ಇತ್ತೀಚಿಗಿನ ಸುದ್ದಿಗಳು

ಸುದ್ದಿಜಾಲ

ಸುದ್ದಿಜಾಲ

Rate this item
(0 votes)

  ನಿಗೂಢ ಕಾಯಿಲೆಯಿಂದ  ಕಳೆದ ಒಂದು ವಾರದಿಂದ ಒಂದೇ ಮನೆಯ  25 ಕ್ಕೂ ಹೆಚ್ಚು ಮೇಕೆಗಳ ಸಾವು ಕಂಗಾಲಾಗಿರುವ  ರೈತ ಕುಟುಂಬ.  

ಮಳವಳ್ಳಿ:ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ  ನಾರಾಯಣ ಎಂಬುವವರಿಗೂ ಸೇರಿದ ಮೇಕೆಗಳು ಸಾಯುತ್ತಿದ್ದು. ಪಶು ವೈದ್ಯಾಧಿಕಾರಿಗಳಿಗೆ  ಸವಾಲಾಯಾಗಿರುವ ಕಾಯಿಲೆ ಇದ್ದಾಗಿದ್ದು  ಪ್ರತಿನಿತ್ಯ 2 ರಿಂದ 3 ಮೇಕೆಗಳು ಸಾಯುತ್ತಿದೆ ಇದರಿಂದಲೇ ಜೀವನ ಸಾಗಿಸುತ್ತಿದ್ದ  ಕಳೆದ ವಾರದಿಂದ   ಸಾಕಷ್ಟು ನಷ್ಷವಾಗಿದ್ದು   ಪರಿಹಾರಕ್ಕೆ ಆಗ್ರಹ  ಪಡಿಸಿದ್ದಾರೆ .  ಸ್ಥಳಕ್ಕೆ ಮಂಡ್ಯ ಜಿಲ್ಲಾ ಪಶು ಸಂಗೋಪನೆ ಇಲಾಖೆ  ಉಪನಿರ್ದೇಶಕ.  ಡಾ ಪದ್ಮನಾಭ,  ಮಂಡ್ಯ ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಸಹಾಯಕ ನಿರ್ದೇಶಕ  ಡಾ.ಸಿ ವೀರಭದ್ರಯ್ಯ  ಜಿ.ಪಂ ಸದಸ್ಯೆ ಸುಷ್ಮಾರಾಜು , ತಾ.ಪಂ ಅಧ್ಯಕ್ಷ ನಾಗೇಶ್ , ತಾ.ಪಂಸದಸ್ಯ ಪುಟ್ಟಸ್ವಾಮಿ ಬೇಟಿ  ಪರಿಶೀಲನೆ . ಇದು  ಮೈಕಾಪ್ಲಾಸ್ಮ ಎಂಬ ‌ಕಾಯಿಲೆ ಎಂದು  ದೃಡ ಪಡಿಸಿದ ಉಪ ನಿರ್ದೇಶಕ  ಜಿಲ್ಲೆಯಲ್ಲೇ ಪ್ರಥಮವಾಗಿ ಹಬ್ಬಿದ ಕಾಯಿಲೆ  ಈ ಕಾಯಿಲೆ ಬಂದರೆ ಉಳಿಯುವುದು ಅಸಾಧ್ಯ  ಎಂದ  ಉಪನಿರ್ದೇಶಕ  ಡಾ.ಪದ್ಮನಾಭ  ತಿಳಿಸಿದರು. ಈಗಲೇ ಈ ಕಾಯಿಲೆ ಹರಡದಂತೆ  ಅಗತ್ಯ ಕ್ರಮ ಗೊಳ್ಳಲಾಗುವುದು ಎಂದು ತಿಳಿಸಿದರು ಇನ್ನೂ ಜಿ.ಪಂ ಸದಸ್ಯೆ ಸುಷ್ಮಾ ರಾಜು  ಮಾತನಾಡಿ .ಕೂಡಲೇ  ಪರಿಹಾರ ನೀಡಲು  ಜಿ.ಪಂ ಸಭೆಯಲ್ಲಿ ಚರ್ಚೆ ಮಾಡುವುದಾಗಿ ತಿಳಿಸಿದರು  ಕಂಗಾಲಾಯಾಗಿದ್ದ ರೈತನಿಗೆ  ತಾ.ಪಂ ಅಧ್ಯಕ್ಷ ನಾಗೇಶ. ಸಾಂತ್ವನ ಹೇಳಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿ  ಈ ಕಾಯಿಲೆ ಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು  ಮತ್ತಷ್ಟು ಹರಡದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು ತಾ.ಪಂ ಸದಸ್ಯ ಪುಟ್ಟಸ್ವಾಮಿ  ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿವೇಕಾನಂದ . ಸೇರಿದಂತೆ  ಬೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿದರು.

 

Rate this item
(0 votes)

ಮಳವಳ್ಳಿ ಸಾಲಭಾದೆ ತಾಳಲಾರದೇ ನೇಣು ಬಿಗಿದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕರಲಕಟ್ಟೆ ಗ್ರಾಮದಲ್ಲಿ ನೆಡೆದಿದೆ.

ಮಳವಳ್ಳಿ: ಸಾಲಭಾದೆ ತಾಳಲಾರದೇ ನೇಣು ಬಿಗಿದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕರಲಕಟ್ಟೆ ಗ್ರಾಮದಲ್ಲಿ ನೆಡೆದಿದೆ. ಮುತ್ತುರಾಜು 35 ವರ್ಷ ಮೃತಪಟ್ಟ ದುರ್ದೈವಿ. ಈತ ಸುಮಾರು ನಾಲ್ಕು ಎಕರೆ ಜಮೀನನ್ನು ಹೊಂದಿದ್ದರು. ವ್ಯವಸಾಯ ಮಾಡುವ ಸಲುವಾಗಿ ಭತ್ತ,ಬಾಳೆ, ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಬ್ಯಾಂಕಿನಿಂದ ಮೂರು ಲಕ್ಷ ಸಾಲ ಮಾಡಿ ಬೇಸಾಯ ಮಾಡಿದ್ದರು, ತಾನು ಬೆಳೆದ ಬೆಳೆಗೆ ಬೆಲೆ ಸಿಗಲಿಲ್ಲವಾದ್ದರಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ. ಪಡೆದ ಸಾಲಕ್ಕೆ ಬಡ್ಡಿ ಸಹ ಪಾವತಿಸಲಾಗುತ್ತಿಲ್ಲ, ಎ ಮನನೊಂದು ತಮ್ಮ ಜಮೀನಿನ ಬಳಿ ನೇಣು ಬಿಗಿದು ಸಾವನ್ನಪ್ಪಿದ್ದಾನೆ.ಮೃತರಿಗೆ ತಾಯಿ, ಪತ್ನಿ ಪುಟ್ಟಲಕ್ಷ್ಮಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್‌ಪೆಕ್ಟರ್ ಬಿ.ಎಸ್. ಶಿವರುದ್ರ ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು.

Rate this item
(0 votes)

ಶಿಕ್ಷಣ ಜ್ಞಾನದ ಬೆಳಕಿನ ಶಕ್ತಿ ಶಿಕ್ಷಣಕ್ಕೆ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಶಕ್ತಿಯಿದೆ.ಕ್ಷೇತ್ರದಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು.ಶಾಸಕ ಡಾ.ನಾರಾಯಣಗೌಡ.

ಕೃಷ್ಣರಾಜಪೇಟೆ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ಡಾ.ಕೆ.ಕಾಳೇಗೌಡ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ನೂತನವಾಗಿ ನಿರ್ಮಿಸಿರುವ ಒಂದೂವರೆ ಕೋಟಿ ರೂ ವೆಚ್ಚದ ಹೈಟೆಕ್ ಶಾಲಾ ಕಟ್ಟಡವನ್ನು ಲೋಕಾರ್ಪಣೆ ಮಾಡಿ ನಂತರ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ ಮಲ್ಲಿಗೆಸಿರಿ ಬಿಡುಗಡೆ ಮಾಡಿದ ಶಾಸಕ ನಾರಾಯಣಗೌಡರು. ನಂತರ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳು ಕಡ್ಡಾಯವಾಗಿ ವಿದ್ಯಾವಂತರಾಗಬೇಕು.ಶಿಕ್ಷಣಕ್ಕೆ ಸಾಮಾಜಿಕ ಅಸಮಾನತೆಗಳನ್ನು ಹೊಡೆದೋಡಿಸಿ ಸಮಾನತೆಯ ಸಮಾಜ ನಿರ್ಮಾಣ ಮಾಡುವ ಶಕ್ತಿಯಿಂದ. ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ. ಕ್ಷೇತ್ರದ ಶಾಸಕನಾಗಿ ತಾಲೂಕಿನಲ್ಲಿ ಗುಣಾತ್ಮಕ ಶಿಕ್ಷಣದ ಅನುಷ್ಠಾನಕ್ಕೆ ಒತ್ತು ನೀಡಿದ್ದೇನೆ. ಮಕ್ಕಳು ಶ್ರದ್ಧೆ ಹಾಗೂ ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ ಗುರಿಸಾಧನೆಯತ್ತ ಹೆಜ್ಜೆ ಹಾಕಬೇಕು ಎಂದು.ಶಾಸಕ ನಾರಾಯಣಗೌಡ ಕರೆ ನೀಡಿದರು.

ಜಿಲ್ಲಾ ಪಂಚಾಯತ ಎಂಜಿನಿಯರ್ ಉಪವಿಭಾಗದ ಎಇಇ ಬಸವರಾಜು, ಪ್ರಥಮದರ್ಜೆ ಗುತ್ತಿಗೆದಾರ ಅರಳಕುಪ್ಪೆ ಮೋಹನ್, ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಾ.ಎಸ್.ಕೃಷ್ಣಮೂರ್ತಿ, ಸದಸ್ಯರಾದ ಡಾ.ಕೆ.ಎಸ್.ರಾಜೇಶ್, ಅಗ್ರಹಾರಬಾಚಹಳ್ಳಿ ನಾಗೇಶ್, ಕಾಲೇಜಿನ ಹಿರಿಯ ಉಪನ್ಯಾಸಕರಾದ ಕರೀಗೌಡ, ಮಧುಕರ್, ಅನುರಾಧ, ಚಂದ್ರಶೇಖರ್, ಸತ್ಯನಾರಾಯಣ, ಗ್ರಂಥಪಾಲಕ ಶಂಭೂ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.


 

 

Last modified on 18/02/2019
Rate this item
(0 votes)

ಮಂಡ್ಯ: ಮದ್ದೂರು ತಾಲೂಕಿನ ಗುಡಿಗೇರಿ ಸಮೀಪದ ಮೆಳ್ಳಹಳ್ಳಿಯಲ್ಲಿ ಹುತಾತ್ಮ ಯೋಧ ಗುರು.ಎಚ್ ಅವರ ಅಂತ್ಯಕ್ರಿಯೆ ಜನಸಾಗರದ ನಡುವೆ ನೆರವೇರಿತು. ಅಂತ್ಯ ಕ್ರಿಯೆಗೂ ಮುನ್ನ ಗುರು ಅವರ ನಿವಾಸದಲ್ಲಿ ಕೆಲ ಹೊತ್ತು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ ದುಃಖದ ನಡುವೆ ಪತಿಗೆ ಸೆಲ್ಯೂಟ್ ಹೊಡೆದು ದೇಶಪ್ರೇಮ ಮೆರೆದರು. ಪುತ್ರನ ಪಾರ್ಥಿವ ಶರೀರ ನೋಡಿದ ತಂದೆ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಈ ವೇಳೆಯೇ ಗುರು ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಸಿಆರ್‍ಪಿಎಫ್ ಯೋಧರು ಹಸ್ತಾಂತರ ಮಾಡಿದರು.ಗುಡಿಗೆರೆ ಕಾಲೊನಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಸೇರಿ ಅಂತಿಮ ದರ್ಶನ ಪಡೆದರು.ಮುರುಘಾ ಶ್ರೀಗಳು ಕೂಡ ಗ್ರಾಮಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಸುಮಾರು 15 ನಿಮಿಷದ ಬಳಿಕ ಅಂತ್ಯಕ್ರಿಯೆ ಸ್ಥಳದತ್ತ ಗುರು ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಅಂತ್ಯಕ್ರಿಯೆ ನಡೆಯುವ ಜಾಗದಲ್ಲಿ ಸೇರಿದ್ದ ಸಾವಿರಾರು ಜನರು ವಂದೇ ಮಾತರಂ, ಯೋಧ ಗುರೂಗೆ ಜೈ ಎಂದು ಒಕ್ಕೊರಲಿನ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಅಂತ್ಯಕ್ರಿಯೆ ಜಾಗದಲ್ಲಿ ನಿಂತಿದ್ದ ಜನರನ್ನು ಹಿಂದೆ ಸರಿಸಿ, ಗುರು ಅವರ ಕುಟುಂಬಸ್ಥರಿಗೆ ಹಾಗೂ ಗಣ್ಯರಿ ಭದ್ರತೆ ಒದಗಿಸಿದರು. ಬಳಿಕ ರಾಷ್ಟ್ರಗೀತೆ ಹೇಳುವ ಮೂಲಕ ವೀರ ಯೋಧ ಗುರು ಅವರಿಗೆ ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಿ ಮಡಿವಾಳ ಸಂಪ್ರದಾಯದಂತೆ ರಾತ್ರಿ 8.30ಕ್ಕೆ ಅಂತ್ಯಕ್ರಿಯೆ ನಡೆಸಲಾಯಿತು. ಸಹೋದರ ಮಧು ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. 

ಮಾಜಿ ಸಿಎಂ ಎಸ್.ಎಂ.ಕೃಷ್ಣ, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕೇಂದ್ರ ಸಚಿವ ಸದಾನಂದ ಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶಾಸಕರಾದ ಎಂ.ಶ್ರೀನಿವಾಸ್, ಸುರೇಶ್‍ಗೌಡ, ಎಂಎಲ್‍ಸಿ ಕೆಟಿ.ಶ್ರೀಕಂಠೇಗೌಡ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಗುರು ಅವರಿಗೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಯಲ್ಲಿ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾಗರೋಪಾದಿಯಲ್ಲಿ ಜನರು ಸೇರಿದ್ದರು.

Rate this item
(0 votes)

ಶಹರಿ ಉತ್ಸವ ಜಾಗೃತಿ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷೆ ಉಪಾಧ್ಯಕ್ಷೆಗೆ ಆಹ್ವಾನ ನಿರಾಕರಣೆ ಸದಸ್ಯರ ಆಕ್ರೋಶ.ಮುಖ್ಯಾಧಿಕಾರಿ ಮತ್ತು ಶಹರಿ ರೋಜ್ಗಾರ್ ಯೋಜನಾಧಿಕಾರಿ ತರಾಟೆಗೆ.

ಕೃಷ್ಣರಾಜಪೇಟೆ: ಪಟ್ಟಣದಲ್ಲಿ ಶಹರಿ ರೋಜ್ ಗಾರ್ ಯೋಜನೆಯ ವತಿಯಿಂದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ "ಶಹರಿ ಉತ್ಸವ" ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹಿಳಾ ಅಭಿವೃದ್ಧಿ ಯೋಜನೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.ಪುರಸಭೆಯ ಮುಖ್ಯಾಧಿಕಾರಿ ಮೂರ್ತಿ ಅವರು ಮಹಿಳೆಯರ ಕಾರ್ಯಕ್ರಮಕ್ಕೆ ಮಹಿಳಾ ಅಧ್ಯಕ್ಷ ಉಪಾಧ್ಯಕ್ಷರನ್ನು ಆಹ್ವಾನಿಸದೇ ಮನಸೋ ಇಚ್ಛೆ ಕಾರ್ಯಕ್ರಮ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಸ್ಥಾಯಿಸಮಿತಿ ಅಧ್ಯಕ್ಷ ಡಿ.ಪ್ರೇಮಕುಮಾರ್ ಪ್ರಶ್ನೆ ಮಾಡಿದಾಗಲೂ ಉಡಾಫೆತನದಿಂದ ವರ್ತಿಸಿದ ಮೂರ್ತಿ ಮತ್ತು ಸ್ವರ್ಣಜಯಂತಿ ಯೋಜನೆಯ ಯೋಜನಾಧಿಕಾರಿ ನಾಗೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರದ ಜಿಲ್ಲಾ ಸಂಯೋಜಕ ಯೋಗೇಶ್ ಕಾರ್ಯಕ್ರಮ ನಡೆಸುತ್ತಿರುವುದು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ಈ ಕಾರ್ಯಕ್ಕೆ ಚುನಾಯಿತ ಜನಪ್ರತಿನಿಧಿಗಳನ್ನುಕರೆಯಬೇಕಾಗಿಲ್ಲ ಎಂದಾಗ ಕೆರಳಿದ ಸ್ಥಾಯಿಸಮಿತಿ ಅಧ್ಯಕ್ಷ ಡಿ.ಪ್ರೇಮಕುಮಾರ್ ಪುರಸಭೆ ಕಾರ್ಯಾಲಯದ ವತಿಯಿಂದ ನಡೆಯುತ್ತಿರುವ ಶಹರಿ ಉತ್ಸವ ಕಾರ್ಯಕ್ರಮದ ಆಯೋಜಕರು ಅಧ್ಯಕ್ಷೆ-ಉಪಾಧ್ಯಕ್ಷೆ ಮತ್ತು ಆಡಳಿತ ಮಂಡಳಿ. ಆದ್ದರಿಂದ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಜನಪ್ರತಿನಿಧಿಗಳ ಗಮನಕ್ಕೆ ತಂದು ಜಾರಿಗೊಳಿಸಬೇಕು ಇಲ್ಲದಿದ್ದರೆ ನಿಮ್ಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಕೆ.ಟಿ.ಚಕ್ರಪಾಣಿ, ಕೆ.ಪುರುಷೋತ್ತಮ್, ಕೆ.ಬಿ.ನಂದೀಶ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಉತ್ಸಾಹದಿಂದ ಶಹರೀ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿದ್ದರು.

Rate this item
(0 votes)

ಮಳವಳ್ಳಿ ನಾಡಹಬ್ಬ ಸಿಡಿಹಬ್ಬ ಮೈಸೂರು ದಸರ ನೆನಪಿಸುವ ರೀತಿ ಸಡಗರ ಸಂಭ್ರಮದಿಂದ ನಡೆಯಿತು.

ಮಳವಳ್ಳಿ: ಮಳವಳ್ಳಿ ಪಟ್ಟಣದ ನಾಡಹಬ್ಬವಾದ ಸಿಡಿಹಬ್ಬ ಅದ್ದೂರಿ ಹಾಗೂ ಸಡಗರದಿಂದ ಮೈಸೂರು ದಸರ ನೆನಪಿಸುವ ರೀತಿ ನಡೆಯಿತು. ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ನಡೆದ ಸಿಡಿಹಬ್ಬವೂ ಪಟ್ಟಣದ ಎಲ್ಲಾ ಮುಖ್ಯರಸ್ತೆ ವಿದ್ಯುತ್ ಅಲಂಕಾರ ಮಾಡಿದ್ದು  ನೋಡಲು ಮೈಸೂರು ದಸರಾ ನಡೆಯುತ್ತಿದೆಯೋ ಏನೋ ಎನ್ನುವ ರೀತಿ  ಪಟ್ಟಣ ಕಂಗಲಿಸುತ್ತಿತ್ತು. ಇನ್ನೂ  ಶುಕ್ರವಾರ. ಮಧ್ಯಾಹ್ನ. 2ಗಂಟೆ ಗೆ ತಮ್ಮಡಹಳ್ಳಿ ಗ್ರಾಮ ನಾಡಗೌಡ ಮನೆತನದಿಂದ ಸಿಡಿಹಬ್ಬ ದ ಕೊಂಡಕ್ಕೆ ಮೊದಲ ಸೌದೆ ಕೊಡುವ ಪದ್ದತಿ ಈಗಲೂ ರೂಡಿಯಲ್ಲಿದ್ದು  ಅವರು ಜೋಡಿಎತ್ತುಗಳಲ್ಲಿ ನೋಗ ಕಟ್ಟಿಕೊಂಡು ಅದಕ್ಕೆ ಸೌದೆ ಕಟ್ಟಿ ಪೂಜೆ ಸಲ್ಲಿಸಿ ನಂತರ ಅವರ ಹಿಂದೆ ನೂರಾರು ಜೋಡಿ ಎತ್ತುಗಳಲ್ಲಿ  ತಮ್ಮಡಹಳ್ಳಿ ಯಿಂದ ಅಂಚೆದೊಡ್ಡಿ, ಕ್ಯಾತೇಗೌಡನದೊಡ್ಡಿ, ಮೂಲಕ  ಪೇಟೆ ಬೀದಿಗೆ ತಲುಪಿ ಅಲ್ಲಿ ಸೌದೆ ಒತ್ತು ತಂದು ಜೋಡಿ ಎತ್ತುಗಳಿಗೆ ಪ್ರತಿ ಮನೆಯಲ್ಲೂ ಪೂಜೆ ಸಲ್ಲಿಸುತ್ತಾರೆ ಅಲ್ಲಿಗೆ ಎಲ್ಲಾ ಕೋಮಿನ ಮುಖಂಡರು ಗಳು ಬಂದು ಡೋಳ್ಳು ವಾದ್ಯ ದೊಂದಿಗೆ  ಮೆರವಣಿಗೆ ಮೂಲಕ‌ ಪಟ್ಟಲದಮ್ಮ ದೇವಸ್ಥಾನಕ್ಕೆ ತಲುಪಿ ಅಲ್ಲಿ ಕೊಂಡಕ್ಕೆ ಸಿದ್ದಪಡಿಸಿದ ಹಳ್ಳಕ್ಕೆ ಹಾಕಲಾಗುವುದು.

ನಂತರ ಪೇಟೆ ಬೀದಿಯ ಒಕ್ಕಲಿಗ ಜನಾಂಗದವದರು ರಾತ್ರಿ 8 ಗಂಟೆಗೆ ಮಹಿಳೆಯರು ದಬ್ಬಿಟ್ಟು ಆರತಿಯೊಂದಿಗೆ ಹಾಗೂ ಹರಕೆ ಹೊತ್ತ ಮಹಿಳೆಯರು ಬಾಯಿಬೀಗವನ್ನು ಹಾಕಿಸಿಕೊಂಡು ಮೆರವಣಿಗೆ ಮೂಲಕ ಪಟ್ಟಲದಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದೇ ರೀತಿ ಕ್ರಮವಾಗಿ  ಸಿದ್ದಾರ್ಥನಗರದ ಜನರು  ನಂತರ ಕೀರ್ತಿ ನಗರ , ಗಂಗಾಮಂತ ಜನಾಂಗದವರು, ಅನಂತರ ಆಶೋಕನಗರ ಕೊನೆಗೆ ಬಸವಲಿಂಗಪ್ಪನಗರ  ಜನಾಂಗದವರು  ಸರದಿಯಂತೆ  ಮೆರವಣಿಗೆ ಮೂಲಕ ಪೂಜೆಸಲ್ಲಿಸಿದರು. ಈ ಮಧ್ಯೆ ಗಂಗಾಮತ ಜನಾಂಗದವರು ತೆರಳುವಾಗ ಮನುಷ್ಯನ ಪ್ರತಿಬಿಂಬ ಗೊಂಬೆಯನ್ನು ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ಕೋಟೆಯ ಪಟೇಲ್ ಚಿಣ್ಣೇಗೌಡ ಮನೆಯಮುಂದೆ ನಿಂತಿರುವ  108 ಅಡಿಯ ಒಂದೇ ಮರ ಅದು ತಾಮರಸಮರ ಎಂಬ ಜಾತಿ ಮರಕ್ಕೆ ಸಿಡಿರಣ್ಣ ನನ್ನು ಬಲೂನ್ ನಿಂದ ಸಿಂಗರಸಿ  ಅದು ಕೋಟೆಯ ಬೀದಿಗಳಲ್ಲಿ ಸಂಚಾರ ಮಾಡಿ ನಂತರ ಪೇಟೆ ಹಾಗೂ ಗಂಗಾ ಮತ ಬೀದಿಯ ಮೂಲಕ.  ಸಿಡಿ ಹೊತ್ತ ರಥ ಪಟ್ಟಲದಮ್ಮ ದೇವಸ್ಥಾನದ ಬಳಿ ಬರುತ್ತಿದ್ದಂತೆ  ಹರಕೆ ಹೊತ್ತ ಭಕ್ತರು ಕೊಂಡವನ್ನು ಹಾಯ್ದ ಹರಕೆ ತಿರಿಸಿದರು. 

ಈ ಸಂದರ್ಭದಲ್ಲಿ ಶಾಸಕ ಡಾ.ಅನ್ನದಾನಿ , ತಹಸೀಲ್ದಾರ್ ಚಂದ್ರಮೌಳಿ  ಸೇರಿದಂತೆ ಅನೇಕ ಮುಖಂಡರು ಇದ್ದರು.

 

Last modified on 16/02/2019
Rate this item
(0 votes)

ವೀರ ಯೋಧ ಮಂಡ್ಯದ ಗುರು ಪಾರ್ಥಿವ ಶರೀರ ಬೆಂಗಳೂರಿಗೆ ಆಗಮನ .ಮಂಡ್ಯದ ಹುಟ್ಟೂರು ಗುಡಿಗೆರೆಗೆ ಕೊಂಡೊಯ್ಯಲಾಗುತ್ತದೆ.

ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ಸಂಭವಿಸಿದ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮಂಡ್ಯದ ಗುರು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ತರಲಾಯಿತು.ಗುರು ಅವರ ಶರೀರವನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನವು ಮಧ್ಯಾಹ್ನ ಒಂದು ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಮೊದಲಿಗೆ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿದರು.ಇದಾದ ನಂತರ ಗುರು ಅವರ ಶರೀರವನ್ನು ರಸ್ತೆ ಮಾರ್ಗವಾಗಿ ಮಂಡ್ಯದ ಹುಟ್ಟೂರು ಗುಡಿಗೆರೆಗೆ ಕೊಂಡೊಯ್ಯಲಾಗುತ್ತದೆ. ಸದ್ಯ ಗುಡಿಗೆರೆಯಲ್ಲಿ ಯೋಧ ಗುರು ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ  ಅವರ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆಯ ಗೂಡಿಗೆರೆಯಲ್ಲಿ ಇಂದು ಸಂಜೆ 6.10ಕ್ಕೆ ನಡೆಯಲಿದೆ.ಅಲ್ಲಿನ ಕೆ.ಎಂ. ದೊಡ್ಡಿ ಸಮೀಪದ ಮೆಳ್ಳಹಳ್ಳಿ ಬಳಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 10 ಗುಂಟೆ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪೂರ್ವ-ಪಶ್ಚಿಮಕ್ಕೆ 6 ಅಡಿ, ಉತ್ತರ-ದಕ್ಷಿಣಕ್ಕೆ 9 ಅಡೊ ಅಳತೆಯ ವೇದಿಕೆ ನಿರ್ಮಾಣ ಮಾಡಲಾಗಿದೆ.ಸಿಮೆಂಟ್ ಇಟ್ಟಿಗೆಯಿಂದ ವೇದಿಕೆ ನಿರ್ಮಿಸಲಾಗಿದೆ. ಅದೇ ವೇದಿಕೆಯಲ್ಲಿ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ನೆರವೇರಲಿದೆ. ಹುತಾತ್ಮ ಯೋಧ ಗುರು ಅವರ ಪಾರ್ಥಿವ ಶರೀರಕ್ಕೆ ಸಹೋದರರು ಅಗ್ನಿ ಸ್ಪರ್ಶ ಮಾಡಲಿದ್ದಾರೆ. 


Last modified on 16/02/2019
Rate this item
(0 votes)

ಹುತಾತ್ಮ ಯೋಧ ಗುರು ಪತ್ನಿಗೆ ಸರ್ಕಾರಿ ಉದ್ಯೋಗದ ಭರವಸೆ.ಕುಟುಂಬಕ್ಕೆ ವಿಳಂಬ ಮಾಡದೆ ಜೀವ ವಿಮಾ ಹಣ ನೀಡಿದ ಎಲ್​ಐಸಿ.

 
 ಮಂಡ್ಯ: ನಿನ್ನೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಮಂಡ್ಯದ ಯೋಧ ಗುರು ಅವರ ಪತ್ನಿಗೆ ಸರ್ಕಾರಿ ನೌಕರಿಯ ಭರವಸೆಯನ್ನು ಸಚಿವ ಪುಟ್ಟರಾಜು ನೀಡಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸರ್ಕಾರದ ಜೊತೆ ಮಾತನಾಡಿ ಯೋಧ ಗುರು ಅವರ ಪತ್ನಿ ಕಲಾವತಿ ಅವರಿಗೆ ಸರ್ಕಾರಿ ಉದ್ಯೋಗದ ಜೊತೆಗೆ ಆರ್ಥಿಕ ಸಹಾಯ ಕೊಡಿಸುವುದಾಗಿ ಅವರು ಹೇಳಿದ್ದಾರೆ. ಪುಟ್ಟರಾಜು ಅವರು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ.ಈಗಾಗಲೇ ಜಿಲ್ಲಾಧಿಕಾರಿಗಳು ಗುರು ಅವರ ಹುಟ್ಟೂರು ಮಂಡ್ಯದ ಮದ್ದೂರು ತಾಲ್ಲೂಕಿನ ಗುಡಿಗೆರೆ ಗ್ರಾಮಕ್ಕೆ ತೆರಳಿ ಹುತಾತ್ಮ ಯೋಧನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಮತ್ತು ಗುರು ಮೃತ ದೇಹವನ್ನು ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿದ್ದಾರೆ ಎಂದು ಪುಟ್ಟರಾಜು ಹೇಳಿದ್ದಾರೆ.
 
ಗುರು ಅವರಿಗೆ ಸಂಬಂಧಿಸಿದ ಯಾವ ದಾಖಲೆಗಳನ್ನೂ ಪರಿಶೀಲನೆ ನಡೆಸದೆ, ವಿಳಂಬ ಮಾಡದೇ ಅವರ ಕುಟುಂಬಕ್ಕೆ ಸೇರಬೇಕಾದ ಹಣವನ್ನು ಎಲ್​ಐಸಿ ಪಾವತಿಸಿದೆ.ಹುತಾತ್ಮ ಯೋಧ ಗುರು ನಿವಾಸಕ್ಕೆ ತೆರಳಿದ ಮಂಡ್ಯದ ಎಲ್ಐಸಿ ವ್ಯವಸ್ಥಾಪಕ ನಾಗರಾಜ್ ರಾವ್, ಸಚಿವ ಡಿ.ಸಿ ತಮ್ಮಣ್ಣ ಅವರ ಸಮ್ಮುಖದಲ್ಲಿ ವಿಮಾ ಹಣದ ಚೆಕ್​ ಅನ್ನು ಹಸ್ತಾಂತರ‌ ಮಾಡಿದರು. ಗುರು ಅವರ ವಿಮೆ ಮೊತ್ತ 3,82,000 ರೂಪಾಯಿಗಳ ಚೆಕ್ ಅನ್ನು ಗುರು ತಂದೆ ಹೊನ್ನಯ್ಯ ಅವರಿಗೆ ನೀಡಿದರು.ಯೋಧ ಗುರು ಅವರು ಕಲಾವತಿ ಅವರನ್ನು ಆರು ತಿಂಗಳ ಹಿಂದಷ್ಟೆ ವಿವಾಹವಾಗಿದ್ದರು. ರಜೆ ಹಾಕಿ ಬಂದಿದ್ದ ಅವರು ಫೆಬ್ರವರಿ 10 ರಂದು ಪುನಃ ಸೇವೆಗೆ ತೆರಳಿದ್ದರು. ಆದರೆ ಗುರು ಇನ್ನೆಂದೂ ಮರಳುವುದಿಲ್ಲವೆಂದು ಗೊತ್ತಾದ ಗುರು ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
Page 18 of 42

Visitors Counter

286745
Today
Yesterday
This Week
This Month
Last Month
All days
234
485
719
6187
3051
286745

Your IP: 18.116.112.164
2025-05-12 11:23

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles