ಮಂಡ್ಯ

Rate this item
(0 votes)

ಕೃಷ್ಣರಾಜಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದಲ್ಲಿ ನಡೆದಿರುವ ಗುಂಡೇಗೌಡ ಲಲಿತಮ್ಮ ದಂಪತಿಗಳ ಕೊಲೆ ಪ್ರಕರಣದಲ್ಲಿ ಪಕ್ಕದ ಮನೆಯವನಾದ ಒಬ್ಬರಾದ ಯೋಗೇಶ್ ಅವರಿಂದ ಮಾತ್ರ ಈ ಜೋಡಿಕೊಲೆ ನಡೆದಿಲ್ಲ ಯೋಗೇಶ್ ಅವರೊಂದಿಗೆ ಹಲವಾರು ಜನರು ಈ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆ ಹಾಗೂ ಅನುಮಾನವಿದ್ದು ಪೋಲಿಸರು ನಿಷ್ಪಕ್ಷಪಾತವಾಗಿ ತನಿಖೆಯನ್ನು ನಡೆಸಿ ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯನ್ನು ವಿಧಿಸಬೇಕು ಎಂದು ಇಂದು ಗ್ರಾಮಕ್ಕೆ ಭೇಟಿ ನೀಡಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ಅವರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿ ಕೆಲಕಾಲ ದಿಗ್ಬಂಧನ ವಿಧಿಸಿ ಆಕ್ರೋಶ ವ್ಯಕ್ತಪಡಿಸಿದರು... ಯೋಗೇಶ್ ಒಬ್ಬ ಅಮಾಯಕನಾಗಿದ್ದು ಈತನೊಬ್ಬನೇ ವಯಕ್ತಿಕ ದ್ವೇಷದಿಂದ ಕೊಲೆ ಮಾಡಿದ್ದಾನೆ ಎಂದರೆ ನಂಬಲು ಸಾಧ್ಯವಿಲ್ಲ..ಕೊಲೆಯಾಗಿರುವ ದಂಪತಿಗಳ ಬಳಿಯಿದ್ದ ಒಡವೆಗಳು ಮತ್ತು ಹಣವೂ ಕಾಣುತ್ತಿಲ್ಲ. ಆದ್ದರಿಂದ ಪೋಲಿಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಪ್ರತಿಭಟನೆ ನಡೆಸಲು ಮುಂದಾದಾಗ ಜಿಲ್ಲಾ ಪಂಚಾಯತಿ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಗ್ರಾಮಸ್ಥರನ್ನು ಸಮಾಧಾನಪಡಿಸಿ ಹದಿನೈದು ದಿನಗಳಲ್ಲಿ ಜೋಡಿಕೊಲೆ ಪ್ರಕರಣದ ಸಂಪೂರ್ಣ ವಿವರವನ್ನು ನೀಡುತ್ತಾರೆ, ಸಹಕರಿಸಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಗ್ರಾಮಸ್ಥರು ಕೈಬಿಟ್ಟರು...

Rate this item
(0 votes)

ರಾಯಸಮುದ್ರ ಗ್ರಾಮದಲ್ಲಿ ಗುಂಡೇಗೌಡ ಲಲಿತಮ್ಮ ದಂಪತಿಗಳ   ಜೋಡಿಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ...  ಕೃಷ್ಣರಾಜಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದಲ್ಲಿ ಗುಂಡಣ್ಣ ಲಲಿತಮ್ಮ ದಂಪತಿಗಳನ್ನು ಹತ್ಯೆಮಾಡಿ ತಲೆಮರೆಸಿಕೊಂಡಿದ್ದ ಪಕ್ಕದ ಮನೆಯ ವಾಸಿಯೇ ಆದ ಬೋರೇಗೌಡರ ಮಗ ಯೋಗೇಶನನ್ನು ಕೆ.ಆರ್.ಪೇಟೆ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ತಲೆಗೆ ಮತ್ತು ಮುಖಕ್ಕೆ ಹೊಡೆದು ಹತ್ಯೆಮಾಡಿರುವುದಾಗಿ ಯೋಗೇಶ ಒಪ್ಪಿಕೊಂಡಿದ್ದಾರೆ ಎಂದು ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದರು‌. ಜೋಡಿಕೊಲೆ ಹತ್ಯೆ ಆರೋಪಿಯನ್ನು ಎಎಸ್ ಪಿ ಬಲರಾಮೇಗೌಡ, ಡಿವೈಎಸ್ ಪಿ ವಿಶ್ವನಾಥ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್, ಅಪರಾಧ ಪತ್ತೆ ಸಿಬ್ಬಂಧಿಗಳಾದ ಹೆಚ್.ಪ್ರಕಾಶ್, ಬಿ.ಎಸ್.ಚಂದ್ರಶೇಖರ್, ಬಸವರಾಜು, ಪ್ರಶಾಂತಕುಮಾರ್, ರಘು, ಗುರುಪ್ರಸಾದ್, ಚಾಲಕರಾದ ಮಂಜುನಾಥ ಮತ್ತು ವಾಸು ಭಾಗವಹಿಸಿದ್ದರು. ಜೋಡಿಕೊಲೆ ಆರೋಪಿಯನ್ನು ಪತ್ತೆಹಚ್ಚಿದ ಕೆ.ಆರ್.ಪೇಟೆ ಪೋಲಿಸರ ತಂಡವನ್ನು ಎಸ್ ಪಿ ಶಿವಪ್ರಕಾಶ್ ದೇವರಾಜ್ ಅಭಿನಂದಿಸಿದ್ದಾರೆ...

Rate this item
(0 votes)

ಕುಡಿದು ಕಬ್ಬಿನ ಲಾರಿಯನ್ನು ಚಾಲನೆ ಮಾಡಿ ಎಮ್ಮೆಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಎಮ್ಮೆ ಸಾವನ್ನಪ್ಪಿದ ಘಟನೆ ಕುಪ್ಪಳ್ಳಿಯಲ್ಲಿ ನಡೆದಿದೆ.

ಮಂಡ್ಯ:  ಕೃಷ್ಣರಾಜಪೇಟೆ ತಾಲೂಕಿನ ಕುಪ್ಪಳ್ಳಿ ಕೆರೆ ಬಳಿ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ತುಂಬಿಕೊಂಡು ಹೋಗುತ್ತಿದ್ದು ,ಅತಿಯಾಗಿ ಕಬ್ಬನ್ನು ತುಂಬಿಕೊಂಡು ಮತ್ತು ಮದ್ಯಪಾನ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ಅಕ್ಕಪಕ್ಕದ ಸಾರ್ವಜನಿಕರು ತಿಳಿಸಿದ್ದಾರೆ .ಮೂಡ್ನಲ್ಲಿ ಗ್ರಾಮದ ಚಾಲಕನಾದ ನಾಗೇಶ್ ಅಲಿಯಾಸ್ (ಬೆಂಕಿ ) ಎಂದು ತಿಳಿದು ಬಂದಿದೆ .
ಲಾರಿ ಮಾಲೀಕರಾದ ಕುರುಬಳ್ಳಿ ಪ್ರತಾಪ್ ಗೆ ಸೇರಿದ ಲಾರಿ ಎಂದು ಹೇಳಲಾಗುತ್ತಿದೆ .ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ .

Rate this item
(0 votes)

ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ದಿವಂಗತ ಹೆಚ್.ಎಲ್.ಹನುಮಂತೇಗೌಡರಿಗೆ ನುಡಿನಮನ, ಶ್ರದ್ಧಾಂಜಲಿ .

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ದಿವಂಗತ ಹೆಚ್.ಎಲ್.ಹನುಮಂತೇಗೌಡರಿಗೆ ನುಡಿನಮನ, ಶ್ರದ್ಧಾಂಜಲಿ ಸಮರ್ಪಣೆ.
ಹನುಮಂತೇಗೌಡರು ನಾಯಕತ್ವ ಗುಣಗಳನ್ನು ಹೊಂದಿದ್ದ ಹೃದಯವಂತ ವ್ಯಕ್ತಿಯಾಗಿ ಸದಾ ಸಮಾಜದ ಹಿತವನ್ನೇ ಬಯಸುತ್ತಿದ್ದರು..ಅವರ ಅಕಾಲಿಕ ನಿಧನವು ಇಡೀ ಸಮಾಜಕ್ಕೆ ತುಂಬಲಾರದ ನಷ್ಠವಾಗಿದೆ. ನಾನು ನನ್ನ ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಅವರ ಕೊನೆಯಾಸೆಯಂತೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಭವನವನ್ನು ನಿರ್ಮಿಸುವ ದಿಕ್ಕಿನಲ್ಲಿ ಕ್ರಿಯಾಶೀಲರಾಗಿ ಹೆಜ್ಜೆ ಹಾಕಬೇಕು. ನಿವೃತ್ತ ನೌಕರರ ಭವನದ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಮಾಜಿಸ್ಪೀಕರ್ ಕೃಷ್ಣ ತಿಳಿಸಿದರು...
ಅವರು ಇಂದು ತಾಲ್ಲೂಕಿನ ಗೋವಿಂದೇಗೌಡನಕೊಪ್ಪಲು ಗ್ರಾಮದಲ್ಲಿ ನಡೆದ ಹೆಚ್.ಎಲ್.ಹನುಮಂತೇಗೌಡರ 11ನೇ ದಿನದ ಪುಣ್ಯತಿಥಿಯ ಅಂಗವಾಗಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಹನುಮಂತೇಗೌಡರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಮಾತನಾಡಿದರು...ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸದಾ ಸಮಾಜದ ಒಳಿತಿಗಾಗಿ ಚಿಂತಿಸುತ್ತಿದ್ದ ಹನುಮಂತೇಗೌಡರ ಪರಿಶ್ರಮದ ಫಲವಾಗಿ ಪಟ್ಟಣದಲ್ಲಿ ಶಿಕ್ಷಕರ ಭವನದ ನಿರ್ಮಾಣವಾಗಿದೆ. ಪ್ರಸ್ತುತ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಗೌಡರು ನಿವೃತ್ತ ನೌಕರರ ಸಮಸ್ಯೆಗಳ ನಿವಾರಣೆಗಾಗಿ ಸದಾ ಕೆಲಸ ಮಾಡುತ್ತಾ ನಿವೃತ್ತ ನೌಕರರ ಸಭಾ ಭವನದ ನಿರ್ಮಾಣಕ್ಕೆ ಹೆಜ್ಜೆಹಾಕಿ ಪುರಸಭೆಯ ವತಿಯಿಂದ ಸೂಕ್ತ ನಿವೇಶನವನ್ನೂ ಮಂಜೂರು ಮಾಡಿಸಿಕೊಂಡು ಅಡಿಪಾಯ ಕಾಮಗಾರಿಗೆ ಚಾಲನೆ ನೀಡಿದ್ದರು. ಸಂಘಟನಾ ಚತುರರಾಗಿ ರಾಜಕೀಯ ರಂಗದ ಅಜಾತ ಶತ್ರುವಿನಂತಿದ್ದ ಗೌಡರ ಆದರ್ಶ ಗುಣಗಳು, ಏನನ್ನಾದರೂ ಸಾಧಿಸಬೇಕೆಂಬ ಛಲವನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದಲಾವಣೆಯ ದಿಕ್ಕಿನತ್ತ ಸಾಗಬೇಕು ಎಂದು ಕೃಷ್ಣ ಕರೆ ನೀಡಿದರು... ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ಸಂಘದ ಅಧ್ಯಕ್ಷ ಎನ್.ಕೆ.ನಂಜಪ್ಪಗೌಡ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಂ.ಚಿ.ಸಣ್ಣಸ್ವಾಮಿಗೌಡ, ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳಾದ ಎ.ಎಲ್.ನಂಜಪ್ಪ, ಶ್ರೀಕಂಠೇಗೌಡ, ನಜೀರ್ ಅಹಮದ್, ಎಸ್.ಎಲ್.ರಂಗಸ್ವಾಮಿ, ಶಿವರಾಮ್, ವೆಂಕಟರಮಣಶೆಟ್ಟಿ, ಲಕ್ಷ್ಮಣಗೌಡ, ಗಣೇಶ್ ಗೌಡ, ಚಂದ್ರೇಗೌಡ ಮತ್ತಿತರರು ಹನುಮಂತೇಗೌಡರ ಆದರ್ಶ ಗುಣಗಳು ಹಾಗೂ ಜನಪರವಾದ ಹೋರಾಟವನ್ನು ಕುರಿತು ಮಾತನಾಡಿ ನುಡಿನಮನ ಸಲ್ಲಿಸಿದರು...

 

Rate this item
(1 Vote)

ದಿನಾಂಕ:22.07.19 ರಂದು  ರಾತ್ರಿ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯ ಮಟ್ಟನವಿಲೆ NH 75 BM Road ಬಳಿ ಸುಮಾರು 25 ರಿಂದ 30 ವಯಸ್ಸಿನ ಅಪರಿಚಿತ ಹೆಂಗಸನ್ನು ವೇಲಿನಿಂದ ಕುತ್ತಿಗೆ ಹಿಸುಕಿ ಸಾಯಿಸಿ ಬಿಸಾಕಿ ಹೋಗಿದ್ದ ಪ್ರಕರಣವನ್ನು ಭೇಧಿಸಿದ್ದು, ಪ್ರಕರಣದ ಆರೋಪಿಯಾದ ಶ್ರೀನಿವಾಸ ಎಂಬಾತನು ಸಂಬಂಧಿಯಾದ  ಮೃತೆ ಕು.ಚಿತ್ರ, 23 ವರ್ಷ ಈಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಕೆ ಗರ್ಭವತಿಯಾಗಿದ್ದು, ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಆಕೆಯನ್ನು ಪುಸಲಾಯಿಸಿ ಕರೆದುಕೊಂಡು ಬಂದು ಕೊಲೆ ಮಾಡಿ ಬಿಸಾಕಿ ಹೋಗಿರುವುದು ತನಿಖೆಯಿಂದ ಕಂಡುಬಂದಿರುತ್ತದೆ

. ಪ್ರಕರಣದಲ್ಲಿ ಆರೋಪಿ ಪತ್ತೆಗೆ ಮಾನ್ಯ ಪ್ರಭಾರ ಪೊಲೀಸ್  ಅಧೀಕ್ಷಕರಾದ ಶ್ರೀಮತಿ ನಂದಿನಿ B N ಹಾಗೂ ಹೊಳೆನರಸೀಪುರ ಡಿವೈಎಸ್ಪಿ ಶ್ರೀ ಲಕ್ಷ್ಮೇಗೌಡರವರ ಮಾರ್ಗದರ್ಶನದಲ್ಲಿ, ಚನ್ನರಾಯಪಟ್ಟಣ ವೃತ್ತ ನಿರೀಕ್ಷಕರಾದ ಶ್ರೀ ಕಾಂತರಾಜು ಹಾಗೂ ಹಿರೀಸಾವೆ ಪೊಲೀಸ್ ಉಪ ನಿರೀಕ್ಷಕರಾದ ಗಿರೀಶ್ ಹಾಗೂ ಸಿಬ್ಬಂದಿ ವರ್ಗದವರು ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕಾರ್ಯಕ್ಕೆ ಮಾನ್ಯ ಪ್ರಭಾರ ಪೊಲೀಸ್ ಅಧೀಕ್ಷಕರು ಹಾಸನ ಜಿಲ್ಲೆ ರವರು ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿರುತ್ತಾರೆ.

Last modified on 01/08/2019
Rate this item
(0 votes)

ಈ‌ ದಿನ ದಿ. 01/08/2019 ರಂದು ಸಂಜೆ ಕಿಕ್ಕೇರಿ ಪೊಲೀಸ್ ಠಾಣೆ ಸರಹದ್ದಿನ ಮಂದಗೆರೆ ಗ್ರಾಮದ  ಹೇಮಾವತಿ ಹೊಳೆ ದಡದಲ್ಲಿ ಒಂದು‌ ಅಪರಿಚಿತ ಹುಡುಗಿ ಶವ ದೊರೆತಿದ್ದು ಹೆಸರು  ವಿಳಾಸ ದೊರೆತಿರುವುದಿಲ್ಲ. ನಂತರ ಅಪರಿಚಿತ ಹುಡುಗಿ ಹೆಸರು  ಮತ್ತು ವಿಳಾಸ ಪತ್ತೆ ಸಂಬಂಧ ಮಾಹಿತಿ ಸಂಗ್ರಹಿಸಲಾಗಿ ಸದರಿ‌ ಹುಡುಗಿಯ ಹೆಸರು ರಂಜಿತ ಡಾ/ಆಫ್ ನಾಗರಾಜು, 16 ವರ್ಷ, ಹೊಳೆ ನರಸೀಪುರ ಸರ್ಕಾರಿ ಬಾಲಕಿಯರ ಕಾಲೇಜು ಇಲ್ಲಿ ಪ್ರಥಮ ಪಿಯುಸಿ ವ್ಯಾಸಂಗ, ವಾಸಃ ನಾರಾಯಣ್ ರವರ ಬಾಡಿಗೆ ಮನೆ, ವಡ್ಡರಗುಡಿ ಗ್ರಾಮ, ಅಕ್ಕಿ ಹೆಬ್ಬಾಳು ಹೋಃ, ಕೆ.ಆರ್.ಪೇಟೆ ತಾಃ ಎಂದು‌ ತಿಳಿದು‌ ಬಂದಿರುತ್ತದೆ. ಸದರಿ ಹುಡುಗಿಗೆ ತಂದೆ ನಾಗರಾಜು, ತಾಯಿ ಜವರಮ್ಮ, ಮಾನಸ ಮತ್ತು ಕಾವೇರಿ ಎಂಬ ಇಬ್ಬರು ಅಕ್ಕಂದಿರು ಇರುತ್ತಾರೆ ಎಂದು ಮಾಹಿತಿ ತಿಳಿದು ಬಂದಿರುತ್ತದೆ.

ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಸಮೀಪದ ವಡ್ಡರಗುಡಿ ಗ್ರಾಮದ ಯುವತಿ  ಎಂದು ತಿಳಿದು ಬಂದಿದೆ ಆತ್ಮಹತ್ಯೆಗೆ ಯಾವ ಕಾರಣ ತಿಳಿದು ಬಂದಿರಿವುದಿಲ್ಲ

Last modified on 01/08/2019
Rate this item
(1 Vote)

ಮಂಡ್ಯ: ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು

Rate this item
(0 votes)

ಸಾಲಬಾಧೆ ತಾಳಲಾರದೇ 3 ವರ್ಷದ ಹಿಂದೆ ಮದ್ವೆಯಾಗಿದ್ದ ಜೋಡಿ ನೇಣಿಗೆ ಶರಣು

ಮದ್ದೂರು : ಸಾಲಬಾಧೆ ತಾಳಲಾರದೇ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಮೆಳ್ಳಹಳ್ಳಿ ಗ್ರಾಮದಲ್ಲಿ ನಡೆದಿದೆ.ನಾಗರಾಜು(28) ಮತ್ತು ಮಂಜುಳ(24) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮೂರು ವರ್ಷಗಳ ಹಿಂದೆ ನಾಗರಾಜು ಮತ್ತು ಮಂಜುಳ ಮದುವೆಯಾಗಿತ್ತು. ಈ ದಂಪತಿಗೆ ಒಂದು ಗಂಡು ಮಗು ಕೂಡ ಇದೆ. ಆದರೆ ಇಂದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ.

ದಂಪತಿಗೆ ಸುಮಾರು 1.5 ಲಕ್ಷ ರೂ. ಸಾಲ ಇತ್ತು ಎಂದು ತಿಳಿದು ಬಂದಿದೆ. ಹೀಗಾಗಿ ಸಾಲಗಾರರ ಕಿರುಕುಳದಿಂದ ಬೇಸತ್ತು ನಾಗರಾಜು ಮತ್ತು ಮಂಜುಳ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Page 5 of 34

Visitors Counter

220417
Today
Yesterday
This Week
This Month
Last Month
All days
135
274
2034
3522
4244
220417

Your IP: 18.221.174.248
2024-04-19 19:38

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles