಿದ್ದಾರೆ ಎನು ಗತಿ ಎಂದು ಗ್ರಾಮಸ್ಥರ ಭಯ ವ್ಯಕ್ತಪಡಿಸಿದ್ದಾರೆ.
ಕೂಡಲೆ ಚಿರತೆಯನ್ನು ಸೆರೆಹಿಡಿಯದಿದ್ದರೆ ತಾಲ್ಲೂಕಿನ ಅರಣ್ಯ ಇಲಾಖೆಯ ಕಛೇರಿಗೆ ಮುತ್ತಿಗೆ ಹಾಕುತ್ತವೆ ಎಂದು ಅಧಿಕಾರಿಗಳು ಮೇಲೆ ಅಕ್ರೊಸ ವ್ಯಕ್ತಪಡಿಸಿದ್ದಾರೆ.ಅಧಿಕಾರಿಗಳು ಇತ್ತ ಗಮನಹರಿಸುತ್ತಾರಾ ಕಾದು ನೋಡಬೇಕಿದೆ.
ನಾಳೆ ದೇಶವ್ಯಾಪಿ ಬಂದ್ ,ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆ ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜಿಗೆ ರಜೆ.
ಬೆಂಗಳೂರು : ಕೇಂದ್ರ ಸರ್ಕಾರದ ಮೋಟಾರು ವಾಹನ (ತಿದ್ದುಪಡಿ) ಮಸೂದೆ -2017 ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ನಾಳೆ ದೇಶವ್ಯಾಪಿ ಬಂದ್ಗೆ ಕರೆ ನೀಡಿವೆ. ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ಹಲವು ಸಾರಿಗೆ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿರುವುದರಿಂದ ನಾಳೆ ಬಸ್, ಆಟೋ, ಟ್ಯಾಕ್ಸಿ ಹಾಗೂ ಸರಕು-ಸಾಗಣೆ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಹೀಗಾಗಿ ನಾಳೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆ ಹೆಚ್ಚಿದೆ.ಎಐಆರ್ಟಿಡಬ್ಲ್ಯುಎಫ್, ಎನ್ಎಫ್ಐಆರ್ಟಿಡಬ್ಲ್ಯು, ಎಚ್ಎಂಎಸ್, ಟಿಯುಸಿಐ, ಕೇಂದ್ರ ಕಾರ್ಮಿಕ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದು, ರಾಜ್ಯದಲ್ಲೂ ಹತ್ತಾರು ಸಂಘಟನೆಗಳು ಜಂಟಿಯಾಗಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಕೇಂದ್ರ ಸರ್ಕಾರ ಮಸೂದೆ ವಾಪಸ್ ಪಡೆಯುವಂತೆ ಒತ್ತಡ ಹೇರಲಾಗುತ್ತದೆ.
ಮಸೂದೆಗೆ ವಿರೋಧ ಏಕೆ?:
- ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೋಟಾರು ವಾಹನ (ತಿದ್ದುಪಡಿ) ಮಸೂದೆ-2107 ಯೂ ರಸ್ತೆ ಸಂಚಾರ ಮಾನದಂಡಗಳನ್ನು ಉಲ್ಲಂಘಿಸುವವರಿಗೆ ವಿಪರೀತ ದಂಡ ವಿಧಿಸುತ್ತದೆ.
- “ರಸ್ತೆ ಸುರಕ್ಷತೆ ಮತ್ತು ಅಪಘಾತಗಳನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶಕ್ಕಿಂತ ವಿಪರೀತ ದಂಡ ವಸೂಲಿ ಮಾಡುವ ಸಲುವಾಗಿ ಮಸೂದೆ ಜಾರಿಗೆ ತಂದು, ಬಡ ಸಾರಿಗೆ ಕಾರ್ಮಿಕರ ಜೀವನದ ಮೇಲೆ ಕೇಂದ್ರ ಸರ್ಕಾರ ಬರೆ ಎಳೆಯುತ್ತಿದೆ,” ಎಂಬುದು ಸಾರಿಗೆ ಕಾರ್ಮಿಕ ಸಂಘಟನೆಗಳ ಪ್ರಮುಖ ವಿರೋಧವಾಗಿದೆ.
ಮಸೂದೆಯಲ್ಲಿನ ಪ್ರಸ್ತಾವಿತ ದಂಡ, ಯಾವುದಕ್ಕೆ ಎಷ್ಟು?: ಸಾಮಾನ್ಯ ತಪ್ಪಿಗೆ ಈಗ ಇರುವ 100 ರೂ.ನಿಂದ 500ರಿಂದ 1,500 ರೂ.ವರೆಗೆ ದಂಡ ,ರಸ್ತೆ ನಿಯಂತ್ರಣ ನಿಯಮಗಳ ಉಲ್ಲಂಘನೆಗೆ 100 ರೂ.ಯಿಂದ 500ರಿಂದ 1000 ರೂ.ವರೆಗೆ ದಂಡ.ಅಧಿಕಾರಿಗಳ ಆದೇಶ ಪಾಲಿಸದೆ ಇರುವುದಕ್ಕೆ 500 ರೂ.ಯಿಂದ 2000 ರೂ.ವರೆಗೆ ದಂಡ.ಅತಿ ವೇಗ ಚಾಲನೆಗೆ 400 ರೂ.ನಿಂದ 1000 ರೂ.ವರೆಗೆ ದಂಡ.ಪರ್ಮಿಟ್ ಇಲ್ಲದ ವಾಹನಕ್ಕೆ 5,000 ರೂ.ಯಿಂದ 10,000 ರೂ.ವರೆಗೆ ದಂಡ
ಇತರೆ ಸಾಮಾಜಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿದ ರೀತಿಯಲ್ಲಿ ಸಾರಿಗೆ ಕ್ಷೇತ್ರವನ್ನು ದೇಶಿ ಮತ್ತು ವಿದೇಶಿ ಕಾರ್ಪೊರೇಟ್ ಕಂಪನಿಗಳಿಗೆ ವರ್ಗಾಹಿಸಲು ಕೇಂದ್ರ ಸರ್ಕಾರ ಈ ಮಸೂದೆ ಜಾರಿಗೆ ಮುಂದಾಗಿದೆ. ರಾಷ್ಟ್ರೀಯ ಸಾರಿಗೆ ನೀತಿ ಎಂಬ ಹೊಸ ಅಂಶವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ ಇದರಿಂದ ವಾಹನಗಳ ಪರ್ಮಿಟ್ ನೀಡುವಿಕೆ, ರಾಜ್ಯಗಳ ಸಾರಿಗೆ ನೀತಿ-ನಿರೂಪಣೆ, ತೆರಿಗೆ ಸಂಗ್ರಹ ಮುಂತಾದ ವಿಷಯಗಳಲ್ಲಿ ರಾಜ್ಯದ ಅಧಿಕಾರ ಸಂಪೂರ್ಣ ಕೇಂದ್ರದ ಪಾಲಾಗಲಿದೆ,” ಎಂಬುದು ಸಾರಿಗೆ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದ.
ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜಿಗೆ ರಜೆ ನೀಡುವ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪಿಯು ಮಂಡಳಿ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.ಖಾಸಗಿ ಶಾಲೆಗಳು ಯಥಾಸ್ಥಿತಿಯಾಗಿ ನಡೆಯಲಿವೆ ಎಂದು ಖಾಸಗಿ ಶಾಲಾ ಒಕ್ಕೂಟದ ಕಾರ್ಯದರ್ಶಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಸಿಐಟಿಯು ಕರೆ ಕೊಟ್ಟ ಬಂದ್ ಗೆ ಸಾರಿಗೆ ನಿಗಮದ ನೌಕರರ ಸಂಘದಲ್ಲಿಯೇ ಅಪಸ್ವರ ಮೂಡಿದೆ. ಮಸೂದೆಗೆ ವಿರೋಧವಿದ್ದರೂ ಬಂದ್ ನಲ್ಲಿ ಪಾಲ್ಗೊಳ್ಳದೇ ಇರದಂತೆ ಎಐಟಿಯುಸಿ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ. ಎಐಟಿಯುಸಿ ಸಂಘಟನೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ಕೆಲ ಬಿಎಂಟಿಸಿ ಬಸ್ ಗಳು ರಸ್ತೆಗಳಿಯೋ ಸಾಧ್ಯತೆ ಇದೆ.ಓಲಾ, ಊಬರ್, ಅಸಂಘಟಿತ ಆಟೋ ನೌಕರರಷ್ಟೇ ಬೆಂಬಲ ನೀಡಲಿದ್ದು, ಸಂಘಟಿತ ಆಟೋ ನೌಕರರು ಕೂಡ ಬೆಂಬಲ ವಾಪಸ್ ಪಡೆದಿದ್ದಾರೆ. ಮೇಘ ಮೇರು ಕ್ಯಾಬ್ ಗಳ ಬೆಂಬಲ ನೀಡಿದ್ದು, ಮೊದಲೇ ಬುಕಿಂಗ್ ಆಗಿರೋ ಕ್ಯಾಬ್ಗಳು ಸೇವೆ ನೀಡಲಿವೆ.
ಇತರೆ ಸಾಮಾಜಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿದ ರೀತಿಯಲ್ಲಿ ಸಾರಿಗೆ ಕ್ಷೇತ್ರವನ್ನು ದೇಶಿ ಮತ್ತು ವಿದೇಶಿ ಕಾರ್ಪೊರೇಟ್ ಕಂಪನಿಗಳಿಗೆ ವರ್ಗಾಹಿಸಲು ಕೇಂದ್ರ ಸರ್ಕಾರ ಈ ಮಸೂದೆ ಜಾರಿಗೆ ಮುಂದಾಗಿದೆ. ರಾಷ್ಟ್ರೀಯ ಸಾರಿಗೆ ನೀತಿ ಎಂಬ ಹೊಸ ಅಂಶವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ ಇದರಿಂದ ವಾಹನಗಳ ಪರ್ಮಿಟ್ ನೀಡುವಿಕೆ, ರಾಜ್ಯಗಳ ಸಾರಿಗೆ ನೀತಿ-ನಿರೂಪಣೆ, ತೆರಿಗೆ ಸಂಗ್ರಹ ಮುಂತಾದ ವಿಷಯಗಳಲ್ಲಿ ರಾಜ್ಯದ ಅಧಿಕಾರ ಸಂಪೂರ್ಣ ಕೇಂದ್ರದ ಪಾಲಾಗಲಿದೆ,” ಎಂಬುದು ಸಾರಿಗೆ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದ.
ಕೃಷಿ ಅಭಿಯಾನ ಅನುಷ್ಠಾನ ಸಮಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಸಮಗ್ರ ಕೃಷಿ ಅಭಿಯಾನ 2018 ಸಂಚಾರಿ ಮಾಹಿತಿಕೃಷಿರಥಕ್ಕೆ ಶಾಸಕ ಡಾ.ಕೆ ಅನ್ನದಾನಿ ಚಾಲನೆ ನೀಡಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸಂಚಾರಿ ಮಾಹಿತಿ ಕೃಷಿರಥಕ್ಕೆ ಶಾಸಕ ಡಾ.ಕೆ ಅನ್ನದಾನಿ ಚಾಲನೆ ನೀಡಿ ನಂತರ ಮಾತನಾಡಿ, ರೈತರು ಬೆಳೆಯುವ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಮುಖ್ಯಮಂತ್ರಿ ಕುಮಾರಣ್ಣ ರವರು ರೈತರ ಬಗ್ಗೆ ಅಪಾರ ಕಾಳಜಿವಿದ್ದು, ರೈತರಿಗಾಗಿ ಹಲವು ಯೋಜನೆಗಳನ್ನು ತರಲು ಹೊರಟಿದ್ದಾರೆ. ಈಗಾಗಲೇ ಕೃಷಿ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ತಲುಪಬೇಕು ಈ ನಿಟ್ಟಿನಲ್ಲಿ ರಥವನ್ನು ಗ್ರಾಮಗಳಿಗೆ ಬೇಟಿ ಕೃಷಿ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅರಿವು ಮೂಡಿಸಲಾಗುವುದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳುವಂತೆ ತಿಳಿಸಿದರು.
ನಂತರ ಮಕ್ಕಳು ಕಳಸ ಹೊತ್ತು ಮೆರವಣಿಗೆ ಹಾಗೂ ಪೂಜಾ ಕುಣಿತದೊಂದಿಗೆ ಮೆರವಣಿಗೆ ನಡೆಸಲಾಯಿತು ಇದು ಪಟ್ಟಣದ ಮೂಲಕ ಬುಗತಹಳ್ಳಿ,ಟಿ ಕಾಗೇಪುರ, ನೆಲಮಾಕನಹಳ್ಳಿ, ನೆಲ್ಲೂರು ಮೂಲಕ ಮಾರೇಹಳ್ಳಿ, ವಾಸ್ತವ್ಯ ಹೂಡಲಿದೆ. ಈ ಬಾರಿ ಕಸಭಾ ರೈತರಿಗೆ ಎರಡು ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ 8 ರಂದು ಎಪಿಎಂಸಿ ಆವರಣ ಹೋಬಳಿ ಮಟ್ಟದ ವೇದಿಕೆ ಕಾರ್ಯಕ್ರಮ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಸಲಾಗುವುದು ತಾಲ್ಲೂಕಿನ ಎಲ್ಲಾ ರೈತರು ಆಗಮಿಸುವಂತೆ ಶಾಸಕರು ಮನವಿಮಾಡಿಕೊಂಡರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್. ಎನ್ ವಿಶ್ವಾಸ್, ಸದಸ್ಯ ನಟೇಶ್, ಜಿ.ಪಂ ಸದಸ್ಯ ಹಾಗೂ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರವಿ, ತಹಸೀಲ್ದಾರ್ ದಿನೇಶ್ ಚಂದ್, ತಾಲ್ಲೂಕು ಪಂಚಾಯಿತಿ ಇಒ ಸತೀಶ್ ,ಕೃಷಿ ಸಹಾಯ ನಿರ್ದೇಶಕ ಪರಮೇಶ್, ಅಧಿಕಾರಿ ರಮೇಶ್, ಸೇರಿದಂತೆ ಮತ್ತಿತ್ತರರು ಇದ್ದರು.
ಸಮಾಜ ಸೇವಕ ಹೆಚ್ ಬಿ ಮಂಜುನಾಥ್ ಮತ್ತು ಜಯ ಕರ್ನಾಟಕ, ಅಟೊ ಚಾಲಕರು ಮತ್ತು ಇನ್ನಿತರ ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಶತಮಾನದ ಶಾಲೆಯ ದುರಸ್ತಿ ಕಾಮಗಾರಿಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಮಾಜ ಸೇವಕ ಹೆಚ್ ಬಿ ಮಂಜುನಾಥ್ ಮತ್ತು ಜಯ ಕರ್ನಾಟಕ, ಅಟೊ ಚಾಲಕರು ಮತ್ತು ಇನ್ನಿತರ ಸಂಘಟನೆ ಮತ್ತು ಸಂಘಟನೆಗಳಿಂದ ಪ್ರತಿಭಟನೆ .ಒಂದೇ ಕಾಮಗಾರಿ ಎರಡು ಕಡೆಗಳಿಂದ ಹಣ ಬಿಡುಗಡೆ ಮಾಡಿರುವ ಆರೋಪ.ಮಕ್ಕಳ ಪೋಷಕರಿಂದ ಸಹ ಹಣ ವಸೂಲಿ ಮಾಡಿರುವ ಆರೋಪ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪ.ಒಟ್ಟು ಐದು ಲಕ್ಷದ ಐವತ್ತು ಸಾವಿರ ರೂಪಾಯಿ ದುರ್ಬಳಕೆ ಮಾಡಿಕೊಂಡದ್ದಾರೆ ಎಂದು ಸಮಾಜ ಸೇವಕ ಹೆಚ್ ಬಿ ಮಂಜುನಾಥ್ ನೇರವಾಗಿ ಆರೋಪ ಮಾಡಿದರು.ಅವರ ಏಕಾಂಗಿಯಾದ ಹೋರಾಟಕ್ಕೆ ಜಯ ಕರ್ನಾಟಕ, ಅಟೊ ಚಾಲಕರು ಮತ್ತು ಇನ್ನಿತರ ಸಂಘಟನೆಗಳು ಬೆಂಬಲ ನೀಡಿವೆ.ಅಕ್ರಮವಾಗಿ ಹಣ ದುರುಪಯೋಗ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಾಂತಿಯುತ ದರಣಿ ಮಾಡಿದರು.ಅ ವ್ಯಕ್ತಿ ಗಳ ಮೇಲೆ ಕ್ರಮಜರುಗಿಸತ್ತಾರ ಕಾದು ನೋಡಬೇಕಿದೆ.
ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ನಿಲ್ಲದ ಚಿರತೆದಾಳಿ ಹಸುವನ್ನು ತಿಂದ ಚಿರತೆ...
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಗೊರವಿಯಲ್ಲಿ ಘಟನೆ.ಗೊರವಿ ಗ್ರಾಮದ ಹರಿಗೌಡರ ಮಗ ಬಲರಾಮೇಗೌಡರಿಗೇ ಸೇರಿದ ಹಸುವನ್ನು ತಿಂದು ಹಾಕಿರುವ ಚಿರತೆ.ಇವರು ತೋಟದ ಮನೆಯಲ್ಲಿ ವಾಸಮಾಡುತ್ತಿದ್ದು ಹಸುವನ್ನು ಹೊರಭಾಗದಲ್ಲಿ ಕಟ್ಟಿಹಾಕ್ಕಿದ್ದರು.ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಚಿರತೆ ಕೂಗುವ ದ್ವನಿ ಕೇಳಿ ಭಯಬೀತರಾಗಿ ಮಲಗಿದ್ದಾರೆ. ಬೆಳ್ಳಿಗೆ ನೋಡಿದರೆ ಹಸುವನ್ನು ತಿಂದು ಹಾಕಿರುವ ಚಿರತೆ ,ರಾತ್ರಿ ಮನೆಯಿಂದ ಹಸುವನ್ನು ಎಳೆದ್ಯೊದಿರುವ ಚಿರತೆ ಜಮೀನಿನ ಪಕ್ಕದಲ್ಲಿ ಹಸುವನ್ನು ತಿಂದು ಹಾಕಿದೆ.
ಗ್ರಾಮಸ್ಥರಲ್ಲಿ ಭಯದವಾತವರಣ ಚಿರತೆಯನ್ನು ಸೇರೆ ಹೀಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಇನ್ನೂ ಸ್ಥಳಕ್ಕೆ ಭೇಟಿ ನೀಡದ ಅರಣ್ಯಧಿಕಾರಿಗಳು.ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಂಡೂರು ಗ್ರಾಮಪಂಚಾಯಿತಿ ಹಾಗೂ ನರೇಗಾ ಕೂಲಿಗಾರರ ತಂಡ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ
ಮಂಡ್ಯ ಜಿಲ್ಲೆಯ ಮಳವಳ್ಳಿಯ ಬಂಡೂರು ಗ್ರಾಮಪಂಚಾಯಿತಿ ಹಾಗೂ ನರೇಗಾ ಕೂಲಿಗಾರರ ತಂಡ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಹಾಗೂ ಗಟ್ಟಿಕೊಪ್ಪಲು ಗ್ರಾಮದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ. ನಾಗರಾಜು ಉದ್ಘಾಟಿಸಿದರು ನಂತರ ಪಿಡಿಒ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಗಳನ್ನು ಪ್ರತಿಯೊಬ್ಬರು ಕಟ್ಟಿಸಿಕೊಳ್ಳುವಂತೆ ತಿಳಿಸಿದ ಅವರು ಗ್ರಾಮದ ಪ್ರತಿಯೊಬ್ಬರು ಮನೆ ಮುಂದೆ ಸ್ವಚ್ಚತೆ ಮಾಡಿಕೊಳ್ಳಬೇಕು ಎಂದರು.
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಹಲವು ಕೂಲಿ ಕೆಲಸಗಳನ್ನು ಮಾಡಿದರೆ ಹಣವನ್ನು ನೀಡುತ್ತೇವೆ ಎಂದರು.ಕಾರ್ಯಕ್ರಮ ದಲ್ಲಿ ಕೂಲಿಕಾರರ ಸಂಘದ ಅಧ್ಯಕ್ಷ ಶಿವಮಲ್ಲಯ್ಯ, ಮಹದೇವಮ್ಮ. ಸೇರಿದಂತೆ ಮತ್ತಿತ್ತರರು ಇದ್ದರು.