Madhu

Madhu

ಎರಡೂ ವರ್ಷ ಕಳೆದರು ಬರಲಿಲ್ಲ ಅಂಗನವಾಡಿ ಶಿಕ್ಷಕಿ , ಸುಮ್ಮನೆ ಕೈ ಕಟ್ಟಿ ಕುಳಿತಾ ತಾಲ್ಲೂಕು ಆಡಳಿತ ಗ್ರಾಮಸ್ಥರು ರಿಂದ ಪ್ರತಿಭಟನೆ.

ಮಂಡ್ಯ ಜಿಲ್ಲೆಯ ಕೆ.ಅರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೆನಹಳ್ಳಿ ಗ್ರಾಮದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಅಂಗನವಾಡಿ ಕಾರ್ಯ ನಿರ್ವಹಿಸುತ್ತಿದೆ. ಅದರೆ ಈ ಅಂಗನವಾಡಿಗೆ ಎರಡೂ ವರ್ಷ ಗಳಿಂದ ಯಾವುದೇ ಅಂಗನವಾಡಿ ಕಾರ್ಯಕರ್ತೆ ಇಲ್ಲಾ .ಇದ್ದ ಹಳೆಯ ಶಿಕ್ಷಕಿ ರಜೆಮೇಲೆ ತೆರಳಿದ್ದಾರೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು ಹೇಳಿಕೊಂಡು ಇತ್ತ  ಪಕ್ಕದ ಗ್ರಾಮ ಗೊರವಿ ಅಂಗನವಾಡಿ ಶಿಕ್ಷಕಿಯನ್ನು ಪ್ರಭಾರವಾಗಿ ನಿಯೊಜಿಸಿದೇ. ಅದರೆ ಅವರು ತಮ್ಮ ಗ್ರಾಮದ ಅಂಗನವಾಡಿಯಲ್ಲಿ ಕೆಲಸ ಇರುವುದರಿಂದ ಮೂರು ದಿನಕ್ಕೊಮ್ಮೆ ಬರತ್ತಿದ್ದು ಮಕ್ಕಳಿಗೆ ಯಾವ ರೀತಿ ಪಾಠ ಕಲಿಸುತ್ತಾರೆ. ಬೇರೆ ಶಿಕ್ಷಕಿಯನ್ನು ಸಹ ನಿಯೋಜಿಸದೆ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದು ಪೋಷಕರು ಮತ್ತು ಗ್ರಾಮಸ್ಥರು ಕಿಡಿಕಾರಿದರು.

ಅದೇ ಗ್ರಾಮದ ಹರೀಶ್ ಮಾತನಾಡಿ ನಾನೆ ಖುದ್ದಾಗಿ ಶಿಶು ಅಭಿವೃದ್ದಿ ಅದಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದರೆ ನಿಮ್ಮ ಗ್ರಾಮದ ಕೆಲಸವನ್ನು ತಡೆಹಿಡಿಯಾಲಗಿದೆ ಎಂದು ಉಡಾಪೆ ಉತ್ತರ ನೀಡುತ್ತಾರೆ. ಇ ಹಿಂದೆ ನಮ್ಮ ಗ್ರಾಮದ ಅಂಗನವಾಡಿಗೆ ಇಪ್ಪತ್ತುಕ್ಕೂ ಹೆಚ್ಚು ಮಕ್ಕಳ ಹಾಜರಾತಿ ಇತ್ತು ಇಂದು ಕೇವಲ ಎರಡು ಮೂರು ಮಕ್ಕಳಿಗೆ ಸೀಮಿತವಾಗಿದೆ ಅಲ್ಲದೇ ನಮ್ಮ ಗ್ರಾಮದ ಅಂಗನವಾಡಿಗೆ ಶಿಕ್ಷಕಿ ಇಲ್ಲದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈಗಾಗಲೇ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ಇದೆ ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ಘಟನೆ ಗಳು ಪೋಷಕರ ಮೇಲೆ ಪರಿಣಾಮ ಬಿರಿ ಸರ್ಕಾರಿ ಶಾಲೆಗಳು ಮುಚ್ಚುವುದರಲ್ಲಿ ಸಂದೇಹ ವಿಲ್ಲ ಎಂದರು.ಮತ್ತು ಕೊಠಡಿಯ ಕಿಟಕಿ ಬಾಗಿಲುಗಳ ಮುರಿದಿದ್ದು ಕಾಗದದ ಹಾಳೆಗಳಿಂದ ಮುಚ್ಚಲಾಗಿದೆ ಮಳೆ ಬಂದರೆ ಮಕ್ಕಳು ಮಳೆ ನೀರಿನಲ್ಲಿ  ಸ್ನಾನ ಮಾಡು ಸ್ಥಿತಿ ಇದೆ ಕೂಡಲೆ ದುರಸ್ತಿ ಕೆಲಸಮಾಡಿಸಬೇಕು ಎಂದರು.

ನಂತರ ಮಾತನಾಡಿದ ವೆಂಕಟೇಶ ನಮ್ಮ ಗ್ರಾಮದಲ್ಲಿಯೇ ಅನೇಕ ವಿದ್ಯಾವಂತ ಹೆಣ್ಣು ಮಕ್ಕಳ ಇದ್ದು ಅವರಿಗೆ ಈ ಕೆಲಸ ನೀಡಿದರೆ ಮಕ್ಕಳ ಭವಿಷ್ಯ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸಿದಂತೆ ಅಗುತ್ತದೆ ಎಂದರು .ನಂತರ ಮಾತನಾಡಿದ ಮಂಜು ನಮ್ಮ ಗ್ರಾಮದ ಅಂಗನವಾಡಿಗೆ ಶಿಕ್ಷಕಿಯನ್ನು ನಿಯೋಜಿಸಿದ ಹೊದರೆ ಅಂಗನವಾಡಿಗೆ ಬೀಗ ಜಡಿದು ತಾಲೂಕು ಶಿಶು ಅಭಿವೃದ್ದಿ ಅಧಿಕಾರಿಗಳು ಮುಂದೆ ದರಣಿ ಕುರುತ್ತೆವೆ ಎಂದು ಎಚ್ಚರಿಕೆ ನೀಡಿದರು ಪ್ರತಿಭಟನೆ ಯಲ್ಲಿ ವೆಂಕಟೇಶ್, ವಾಸು, ಮಂಜು, ಶಶಿಕಲಾ ಮತ್ತಿತರು ಇದ್ದರು.

 

ತಾಲ್ಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆಯ ರಾಸುಗಳ ಸುಂಕ ಮನ್ನಾ ಮಾಡಿದ ತಾಲ್ಲೂಕು ಆಡಳಿತ.

 ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಹೇಮಗಿರಿ ದನಗಳ ಜಾತ್ರೆಯ ಸುಂಕಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿಯಿಂದ ಬಾಗವಹಿಸಿದ್ದ ಬಿಡ್ ದಾರರು.ತೀವ್ರ ಬರಗಾಲದ    ಹಿನ್ನೆಲೆಯಲ್ಲಿ ರಾಸುಗಳ ಸುಂಕಹರಾಜು ನಿಲ್ಲಿಸಿ ರಾಸುಗಳಿಗೆ ಸುಂಕ ಮನ್ನಾ ಮಾಡಿದ ತಾಲ್ಲೂಕು ಆಡಳಿತ. ಜಾತ್ರಾ ಕಾಲದ ಅಂಗಡಿ ಮುಂಗಟ್ಟುಗಳು, ಗೊಬ್ಬರ ಮತ್ತು ವಾಹನಗಳ ಸುಂಕವನ್ನು  ಮಾತ್ರ ಹರಾಜು ಮೂಲಕ ಅಂತಿಮಗೊಳಿಸಿದ ತಹಶೀಲ್ದಾರ್ ಎಂ.ಶಿವಮೂರ್ತಿ.ಉಪತಹಶೀಲ್ದಾರ್ ಚಂದ್ರಶೇಖರ್, ರಾಜಶ್ವನಿರೀಕ್ಷಕಿ ಚಂದ್ರಕಲಾ ಪ್ರಕಾಶ್, ಗ್ರಾಮಲೆಕ್ಕಾಧಿಕಾರಿ  ಹರೀಶ್, ಮುಜರಾಯಿ ಗುಮಾಸ್ತೆ ಚಂದ್ರಕಲಾ ಸೇರಿದಂತೆ ಬಂಡಿಹೊಳೆ, ಕುಪ್ಪಹಳ್ಳಿ, ನಾಟನಹಳ್ಳಿ, ಲಕ್ಷ್ಮೀಪುರ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಕಬ್ಬಿನ ಗದ್ದೆಗೆ ನೀರು ಹಾಯಿಸಲು ತೆರಳಿದ್ದ ರೈತ ಹಸಿವಿನಿಂದ ನೀರಿನ ಇಕ್ಕಲಿಗೆ ಬಿದ್ದು ಮೃತಪಟ್ಟಿದ್ದಾರೆ.
 
 ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ತಿಮ್ಮರಾಯಗೌಡರ ಮಗ  ಜವರೇಗೌಡರು( 59) ಎಂಬುವರು ತಮ್ಮ ಕಬ್ಬಿಗೆ ನೀರು   ಹಾಯಿಸುವ ಸಂದರ್ಭದಲ್ಲಿ ಸುಸ್ತಾಗಿ (ಇಕ್ಕಲಿಗೆ) ಬಿದ್ದು ದಾರುಣ ಸಾವನ್ನಪ್ಪಿದ್ದಾರೆ.ಬಿ ಬಿ ಕಾವಲ್ ಎಲ್ಲೆಯಲ್ಲಿ ಒಂದು ಎಕರೆ ಕಬ್ಬು ಬೆಳೆದಿದ್ದಾರೆ.  ಕಬ್ಬಿಗೆ ನೀರು ಹಾಯಿಸಲು ಜಮೀನಿಗೆ ಬೆಳಿಗ್ಗೆಯೇ ತೆರಳಿದ್ದರು. ವಿದ್ಯುತ್ ಬರದ ಕಾರಣ ಮಧ್ಯಾಹ್ನ ವಿದ್ಯುತ್‌ ಬರುತ್ತೆಂದು ಅಲ್ಲಿಯೇ ಕಾಯ್ದಿದ್ದಾರೆ. ಮಧ್ಯಾಹ್ನ ವಿದ್ಯುತ್ ಬಂದ ನಂತರ ಅಲ್ಲಿಯೇ ನೀರು ಹಾಯಿಸುಲು ಮುಂದಾಗಿದ್ದಾರೆ.ಮಧ್ಯಾಹ್ನವಾದರೂ ಊಟಕ್ಕೆ ಬರಲಿಲ್ಲವಲ್ಲ ಎಂದು ಊಟ ತೆಗೆದುಕೊಂಡು ಅವರ ಹೆಂಡತಿ ಜಯಂತಮ್ಮ ಗದ್ದೆಗೆ ಬಂದು ನೋಡಿದಾಗ ಇಕ್ಕಲಿನಲ್ಲಿ ಮಕಾಡೆ ಬಿದ್ದಿದ್ದಾರೆ. ಇದನ್ನು ನೋಡಿ ಗಾಬರಿಯಿಂದ ಕೂಗಾಡಿದಾಗ ಸುತ್ತಮುತ್ತಲಿನ ಜನರು ಆಂಬುಲೆನ್ಸ್ ಮೂಲಕ ಮೃತರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
 
 

ಶ್ರವಣಬೆಳಗೊಳ ಶಾಲೆ ಮಕ್ಕಳಿಗೆ ಸುಪರ್ ರಾಯಲ್ ಹಾಲಿಡೆಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಕಂಪನಿಯಿಂದ ಉಚಿತವಾಗಿ ನೂರಾಐವತ್ತು ಶಾಲಾ ಬ್ಯಾಗ್ ವಿತರಣೆಮಾಡಿದರು..

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ  ಸುಪರ್ ರಾಯಲ್ ಹಾಲಿಡೆಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಕಂಪನಿಯಿಂದ ಉಚಿತವಾಗಿ  ಶಾಲಾ ಬ್ಯಾಗ್ ವಿತರಣೆಮಾಡಿ.ನಂತರ ಮಾತನಾಡಿದ ಕಂಪನಿಯ ಪ್ರಭು ಶಂಕರ್ ರವರು ಕಂಪನಿ ಯಿಂದ ಬಂದ ಲಾಭಾಂಶದ ಸ್ವಲ್ಪ ಹಣವನ್ನು ಸಮಾಜಮೂಖಿ ಕೆಲಸಕ್ಕೆ ಮೀಸಲಿಟ್ಟಿದೆ. ನಮ್ಮ ಕಂಪನಿಯ ಬಗ್ಗೆ ಕೆಲವರು ತಪ್ಪು ಮಾಹಿತಿ ನೀಡಿ ಜನರಲ್ಲಿ ಕಂಪನಿಯ ಬಗ್ಗೆ ಕೆಟ್ಟ ಅಭಿಪ್ರಾಯ ಬರುವರೀತಿ ಮಾಡುತ್ತಿದ್ದು ನಮ್ಮ ಕಂಪನಿ ಯಾವುದೇ ರೀತಿಯ ಮೊಸ ಮಾಡದೇ ಜನರರು ಕಟ್ಟಿದ್ದ ಹಣಕ್ಕೆ ಒಂದು ರಾಯಲ್ ಟ್ರಿಪ್ ನೀಡಿತ್ತದೆ ಜೊತೆಗೆ ಅವರನ್ನು ಇನ್ನೊಬ್ಬರನ್ನು ಪರಿಚಯಿಸಿದಾಗ ಅವರಿಗೆ ಬಹುಮಾನದ ರೀತಿಯಲ್ಲಿ ಹಣ ನೀಡುತ್ತದೆ ನಮ್ಮ ಕಂಪನಿ ಯಾವುದೇ ಪ್ರಾಡಕ್ಟ್ಸ್ ಗಳನ್ನು ಜನರಿಗೆ ನೀಡಿ ಮೊಸ ಮಾಡುವುದಿಲ್ಲಾ ನಮ್ಮ ಕಂಪನಿಯ ಉದ್ದೇಶ ಜನಸಾಮಾನ್ಯರು ಕುಡಾ ಒಂದು ಒಳ್ಳೆಯ ಪ್ರವಾಸ ಮಾಡಿ ಬರಬೇಕು ಎಂಬುದು ನಮ್ಮ ಉದ್ದೇಶ ಅವರ ಅರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತಂದು ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನ ಪಡೆಯಬೇಕು ಎಂಬುದು ನಮ್ಮ ಉದ್ದೇಶ ಎಂದರು.

 <script async src="//pagead2.googlesyndication.com/pagead/js/adsbygoogle.js"></script>
<script>
(adsbygoogle = window.adsbygoogle || []).push({
google_ad_client: "ca-pub-1130353473459020",
enable_page_level_ads: true
});
</script>

ನಂತರ ಮಾತನಾಡಿದ ರೀಪ್ಸನ್ ಜರೇಮಿಯಾ  ನಮ್ಮ ಕಂಪನಿ ಮೊದಲು ಡಾ.ಪ್ರಾಶಾಂತ್ ಮತ್ತು ಡಾ.ಮಧುಕರ್ ಇಬ್ಬರೂ ನಾಯಕ ರಿಂದ ಸ್ಥಾಪಿಸಿದ ಕಂಪನಿ ಇಂದು ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ದಾರಿ ದೀಪವಾಗಿದೆ ನಮ್ಮ ಕಂಪನಿ ಯ ಸ್ಥಾಪಕರಾದ ಡಾ.ಪ್ರಾಶಾಂತ್ ರವರು ಅಂಗವಿಕಲತೆಯಿಂದ ಸೊಲದೇ ಅಂದು ಸ್ಥಾಪನೆ ಮಾಡಿದ್ದ ಕಂಪನಿ ಇಂದು ಎಷ್ಟೋ ಅಂಗವಿಕಲರ ಯುವಕರ ಗೃಹಿಣಿಯರ ಬಡವರ ಕನಸನ್ನು ನನಸು ಮಾಡಿದೆ ನಮ್ಮ ಕಂಪನಿ ಯಲ್ಲಿ ವಿಶ್ವಾಸ ವಿಟ್ಟು ಬನ್ನಿ ನಮ್ಮ ರಾಯಲ್ ಫ್ಯಾಮಿಲಿ ಯ ರಾಯಲ್ ಲೈಪ್ ಪಡಯಿರಿ. ನಮ್ಮ ಕಂಪನಿಯ ಲಾಭಾಂಶ ಹಣದ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಮೂಡಿಪ್ಟಿದೆ ಇಂದು ನೇಡೆದ ಕಾರ್ಯಕ್ರಮ ದಂತ ಇನ್ನೂ ಹಲವು ಕಾರ್ಯಕ್ರಮವನ್ನು ನಿಮ್ಮ ಕೈಯಲ್ಲಿ ಮಾಡಿಸುವ ಕಲಸ ನಮ್ಮ ಕಂಪನಿಯದು ಎಂದರು.

ಕಾರ್ಯಕ್ರಮ ದಲ್ಲಿ ,ರಾಯಲ್ ಹಾಲಿಡೆಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯ ಯತೀಶ್ ದೇವಾಡಿಗ, ಸುನೀಲ್ ಪೂಜಾರಿ, ದರ್ಮೆಶ್, ರಾಘವೇಂದ್ರ, ಪ್ರಕಾಶ್ ,ಅಶಾ, ಶೋಭಾ.ಸಿಅರ್ಪಿ ಹೆಚ್.ಎಂ ರುದ್ರೆಶ್ ಹಾಗೂ ಶಿಕ್ಷಕರರಾದ ಪುಟ್ಟಸ್ವಾಮಿ ರವಿಚಂದ್ರನ್, ರಾಧಿಕಾ .ಶಶಿಕಲಾ ವಿ ಕೆ ಹಾಗೂ ಎಲ್ಲಾ ಮಕ್ಕಳು ಮತ್ತಿತರರು ಭಾಗವಹಿಸಿದರು.

 

ಶ್ರವಣಬೆಳಗೊಳದ ಸರ್ಕಾರಿ ಶಾಲ ಮಕ್ಕಳಿಂದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯವನ್ನು ಆಯೋಜಿಸಿದ ರಾಯಲ್ ಹಾಲಿಡ್ಸೆ ಬೆಂಗಳೂರು ಕಂಪನಿಯಿಂದ ಉಚಿತವಾಗಿ ನೂರಾಐವತ್ತು ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆಮಾಡಿದರು .

 ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಶ್ರೀ ವಿಘ್ನಶ್ವರ ನಾಟಕ ಮಂಡಳಿ ಸರ್ಕಾರಿ ಪ್ರಾಥಮಿಕ ಶಾಲೆ ಶ್ರವಣಬೆಳಗೊಳ ವತಿಯಿಂದ ರಾತ್ರಿ ಯಿಡಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಅತೀ ಸುಂದರ ಹಾಗೂ ವಿನೂತನ ಮತ್ತು ಬೇರೆ ಶಾಲೆಗಳಿಗೆ ಮಾದರಿಯಾಗಿ ಮಕ್ಕಳು ಅಭಿನಯಿಸಿದರು .ಕಾರ್ಯಕ್ರಮ ಅಧ್ಯಕ್ಷರಾಗಿ ಬರಬೇಕಿದ್ದ ಶ್ರವಣಬೆಳಗೊಳ ಕ್ಷೇತ್ರದ ಜನಪ್ರಿಯ ಶಾಸಕರಾದ ಬಾಲಕೃಷ್ಣರವರ ಅನುಪ ಸ್ಥಿತಿಯಲ್ಲಿ ಅವರ ಧರ್ಮಪತ್ನಿ ಕುಸುಮಾ ಬಾಲಕೃಷ್ಣ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಮೂಡಿ ಬಂತು ಜೊತಿ ಬೆಳಗುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಕುಸುಮರವರು ಇಂತ ಕಾರ್ಯಕ್ರಮ ಮೂಡಿಬಂದಿರೂವುದು ಬಹಳ ಖುಷಿಕೊಡುವ ಸಂಗತಿ ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ಇರುವ ತಪ್ಪು ತಿಳುವಳಿಕೆ ಹೊಗಲಾಡಿಸಿ ಮಕ್ಕಳ ಕಲೆಯನ್ನು ಹೊರಗೆ ತಂದಿರುವ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಅಭಿನಂದನ ಸಲ್ಲಿಸಿದ್ದರು.

ನಂತರ ಮಾತನಾಡಿದ ಜಿಲ್ಲಾ ಪಂಚಾಯತಿ ಸದ್ಯಸ ಮಮತ ರಮೇಶ್  ನಾವು ದಿನನಿತ್ಯ ಟಿವಿಗಳಲ್ಲಿ ಮಕ್ಕಳು ನಾಟಕ ಮಾಡುವುದನ್ನು ನೊಡಿರುತ್ತವೆ ಅದರೆ ಇಂದು ನಮ್ಮ ಕ್ಷೇತ್ರದ ಶಾಲಮಕ್ಕಳು ಇಡಿ ರಾತ್ರಿ ನಾಟಕ ಅಬಿನಯಿಸಿರುವುದು ನಮ್ಮ ಕ್ಷೇತ್ರ ಕ್ಕೆ ಮಾತ್ರವಲ್ಲದೆ ಇಡಿ ರಾಜ್ಯ ಕ್ಕೆ ಹೆಮ್ಮೆಯ ಸಂಗತಿ ಎಂದರು. ರಾಯಲ್ ಹಾಲಿಡೆಸ್ ಕಂಪನಿಯ ಪ್ರಭು ರವರು ಮಾತನಾಡಿ  ನಾವು ಕೇವಲ ಖಾಸಗಿ ಶಾಲೆಯ ಮಕ್ಕಳು ಕಾರ್ಯಕ್ರಮ ಕೊಡುವುದನ್ನು ನೊಡಿದ್ದವೆ ಅದರೆ ನಮ್ಮ ಶಾಲೆಯ ಮಕ್ಕಳು ವಿಭಿನ್ನವಾಗಿ ರಾತ್ರಿ ಯಿಡಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಅಭಿನಯಿಸಿರುವುದು ರಾಜ್ಯಕ್ಕೆ ಕೀರ್ತಿ ತರುವಂತಹ ವಿಷಯ ಹಾಗೂ ನಮ್ಮ ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಶಾಲೆಯ ಶಿಕ್ಷಕರ ವೃದಂಕ್ಕೆ ಅಭಿನಂದನೆ ಸಲ್ಲಿಸಿದರು ಹಾಗೂ ಇ ರೀತಿ ಕಾರ್ಯಕ್ರಮ ಕ್ಕೆ ನಮ್ಮ ಪ್ರೋತ್ಸಾಹ ನೀಡಲು ನಾವು ಸಿದ್ದ ಎಂದರು.

ಕೃಷಿ ಇಲಾಖೆಯ ಸಾಗರ್ ಮಾತನಾಡಿ ನಮ್ಮ ಶಾಲೆಯ ಮಕ್ಕಳು ವಿನೂತನ ವಾಗಿ ಕಲೆಯನ್ನು ಎತ್ತಿ ಹಿಡಿದು ನಮ್ಮ ಶ್ರವಣಬೆಳಗೊಳ  ಕೀರ್ತಿಯನ್ನು ನಮ್ಮ ರಾಜ್ಯಕ್ಕೆ ಸಾರಿದ್ದರೆ ಹಾಗೂ ಇ ರೀತಿಯಲ್ಲಿ ಇನ್ನೂ ಹೆಚ್ಚು ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳಲ್ಲಿ ಬಂದರೆ ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚುವುದು ಕಡಿಮೆಯಾಗುತ್ತದೆ ಎಂದು ಮಕ್ಕಳು ಮತ್ತು ಶಿಕ್ಷಕರನ್ನು ಹಾಡಿಹೊಗಳಿದರು. ನಂತರ ಶಾಲ ಮಕ್ಕಳಿಗೆ  ಕಾರ್ಯವನ್ನು ಆಯೋಜಿಸಿದ ರಾಯಲ್ ಹಾಲಿಡ್ಸೆ ಬೆಂಗಳೂರು ಕಂಪನಿಯಿಂದ ಉಚಿತವಾಗಿ ನೂರಾಐವತ್ತು ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆಮಾಡಿದರು .ನಂತರ ಅದ್ಯಕ್ಷತೆ ವಹಿಸಿದ್ದ ಕುಸುಮಾ ಬಾಲಕೃಷ್ಣ ರವರಿಗೆ ರಾಯಲ್ ಹಾಲಿಡ್ಸ್ ಕಂಪನಿಯವರು ಸನ್ಮಾನ ಮಾಡಿದರು. 

ಕಾರ್ಯಕ್ರಮ ದಲ್ಲಿ ಗೋಪಾಲ ಸ್ವಾಮಿ, ಲತಾ ರಮೇಶ್, ಮಂಜುಳ ಶಂಕರ್,ರಾಯಲ್ ಹಾಲಿಡೆಸ್ ಕಂಪನಿಯ ರೀಪ್ಸನ್  ಯತೀಶ್ ದೇವಾಡಿಗ, ಸುನೀಲ್ ಪೂಜಾರಿ, ದರ್ಮೆಶ್, ರಾಘವೇಂದ್ರ, ಪ್ರ ಕಾಶ್ ,ಅಶಾ, ಶೋಭಾ.ಸಿಅರ್ಪಿ ಹೆಚ್.ಎಂ ರುದ್ರೆಶ್ ಹಾಗೂ ಶಿಕ್ಷಕರರಾದ ಪುಟ್ಟಸ್ವಾಮಿ ರವಿಚಂದ್ರನ್, ರಾಧಿಕಾ .ಶಶಿಕಲಾ ವಿ ಕೆ ಹಾಗೂ ಎಲ್ಲಾ ಮಕ್ಕಳು ಮತ್ತಿತರರು ಭಾಗವಹಿಸಿದರು.

 

.

ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಬಿಲ್ಲೇನಹಳ್ಳಿ ಗ್ರಾಮದ ಶ್ರೀಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವಕ್ಕೆ ಮೊದಲ ಪೂಜೆ ಸಲ್ಲಿಸಲು ಶಾಸಕ ಮತ್ತು ತಾಪಂ ಸದಸ್ಯರ ನಡುವೆ ಮಾತಿನ ಚಕಮುಕಿ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಿಲ್ಲೇನಹಳ್ಳಿ ಗ್ರಾಮದ ಶ್ರೀಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶಾಸಕ ನಾರಾಯಣಗೌಡರು ರಥಕ್ಕೆ ಪೂಜೆ ಸಲ್ಲಿಸಲು ಮುಂದಾದಾಗ ಸ್ವಪಕ್ಷೀಯ ತಾಪಂ ಸದಸ್ಯ ದಿನೇಶ್ ವಿರೋಧ ವ್ಯಕ್ತಪಡಿಸಿ ನಾನೇ ಪೂಜೆ ಸಲ್ಲಿಸುವುದಾಗಿ ಹೇಳಿದಾಗ ಇವರಿಬ್ಬರ ನಡುವೆ ಮಾತಿನ ಚಕಮುಕಿ ನಡೆದಿದೆ. ಇನ್ನೇನೋ ಕೈಕೈ ಮಿಲಾಯಿಸುವ ಹಂತಕ್ಕೆ ಬರುವಷ್ಟರಲ್ಲಿ ಪಟ್ಟಣದ ಪೊಲೀಸ್ ಠಾಣೆಯ ಎಸ್ಐ ವೆಂಕಟೇಶ್ ಮಧ್ಯಪ್ರವೇಶಿಸಿ ತಾಪಂ ಸದಸ್ಯ ದಿನೇಶ್ರನ್ನು ಶಾಸಕರಿಂದ ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಬೇಕಾದರೇ ತಳ್ಳಾಟ ನಡೆದಿದೆ. ದಿನೇಶ್ರನ್ನು ದೂರವಿಟ್ಟು ಶಿಷ್ಠಚಾರದಂತೆ ನಾರಾಯಣಗೌಡ ಪೂಜೆ ನೆರವೇರಿಸಿದ ಮೇಲೆ ದಿನೇಶ್ ಪೂಜೆ ಸಲ್ಲಿಸಿದ್ದಾರೆ. ಇವರಿಬ್ಬರು ಸ್ವಪಕ್ಷಿಯರಾಗಿದ್ದು, ಚುನಾವಣೆ ಪೂರ್ವವೇ ಇವರಿಬ್ಬರ ನಡುವೆ ಬಿನ್ನಭೀಪ್ರಾಯವಿತ್ತು. ರಥದ ಚಾಲನೆಯ ಪೂಜೆ ವಿಚಾರವಾಗಿ ಇವರ ಭಿನ್ನಾಭಿಪ್ರಾಯಗಳು ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಸಿಕ್ಕಿತು. 

.

ಕೆ.ಆರ್.ಪೇಟೆ.ತಾಲೂಕಿನ ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಬಿಲ್ಲೇನಹಳ್ಳಿ ಗ್ರಾಮದ ಶ್ರೀಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯಿತು.ಶಾಸಕ ನಾರಾಯಣಗೌಡ ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಗೋವುಗಳ ರಕ್ಷಕ ಗವಿರಂಗನಾಥಸ್ವಾಮಿಯ ರಥೋತ್ಸವವು ತಾಲೂಕಿನಲ್ಲಿ ನೂತನ ವರ್ಷದ ಮೊದಲ ರಥೋತ್ಸವಾಗಿದ್ದು, ರಾಜ್ಯಾದ್ಯಂತ ಭಕ್ತರು ಆಗಮಿಸಿದರು. ರಥೋತ್ಸವದ ಹಿನ್ನಲೆ ರಥವನ್ನು ವಿವಿಧ ಫಲಪುಷ್ಪಲಂಕಾರ, ತಳಿರು ತೋರಣಗಳಿಂದ ಅಲಂಕರಿಸಿಲಾಗಿತ್ತು. ಉತ್ಸವ ಮೂತರ್ಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಆರ್ಚಕರ ತಂಡ ವಿಷೇಷ ಪೂಜಾ ಪುನಾಸ್ಕರವನ್ನು ನೆರವೇರಿಸಿತು.  ಶಾಸಕ ನಾರಾಯಣಗೌಡ ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು ದೇವಸ್ಥಾನದಿಂದ ಚಾಲನೆಗೊಂಡ ರಥೋತ್ಸವ ರಥ ಬೀದಿಯಲ್ಲಿ ಸಂಚರಿಸಿತು. ಸಹಸ್ರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ಹಣ್ಣು, ಜವನ ಎಸೆದು ದೇವರ ಕೃಪೆಗೆ ಪಾತ್ರರಾದರು. ಜಾನಪದ ಕಲಾತಂಡಗಳಾದ ವೀರಾಗಾಸೆ, ಕರವಾಳಿಯ ಮೂಲದ ಚಂಡಮದ್ದಾಳೆ, ಗಾರುಡಿ ಗೊಂಬೆ, ಡೊಳ್ಳು ಕಣಿತ, ಕೀಲು ಕುದುರೆ ಸೇರಿದಂತೆ ಹಲವು ಪ್ರಕಾರದ ಜಾನಪದ ಕುಣಿತ ರಥೋತ್ಸವಕ್ಕೆ ಮೆರಗು ನೀಡಿತು. ಪೋಷಕರು ತಮ್ಮ ಮಕ್ಕಳಿಗೆ ಕಿವಿಚುಚ್ಚಿಸುವ ಮತ್ತು ಕೇಶ ಮಂಡನೆ ಜತಗೆ ದೇವಸ್ಥಾನದ ಬಳಿ ನೈವೇದ್ಯ ಸಿದ್ಧಪಡಿಸಿ ದೇವರಿಗೆ ಸಮಪರ್ಿಸಿವುದು ಸೇರಿದಂತೆ ಹಲವು ರೀತಿಯ ಹರಕೆ ತೀರಿಸಿ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ಮೊರೆಯಿಟ್ಟರು. ರಥವು ಮರಳಿ ಸ್ವಸ್ಥಾನ ತಲುಪಿತು. ಆಗಮಿಕ ಭಕ್ತರಿಗೆ ಅನ್ನಸಂತರ್ಪಣೆ, ಮಜ್ಜಿಗೆ, ಪಾನಕ ವಿತರಣೆಯನ್ನು ದೇವಸ್ಥಾನದ ಸಮಿತಿಯಿಂದ ಮಾಡಲಾಯಿತು.

ದೇವಸ್ಥಾನದ ಸಮೀಪದಲ್ಲಿರುವ ಕೆರೆಗೆ ನೂತನವಾಗಿ ಐದು ಬೋಟಿಂಗ ವ್ಯವಸ್ಥೆ ಮಾಡಲಾಗಿದೆ. ಇದು ಭಕ್ತರನ್ನು ಆಕಷರ್ಿಸುತ್ತಿದ್ದು, ಆಗಮಿಸಿದ ಭಕ್ತರು ಬೋಟಿಂಗ್ನಲ್ಲಿ ಸಂಚರಿಸಿ ಮನೆರಂಜನೆ ಪಡೆಯುತ್ತಿದ್ದಾರೆ.  ತಹಸೀಲ್ದಾರ್ ಶಿವಮೂತರ್ಿ, ಜಿಪಂ ಸದಸ್ಯ ಎಚ್.ಟಿ.ಮಂಜು, ತಾಪಂ ಉಪಾಧ್ಯಕ್ಷ ಜಾನಕೀರಾಮ್, ಸದಸ್ಯ ದಿನೇಶ್, ಮೋಹನ್, ಮನ್ಮುಲ್ ನಿದರ್ೇಶಕ ಡಾಲು ರವಿ ಸೇರಿದಂತೆ ಹಲವು ಮುಖಂಡರ ಪೂಜೆಯಲ್ಲಿ ಪಾಳ್ಗೊಂಡಿದ್ದರು.

 


ಕೆ.ಆರ್.ಪೇಟೆ ತಾಲೂಕಿನ ಕ್ಯಾತನಹಳ್ಳಿ ರಸ್ತೆಯ ತಿರುವಿನಲ್ಲಿ ಗೂಡ್ಸ್ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು   ಪರಿಣಾಮ ಪ್ರಯಾಣಿಸುತ್ತಿದ್ದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ನಾಗಮಂಗಲ ಟೌನಿನ ಅಮ್ಜಾದ್ ಖಾನ್(43) ಮೃತಪಟ್ಟ ವ್ಯಕ್ತಿ.

ಅಮ್ಜಾದ್ ಸೇರಿದಂತೆ ಮೂವರು ಮಡಕೆ ಕ್ಯಾತನಹಳ್ಳಿ ಗ್ರಾಮದ ಮಾವಿನ ತೋಟಕ್ಕೆ ಔಷಧಿ ಸಿಂಪರಣೆ ಮಾಡಲು ಕ್ಯಾತನಹಳ್ಳಿ ಮುಖ್ಯರಸ್ತೆಯ ಕೆರೆಯ ಏರಿಯ ತಿರುವಿನಲ್ಲಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ ಹೊಡೆದ ಪರಿಣಾಮ ಪ್ರಯಾಣಿಸುತ್ತಿದ್ದ ಅಮ್ಜಾದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಚಾಲಕ ಸೇರಿದಂತೆ ಉಳಿದ ಮೂವರು ಪ್ರಯಾಣಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಮೃತ ದೇಹ ಪಟ್ಟಣದ ಸಕರ್ಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮ ಪಂಚಾಯತಿ ನೂತನ ಉಪಾದ್ಯಕ್ಷರಾಗಿ ಸೊಳ್ಳೇಪುರ ಜಯರಾಮು ಅವಿರೋಧವಾಗಿ ಆಯ್ಕೆಯಾದರು.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಗಣ್ಣ ರಾಜೀನಾಮೆಯಿಂದ ತೇರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಸ್ಪರ್ಧಿಸದ ಕಾರಣ ಸೊಳ್ಳೆಪುರ ಜಯರಾಮು ಅವಿರೋಧವಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅದ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್ ರವರು ಸೇರಿದಂತೆ ನೂರಾರು ಜನ ನೂತನ ಉಪಾದ್ಯಕ್ಷರಿಗೆ ಶುಭಕೋರಿದರು.ಈ ಸಂದರ್ಭದಲ್ಲಿ ಕಿಕ್ಕೇರಿ ಪಟ್ಟಣದ ಜನತೆ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಯಾದ ಇಓ ಚಂದ್ರಮೌಳಿ, ಗ್ರಾಮ ಪಂಚಾಯಿತಿ ಪಿ ಡಿ ಓ ಕೆಂಪೇಗೌಡ, ಅದ್ಯಕ್ಷರಾದ ಮಹದೇವಮ್ಮ, ನಾಗಣ್ಣ, ಚಂದ್ರಶೇಖರ್, ಮಣೀಶ್, ರಾಜೇಶ್ ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.

ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಪ್ರಖ್ಯಾತವಾಗಿರುವ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಶಂಭುಲಿಂಗೇಶ್ವರ-ಸೋಮೇಶ್ವರ ನಾಗಕ್ಷೇತ್ರದಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು ಸರ್ಪಸುತ್ತು, ಚರ್ಮವ್ಯಾಧಿ, ಬಂಜೆತನ ನಿವಾರಣೆಗೆ ನಾಗರಹೊನಕ್ಕೆ ಪೂಜೆ ಸಲ್ಲಿಸಿಸಿದರು.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಬಯಲುಸೀಮೆಯ ಕುಕ್ಕೆ’ ಎಂದೇ ಕರೆಯುವ ಸಾಸಲು ಕ್ಷೇತ್ರದಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು  ಪವಿತ್ರಕೊಳದಲ್ಲಿ ಮಿಂದು ಸರತಿಯ ಸಾಲಿನಲ್ಲಿ ನಿಂತು ಶಂಭುಲಿಂಗೇಶ್ವರನ ದರ್ಶನ ಭಾಗ್ಯ ಪಡೆದು ನಾಗರಹೊನಕ್ಕೆ ಪೂಜೆ ಸಲ್ಲಿಸಿಸಿದರು.ಈ ಕ್ಷೇತ್ರದಲ್ಲಿ ಭಕ್ತಿ ಹಾಗೂ ಮಹಿಮೆಯ ಆಗರವಾಗಿದೆ. ಸರ್ಪಸುತ್ತು, ಚರ್ಮವ್ಯಾಧಿ, ಬಂಜೆತನ ನಿವಾರಣೆಗೆ ನಂಬುಗೆಯ ದೇವರ ಕ್ಷೇತ್ರ ಇದು. ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವುದು ಕ್ಷೇತ್ರದ ಮಹಿಮೆಗೆ ಸಾಕ್ಷಿ.ಚರ್ಮವ್ಯಾಧಿಗೆ ಸಿದ್ಧೌಷಧ ಸಾಸಲು ಕ್ಷೇತ್ರ.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಕಾರ್ತೀಕ ಮಾಸದ ಜಾತ್ರೆ, ಮಹಾಶಿವರಾತ್ರಿ ಪೂಜೆ, ಜೋಡಿ ರಥೋತ್ಸವ, ದೀಪಾವಳಿ ಹಬ್ಬದಲ್ಲಿ ಜರಗುವ ಸಗಣಿ ಹಬ್ಬ, ಕೈಲಾಸ ಬಸವೇಶ್ವರ, ನಿರ್ಮಾಣದ ಹಂತದಲ್ಲಿರುವ ಭೈರವರಾಜರ ಗುಡಿ ಕ್ಷೇತ್ರದ ಪ್ರಮುಖ ಆಕರ್ಷಣೆಗಳಾಗಿವೆ.ಎಲ್ಲ ಧರ್ಮದವರು ದೇಗುಲಕ್ಕೆ ಆಗಮಿಸುವುದು ಇಲ್ಲಿನ ವಿಶೇಷ.ಕ್ಷೇತ್ರದಲ್ಲಿ ದುರ್ಮುಖಿನಾಮನಾಮ ಸಂವತ್ಸರ, ವಸಂತ ಋತುವಿನ ಚೈತ್ರಮಾಸದ ತದಿಗೆ ಯಂದು ಸೋಮೇಶ್ವರ, ಶಂಭುಲಿಂಗೇಶ್ವರ, ಸೋಹೋದರಿ ಕುದುರೆ ಮಂಡಮ್ಮನವರ ಜೋಡಿ ಬ್ರಹ್ಮರಥೋತ್ಸವ ನಡೆಯಲಿದೆ. ರಥದ ಹಿಂದೆ ಸಾಗುವ ಕುರಿಗಳ ಮಂದೆಯ ಸಾಲು, ಹರಕೆ ಹೊತ್ತ ಬಾಯಿಬೀಗ ಭಕ್ತರ ಸಂಗಮ ಜಾತ್ರೆಗೆ ಮತ್ತಷ್ಟು ಮೆರಗು ನೀಡುತ್ತದೆ.

ಸೌರಾಷ್ಟ್ರದಿಂದ ಬಂದು ನೆಲೆಸಿರುವ ಸೋಮೇಶ್ವರ, ಶಂಭುಲಿಂಗೇಶ್ವರ ದೇವರು ಲಿಂಗರೂಪಿಯಾಗಿದ್ದು, ದೇವಾಲಯವು ಕ್ರಿ.ಶ. 1043ರಲ್ಲಿ ಹೊಯ್ಸಳ ದೊರೆ ತ್ರಿಭುವನ ಮಲ್ಲನ ಕಾಲದಲ್ಲಿ ನಿರ್ಮಾನವಾಗಿದೆ.ವರ್ತಕರಾದ ಆದಿಶೆಟ್ಟಿ ಹಾಗೂ ಕೋರಿಶೆಟ್ಟಿ ಮುತ್ತಿನ ವ್ಯಾಪಾರ ಮಾಡುತ್ತಾ ಇಲ್ಲಿಗೆ ಆಗಮಿಸಿದ್ದರು. ಸೌದೆ ಕಡಿಯುವಾಗ ಉದ್ಭವಲಿಂಗಕ್ಕೆ ಪೆಟ್ಟು ಬಿದ್ದು ವರ್ತಕರ ಪರಿವಾರದವರು ಮರಣ ಹೊಂದಿದರು. ನಂತರ ವರ್ತಕರ ಕನಸಿನಲ್ಲಿ ಕಾಣಿಸಿಕೊಂಡ ಶಿವನ ನುಡಿಯಂತೆ ಗುಡಿಯನ್ನುನಿರ್ಮಿಸಿ ಪೂಜಿಸಲು ಮುಂದಾದರು


 

ಪವಾಡ ಸದೃಶ: ದೇಗುಲದ ಬಳಿಯೇ ನಿರ್ಮಿತವಾಗಿರುವ ಕಲ್ಯಾಣಿಯಲ್ಲಿ ಸ್ನಾನ ಮಾಡುವ ಜತೆಗೆ ದೇವಾಲಯದಲ್ಲಿ ನೀಡುವ ಪವಿತ್ರ ವಿಭೂತಿ ಪ್ರಸಾದ ಸ್ವೀಕರಿಸಿದರೆ ಕಜ್ಜಿ, ತುರಿಯಂತಹ ಹಲವು ಚರ್ಮವ್ಯಾಧಿಗಳು ನಿವಾರಣೆಯಾಗಲಿವೆ. ಭೈರವರಾಜ ಜಂಗಮರು ಕೈಲಾಸಕ್ಕೆ ಹೋಗುವಾಗ ಸೋಮೇಶ್ವರ ದೇವಾಲಯದಲ್ಲಿ ಬಿಟ್ಟು ಹೋಗಿರುವ ವಿಭೂತಿ ಘಟ್ಟಿಯನ್ನು ಹಾವು ಕಚ್ಚಿದ ಸ್ಥಳಕ್ಕೆ ಇಟ್ಟಲ್ಲಿ ವಿಷ ನಿವಾರಣೆಯಾಗಲಿದೆ ಎಂಬುದು ನಂಬಿಕೆ.ದೇಗುಲದ ಲಿಂಗದ ಮುಂದೆ ಜೋಡಿ ಬಸವಣ್ಣ ಮೂರ್ತಿ ಇರುವುದು ದೇಗುಲದ ವಿಶೇಷತೆಗಳಲ್ಲಿ ಒಂದು. ಮೇಲುಗಡೆ ದೇವಾಲಯ ಎನ್ನುವ ಶಂಭುಲಿಂಗೇಶ್ವರ ದೇಗುಲದ ಬಳಿ ಇರುವ ನಾಗಬನ, ನಾಗರಕಲ್ಲುಗಳಿವೆ.

ಕೆಲ ಗ್ರಾಮಸ್ಥರು ಮಾತನಾಡಿ ಈ ದೇವಾಲಯು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಇಲ್ಲಿ ಆದಾಯವನ್ನು ಮಾತ್ರ ನೀರಿಕ್ಷೆ ಮಾಡುವ ಮುಜರಾಯಿ ಇಲಾಖೆ ಇಲ್ಲಿಗೆ ಬರುವ ಭಕ್ತರಿಗೆ  ರಾಜಗೋಪುರ, ಸ್ನಾನಘಟ್ಟ, ಯಾತ್ರಿ ನಿವಾಸ, ಉದ್ಯಾನವನ, ನಿತ್ಯ ಅನ್ನದಾಸೋಹ ಕಾರ್ಯಕ್ಕೆಸೂಕ್ತ ವ್ಯವಸ್ತೆ ಕುಡಿಯು ನೀರುಗಳನ್ನು ಒದಗಿಲ್ಲ ಎಂದು ಅಸಕ್ರೋಷ ವ್ಯಕ್ತಪಡಿಸಿದರು.ದೇವಾಲಯಕ್ಕೆ ಬಂದ ಭಕ್ತರಿಗೆ ದಾಸೋಹ ಸಮಿತಿ ವತಿಂದ ಗ್ರಾಮಸ್ಥರಿದ ಸುಮಾರು 50 ಕ್ವೀಟಲ್ ಅನ್ನ ಸಾಂಬಾರ್ ಮಜ್ಜಿಗೆ ತಯಾರಿಸಿ ಭಕ್ತರ ಅಸಿವು ನೀಗಿಸಲಾಯಿತು.

ಯಾವುದೇ ದುರ್ಘಟನೆಗಳು ನೆಡೆಯದಂತೆ ಸರ್ಕಲ್ ಇನ್ಸ್ ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಕಿಕ್ಕೇರಿ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಸಿಬ್ಬಂದಿ ನಿಂಗರಾಜು ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.ಬಯಲು ಸೀಮೆಯ ಸುಬ್ರಹ್ಮಣ್ಯನ ದರುಶಣ ಪಡೆಯು ಸುಮಾರು 70 ರಂದ 80 ಸಾವಿರ ಜನರು ಭಾಗವಹಿಸಿದ್ದರು.

 

Page 14 of 28

Visitors Counter

228437
Today
Yesterday
This Week
This Month
Last Month
All days
6
237
1191
4838
6704
228437

Your IP: 3.135.194.251
2024-05-17 02:36

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles