ಇತ್ತೀಚಿಗಿನ ಸುದ್ದಿಗಳು
- 27/09/2019 in ಹಾಸನ
- 10/09/2019 in ಮಂಡ್ಯ
- 10/09/2019 in ಹಾಸನ
- 10/09/2019 in ಹಾಸನ
- 09/09/2019 in ರಾಜ್ಯಸುದ್ದಿ
- 09/09/2019 in ಮಂಡ್ಯ
- 04/09/2019 in ರಾಜ್ಯಸುದ್ದಿ
- 04/09/2019 in ರಾಜ್ಯಸುದ್ದಿ
- 04/09/2019 in ಮಂಡ್ಯ
- 03/09/2019 in ರಾಜ್ಯಸುದ್ದಿ
- 03/09/2019 in ರಾಜ್ಯಸುದ್ದಿ
- 03/09/2019 in ರಾಜ್ಯಸುದ್ದಿ
- 03/09/2019 in ಮಂಡ್ಯ
- 03/09/2019 in ಮಂಡ್ಯ
- 03/09/2019 in ಮಂಡ್ಯ
ಸುದ್ದಿಜಾಲ
ರಾಜ್ಯದ ರಾಜಕಾರಣದಲ್ಲಿ ನಡೆಯುತ್ತಿರುವ ಏರುಪೇರುಗಳನ್ನು ನಾನು ತಲೆಕೆಡಿಸಿಕೊಳ್ಳುವುದಿಲ್ಲ ನಮ್ಮ ರಾಷ್ಟ್ರದ ಹಾಗೂ ರಾಜ್ಯದ ನಾಯಕರುಗಳು ನೋಡಿಕೊಳ್ಳುತ್ತಾರೆ ಎಂದು ಮಳವಳ್ಳಿ ಕ್ಷೇತ್ರ ಶಾಸಕ ಡಾ.ಅನ್ನದಾನಿ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ಗುದ್ದಲಿಪೂಜೆ ನೇರವೇರಿಸಿದ ನಂತರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದ ರಾಜಕಾರಣ ನೋಡಿಕೊಳ್ಳಲು ರಾಷ್ಟ್ರದ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು. ಬಿಜೆಪಿ ಪಕ್ಷವೂ ಅಧಿವೇಶನ ಮುನ್ನ ಸರ್ಕಾರವನ್ನು ಉರುಳುತ್ತದೆ ಎಂದು ಹೇಳುತ್ತಿದೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ ಅದಕ್ಕೆ ಬಿಜೆಪಿ ಬಗ್ಗೆ ನನಗೆ ಗೊತ್ತಿಲ್ಲ ಎಂದಷ್ಟೇ ಹೇಳುವ ಮೂಲಕ ಉತ್ತರಿಸಿದ್ದನ್ನು ನೋಡಿದರೆ ಅನುಮಾನ ವ್ಯಕ್ತವಾಗುತ್ತದೆ ಇನ್ನೂ ಇದಕ್ಕೂ ಮುನ್ನ 18 ಲಕ್ಷ ರೂ ವೆಚ್ಚದ ಪಶು ಚಿಕಿತ್ಸಾ ಕೇಂದ್ರದ ಕಟ್ಟಡ ಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕರು ಈ ಭಾಗದ ಜನರು ಇನ್ನೂ ಮುಂದೆ ಒಂದು ಫಸಲು ಮಾತ್ರ ಭತ್ತ ಬೆಳೆಯಬೇಕಾಗುತ್ತದೆ ಈಗಾಗಲೇ ಕೆ.ಆರ್.ಎಸ್ ಅಣೆಕಟ್ಟು ಗೆ ಸಂಬಂಧಿಸಿದಂತೆ ಮೂರುರಾಜ್ಯಗಳ ಸಮಿತಿ ರಚನೆಯಾಗಿದ್ದು ಈಗಾಗಲೇ ನೀರು ಹರಿಸಲು ಬೇರೆ ರಾಜ್ಯಗಳ ಒಪ್ಪಿಗೆ ಬೇಕಾಗುತ್ತದೆ. ಸಮ್ಮುನೆ ಬೆಳೆ ಬೆಳೆಸುತ್ತೇನೆ ಎಂಬ ಕನಸು ಕಾಣಬೇಡಿ ಎಂದರು. ಈಗಾಗಲೇ ಕ್ಷೇತ್ರಕ್ಕೆ ಸಣ್ಣ ನೀರಾವರಿ ಸಚಿವರ ಜೊತೆ ಚರ್ಚೆಮಾಡಿ ಕೆರೆಕಟ್ಟೆಗಳಿಗೆ ನೀರು ಒದಗಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇನ್ನೂ ಕಿರುಗಾವಲು ಸಂತೆಮಾಳದಲ್ಲಿ ಸುಂದರವಾದ ಹಾಗೂ ಮಾದರಿ ಬಸ್ ನಿಲ್ದಾಣ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸ್ಥಾಯಿ ಹಾಗೂ ಶಿಕ್ಷಣ ಸಮಿತಿ ಅಧ್ಯಕ್ಷ ಹಾಗೂ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರವಿ, ಎಸ್ ಸಿ/ಎಸ್ ಡಿ ಅಧ್ಯಕ್ಷ ನಂಜುಂಡುಸ್ವಾಮಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ರೇಖಾಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆ ಎಇಇ ಹೆಚ್.ಎಂ ಮಹದೇವಪ್ಪ, ಸಹಾಯಕ ಇಂಜಿನಿಯರ್ ಸೋಮ , ಆನಂದ್ ಕಲ್ಕುಣಿ ಸೇರಿದಂತೆ ಮತ್ತಿತ್ತರು ಇದ್ದರು
ಅರಣ್ಯ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಅಮಾನುಷವಾಗಿ ಕೊಲೆ. ಮಾಹಿತಿ ನೀಡಲು ಕೋರಿದೆ ಹುಲಿಯೂರು ದುರ್ಗ PSI .
ಕುಣಿಗಲ್: ಕುಣಿಗಲ್ ತಾಲ್ಲೂಕಿನ ಸಂತೆ ಮಾವತ್ತೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹೊಲದ ಬಳಿ ತೆರಳುತ್ತಿದ್ದ ರೈತರು ಬೆಳಿಗ್ಗೆ ಶವ ಬಿದ್ದಿರುವುದನ್ನು ಪೊಲೀಸರಿಗೆ ತಿಳಿಸಿದ್ದಾರೆ .22 ವರ್ಷ ವಯಸ್ಸಿನ ಹುಡುಗಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಅಮಾನುಷವಾಗಿ ಕೊಲೆ ಮಾಡಿದ್ದು ಆಕೆಯ ದೇಹದ ಮೇಲೆ ಎಚ್ ಪಿ ಪೆಟ್ರೋಲ್ ಬಂಕ್ ಎಂದು ಗುರುತು ಇರುವ ಸಮವಸ್ತ್ರದ ಬಟ್ಟೆ ಇದೆ .ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ ಠಾಣೆಗೆ ಮಾಹಿತಿ ನೀಡಲು ಕೋರಿದೆ. PSI ಹುಲಿಯೂರು ದುರ್ಗ .
ವಾಕಿಂಗ್ ಹೋಗುತ್ತಿದ್ದ ಪಾದಚಾರಿಗೆ ಗೂಡ್ಸ್ ಲಾರಿ ಡಿಕ್ಕಿ ಪಾದಚಾರಿ ಸ್ಥಳದಲ್ಲೇ ಸಾವು.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ವಾಕಿಂಗ್ ಹೋಗುತ್ತಿದ್ದ ಪಾದಚಾರಿಗೆ ಹಿಂದಿನಿಂದ ಅತೀ ವೇಗವಾಗಿ ಬಂದ ಗೂಡ್ಸ್ ಲಾರಿಯೊಂದು ಡಿಕ್ಕಿ ಹೊಡದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಮೃತ ಪಟ್ಟಿದ್ದಾರೆ . ಪಟ್ಟಣದ ಕೋಟೆ ನಿವಾಸಿ ರಾಮಚಂದ್ರ(55) ಮೃತಪಟ್ಟ ದುದೈವಿ . ಸಂಜೆ ವೇಳೆಯಲ್ಲಿ ಮೈಸೂರು ಮಳವಳ್ಳಿ ರಸ್ತೆಯಲ್ಲಿ ಶಾಂತಿಕಾಲೇಜು ಕಡೆಗೆ ವಾಕಿಂಗ್ ಹೋಗುತ್ತಿದ್ದಾಗ ಪಾದಚಾರಿ ರಾಮಚಂದ್ರಗೆ ಡಿಕ್ಕಿಹೊಡೆದುಕೊಂಡು ಗೂಡ್ಸ್ ವಾಹನದೊಂದಿಗೆ ಚಾಲಕ ಪರಾರಿ ಯಾಗಿದ್ದಾನೆ .ಈ ಸಂಬಂಧ ಮಳವಳ್ಳಿ ಪಟ್ಟಣದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ವಿದ್ಯಾ ಎಜುಕೇಷನ್ ಟ್ರಸ್ಟ ಹಾಗೂ ತತ್ವ ಪ್ರೀ ಸ್ಕೂಲ್ ವತಿಯಿಂದ ಆರೋಗ್ಯ ವಂತ ಮಗು ಸ್ಪರ್ಧೆ ಮತ್ತು ತತ್ವ ದಿನಾಚರಣೆ ಕಾರ್ಯಕ್ರಮ
ಮಳವಳ್ಳಿ:ಮಳವಳ್ಳಿ ಪಟ್ಟಣದಲ್ಲಿ ವಿದ್ಯಾ ಎಜುಕೇಷನ್ ಟ್ರಸ್ಟ ಹಾಗೂ ತತ್ವ ಪ್ರೀ ಸ್ಕೂಲ್ ವತಿಯಿಂದ ಆರೋಗ್ಯವಂತ ಮಗು ಸ್ಪರ್ಧೆ ಮತ್ತು ತತ್ವ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.ಪಟ್ಟಣದ ಎನ್.ಇ ಎಸ್ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಕ್ಕಳತಜ್ಞ ವೈದ್ಯ ಡಾ.ಮಂಜುನಾಥ ಉದ್ಘಾಟಿಸಿ ಮಾತನಾಡಿ, ಮಗು ಆರೋಗ್ಯ ವಾಗಿರ ಬೇಕಾದರೆ ತಾಯಿಯೂ ಪೌಷ್ಠಿಕಾಂಶದ ಆಹಾರವನ್ನು ಹೇಗೆ ಸೇವಿಸಬೇಕು. ಮಗುವಿಗೆ ಯಾವ ಆಹಾರವನ್ನು ಸೇವಿಸಿದರೆ ಆರೋಗ್ಯವಾಗಿರುತ್ತದೆ ಎಂಬ ಬಗ್ಗೆ ತಿಳಿಸಿಕೊಟ್ಟರು .ಇದೇ ಸಂದರ್ಭದಲ್ಲಿ ವಿದ್ಯಾ ಎಜುಕೇಷನ್ ಟ್ರಸ್ಟ್ ನ ಮುಖ್ಯಸ್ಥೆ ವಿದ್ಯಾಚಂದ್ರಮೋಹನ್ ರವರು ಮಕ್ಕಳನ್ನು ಮಾಡ್ರನ್ ರೀತಿ ತಯಾರು ಮಾಡಬೇಕಾಗಿದೆ. ಎಲ್ಲಾ ಶಾಲೆಗಳಲ್ಲಿಯೂ ಹೊಸಮಾದರಿ ವಿದ್ಯಾಭ್ಯಾಸವನ್ನು ನೀಡಬೇಕು ಜೊತೆಗೆ ದಿನ ನಿತ್ಯದಲ್ಲಿ ಹೇಗೆ ಇರಬೇಕು ಎಂದು ತಿಳಿಸಿಕೊಡಬೇಕು ಎಂದರು ಇದೇ ಸಂದರ್ಭ ದಲ್ಲಿ ತತ್ವ ಶಾಲಾ ಮಕ್ಕಳು ನೃತ್ಯ ಹಾಡುವಮೂಲಕ ರಂಜಿಸಿದರು.
ಕಾರ್ಯಕ್ರಮ ದಲ್ಲಿ ವಿದ್ಯಾಪ್ಯಾರ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರಮೊಹನ್ ಸೇರಿದಂತೆ ಹಲವರು ಇದ್ದರು.
ಚಿರತೆ ದಾಳಿಗೆ ಮೂರನೇ ಬಲಿ ಇನ್ನೂ ಕ್ರಮಕೈಗೊಳ್ಳದ ಅಧಿಕಾರಿಗಳು.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಳ್ಳಿ ಹೋಬಳಿಯ ಬಿಕ್ಕಸಂದ್ರ ಗ್ರಾಮದಲ್ಲಿ ಮತ್ತೆ ಚಿರತೆ ದಾಳಿ. ವಜ್ರೇಶ್ ಎಂಬ ರೈತರಿಗೆ ಸೇರಿದ ಕುರಿಯನ್ನು ರೈತನ ಎದುರೆ ಎತ್ತಿ ಕೊಂಡುಹೋದ ಚಿರತೆ. ಚಿರತೆಯನ್ನು ಕಂಡು ಭಯಭೀತರಾಗಿರುವ ರೈತರು . ನಾಲ್ಕು ದಿನದ ಹಿಂದೆಯಷ್ಟೆ ಅದೇ ಗ್ರಾಮದಲ್ಲಿ ಹಸುವಿನ ಮೇಲೆ ದಾಳಿ ಮಾಡಿದ್ದ ಚಿರತೆ ಆದರೂ ಸಹ ಗಮನಹರಿಸದೇ ನಿರ್ಲಕ್ಷ್ಯ ತೋರುತ್ತಿರುವ ಅರಣ್ಯ ಅಧಿಕಾರಿಗಳನ್ನು ತಾರಟೆಗೆ ತೆಗೊದು ಕೊಂಡ ಗ್ರಾಮಸ್ಥರು. ಕೂಡಲೇ ಬೋನು ಅಳವಡಿಸುವ ಭರವಸೆ ನೀಡಿದ ಅಧಿಕಾರಿಗಳು.
ಇನ್ನಾದರೂ ಅರಣ್ಯಅಧಿಕಾರಿಗಳು ಎಚ್ಚೆತ್ತು ಕೊಳ್ಳತ್ತಾರಾ ಕಾದು ನೋಡ ಬೇಕಿದೆ.
ಅಡಕೆ ಕದಿಯಲು ಬಂದಿದ್ದ ಕಳ್ಳನೊಬ್ಬನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಥಳಿಸಿದಾ ಗ್ರಾಮಸ್ಥರು ಹೊಸಹೊಳಲು ಗ್ರಾಮದ ಚಂದ್ರ ಸಿಕ್ಕಿಬಿದ್ದಿರುವ ಕಳ್ಳ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಅಡಿಕೆ ಕದಿಯುತ್ತಿದ್ದ ಕಳ್ಳನನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದರು.ಹೊಸಹೊಳಲು ಗ್ರಾಮದ ಯುವಕ ಚಂದು(23) ಅಡಿಕೆ ಕದಿಯುವ ವೇಳೆ ಗ್ರಾಮಸ್ಥರಿಗೆ ಸಿಕ್ಕಿಕೊಂಡು, ಕಂಬಕ್ಕೆ ಕಟ್ಟಿಸಿಕೊಂಡವನು. ಜತೆಯಲ್ಲಿದ್ದ ಈತನ ಸ್ನೇಹಿತರು ಗುಂಡ ಮತ್ತು ಹೇಮಂತ್ ಸೇರಿದಂತೆ ಇತರರು ತಪ್ಪಿಸಿಕೊಂಡು ತಲೆಮರಿಸಿಕೊಂಡಿದ್ದಾರೆ.
ಗ್ರಾಮದಲ್ಲಿ ತಡ ರಾತ್ರಿ ಹೊಸಹೊಳಲು ಗ್ರಾಮದ ಚಂದು ತನ್ನ ಸ್ನೇಹಿತರಾದ ಹೇಮಂತ, ಗುಂಡ ಸೇರಿದಂತೆ ಇತರರೊಂದಿಗೆ ಆಫೆ ಆಟೋವನ್ನು ತೆಗೆದುಕೊಂಡು ವಿರೇಶ್ ಎಂಬುವರ ಮನೆಯ ಅಡಿಕೆ ಗೋದಾಮಿನಲ್ಲಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಗೋಧಾಮಿನಲ್ಲಿ ಸದ್ದು ಕೇಳಿಸಿದ ಪರಿಣಾಮ ವೀರೇಶ್ ಮತ್ತು ಕುಟುಂಬ ಸದಸ್ಯರು ಎಚ್ಚರಗೊಂಡು ಬಂದು ಕಳ್ಳತನ ಮಾಡುತ್ತಿದ್ದ ಚಂದುನನ್ನು ಹಿಡಿದಿದ್ದಾರೆ. ಉಳಿದವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಬಂದು ಚಂದುನನ್ನ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಎಸ್ಐ ಆನಂದ್ ಗೌಡ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಪರಾರಿಯಾಗಿರುವ ಕಳ್ಳರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ಹಳೇ ಸ್ಟೇಟ್ ಬ್ಯಾಂಕ್ ಬಳಿಯಿರುವ ನಾಗಣ್ಣ, ಮಾರಿಗುಡಿ ಬಳಿಯಿರುವ ಸತೀಶ್ ಎಂಬುವರ ಮನೆ ಬಳಿಯ ಅಡಿಕೆ ಗೋದಾಮಿನಲ್ಲಿ ಕಳ್ಳತನವಾಗಿತ್ತು. ವಿರೇಶ್ ಮನೆ ಬಳಿ ಕಳ್ಳತನದ ಸಮಯದಲ್ಲಿ ಸಿಕ್ಕಿರುವ ಕಳ್ಳರ ತಂಡವೇ, ಆ ಎರಡು ಕಳ್ಳತನವನ್ನು ಮಾಡಿರುವುದು ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ವಿರೇಶ್ ಮನೆಯಲ್ಲಿ ಸಿಸಿ ಕ್ಯಾಮಾರಾವಿದ್ದು ಪೊಲೀಸರು ಸಿಸಿ ಕ್ಯಾಮಾರವನ್ನು ತನಿಖೆಗೆ ಬಳಸಿಕೊಳ್ಳುತ್ತಿದ್ದಾರೆ. ಈಗ ಚಂದು ಪೊಲೀಸರ ವಶದಲ್ಲಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಗ್ರಾಮದಲ್ಲಿ ಚಂದು ತನ್ನ ಗ್ರಾಮದವರೇ ಆದ ಗುಂಡಾ ಮತ್ತು ಹೇಮಂತ್ ಎಂಬುವರ ಜತೆಗೂಡಿ ಅಡಕೆ ಕದಿಯುತ್ತಿದ್ದ. ಅದರಂತೆ ಚಂದು ಮತ್ತಾತನ ಸಹಚರರು ಎರಡು ಬೈಕ್ಗಳು ಮತ್ತು ಒಂದು ಆಪೆ ಆಟೋದೊಂದಿಗೆ ಶುಕ್ರವಾರ ತಡರಾತ್ರಿ ಬೂಕನಕೆರೆ ಗ್ರಾಮದಲ್ಲಿ ಅಡಕೆ ಕದಿಯಲು ಬಂದಿದ್ದರು. ವೀರೇಶ್ ಎಂಬುವರ ಮನೆಯ ಗೋದಾಮಿನಲ್ಲಿ ಕಳ್ಳತನ ಮಾಡುತ್ತಿದ್ದಾಗ ನಿದ್ದೆಯಿಂದೆದ್ದ ವೀರೇಶ್ ಕಳ್ಳರನ್ನು ಹಿಡಿಯಲು ಮುಂದಾಗಿದ್ದರು. ಆಗ ಚಂದು ಸಿಕ್ಕಿಬಿದ್ದರೆ, ಉಳಿದಿಬ್ಬರು ಕತ್ತಲಲ್ಲಿ ಓಡಿ ಪರಾರಿಯಾದರು ಎನ್ನಲಾಗಿದೆ.
ಈ ತಂಡ ಹಿಂದೆ ಎರಡು ಬಾರಿ ವೀರೇಶ್ ಅವರ ಮನೆಯ ಗೋದಾಮಿನಲ್ಲಿ ಕಳ್ಳತನ ಮಾಡಿತ್ತು. ಆದರೆ, ಮೂರನೇ ಬಾರಿ ಕಳ್ಳತನ ಮಾಡಲು ಬಂದಾಗ ಅದೃಷ್ಟ ಕೈಕೊಟ್ಟಿತು ಎನ್ನಲಾಗಿದೆ. ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಪೊಲೀಸರು ಚಂದುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ವಯಸ್ಕರ ಶಿಕ್ಷಣ ಇಲಾಖೆಯಿಂದ ಪ್ರೇರಕರ ಸಭೆ ಇಓ ಚಂದ್ರಮೌಳಿ ,ತಾಲ್ಲೂಕು ವಯಸ್ಕರ ಶಿಕ್ಷಣಾಧಿಕಾರಿ ಮರುವನಹಳ್ಳಿ ಬಸವರಾಜು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಮಾನ್ಯ ಇಓ ಚಂದ್ರಮೌಳಿ ಅವರ ಅಧ್ಯಕ್ಷತೆಯಲ್ಲಿ ವಯಸ್ಕರ ಶಿಕ್ಷಣ ಇಲಾಖೆಯ ಪ್ರೇರಕರ ಸಭೆ ಬಲ್ಲೇನಹಳ್ಳಿ ಪ್ರೇರಕ ಕುಮಾರ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಮಾತನಾಡಿದ ತಾಲ್ಲೂಕು ವಯಸ್ಕರ ಶಿಕ್ಷಣಾಧಿಕಾರಿ ಮರುವನಹಳ್ಳಿ ಬಸವರಾಜು 2018-19 ನೇ ಸಾಲಿಗೆ ವಯಸ್ಕರ ಶಿಕ್ಷಣ ಇಲಾಖೆಯ ವತಿಯಿಂದ ಡಾ.ನಂಜುಂಡಪ್ಪ ವರದಿ ಹಾಗೂ ಶ್ರೀ ಶಕ್ತಿ ಸಹಾಯ ಸಂಘಗಳ ಮೂಲಕ ಅನಕ್ಷರಸ್ಥರನ್ನು ಗುರುತಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಅನುಷ್ಠಾನ ಮಾಡುವಂತೆ ಸೂಚಿಸಲಾಗಿದೆ.ಅದಕ್ಕೆ ಪೂರಕವಾಗಿ ಸರ್ಕಾರ ಪ್ರೇರಕರುಗಳನ್ನು ನೇಮಕ ಮಾಡಲು ಈಗಾಗಲೇ ಆದೇಶ ನೀಡಿದ್ದು ಫೆಬ್ರವರಿ ಮೊದಲ ವಾರದಲ್ಲಿ ಪ್ರೇರಕರುಗಳನ್ನು ನೇಮಕ ಮಾಡುವ ಸಂಬಂಧ ಅವರ ಬ್ಯಾಂಕ್ ಹೆಸರು,ಖಾತೆ ಸಂಖ್ಯೆ, ಐಎಫ್.ಎಸ್.ಸಿ.ಕೋಡ್ ಮುಂತಾದ ವಿವರಗಳನ್ನು ನೀಡಬೇಕಾಗಿದ್ದು ಸರ್ಕಾರದ ಆದೇಶದ ಸುತ್ತೋಲೆಗಳನ್ನು ಎಲ್ಲಾ ಪ್ರೇರಕರಿಗೆ ವಿತರಿಸಿ ಕಾರ್ಯಕ್ರಮ ಅನುಷ್ಠಾನದ ವಿವರಗಳನ್ನು ತಿಳಿಸಲಾಯಿತು ಹಾಗೂ ಸಕಾಲದಲ್ಲಿ ತಾಲ್ಲೂಕು ಲೋಕ ಶಿಕ್ಷಣ ಕೇಂದ್ರಕ್ಕೆ ಮಾಹಿತಿಗಳನ್ನು ಒದಗಿಸಲು ಮತ್ತು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರೇರಕರಿಗೆ ತಿಳಿಸಲಾಯಿತು.
ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ ಮಾಜಿ ತಾಲ್ಲೂಕು ಸಂಯೋಜಕ ಹಾಗೂ ತಾಲ್ಲೂಕು ಸೇವಾದಳದ ಅದ್ಯಕ್ಷ ಚಂದ್ರಪ್ಪ ಪ್ರೇರಕರ ಸಂಘದ ಅದ್ಯಕ್ಷ ಅಣ್ಣಪ್ಪ ಮೋಹನ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ತಾ.ಪಂ ವ್ಯಾಪ್ತಿಯ ಪ್ರೇರಕರುಗಳು ಹಾಜರಿದ್ದರು.
ವಡ್ಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ವಡ್ಡರಹಳ್ಳಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕರ ಒತ್ತಾಸೆಯೊಂದಿಗೆ ಮಕ್ಕಳ ಸಂತೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿತ್ತು. ಮಕ್ಕಳು ಸಂತೆ ನಡೆಸುವ ಪರಿಕಲ್ಪನೆ, ವ್ಯವಹಾರ ನಡೆಸುವ ರೀತಿಯಿಂದ ಹೇಗೆ ಸ್ವಾವಲಂಬನೆ ಆಗಬಹುದು ಎಂದು ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಿದರು. ಶಿಕ್ಷಕರ ಸಲಹೆಗಳಂತೆ ಮುಗ್ದ ಪುಟಾಣಿ ಮಕ್ಕಳು ತರವಾರಿ ತರಕಾರಿಗಳನ್ನು ಕೊಳ್ಳುವಂತೆ ಬರುತ್ತಿದ್ದ ಗ್ರಾಮಸ್ಥರಿಗೆ ಕೂಗಿ ಮನ ಒಲಿಸುತ್ತಿದ್ದ ಮಕ್ಕಳ ಮುಗ್ದತೆಯು ನಾಗರೀಕರ ಮೆಚ್ಚುಗೆಗೆ ಕಾರಣವಾಯಿತು.
ಮಕ್ಕಳ ಸಂತೆಯಲ್ಲಿ ಎಲ್ಲಾ ವಿಧವಾದ ತರಕಾರಿಗಳು, ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ದೃಶ್ಯಗಳು ನಾಗರೀಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಮಕ್ಕಳ ಸಂತೆ ಕಾರ್ಯಕ್ರಮ ನೇತೃತ್ವವನ್ನು ಶಿಕ್ಷಕಿ ಶ್ವೇತಕುಮಾರಿ ಹಾಗೂ ರಾಜಶೇಖರ್ ವಹಿಸಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.