ಇತ್ತೀಚಿಗಿನ ಸುದ್ದಿಗಳು

ಸುದ್ದಿಜಾಲ

ಸುದ್ದಿಜಾಲ

Rate this item
(0 votes)

ಕೆ.ಆರ್.ಪೇಟೆ.ತಾಲೂಕಿನ ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಬಿಲ್ಲೇನಹಳ್ಳಿ ಗ್ರಾಮದ ಶ್ರೀಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯಿತು.ಶಾಸಕ ನಾರಾಯಣಗೌಡ ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಗೋವುಗಳ ರಕ್ಷಕ ಗವಿರಂಗನಾಥಸ್ವಾಮಿಯ ರಥೋತ್ಸವವು ತಾಲೂಕಿನಲ್ಲಿ ನೂತನ ವರ್ಷದ ಮೊದಲ ರಥೋತ್ಸವಾಗಿದ್ದು, ರಾಜ್ಯಾದ್ಯಂತ ಭಕ್ತರು ಆಗಮಿಸಿದರು. ರಥೋತ್ಸವದ ಹಿನ್ನಲೆ ರಥವನ್ನು ವಿವಿಧ ಫಲಪುಷ್ಪಲಂಕಾರ, ತಳಿರು ತೋರಣಗಳಿಂದ ಅಲಂಕರಿಸಿಲಾಗಿತ್ತು. ಉತ್ಸವ ಮೂತರ್ಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಆರ್ಚಕರ ತಂಡ ವಿಷೇಷ ಪೂಜಾ ಪುನಾಸ್ಕರವನ್ನು ನೆರವೇರಿಸಿತು.  ಶಾಸಕ ನಾರಾಯಣಗೌಡ ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು ದೇವಸ್ಥಾನದಿಂದ ಚಾಲನೆಗೊಂಡ ರಥೋತ್ಸವ ರಥ ಬೀದಿಯಲ್ಲಿ ಸಂಚರಿಸಿತು. ಸಹಸ್ರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ಹಣ್ಣು, ಜವನ ಎಸೆದು ದೇವರ ಕೃಪೆಗೆ ಪಾತ್ರರಾದರು. ಜಾನಪದ ಕಲಾತಂಡಗಳಾದ ವೀರಾಗಾಸೆ, ಕರವಾಳಿಯ ಮೂಲದ ಚಂಡಮದ್ದಾಳೆ, ಗಾರುಡಿ ಗೊಂಬೆ, ಡೊಳ್ಳು ಕಣಿತ, ಕೀಲು ಕುದುರೆ ಸೇರಿದಂತೆ ಹಲವು ಪ್ರಕಾರದ ಜಾನಪದ ಕುಣಿತ ರಥೋತ್ಸವಕ್ಕೆ ಮೆರಗು ನೀಡಿತು. ಪೋಷಕರು ತಮ್ಮ ಮಕ್ಕಳಿಗೆ ಕಿವಿಚುಚ್ಚಿಸುವ ಮತ್ತು ಕೇಶ ಮಂಡನೆ ಜತಗೆ ದೇವಸ್ಥಾನದ ಬಳಿ ನೈವೇದ್ಯ ಸಿದ್ಧಪಡಿಸಿ ದೇವರಿಗೆ ಸಮಪರ್ಿಸಿವುದು ಸೇರಿದಂತೆ ಹಲವು ರೀತಿಯ ಹರಕೆ ತೀರಿಸಿ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ಮೊರೆಯಿಟ್ಟರು. ರಥವು ಮರಳಿ ಸ್ವಸ್ಥಾನ ತಲುಪಿತು. ಆಗಮಿಕ ಭಕ್ತರಿಗೆ ಅನ್ನಸಂತರ್ಪಣೆ, ಮಜ್ಜಿಗೆ, ಪಾನಕ ವಿತರಣೆಯನ್ನು ದೇವಸ್ಥಾನದ ಸಮಿತಿಯಿಂದ ಮಾಡಲಾಯಿತು.

ದೇವಸ್ಥಾನದ ಸಮೀಪದಲ್ಲಿರುವ ಕೆರೆಗೆ ನೂತನವಾಗಿ ಐದು ಬೋಟಿಂಗ ವ್ಯವಸ್ಥೆ ಮಾಡಲಾಗಿದೆ. ಇದು ಭಕ್ತರನ್ನು ಆಕಷರ್ಿಸುತ್ತಿದ್ದು, ಆಗಮಿಸಿದ ಭಕ್ತರು ಬೋಟಿಂಗ್ನಲ್ಲಿ ಸಂಚರಿಸಿ ಮನೆರಂಜನೆ ಪಡೆಯುತ್ತಿದ್ದಾರೆ.  ತಹಸೀಲ್ದಾರ್ ಶಿವಮೂತರ್ಿ, ಜಿಪಂ ಸದಸ್ಯ ಎಚ್.ಟಿ.ಮಂಜು, ತಾಪಂ ಉಪಾಧ್ಯಕ್ಷ ಜಾನಕೀರಾಮ್, ಸದಸ್ಯ ದಿನೇಶ್, ಮೋಹನ್, ಮನ್ಮುಲ್ ನಿದರ್ೇಶಕ ಡಾಲು ರವಿ ಸೇರಿದಂತೆ ಹಲವು ಮುಖಂಡರ ಪೂಜೆಯಲ್ಲಿ ಪಾಳ್ಗೊಂಡಿದ್ದರು.

 

Last modified on 20/01/2019
Rate this item
(0 votes)


ಕೆ.ಆರ್.ಪೇಟೆ ತಾಲೂಕಿನ ಕ್ಯಾತನಹಳ್ಳಿ ರಸ್ತೆಯ ತಿರುವಿನಲ್ಲಿ ಗೂಡ್ಸ್ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು   ಪರಿಣಾಮ ಪ್ರಯಾಣಿಸುತ್ತಿದ್ದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ನಾಗಮಂಗಲ ಟೌನಿನ ಅಮ್ಜಾದ್ ಖಾನ್(43) ಮೃತಪಟ್ಟ ವ್ಯಕ್ತಿ.

ಅಮ್ಜಾದ್ ಸೇರಿದಂತೆ ಮೂವರು ಮಡಕೆ ಕ್ಯಾತನಹಳ್ಳಿ ಗ್ರಾಮದ ಮಾವಿನ ತೋಟಕ್ಕೆ ಔಷಧಿ ಸಿಂಪರಣೆ ಮಾಡಲು ಕ್ಯಾತನಹಳ್ಳಿ ಮುಖ್ಯರಸ್ತೆಯ ಕೆರೆಯ ಏರಿಯ ತಿರುವಿನಲ್ಲಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ ಹೊಡೆದ ಪರಿಣಾಮ ಪ್ರಯಾಣಿಸುತ್ತಿದ್ದ ಅಮ್ಜಾದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಚಾಲಕ ಸೇರಿದಂತೆ ಉಳಿದ ಮೂವರು ಪ್ರಯಾಣಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಮೃತ ದೇಹ ಪಟ್ಟಣದ ಸಕರ್ಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Rate this item
(0 votes)

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮ ಪಂಚಾಯತಿ ನೂತನ ಉಪಾದ್ಯಕ್ಷರಾಗಿ ಸೊಳ್ಳೇಪುರ ಜಯರಾಮು ಅವಿರೋಧವಾಗಿ ಆಯ್ಕೆಯಾದರು.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಗಣ್ಣ ರಾಜೀನಾಮೆಯಿಂದ ತೇರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಸ್ಪರ್ಧಿಸದ ಕಾರಣ ಸೊಳ್ಳೆಪುರ ಜಯರಾಮು ಅವಿರೋಧವಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅದ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್ ರವರು ಸೇರಿದಂತೆ ನೂರಾರು ಜನ ನೂತನ ಉಪಾದ್ಯಕ್ಷರಿಗೆ ಶುಭಕೋರಿದರು.ಈ ಸಂದರ್ಭದಲ್ಲಿ ಕಿಕ್ಕೇರಿ ಪಟ್ಟಣದ ಜನತೆ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಯಾದ ಇಓ ಚಂದ್ರಮೌಳಿ, ಗ್ರಾಮ ಪಂಚಾಯಿತಿ ಪಿ ಡಿ ಓ ಕೆಂಪೇಗೌಡ, ಅದ್ಯಕ್ಷರಾದ ಮಹದೇವಮ್ಮ, ನಾಗಣ್ಣ, ಚಂದ್ರಶೇಖರ್, ಮಣೀಶ್, ರಾಜೇಶ್ ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.

Rate this item
(0 votes)

 ದುಷ್ಕರ್ಮಿಗಳ ಗುಂಪುಯೊಂದು ಯಾರು ಇಲ್ಲದ ಒಂಟಿ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ 4 ಸಾವಿರ ನಗದು ಸೇರಿದಂತೆ 2 ಲಕ್ಷ ರೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಮಳವಳ್ಳಿ ಪಟ್ಟಣದ ಎನ್.ಇ ಎಸ್ ಬಡಾವಣೆಯಲ್ಲಿ ಕಳೆದ ರಾತ್ರಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಎನ್.ಇ.ಎಸ್ ಬಡಾವಣೆಯ ಶೆಟ್ಟಿಹಳ್ಳಿ ರಸ್ತೆಯಲ್ಲಿರುವ  ಕಂದಾಯ ಇಲಾಖೆಯ ಮಹೇಶ ಎಂಬುವವರ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.  ಮನೆಯ ಮುಂದಿನ ಬಾಗಿಲು ಡೋರ್ ಲ್ಯಾಕ್ ಮುರಿದು, ಮನೆಯೊಳಗಿನ ಬೀರುನಲ್ಲಿದ್ದ 30 ಗ್ರಾಂ ಚೈನ್, 15 ಗ್ರಾ 2 ಉಂಗುರ, 6 ಗ್ರಾಂ ಡಾಲರ್ , ಅರ್ಥ ಕೆಜಿ ಬೆಳ್ಳಿ ಪದಾರ್ಥಗಳು ಹಾಗೂ ಸಿಲೆಂಡರ್ ಸಹ ಕಳ್ಳತನವಾಗಿದ್ದು,  ಸುಮಾರು ರಾತ್ರಿ 12 ರಿಂದ 1 ವೇಳೆಯಲ್ಲಿ ಕಳ್ಳತನ ವಾಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳ್ಳಚ್ಚು ತಜ್ಞರು  ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನವು  ಮನೆಯಿಂದ  ಮಂಡ್ಯ ರಸ್ತೆಯಲ್ಲಿರುವ ಕೆಎಸ್ ಆರ್ ಟಿ ಸಿ  ಚಾಲಕ ತರಬೇತಿ ಕಚೇರಿ ಬಳಿಯವರೆಗೂ ಹೋಗಿದ್ದು ,  ಬೆರಳ್ಳಚ್ಚು ತಜ್ಞರು ಸಹ ಬೆರಳುಗುರುತು ಸಂಗ್ರಹ ಮಾಡಿದ್ದಾರೆ.   

ಈ ಸಂಬಂದ ಮಳವಳ್ಳಿ ಪಟ್ಟಣದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

 

Rate this item
(0 votes)

 ಮಹಾನ್  ಕ್ರಾಂತಿ ಕಾರಿ ಯುಗಪುರುಷ ಹಾಗೂ ಕಾಲ್ ೯ಮಾಕ್ಸ್ ೯ ರವರ ದ್ವಿಶತಮಾನೋತ್ಸವ ಹಾಗೂ ಅವರ ಮೇರುಕೃತಿ ಬಂಡವಾಳ ದ 150 ನೇ ವರ್ಷಾಚರಣೆ ಅಂಗವಾಗಿ  ಸಿಪಿಐ(ಎಂ) ವತಿಯಿಂದ  ದುಡಿಯುವ ವರ್ಗ ಮತ್ತು  ಮಾಕ್ಸ್೯ ಸಿದ್ದಾಂತ ಕುರಿತು ವಿಚಾರ ಸಂಕಿರಣ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು.               

ಮಂಡ್ಯ: ಜಿಲ್ಲೆಯ ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ  ನಡೆದ ಕ್ರಾಂತಿ ಕಾರಿ ಯುಗಪುರುಷ ಹಾಗೂ ಕಾಲ್ ೯ಮಾಕ್ಸ್ ೯ ರವರ ದ್ವಿಶತಮಾನೋತ್ಸವ ಹಾಗೂ ಅವರ ಮೇರುಕೃತಿ ಬಂಡವಾಳ ದ 150 ನೇ ವರ್ಷಾಚರಣೆ ಸಂಕಿರಣವನ್ನು  ಸಿಪಿಐ(ಎಂ) ರಾಜ್ಯ ಸಂಚಾಲಕ ಉಮೇಶ ಚಾಲನೆ ನೀಡಿ ಮಾತನಾಡಿ,  ಮಾಕ್ಸ್ ೯ವಾದ ವನ್ನು ವಿದೇಶ ವಾದ ಎಂದು ಅಪಪ್ರಚಾರ ಮಾಡಿರುವುದನ್ನು ಖಂಡಿಸಿದ ಅವರು ಮಾಕ್ಸ್೯ರವರು  ಸರಿ ತಪ್ಪು ಗಳ ಬಗ್ಗೆ ವಾದ ಮಾಡಿದರು ಅವರು ಕ್ರಾಂತಿಕಾರಿ ಯುಗಪುರುಷ.  ಜಗತ್ತಿನಲ್ಲಿರುವವರು ಎಲ್ಲರೂ ಒಂದಾಗಬೇಕು ಎಂದು ಸಾರಿದರು ಎಂದರು .       

ಕಾರ್ಯಕ್ರಮ ದಲ್ಲಿ  ಜನವಾದಿ ಮಹಿಳಾ ಸಂಘಟನೆ ಜಿಲ್ಲಾದ್ಯಕ್ಷೆ ದೇವಿ,  ಪ್ರಾಂತ ರೈತ ಸಂಘದ  ತಾಲ್ಲೂಕು ಅಧ್ಯಕ್ಷ  ಎನ್.ಎಲ್ ಭರತ್ ರಾಜು, ಸುಶೀಲ, ಸುನೀತಾ .ತಿಮ್ಮೇಗೌಡ. ಮಂಜುಳ  ಸೇರಿದಂತೆ  ಮತ್ತಿತ್ತರರು ಇದ್ದರು.

Rate this item
(0 votes)

ಕೃಷ್ಣರಾಜಪೇಟೆ ತಾಲ್ಲೂಕಿನ ದಬ್ಬೇಘಟ್ಟ ಗ್ರಾಮದ ಭರತ್ ಎಂಬುವರ ತೋಟದಲ್ಲಿ ಕಾಯಿಲೆ ಇಂದ ಬಳಗುತ್ತಿದ್ದ ನವಿಲು ಪಕ್ಷಿ.ಗಮನಿಸಿದ ಭರತ್ ಪಕ್ಷಿಯನ್ನು ರಕ್ಷಿಸಿ ಪಶು ವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಿಸಿ ಆರೈಕೆ ಮಾಡಿದರು

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ  ಕಿಕ್ಕೇರಿ ಹೋಬಳಿಯ ದಬ್ಬೇಘಟ ಗ್ರಾಮದ ಭರತ್ ಎಂಬುವರ ತೋಟದಲ್ಲಿ ಕಾಯಿಲೆ ಇಂದ ಬಳಗುತ್ತಿದ್ದ ನವಿಲು ಪಕ್ಷಿಯನ್ನು ಗಮನಿಸಿದ ಭರತ್ ಪಕ್ಷಯನ್ನು ರಕ್ಷಿಸಿ ಪಶು ವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಿಸಿ ಆರೈಕೆ ಮಾಡಿದರು.ನಂತರ ಸ್ಥಳಕ್ಕೆ ಬೇಟಿ ನೀಡಿದ ಅರಣ್ಯ ಅಧಿಕಾರಿಗಳು  ಕಾಯಿಲೆಯಿಂದ ಬಳಗುತ್ತಿರು ನವಿಲು ಪಕ್ಷಿಯನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ಚಿಕಿತ್ಸೆ ನೀಡಿಸಲು ಕೃಷ್ಣರಾಜಪೇಟೆ ತಾಲ್ಲೂಕಿನ ಅರಣ್ಯ ಇಲಾಖೆ ಕೊಂಡೈದರು.

ಸ್ಥಳದಲ್ಲಿ ಕಿಕ್ಕೇರಿ ವೈದ್ಯರಾದ ರಾಮಕೃಷ್ಣೇಗೌಡ. ಅರಣ್ಯ ಇಲಾಖೆಯ ಶಿವುಕುಮಾರ್, ರೈತ ಭರತ್ ಎಂ ಮಾಸ್ತಿ. ಮಂಜು ಮತ್ತಿತ್ತರು ಇದ್ದರು.

 

Last modified on 21/11/2018
Rate this item
(0 votes)

ಪಟ್ಟಣದ ಶತಮಾನ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಬಿ.ಎಲ್ ದೇವರಾಜ್ ಗೆ ಶಿಷ್ಟಚಾರ ಪಾಲಿಸದ ಹಿನ್ನಲೆ ಶಿಕ್ಷಣ ಇಲಾಖೆಯ ಬಿಇಒಗೆ ನೀವು ಬಿಇಒ ನೇ ಅಲ್ಲ ಎಂದು ಜಿಪಂ ಸದಸ್ಯ ದೇವರಾಜು ಕಿಡಿಕಾರಿದರು.

ಸುದ್ದಿಜಾಲ ಕೆ.ಆರ್.ಪೇಟೆ :ಪಟ್ಟಣದ ಶತಮಾನ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಬುಧವಾರ ೧೦:೩೦ ಕ್ಕೆ ಕಾರ್ಯಕ್ರಮದ ಉದ್ಘಾಟನೆ ಹಮ್ಮಿಕೊಂಡು ಶಾಸಕ ನಾರಾಯಣಗೌಡರನ್ನು ಉದ್ಘಾಟಕರಾಗಿ, ಜಿಪಂ ಸದಸ್ಯರು ಸೇರಿದಂತೆ ಶಿಷ್ಟಚಾರದ ಪ್ರಕಾರ ಹಲವು ಗಣ್ಯರನ್ನು ಅಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಜಿ.ಪಂ ಸದಸ್ಯ ದೇವರಾಜು ಸರಿಯಾದ ಸಮಯಕ್ಕೆ ಆಗಮಿಸಿದ್ದರು. ಶಾಸಕ ನಾರಾಯಣಗೌಡ ಬೇರೆ ಕಾರ್ಯಕ್ರಮಗಳ ಹಿನ್ನಲೆ ಸ್ವಲ್ಪ ತಡವಾಗಿ ಬಂದಿದ್ದರಿಂದ ಸ್ವಲ್ಪ ತಡವಾಗಿ ಆಗಮಿಸಿದ್ದರು. ಇದರಿಂದ ದೇವರಾಜು ಕಾರ್ಯಕ್ರಮದಲ್ಲಿ ಸ್ವಲ್ಪ ಸಮಯ ಕಾದಿದ್ದರು. ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ನಿರೂಪಣೆ ಮಾಡುತ್ತಿದ್ದ ಶಿಕ್ಷಣ ಸಂಯೋಜಕ ಚಂದ್ರಶೇಖರ್ ಶಾಸಕರನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಂತೆ ಕೋರಿದರು. ಶಾಸಕರು ಮಾತನಾಡಿ ಬೇರೆ ಕಾರ್ಯಕ್ರಮವಿದೆ ಎಂದು ವೇದಿಕೆಯಿಂದ ತೆರಳಿದರು. ಶಾಸಕರ ಜತೆಯಲ್ಲಿ ವೇದಿಕೆಯಲ್ಲಿದ್ದ ಹಲವರು ಶಾಸಕರೊಂದಿಗೆ ವೇದಿಕೆಯಿಂದ ನಿರ್ಗಮಿಸಿದರು. ವೇದಿಕೆ ಖಾಲಿ ಆದಂತೆ ಕಂಡ ಪೋಷಕರು ಎದ್ದು ಹೋಗಲು ಆರಂಭಿಸಿದರು. ಇದರಿಂದ ಕುಪಿತಗೊಂಡ ಜಿಪಂ ಸದಸ್ಯ ದೇವರಾಜು ವೇದಿಕೆಯಿಂದ ಕೋಪದಿಂದ ನಿರ್ಗಮಿಸಿದರು. ಬಿಇಒ ರೇವಣ್ಣ ಅವರನ್ನು ತಡಗಟ್ಟಿ ಸಮಾಧಾನ ಮಾಡಲು ಪ್ರಯತ್ನಸಿದರು. ಕೆಲ ಸಮಯ ಇವರಿಬ್ಬರ ನಡುವೆ ಮಾತಿನ ಚಕಾಮುಕಿ ನಡೆಯಿತು‌. ಬಿಇಒ ಅವರನ್ನು ನೀವು ನನ್ನಾ ಪ್ರಕಾರ ಬಿಇಒ ನೇ ಅಲ್ಲಾ. ಒಂದು ಕಾರ್ಯಕ್ರಮ ಹೇಗೆ ನಡೆಸಬೇಕು ಎಂಬುದು ಗೊತ್ತಿಲ್ಲ. ಕಾರ್ಯಕ್ರಮಕ್ಕೆ ಕರಸಿ ಗಂಟಾನುಗಂಟೆ ಕಾಯಿಸಿ ಸುಮ್ನೇ ಕಳಿಸೊದಾದ್ರೆ. ನಮ್ಮನ್ನ ಏಕೆ ಕರೆಯಬೇಕು ಎಂದು ಪ್ರಶ್ನಿಸಿದರು. ಇದು ನಿರೂಪಕರಿಂದ ತಪ್ಪಾಗಿದೆ ಎಂದು ಹೇಳಿದಾಗ. ದೇವರಾಜು ನಿರೂಪಕ ಶಿಕ್ಷಣ ಸಂಯೋಜಕ ಚಂದ್ರಶೇಖರ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು. ಇದೊಂದು ಬಾರಿಯಲ್ಲ. ಹಲವು ಬಾರಿ ಚಂದ್ರಶೇಖರ್ ಹೀಗೆ ಮಾಡಿದ್ದಾನೆ ಎಂದು ತರಾಟೆಗೆ ತೆಗೆದುಕೊಂಡರು. ಕೆಲ ಸಮಯದ ಬಳಿಕ ಅವರ ಮನವೊಲಿಸಿ ವೇದಿಕೆಯಲ್ಲಿ ಮಾತನಾಡುವಂತೆ ಮನವಿ ಮಾಡಿದರು. ಕಡೆಗೆ ಮಾತನಾಡಿ ಮಕ್ಕಳಿಗೆ ಶುಭ‌ಹಾರೈಸಿ ವೇದಿಕೆಯಿಂದ ನಿರ್ಗಮಿಸಿದರು.

Last modified on 17/11/2018
Rate this item
(0 votes)

ತಾಲೂಕಿನ ಅಘಲಯ ಗ್ರಾಮ ಪಂಚಾಯಿತಿ ಗ್ರಾಮಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಬರದ ಕಾರಣ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ರದ್ದು ಪಡಿಸಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ  ಹಮ್ಮಿಕೊಂಡಿದ್ದ ಗ್ರಾಮಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರಾದ ಹಿನ್ನಲೆ ಸಭೆಯಲ್ಲಿದ್ದ ಗ್ರಾಮಸ್ಥರು ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಿದರು.ಅಲ್ಲದೆ ಸಭೆಗೆ ಪಂಚಾಯಿತಿ ಅಧ್ಯಕ್ಷೆ ಭಾರತಿಶ್ರೀಧರ್ ಕೂಡ ಬರದಿರುವುದು ಗ್ರಾಮಸ್ಥರು ಇನ್ನಷ್ಟು ಕೋಪಗೊಳ್ಳಲು ಕಾರಣವಾಯಿತು. ಬಳಿಕ ಮಾತನಾಡಿದ ಗ್ರಾಮದ ಯುವಮುಖಂಡ ಲಕ್ಷ್ಮೀಶ್, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಚರಂಡಿ ವ್ಯವಸ್ಥೆ ಸರಿಯಿಲ್ಲ. ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಗ್ರಾಮದಲ್ಲಿ ಕಳೆದ ಮೂರು ವರ್ಷದಿಂದ ಗ್ರಾಮದೊಳಗೆ ಸಿಮೆಂಟ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಸರ್ಕಾರದಿಂದ ಬಂದಿರುವ ಹಣ ಮಾತ್ರ ಖರ್ಚುಗಿದೆ. ಪಂಚಾಯಿತಿಯಲ್ಲಿ ಅವ್ಯವಹಾರ ನಡೆಯುತ್ತಿದ್ದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಬೀದಿ ದೀಪಗಳು ಸುಟ್ಟು ಹೋದರೆ ಬದಲಾವಣೆ ಮಾಡಲ್ಲ. ಲಕ್ಷಾಂತರ ರೂ ಖರ್ಚು ಮಾಡಿ ಕಳಪೆ ಗುಣಮಟ್ಟದ ಬೀದಿ ದೀಪಗಳನ್ನು ಖರೀದಿ ಮಾಡುತ್ತಿದ್ದಾರೆ. ದೀಪ ಬದಲಾವಣೆ ಆದ ಮೂರ್ನಾಲ್ಕು ದಿನದಲ್ಲಿ ದೀಪಗಳು ಮತ್ತೇ ಸುಟ್ಟು ಹೋಗುತ್ತವೆ. ಸರಿಯಾಗಿ ದೀಪಗಳ ಬದಲಾವಣೆ ಮಾಡದೆ. ರಾತ್ರಿ ಸಮಯ ಜನರು ಹೊರ ಬರಲು ಹೆದರುತ್ತಿದ್ದಾರೆ ಎಂದು ದೂರಿದರು.

ಕೃಷಿ ಇಲಾಖೆಯ ಅಧಿಕಾರಿ ಶ್ರೀಧರ್ ಸಭೆಗೆ ನೋಡಲ್ ಅಧಿಕಾರಿಯಾಗಿ ಬಂದಿದ್ದರು. ಸಭೆ ರದ್ದಾದರಿಂದ ಅವರು ಕೂಡ ನಿರ್ಗಮಿಸಿದರು. ಪಂಚಾಯಿತಿ ಸದಸ್ಯರು ಕೂಡ ಸಭೆಯಲ್ಲಾದ ಗದ್ದಲಗಳಿಂದ ನಿರ್ಗಮಿಸಿದರು. ಸಭೆಯಲ್ಲಿ ಕಾಲಭೈರವೇಶ್ವರ ಯುವಕರ ಸಂಘದ ಸದಸ್ಯರು, ಶಿವಲಿಂಗೇಗೌಡ, ವಿಜಯ್, ಗಣೇಶ್, ವಿಶ್ವನಾಥ್, ಸೇರಿದಂತೆ ಹಲವರಿದ್ದರು.

 

Page 25 of 42

Visitors Counter

286821
Today
Yesterday
This Week
This Month
Last Month
All days
310
485
795
6263
3051
286821

Your IP: 3.141.33.133
2025-05-12 13:08

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles