ಇತ್ತೀಚಿಗಿನ ಸುದ್ದಿಗಳು

ಸುದ್ದಿಜಾಲ

ಸುದ್ದಿಜಾಲ

Rate this item
(0 votes)

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಅರಿವಿನ ಜಾಗೃತಿ ಕಾರ್ಯಕ್ರಮ

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂದೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಅರಿವಿನ ಜಾಗೃತಿ ಕಾರ್ಯಕ್ರಮ ನಡೆಸಿದರು 71 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ  ಸ್ವಾತಂತ್ರ್ಯ ಹೋರಾಟಗಾರಿಗೆ ಮತ್ತು ಹುತಾತ್ಮ ಯೋಧರು ಹಾಗೂ ಗಡಿ ಕಾಯುತ್ತಿರುವ ಯೋಧರಿಗಾಗಿ ಅರ್ಪಿಸುವ ಬೃಹತ್ ರಕ್ತದಾನ ಹಾಗೂ 71 ಹಣ್ಣಿನಗಿಡ ವಿತರಣ ಕಾರ್ಯಕ್ರಮ ಆಗಸ್ಟ್ 15 ರಂದು ನಡೆಯಲಿದ್ದು ಪ್ರತಿಯೊಬ್ಬರು ಸ್ವಂಪೇರಿತರಾಗಿ ಭಾಗವಹಿಸುವಂತೆ  ಅಖಿಲ ಭಾರತ ಜನವಾದಿ ಮಹಿಳೆ ಸಂಘಟನೆ ಜಿಲ್ಲಾಧ್ಯಕ್ಷೆ ದೇವಿ  ಕರೆ ನೀಡಿದರು. ಅರಿವಿನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ , ಮಹಿಳೆ ಯರು  ರಕ್ತದಾನ ಮಾಡುವ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ತಪ್ಪು ಮಾಹಿತಿಯಾಗಿದ್ದು, ಮಹಿಳೆಯರು ರಕ್ತದಾನ ಮಾಡಿದರೆ ಹೃದಯರೋಗ , ಹಾಗೂ ಎಲ್ಲಾ ಕಾಯಿಲೆಯಿಂದ ದೂರ ಉಳಿಯವುದು ಎಂದರು.ಕಾರ್ಯಕ್ರಮದಲ್ಲಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸುಶೀಲಾ , ಸುನೀತಾ .ಪದ್ಮ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

Rate this item
(0 votes)

ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರಿಗೆ ಅಭಿನಂದನಾ ಸಮಾರಂಭವು ನಡೆಯಿತು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರಿಗೆ ಅಭಿನಂದನಾ ಸಮಾರಂಭವು ನಡೆಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ಕಾಂಗ್ರೆಸ್ ಪಕ್ಷವು ಸದಾ ಸಿದ್ದವಿದೆ. ಕಾರ್ಯಕರ್ತರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ತಮ್ಮ ಶಕ್ತಿಯನ್ನು ತೋರಿಸಬೇಕು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷದ ಸೋಲಿಗೆ ಎದೆಗುಂದಬಾರದು. ಸಿದ್ದರಾಮಯ್ಯ ಅವರ ಆಡಳಿತ ಅವಧಿಯ ಜನಪ್ರಿಯ ಕೆಲಸಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನ ಮಾನ ಕೊಡಲು ಪಕ್ಷವು ಸದಾ ಸಿದ್ದವಿದೆ.ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಸ್ಥಿತ್ವವನ್ನು ಎದುರಾಳಿಗಳಿಗೆ ಕಾಂಗ್ರೆಸ್ ಪಕ್ಷ ಇನ್ನೂ ಗಟ್ಟಿಯಾಗಿದೆ ಎಂಬ ಇದೆ ಸಂದೇಶ ನೀಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ನಂತರ ಮಾತನಾಡಿ ರಾಜಕೀಯ ಸನ್ನಿವೇಶ ಹಿನ್ನಲೆ ಕೆಲವೊಮ್ಮೆ ಮಾತಾಡದಂತೆ ಸಂದರ್ಭ ಕೈ ಕಟ್ಟಿ ಹಾಕುತ್ತದೆ.ಜನ ಕಾರ್ಯಕ್ರಮ ಆಧಾರದ ಮೇಲೆ ಮತ ಹಾಕಿದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿತ್ತು.ಆದರೇ ಚುನಾವಣೆ ಸಂದರ್ಭದಲ್ಲಿ ಭಾವನೆ ಸೇರಿದಂತೆ ಹಲವು ಕಾರಣಗಳು ಸೇರಿಕೊಳ್ಳುತ್ತವೆ.ಆದ್ದರಿಂದ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಸೋಲು ಉಣ್ಣಾಬೇಕಾಯಿತು.ಜನಪ್ರಿಯತೆಗೆ ಕಾರ್ಯಕ್ರಮ ತಂದಿದಲ್ಲ, ರೈತರಿಗೆ ಅನುಕೂಲ ಆಗವಂತೆ ಕಾಂಗ್ರೆಸ್ ಸರ್ಕಾರ ಯೋಜನೆ ತಂದಿತ್ತು.ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಏಕೆ ಮತ ಹಾಕಿಲ್ಲ ಎಂದು ಕೇಳಿದ್ರೆ ಅವರ ಬಳಿ ಉತ್ತರವಿಲ್ಲ.ನಮ್ಮವರು ಮುಖ್ಯಮಂತ್ರಿ ಆಗಲೆಂದು ಮತ ಹಾಕಿದ್ದಾರೆ ಅಷ್ಟೇ‌.ಉದ್ಯೋಗ ಸೃಷ್ಟಿಯಲ್ಲಿ ನಮ್ಮ ರಾಜ್ಯ ನಂ.೧. ಆಗಿತ್ತು.ನಾವು ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದೀವಿ. ಯಾರನ್ನ ಬಿಟ್ಟಿದ್ದೀವಿ ಹೇಳಿ.ನಾವು ತಪ್ಪು ಮಾಡಿದೋ, ಜನರಿಗೆ ನಾವು ಸರಿಯಾಗಿ ಹೇಳಕ್ಕಾಗಿಲ್ಲ.ನಮ್ಮ ಸರ್ಕಾರದಲ್ಲಿ ಹಲವು ಜಿಲ್ಲೆಗಳಲ್ಲಿ ನಮ್ಮ ಕಾರ್ಯಕರ್ತರು ಕೆಲಸ ಮಾಡಿಲ್ಲ.ಅದರಲ್ಲೊಂದು ಮಂಡ್ಯ ಜಿಲ್ಲೆಯ ಕಾರ್ಯಕರ್ತರ ಕೆಲಸ ಮಾಡಿಲ್ಲ.ಅದಕ್ಕೆ ಯಾರು ಕಾರಣ ಅಂತಾ ಹೇಳಲ್ಲ. ಇಲ್ಲಿ ಪತ್ರಿಕೆಯವರಿದ್ದಾರೆ. ಅದನ್ನೇ ಹೆಡ್ ಲೈನ್ ಬರಿತ್ತಾರೆ‌. ಈಗ ಬೇಡ.ನಾವು ಕಾರ್ಯಕರ್ತರ ಕೆಲಸ ಮಾಡಿದ್ರೆ ಇಂತಹ ಪಲಿತಾಂಶ ಬರುತ್ತಿರಲಿಲ್ಲ.ಮುಂದೆ ಬರುವ ಸ್ಥಳೀಯ, ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡೋಣ.ನಿಜವಾದ ಮುಖಂಡರಿಗೆ ಜಿಲ್ಲೆಯಲ್ಲಿ ಒಳ್ಳೆಯ ಅವಕಾಶ ಸಿಕ್ಕಿದೆ.

ಯುವ ಕಾರ್ಯಕರ್ತರನ್ನು ಹುಟ್ಟು ಹಾಕಿ ಕೆಲಸ ಮಾಡಿ ಪಕ್ಷ ಕಟ್ಟಬೇಕು.ಯಾರು ಜನರಿಗೆ ಸೇವೆ ಮಾಡಬೇಕು ಎನ್ನುವ ಮನಸ್ಸಿದವರಿಗೆ ಸ್ಥಾನಮಾನ ಕೊಡಿ, ಆಗ ಪಕ್ಷ ಉಳಿಯುತ್ತೆ ನನಗೆ ನಂಬಿಕೆಯಿದೆ ಜಿಲ್ಲೆಯಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ.ಈ ಸರ್ಕಾರದಲ್ಲಿ ಸಮಸ್ಯೆ ಬಂದೆ ಬರುತ್ತೆ.ಆಗ ನಮ್ಮ ಕಾರ್ಯಕರ್ತರ ಪರ ಪಕ್ಷ ನಿಂತೇ ನಿಲುತ್ತೆ.ಯಾರು ಹೆದರುವ ಅವಶ್ಯಕತೆಯಿಲ್ಲ.ನಮ್ಮ ಪಕ್ಷಕ್ಕೆ ನೋವಿದೆ. ೮೦ ಸೀಟು ಇದ್ರು ಅಧಿಕಾರ ಬಿಟ್ಟಿದ್ದೇವೆ.ಕೋಮುವಾದಿ ಪಕ್ಷ ಬಿಜೆಪಿ ಅನ್ನು ದೂರ ಇಡುವ ಸಲುವಾಗಿ.ರಾಹುಲ್ ಗಾಂಧಿ ನೇರವಾಗಿ ಮೋದಿಯನ್ನು ಸಂಸತಲ್ಲಿ ಅಟ್ಯಾಕ್ ‌ಮಾಡಿದ್ದರು ಅವರು ಸ್ಪಷ್ಟಿಕರಣ ಇದುವರೆಗೂ ಕೊಟ್ಟಿಲ್ಲ.ಎರಡು ಜರ್ನಲಿಷ್ಟನ್ನು ಕೆಲಸದಿಂದ ತೆಗಸಿದ್ರೂ.ಎನ್ ಡಿ ಟಿವಿ ವಿರುದ್ದ ಈಡಿ ಕೇಸ್ ಹಾಕಿಸಿದ್ರೂ.ಮೋದಿ‌ ಸ್ನೇಹಿತ ಸಾವಿರಾರು ಕೋಟಿ ಸಾಲ ಮಾಡಿ ‌ದೇಶ ಬಿಟ್ಟು ಹೋಗಿದ್ದಾರೆ.ಸಿಎಂ ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ನೀಡಿದೆ.ಅದರ ಜತಗೆ ಪಕ್ಷವನ್ನು ಕಟ್ಟಬೇಕಿದೆ.ದೇಶದ ಕಟ್ಟುವ ಸಲುವಾಗಿ ಪಕ್ಷ ಉಳಿಯಬೇಕಿದೆ.ನಾವು ಸೋತಿದ್ದೇವೆ ಒಪ್ಪೊಣ, ಜನಾದೇಶಕ್ಕೆ ಬೆಲೆ ಕೊಡೊಣ. ಮತ್ತೇ ಜನರ ಬಳಿ ಹೋಗಿ ಕಾಂಗ್ರೆಸ್ ಬಗ್ಗೆ ಹೇಳೋಣ‌ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು ,ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಬಿ.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಸಂಪಂಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಲ್ಲೂಕು ಕಾಂಗ್ರೆಸ್ ಉಸ್ತುವಾರಿ ಬಲರಾಂ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಗಣಿಗ ರವಿಕುಮಾರ್, ಎಂ.ಡಿ.ಕೃಷ್ಣಮೂರ್ತಿ, ಕೆರೆಗೋಡು ಸೋಮಶೇಖರ್, ನಾಗೇಂದ್ರಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಸ್ವಾಮಿನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ರವೀಂದ್ರ ಬಾಬು, ಕಿರಣ್ ಕುಮಾರ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Rate this item
(0 votes)

 ಸೀತಾಪುರ ಗ್ರಾಮದಲ್ಲಿ ರೈತರ ಜೊತೆಗೂಡಿ ಭತ್ತದ ಗದ್ದೆಯಲ್ಲಿ ನಾಟಿಮಾಡಿದ ನಾಡಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ.

ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ರೈತರ ಜೊತೆಗೂಡಿ ನಾಟಿಮಾಡಿದ ನಾಡಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಂತರ ಮಾತನಾಡಿ ನಾಟಿ ಕಾರ್ಯ ಮಾಡಿರುವುದು ನನ್ನ ಜೀವನದ ಸಾರ್ಥಕತೆ ಹಾಗೂ ಪುಣ್ಯ ಎಂದರು.ನಂತರ ಇನ್ನೊಂದು ವಾರದಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕ್ ಗಳ  ಸಾಲವನ್ನು ಸಹ ಮನ್ನಾ ಮಾಡಲಾಗುವುದು. ಮುಂದಿನ ತಿಂಗಳಿನಿಂದ ರಾಜ್ಯದ 30 ಜಿಲ್ಲೆಗೂ ಭೇಟಿ ಕೊಡುತ್ತೇನೆ. ತಿಂಗಳಲ್ಲಿ ಒಂದು ದಿನ ರೈತರ ಜೊತೆ ಕೃಷಿ ಚಟುವಟಿಕೆಯಲ್ಲಿ ಭಾಗಯಾಗ್ತೀನಿ ಎಂದ ಅವರು ಯಾರು ಆತ್ಮಹತ್ಯೆಗೆ ಶರಣಾಗಬೇಡಿ, ನಿಮ್ಮ ಜೊತೆ ನಾವಿದ್ದೇವೆ .ಗೌರಿಗಣೇಶ ಹಬ್ಬದಷ್ಟರಲ್ಲಿ ರೈತರಿಗೆ ಒಳ್ಳೆಯ ಕಾರ್ಯಕ್ರಮ ಕೊಡುತ್ತೇನೆ,ಎಂದು ಭರವಸೆ ನೀಡಿದರು. ರಾಜ್ಯದ ಆರುವರೆ ಕೋಟಿ ಜನರಿಗೂ ಒಳ್ಳೆಯ ಕಾರ್ಯಕ್ರಮ ಕೊಡುತ್ತೇನೆ. ನಾನು ಯಾರನ್ನು ಮೆಚ್ವಿಸುವುದಿಲ್ಲ, ಹೃದಯದಿಂದ ಕಾರ್ಯಕ್ರಮ ಕೊಡುತ್ತೇನೆ ಎಂದರು.

ನಂತರ ಬಿಜೆಪಿಯ ಈಶ್ವರಪ್ಪ ಹೇಳಿಕೆಗೆ ಸಿಎಂ ತಿರುಗೇಟು ನೀಡಿ,ನಾಟಿ ಕಾರ್ಯವನ್ನು ಮಾಡಿ ಸಿಎಂ ಡ್ರಾಮಾ ಮಾಡ್ತಿದ್ದಾರೆಂದು ಹೇಳಿದ್ದಾರೆ ಆದರೆ ನಾನು ನಾಟಕ ಮಾಡಲು ಇಲ್ಲಿಗೆ ಬಂದಿಲ್ಲ, ಡ್ರಾಮಾ ಮಾಡಲು ಬಂದಿಲ್ಲ ಎಂದರು. ಮಂಡ್ಯದಲ್ಲಿ ಪುಣ್ಯತ್ಮರು 7 ಕ್ಕೆ 7 ಗೆಲ್ಲಿಸಿದ್ದೀರಿ.ನಿಮ್ಮ ಋಣ ನನ್ನ ಮೇಲಿದೆ, ನಿಮಗಾಗಿ ವಿಧಾನಸೌಧದ ಬಾಗಿಲು ಯಾವಾಗಲು ತೆರೆದಿರುತ್ತದೆ ನಾನು ಒಂದು ಪ್ರಾಂತ್ಯಕ್ಕೆ ಸಿಎಂ ಅಲ್ಲ 30 ಜಿಲ್ಲೆಯ ರೈತರನ್ನ ಉಳಿಸುವುದು ನನ್ನ ಕರ್ತವ್ಯ ನನಗೆ ಸಮಯ ಕೊಡಿ ನಿಮ್ಮನ್ನ ಉಳಿಸುತ್ತೇನೆ. ನಾನು ಹೆದರೋದು, ಗೌರವ ಕೊಡೋದು ನಿಮಗೆ ಮಾತ್ರ, ಬೇರ್ಯಾರಿಗೂ ಇಲ್ಲ, ನನಗೆ ಬೆಂಬಲಕೊಟ್ಟ ಮಾಧ್ಯಮದವರಿಗೆ ನನ್ನ ಕೃತಜ್ಞತೆ ಎಂದರು.ನಾನು ನಿಮ್ಮ ಸಹೋದರ, ನನಗೆ ಅವಕಾಶ ಕೊಡಿ ಎಂದರು. ಕಾರ್ಯಕ್ರಮದಲ್ಲಿ ಸಚಿವರು,ಶಾಸಕರು ಹಾಗೂ ನೂರಾರು ರೈತರು ಹಾಜರಿದ್ದರು.

 

Last modified on 11/08/2018
Rate this item
(0 votes)

ಲಯನ್ಸ್ ಕ್ಲಬ್ ಮತ್ತು ಇನ್ನಿತರ ಸಂಘಟನೆಗಳ ವತಿಯಿಂದ ಬೃಹತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ  ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಬೆಂಗಳೂರಿನ ಲಯನ್ಸ್ ಕ್ಲಬ್ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಶ್ರೀರಂಗ ಚಿತ್ರ ಮಂದಿರದ ಆವರಣದಲ್ಲಿ ಆಯೋಜಿಸಲಾಗಿತ್ತು.ರೈತರ ಆರೋಗ್ಯದ ಬಗ್ಗೆ ಹೆಚ್ಚು ಆದ್ಯತೆ ನೀಡಿ ಅವರ ಆರೋಗ್ಯ ತಪಾಸಣೆ ಮಾಡಿ ,ಮೂಳೆ, ಕಣ್ಣು, ಚರ್ಮ , ಕಿವಿ ಮೂಗು ಗಂಟಲು ಸೇರಿದಂತೆ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಿ ಉಚಿತವಾಗಿ ಮಾತ್ರೆಗಳ ಮತ್ತು ಔಷಧಿ, ಕನ್ನಡಕಗಳನ್ನು ನೀಡಲಾಯಿತು.ಮತ್ತು ಬಡ ರೈತರಿಗೆ ಉಚಿತವಾಗಿ ಕೃಷಿ ಪರಿಕರಗಳನ್ನು ವಿತರಣೆ ಮಾಡಿದರು.

Rate this item
(0 votes)

 ಶಾಸಕ ಡಾ.ಕೆ ಅನ್ನದಾನಿ ರವರು ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ರವರ ವಿರುದ್ದ ಅವಹೇಳನ ಹೇಳಿಕೆ ಮಾಡುತ್ತಿರುವುದು ಸರಿಯಲ್ಲ ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು ಹಾಗೂ ಪುಟ್ಟರಾಮು ನೇತೃತ್ವದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪುಟ್ಟರಾಮು ಮಾತನಾಡಿ, ಶಾಸಕ ಅನ್ನದಾನಿ ಅವರು ಸಮ್ಮಿಶ್ರ ಸರ್ಕಾರದಲ್ಲಿದ್ದರೂ  ಸಭೆ ಸಮಾರಂಭಗಳಲ್ಲಿ  ಕುಮಾರಸ್ವಾಮಿ ಸರ್ಕಾರ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ತಾಕೀತು ಮಾಡಿದರು. 

ನರೇಂದ್ರಸ್ವಾಮಿರವರು ಶಾಸಕರಾಗಿ, ಸಚಿವರಾಗಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂದು ಕ್ಷೇತ್ರದ ಜನತೆಗೆ ಗೊತ್ತಿದೆ. ಆದರೆ ಅವರ ಬಗ್ಗೆ ಹಿಟ್ಟರ್ ಆಡಳಿತ , ದುರಂಹಕಾರಿ ಎಂದು ಸಭೆಗಳಿಗೆ ಹೇಳಿಕೆ ನೀಡಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು.ಒಂದು ವೇಳೆ ಇದೇ ಮುಂದುವರೆದರೆ ಮುಂದಿನ ದಿನಗಳಲ್ಲಿ  ಹೋರಾಟ ನಡೆಸಬೇಕಾಗುತ್ತದೆ. ನಮ್ಮ ನಾಯಕರಾದ ನರೇಂದ್ರಸ್ವಾಮಿರವರು ಕ್ಷೇತ್ರದ ಸಾಧನೆಯನ್ನು ತಾಲ್ಲೂಕಿನ ಜನತೆ ಮೆಚ್ಚಿದ್ದು ಒಂದು ವೇಳೆ  ಶಾಸಕ ಅನ್ನದಾನಿರವರನ್ನು ಮಪರು ಪರೀಕ್ಷೆ ಗೆ ಒಳಪಡಿಸಿದರೆ ಅವರು ನರೇಂದ್ರಸ್ವಾಮಿರವರ ಸಾದನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ನನ್ನ ಅನಿಸಿಕೆ ಎಂದರು.

ಕೆಆರ್ ಎಸ್ ನಲ್ಲಿ 74 ಅಡಿ ಇದ್ದಾಗ ನಾಲೆಗೆ ನೀರು ನೀಡುವಂತೆ  ಈ ಹಿಂದೆ  ಮಾನ್ಯ  ಅನ್ನದಾನಿರವರು  ಪತ್ರಿಭಟನೆ ನಡೆಸಿದ್ದರು ಈಗ ಕೆಆರ್ ಎಸ್ ಭರ್ತಿಯಾಗಿ  ಹೊಳೆ ಹರಿಯುತ್ತಿದ್ದರೂ ಇದುವರೆಗೂ ನಾಲೆ ಗಳಿಗೆ ನೀರು ಬಿಟ್ಟಿಲ್ಲ, ಈಗಾಗಲೇ ಪಕ್ಕದ ತಾಲ್ಲೂಕಿನಲ್ಲಿ  ಪೈರು ಹಾಕಿದ್ದಾರೆ. ಆದರೆ  ನಮ್ಮ ತಾಲ್ಲೂಕು ಕೊನೆಭಾಗವಾಗಿದ್ದು ಇನ್ನೂ ಪೈರು ಹಾಕುವುದಕ್ಕೂ ನೀರು ಬಿಟ್ಟಿಲ್ಲ ಇದೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

        ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ   ಆರ್. ಎನ್ ವಿಶ್ವಾಸ್ , ಉಪಾಧ್ಯಕ್ಷ ನಾದು, ಜಿ.ಪಂ ಸದಸ್ಯರಾದ ಸುಜಾತಪುಟ್ಟು, ಹನುಮಂತ, ಚಂದ್ರಕುಮಾರ ಸೇರಿದಂತೆ ಮತ್ತಿತ್ತರರು ಇದ್ದರು

Rate this item
(0 votes)

ವಿಜಯಬ್ಯಾಂಕ್ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಕ್ಯಾತನಹಳ್ಳಿ ಗ್ರಾಮದ ಬಡವರು ಉಪಕಸುಬು ಮಾಡಲು ಮತ್ತು ಆರ್ಥಿಕವಾಗಿ ಅಭಿವೃದ್ಧಿ ಆಗಲು ಬಡತನ ,ನಿರುದ್ಯೋಗ ದಿಂದ  ಹೊರಬರಲು ಆರ್ ಬಿ ಐ  ನಿರ್ದೇಶನದಂತೆ ಭದ್ರತಾ ರಹಿತ ಸಾಲ ಕೊಡಲು ಒತ್ತಾಯಿಸಿ  ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ  ಗ್ರಾಮಸ್ಥರು ವತಿಯಿಂದ  ಮಳವಳ್ಳಿ ತಾಲ್ಲೂಕಿನ ಕುಂದೂರು ಗ್ರಾಮದ ವಿಜಯಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಲಾಯಿತು.

ಬ್ಯಾಂಕ್ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಬ್ಯಾಂಕ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ  ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾದು ಮಾತನಾಡಿ, ಕ್ಯಾತನಹಳ್ಳಿ  ಗ್ರಾಮ ಅತಿ ಹಿಂದುಳಿದಿದ್ದು ಪರಿಶಿಷ್ಟ ಜಾತಿ, ಪಂಗಡ, ಮತ್ತು ಹಿಂದುಳಿದ ಜಾತಿಯ ಜನರೇ ಹೆಚ್ಚಿರುವ ಈ ಗ್ರಾಮದಲ್ಲಿ ಭೂಹೀನರು ಹೆಚ್ಚಿದ್ದು, ಜೀವನೋಪಾಯಕ್ಕೆ ಊರೂರು ಅಲೆಯುವುದು ಸರ್ವೆ ಸಾಮಾನ್ಯವಾಗಿದೆ. ಆದರೆ ಕೇಂದ್ರ ಸರ್ಕಾರದ ಬಡತನ ವನ್ನು ಹೋಗಲಾಡಿಸಿ ಸ್ವಾವಲಂಬನೆ ಜೀವನ ನಡೆಸಬೇಕೆಂಬ ತೀರ್ಮಾನ ಜಾರಿಯಾಗಿದೆ.

ನಿರುದ್ಯೋಗ, ಬಡತನದಿಂದ ಜನರು ತೊಂದರೆಗೆ ಸಿಲುಕಿಕೊಂಡಿದ್ದು,  ಇವರಿಗೆ ಈವರೆಗೂ ಯಾವುದೇ ಸೌಲಭ್ಯಗಳು ಸಿಗದೆ ಕಷ್ಟದಲ್ಲಿ ಸಿಕ್ಕಿಕೊಂಡಿದ್ದಾರೆ. ಮತ್ತು ತಮ್ಮ ಬ್ಯಾಂಕಿನಿಂದ  ಯಾವುದೇ ಸಾಲ ಸೌಲಭ್ಯಗಳು ಸಿಕ್ಕಿಲ್ಲ ಆದ್ದರಿಂದ ಆರ್.ಬಿ ಐ ತೀರ್ಮಾನದ ಬಡತನವನ್ನು ತೊಡೆದು ಹಾಕಲು ಗ್ರಾಮೀಣ ಕೂಲಿಕಾರರಿಗೆ ಒಂದು ಲಕ್ಷ ರೂ ಗಳವರೆಗೆ ಸಾಲ ಕೊಡಬೇಕೆಂಬ ನಿರ್ದೇಶನವಿದ್ದರೂ ಅದು ಜಾರಿಯಾಗಿಲ್ಲ ಮುದ್ರ ಮತ್ತು ಇತರ ಯೋಜನೆಗಳು ಮರೀಚಿಕೆಯಾಗಿದೆ ಆದುದ್ದರಿಂದ  61 ಕೂಲಿಕಾರರ ಕುಟುಂಬ ಗಳಿಗೆ ಅವರು ಮೇಕೆ, ಕುರಿ, ಕೋಳಿ, ಹಸು,ಎಮ್ಮೆ ಸಾಕಲು ವ್ಯಾಪಾರ ನಡೆಸಿ ಜೀವನ ಸಾಗಿಸಲು ಪ್ರತಿಕುಟುಂಬಕ್ಕೆ ಕನಿಷ್ಷ 60 ಸಾವಿರದಿಂದ ಒಂದುಲಕ್ಷ ರೂ ಗಳವರೆಗೂ ಸಾಲ ಕೊಡಬೇಕೆಂದು ಒತ್ತಾಯಿಸಿದರು. ಇದಲ್ಲದೆ ಗ್ರಾಮೀಣದ ಜನರಿಗೆ ಬ್ಯಾಂಕ್ ಸಾಲ ಸೌಲಭ್ಯ ದ ಬಗ್ಗೆ ಅರಿವಿನ ಕಾರ್ಯಕ್ರಮ  ಮೂಡಿಸುವಂತೆ ಒತ್ತಾಯಿಸಿದರು.

ಪ್ರತಿಭಟನಾಕಾರರು  ಬ್ಯಾಂಕ್ ಮ್ಯಾನೇಜರ್ ಓಂಕಾರ್ ಹೆಗ್ಗಡೆ ರವರಿಗೆ ಮನವಿ ಸಲ್ಲಿಸಿದ್ದರು ಪ್ರತಿಭಟನೆಯಲ್ಲಿ   ಜಿಲ್ಲಾ ಪ್ರದಾನ ಕಾರ್ಯದರ್ಶಿ ಹನುಮೇಶ್, ತಾಲ್ಲೂಕು ಅಧ್ಯಕ್ಷ ಶಿವಮಲ್ಲಯ್ಯ,  , ಪಾಪಣ್ಣ, ಕ್ಯಾತನಹಳ್ಳಿ ಮಹದೇವಯ್ಯ, ಮಾದೇಶ ,ಆನಂದ ಸೇರಿದಂತೆ ಮತ್ತಿತ್ತರರು ಇದ್ದರು.

Rate this item
(0 votes)

ಎರಡು ಬೈಕ್ ಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಒರ್ವ ಸಾವನ್ನಪ್ಪಿದ್ದು ನಾಲ್ವರಿಗೆ ಗಾಯ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗೌಡಗೆರೆ ಕ್ರಾಸ್ ಬಳಿ ಎರಡು ಬೈಕ್ ಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಒರ್ವ ಸಾವನ್ನಪ್ಪಿದ್ದು ನಾಲ್ವರಿಗೆ ಗಾಯಗೊಂಡ ಘಟನೆ ಗೌಡಗೆರೆ ಕ್ರಾಸ್ ಬಳಿ ನಡೆದಿದೆ. ತಾಲ್ಲೂಕಿನ ಕೆಂಬೂತಗೆರೆ ಗ್ರಾಮದ ದಿನೇಶ್  (35) ಮೃತಪಟ್ಟ ದುದೈವಿ, ಸಂತೋಷ,ವಿನೋದ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ವತ್ರೆಗೆ ಸೇರಿಸಲಾಗಿದೆ. ಕಳೆದ ರಾತ್ರಿ ಒಂದು ಬೈಕ್ ನಲ್ಲಿ ಇಬ್ಬರು ಇನ್ನೊಂದು ಬೈಕ್ ನಲ್ಲಿ ಮೂವರು ಬರುತ್ತಿದ್ದು,  ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ದಿನೇಶ್ ರಸ್ತೆ ಬದಿಯಲ್ಲಿರುವ ಕೆರೆಗೆ ಹಾರಿದ್ದು ತಲೆಗೆ ಪೆಟ್ಟು ಬಿದ್ದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಉಳಿದವರಿಗೆ ತೀವ್ರಗಾಯಗೊಂಡಿದ್ದು,  ಮಳವಳ್ಳಿ ಸಾರ್ವಜನಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ವತ್ರೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.  ಈ ಸಂಬಂಧ ಗ್ರಾಮಾಂತರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲುಮಾಡಿಕೊಂಡಿದ್ದಾರೆ.

Rate this item
(0 votes)

ಕಚೇರಿಗೆ ಅಲೆಸುವ ಅಧಿಕಾರಿಗಳಿಗೆ ಸಾರ್ವಜನಿಕರ ಕಷ್ಟ ಏನು ಎಂದು ತಿಳಿಸಲು ಶಾಸಕ ಡಾ.ಕೆ ಅನ್ಬದಾನಿ ಗ್ರಾಮ ವಾಸ್ತವ್ಯ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ದಲಿತ ಜಯರಾಜುಮನೆಯಲ್ಲಿ ವಾಸ್ತವ್ಯ ಹೂಡಿದಿದ್ದ ಶಾಸಕ ಡಾ.ಕೆ ಅನ್ಬದಾನಿ. ಇದೆ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಸಾರ್ವಜನಿಕರನ್ನು ಕಚೇರಿಗೆ ಅಲೆಸುವ ಅಧಿಕಾರಿಗಳಿಗೆ ಸಾರ್ವಜನಿಕರ ಕಷ್ಟ ಏನು ಎಂದು ತಿಳಿಸಲು  ಗ್ರಾಮ ವಾಸ್ತವ್ಯ ಹೂಡುತ್ತಿದ್ದೇನೆ ಎಂದು ಶಾಸಕ ಡಾ.ಕೆ ಅನ್ಬದಾನಿ ತಿಳಿಸಿದರು.          ಮಳವಳ್ಳಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಜಯರಾಜು ಎಂಬ ದಲಿತರ ಮನೆಯೊಂದರಲ್ಲಿ ವಾಸ್ತವ್ಯ , ಮಾಜಿ ಸಚಿವ ಬಿ ಸೋಮಶೇಖರ್ ರವರ ಗ್ರಾಮವೂ ಸಹ ಆಗಿದ್ದು, ಈ ಗ್ರಾಮ ಅಭಿವೃದ್ಧಿ ಯಾಗದ ಕಾರಣ ಈ ಗ್ರಾಮದಲ್ಲಿ ವಾಸ್ತವ್ಯ ಹೂಡುತ್ತಿರುವುದಾಗಿ ತಿಳಿಸಿದರು. ಸಾರ್ವಜನಿಕರನ್ನು ಅಧಿಕಾರಿಗಳು ಕಚೇರಿಯಲ್ಲಿ ಉಡಾಫೆ ರೀತಿಯಲ್ಲಿ ಕಾಣುತ್ತಾರೆ ಜನರ ಕಷ್ಟ ಅಧಿಕಾರಿಗಳಿಗೆ ಅರ್ಥವಾಗಲಿ  ಅನ್ನುವುದಕೋಸ್ಕರ  ಅಧಿಕಾರಿಗಳ ಜೊತೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲು ಸೂಚಿಸಿದ್ದೇನೆ. ಈ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆ ಇದೆ ಅದನ್ನು ಶೀಘ್ರವೇ ಬಗೆಹರಿಸುತ್ತೇನೆ ಎಂದರು.

  ಅಧಿಕಾರಗಳನ್ನು ಬೆಳಗಾವಿ ವರ್ಗಾವಣೆ ಮಾಡುವುದಾಗಿ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ,ಹೌದು ಸಾರ್ವಜನಿಕರ ಕೆಲಸ ಮಾಡದವರಿಗೆ ಇಲ್ಲಿ ಜಾಗವಿಲ್ಲ ಅವರನ್ನು ದೂರದ ಊರಿಗೆ ವರ್ಗಾವಣೆ ಮಾಡಿದಾಗ ಅವರಿಗೂ ಕಷ್ಟ ಅರ್ಥವಾಗುತ್ತದೆ. ಅದಕ್ಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ ಎಂದರು. ಇನ್ನೂ ಪಿಡಿಒಗಳ ಸಭೆಯಲ್ಲೂ ನರೇಗಾ ಯೋಜನೆಯಡಿ ಸಾಕಷ್ಟು ಕಾರ್ಯಕ್ರಮವಿದೆ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು . ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

Last modified on 10/08/2018
Page 33 of 42

Visitors Counter

224726
Today
Yesterday
This Week
This Month
Last Month
All days
115
258
2071
1127
6704
224726

Your IP: 18.224.44.108
2024-05-04 19:05

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles