ಸೀತಾಪುರ ಗ್ರಾಮದಲ್ಲಿ ರೈತರ ಜೊತೆಗೂಡಿ ಭತ್ತದ ಗದ್ದೆಯಲ್ಲಿ ನಾಟಿಮಾಡಿದ ನಾಡಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ.
ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ರೈತರ ಜೊತೆಗೂಡಿ ನಾಟಿಮಾಡಿದ ನಾಡಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಂತರ ಮಾತನಾಡಿ ನಾಟಿ ಕಾರ್ಯ ಮಾಡಿರುವುದು ನನ್ನ ಜೀವನದ ಸಾರ್ಥಕತೆ ಹಾಗೂ ಪುಣ್ಯ ಎಂದರು.ನಂತರ ಇನ್ನೊಂದು ವಾರದಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲವನ್ನು ಸಹ ಮನ್ನಾ ಮಾಡಲಾಗುವುದು. ಮುಂದಿನ ತಿಂಗಳಿನಿಂದ ರಾಜ್ಯದ 30 ಜಿಲ್ಲೆಗೂ ಭೇಟಿ ಕೊಡುತ್ತೇನೆ. ತಿಂಗಳಲ್ಲಿ ಒಂದು ದಿನ ರೈತರ ಜೊತೆ ಕೃಷಿ ಚಟುವಟಿಕೆಯಲ್ಲಿ ಭಾಗಯಾಗ್ತೀನಿ ಎಂದ ಅವರು ಯಾರು ಆತ್ಮಹತ್ಯೆಗೆ ಶರಣಾಗಬೇಡಿ, ನಿಮ್ಮ ಜೊತೆ ನಾವಿದ್ದೇವೆ .ಗೌರಿಗಣೇಶ ಹಬ್ಬದಷ್ಟರಲ್ಲಿ ರೈತರಿಗೆ ಒಳ್ಳೆಯ ಕಾರ್ಯಕ್ರಮ ಕೊಡುತ್ತೇನೆ,ಎಂದು ಭರವಸೆ ನೀಡಿದರು. ರಾಜ್ಯದ ಆರುವರೆ ಕೋಟಿ ಜನರಿಗೂ ಒಳ್ಳೆಯ ಕಾರ್ಯಕ್ರಮ ಕೊಡುತ್ತೇನೆ. ನಾನು ಯಾರನ್ನು ಮೆಚ್ವಿಸುವುದಿಲ್ಲ, ಹೃದಯದಿಂದ ಕಾರ್ಯಕ್ರಮ ಕೊಡುತ್ತೇನೆ ಎಂದರು.
ನಂತರ ಬಿಜೆಪಿಯ ಈಶ್ವರಪ್ಪ ಹೇಳಿಕೆಗೆ ಸಿಎಂ ತಿರುಗೇಟು ನೀಡಿ,ನಾಟಿ ಕಾರ್ಯವನ್ನು ಮಾಡಿ ಸಿಎಂ ಡ್ರಾಮಾ ಮಾಡ್ತಿದ್ದಾರೆಂದು ಹೇಳಿದ್ದಾರೆ ಆದರೆ ನಾನು ನಾಟಕ ಮಾಡಲು ಇಲ್ಲಿಗೆ ಬಂದಿಲ್ಲ, ಡ್ರಾಮಾ ಮಾಡಲು ಬಂದಿಲ್ಲ ಎಂದರು. ಮಂಡ್ಯದಲ್ಲಿ ಪುಣ್ಯತ್ಮರು 7 ಕ್ಕೆ 7 ಗೆಲ್ಲಿಸಿದ್ದೀರಿ.ನಿಮ್ಮ ಋಣ ನನ್ನ ಮೇಲಿದೆ, ನಿಮಗಾಗಿ ವಿಧಾನಸೌಧದ ಬಾಗಿಲು ಯಾವಾಗಲು ತೆರೆದಿರುತ್ತದೆ ನಾನು ಒಂದು ಪ್ರಾಂತ್ಯಕ್ಕೆ ಸಿಎಂ ಅಲ್ಲ 30 ಜಿಲ್ಲೆಯ ರೈತರನ್ನ ಉಳಿಸುವುದು ನನ್ನ ಕರ್ತವ್ಯ ನನಗೆ ಸಮಯ ಕೊಡಿ ನಿಮ್ಮನ್ನ ಉಳಿಸುತ್ತೇನೆ. ನಾನು ಹೆದರೋದು, ಗೌರವ ಕೊಡೋದು ನಿಮಗೆ ಮಾತ್ರ, ಬೇರ್ಯಾರಿಗೂ ಇಲ್ಲ, ನನಗೆ ಬೆಂಬಲಕೊಟ್ಟ ಮಾಧ್ಯಮದವರಿಗೆ ನನ್ನ ಕೃತಜ್ಞತೆ ಎಂದರು.ನಾನು ನಿಮ್ಮ ಸಹೋದರ, ನನಗೆ ಅವಕಾಶ ಕೊಡಿ ಎಂದರು. ಕಾರ್ಯಕ್ರಮದಲ್ಲಿ ಸಚಿವರು,ಶಾಸಕರು ಹಾಗೂ ನೂರಾರು ರೈತರು ಹಾಜರಿದ್ದರು.