ಮಂಡ್ಯ

Rate this item
(2 votes)

ಅಕಾಲಿಕ ಮರಣ ಹೊಂದಿದ ಗುತ್ತಿಗೆದಾರ ಎಂ ಎಸ್ ಕೃಷ್ಣ (ಭಗವಾನ್ಎಲೆಕ್ಟ್ರಿಕಲ್ಸ್) ರವರ ಪತ್ನಿ ಶಶಿಕಲಾ ರವರಿಗೆ ಗುತ್ತಿಗೆದಾರರ ಸಂಘದ ಕೇಂದ್ರ ಕರ್ಯಾಕಾರಿಣಿ ಸಮಿತಿ ಸದಸ್ಯರಾದ ಕೆಂಪರಾಜು.ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ವಿತರಣೆ ಮಾಡಿದರು.

ಮಂಡ್ಯ : ತಾಲ್ಲೂಕಿನ  ಶ್ರೀ ಭಗವಾನ್ಎಲೆಕ್ಟ್ರಿಕಲ್ಸ್ ನ ಎಂ.ಎಸ್.ಕೃಷ್ಣ ರವರು ಅಕಾಲಿಕವಾಗಿ ಮೃತಪಟ್ಟಿದ್ದರು ಇವರ ಕುಟುಂಬಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದ್ಯಸರಾದ ಕೆಂಪರಾಜು .ಎನ್ ಮಳವಳ್ಳಿ ರವರು ಎಂ.ಎಸ್.ಕೃಷ್ಣ ರವರ ಮರಣ ಪರಿಹಾರ ಚೆಕ್ ನ್ನು ಅವರ ಪತ್ನಿಯಾದ ಶಶಿಕಲಾ ರವರಿಗೆ ರಾಗಿಮುದ್ದನ ಹಳ್ಳಿಯ ಅವರ ಮನೆಯೆಲ್ಲಿ   ಕೆಂದ್ರ ಸಮಿತಿಯ ಸದಸ್ಯರಾದ ಸಂಪತ್ ಕುಮಾರ್ ಸಲಹಾಸಮಿತಿ ಸದಸ್ಯರಾದ ದೇವಿಪ್ರಸಾದ್ ತಾಲ್ಲೂಕು ಅಧ್ಯಕ್ಷ ರಾದ ರಾಜು HS, ಕಾರ್ಯದರ್ಶಿ ರಮೇಶ್ SG, ಮಂಡ್ಯ ಜಿಲ್ಲೆಯ ಪದಾಧಿಕಾರಿಗಳು ಮತ್ತು  ತಾಲ್ಲೂಕಿನ ಗುತ್ತಿಗೆದಾರರ ಸಮ್ಮುಖದಲ್ಲಿ ಕೆಂಪರಾಜ .ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ಅನ್ನು ಅವರ ಪತ್ನಿ ಶಶಿಕಲಾ ರವರಿಗೆ ವಿತರಣೆ ಮಾಡಿದರು.

 

Rate this item
(1 Vote)
 ಮೇಲುಕೋಟೆ ಚಲುವನಾರಾಯಣ ಸ್ವಾಮಿಗೆ ಪೂಜೆ ಸಲ್ಲಿಸಿ ಸುಮಲತಾ ಅಂಬರೀಶ್ ಅಬ್ಬರದ ಪ್ರಚಾರ.
 
ಹೌದು, ಪಾಂಡವಪುರ ತಾಲೂಕಿನ ಮೇಲುಕೋಟೆಗೆ ತಮ್ಮ ಬೆಂಬಲಿಗರ ಜೊತೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಚಾರ ಮಾಡಿದರು. ತೆರೆದ ವಾಹನದಲ್ಲಿ ರೋಡ್ ಶೋ ಮಾಡಿದ ಸುಮಲತಾ, ಮೇಲುಕೋಟೆ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚಾರ ಮಾಡಿದರು. ಇದೇ ಸಂದರ್ಭದಲ್ಲಿ ಮೇಲುಕೋಟೆ ಗ್ರಾಮಸ್ಥರು ಸುಮಲತಾ ಅಂಬರೀಶ್​ಗೆ ಗೌರವ ಪೂರ್ವಕವಾಗಿ ಸನ್ಮಾನ ಮಾಡಿದರು.ನಂತರ ಮಾತನಾಡಿದ ಅವರು, ಸ್ಪರ್ಧೆಯ ದಿನಾಂಕವನ್ನು ಮಾರ್ಚ್ 18ರಂದು ಹೇಳುತ್ತೇನೆ. ಕೈ ಪಕ್ಷ ನನಗೆ ಮೋಸ ಮಾಡ್ತಿಲ್ಲ, ಪಕ್ಷಕ್ಕೆ ಮೋಸ ಆಗ್ತಿದೆ. ಕಾರ್ಯಕರ್ತರಿಗೆ ಮೋಸ ಆಗ್ತಿದೆ ಎಂದರು. ನಾನು ಎಂದು ಕೈ ಮುಖಂಡರು ಇಲ್ಲದಿದ್ರು ಒಂಟಿ ಅಲ್ಲ. ನನ್ನ ಜೊತೆ ಜನ ಇದ್ದಾರೆ. ಅಂಬಿ ಸಂಪಾದನೆ ಮಾಡಿದ ಈ ಜನರನ್ನು ನಂಬಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು. 
Last modified on 14/03/2019
Rate this item
(1 Vote)

ನಿಖಿಲ್ ಸ್ಪರ್ಧೆಯಿಂದ ಲಕ್ಷ್ಮಿ ಅಶ್ವಿನ್ ಗೌಡರಿಗೆ ಅನ್ಯಾಯವಾಗಿಲ್ಲ.ಐಆರ್‍ಎಸ್‍ನಿಂದ ಸ್ವಯಂ ನಿವೃತ್ತಿ ಪಡೆದಿದ್ದ ಲಕ್ಷ್ಮಿ ಅವರು ತಮ್ಮ ವೃತ್ತಿಗೆ ಮರಳುತ್ತಿದ್ದಾರೆ..ಸಿಎಂ 

ಮಂಡ್ಯ: ಮಂಡ್ಯದ ಅಧಿಕೃತ ಅಭ್ಯರ್ಥಿ  ಘೋಷಿಸಲು ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ಮಾತನಾಡುತ್ತ, ನಾನು ಹುಟ್ಟಿದ್ದು ಹಾಸನದಲ್ಲಿ. ರಾಜಕೀಯವಾಗಿ ನನಗೆ ಜನ್ಮ ಕೊಟ್ಟಿದ್ದು ರಾಮನಗರದ ಜನತೆ. ರಾಜಕೀಯವಾಗಿ ನನ್ನನ್ನು ಹೆಮ್ಮರವಾಗಿ ಬೆಳೆಸಿದ್ದು ಮಂಡ್ಯದ ಜನತೆ. ಈ ಜನತೆಯ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ ಎಂದು ತಿಳಿಸಿ.ಲಕ್ಷ್ಮಿ ಅಶ್ವಿನ್ ಗೌಡರಿಗೆ ಮೋಸ ಮಾಡಿ ನಿಖಿಲ್‍ಗೆ ಟಿಕೆಟ್ ನೀಡಲಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಬಂದಿರೋದು ನನ್ನ ಗಮನಕ್ಕೆ ಬಂದಿದೆ. ಆದ್ರೆ ಹೆಚ್ಚಿನ ಜನರಿಗೆ ಹಿಂದಿನ ವಿಷಯ ಗೊತ್ತಿಲ್ಲ. ಮಳವಳ್ಳಿಯ ಜೆಡಿಎಸ್ ಅಧ್ಯಕ್ಷ ಕೆಂಚಪ್ಪನವರ ಪುತ್ರಿ, ನಾಗಮಂಗಲದ ಸೊಸೆ ಲಕ್ಷ್ಮಿ ಅಶ್ವಿನ್ ಗೌಡ ವಿಧಾನಸಭಾ ಚುನಾವಣಾ ಅಭ್ಯರ್ಥಿ ಆಗಬೇಕೆಂದು ಭೇಟಿ ಮಾಡಿದ್ದರು. ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ನೀಡಬೇಕೆಂದು ಮೊದಲ ಭೇಟಿಯಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲಿಂದಲೇ ನಮ್ಮ ಪರಿಚಯವಾಗಿತ್ತು ಎಂದರು.

ದೇವೇಗೌಡರ ಕುಟುಂಬ ಲಕ್ಷ್ಮಿ ಅಶ್ವಿನ್ ಗೌಡರಿಗೆ ಮೋಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾವು ದೇವರನ್ನು ನಂಬಿಕೊಂಡು ಬದುಕುವ ಜೀವಿಗಳು. ಲಕ್ಷ್ಮಿ ಅವರ ಪತಿ ಐಆರ್‍ಎಸ್ ಅಧಿಕಾರಿಯಾಗಿದ್ದು, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರುವಂತಹ ಕೆಲ ಸುದ್ದಿಗಳು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಸ್ವಯಂ ನಿವೃತ್ತಿ ಪಡೆದಿದ್ದ ಲಕ್ಷ್ಮಿ ಅಶ್ವಿನ್ ಗೌಡ ಮತ್ತೆ ತಮ್ಮ ಉದ್ಯೋಗಕ್ಕೆ ಹಾಜರಾಗಲು ಇಚ್ಛಿಸಿದ್ದಾರೆ. ಕಳೆದ ವಾರ ದೆಹಲಿಗೆ ಹೋದಾಗ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ. ಮತ್ತೊಮ್ಮೆ ಕೆಲಸಕ್ಕೆ ಸೇರಬೇಕೆಂದು ಕೇಳುತ್ತಿದ್ದು, ಅವಕಾಶ ನೀಡಿ ಎಂದು ಕೇಳಿಕೊಂಡಿದ್ದೇನೆ. ಆರು ತಿಂಗಳ ಹಿಂದೆ ನಾಲ್ಕು ವರ್ಷದ ಅವಧಿಗೆ ಲಕ್ಷ್ಮಿ ಅಶ್ವಿನ್ ಗೌಡರನ್ನು ನೇಮಿಸಲು ಪಕ್ಷ ಮುಂದಾಗಿತ್ತು. ರಾಜಕೀಯ ಅನುಭವದ ಆಗಬೇಕಾದ್ರೆ ಎಂಎಲ್‍ಸಿ ಗೆ ಅರ್ಜಿ ಸಲ್ಲಿಸಲು ತಂಗಿಗೆ ಹೇಳಿದ್ದಂತೆ ಸಲಹೆ ನೀಡಿದ್ದೆ. ನಮ್ಮ ಕುಟುಂಬದಿಂದ ಯಾವ ಮಹಿಳೆಗೂ ಅನ್ಯಾಯವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಕಳೆದ ಎರಡೂವರೆ ತಿಂಗಳಿನಿಂದ ಮಾಧ್ಯಮಗಳಲ್ಲಿ ಸುದ್ದಿಯನ್ನು ನೋಡಿ ಮನಸ್ಸಿಗೆ ತುಂಬಾ ನೋವಾಗಿದೆ. ಮಂಡ್ಯದಲ್ಲಿಯೇ ಈ ರೀತಿಯ ವಾತಾವರಣ ನಿರ್ಮಾಣ ಆಗುತ್ತೆ ಅಂದುಕೊಂಡಿರಲಿಲ್ಲ. ನಿಖಿಲ್ ಕುಮಾರಸ್ವಾಮಿಯನ್ನು ಉಪಚುನಾವಣೆ ನಿಲ್ಲಿಸಬೇಕೆಂದು ರವೀಂದ್ರ ಶ್ರೀಕಂಠಯ್ಯ ಎಂದು ಹೇಳಿದಾಗ ನನಗೆ ಒಂದು ಕ್ಷಣ ನಡುಕ ಉಂಟಾಯಿತು. ಇಂದು ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸಬೇಕೆಂಬ ಮನಸ್ಸು ನನಗಿರಲಿಲ್ಲ. ಆದ್ರೆ ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಖಿಲ್ ಚುನಾವಣೆಗೆ ನಿಂತಿದ್ದಾನೆ. ಮಾಧ್ಯಮಗಳಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಮಂಡ್ಯ ಕ್ಷೇತ್ರದ ಸಂಚಿಕೆಗಳನ್ನು ಪ್ರಸಾರ ಮಾಡಲಾಗುತ್ತಿದ್ದು, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದರು.

Rate this item
(1 Vote)

ಸಾಲಬಾಧೆ ತಾಳಲಾರದೆ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ.ಖಾಸಗಿ ಬ್ಯಾಂಕುಗಳು ಕಿರುಕುಳ ಹಿಂಸೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆ.

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ಸಾಲಬಾಧೆ ಖಾಸಗಿ ಬ್ಯಾಂಕುಗಳು ಕಿರುಕುಳ ಹಿಂಸೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ .ಡಿಂಕಾ ಗ್ರಾಮದಲ್ಲಿ ವಾಸ ಮಾಡಿಕೊಂಡು ಕೂಲಿ ಮಾಡುತ್ತಿದ್ದ ಶಿವಕುಮಾರ್ ಇವರ ಹೆಂಡತಿಯಾದ ರುದ್ರಮ್ಮ (53) ನೇಣು ಬಿಗಿದುಕೊಂಡು ಸಾವಿಗೀಡಾದ ದುರ್ದೈವಿ.ಗ್ರಾಮಶಕ್ತಿ ಬ್ಯಾಂಕ್ ನಲ್ಲಿ 50 ಸಾವಿರ , ಫ್ಯೂಚರ್ ಪ್ರವೇಟ್ ಲಿಮಿಟೆಡ್ 50 ಸಾವಿರ, ಮತ್ತು ಕೈ ಸಾಲ 2ಲಕ್ಷ , ಸೇರಿದಂತೆ ಸಾಲ ಮಾಡಿದ್ದರು.

ಘಟನೆಯ ವಿವರ :
ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ರುದ್ರಮ್ಮ ಗ್ರಾಮಶಕ್ತಿ ಬ್ಯಾಂಕ್ ನಲ್ಲಿ 50 ಸಾವಿರ , ಫ್ಯೂಚರ್ ಪ್ರವೇಟ್ ಲಿಮಿಟೆಡ್ 50 ಸಾವಿರ, ಮತ್ತು ಕೈ ಸಾಲ 2ಲಕ್ಷ ಸಾಲ ಮಾಡಿದ್ದರು. ಕೂಲಿ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಜೀವನ ಮಾಡುವುದಕ್ಕೆ ಸಾಲದೆ ಮಾಡಿದ ಸಾಲ ತೀರಿಸಲು ಕಷ್ಟವಾದ ಪರಿಸ್ಥಿತಿಯಲ್ಲಿ  ಜೀವನ ಸಾಗಿಸುತ್ತಿದ್ದು. ಖಾಸಗಿ ಬ್ಯಾಂಕ್  ಫ್ಯೂಚರ್ ಪ್ರವೇಟ್ ಲಿಮಿಟೆಡ್ ಮತ್ತು ಗ್ರಾಮಶಕ್ತಿ ಬ್ಯಾಂಕಿನ ಸಿಬ್ಬಂದಿ ಗಳು ದಿನನಿತ್ಯ ಮನೆಯ ಬಳಿ ಬಂದು  ಕಿರುಕುಳ ಕೊಡುತ್ತಿದ್ದರು .ಸಾಲ ತೀರಿಸುವುದಾಗಿ ರುದ್ರಮ್ಮ ಹೇಳಿ ಸ್ವಲ್ಪ ದಿನಗಳ ಕಾಲಾವಕಾಶ ಕೇಳಿದರು. ಕೇಳದೆ ಬ್ಯಾಂಕಿನವರು ದಿನ ನಿತ್ಯ ಮನೆ ಹತ್ತಿರ ಮತ್ತು ಕೆಲಸ ಮಾಡುತ್ತಿರುವ ಹೊಲದ ಹತ್ತಿರ ಬಂದು ಕಿರುಕುಳ ಕೊಡುತ್ತಿದ್ದರೂ ಕಿರುಕುಳದ ಹಿಂಸೆಯನ್ನು ತಾಳಲಾರದೆ ಇಂದು ಬೆಳಿಗ್ಗೆ 12 ಗಂಟೆಯಲ್ಲಿ ತಮ್ಮ ಜಮೀನಿನ ಬಳಿ ಹೋಗಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ.ತುಂಬಾ ಕಡು ಬಡವರಾಗಿದ್ದು ರುದ್ರಮ್ಮನ ಮಗನಾದ ಮಲ್ಲಿಕಾರ್ಜುನ ಘಟನೆಯ ಮಾಹಿತಿಯನ್ನು ತಿಳಿಸಿದ್ದಾರೆ .ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

Rate this item
(1 Vote)

 ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ಆದೇಶದ ಮೇರೆಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲ್ಲೂಕು ಲೋಕ ಶಿಕ್ಷಣ ಸಮಿತಿಯ ವತಿಯಿಂದ ಗ್ರಾಮ ಲೋಕ ಶಿಕ್ಷಣ ಸಮಿತಿ ಬೀರವಳ್ಳಿ. ಅಕ್ಕಿಹೆಬ್ಬಾಳು. ಆಲಂಬಾಡಿ ಕಾವಲ್ ಶೀಳನೆರೆ ಗ್ರಾ.ಪಂ ಹಂತದಲ್ಲಿ ಬೋಧಕರ ತರಬೇತಿ ಕಾರ್ಯಕ್ರಮ ನಡೆಯಿತು.

ಕೆ.ಆರ್.ಪೇಟೆ: ಕಾರ್ಯಕ್ರಮ ಉದ್ಘಾಟನೆ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಸಂಯೋಜಕ ಮರುವನಹಳ್ಳಿ ಬಸವರಾಜು ನಮ್ಮ ತಾಲ್ಲೂಕಿನಲ್ಲಿ 2011ರ ಜನಗಣತಿಯಂತೆ 27829 ಜನ ಅನಕ್ಷರಸ್ಥರು ಇದ್ದು , ಇದು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಆದ್ದರಿಂದ ಎಲ್ಲಾ ಬೋಧಕರು ತಮ್ಮ ತಮ್ಮ ವ್ಯಾಪ್ತಿಯ ಅನಕ್ಷರಸ್ಥರ ಬಾಳಿಗೆ ಅಕ್ಷರ ಕಲಿಸುವುದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಿಮ್ಮ ಶಕ್ತಿ ಮೀರಿ ಪ್ರಯತ್ನಿಸಬೇಕು ಆ ಮೂಲಕ ಸಂಪೂರ್ಣ ಸಾಕ್ಷರತೆಯ ಪಂಚಾಯತಿಯನ್ನಾಗಿ ಘೋಷಣೆ ಮಾಡಲು ಕಟಿಬದ್ದರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಡಾ.ಅಂ.ಚಿ.ಸಣ್ಣಸ್ವಾಮಿಗೌಡ ಮಾತನಾಡಿ ನಿಮಗೆ ಗುರುಗಳ ಗುರುಮಾತೆಯ ಸ್ಥಾನ ನೀಡಲಾಗಿದ್ದು ಅನಕ್ಷರಸ್ಥರ ಮನವೊಲಿಸಿ ಅವರ ಬಿಡುವಿನ ವೇಳೆಯಲ್ಲಿ ಅವರಿಗೆ ಕಲಿಸುವುದರ ಮೂಲಕ ಹೆಬ್ಬೆಟ್ಟಿನ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಬೇಕು ತಾವುಗಳು ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಸ್ವಯಂ ಸೇವಕರಾಗಿಅಕ್ಷರ ಕಲಿಸುವ ಗುರುತರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಪುಣ್ಯದ ಕೆಲಸ ಮಾಡಬೇಕು. ಇದೇ ನೀವು ಉತ್ತಮ ಸಮಾಜಕ್ಕೆ ನೀಡುವ ಕೊಡುಗೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಿಡಿಓಗಳಾದ ಬೀರವಳ್ಳಿ ಅರವಿಂದ್.ಅಕ್ಕಿಹೆಬ್ಬಾಳು ಪಿಡಿಓ.ರವಿಕುಮಾರ್. ಆಲಂಬಾಡಿ ಪಿಡಿಓ ರವಿ. ಪ್ರೇರಕರಾದ ರವಿಕುಮಾರ್. ಕಾವ್ಯ. ತೇಜಸ್ವಿನಿ.ಆಶಾ.ಹೇಮಾ.ಭಾರತಿ.ಸಿ.ಆರ್.ಪಿ.ಲೋಕೇಶ್. ಮುಖ್ಯಶಿಕ್ಷಕರಾದ ಗೋವಿಂದರಾಜು.ಕುಮಾರಸ್ವಾಮಿ. ರವಿ.ಸಂಪನ್ಮೂಲ ಶಿಕ್ಷಕರಾದ ಜಿ.ಎಸ್.ಮಂಜು.ಜೆ.ವಿ.ರಾಮಚಂದ್ರ.ರಾಘವೇಂದ್ರ. ಹೆಚ್.ಎಸ್.ನಾರಾಯಣ. ರಾಜೇಶ್ ಎಸ್.ಬಿ. ಹಾಗೂ ಬೋಧಕರು ಗಳು ಹಾಜರಿದ್ದರು.

Rate this item
(1 Vote)

 ಮಾನವನಾಗಿ ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು ಅದಕ್ಕಾಗಿ ವಿದ್ಯಾಭ್ಯಾಸ ವನ್ನು ಪ್ರತಿಯೊಬ್ಬರು  ಮಾಡುವಂತೆ  ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಹಾಗೂ  ಡಾ.ಲೋಹಿಯಾ ರಾಮಮನೋಹರ ವಿಚಾರ ವೇದಿಕೆಯ ಸಂಸ್ಥಾಪಕ ಡಾ.ದಡದಪುರ ಶಿವಣ್ಣ  ತಿಳಿಸಿದರು. 

ಮಳವಳ್ಳಿ: ತಾಲ್ಲೂಕಿನ ದಡದಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  75 ವರ್ಷದ ವಜ್ರ ಮಹೋತ್ಸವ ಹಾಗೂ 4 ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ವನ್ನು  ಡಾ.ದಡದಪುರ ಶಿವಣ್ಣ  ಉದ್ಘಾಟಿಸಿ ಮಾತನಾಡಿ,  ಗ್ರಾಮೀಣ ಪ್ರದೇಶದ ಜನರಿಗೂ ಇಂಗ್ಲಿಷ್ ಭಾಷೆಯನ್ನು ಕಲಿಯಬೇಕಾಗಿದೆ. ಹಳ್ಳಿಗಾಡು ಅಭಿವೃದ್ಧಿ ಯಾದರೆ ಮಾತ್ರ ದೇಶ ಪ್ರಗತಿಯಾಗುತ್ತದೆ. ಎಂದ ಅವರು   ತಾನು ಓದಿದ ಶಾಲೆಯ ಸಮಾರಂಭದಲ್ಲೇ  ನಾನು ಸತ್ತ ಮೇಲೆ   ನನ್ನ ಸರ್ವಾಂಗ ದೇಹವನ್ನು ಧಾನ ಮಾಡುವುದಾಗಿ ಘೋಷಣೆ ಮಾಡಿದ್ದು ಅದಲ್ಲದೆ ಶಾಲಾ ವತಿಯಿಂದ ಮಾಡುವ ಸನ್ಮಾನ ವನ್ನು  ಮಾಡಿಸಿಕೊಳ್ಳದೆ ಅದನ್ನು ತನ್ನ ತಾಯಿಗೆ ಸ್ವತಃ ಅವರ ಕೈಯಲ್ಲಿ ಸನ್ಮಾನ‌ಮಾಡಿ ಕಾಲಿಗೆ ನಮಸ್ಕಾರ ಮಾಡುವ  ಮೂಲಕ  ಮಾನವೀಯತೆ ಮೆರದರು.   ಇನ್ನೂ  ಶಾಲಾ ಅಭಿವೃದ್ಧಿಗೆ ನನ್ನ ಕೈಲಾದ ಅಳಿಲು ಸೇವೆ ಮಾಡುವುದಾಗಿ ಜೊತೆ ಗ್ರಾಮದ ಅಭಿವೃದ್ಧಿ ಗೂ  ಸಹಕಾರ ನೀಡುವುದಾಗಿ  ತಿಳಿಸಿದರು  ಈ ಶಾಲೆಯಲ್ಲಿ ಓದಿದ್ದಂತಹ ಹಾಗೂ  ನನ್ನಂತಹ ವಿದ್ಯಾರ್ಥಿಗಳು ಬಹಳ ಮಂದಿ ಇದ್ದಾರೆ ಅವರು ಸಾಕಷ್ಟು ಆರ್ಥಿಕವಾಗಿ ಪ್ರಗತಿ ಕಂಡಿದ್ದಾರೆ  ಅವರು ಸಹ  ಹಳ್ಳಿಗಾಡಿನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವಂತಹ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಅವರು  ನಾನು ಹಾಗೂ ಒಬ್ಬ ಉನ್ನತ ಅಧಿಕಾರಿ ಸೇರಿ ಬೆಂಗಳೂರಿನಲ್ಲಿ  ಐಎಎಸ್ ಹಾಗೂ ಕೆಎ ಎಸ್  ತರಬೇತಿ ಪ್ರಾರಂಭ ಮಾಡಿದ್ದೇವೆ  ಇದರಿಂದ  ಪ್ರತಿಯೊಬ್ಬರು ಉನ್ನತ ಅಧಿಕಾರಿಯಾಗಲಿ ಎನ್ನುವುದೇ ನಮ್ಮ ಉದ್ದೇಶ ಎಂದರು   ಇನ್ನೂ ಕಾರ್ಯಕ್ರಮ ದಲ್ಲಿ ಶಾಲಾ ಪ್ರಗತಿಗೆ ಕಾರಣ ಶಾಲಾ ಶಿಕ್ಷಕರಿಗೆ ದಡದಪುರಶಿವಣ್ಣರವರು ಸನ್ಮಾನಿಸಿ ಗೌರವ ಸೂಚಿಸಿದರು   ಇನ್ನೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.      

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ಹಾಗೂ ತಾ.ಪಂ ಮಾಜಿ ಚಿಕ್ಕಲಿಂಗಯ್ಯ, ಮರೀಗೌಡ, ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು, ಸರ್ಕಾರಿ ಶಾಲಾ ಶಿಕ್ಷಕರಸಂಘದ ನಿರ್ದೇಶಕ ರುಗಳು ಸೇರಿದಂತೆ ಅನೇಕ ಅನೇಕ ಗಣ್ಯರು  ಉಪಸ್ಥಿತರಿದ್ದರು

Rate this item
(0 votes)

ತಾಲೂಕಿನ ಸಾಸಲು ಪುಣ್ಯಕ್ಣೇತ್ರದಿಂದ ಮಂಡ್ಯ ಲೋಕಸಭಾ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಂದ ಪ್ರಚಾರ ಆರಂಭ.ಶ್ರೀ ಶಂಭುಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚಿಸಿ ರಣಕಹಳೆ ಮೊಳಗಿಸಲಿರುವ ನಿಖಿಲ್ ಕುಮಾರಸ್ವಾಮಿ.... 

Last modified on 10/03/2019
Rate this item
(0 votes)

ಕೆ.ಆರ್.ಪೇಟೆ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಮಹಿಳಾ ದಿನಾಚರಣೆ.

Page 8 of 34

Visitors Counter

219559
Today
Yesterday
This Week
This Month
Last Month
All days
132
477
1176
2664
4244
219559

Your IP: 3.144.42.196
2024-04-16 19:38

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles