ಮಂಡ್ಯ

Rate this item
(1 Vote)

ನೀರು ಹಾಯಿಸುತ್ತಿದ್ದಾಗ ಏಕಾ ಏಕಿ ಹೆಜ್ಜೇನುಗಳು ದಾಳಿ .ರೈತ ಲೋಕೇಶ್ ಸ್ಥಳದಲ್ಲಿಯೇ ಸಾವು..

ಕೃಷ್ಣರಾಜಪೇಟೆ: ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಜಮೀನಿನಲ್ಲಿ ನೀರು ಹಾಯಿಸುತ್ತಿದ್ದಾಗ ಏಕಾ ಏಕಿ ಹೆಜ್ಜೇನುಗಳು ದಾಳಿ ಮಾಡಿದ್ದರಿಂದ ಲೋಕೇಶ್ ಎಂದು ರೈತ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಮೃತ ಲೋಕೇಶ್ ಅವರ ರಕ್ಷಣೆಗೆ ಮುಂದಾಗಿದ್ದ ನಾಗರಾಜು ಮತ್ತು ಕಾಳಶೆಟ್ಟಿಯವರಿಗೂ ಜೇನುಗಳು ದಾಳಿ ಮಾಡಿವೆ ಅವರು ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಲೋಕೇಶ್ ಶೆಟ್ಟಿ ಮದುವೆಯಾಗಿ ಇಬ್ಬರು ಗಂಡು ಮಕ್ಕಳಿದ್ದರು ನಾಲ್ಕು ವರ್ಷದ ಮಗು ಮತ್ತು ಆರು ವರ್ಷದ ಮಗು ಇಬ್ಬರು ಗಂಡು ಮಕ್ಕಳಿದ್ದರು ಗ್ರಾಮದಲ್ಲಿ ಸೂತಕದ ಛಾಯಾ ನಿರ್ಮಾಣವಾಗಿದೆ

 

Rate this item
(1 Vote)

 ಅತೀ ವೇಗವಾಗಿ ಚಲಿಸಿ ನಿಯಂತ್ರಣ ತಪ್ಪಿ ಅಟೊಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಕಾರು.ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಂಡ್ಯ:  ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆ ಕೊಪ್ಪಲು ಗೆಟ್ ಬಳಿ ಅತೀ ವೇಗವಾಗಿ ಬಂದು ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿ ಹೊಗುತ್ತಿದ್ದ ಅಟೊಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಹಾರಿ ರಸ್ತೆ ಪಕ್ಕದಲ್ಲಿ ಮಗುಚಿ ಬಿದ್ದಿದೆ .ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಅಟೊದಲ್ಲಿ ಪ್ರಯಾಣಿಸುತ್ತಿದ್ದ ಅಪ್ಪನಹಳ್ಳಿ ಒಬ್ಬ ವ್ಯಕ್ತಿಯ ಕಾಲಿ ಸ್ವಲ್ಪ ಪ್ರಮಾಣದ ಗಾಯಗಾಳಾಗಿದೆ. ಗಾಯಾಳು ಅಟೋ ಡ್ರೈವರ್ ನಾಗರಾಜು ವನ್ನು ಸಂತೇಬಾಚಹಳ್ಳಿ ಅರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ.ಒಟ್ಟು ಕಾರಿನಲ್ಲಿ ಐದ ಜನ ಯುವಕರು ಇದ್ದು ಪಾನಮತ್ತರಾಗಿದ್ದು ಸ್ಥಳದಿಂದ ಪೇರಿ ಕಿತ್ತಿದ್ದಾರೆ . ಅತೀ ವೇಗವಾಗಿ ಕಾರು ಚಾಲಾಯಿಸಿದ್ದೆ ಅಪಘಾತಕ್ಕೆ ಕಾರಣ .ಸದ್ಯಕ್ಕೆ ಕಾರು ಅನುವಿನಕಟ್ಟೆ ಗ್ರಾಮದ ಸಾಗರ್ ಎಂಬುವರದ್ದು ಎಂಬ ಮಾಹಿತಿ ಇದ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Media

Rate this item
(0 votes)

ಮಂಡ್ಯದಲ್ಲಿ  ಇವಾಗ ಚಪ್ಪಲಿ ರಾಜಕೀಯ..!! ಸಾಮಾಜಿಕ ಜಾಲತಾಣದಲ್ಲಿ ಚಪ್ಪಲಿ ವಿಡಿಯೋ ವೈರಲ್...

ವಿಡಿಯೋದಲ್ಲೇನಿದೆ..?
ಮನೆಯಿಂದ ಹೊರಬರುತ್ತಿದ್ದಂತೆಯೇ ಸುಮಲತಾ ತಮ್ಮ ಗನ್ ಮ್ಯಾನ್‍ಗೆ ಕೆಳಗೆ ಏನೋ ತೋರಿಸುವ ಮೂಲಕ ಸೂಚಿಸುತ್ತಾರೆ. ಆಗ ಗನ್ ಮ್ಯಾನ್ ಕೆಳಗೆ ಬಗ್ಗಿ ಸುಮಲತಾ ಕಾಲಿಗೆ ಚಪ್ಪಲಿ ತೊಡಿಸಿದ್ದಾರೆ. ಇತ್ತ ತನ್ನ ಕಾಲಿಗೆ ಚಪ್ಪಲಿ ತೊಡಿಸಲು ಬಂದ ಕಾರ್ಯಕರ್ತನನ್ನು ತಡೆದಿದ್ದಾರೆ.ಕಳೆದ ಮಾರ್ಚ್ 20ರಂದು ಸುಮಲತಾ ತಮ್ಮ ಬೆಂಬಲಿಗ ಸಚ್ಚಿದಾನಂದರ ಮನೆಗೆ ಹೋಗಿದ್ದಾರೆ. ಮಾತುಕತೆ ನಡೆಸಿ ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಸುಮಲತಾ ತನ್ನ ಗನ್ ಮ್ಯಾನ್ ಕೈಯಲ್ಲಿ ಚಪ್ಪಲಿ ತೊಡಿಸಿಕೊಂಡಿದ್ದಾರೆ. ಆದ್ರೆ ಚಪ್ಪಲಿ ತೊಡಿಸುವ ದೃಶ್ಯ ಸೆರೆಯಾಗಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಟ್ರೋಲ್ ಆಗುತ್ತಿದ್ದು, ಸುಮಲತಾ ಅವರು ಚಪ್ಪಲಿಯನ್ನೇ ತೆಗೆಸಿ ಹಾಕಿಸಿಕೊಂಡಿದ್ದಾರೆ. ಇದು ಎಷ್ಟರಮಟ್ಟಿಗೆ ಸ್ವಾಭಿಮಾನ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನೊಂದೆಡೆ ಶನಿವಾರ ನಿಖಿಲ್ ಅವರು ಮದ್ದೂರು ಭಾಗದಲ್ಲಿ ಪ್ರಚಾರ ನಡೆಸಿದ ವೇಳೆ ನಡೆದುಕೊಂಡು ಬರುತ್ತಿದ್ದಾಗ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಹಾಕಲು ಬಂದಿದ್ದಾರೆ. ಆದ್ರೆ ನಿಖಿಲ್ ಅವರನ್ನು ತಡೆದು ತಾನೇ ಚಪ್ಪಲಿಕೊಂಡು ಅವರನ್ನು ಮುಟ್ಟಿ ಕೈ ಮುಗಿದಿದ್ದಾರೆ.

Media

Last modified on 03/04/2019
Rate this item
(0 votes)

ಮಂಡ್ಯ ಜಿಲ್ಲಾ ಬಿಜೆಪಿ ಘಟಕವು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಜಿಲ್ಲಾಧ್ಯಕ್ಷರಾದ ನಾಗಣ್ಣನವರು ಮನವಿ ಮಾಡಿದರು .

ಮಂಡ್ಯ:   ಜಿಲ್ಲಾ ಜನರ ಸ್ವಾಭಿಮಾನವನ್ನು ಎತ್ತಿ ಹಿಡಿಯಲು ಸುಮಲತಾ ಅವರನ್ನು ಬೆಂಬಲಿಸಿ ವಿಜಯಮಾಲೆಯನ್ನು ತೊಡಿಸಿ ಹೊಸ ಇತಿಹಾಸವನ್ನು ನಿರ್ಮಾಣ ಮಾಡುವಂತೆ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು . ವಂಶಪಾರಂಪರ್ಯ ಆಡಳಿತವನ್ನು ಕೊನೆಗಾಣಿಸಿ ಮಂಡ್ಯ ಜಿಲ್ಲೆಯ ಜನರ ಸ್ವಾಭಿಮಾನವನ್ನು ಎತ್ತಿ ಹಿಡಿಯಲು ನಮ್ಮ ಮನೆ ಮಗಳಾದ ಸಮಲತಾ ಅಂಬರೀಶ್ ಅವರನ್ನು ಗೆಲ್ಲಿಸಿ ಜಿಲ್ಲೆಯಲ್ಲಿ ಹೊಸ ರಾಜಕೀಯ ಮನ್ವಂತರಕ್ಕೆ ನಾಂಧಿ ಹಾಡಬೇಕು ಎಂದು ನಾಗಣ್ಣಗೌಡ ಕರೆ ನೀಡಿದರು.

ಅಪ್ಪ ಮಕ್ಕಳು ಮೊಮ್ಮಕ್ಕಳು ಎಲ್ಲ ಸೇರಿ ದೇಶವನ್ನು ಆಡಬೇಕು ಎಂದು ಪಣ ತೊಟ್ಟಿದ್ದಾರೆ .ಬೇರೆಯವರಿಗೆ ನಮ್ಮ ಮಂಡ್ಯದಲ್ಲಿ ಟಿಕೆಟ್ ಕೊಟ್ಟಿದ್ದರೆ ನಮ್ಮ ಅಭ್ಯಂತರ ಆಗುತ್ತಿರಲಿಲ್ಲ .ಅಪ್ಪ ಪ್ರಧಾನಿ ಮಗ ಮುಖ್ಯಮಂತ್ರಿ ಮಕ್ಕಳು ಸಂಸದರು ಸೊಸೆಯರು ಸಂಸದರು ಆಗಬೇಕು ಎಂದು ಅವರ ಅನಿಸಿಕೆ ,ಹೀಗಾಗಿ ಅವರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಕಿವಿಮಾತು ಹೇಳಿದರು .

ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್, ಮುಖಂಡರಾದ ವರದರಾಜೇಗೌಡ, ಬೂಕಹಳ್ಳಿ ಹರೀಶ್, ಭರತ್ ಕುಮಾರ್, ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು..

Media

Rate this item
(0 votes)

ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವದ ಸಂಭ್ರಮ. ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಭಾಗಿ

ಕೃಷ್ಣರಾಜಪೇಟೆ  :ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಗ್ರಾಮರಕ್ಷಕ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮ ಸಡಗರದಿಂದ ಜರುಗಿತು.ಉಘೇ..ಆಂಜನೇಯ ಉಘೇ ಉಘೇ ಎಂದು ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು. ಶಾಸಕ ಡಾ.ನಾರಾಯಣಗೌಡ ರಥದಲ್ಲಿ ವಿರಾಜಮಾನವಾಗಿದ್ದ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗೆ ಸಾಂಕೇತಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು.   ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿ. ರಥದಲ್ಲಿ ವಿರಾಜಮಾನವಾಗಿದ್ದ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗೆ ಸಾಂಕೇತಿಕ ಪೂಜೆ ಸಲ್ಲಿಸಿದರು.ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆನಂದೇಗೌಡ ಅವರ ನೇತೃತ್ವದಲ್ಲಿ ಬಿಗಿಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Last modified on 21/03/2019
Rate this item
(1 Vote)

ಇಂದು ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿಯಾಗಿ ನಾಮಿನೇಷನ್ ಮಾಡಬೇಕಿತ್ತು. ಆದರೆ ದಿಢೀರ್ ಎಂದು ನಾಮಪತ್ರ ಸಲ್ಲಿಕೆಯನ್ನು ರದ್ದು ಮಾಡಿದ್ದಾರೆ.

ಮಂಡ್ಯ: ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಚುನಾವಣೆಗೆ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆಗೆ ನಿರ್ಧಾರವಾಗಿತ್ತು. ಇಂದಿನ ನಾಮಪತ್ರ ಸಲ್ಲಿಕೆ ರದ್ದು ಮಾಡಿ, ಒಟ್ಟಿಗೆ 25ರಂದು ನಾಮಪತ್ರ ಸಲ್ಲಿಕೆಗೆ ನಿರ್ಧಾರ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್ ಮಾಹಿತಿ ನೀಡಿದ್ದಾರೆ.ಜ್ಯೋತಿಷಿಗಳ ಸಲಹೆಯಂತೆ ಸಮಯ ನಿಗದಿಪಡಿಸಲಾಗಿದ್ದು, ಗುರುವಾರ ನಾಮಪತ್ರ ಸಲ್ಲಿಸಿದರೆ ಗುರುಬಲ ಕೂಡಿಬರಲಿದೆ ಅನ್ನೋ ನಂಬಿಕೆಯಿಂದಾಗಿ ಇಂದು ನಾಮಿನೇಷನ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ 25 ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ನಾಮಪತ್ರ ಸಲ್ಲಿಕೆಯನ್ನು ರದ್ದು ಮಾಡಿದ್ದಾರೆ.ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾರ್ಚ್ 25ರಂದು ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ 80 ಸಾವಿರಕ್ಕೂ ಹೆಚ್ಚು ಜನರ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಸಿಎಂ, ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಜಿಲ್ಲೆಯ ಶಾಸಕರು, ಸಚಿವರು ಭಾಗಿಯಾಗಲಿದ್ದಾರೆ. ಅಷ್ಟೇ ಅಲ್ಲದೇ ಬುಧವಾರದ ಸುಮಲತಾ ನಾಮಪತ್ರ ಕಾರ್ಯಕ್ರಮಕ್ಕೆ ಸೆಡ್ಡು ಹೊಡೆಯಲು ಜೆಡಿಎಸ್ ಚಿಂತನೆ ನಡೆಸಿದ್ದು, ಕಳೆದ ದಿನಕ್ಕಿಂತಲು ಹೆಚ್ಚಿನ ಜನ ಸೇರಿಸಲು ಪ್ಲಾನ್ ಮಾಡುತ್ತಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರದಿಂದಲೂ ಕನಿಷ್ಟ ಹತ್ತು ಸಾವಿರ ಜನ ಕರೆತರಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Rate this item
(0 votes)

 ಚಲನಚಿತ್ರ ಮಂಡಳಿಯವರು ಗೌರವದಿಂದ ಮನೆಯಲಿರಬೇಕು, ಅದನ್ನ ಬಿಟ್ಟು ದೇವೇಗೌಡರು, ಕುಮಾರಣ್ಣನ ಬಗ್ಗೆ ಟೀಕೆ ಮಾಡಿದರೇ ನಿಮ್ಮ ಆಸ್ತಿ, ಅಂತಸ್ತು ಸೇರಿದಂತೆ ಎಲ್ಲವನ್ನೂ ತನಿಖೆ ಮಾಡಿಸುತ್ತೇವೆ ಎಂದು ಶಾಸಕ ನಾರಾಯಣಗೌಡ..ನಟ ದರ್ಶನ್, ಯಶ್ ಸೇರಿದಂತೆ ಸುಮಲತಾ ಅಂಬರೀಷ್ ಪರವಾಗಿ ನಿಲ್ಲುವ ಎಲ್ಲಾ ನಟ, ನಿಮರ್ಾಪಕರಿಗೆ ಎಚ್ಚರಿಕೆ ನೀಡಿದ್ದಾರೆ.

ಕೆ.ಆರ್.ಪೇಟೆ: ಪಟ್ಟಣದ ಶಾಸಕರ ನಿವಾಸದ ಬಳಿ ಮೈದಾನದಲ್ಲಿ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ಅಂಬರೀಷ್ ಪರವಾಗಿ ನಿಲ್ಲುವ ಎಲ್ಲಾ ಚಲನಚಿತ್ರಕ್ಕೆ ಸಂಬಂಧಿಸಿ ಎಲ್ಲಾ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದರು.ನಮ್ಮ ದೇವೇಗೌಡರು, ಕುಮಾರಣ್ಣನ ಬಗ್ಗೆ ಟೀಕಿಸುವ ಚಲನಚಿತ್ರ ನಟರಿಗೆ ತಕ್ಕ ಪಾಠ ಕಲಿಸುತ್ತೇವೆ, ಅದನ್ನು ಶೀಘ್ರದಲ್ಲಿ ತೋರಿಸುತ್ತೇವೆ. ಅವರಿಗೆ ರಾಜಕಾರಣ ಬಗ್ಗೆ ಮಾತನಾಡೋಕೆ ಏನು ಹಕ್ಕಿದೆ. ಅವರ ಕೊಡುಗೆ ಏನಿದೆ. ಅವರಿಗೂ ರಾಜಕರಣಕ್ಕೂ ಸಂಬಂಧವಿಲ್ಲ. ಗೌರವದಲ್ಲಿ ಮನೆಲ್ಲಿದ್ದು, ಸಿನಿಮಾ ತೆಗೆಯಿರಿ. ನಮ್ಮ ರಾಜಕಾರಣಕ್ಕೆ ಮಧ್ಯಪ್ರವೇಶಿಸಿಬೇಡಿ. ಅಂಬರೀಷ್ಣ್ಣನ ಬಗ್ಗೆ ಗೌರವವಿದೆ. ಅವರನ್ನು ನಮ್ಮ ಜಿಲ್ಲೆಯವರು ಹೇಗೆ ಬೆಳಸಬೇಕಿತ್ತು, ಹಾಗೆ ನಾವು ಬೆಳಿಸಿದ್ದೇವಿ. ನಿಮ್ಮಿಂದ ನಾವು ಕಲಿಯುವುದು ಏನಿಲ್ಲ ಎಂದು ಚಲನಚಿತ್ರ ಮಂಡಳಿಯವರಿಗೆ ಎಚ್ಚರಿಕೆ ನೀಡಿದರು.

ಮತ್ತೊಮ್ಮೆ ದೇಶದ ಪ್ರಧಾನಿಯಾಗೋ ಅವಕಾಶ ನಮ್ಮ ಮಣ್ಣಿನ ಮಗ ದೇವೇಗೌಡರಿಗೆ ಬಂದಿದೆ. ಹಾಗಾಗಿ ಈ ಬಾರಿ ಜಿಲ್ಲೆಯ ಲೋಕಸಭೆ ಅಭ್ಯತರ್ಿ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು. ಅದು ನಮ್ಮ ತಾಲೂಕಿನಲ್ಲಿಯೇ ಹೆಚ್ಚು ಅಂತರ ನೀಡಬೇಕು. ಜಿಲ್ಲೆಯ ಎಲ್ಲಾ ನಾಯಕರು ಸೇರಿ ನಿಖಿಲ್ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿ ಅಭ್ಯಥರ್ಿ ಮಾಡಿದ್ದೇವೆ. ಇದು ಕುಮಾರಸ್ವಾಮಿಗೆ ಇಷ್ಟವಿರಲಿಲ್ಲ. ನಮ್ಮೆಲ್ಲರ ಒತ್ತಡದಿಂದ ಒಪ್ಪಿದ್ದಾರೆ ಎಂದು ತಿಳಿಸಿದರು.

ದೇವೇಗೌಡರ ಕುಟುಂಬದ ಬಳಿ ನಮ್ಮ ಬಗ್ಗೆ ಇಲ್ಲಸ್ಲಲದ ಆರೋಪವನ್ನು ನಮ್ಮ ಕ್ಷೇತ್ರದ ಮುಖಂಡರು ಮಾಡುತ್ತಾರೆ. ದೇವೇಗೌಡರು, ಅವರ ಕುಟುಂಬದ ಸದಸ್ಯರು ನನಗೆ ಹೊಡೆದರು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ದೇವೇಗೌಡರ ಕುಟುಂಬದ ಸದಸ್ಯ, ದೇವೇಗೌಡರ ಮನೆ ಚಾಡಿ ಹೇಳುವವರ ಮನೆ, ದೇವೇಗೌಡರ ಫೋಟೋ ಕೂಡ ಇಲ್ಲ. ತಾಲುಕಿನಲ್ಲಿ ದೇವೇಗೌಡರನ್ನು ಪ್ರತಿದಿನ ಪೂಜಿಸುವವನು ನಾನು ಎಂದು ಶಾಸಕ ನಾರಾಯಣಗೌಡ ಹೇಳಿದರು.

ಬಿಡುತ್ತೇನೆ ಎಂದು ಸುಳ್ಳು ಸುದ್ದಿಯನ್ನು ಕ್ಷೇತ್ರದಲ್ಲಿ ಹಬ್ಬಿಸುತ್ತಿದ್ದಾರೆ. ನನ್ನ ಶರೀರದಲ್ಲಿ ರಕ್ತ ಇರುವರೆಗೂ ಪಕ್ಷವನ್ನು ಬಿಡುವ ಪ್ರಶ್ನೆಯಿಲ್ಲ. ಅವುಗಳಿಗೆ ಜನ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.ಕಾಂಗ್ರೆಸ್ ರಾಜ್ಯ ನಾಯಕರು ಮೈತ್ರಿ ಅಭ್ಯಥರ್ಿಯನ್ನು ಗೆಲ್ಲಿಸುವ ಸಲುವಾಗಿ ಜಿಲ್ಲೆಗೆ ಪ್ರಚಾರಕ್ಕೆ ಬರಲಿದ್ದಾರೆ. ಆದರೆ, ಸ್ಥಳೀಯ ನಾಯಕರು ಸ್ವತಂತ್ರ ಅಭ್ಯಥರ್ಿ ಸುಮಲತಾ ಪರ ನಿಲ್ಲುತ್ತಿದ್ದಾರೆ. ಅವರು ಇನ್ನೆರಡು ದಿನ ಹಾರಾಡತ್ತಾರೆ ಬಳಿಕ ಮೂಲೆ ಸೇರುತ್ತಾರೆ ಎಂದು ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದರು.

ಸಬೆಯಲ್ಲಿ ತಾಲೂಕು ಅಧ್ಯಕ್ಷ ವೆಂಕಟಸುಬ್ಬೇಗೌಡ, ಜಿಪಂ ಸದಸ್ಯ ಎಚ್.ಟಿ.ಮಂಜು, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭಾಕರ್, ಮುಖಂಡ ಶ್ರೀನಿವಾಸ್, ತಾಪಂ ಮಾಜಿ ಉಪಾಧ್ಯಕ್ಷ ಜಾನಕೀರಾಮ್, ಸ್ಥಾಯಿಸಮಿತಿ ಅಧ್ಯಕ್ಷ ರಾಜು, ತಾಪಂ ಸದಸ್ಯ ವಿಜಯಕುಮಾರ್, ಮೋಹನ್, ಎಪಿಎಂಸಿ ಅಧ್ಯಕ್ಷ ನಾಗರಾಜು, ಪುರಸಭೆ ಸದಸ್ಯರಾದ ಸಂತೋಷ್, ಹೇ ಮಂತ್ಕುಂಆರ್, ದಿನೇಶ್, ನಾಗರಾಜು ಸೇರಿದಂತೆ ಹಲವರಿದ್ದರು.


 
Rate this item
(1 Vote)
ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ, ದೇವೇಗೌಡ್ರೇ ಸ್ಟಾರ್ ಪ್ರಚಾರಕರು.ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಸಂಜೆ ನಿಗದಿಯಾಗುತ್ತೆ.ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು. 
 
ಮದ್ದೂರಿನ‌ ಹೊಳೆ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿದ ಅನಿತಾ ಕುಮಾರಸ್ವಾಮಿ, ೪ ನೇ ವಾರದ ಹರಿಕೆ ಪೂಜೆ ನೆರವೇರಿಸಿದರು. ಮಗನ ರಾಜಕೀಯ ಭವಿಷ್ಯ ಮತ್ತು ಚುನಾವಣೆ ಗೆಲುವಿಗಾಗಿ ೫ ಮಂಗಳವಾರದ ಪೂಜೆಯ ಹರಕೆ ಕಟ್ಟಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ, ದೇವೇಗೌಡ್ರೇ ಸ್ಟಾರ್ ಪ್ರಚಾರಕರು. ಮಂಡ್ಯ ಜನ ಅವ್ರನ್ನೇ ಇಷ್ಟಪಡ್ತಾರೆ, ನಿಖಿಲ್​ಗೆ ಇಲ್ಲಿನ ಜನರ ಆಶೀರ್ವಾದ ಇದೆ. ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಯನ್ನು ಸಿಎಂ ಕುಮಾರಸ್ವಾಮಿ ನೀಡಿದ್ದಾರೆ. ಅದೇ ನಿಖಿಲ್ ಗೆಲುವಿಗೆ ಸಹಕಾರವಾಗುತ್ತೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಮುಖಂಡರ ಬೆಂಬಲವನ್ನು ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ. ಪಕ್ಷದ್ರೋಹಿಗಳಿಗೆ ಆ ಪಕ್ಷದ ಮುಖಂಡರು ಶಿಸ್ತುಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು. ದೇವೇಗೌಡರು ಬಹುತೇಕ ತುಮಕೂರಿನಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಅನಿತಾ ಕುಮಾರಸ್ವಾಮಿ ಇದೇ ವೇಳೆ ಹೇಳಿದರು. ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಸಂಜೆ ನಿಗದಿಯಾಗುತ್ತೆ. ಪ್ರಚಾರ ಶುರು ಮಾಡಿದ್ದೀವಿ, ಇಂದು ಮಳವಳ್ಳಿಯಲ್ಲಿ ನಿಖಿಲ್ ಪ್ರಚಾರ ಮಾಡ್ತಿದ್ದಾರೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು. 


 




Page 7 of 34

Visitors Counter

220497
Today
Yesterday
This Week
This Month
Last Month
All days
64
151
2114
3602
4244
220497

Your IP: 3.143.168.172
2024-04-20 06:42

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles