ಇತ್ತೀಚಿಗಿನ ಸುದ್ದಿಗಳು

ಸುದ್ದಿಜಾಲ

ಸುದ್ದಿಜಾಲ

Rate this item
(0 votes)

 ಶಾಸಕ ನಾರಾಯಣಗೌಡರ ವಿರುದ್ಧ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರ ಆಕ್ರೋಶ. ಟೀಕೆ ಮಾಡಿದರೆ ತಕ್ಕಪಾಠ ಕಲಿಸುವ ಎಚ್ಚರಿಕೆ ನೀಡಿದ ಜಿ.ಪಂ ಸದಸ್ಯ ಬಿ.ಎಲ್.ದೇವರಾಜು.

ಕೃಷ್ಣರಾಜಪೇಟೆ: ಶಾಸಕ ಡಾ.ನಾರಾಯಣಗೌಡ ಅವರ ಕಾರ್ಯವೈಖರಿ ಕುರಿತು ಜೆಡಿಎಸ್ ಭಿನ್ನಮತೀಯ ಮುಖಂಡರು ಡಿಸಿಸಿ ಬ್ಯಾಂಕಿನ ಮಾಜಿಅಧ್ಯಕ್ಷ, ಜಿ.ಪಂ ಸದಸ್ಯ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿದರೂ ಜೆಡಿಎಸ್ ಅಭ್ಯರ್ಥಿ ನಾರಾಯಣಗೌಡ ಅವರ ಪರವಾಗಿ ನಾನು ಮತ್ತು ನನ್ನ ಬೆಂಬಲಿಗರು ಪ್ರಾಮಾಣಿಕವಾಗಿ ಕೆಲಸ ಮಾಡಿ ಜೆಡಿಎಸ್ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದೇವೆ. ನಾವು ಪಕ್ಷದ್ರೋಹ ಮಾಡಿರುವುದಕ್ಕೆ ಏನಾದರೂ ದಾಖಲೆಗಳಿದ್ದರೆ ನಮ್ಮ ವಿರುದ್ಧ ಪಕ್ಷದ ಮುಖಂಡರಿಗೆ ದೂರು ನೀಡಿ ನಮ್ಮನ್ನು ಹೊರಹಾಕಿಸಲಿ, ಅದನ್ನು ಬಿಟ್ಟು ನಮ್ಮ ವಿರುದ್ಧ ಅಪಪ್ರಚಾರ ಮಾಡಿ ತೇಜೋವಧೆ ಮಾಡಿದರೆ ಶಾಸಕರಿಗೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ. ಕಳೆದ ಬಜೆಟ್ ಅಧಿವೇಶನಕ್ಕೆ ಹಾಜರಾಗದೇ ಅನಾರೋಗ್ಯದ ನಾಟಕವಾಡಿದ್ದು ತಾಲೂಕಿನ ಜನತೆಗೆ ಗೊತ್ತಿದೆ, ಇಷ್ಟಾದರೂ ನಮ್ಮ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಶಾಂತವಾಗಿದ್ದಾರೆ. ನಾರಾಯಣಗೌಡ ರಿಗೆ ತಾಖತ್ತಿದ್ದರೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿ ನಾನೂ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ. ಯಾರ ಬಳಿ ಮತಗಳಿವೆ ಎಂಬುದು ಗೊತ್ತಾಗಲಿದೆ. ಶಾಸಕರು ವಿನಾಕಾರಣ ಟೀಕೆ ಟಿಪ್ಪಣಿ ಮಾಡುವುದನ್ನು ಬಿಟ್ಟು ತಾಲ್ಲೂಕಿನ ಅಭಿವೃದ್ಧಿಗೆ ದುಡಿಯಲಿ, ತಾಲ್ಲೂಕಿನ ಅಭಿವೃದ್ಧಿಗೆ ಯಾರೇ ಅನುದಾನ ತಂದರೂ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುವುದು ನಮ್ಮ ತಾಲೂಕಿನಲ್ಲಿ ಎಂಬ ಸತ್ಯವನ್ನು ಶಾಸಕರು ತಿಳಿಯಬೇಕು ಎಂದು ಕಿವಿಮಾತು ಹೇಳಿದ ದೇವರಾಜು. ಕಳೆದ 40ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಈ ಬಾರಿ ಟಿಕೆಟ್ ವಂಚಿತನಾಗಿದ್ದರೂ ಪಕ್ಷದ್ರೋಹ ಮಾಡದೇ ಪಕ್ಷದ ಅಭ್ಯರ್ಥಿಯ ಗೆಲುವಿಗೆ ದುಡಿದಿದ್ದೇನೆ. ಸಚಿವ ರೇವಣ್ಣ ಅವರು ಕೆ.ಆರ್.ಪೇಟೆಗೆ ಬಂದಿದ್ದಾಗ ಅವರೊಂದಿಗೆ ರೋಡ್ ಷೋನಲ್ಲಿ ಭಾಗವಹಿಸಿದ್ದೇನೆ. ನಾನು ಮತ್ತು ನನ್ನ ಬೆಂಬಲಿಗರ ಊರಿನ ಬೂತ್ ಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಅತೀ ಹೆಚ್ಚು ಮತಗಳು ಬಂದಿವೆ. ನಾವು ಪಕ್ಷದ್ರೋಹ ಮಾಡಿದ್ದರೆ ನಮ್ಮ ಬೂತ್ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚು ಮತಗಳು ಬರುತ್ತಿದ್ದವೇ ಎಂಬುದನ್ನು ಯೋಚಿಸಿ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ದೇವರಾಜು ಗುಟುರು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ನೋಟರಿ ಎಂ.ಎಲ್‌.ಸುರೇಶ್, ಜಿ.ಪಂ ಸದಸ್ಯ ರಾಮದಾಸು, ಮುಖಂಡ ಬಸ್ ಕೃಷ್ಣೇಗೌಡ, ಗದ್ದೇಹೊಸೂರು ದರ್ಶನ್, ಕಂಠಿಕುಮಾರ್, ಆಲಂಬಾಡಿ ಕಾವಲು ರಾಜು, ಹರೀಶ್ ಮತ್ತಿತರರು ಭಾಗವಹಿಸಿದ್ದರು.

Rate this item
(0 votes)

ಡಾ.ಬಿ ಆರ್ ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ವೀರಯೋದ ದಿ.ಹೆಚ್ ಗುರು ಹಾಗೂ 48 ಯೋಧರಿಗೆ ಶ್ರದ್ಧಾಂಜಲಿ ಹಾಗೂ  ಜಮ್ಮು ಕಾಶ್ಮೀರ ಕ್ಕೆ ಸಂವಿಧಾನ ದ 370 ರ ಅಧಿಸೂಚನೆ ಯಲ್ಲಿರುವ ವಿಶೇಷ ಸ್ಥಾನಮಾನ ವನ್ನು ರದ್ದು ಪಡಿಸುವಂತೆ   ಮಳವಳ್ಳಿ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಲಾಯಿತು.       

ಮಳವಳ್ಳಿ:  ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ವೀರಯೋದ ದಿ.ಹೆಚ್ ಗುರು ಹಾಗೂ 48 ಯೋಧರಿಗೆ ಶ್ರದ್ಧಾಂಜಲಿ ಹಾಗೂ  ಜಮ್ಮು ಕಾಶ್ಮೀರ ಕ್ಕೆ ಸಂವಿಧಾನ ದ 370 ರ ಅಧಿಸೂಚನೆ ಯಲ್ಲಿರುವ ವಿಶೇಷ ಸ್ಥಾನಮಾನ ವನ್ನು ರದ್ದು ಪಡಿಸುವಂತೆ  ಮೌನ ಮೆರವಣಿಗೆ ನಡೆಸಲಾಯಿತು. ತಾಲ್ಲೂಕು ಪಂಚಾಯಿತಿ ಯಿಂದ ಹೊರಟ ಪ್ರತಿಭಟನಾಕಾರರು  ಪ್ರಮುಖಬೀದಿಗಳಲ್ಲಿ  ಮೌನ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತಲುಪಿ. ನಂತರ ಬೌದ್ಧ ಮಹಾಸಭಾ ಮುಖಂಡ ಹಾಗೂ ಜಿ.ಪಂ ಮಾಜಿ ಸದಸ್ಯ ಎಂ .ಎನ್ ಜಯರಾಜು ಮಾತನಾಡಿ,  ಕೇಂದ್ರಸರ್ಕಾರವು ಸಂವಿಧಾನದ 370  ಅಧಿಸೂಚನೆ ಯಲ್ಲಿ  ವಿಶೇಷ ಸ್ಥಾನ ಮಾನವನ್ನು ಜಾರಿಗೆ ತರುವಾಗ  ಡಾ.ಬಿ.ಆರ್ ಅಂಬೇಡ್ಕರ್ ರವರು 70 ವರ್ಷಗಳ ಹಿಂದೆಯೇ  ಮುಂದಿನ ದಿನಗಳಲ್ಲಿ ಈ ರೀತಿ ಆಗಬಹುದು ಅದಕ್ಕಾಗಿ ಈ ಅಧಿಸೂಚನೆ ಮಾಡಬಾರದು ಎಂದು ವಿರೋಧಿಸಿದರೂ ಸಹ  ಅಂಬೇಡ್ಕರ್ ಮಾತಿಗೆ   ಬೆಲೆ ಕೊಡದೆ  ಈಗ ಈ ಪರಿಣಾಮ ಎದುರಿಸಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಕೂಡಲೇ  ಸಂವಿಧಾನ 370 ಅಧಿಸೂಚನೆ ಯನ್ನು  ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು  ಶಿರೆಸ್ತೆದ್ದಾರ್  ಚನ್ನವೀರಭದ್ರಯ್ಯ ರವರಿಗೆ  ಮನವಿ ಸಲ್ಲಿಸಿದರು.   

ಪ್ರತಿಭಟನೆಯಲ್ಲಿ ಅಂಬೇಡ್ಕರ್ ವಿಚಾರ ವೇದಿಕೆ  ದುಗ್ಗನಹಳ್ಳಿನಾಗರಾಜು, ಡಾ.ಪ್ರಸಾದ  ಬೌದ್ಧ ಮಹಾಸಭಾದ ಅಧ್ಯಕ್ಷ ರಾಚಯ್ಯ, ಪುರಸಭೆ ಸದಸ್ಯ ಮಹೇಶ್,  ಸಾಹಿತಿ ಮ.ಸಿ ನಾರಾಯಣ, ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿವನಂಜು,  ಮಂಚಯ್ಯ,  ದೊಡ್ಡಬೂವಳ್ಳಿ ನಾಗರಾಜು ಸೇರಿದಂತೆ ಮತ್ತಿತ್ತರು ಇದ್ದರು.

 

Last modified on 22/02/2019

ಮನೆಗೆ ಆಕಸ್ಮಿಕ ಬೆಂಕಿ ಹತ್ತಿದ ಪರಿಣಾಮ ಮನೆ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ 2 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ವಸ್ತುಗಳು ಭಸ್ಮ.

ವಿಜಯಪುರ: ಜಿಲ್ಲೆ ಸಿಂದಗಿ ತಾಲೂಕಿನ ತಾರಾಪುರ ಗ್ರಾಮದ ಸಂಪತಕುಮಾರ ಅಫಜಲಪುರ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ಹತ್ತಿದ ಪರಿಣಾಮ ಮನೆ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಇನ್ನು ಮನೆಯಲ್ಲಿದ್ದ 10 ಸಾವಿರ ನಗದು, 10 ಗ್ರಾಂ ಚಿನ್ನ ಸೇರಿದಂತೆ ವಿವಿಧ ವಸ್ತುಗಳು ಸಂಪೂರ್ಣ ಭಸ್ಮವಾಗಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ವಸ್ತುಗಳು ಭಸ್ಮವಾಗಿವೆ. ಈ ಕುರಿತು ಆಲಮೇಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Rate this item
(0 votes)

ಧರ್ಮದ ಮಾರ್ಗದಿಂದ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿ.ಸಮಾಜದಲ್ಲಿ ತುಳಿತಕ್ಕೊಳಗಾದವರು ಶಿಕ್ಷಣದ ಶಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಧನೆ ಮಾಡಬೇಕು.ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ.

ಕೃಷ್ಣರಾಜಪೇಟೆ: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಲಕ್ಕಮ್ಮ ಲಕ್ಷ್ಮೀದೇವಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ಕನಕಗುರು ಪೀಠದ ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದ ಪುರಿ ಶ್ರೀಗಳ ದಿವ್ಯಸಾನಿಧ್ಯದಲ್ಲಿ  ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ಧರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ಇಂದಿನ ಒತ್ತಡದ ಜೀವನದಲ್ಲಿ ದೇವರು  ಮತ್ತು ಧರ್ಮದ ಹಾದಿಯಲ್ಲಿ ಸಾಗಿದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯಬಹುದು. ಹಾಲುಮತ ಕುರುಬ ಸಮಾಜದ ಬಂಧುಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ವಿದ್ಯಾವಂತರನ್ನಾಗಿ ಮಾಡುವ ಜೊತೆಗೆ ಉನ್ನತ ಶಿಕ್ಷಣವನ್ನು ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಿ ಮುನ್ನಡೆಯುವಂತೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯದ ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ರಾಜ್ಯದ ಯಾವುದೇ ಹಳ್ಳಿಗಳಿಗೆ ಹೋದರೂ ನಮ್ಮ ತಂದೆಯವರನ್ನು ಗೌರವಿಸುತ್ತಾರೆ. ಅವರೂ ರಾಜ್ಯದ ಮುಖ್ಯಮಂತ್ರಿ ಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆಯ ಪ್ರೀತಿ ವಿಶ್ವಾಸ ಕಂಡು ಹೃದಯ ತುಂಬಿ ಬಂದಿದೆ ಎಂದು ಯತೀಂದ್ರ ಅಭಿಮಾನದಿಂದ ಹೇಳಿದರು.

 ಶಾಸಕ ಡಾ.ನಾರಾಯಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಆದಿಹಳ್ಳಿ ಗ್ರಾಮವು ಪುಟ್ಟಗ್ರಾಮವಾಗಿದ್ದರೂ ಇಲ್ಲಿನ ಜನರ ಧಾರ್ಮಿಕ ಜಾಗೃತಿ ಹಾಗೂ ಶ್ರದ್ಧಾ ಭಕ್ತಿಯು ಎಲ್ಲರಿಗೂ ಮಾದರಿಯಾಗಿದೆ.ಗ್ರಾಮದಲ್ಲಿ ಮೂರು ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲಾಗುತ್ತಿದೆ. ಮಳೆಯಾಶ್ರಿತ ಪ್ರದೇಶವಾದ ಸಂತೇಬಾಚಹಳ್ಳಿ ಹೋಬಳಿಯ ಜನರು ಕಷ್ಠಜೀವಿಗಳಾಗಿದ್ದು ದುಡಿಮೆಯನ್ನೇ ದೇವರೆಂದು ನಂಬಿದ್ದಾರೆ. ಅಲ್ಲದೇ ಈ ನೆಲಕ್ಕೆ ಅದ್ಭುತವಾದ ಶಕ್ತಿಯಿದೆ. ಆದ್ದರಿಂದಲೇ ನಾನು ಕ್ಷೇತ್ರದ ಶಾಸಕನಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದೇನೆ. ಹೋಬಳಿಯ ಜನರು ಕಷ್ಟಜೀವಿಗಳಾಗಿದ್ದು. ಇಡೀ ನಾಗರಿಕ ಸಮಾಜವೇ ಮೆಚ್ಚುವಂತಹ ಕೆಲಸ ಮಾಡಿದ್ದಾರೆ ಎಂದು ಶಾಸಕರು ಆದಿಹಳ್ಳಿ ಗ್ರಾಮಸ್ಥರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ  ಕೆ.ಬಿ.ಚಂದ್ರಶೇಖರ್, ಜಿ.ಪಂ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ತಾ.ಪಂ ಉಪಾಧ್ಯಕ್ಷ ಜಾನಕೀರಾಂ, ಸದಸ್ಯ ಮೋಹನ್, ಡಾಲು ರವಿ , ಕೆ.ಶ್ರೀನಿವಾಸ್, ರವೀಂದ್ರಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿರಮೇಶ್ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

Last modified on 22/02/2019
Rate this item
(0 votes)

ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿಯಲ್ಲಿ 1ಕೋಟಿ ರೂಗಳ ವೆಚ್ಚದಲ್ಲಿ ಆಲಂಬಾಡಿ ಗ್ರಾಮದ ಸಮಗ್ರ ಅಭಿವೃದ್ಧಿ. ಶಾಸಕ ನಾರಾಯಣಗೌಡ.

ಕೃಷ್ಣರಾಜಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿಯಲ್ಲಿ ಗ್ರಾಮದ ಸಮಗ್ರವಾದ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ನಾರಾಯಣಗೌಡ ಭೂಮಿಪೂಜೆ ನೆರವೇರಿಸಿದರು.ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ನಮ್ಮೂರಿನಲ್ಲಿ ಬರ ಬಂದಿದ್ದಾಗ ಬಾಲ್ಯದಲ್ಲಿ ನಾನು ಆಲಂಬಾಡಿ ಗ್ರಾಮಕ್ಕೆ ಬಂದು ಜಮೀನನ್ನು ವಾರ ಮಾಡ್ತಿದ್ದೆ.ಆರ್ಕಾ, ದೊಡ್ಡಿ ಭತ್ತವನ್ನು ಬೆಳೆದು ಶ್ರಮದಿಂದ ಊಟ ಮಾಡ್ತಿದ್ದೆವು. ನನಗೂ ಆಲಂಬಾಡಿ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಊರಿನ ಜನರ ಋಣ ತೀರಿಸುವ ಜೊತೆಗೆ ಹುತಾತ್ಮ ವೀರಯೋಧ ಸತೀಶ್ ನೆನಪಿನಲ್ಲಿ ಗ್ರಾಮವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಲಂಬಾಡಿ ಕಾವಲು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್, ತಾ.ಪಂ ಸದಸ್ಯ ವೆಂಕಟೇಶ್, ಮುಖಂಡರಾದ ತುಳಸೀರಾಂ, ಕೃಷ್ಣೇಗೌಡ, ಶ್ರೀಕಂಠಮೂರ್ತಿ ಭೂಸೇನಾ ನಿಗಮದ ಸಹಾಯಕ ಎಂಜಿನಿಯರ್ ಸಿದ್ಧಲಿಂಗಪ್ಪ ಸೇರಿದಂತೆ ಆಲಂಬಾಡಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Last modified on 22/02/2019

ಹಿಮಾಚಲ ಪ್ರದೇಶದಲ್ಲಿ ಹಿಮಪಾತ – ಓರ್ವ ಯೋಧ ಹುತಾತ್ಮ, 5 ಮಂದಿ ಕಣ್ಮರೆ

  ಹಾಡ ಹಗಲೇ ಅಪ್ಪ-ಮಗಳನ್ನ ಕೊಲೆ ಮಾಡಿದ್ದ ಅಳಿಯನನ್ನ 20 ದಿನಗಳ ಬಳಿಕ ಕೊನೆಗೂ ಎಡೆಮುರಿ ಕಟ್ಟುವಲ್ಲಿ ಚನ್ನರಾಯಪಟ್ಟಣ ಪೊಲೀಸ್ರು ಯಶಸ್ವಿಯಾಗಿದ್ದಾರೆ.        

ಹಾಸನ: ಚನ್ನರಾಯಪಟ್ಟಣ ಪಟ್ಟಣ ದಲ್ಲಿ ಜ.30ರಂದು ಸಂಜೆ 4.30ರಲ್ಲಿ ವಿಚ್ಚೇಧನಕ್ಕಾಗಿ ಕರೆಸಿಕೊಂಡಿದ್ದ ನಂದಿಶ್ ಬಳಿಕ ವಕೀಲರ ಕಚೇರಿಗೆ ತರೆಳಿ ವಾಪಸ್ ಹೊರಬರುವ ವೇಳೆ ಪತ್ನಿ ದಿವ್ಯಾ ಮತ್ತು ಮಾವ ಪ್ರಕಾಶ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪರಿಣಾಮ ರಕ್ತಾಸಿಕ್ತವಾಗಿ ಮಾವ ಸ್ಥಳದಲ್ಲಿಯೇ ಮೃತಪಟ್ಟರೇ, ಹೆಚ್ಚಿನ ಚಿಕಿತ್ಸೆ ಸ್ಪಂದಿಸದೇ ಪತ್ನಿ ದಿವ್ಯಾ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ರು.ಪ್ರಕರಣವಾದ ಬಳಿಕ ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ, ಎರಡು ಪ್ರತ್ಯೇಕ ತಂಡಗಳನ್ನ ರಚಿಸಿ ತನಿಖೆ ಆರಂಭಿಸಿದ್ರು. ಕಳೆದ 20 ದಿನಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ನೆನ್ನೆ ಚನ್ನರಾಯಪಟ್ಟಣದ ಉದಯಪುರದ ಫಾಮ್ ಹೌಸ್ ಒಂದರಲ್ಲಿ ಅಡಗಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸ್ರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

ಚಾಕು ತೋರಿಸಿ ಬೆದರಿಸಿದ್ದ ಆರೋಪಿ: ಬಹುತೇಕ ಮಂದಿ ಪೊಲೀಸ್ರ ಲಾಠಿ ಏಟು ತಿನ್ನೋತನಕ ಹಲವು ಕೃತ್ಯವನ್ನ ಮಾಡ್ತಾನೆ ಇರ್ತಾರೆ. ಇವನು ಕೂಡಾ ಮಾಡಿರೋದು ಅದೇ. ಎರಡು ಕೊಲೆ ಮಾಡಿರೋ ನಾನು ಇದುವರೆಗೂ ಪೊಲೀಸ್ ಕೈಗೆ ಸಿಕ್ಕಿಲ್ಲ ಎಂಬ ಧಿಮಾಕಿನಲ್ಲಿ ತಲೆ ಮರೆಸಿಕೊಂಡಿದ್ದು, ಫೆ.16ರಂದು ಹೊಟ್ಟೆಹಸಿವು ತಾಳಲಾರದೇ ಕೈಯಲ್ಲಿ ದುಡ್ಡಿಲ್ಲದೇ ಉದಯಪುರದ ಸಮೀಪವಿರುವ ಮಾಂಸಹಾರಿ ಹೋಟೆಲ್ ಒಂದಕ್ಕೆ ಹೋಗಿ ಮಾಲೀಕರಿಗೆ ಚಾಕು ತೋರಿಸಿ ಬಳಿಕ ಹೆದ್ರಿಸಿ-ಬೆದರಿಸಿ ಮಾಂಸಹಾರಿ ಊಟವನ್ನ ಪಾರ್ಸಲ್ ಮಾಡಿಸಿಕೊಂಡು ಹೋಗಿದ್ದನಂತೆ.

ಮಸ್ತಿಯಲ್ಲಿ ಕಾದು ಕುಳಿತಿದ್ದ ಪೊಲೀಸ್ರು: ಈ ಬಗ್ಗೆ ಹೋಟೇಲ್ ಮಾಲೀಕ ಚನ್ನರಾಯಪಟ್ಟಣದ ಪೊಲೀಸ್ರಿಗೆ ದೂರು ನೀಡಿದ್ರಂತೆ. ತಕ್ಷಣ ದೂರಿಗೆ ಸ್ಪಂದಿಸಿದ ಪೊಲೀಸ್ರು, ನಂದಿಶನ ಪೋಟೋವನ್ನ ತೋರಿಸಿದಾಗ ಮಾಲೀಕ, ಹೌದು ಸಾರ್ ಇವನೇ ಬಂದಿದ್ದು, ನಾವು ಬಾಗಿಲು ಹಾಕುವ ಸಮಯಕ್ಕೆ ಬಂದು, ಚಾಕು ತೋರಿಸಿ ಬೆದರಿಸಿ ಊಟವನ್ನ ಕಟ್ಟಿಸಿಕೊಂಡು ಇತ್ತಕಡೆ ಹೋದ ಅಂತ ಮಾಹಿತಿ ನೀಡಿದ್ರಂತೆ. ಮತ್ತೇ ಇದೇ ಸ್ಥಳಕ್ಕೆ ಬಂದೇ ಬರುತ್ತಾನೆ ಎಂಬ ಸುಳಿವಿನ ಮೇಲೆ ಮಫ್ತಿಯಲ್ಲಿ ಕಾದು ಕುಳಿತಿದ್ರು ಪೊಲೀಸ್ರು. ಬಳಿಕ ಮತ್ತೆ ಮರುದಿನ ಆತ ಹೋಟೆಲ್ ಸಮೀಪ ಬಂದು, ವಾಪಸ್ ಫಾಮ್ ಹೌಸ್ ಗೆ ಹೋಗುವ ವೇಳೆ ಪೊಲೀಸ್ರನ್ನ ನೋಡಿ ಓಡಿ ಹೋಗಲು ಯತ್ನಿಸಿದ್ದಾನೆ. ಆದ್ರೆ ಆತನ ಪ್ರಯತ್ನ ವಿಫಲವಾಗಿ ಕೊನೆಗೆ ಪೊಲೀಸ್ರ ಬಲೆಗೆ ಬಿದ್ದಿದ್ದಾನೆ.

ಮಹಜರು ಮಾಡಲು ಬಂದಾಗ ಛೀ..ಥೂ ಎಂದ ನಾಗರೀಕರು: ಕರುಣೆಯಿಲ್ಲದೇ ಕಟುಕನಂತೆ ಕುರಿ-ಕೋಳಿಯನ್ನ ಕತ್ತರಿಸುವ ಹಾಗೇ ಮಾರಕಾಸ್ತ್ರಗಳಿಂದ ಕೊಲೆಗೈದಿದ್ದ ನಂದಿಶನನ್ನ ಎಡೆಮುರಿ ಕಟ್ಟಿ ಎಳೆದು ತಂದಿದ್ದ ಪೊಲೀಸ್ರು, ನಾಯಿಗೆ ಚೈನಾಕುವಂತೆ, ಈತನ ಕೈಗೆ ಕಬ್ಬಿಣದ ಕೋಳ ತೊಡಿಸಿ ಮಹಜರು ಮಾಡಲು ರಸ್ತೆಯಲ್ಲಿಯೇ ಮೆರವಣಿಗೆ ಮಾಡಿಸಿಯೇ ಕರೆದುಕೊಂಡು ಬಂದು ಕೊಲೆ ಮಾಡಿದ್ದ ಸ್ಥಳದಲ್ಲಿಯೇ ಆರೋಪಿಯನ್ನ ಮಂಡಿಯೂರಿ ಕೂರಿಸಿದ್ದಾರೆ. ಕೊಲೆ ಮಾಡಿದ ಆರೋಪಿಯನ್ನ ನೋಡಿದ ಸ್ಥಳೀಯರು ಸ್ಥಳದಲ್ಲಿಯೇ ಛೀ…ಥೂ…ಅಂತ ಮಂಗಳಾರತಿ ಮಾಡಿದ್ದಾರೆ. ಇಂತಹ ಕೊಲೆಗಡುಕನಿಗೆ ಕಾನೂನಿನಡಿ ತಕ್ಕ ಶಿಕ್ಷೆಯನ್ನ ಕೊಡಿ ಅಂತ ಆಗ್ರಹಿಸಿದ್ದಾರೆ.
 
ವಿಚ್ಚೇಧನ ಕೇಳಿದ್ದೇ ಬಹುದೊಡ್ಡ ಅಪರಾಧವಂತೆ: ಒಟ್ಟಾರೆ, ಪ್ರೀತಿಸಿ ಮದುವೆಯಾಗಿ, ಕೆಲಸ ವರ್ಷಗಳ ಬಳಿಕ ಕುಡಿತಕ್ಕೆ ದಾಸನಾಗಿದ್ದ ನಂದೀಶ್ ಗೆ ಹಲವಾರು ಬಾರಿ ಯಲಿಯೂರು ಗ್ರಾಮದ ಮುಖಂಡರು ಬುದ್ದಿವಾದ ಹೇಳಿದ್ರು ಕೇಳದೇ ಹೆಂಡತಿಗೆ ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ. ಇವನ ಕಿರುಕುಳಕ್ಕೆ ಬೇಸತ್ತು ದಿವ್ಯಾ ನಿನ್ನ ಸಹವಾಸವೇ ಬೇಡ, ನನಗೆ ನಿನ್ನಿಂದ ಮುಕ್ತಿ ಬೇಕು ಎಂದು ವಿಚ್ಚೇಧನಕ್ಕೆ ಬೇಡಿಕೆ ಇಟ್ಟಿದ್ಲು. ಆದ್ರೆ ಇದನ್ನೇ ದೊಡ್ಡ ಅಪರಾಧವೆಂಬಂತೆ ಭಾವಿಸಿದ ನಂದಿಶ್, ಕೊಲೆ ಮಾಡಲು ನಿರ್ಧರಿಸಿ, ಪತ್ನಿ ಮತ್ತು ಮಾವನನ್ನ ಚನ್ನರಾಯಪಟ್ಟಣಕ್ಕೆ ಕರೆಸಿಕೊಂಡು ಬರ್ಬರವಾಗಿ ಕೊಲೆ ಮಾಡಿಬಿಟ್ಟ.
 
ಕುಡಿತ ಏನೆಲ್ಲಾ ಮಾಡಿಬಿಡ್ತು ನೋಡಿ, ತನ್ನ ಹೆಂಡತಿ-ಮಾವನನ್ನ ಕೊಲೆ ಮಾಡಿ, ತಾನೂ ಜೀವಂತ ವಿದ್ರು ಕೂಡಾ ಸಮಾಜದಲ್ಲಿ ತಲೆ ಎತ್ತಿ ಬದುಕಲು ಸಾಧ್ಯವಾಗದೇ ಜೀವನವನ್ನ ಹಾಳುಮಾಡಿಕೊಂಡು ಸದ್ಯ ಜೈಲಿನಲ್ಲಿ ಮುದ್ದೆ ಮುರಿಯಲು ಹೊರಟಿದ್ದಾನೆ. ಪಾಪಾ ಆ ಮುಗ್ದ ಮಕ್ಕಳಿಬ್ಬರು ಇತ್ತ ತಾಯಿಯನ್ನ ಕಳೆದುಕೊಂಡು ಬದುಕಿರುವ ಅಪ್ಪನನ್ನ ಕಳೆದುಕೊಂಡು ಮುಂದೆ ಬದುಕುವುದಾದ್ರು ಹೇಗೆ ಹೇಳಿ…..ಕುಡಿತ ಸಂಸಾರವನ್ನೇ ಹಾಳು ಮಾಡುತ್ತೆ ಅನ್ನೋದಿಕ್ಕೆ ಇದಕ್ಕಿಂತ ಸ್ಪಷ್ಪ ಉದಾಹರಣೆ ಬೇಕಿಲ್ಲ ಅನಿಸುತ್ತೆ ಅಲ್ವಾ….
 

Rate this item
(0 votes)

ಕಿರುಗಾವಲು ಗ್ರಾಮದ ರೈಸ್ ಮಿಲ್ ಯೊಂದರಲ್ಲಿ ಅಕ್ರಮವಾಗಿ  ಇಟ್ಟಿದ್ದ  ಅನ್ನಭಾಗ್ಯದ ಅಕ್ಕಿ ತಹಸೀಲ್ದಾರ್ ದಾಳಿ ನಡೆಸಿ 32 ಕ್ವಿಂಟ್ವಾಲ್ ಅಕ್ಕಿ ವಶ.

ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಗ್ರಾಮದ ರೈಸ್ ಮಿಲ್ ಯೊಂದರಲ್ಲಿ ಅಕ್ರಮವಾಗಿ  ಇಟ್ಟಿದ್ದ  ಅನ್ನಭಾಗ್ಯದ  32 ಕ್ವಿಂಟ್ವಾಲ್ ಅಕ್ಕಿ  ಬೆಳ್ಳಂಬೆಳಿಗ್ಗೆ   ತಹಸೀಲ್ದಾರ್ ಚಂದ್ರಮೌಳಿ ನೇತೃತ್ವದಲ್ಲಿ     ನಿಖರ ಮಾಹಿತಿ ಮೇರೆಗೆ  ದಾಳಿ ನಡೆಸಿ    ಅಕ್ರಮವಾಗಿ ಶೇಖರಿಸಿಟ್ಟದ್ದ  68 ಮೂಟೆಯ 32 ಕ್ವಿಂಟಾಲ್  ವಶಕ್ಕೆ ಪಡೆದುಕೊಂಡಿದ್ದು.  ಮೇಲ್ನೋಟಕ್ಕೆ ಪಡಿತರ ಅಕ್ಕಿಯಾಗಿದ್ದು, ಅಕ್ಕಿ ಪರಿಶೀಲನೆ ನಂತರ ಕ್ರಮ ಕೈಗೊಳ್ಳುವುದಾಗಿ  ತಹಸೀಲ್ದಾರ್ ಚಂದ್ರಮೌಳಿ ತಿಳಿಸಿದ್ದಾರೆ. ನಂತರ ಪಡಿತರ  ಮತ್ತು ಆಹಾರ ಇಲಾಖೆ  ಆಹಾರ ನಿರೀಕ್ಷಕ  ಕೃಷ್ಣಪ್ಪ ರವರು  ಅಕ್ಕಿಯನ್ನು ವಾಹನದೊಂದಿಗೆ  ಪೊಲೀಸರ ವಶಕ್ಕೆ ನೀಡಿ ದೂರು ನೀಡಿದ್ದಾರೆ ಎನ್ನಲಾಗಿದೆ.  ಈ ಸಂಬಂದ  ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಕೊಂಡಿದ್ದಾರೆ.

 

Last modified on 22/02/2019
Page 16 of 42

Visitors Counter

229687
Today
Yesterday
This Week
This Month
Last Month
All days
109
273
695
6088
6704
229687

Your IP: 3.145.177.169
2024-05-21 14:25

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles