ಇತ್ತೀಚಿಗಿನ ಸುದ್ದಿಗಳು
- 27/09/2019 in ಹಾಸನ
- 10/09/2019 in ಮಂಡ್ಯ
- 10/09/2019 in ಹಾಸನ
- 10/09/2019 in ಹಾಸನ
- 09/09/2019 in ಮಂಡ್ಯ
- 09/09/2019 in ರಾಜ್ಯಸುದ್ದಿ
- 04/09/2019 in ಮಂಡ್ಯ
- 04/09/2019 in ರಾಜ್ಯಸುದ್ದಿ
- 04/09/2019 in ರಾಜ್ಯಸುದ್ದಿ
- 03/09/2019 in ಮಂಡ್ಯ
- 03/09/2019 in ರಾಜ್ಯಸುದ್ದಿ
- 03/09/2019 in ಮಂಡ್ಯ
- 03/09/2019 in ಮಂಡ್ಯ
- 03/09/2019 in ರಾಜ್ಯಸುದ್ದಿ
- 03/09/2019 in ಮಂಡ್ಯ
ಸುದ್ದಿಜಾಲ
ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ವೇತನ ಬಿಡುಗಡೆಗೆ ಆಗ್ರಹಿಸಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಂಡ್ಯ ಜಿಲ್ಲೆಯ ಕೆ.ಅರ್.ಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ವೇತನ ಬಿಡುಗಡೆಗೆ ಆಗ್ರಹಿಸಿ ತಾಲೂಕು ಘಟಕದ ಅಧ್ಯಕ್ಷ ಮೋದೂರು ನಾಗರಾಜು ನೇತೃತ್ವದಲ್ಲಿ ಧರಣಿ ನಡೆಸಿ ಕಳೆದ ಹತ್ತಾರು ತಿಂಗಳಿನಿಂದ ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ನೀಡದ ಸರಕಾರದ ಹಾಗೂ ಗ್ರಾಮ ಪಂಚಾಯಿತಿ ಪಿಡಿಓಗಳ ನಿರ್ಲಕ್ಷ್ಯವನ್ನು ಖಂಡಿಸಿದರು.ಸಂಬಳ ನೀಡದೇ ಇರುವ ಕಾರಣ ಜೀವನ ನಡೆಸಲು ಕಷ್ಟಕರವಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಕ್ಕೆ ತೊಂದರೆಯಾಗುತ್ತಿದೆ. ಜೀವನ ನಿರ್ವಹಣೆಗಾಗಿ ಬಡ್ಡಿ ಸಾಲ ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಹಾಗಾಗಿ ಕೂಡಲೇ ಕಳೆದ 10 ರಿಂದ 15 ತಿಂಗಳಿನಿಂದ ಬಾಕಿ ಇರುವ ಎಲ್ಲಾ ವೇತನವನ್ನು ಕೂಡಲೇ ಬಿಡುಗಡೆ ಮಾಡಿ ಅನುಕುಇಲ ಮಾಡಿಕೊಡಬೇಕೆಂದು ನಾಗರಾಜು ಸರಕಾರವನ್ನು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಉಪಾಧ್ಯಕ್ಷ ಎಂ.ಕೆ.ಕುಮಾರ್, ಕಾರ್ಯದರ್ಶಿ ನಂಜಯ್ಯ, ಖಜಾಂಚಿ ರಾಮಕೃಷ್ಣ ಮೂರ್ತಿ, ಗೌರವಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ವೆಂಕಟೇಶ್, ಸಹ ಕಾರ್ಯದರ್ಶಿಗಳಾದ ರವಿ, ಗಿರೀಶ್, ಕೃಷ್ಣ ಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಾಲೆಗಳಲ್ಲಿ ನೀರು ಬಿಟ್ಟರೆ ಸಾಲದು ಅದು ಸರಿಯಾಗಿ ಹರಿಯುತ್ತಿದೆಯೆ ಎಂದು ರಾತ್ರಿ ವೇಳೆ ಗಸ್ತು ಮಾಡಬೇಕೆಂದು ಶಾಸಕ ಡಾ.ಕೆ ಅನ್ನದಾನಿ ಅಧಿಕಾರಿಗಳಿಗೆ ಸೂಚಿಸಿದರು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗೇಟ್ ಬಳಿ ಇರುವ ಕೆ.ಆರ್.ಎಸ್.ಎಂ ಮತ್ತು ಎಂಐಪಿ ವಿಭಾಗ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ಶಾಸಕ ಡಾ.ಅನ್ನದಾನಿರವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರ ಸಭೆಯಲ್ಲಿ ಮಾತನಾಡಿ, ರಾತ್ರಿಗಸ್ತು ವೇಳೆಯಲ್ಲಿ ಪೊಲೀಸ್ ಸೆಕ್ಯೂರಿಟಿ ಬೇಕಾದರೆ ತೆಗೆದುಕೊಳ್ಳಿ ಎಂದರು. ಇನ್ನೂ ಸತ್ತೇಗಾಲದಿಂದ ಇಗ್ಗಲೂರು ಗ್ರಾಮದವರೆಗೂ 450 ಕೋಟಿ ರೂ ರಾಮನಗರ ಜಿಲ್ಲೆಗೆ ಕುಡಿಯುವ ನೀರು ಯೋಜನೆಯಾಗುತ್ತಿದೆ ಅದಕ್ಕೆ ನಮ್ಮ ತಾಲ್ಲೂಕಿನ ಜನರಿಗೆ ನೀರು ತಲುಪುವ ವ್ಯವಸ್ಥೆಯ ಯೋಜನೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕಿನ ಎಲ್ಲಾನಾಲೆಗಳಿಗೂ ಹರಿದು ಈ ಬಾರಿ ರೈತರ ಬೆಳೆಯನ್ನು ಬೆಳೆಯುವುದಕ್ಕೆ ನೀರು ನೀಡಬೇಕು ಅದಲ್ಲದೆ ರೈತರಿಗೂ ಬೆಳೆ ಬೆಳೆಯುವ ಬಗ್ಗೆ ಮನವರಿಕೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆ ಮುಗಿದ ಬಳಿಕ ಆಗಸನಪುರ, ಹುಸ್ಕೂರು ಬಳಿ ನಾಲೆಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಕಾವೇರಿ ನೀರಾವರಿ ನಿಗಮದ ಇಇ ರಾಮಕೃಷ್ಣ, ಜಿ.ಪಂ ಸದಸ್ಯ ರವಿ, ಸಿದ್ದರಾಜು ಸೇರಿದಂತೆ ಎಲ್ಲಾ ಸಬ್ ಡಿವಿಜನ್ ನ ಇಂಜಿನಿಯರ್ ಗಳು ಹಾಜರಿದ್ದರು.
ಕಾಲು ಜಾರಿ ಹೇಮಾವತಿ ಕಾಲುವೆಯಲ್ಲಿ ಕೊಚ್ಚಿಹೋದ ರೈತ ಮಹಿಳೆ.
ಮಂಡ್ಯ ಜಿಲ್ಲೆಯ ಕೆ.ಅರ್. ಪೇಟೆ ತಾಲ್ಲೂಕಿನ ಶೀಳನೆರೆ ಗ್ರಾಮದ ಶಂಕರೇಗೌಡರ ಪತ್ನಿ ಸುಧಾಮಣಿ (50) ಮೃತ ಮಹಿಳೆ.ಜಮೀನಿನ ಬಳಿ ಕೃಷಿ ಚಟುವಟಿಕೆ ಮುಗಿದ ನಂತರ ಸಮೀಪದಲ್ಲಿ ಇರುವ ಹೇಮಾವತಿ ಕಾಲುವೆಯ ಸೋಪಾನ ಕಟ್ಟೆಯಲ್ಲಿ ಕೈಕಾಲು ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಡಿದ್ದಾರೆ.
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಕೆ.ಆರ್.ಪೇಟೆ ತಾಲ್ಲೂಕು ಪಂಚಾಯಿತಿಯ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಸ್.ರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಪಂಚಾಯಿತಿಯ ಸ್ಥಾಯಿ ಸಮಿತಿಯ ಈ ಹಿಂದಿನ ಅಧ್ಯಕ್ಷರಾಗಿದ್ದ ಎಂ.ಎನ್.ವಿಜಯಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಹೆಚ್.ಎಸ್.ರಾಜು ಅವರು ಅವಿರೋಧವಾಗಿ ಆಯ್ಕೆಯಾದರು.ನಂತರ ನೂತನ ಅಧ್ಯಕ್ಷ ರಾಜು ಅವರು ಮಾತನಾಡಿ ನನ್ನನ್ನು ಗುರುತಿಸಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅದ್ಯಕ್ಷ ಸ್ಥಾನ ನೀಡಿರುವ ಶಾಸಕ ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು, ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ.ಮಂಜು, ಹಾಗೂ ಎಲ್ಲಾ ತಾಲ್ಲೂಕು ಪಂಚಾಯಿತಿ ಸದಸ್ಯರಿಗೂ ಆಬಾರಿಯಾಗಿದ್ದೇನೆ. ನನಗೆ ಸಿಕ್ಕಿರುವ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಕೆಲಸ ಮಾಡುವ ಮೂಲಕ ಒಳ್ಳೆಯ ಹೆಸರು ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ರಾಜು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ, ಇಒ ಚಂದ್ರಮೌಳಿ ಹಾಗೂ ಜೆಡಿಎಸ್ ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು ಅಭಿನಂದಿಸಿದರು.
ಕೆರೆ ಕಟ್ಟೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಕಾವೇರಿ ನೀರಾವರಿ ಕೊನೆಭಾಗದ ವ್ಯವಸಾಯಗಾರರ ಹೋರಾಟ ಸಮಿತಿ ವತಿಯಿಂದ ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗ್ರಾಮದ ಕಾವೇರಿ ಬೃಹತ್ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆಹಾಕಿಪ್ರತಿಭಟನೆ .
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕೊನೆಭಾಗಕ್ಕೆ ಮತ್ತು ಕೆರೆ ಕಟ್ಟೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಕಾವೇರಿ ನೀರಾವರಿ ಕೊನೆಭಾಗದ ವ್ಯವಸಾಯಗಾರರ ಹೋರಾಟ ಸಮಿತಿ ವತಿಯಿಂದ ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗ್ರಾಮದ ಕಾವೇರಿ ಬೃಹತ್ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಲಾಯಿತು. ಸರ್ಕಾರಗಳ ವಿರುದ್ದ ಘೋಷಣೆ ಕೂಗಿದರು.ಇದೇ ಸಂದರ್ಭದಲ್ಲಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾಧು ಮಾತನಾಡಿ, 5ಎ, 6ನಾಲೆಯ ತೂಬಿನಲ್ಲಿ ನೀರೆತ್ತಿ ದುಗ್ಗನಹಳ್ಳಿ ಪಿಕ್ ಅಫ್ ಮೂಲಕ ದಡದಪುರ ,ಬಂಡೂರು, ಗಟ್ಟಿಕೊಪ್ಪಲು,ಸಸಿಯಾಲಪುರ ಕಲ್ಲಾರೇಪುರ ಗ್ರಾಮಗಳ ವ್ಯವಸಾಯಕ್ಕೆನೀರು ಹರಿಸಬೇಕು. ಮಾರೇಹಳ್ಳಿ ,ಮಳವಳ್ಳಿ ,ಗಂಗಾಧರನಕೆರೆಗೆ ನೀರು ತುಂಬಿಸಿ ಆ ಭಾಗದ ಭೂಮಿಗೆ ನೀರು ಪೂರೈಸಬೇಕು, ತಕ್ಷಣ ನೀರು ಕೊಡದಿದ್ದರೆ ತಮ್ಮ ಇಲಾಖೆಯ ಜವಾಬ್ದಾರಿಯಲ್ಲಿ ಭತ್ತದ ಸಸಿ ಬೆಳೆಸಿ ಸೆಪ್ಟೆಂಬರ್ 2 ನೇ ವಾರ ಎಲ್ಲಾ ಬೇಸಾಯಗಾರರಿಗೂ ಸಸಿ ಹಂಚಿಕೆ ಮಾಡಬೇಕು. ಇದಲ್ಲದೆ ಕೆರೆಕಟ್ಟೆ ಕಾಲುವೆ ತೋಳ್ಗಾಲುವೆಗಳಲ್ಲಿ ಬೆಳೆದಿರುವ ಗಿಡಗಳನ್ನು ತೆಗೆಸಿ ಗಲೀಜು ಮತ್ತು ಹೂಳನ್ನು ಎತ್ತಿಸಬೇಕು ಎಂದು ಒತ್ತಾಯಿಸಿದರು. ಹೊಸ ಸರ್ಕಾರ ಬಂದರೂ ರೈತರ ಕಷ್ಟವನ್ನು ನೋಡುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕೂಲಿಕಾರರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಮಲ್ಲಯ್ಯ, ಬಂಡೂರು ಗ್ರಾಮಪಂಚಾಯಿತಿ ಅಧ್ಯಕ್ಷ ನಾಗರಾಜು, ಬಸವರಾಜು, ಟಿ.ಹೆಚ್ ಆನಂದ್, ಎನ್ ಶಿವಕುಮಾರ್ , ಪಾಪಣ್ಣ, ಸೇರಿದಂತೆ ಮತ್ತಿತ್ತರರು ಇದ್ದರು.
ದುಡಿಯುವ ಜನರ ಹಕ್ಕುಗಳ ರಕ್ಷಣೆಗಾಗಿ ತಾಲ್ಲೂಕು ತಹಸೀಲ್ದಾರ್ ಕಚೇರಿ ಮುಂದೆ ಆಗಸ್ಟ್ 14ರಂದು ಸಾಮೂಹಿಕ ಸತ್ಯಾಗ್ರಹ ಅಹೋರಾತ್ರಿ ಧರಣಿ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದುಡಿಯುವ ಜನರ ಹಕ್ಕುಗಳ ರಕ್ಷಣೆಗಾಗಿ ಮಳವಳ್ಳಿ ತಾಲ್ಲೂಕು ತಹಸೀಲ್ದಾರ್ ಕಚೇರಿ ಮುಂದೆ ಆಗಸ್ಟ್ 14ರಂದು ಸಾಮೂಹಿಕ ಸತ್ಯಾಗ್ರಹ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಸಿಐಟಿಯು ತಾಲ್ಲೂಕು ಸಂಚಾಲಕಿ ಮಹದೇವಮ್ಮ ತಿಳಿಸಿದರು.ಮಳವಳ್ಳಿ ಪಟ್ಟಣದ ಕೂಲಿಕಾರರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಐಸಿಡಿಎಸ್ ಯೋಜನೆಯಲ್ಲಿ ಶೇ 75 , ಬಿಸಿಯೂಟ ಶೇ 40 ಅನುದಾನ ಕಡಿತ ಮಾಡಿ ನೇರ ನಗದು ಕೊಡುವ ಮತ್ತು ಬಿಸಿಯೂಟದಲ್ಲಿ ಕೇಂದ್ರೀಕೃತ ಅಡುಗೆ ಮನೆಯನ್ನು ತೆರೆಯುವುದನ್ನು ವಿರೋಧಿಸಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಐಸಿಡಿಎಸ್ , ಮಧ್ಯಾಹ್ನದ ಬಿಸಿಯೂಟ, ಆರೋಗ್ಯ, ಶಿಕ್ಷಣ, ಮೊದಲಾದ ಯೋಜನೆ ಅಡಿಯಲ್ಲಿ ಲಕ್ಷಾಂತರ ಅಂಗನವಾಡಿ, ಬಿಸಿಯೂಟ,ಆಶಾ ನೌಕರರು ಯಾವುದೇ ಕನಿಷ್ಠ ಕೂಲಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆಎಂದು ಆರೋಪಿಸಿದರು.ಇದಲ್ಲದೆ ಕೇಂದ್ರ ಸರ್ಕಾರ ವಿರುದ್ದ ಹೋರಾಟ ಮಾಡುತ್ತಿದೆ ಆಗಸ್ಟ್ 14 ರಂದುಸಂಜೆ 6 ಗಂಟೆಗೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಲಾಗುವುದು ಕಾರ್ಯಕ್ರಮದಲ್ಲಿ ಬುದ್ದಿಜೀವಿಗಳು ,ಸಾಹಿತಿಗಳು, ಕಲಾವಿದರು ಹಾಗೂ ಭಾಷಣಕಾರರಾಗಿ ವೈ.ಎಸ್ ಗುರುಶಾಂತ್ ಆಗಮಿಸಲಿದ್ದಾರೆ. ಇದಲ್ಲದೆ ಧರಣಿಯಲ್ಲಿ ಅನೇಕ ಸಂಘಟನೆಗಳು ಭಾಗವಹಿಸಲಿದೆ ಎಂದರು ಗೋಷ್ಟಿಯಲ್ಲಿ ಕೂಲಿಕಾರರ ಸಂಘದ ಅಧ್ಯಕ್ಷ ಶಿವಮಲ್ಲಯ್ಯ,ಜವರಯ್ಯ ಸೇರಿದಂತೆ ಮತ್ತಿತ್ತರರು ಇದ್ದರು.
ಮಾಜಿ ಮುಖ್ಯಮಂತ್ರಿ ಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣ ಹಂಪಲು ವಿತರಣೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣ ಹಂಪಲು ವಿತರಣೆ ಮಾಡಿದರು.ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕೆ.ಬಿ.ಚಂದ್ರಶೇಖರ್ ಅವರು ನಮ್ಮೆಲ್ಲರ ನಾಯಕರರಾದ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಉತ್ತಮ ಆಡಳಿತ ನಡೆಸುವ ಮೂಲಕ ರಾಜ್ಯದ ಜನರ ಕಣ್ಮಣಿಯಾಗಿದ್ದಾರೆ. ಮುಂದೆ ದೇಶದ ಪ್ರಧಾನಿಯಾಗುವ ಅವಕಾಶ ಒದಗಿ ಬರಲಿ . ಶ್ರೀಯುತರಿಗೆ ದೇವರು ಮತ್ತು ಆರೋಗ್ಯ, ಅವಕಾಶಗಳನ್ನು ನೀಡಲಿ ನೂರ್ಕಾಲ ಬಾಳಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ರವೀಂದ್ರ ಬಾಬು, ಕೆಯುಐಡಿಎಫ್ ಸಿ ನಿಗಮದ ಅಧ್ಯಕ್ಷ ಎಂ.ಡಿ.ಕೃಷ್ಣ ಮೂರ್ತಿ, ಜಿ.ಪಂ. ಸದಸ್ಯ ದೇವರಾಜು, ಕಾಂಗ್ರೆಸ್ ಮುಖಂಡರಾದ ಬಿ.ನಾಗೇಂದ್ರಕುಮಾರ್, ಎಸ್.ಅಂಬರೀಷ್, ಕೆ.ಸಿ.ಮಂಜು ನಾಥ್, ಡಿ.ಪ್ರೇಮಕುಮಾರ್, ಎಂ.ಜೆ.ಶಶಿಧರ್, ಶಿವಣ್ಣ, ರಾಜಯ್ಯ, ಕಿರಣ್ ಕುಮಾರ್, ಹೊಸೂರು ನಿಂಗೇಗೌಡ , ಲಕ್ಷ್ಮೀಪುರ ಚಂದ್ರೇಗೌಡ, ಅಗ್ರಹಾರ ಕುಮಾರ್, ಇತರರು ಇದ್ದರು.
ಸಂವಿಧಾನ ಪ್ರತಿಯನ್ನ ಸುಟ್ಟು ಹಾಕಿದ ಸಂಘಪರಿವಾರದ ನೀಚ ಕೃತ್ಯವನ್ನ ಖಂಡಿಸಿ. ಪ್ರಾಂತ ರೈತ ಸಂಘ.ಜನವಾದಿ ಮಹಿಳಾ ಸಂಘಟನೆ.ಎಸ್.ಎಫ್.ಐ.ನಿಂದ ಪ್ರತಿಭಟನೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ಸಂಘಪರಿವಾರದ ನೀಚರು ಮೀಸಲಾತಿ ವಿರೋದಿಗಳು ದೇಶದ ಘನತೆಗೆ ನಮ್ಮ ಸಂವಿಧಾನವು ಒಂದು ಕಾರಣವಾಗಿರುವ ಸಂವಿಧಾನವನ್ನು ಸುಟ್ಟು ಹಾಕಿರುವ ಕ್ರಮವನ್ನು ಖಂಡಿಸಿ.ಮಳವಳ್ಳಿ ಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ.ಜನವಾದಿ ಮಹಿಳಾ. ಸಂಘಟನೆ .ಎಸ್.ಎಫ್.ಐ.ಸಂಘಟನೆ ಗಳಿಂದ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಅದ್ಯಕ್ಷರಾದ ಎನ್ ಎಲ್ ಭರತ್ ರಾಜ್ ಮಾತನಾಡಿ ದೇಶದಲ್ಲಿ ಕೋಮುವಾದಿ .ಪುರೋಹಿತ ಶಾಹಿ ಹಾಗೂ ಮನುವಾದಿಗಳ ಕೊಳಕು ಮನಸ್ಥಿತಿಯ ನೀಚವ್ಯಕ್ತಿಗಳಿಂದ ಸಂವಿಧಾನದತ್ತ ಹಕ್ಕುಗಳನ್ನು ಮೊಟಕುಗೊಳಿಸಿ. ವರ್ಣಾಶ್ರಮ ಪದ್ದತಿಯ ಗುಲಾಮಗಿರಿಯ ವ್ಯವಸ್ಥೆಯನ್ನ ತರಲು ಯತ್ನಿಸುತ್ತಿದ್ದಾರೆ ಅದರ ಭಾಗವಾಗಿ ದೆಹಲಿಯಲ್ಲಿ ಮೀಸಲಾತಿ ವಿರೋದಿ ಹೋರಾಟದಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ಅಂಬೇಡ್ಕರ್ ಗೆ ದಿಕ್ಕಾರ ಕೂಗಿ ಈ ದೇಶದ ಘನತೆಗೆ ಮತ್ತು ಜನತೆಗೆ ಅಪಮಾನ ಗೊಳಿಸಿದ್ದಾರೆ ಅದ್ದರಿಂದ ಈ ಮನುಷ್ಯ ವಿರೋದಿ RSS ,Bjp ಯ ದುಷ್ ಕೃತ್ಯವನ್ನು ಪ್ರಜ್ಞಾವಂತರು ಖಂಡಿಸಬೇಕು. ಎಂದರು ಆಹಾರದ ಹಕ್ಕಿನ ಮೇಲೆ ಧಾಳಿ. ಆಯ್ಕೆಯ ಹಕ್ಕು ಅಬಿವ್ಯಕ್ತಿ ಸ್ವಾತಂತ್ರ್ಯ. ದಾರ್ಮಿಕ ಹಕ್ಕು.ಧಾಳಿ ನಡೆಸಿ ದೇಶದ ಸೌಹಾರ್ದ ತೆಯನ್ನು ಹಾಳು ಮಾಡುತ್ತಿದ್ದಾರೆ ಮೋದಿ ಅಧಿಕಾರಕ್ಕೆ ಬಂದ ಮೇಲೆ ಜನತೆಗೆ ರಕ್ಷಣೆ ಸಿಗುತ್ತಿಲ್ಲ ಮೋದಿಯೊಬ್ಬ ಜನ ವಿರೋಧಿ ಎಂದು ಆರೋಪಿಸಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾದ್ಯಕ್ಷರಾದ ದೇವಿ ಮಾತನಾಡಿ ದೇಶದಲ್ಲಿ ಮಹಿಳೆಯರು. ವಿದ್ಯಾರ್ಥಿಗಳು. ಹಾಗೂ ಮಕ್ಕಳು ಸೇರಿದಂತೆ ವಿಪರೀತ ಅತ್ಯಾಚಾರ. ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ.ರಾಜ್ಯದಲ್ಲಿ ಮಾಲೂರು .ಹಾವೇರಿ. ಬಾಗಲಕೋಟೆ ಮುಂತಾದಡೆ ಇಂತಹ ಘಟನೆಗಳು ನಡೆದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ .ಪ್ರತಿಯೊಬ್ಬ ನಾಗರಿಕನಿಗೆ ರಕ್ಷಣೆ ನೀಡುವುದರ ಬದಲು ಅಳುವ ಸರ್ಕಾರಗಳು ಅಪರಾಧಿಗಳ ರಕ್ಷಣೆಗೆ ನಿಂತಿದ್ದಾರೆ ಇಂತಹ ನೀತಿಗಳ ವಿರೋದಿಸಿ ಕೋಮುವಾದಿ ಸರ್ಕಾರ ವನ್ನ ಕಿತ್ತೆಸದು ಜನತೆಯನ್ನು ರಕ್ಷಿಸಬೇಕೆಂದರು.
ಪ್ರತಿಭಟನೆ ಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಸುಶೀಲಾ ಸನೀತಾ. ಪ್ರಮೀಳಾ. ಪದ್ಮಾ ಪ್ರಾಂತ ರೈತ ಸಂಘದ ಎಂ.ಡಿ.ಶಂಕರ್.ಜಯಲಕ್ಷ್ಮಿ. ಎಸ್ ಎಫ್ ಎಫ್ ನ ನಿವೇದಿತ . ಚಿನ್ಮಯಿ ಪೂಜಾ ಆಶಾ ಸಿ.ಐ.ಟಿ.ಯು ತಿಮ್ಮೇಗೌಡ. ಸಾಹಿತಿಗಳಾದ ಎಂ.ಬಸಪ್ಪ. ವಕೀಲರಾದ ತೇಜಸ್ವಿನಿ ಭಾಗವಹಿಸಿದ್ದರು.