ಇತ್ತೀಚಿಗಿನ ಸುದ್ದಿಗಳು

ಸುದ್ದಿಜಾಲ

ಸುದ್ದಿಜಾಲ

Rate this item
(0 votes)

 ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಜಯಘೋಷಗಳ ನಡುವೆ ಅದ್ದೂರಿಯಾಗಿ ನಡೆಯಿತು.

ಕೆ.ಆರ್.ಪೇಟೆ: ತಾಲ್ಲೂಕಿನ ಶರಣಶ್ರದ್ಧಾ ಕೇಂದ್ರವಾದ ಪವಾಡಪುರುಷ ಸ್ವತಂತ್ರ ಸಿದ್ಧಲಿಂಗೇಶ್ವರರು ಜೀವಂತ ಸಮಾಧಿಯಾ ಗದ್ದುಗೆಯಿರುವ ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.ಕೆಂಗೇರಿ ಬಂಡೇಮಠದ ಶ್ರೀ ನಿತ್ಯಾನಂದ ಸ್ವಾಮೀಜಿಗಳು, ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಕಾಪನಹಳ್ಳಿ ಗವಿಮಠದ ನೂತನಶ್ರೀಗಳಾದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿಗಳು ಶ್ರೀ ರಥದಲ್ಲಿ ವಿರಾಜಮಾನರಾಗಿದ್ದ ಸ್ವತಂತ್ರ ಸಿದ್ಧಲಿಂಗೇಶ್ವರರ ಉತ್ಸವಮೂರ್ತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಹಾರನಹಳ್ಳಿ ಕೋಡಿಮಠದ ಡಾ.ಶ್ರೀ ಸದಾಶಿವ ರಾಜೇಂದ್ರ ಶಿವಯೋಗಿಗಳ ಸಹಯೋಗದಲ್ಲಿ ಜಾತ್ರೆಗೆ ಆಗಮಿಸಿದ್ದ ಎಲ್ಲಾ ಭಕ್ತಾಧಿಗಳಿಗೂ ಅನ್ನದಾಸೋಹ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ಶ್ರೀಮಠದ ಭಕ್ತರ ಎರಡು ಗುಂಪುಗಳ ನಡುವಿನ ಭಕ್ತರ ನಡುವೆ ಗಲಾಟೆ ಗದ್ದಲ ನಡೆಯಬಹುದೆನ್ನುವ ಮಾಹಿತಿಯ ಹಿನ್ನೆಲೆಯಲ್ಲಿ ಗ್ರಾಮಾಂತರ ಪೋಲಿಸರು ಬಿಗಿಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.

ತಾಲ್ಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಡ್ಡರಹಳ್ಳಿ ಧನಂಜಯ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್, ರಾಜ್ಯ ಬಿಜೆಪಿ ಮುಖಂಡ ಸಿಂದಘಟ್ಟ ಅರವಿಂದ್, ರಾಜಶ್ವನಿರೀಕ್ಷಕಿ ಚಂದ್ರಕಲಾ, ಗ್ರಾಮಲೆಕ್ಕಾಧಿಕಾರಿ ಕೃಷ್ಣೇಗೌಡ, ಮುಖಂಡರಾದ ಬಳ್ಳೇಕೆರೆ ವರದರಾಜೇಗೌಡ, ವಿ.ಡಿ.ದೇವೇಗೌಡ, ತೋಟಪ್ಪಶೆಟ್ಟಿ, ದೊದ್ದನಕಟ್ಟೆ ಪಾಂಡು, ಮನು-ಶರತ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

 

Last modified on 22/02/2019
Rate this item
(0 votes)

  ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯರನ್ನು ಮಚ್ಚು ಲಾಂಗ್ ಗಳಿಂದ ಕೊಚ್ಚಿಕೊಲೆ 

ಪಾಂಡವಪುರ: ತಾಲ್ಲೂಕಿನ ಚಿಕ್ಕಾಡೆ ಗ್ರಾಮದ ಗ್ರಾಪಂ ಸದಸ್ಯ ತಿಮ್ಮೇಗೌಡ (೫೦) ಕೊಲೆಯಾಗಿರುವ ವ್ಯಕ್ತಿ. ಸೋಮವಾರ ಮಧ್ಯರಾತ್ರಿ ಗ್ರಾಮದಲ್ಲಿ ಗ್ರಾಮದೇವತೆ ದೇವಿರಮ್ಮನ ಹಬ್ಬ ನಡೆಯುತ್ತಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ನಾಲ್ವರು ಕೃತ್ಯ ನಡೆಸಿದ್ದಾರೆ. ಅದೇಗ್ರಾಮದ ದೇವೇಗೌಡ, ಯೋಗೇಗೌಡ, ಪುತ್ರ ಮಧನ್, ಕುಮಾರ್, ಚಂದು ಅವರಿಂದ ಕೃತ್ಯ ನಡೆಸಿರುವ ಆರೋಪಿಗಳು.ಘಟನೆಯಲ್ಲಿ ಎಪಿಎಂಸಿ ಸದಸ್ಯ ಸ್ವಾಮೀಗೌಡ, ಗಿರೀಗೌಡ ಪುತ್ರ ಗೌತಮ್, ವಿನಾಯಕ, ಮಹೇಶ್ ಅವರು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಘಟನೆ.ಮೃತ ವ್ಯಕ್ತಿ ತಿಮ್ಮೇಗೌಡ ದೇಹವನ್ನು ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.ಸ್ಥಳಕ್ಕೆ ಎಸ್.ಪಿ. ಶಿವಪ್ರಕಾಶ್ ದೇವರಾಜು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

Last modified on 22/02/2019
Rate this item
(0 votes)

ಕಿಕ್ಕೇರಿಯ ಸವಿತಾ ಸಮಾಜ ಕಲಾವಿದರ ಸಂಘದ ವತಿಯಿಂದ ಶ್ರೀ ಪುರಂದರದಾಸರು ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವ.

ಕೃಷ್ಣರಾಜಪೇಟೆ: ತಾಲ್ಲೂಕಿನ ಕಿಕ್ಕೇರಿಯ ಸವಿತಾ ಸಮಾಜ ಕಲಾವಿದರ ಸಂಘದ ವತಿಯಿಂದ ಶ್ರೀ ಪುರಂದರದಾಸರು ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವವು ಪಟ್ಟಣದ ಕುರುವಿನಶೆಟ್ಟಿ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಜರುಗಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾದಸ್ವರದೊಂದಿಗೆ ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಯವರ ಬಾವಚಿತ್ರವನ್ನು ಮೆರವಣಿಗೆ ನೆಡೆಯಿತು.ನಂತರ ಸ್ವಾಮಿಜಿಯ ಬಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸ್ಥಳಿಯ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಿದರು.

ಈ‌ ಸಂದರ್ಭದಲ್ಲಿ ಸಂಘದ ಗೌರವದ್ಯಕ್ಷ ಕೃಷ್ಣಮೂರ್ತಿ, ಅದ್ಯಕ್ಷ ಮಂಜು, ಉಪಾದ್ಯಕ್ಷ ಸುರೇಶ್, ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಮನು ಸೇರಿದಂತೆ ನೂರಾರು ಕಲಾವಿಧರು ಭಾಗವಹಿಸಿದ್ದರು.

Last modified on 22/02/2019
Rate this item
(0 votes)

ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವರ ಬ್ರಹ್ಮರಥೋತ್ಸವ. ದೇವರ ಉತ್ಸವಮೂರ್ತಿಗೆ ಹೆಗಲುಕೊಟ್ಟು ಭಕ್ತಿಯ ಪರಾಕಾಷ್ಠೆ ಪ್ರದರ್ಶಿಸಿದ ಶಾಸಕ ಡಾ.ನಾರಾಯಣಗೌಡ. ಮುಗಿಲು ಮುಟ್ಟಿದ ಜಯಘೋಷಗಳು.ಗರುಡಪಕ್ಷಿಯಿಂದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಪ್ರದಕ್ಷಿಣೆ.

ಕೃಷ್ಣರಾಜಪೇಟೆ : ತಾಲ್ಲೂಕಿನ ಪುರಾಣ ಪ್ರಸಿದ್ಧ ಅಕ್ಕಿಹೆಬ್ಬಾಳು ಗ್ರಾಮದ ಗ್ರಾಮದೇವತೆ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯವರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.ಮಧ್ಯಾಹ್ನ 1ಗಂಟೆಗೆ ಸರಿಯಾಗಿ ಗರುಡ ಪಕ್ಷಿಯು ಆಗಸದಲ್ಲಿ ಕಾಣಿಸಿಕೊಂಡು ರಥದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ವಿಪ್ರ ಬಾಂಧವರು ಉಘೇ ನರಸಿಂಹ.ಉಘೇ ಗೋವಿಂದ. ಗೋವಿಂದ ಎಂಬ ಜಯಘೋಷಗಳನ್ನು ಕೂಗುತ್ತಿದ್ದರು. ಭಕ್ತಿಯ ಪರಾಕಾಷ್ಠೆಯು ಮುಗಿಲು ಮುಟ್ಟಿತ್ತು.

ಶಾಸಕ ಡಾ.ನಾರಾಯಣಗೌಡ ಮತ್ತು ತಹಶೀಲ್ದಾರ್ ಎಂ.ಶಿವಮೂರ್ತಿ ಶ್ರೀಲಕ್ಷ್ಮೀನರಸಿಂಹಸ್ವಾಮಿಯವರ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಸದ್ಬಕ್ತರಂತೆ ಹೆಗಲಮೇಲೆ ಹೊತ್ತು ಮೆರೆದಿದ್ದು ವಿಶೇಷವಾಗಿತ್ತು.  ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಶ್ರೀರಥದ ಕಳಸಕ್ಕೆ ಹಣ್ಣು ಜವನವನ್ನು ಸಮರ್ಪಿಸಿ ಕೃತಾರ್ಥರಾದರು.ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಹೇಮಾವತಿ ಹೊನ್ನಾರು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆನಂದೇಗೌಡ ಅವರ ನೇತೃತ್ವದಲ್ಲಿ ಬಿಗಿಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜು, ತಾಲ್ಲೂಕು ಪಂಚಾಯತ ಸದಸ್ಯೆ ವಿನುತಾಸುರೇಶ್, ಮಾಜಿಸದಸ್ಯೆ ರೇಣುಕಾಕಿಟ್ಟು, ಸ್ಥಳೀಯ ಮುಖಂಡರಾದ ಎ.ಆರ್.ರಘು, ಎ.ಎಸ್.ನಾಗರಾಜು, ಜಿ.ಪಂ ಮಾಜಿ ಉಪಾಧ್ಯಕ್ಷೆ ಗೌರಮ್ಮಶ್ರೀನಿವಾಸ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ, ಉದ್ಯೋಗಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕಿ ಮೇನಕಾದೇವಿ ಸೇರಿದಂತೆ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದರು.

Last modified on 22/02/2019
Rate this item
(0 votes)

ಮುಂದಿನ 15 ವರ್ಷದಲ್ಲಿ ಈ ರಾಜ್ಯವೂ ಜಗತ್ತಿನಲ್ಲೇ ಮದ್ಯಪಾನದಲ್ಲಿ ಪ್ರಥಮಸ್ಥಾನಕ್ಕೆ ಬರಲಿದೆ ಎಂದು ವಿಷಾದ ವ್ಯಕ್ತಪಡಿಸಿದ ಮುಡುಕನಪುರ ಮಠ ಷಡಕ್ಷರ ಮಹಾಸ್ವಾಮೀಜಿ .    

ಮಳವಳ್ಳಿ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ  ವೀರಶೈವ ರು ಹಾಗೂ ಸರ್ವಜನಾಂಗದವರು ಸಮಿತಿ ವತಿಯಿಂದ ನಡೆದಾಡುವ ದೇವರು ಕರ್ನಾಟಕ ರತ್ನ, ಪದ್ಮಭೂಷಣ .ತ್ರಿವಿಧ ದಾಸೋಹಿ ಲಿಂಗೈಕ  ಪರಜಪೂಜ್ಯ ಡಾ.ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆ  ಕಾರ್ಯಕ್ರಮವನ್ನು ಕನಕಪುರ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿ.ಶ್ರೀಗಳ ಇನ್ನೂ ನಮ್ಮ ಮನಸ್ಸಿನಲ್ಲಿ ಇದ್ದು ಅವರು ಅಮರರಾಗಿರುತ್ತಾರೆ. ಶ್ರೀಗಳ ಜೊತೆಗೆ ಯೋದ ಗುರು ರವರ ನೆನಪು ಮಾಡಿಕೊಳ್ಳುತ್ತಿರುವುದು ಮಳವಳ್ಳಿ ಜನರ ದೊಡ್ಡಗುಣವನ್ನು ತೋರಿಸುತ್ತದೆ.  ಅದರಲ್ಲೂ ಎಲ್ಲಾ ಸಮಾಜ ಮುಖಂಡರಗಳನ್ನು ಒಂದೇ ವೇದಿಕೆಯಲ್ಲಿ  ಸೇರಿಸಿರುವ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಮುಡುಕನಪುರ ಮಠ ಷಡಕ್ಷರ ಮಹಾಸ್ವಾಮೀಜಿ ನಡೆದಾಡುವ ದೇವರು  ಶ್ರೀಗಳ ಮೇಲೆ  ಗೌರವವಿದ್ದರೆ ರಾಜ್ಯದಲ್ಲಿ ಮದ್ಯಪಾನ ರದ್ದು ಪಡಿಸಿ ಎಂದು ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿಕೊಂಡರು .ಈಗ ರಾಜ್ಯದಲ್ಲಿ ಮದ್ಯಪಾನ ವನ್ನು ಮಾಡುವವರು ಕೇವಲ  ಶೇ 30 ರಷ್ಟು ಇದ್ದರೂ ಮುಂದಿನ ದಿನಗಳಲ್ಲಿ ಶೇ 70 ರಷ್ಠು  ಮಂದಿ  ಮದ್ಯಪಾನಗಳಾಗುವ ಸಾಧ್ಯತೆವಿದೆ ರಾಜ್ಯಸರ್ಕಾರಕ್ಕೆ ಮದ್ಯಪಾನ ದಿಂದ ಆದಾಯ ಹೆಚ್ಚಾಗುತ್ತಿದೆ ಎನ್ನುತ್ತಾರೆ ಇದರಿಂದ ಜನರ ಮೇಲೆ ಯಾವರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು  ಸರ್ಕಾರ  ಅರ್ಥ ಮಾಡಿಕೊಳ್ಳಬೇಕು.    ಮದ್ಯಪಾನ ಮುಕ್ತ ಮಾಡಲು ಮಳವಳ್ಳಿ ಯಿಂದ ಹೋರಾಟ ನಡೆಸುವಂತೆ ಕರೆ ನೀಡಿದರು.       

ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಜನರಿಗೆ ಅನ್ನದಾಸೋಹ  ಹಾಗೂ  ಇದೇ ಸಂದರ್ಭದಲ್ಲಿ ಸಾಲು ಮರನಾಗರಾಜು ರವರ ನೇತೃತ್ವದಲ್ಲಿ   ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ 111  ಸಸಿಗಳನ್ನು  ವೇದಿಕೆಯಲ್ಲಿದ್ದ ಗಣ್ಯರ ಮೂಲಕ ವಿತರಿಸಿದರು. ವೇದಿಕೆಯಲ್ಲಿ ಹಿಂದೂ .ಮುಸ್ಲಿಂ.ಕೈಸ್ತ ಜನಾಂಗದ ಗುರುಗಳು  ಸೇರಿದಂತೆ  ತಾಲ್ಲೂಕಿನ ಮಠಾದೀಶರು ಇದ್ದರು.

 

Last modified on 22/02/2019
Rate this item
(0 votes)

ಅಪ್ಪನಹಳ್ಳಿ ಗ್ರಾಮದ ಯುವಕರ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ.ಶ್ರೀ ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆ ಹಾಗೂ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ.

ಕೆ.ಆರ್.ಪೇಟೆ:ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಪ್ಪನಹಳ್ಳಿ ಗ್ರಾಮದ ಯುವಕರ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ನಡೆದಾಡುವ ದೇವರು ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆ ಹಾಗೂ ಕರ್ನಾಟದ ಒಬ್ಬ ಯೋಧ ಸೇರಿ 42 ಜನ ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು. ಶ್ರೀಗಳ ಭಾವಚಿತ್ರ ಹಾಗೂ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮದ್ದೂರು ತಾಲ್ಲೂಕಿನ ಕೆ.ಎಂ ದೊಡ್ಡಿ ಕಾಲೋನಿಯ ಗುಡಗೇರಿಯ ಗುರು(33)ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಉಗ್ರರ ದಾಳಿಯಿಂದ ವೀರಮರಣವನ್ನಪ್ಪಿ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿ.ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಯಶವಂತ್ ಜಮ್ಮುವಿನ ಪುಲ್ವಾಮಾ ಪ್ರದೇಶದಲ್ಲಿ ಉಗ್ರರ ದಾಳಿಗೆ ಸಿಆರ್‌ಪಿಎಫ್‌ನ 42 ಯೋಧರು ಹುತಾತ್ಮರಾಗಿರುವುದು ಬಹಳ ವಿಷಾದನೀಯ. ಭಾರತ ದೇಶದಲ್ಲಿ ಪುನಃ ಆತಂಕಕಾರಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.ಪಾಪಿ ಪಾಕಿಸ್ತಾನದ ಕೆಟ್ಟ ಕೃತ್ಯವನ್ನು ಖಂಡಿಸಿ ಭಾರತ ಸರ್ಕಾರವು ಉಗ್ರರ ಸಂಹಾರಕ್ಕೆ ಮುಂದಾಗುವ ಮೂಲಕ ಜಮ್ಮುಕಾಶ್ಮೀರದಲ್ಲಿ ಶಾಂತಿ ಕಾಪಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.ನಂತರ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಡೆಸಲಾಯಿತು

 ಕಾರ್ಯಕ್ರಮ ದಲ್ಲಿ ಸಂಘದ ಅಧ್ಯಕ್ಷ ಯಶವಂತ್ .ಲಕ್ಷ್ಮೀಷ್, ಶಿವರಾಜು. ನವೀನ್ .ವಿನಯ್. ಮಂಜು .ನಾಗೇಶ್. ರವಿ. ಪಾಪಣ್ಣ. ಸತ್ಯಣ್ಣ. ಹಾಗೂ ಅಪ್ಪನಹಳ್ಳಿ ಗ್ರಾಮಸ್ಥರು ಮತ್ತಿತರರು ಹಾಜರಿದ್ದರು

Rate this item
(0 votes)

ತಾಲ್ಲೂಕಿನ ಹೆಮ್ಮೆಯ ಮಗನಿಗೆ ಒಲಿದ ಅಂತರ ರಾಷ್ಟ್ರೀಯ ಪ್ರಶಸ್ತಿ.ತಾಲ್ಲೂಕಿನ ಅಂಬಿಗರಹಳ್ಳಿಯ ಡಾ.ಅಂ.ಚಿ. ಸಣ್ಣಸ್ವಾಮಿಗೌಡರಿಗೆ ಲಭಿಸಿದ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ

ಕೃಷ್ಣರಾಜಪೇಟೆ: ತಾಲ್ಲೂಕಿನ ಹೆಮ್ಮೆಯ ಮಗ ಅಂಬಿಗರಹಳ್ಳಿಯ ಡಾ.ಅಂ.ಚಿ. ಸಣ್ಣಸ್ವಾಮಿಗೌಡರಿಗೆ ಲಭಿಸಿದ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ ಲಭಿಸಿದೇ. ಫೆಬ್ರವರಿ 23 ರಂದು ಸಿಂಗಾಪುರ್ ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭ.ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ. ಹಾಗೂ ಪರಮಪೂಜ್ಯ ಶ್ರೀ. ಶ್ರೀ. ಶ್ರೀ. ನಿರ್ಮಲಾನಂದನಾಥ ಸ್ವಾಮಿಗಳಿಂದ ಪ್ರಶಸ್ತಿ ಸ್ವೀಕಾರ.ಸಾಮಾನ್ಯ ರೈತನ ಮಗನಾಗಿ, ಶಿಕ್ಷಕನಾಗಿ ಸಂಘಟನೆಯ ಮೂಲಕ ರಾಜ್ಯ.ರಾಷ್ಟ್ರೀಯ.ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ತಾಲ್ಲೂಕಿನ ಹೆಮ್ಮೆಯ ಪುತ್ರ.ಸರ್ಕಾರಿ ನೌಕರರ ಭವನ.ಸರ್ಕಾರಿ ನೌಕರರಿಗೆ ನಿವೇಶನ ನೀಡಿಕೆ.ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಸ್ಥಾಪನೆ.ಗ್ರಾಜುಯೇಟ್ ಕೋ.ಆಪರೇಟಿವ್ ಸೊಸೈಟಿ ಸ್ಥಾಪನೆ.ಮಂಡ್ಯ ಮತ್ತು ಮೈಸೂರಿನ ಹಲವು ಸಂಘಸಂಸ್ಥೆಗಳ ಮುಖ್ಯಸ್ಥರಾಗಿ. ಸಲಹೆಗಾರರಾಗಿ.ಮಾರ್ಗದರ್ಶಕರಾಗಿ ಸೇವೆನಿವೃತ್ತಿ ನಂತರವೂ ದಣಿವರಿಯದ ದಂಡನಾಯಕ ನಂತೆ ಕಾರ್ಯ ನಿರ್ವಹಣೆ.

 

Rate this item
(0 votes)

 ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ.ಅಭಿವೃದ್ಧಿಯೇ ಮೂಲಮಂತ್ರ.ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ತ್ಯಾಗಕ್ಕೂ ಸಿದ್ಧ .ಶಾಸಕ ಸ್ಥಾನ ತಾಲ್ಲೂಕಿನ ಪ್ರಜ್ಞಾವಂತ ನಾಗರೀಕರು, ಜೆಡಿಎಸ್ ಕಾರ್ಯಕರ್ತರು ನೀಡಿದ ಅಭಿಮಾನದ ಕೊಡುಗೆ.ಶಾಸಕ. ನಾರಾಯಣಗೌಡ.

ಕೃಷ್ಣರಾಜಪೇಟೆ: ತಾಲ್ಲೂಕಿನ ಹಿರಳಹಳ್ಳಿ, ಹಾದನೂರು ಮತ್ತು ಮುರುಕನಹಳ್ಳಿ ಗ್ರಾಮಗಳಲ್ಲಿ ಶಾಸಕ ಡಾ.ನಾರಾಯಣಗೌಡ ಅವರ ನೇತೃತ್ವದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭೂಮಿ ಪೂಜಾ ಕಾರ್ಯಕ್ರಮ. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ದುಡಿಯುತ್ತಿರುವ ನಾನು ತಾಲೂಕನ್ನು ಜಿಲ್ಲೆಯಲ್ಲಿಯೇ ಮಾದರಿಯಾಗಿ ಅಭಿವೃದ್ಧಿಪಡಿಸುವ ಕನಸು ಕಂಡಿದ್ದೇನೆ. ಸರ್ಕಾರವು ಕ್ಷೇತ್ರದ ಅಭಿವೃದ್ಧಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ನೀಡದಿರುವುದು ಬೇಸರ ತಂದಿದೆ. ಆದರೆ ತಾಲ್ಲೂಕಿನ ಜನತೆಯ ಕಲ್ಯಾಣಕ್ಕೆ ಯಾವುದೇವ ಹೋರಾಟಕ್ಕೆ ಬದ್ಧನಿದ್ದೇನೆ.ಕಾಡಿಬೇಡಿಯಾದರೂ ಅಭಿವೃದ್ಧಿಗೆ ಅನುದಾನ ತರುತ್ತೇನೆ ಎಂದು ಶಾಸಕ ನಾರಾಯಣಗೌಡ ಹೇಳಿದರು.

ಭೂಮಿಪೂಜೆ ಕಾರ್ಯಕ್ರಮದಲ್ಲಿ ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ತಾ.ಪಂ ಸದಸ್ಯ ವಿಜಯಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಸ್ವಾಮಿಗೌಡ ಮತ್ತಿತರರು ಭಾಗವಹಿಸಿದ್ದರು.

 

Last modified on 19/02/2019
Page 17 of 42

Visitors Counter

286730
Today
Yesterday
This Week
This Month
Last Month
All days
219
485
704
6172
3051
286730

Your IP: 18.222.183.102
2025-05-12 10:29

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles