ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷವಾದರೂ ದೇಶದ ಜನರ ಸಮಸ್ಯೆಗಳು ಇನ್ನೂ ಬಗೆಹರಿಯದಿರುವುದು ನೋವಿನ ಸಂಗತಿ ಎಂದು ಶಾಸಕ ಡಾ.ಕೆ.ಅನ್ನದಾನಿ ವಿಷಾದ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷವಾದರೂ ದೇಶದ ಜನರ ಸಮಸ್ಯೆಗಳು ಇನ್ನೂ ಬಗೆಹರಿಯದಿರುವುದು ನೋವಿನ ಸಂಗತಿ ,ಯಾರಿಗೆ ಬಂತು ಎಲ್ಲಿಗೆ ಬಂತ ಸ್ವಾತಂತ್ರ್ಯ ಎನ್ನುವ ಸ್ಥಿತಿಯಲ್ಲಿ ನಾವೆಲ್ಲರೂ ಇದ್ದೇವೆ. ಇಷ್ಠು ವರ್ಷವಾದರೂ ಇನ್ನೂ ಬಡತನ, ಮೂಲಭೂತ ಸೌಕರ್ಯಗಳು ಇನ್ನೂ ಸಿಗುತ್ತಿಲ್ಲ , ರೈತರು ಇನ್ನೂ ನೀರನ್ನು ಬಿಕ್ಷೆ ರೀತಿಯಲ್ಲಿ ಬೇಡವ ಪರಿಸ್ಥಿತಿ ಬಂದಿದೆ ಎಂದರೆ ನಮ್ಮ ಸ್ವಾತಂತ್ರ್ಯ ಎಲ್ಲಿದೆ ಎನ್ನುವ ಪ್ರಶ್ನೆ ಕಾಡುತ್ತದೆ ಎಂದರು. ಇದಕ್ಕೂ ಮುನ್ನ ತಾಲ್ಲೂಕು ಪಂಚಾಯಿತಿ ಮುಂಬಾಗದಿಂದ ಶಾಲಾ ಮಕ್ಕಳು ಸೇರಿದಂತೆ ಭಾರತಾಂಭೆ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಪ್ರಮುಖ ಬೀದಿಗಳ ಮೂಲಕ ಕ್ರೀಡಾಂಗಣಕ್ಕೆ ಕರೆತರಲಾಯಿತು. ನಂತರ ಧ್ವಜಾರೋಹಣ ವನ್ನು ತಹಸೀಲ್ದಾರ್ ದಿನೇಶ್ ಚಂದ್ ನೇರವರಿಸಿದರು.
ಕಾರ್ಯಕ್ರಮವನ್ಜು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್. ವಿಶ್ವಾಸ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಸದಸ್ಯ ರಾದ ಹನುಮಂತ, ಪುರಸಭಾಧ್ಯಕ್ಷ ರಿಯಾಜಿನ್, ಪುರಸಭೆಸದಸ್ಯರುಗಳು, ಜಿ.ಪಂಸದಸ್ಯರು. ತಾ.ಪಂ ಸದಸ್ಯರುಗಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.