ವಿಜಯಬ್ಯಾಂಕ್ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಕ್ಯಾತನಹಳ್ಳಿ ಗ್ರಾಮದ ಬಡವರು ಉಪಕಸುಬು ಮಾಡಲು ಮತ್ತು ಆರ್ಥಿಕವಾಗಿ ಅಭಿವೃದ್ಧಿ ಆಗಲು ಬಡತನ ,ನಿರುದ್ಯೋಗ ದಿಂದ ಹೊರಬರಲು ಆರ್ ಬಿ ಐ ನಿರ್ದೇಶನದಂತೆ ಭದ್ರತಾ ರಹಿತ ಸಾಲ ಕೊಡಲು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಗ್ರಾಮಸ್ಥರು ವತಿಯಿಂದ ಮಳವಳ್ಳಿ ತಾಲ್ಲೂಕಿನ ಕುಂದೂರು ಗ್ರಾಮದ ವಿಜಯಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಲಾಯಿತು.
ಬ್ಯಾಂಕ್ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಬ್ಯಾಂಕ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾದು ಮಾತನಾಡಿ, ಕ್ಯಾತನಹಳ್ಳಿ ಗ್ರಾಮ ಅತಿ ಹಿಂದುಳಿದಿದ್ದು ಪರಿಶಿಷ್ಟ ಜಾತಿ, ಪಂಗಡ, ಮತ್ತು ಹಿಂದುಳಿದ ಜಾತಿಯ ಜನರೇ ಹೆಚ್ಚಿರುವ ಈ ಗ್ರಾಮದಲ್ಲಿ ಭೂಹೀನರು ಹೆಚ್ಚಿದ್ದು, ಜೀವನೋಪಾಯಕ್ಕೆ ಊರೂರು ಅಲೆಯುವುದು ಸರ್ವೆ ಸಾಮಾನ್ಯವಾಗಿದೆ. ಆದರೆ ಕೇಂದ್ರ ಸರ್ಕಾರದ ಬಡತನ ವನ್ನು ಹೋಗಲಾಡಿಸಿ ಸ್ವಾವಲಂಬನೆ ಜೀವನ ನಡೆಸಬೇಕೆಂಬ ತೀರ್ಮಾನ ಜಾರಿಯಾಗಿದೆ.
ನಿರುದ್ಯೋಗ, ಬಡತನದಿಂದ ಜನರು ತೊಂದರೆಗೆ ಸಿಲುಕಿಕೊಂಡಿದ್ದು, ಇವರಿಗೆ ಈವರೆಗೂ ಯಾವುದೇ ಸೌಲಭ್ಯಗಳು ಸಿಗದೆ ಕಷ್ಟದಲ್ಲಿ ಸಿಕ್ಕಿಕೊಂಡಿದ್ದಾರೆ. ಮತ್ತು ತಮ್ಮ ಬ್ಯಾಂಕಿನಿಂದ ಯಾವುದೇ ಸಾಲ ಸೌಲಭ್ಯಗಳು ಸಿಕ್ಕಿಲ್ಲ ಆದ್ದರಿಂದ ಆರ್.ಬಿ ಐ ತೀರ್ಮಾನದ ಬಡತನವನ್ನು ತೊಡೆದು ಹಾಕಲು ಗ್ರಾಮೀಣ ಕೂಲಿಕಾರರಿಗೆ ಒಂದು ಲಕ್ಷ ರೂ ಗಳವರೆಗೆ ಸಾಲ ಕೊಡಬೇಕೆಂಬ ನಿರ್ದೇಶನವಿದ್ದರೂ ಅದು ಜಾರಿಯಾಗಿಲ್ಲ ಮುದ್ರ ಮತ್ತು ಇತರ ಯೋಜನೆಗಳು ಮರೀಚಿಕೆಯಾಗಿದೆ ಆದುದ್ದರಿಂದ 61 ಕೂಲಿಕಾರರ ಕುಟುಂಬ ಗಳಿಗೆ ಅವರು ಮೇಕೆ, ಕುರಿ, ಕೋಳಿ, ಹಸು,ಎಮ್ಮೆ ಸಾಕಲು ವ್ಯಾಪಾರ ನಡೆಸಿ ಜೀವನ ಸಾಗಿಸಲು ಪ್ರತಿಕುಟುಂಬಕ್ಕೆ ಕನಿಷ್ಷ 60 ಸಾವಿರದಿಂದ ಒಂದುಲಕ್ಷ ರೂ ಗಳವರೆಗೂ ಸಾಲ ಕೊಡಬೇಕೆಂದು ಒತ್ತಾಯಿಸಿದರು. ಇದಲ್ಲದೆ ಗ್ರಾಮೀಣದ ಜನರಿಗೆ ಬ್ಯಾಂಕ್ ಸಾಲ ಸೌಲಭ್ಯ ದ ಬಗ್ಗೆ ಅರಿವಿನ ಕಾರ್ಯಕ್ರಮ ಮೂಡಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾಕಾರರು ಬ್ಯಾಂಕ್ ಮ್ಯಾನೇಜರ್ ಓಂಕಾರ್ ಹೆಗ್ಗಡೆ ರವರಿಗೆ ಮನವಿ ಸಲ್ಲಿಸಿದ್ದರು ಪ್ರತಿಭಟನೆಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಹನುಮೇಶ್, ತಾಲ್ಲೂಕು ಅಧ್ಯಕ್ಷ ಶಿವಮಲ್ಲಯ್ಯ, , ಪಾಪಣ್ಣ, ಕ್ಯಾತನಹಳ್ಳಿ ಮಹದೇವಯ್ಯ, ಮಾದೇಶ ,ಆನಂದ ಸೇರಿದಂತೆ ಮತ್ತಿತ್ತರರು ಇದ್ದರು.