ಇತ್ತೀಚಿಗಿನ ಸುದ್ದಿಗಳು

ಸುದ್ದಿಜಾಲ

ಸುದ್ದಿಜಾಲ

ಸರಕಾರಿ ಉರ್ದು ಶಾಲೆಯಲ್ಲಿ ಬೆಂಕಿ ಅವಘಡ ಪುಸ್ತಕಗಳು ಸೈಕಲ್ ಬೆಂಚುಗಳು ಸುಟ್ಟು ಭಸ್ಮ.

ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣದ ಸರಕಾರಿ ಉರ್ದು ಶಾಲೆಯಲ್ಲಿ ಬೆಂಕಿ ಅವಘಡ ಪುಸ್ತಕಗಳು ಸೈಕಲ್ ಬೆಂಚುಗಳು ಸುಟ್ಟು ಭಸ್ಮವಾದ ಘಟನೆ ಇಂಡಿ ಪಟ್ಟಣದಲ್ಲಿ ನಡೆದಿದೆ. ಯಾರೊ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು. ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣದ ಬಸ್ ನಿಲ್ದಾಣದ ಹಿಬಾಗದಲ್ಲಿರುವ ಸರಕಾರಿ ಉರ್ದು ಬಾಲಕರ ಪ್ರಾಥಮಿಕ ಶಾಲೆಯಲ್ಲಿನ ಶಾಲೆಯ ಸ್ಟೊರ್ ರೂಂ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.ಈ ಪ್ರಕರಣವು ಇಂಡಿ ನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

Rate this item
(0 votes)

ಹಳ್ಳದ ಗಣೇಶನ ಗುಡಿಯಲ್ಲಿ  ರಾತ್ರಿ ಕಳ್ಳತನ ಬೆಲೆ ಬಾಳುವ ಗಂಟೆಗಳು,ಹುಂಡಿಯ ಹಣ,ಇತರೆ ವಸ್ತುಗಳ ಕಳ್ಳತನ.

ಮಂಡ್ಯ ಜಿಲ್ಲೆಯ ಸಂತೇಬಾಚಹಳ್ಳಿ ಹೋಬಳಿಯ ಗವಿ ರಂಗನಾಥ ಸ್ವಾಮಿ ಅರಣ್ಯ ಪ್ರದೇಶದಲ್ಲಿ ಇರುವ ಗಣಪತಿ ದೇವಸ್ಥಾನಕ್ಕೆ ರಾತ್ರಿ ಕಳ್ಳರು ಕೈಚಳಕ ತೊರಿ ಗಣೇಶ ನ ಹುಂಡಿ ಮತ್ತು ಗಂಟೆಗಳು ಮತ್ತು ಪೂಜಾ ತಟ್ಟೆ ಮತ್ತಿತರ ವಸ್ತುಗಳನ್ನು ಕದ್ದು ಪರರಾರಿಯಾಗಿದ್ದರೆ ಇ ದೇವಲಯಕ್ಕೆ ಇದಕ್ಕೂ ಮೊದಲು ಒಂದು ಬಾರಿ ಕಳ್ಳತನ ನಡೆದಿತ್ತು. ಈ ದೇವಾಲಯ ಅರಣ್ಯ ಪ್ರದೇಶದಲ್ಲಿ ಇದ್ದು ಜನಸಂದಣಿ ಕಡಿಮೆ ಇರುವುದು ಕಳ್ಳತನ ನೆಡಯುವುದಕ್ಕೆ ಕಾರಣ. ಶ್ರೀ ಗವಿರಂಗನಾಥ ಸ್ವಾಮಿ ದೇವಸ್ಥಾನ ಬಳಿಯು ಕಳ್ಳತನ ನೆಡೆದಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

Last modified on 11/02/2019
Rate this item
(0 votes)

 ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯಲ್ಲಿ ಇಂದು ಸಾಮಾನ್ಯ ಸಭೆ.ಹೊಸ ಕಟ್ಟಡ ಕ್ಕಾಗಿ ಸದಸ್ಯರು ಹಾಗೂ ಸಾರ್ವಜನಿಕರಿಂದ ಆಗ್ರಹ.

ಕೃಷ್ಣರಾಜಪೇಟೆ ತಾಲ್ಲೂಕಿನ‌ ಕಿಕ್ಕೇರಿ ಹೋಬಳಿಯ ಈ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಗೆ ತೊಳಸಿ, ಮಾದಿಹಳ್ಳಿ, ಬಸವನಹಳ್ಳಿ, ಬೂವನಹಳ್ಳಿ ಮರಿನಹೊಸರು, ಊಗಿನಹಳ್ಳಿ, ಬಸವನಹಳ್ಳಿ ಗಂಗೇನಹಳ್ಳಿ, ವಡರಳ್ಳಿ, ಇನ್ನೂ ಅಲವು ಗ್ರಾಮಗಳು ಸೇರುತ್ತವೆ. ಗ್ರಾಮ ಪಂಚಾಯತಿಯಲ್ಲಿ ಒಟ್ಟು 16 ಸದಸ್ಯರು ಇದ್ದು  ಇಂದು ನಿಗದಿಯಾದ ಸಾಮಾನ್ಯ ಸಭೆಯಲ್ಲಿ ಕೂರಲು ಜಾಗವಿಲ್ಲದೆ ನಿಂತು ಸಭೆಯಲ್ಲಿ ಪಾಲ್ಗೊಂಡ ಸದಸ್ಯರು ಮಾತನಾಡಿ ಸಭೆಯಲ್ಲಿ ಕೂರಲು ಜಾಗವಿಲ್ಲದೆ ನಿಂತು ಸಭೆ ನೆಡೆಸುವ ಸಂದರ್ಭ ಎದುರಾಗಿದೆ.ಕೂಡಲೇ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು  ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಮನವಿ ಮಾಡಿದರು.ಸಭೆಗೆ ಬಂದಿದ್ದಾ ಗ್ರಾಮಸ್ಥರು ಸದಸ್ಯರಿಗೆ ಜಾಗವಿಲ್ಲ ಇನ್ಯ ಸಾಮಾನ್ಯ ಜನಕ್ಕೆ ಜಾಗವಿನ್ನೆಲ್ಲಿ ಎಂಬ ಮಾತು ಕೇಳಿಬಂತು.

 

Rate this item
(0 votes)

ಮಳವಳ್ಳಿ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಮಳವಳ್ಳಿ ತಾಲ್ಲೂಕು ಅಧ್ಯಕ್ಷರಾಗಿ ಕುಂದೂರುಮೂರ್ತಿರವರು  115    ಮತಗಳ ಅಂತರದಿಂದ ಗೆಲ್ಲುವ ಸಾಧಿಸಿದ್ದಾರೆ. 

 ಮಳವಳ್ಳಿ: ರಾಜ್ಯದ ಅಖಿಲಭಾರತ ವೀರಶೈವ ಮಹಾಸಭಾ ರಾಜ್ಯ ಸಮಿತಿಯೂ ತಾಲ್ಲೂಕು ಮಟ್ಟದ  ಅಧ್ಯಕ್ಷರು ಹಾಗೂ 20 ಕಾರ್ಯನಿರ್ವಾಹಕ ಸದಸ್ಯರ ಆಯ್ಕೆಗಾಗಿ  ಚುನಾವಣೆಯನ್ನು ಫೆಬ್ರವರಿ 10 ರಂದು ನಿಗಧಿ ಮಾಡಿದ್ದರು. ಈ ಹಿನ್ನಲೆಯಲ್ಲಿ   ಕಾರ್ಯನಿರ್ವಾಹಕ ಸದಸ್ಯರು ಅವಿರೋಧವಾಗಿ ಹೋಬಳಿವಾರು 20 ಸದಸ್ಯರನ್ನು ಆಯ್ಕೆ ಮಾಡಲಾಯಿತು  ಅಧ್ಯಕ್ಷರ ಆಯ್ಕೆಯಲ್ಲಿ  ಒಮ್ಮತ ಬಾರದ ಕಾರಣ. ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟಿತು. ಈ ಚುನಾವಣೆಯೂ  ವೀರಶೈವ ಜನಾಂಗದ ಚುನಾವಣೆಯಾದರೂ ಕಾಂಗ್ರೆಸ್  ಹಾಗೂ ಜೆಡಿಎಸ್ ಪಕ್ಷ ವಾಗಿ ಮಾರ್ಪಾಡಾಗಿ ಸ್ಪರ್ದೆ ನಡೆಯಿತು  ಕಾಂಗ್ರೆಸ್‌ ಬೆಂಬಲಿತರಾಗಿ ಕುಂದೂರು ಮೂರ್ತಿ ಹಾಗೂ ಜೆಡಿಎಸ್ ಬೆಂಬಲಿತರಾಗಿ ಚಿಕ್ಕಮೂಲಗೂಡು ಪುಟ್ಟಬುದ್ದಿ ರವರು ಸ್ಪರ್ಧೆ ನಡೆಯಿತು.  ಅಂತೆಯೇ ಇಂದು ನಿಗಧಿಯಂತೆ ಚುನಾವಣೆ ನಡೆಯಿತು  ಒಟ್ಟು 875 ಸದಸ್ಯರಿದ್ದು ಬೆಳಿಗ್ಗೆ 8 ಗಂಟೆಯಿಂದಲೇ  ವಿಧಾನಸಭಾ ಚುನಾವಣಾ ರೀತಿ ಈ ಚುನಾವಣೆ ಬಿರುಸಿನಿಂದ  ಸರದಿ ಸಾಲಿನಲ್ಲಿ ನಿಂತು  ಸದಸ್ಯರು ಅದರಲ್ಲೂ ಬಿಜಿಪುರ ಹೊರಮಠದ ಚಂದ್ರಶೇಖರಸ್ವಾಮಿಜೀ, ಹಾಗೂ ಸರಗೂರು ಮಠದ ಶ್ರೀಬಸವರಾಜೇಂದ್ರಸ್ವಾಮಿಗಳ ಸಹ  ಮತದಾನ ಮಾಡಿದರು.ಕೊನೆಯಲ್ಲಿ 875 ಮತ ಗಳ ಪೈಕಿ  670 ಮಂದಿ ಮತ ಚಲಾಯಿಸಿದ್ದರು ಅದರಲ್ಲಿ 11 ಮತ ತಿರಸ್ಕಾರವಾಗಿದ್ದು ಉಳಿದ 659 ಮತಗಳಲ್ಲಿ  387 ಮತಗಳನ್ನು ಕುಂದೂರು ಮೂರ್ತಿ ಪಡೆದರೆ  ಚಿಕ್ಕಮೂಲಗೂಡು ಪುಟ್ಟಬುದ್ದಿ 272 ಮತಗಳನ್ನುಪಡೆದಿದ್ದು  ಕುಂದೂರುಮೂರ್ತಿ ರವರು 115 ಮತಗಳ ಅಂತರದಿಂದ ಗೆಲವು ಸಾಧಿಸಿದರು.ಗೆಲುವು ಸಾಧಿಸಿದ ಕುಂದೂರು ಮೂರ್ತಿಗೆ  ವೀರಶೈವ ಮುಖಂಡರುಗಳು  ಇದೇ ಸಂದರ್ಭದಲ್ಲಿ  ಅಭಿನಂದಿಸಿದರು.

Rate this item
(0 votes)

ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಂಸ್ಥಾನ ಪೀಠದ ಶ್ರೀ ಶಂಕರ ಬಸವೇಶ್ವರಸ್ವಾಮಿ ದೇವಾಲಯ ಶಿವಾಚಾರ್ಯಸ್ವಾಮಿಗಳವರ ನೇತೃತ್ವದಲ್ಲಿ ಲೋಕಾರ್ಪಣೆ.

ಮಳವಳ್ಳಿ: ಮಳವಳ್ಳಿ ಪಟ್ಟಣದ ಕೋಟೆಯ ತ್ಯಾಗರಾಜ ರಸ್ತೆಯಲ್ಲಿರುವ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಂಸ್ಥಾನ ಪೀಠದ ಶಾಖಾ ಮಠವಾದ ಶ್ರೀ ಶಂಕರ ಮಠದ ಆವರಣದಲ್ಲಿ ಪುನರುಜ್ಜೀವನಗೊಳಿಸಿರುವ ಶ್ರೀ ಶಂಕರ ಬಸವೇಶ್ವರಸ್ವಾಮಿ ದೇವಾಲಯವನ್ನು ಮತ್ತು ಭಕ್ತ ಮಹಾಶಯರ ಹಾಗೂ ದಾನಿಗಳ ಸಹಕಾರದೊಂದಿಗೆ ನೂತನವಾಗಿ ನಿರ್ಮಾಣಗೊಂಡಿರುವ ಶಂಕರ ಮಠದ ಕಟ್ಟಡವನ್ನು ಧನಗೂರು ಮಠದ ಶ್ರೀ ಷ ಬ್ರ ಶ್ರೀ ಮುಮ್ಮಡಿ ಷಡಕ್ಷರದೇಶಿಕೇಂದ್ರ ಶಿವಾಚಾರ್ಯಸ್ವಾಮಿಗಳವರ ನೇತೃತ್ವದಲ್ಲಿ ಲೋಕಾರ್ಪಣೆ ಮಾಡಲಾಯಿತು. ಇದಲ್ಲದೆ ಶಂಕರ ಮಠದ ಆವರಣದಲ್ಲಿ ಹೋಮಹವನ‌ವನ್ನು ನಡೆಸಲಾಯಿತು ಪ್ರಾತ:ಕಾಲ ಮೂರ್ತಿ ಪ್ರತಿಷ್ಠಾಪನೆ ಕಲಶಾರೋಹಣ ಕಾರ್ಯಕ್ರಮ‌ನಡೆಸಲಾಯಿತು ಕೆ.ಎಂ ದೊಡ್ಡಿ ಶಿವಪಾರ್ವತಿ ಮಹಿಳೆಯರ ತಂಡದಿಂಧ ಭಜನಾ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮ ದಲ್ಲಿ ನೂರಾರು ಭಕ್ತರು ಆಗಮಿಸಿ ದೇವಾಲಯದಲ್ಲಿ ಪೂಜೆಸಲ್ಲಿಸಿದರು ಆಗಮಿಸಿದ ಭಕ್ತರಿಗೆ ಮಠವತಿಯಿಂದ ಪ್ರಸಾದವಿನಿಯೋಗ ಮಾಡಲಾಗಿತ್ತು.

 

 ಸಿಲಿಕಾನ್ ಸಿಟಿ ಬೆಂಗಳೂರಿಗೆ ಈ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಬಿಸಿಲ ಬೇಗೆಯಿಂದ ಬಸವಳಿದಿದ್ದ ಇಳೆಗೆ ಸಂಜೆ 5 ಗಂಟೆ ವೇಳೆಗೆ ತಂಪೆರೆದ ಮಳೆರಾಯ.ನಗರದ ಹಲವೆಡೆ ಧರೆಗುರುಳಿದ ಮರಗಳು. 

ಬೆಂಗಳೂರು: ನಗರದ ಮೂಡಲಪಾಳ್ಯ, ನಾಗರಬಾವಿ, ಬನಶಂಕರಿ, ರಾಜಾಜಿನಗರ, ಮಾರ್ಕೆಟ್, ಮೆಜೆಸ್ಟಿಕ್, ಮಲ್ಲೇಶ್ವರಂ, ಜಯನಗರ, ಕಂಠೀರವ ಸ್ಟುಡಿಯೋ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಸಂಜೆಯಿಂದ ಸಣ್ಣಗೆ ಮಳೆಯಾಗಿದ್ದು, ಕೆಲ ಭಾಗದಲ್ಲಿ ಭಾರೀ ಮಳೆ ಕೂಡ ಸುರಿದಿದೆ. ಈ ಮೂಲಕ ವರ್ಷದ ಮೊದಲ ವರ್ಷಧಾರೆಗೆ ಜನ ಹರ್ಷಿತರಾಗಿದ್ದಾರೆ.ನಗರದ ಹಲವೆಡೆ ವರುಣನ ಆರ್ಭಟಕ್ಕೆ ಮರಗಳು ಧರೆಗುರುಳಿವೆ. ಹೊಸೂರು ರಸ್ತೆಯ ನಿಮಾನ್ಸ್ ಆಸ್ಪತ್ರೆ, ಬಸವನಗುಡಿಯ ಬಲ್ ಟೆಂಪಲ್, ರಾಜಾಜಿನಗರದ ಎಂ.ಇ ಪಾಲಿಟೆಕ್ನಿಕ್ ಕಾಲೇಜು‌ ಬಳಿ ಮರಗಳು ಧರೆಗುರುಳಿವೆ. ಇನ್ನು ಫ್ರೀಡಂ ಪಾರ್ಕ್, ಗಾಂಧಿನಗರದಲ್ಲಿ ಮರ ಬಿದ್ದು ಒಂದು ಕಾರ್ 4 ಬೈಕ್ ಜಖಂ ಆಗಿವೆ.ಕಳೆದೆರಡು ದಿನಗಳಿಂದ ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ‌ಇಂದು ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಆದರೆ ಸಂಜೆ ವೇಳೆಗೆ ಮಳೆಹನಿಗಳು ಧರೆಗಿಳಿದು ಇಳೆಯನ್ನು ತಂಪಾಗಿಸಿದೆ. ಗುಡುಗು ಸಹಿತ ಮಳೆಯಾಗುತ್ತಿದ್ದು ಮಳೆಯ ಪ್ರಮಾಣ ಹೆಚ್ಚಿದರೆ ಸಂಚಾರ ದಟ್ಟಣೆ ನಿರ್ಮಾಣವಾಗುವ ಸಾಧ್ಯತೆ ಇದೆ.ವಾತಾವರಣದಲ್ಲಿ ಗಾಳಿಯ ಒತ್ತಡ (ಟ್ರಫ್) ಕಡಿಮೆಯಾದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್​​ನಿಂದ ಅರಬ್ಬೀ ಸಮುದ್ರದವರಗೆ ಗಾಳಿಯ ಒತ್ತಡ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಫೆ.11ರವರೆಗೆ ರಾಜ್ಯದ ಹಲವೆಡೆ ಹಗುರ ಹಾಗೂ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

 

 

Rate this item
(0 votes)

ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಮಳವಳ್ಳಿಪಟ್ಟಣದ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ನಲ್ಲಿ ಆಚರಿಸಲಾಯಿತು.

ಮಳವಳ್ಳಿ:  ಮಳವಳ್ಳಿ ಪಟ್ಟಣದ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮ ದಲ್ಲಿ  ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಚಂದ್ರಮೋಹನ್ ರವರು ಮಾತನಾಡಿ ಜಂತುಹುಳು ಮನುಷ್ಯನನ್ನು ಹೇಗೆ ಕಾಡುತ್ತದೆ ಎಂಬ ಬಗ್ಗೆ ತಿಳಿಸಿಕೊಟ್ಟರು. ಇನ್ನೂ ತಾಲ್ಲೂಕು ವೈದ್ಯಾಧಿಕಾರಿ  ಡಾ.ವೀರಭದ್ರಪ್ಪ ಮಾತನಾಡಿ , ಸಣ್ಣ ಮಕ್ಕಳಿಂದ 19 ವರ್ಷದೊಳಗೆ ಮಕ್ಕಳಿಗೆ  ಜಂತುಹುಳು ನಿವಾರಣೆ ಗೆ ವರ್ಷಕ್ಕೆ ಎರಡು ಬಾರಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಅದಕ್ಕಾಗಿ ದೇಶವ್ಯಾಪ್ತಿ ಫೆಬ್ರವರಿ ಹಾಗೂ ಆಕ್ಟೋಬರ್ ತಿಂಗಳನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಆಚರಸಲಾಗುತ್ತಿದೆ.  ಈ ಹಿಂದೆ ಬಯಲು ಶೌಚಾಲಯ ದಿಂದ ಜಂತುಹಳು ಮನುಷ್ಯನನ್ನು ಬೇಗ ಅವರಿಸಿಕೊಳ್ಳುತ್ತಿತ್ತು. ಇಂದಿನಿಂದ ಆರು ದಿನಗಳ ಕಾಲ ಈ  ಜಂತುಹುಳು ನಿವಾರಣೆ ಮಾಡಲು ಇಲಾಖೆ ಕ್ರಮ ಕೈಗೊಳ್ಳುತ್ತದೆ ತಾಲ್ಲೂಕಿನ ಎಲ್ಲಾ  ಶಾಲಾ ಕಾಲೇಜುಗಳಿಗೆ ತೆರಳಿ ಮಾತ್ರೆಗಳನ್ನು ಉಚಿತವಾಗಿ ನೀಡುತ್ತವೆ  ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ  ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಣಾಧಿಕಾರಿ ವೀರಣ್ಣಗೌಡ ,ಕಾಲೇಜ ಸಿಬ್ಬಂದಿ ಮತ್ತು ಮಕ್ಕಳು ಸೇರಿದಂತೆ ಮತ್ತಿತ್ತರು ಹಾಜರಿದ್ದರು.

 

Rate this item
(0 votes)

ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಎಸ್ ಶರತ್ ಕುಮಾರ್ ರವರು ಇಂದು ಅಧಿಕಾರ ಸ್ವೀಕರಿಸಿದರು.

ಮಳವಳ್ಳಿ : ಮಳವಳ್ಳಿ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಎಸ್.ಶರತ್ ಕುಮಾರ್ ರವರು ಇಂದು ಅಧಿಕಾರ ಸ್ವೀಕರಿಸಿದರು. ಕಳೆದ ಸಾಮಾನ್ಯ ಸಭೆಯಲ್ಲಿ  ಒಪ್ಪಂದದಂತೆ   ಈ ಹಿಂದೆ ಇದ್ದ ಸ್ಥಾಯಿ ಸಮಿತಿಯ ಅಧ್ಯಕ್ಷ ದೊಡ್ಡಯ್ಯ ರಾಜೀನಾಮೆ ನೀಡಿದ್ದ ಹಿನ್ನೆಲೆ  ಸಭೆಯಲ್ಲಿ  ಶರತ್ ಕುಮಾರ್ ರವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು. ಇಂದು ಅಧಿಕಾರವನ್ನು ಸ್ವೀಕರಿಸಿದ ಹಿನ್ನಲೆಯಲ್ಲಿ  ತಾ.ಪಂ ಅಧ್ಯಕ್ಷ ನಾಗೇಶ್ ,ಉಪಾಧ್ಯಕ್ಷ ಮಾಧು,  ಸದಸ್ಯರಾದ ಪುಟ್ಟಸ್ವಾಮಿ, ರತ್ನಮ್ಮ,  ಮುಖಂಡರಾದ ಗವಿಸಿದ್ದಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಸಹ ಅಭಿನಂದಿಸಿದರು.

Page 21 of 42

Visitors Counter

286847
Today
Yesterday
This Week
This Month
Last Month
All days
336
485
821
6289
3051
286847

Your IP: 3.145.177.28
2025-05-12 15:33

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles