ಮಂಡ್ಯ

Rate this item
(0 votes)

ಹೇಮಾವತಿ ನದಿಯ ನಡದಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದ ಮೀನುಗಾರರ ಕುಟುಂಬವನ್ನು ಹೇಮಾವತಿ ನದಿಯ ಪ್ರವಾಹದ ಭೀತಿಯ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ ಅವರು ಸ್ಥಳಾಂತರಗೊಳಿಸಿದರು...ಹೇಮಾವತಿ ನದಿಗೆ 1,0008ಸಾವಿರ ಕ್ಯೂಸೆಕ್ಸ್ ನೀರನ್ನು ಗೊರೂರು ಜಲಾಶಯದಿಂದ ಹರಿಯಬಿಟ್ಟಿರುವುದರಿಂದ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಯಿತು...

ಈ ದಿನ ಮಂಡ್ಯ ಜಿಲ್ಲಾಧಿಕಾರಿಗಳಾದ ಶ್ರೀ ವೆಂಕಟೇಶ್ ಅವರು ಕಿಕ್ಕೇರಿ ಪೊಲೀಸ್ ಠಾಣಾ ಸರಹದ್ದಿನ ಮಂದಗೆರೆ ಹಾಗೂ ಸುತ್ತಮುತ್ತಲ ಗ್ರಾಮದ ಹೇಮಾವತಿ ನದಿ ಪಾತ್ರದ ಗ್ರಾಮಗಳಿಗೆ ಭೇಟಿ‌ ನೀಡಿ ವೀಕ್ಷಣೆ ಮಾಡಿ ಗೊರೂರು ಅಣೆಕಟ್ಟೆಯಿಂದ ಸುಮಾರು 1 ಲಕ್ಷ ಕ್ಯೂಸೆಕ್ಸ್ ಕ್ಕಿಂತ ಅಧಿಕ ನೀರನ್ನು ಹೇಮಾವತಿ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನದಿಗೆ ಇಳಿಯಬಾರದು. ಮೀನುಗಾರರು ಮೀನು ಹಿಡಿಯಲು ನದಿಗೆ ಹೋಗಬಾರದು. ಜಾನುವಾರುಗಳನ್ನು ನದಿ ಕಡೆ ಬಿಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಾಗಮಂಗಲ ಉಪ ವಿಭಾಗದ ಡಿ.ವೈ.ಎಸ್. ಪಿ ರವರಾದ ಶ್ರೀ ‌ವಿಶ್ವನಾಥ್ ರವರು, ಕಿಕ್ಕೇರಿ‌ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶ್ರೀ ಚಂದ್ರಶೇಖರ್ ರವರು ಹಾಜರಿದ್ದರು.

Last modified on 10/08/2019
Rate this item
(1 Vote)

ಸತತವಾಗಿ ಸುರಿಯುತ್ತಿರುವ ಮಳೆಗೆ ಧರೆಗೆ ಉರುಳಿದ ಮನೆ...

ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡಸೋಮನಹಳ್ಳಿ ಗ್ರಾಮದ ಜಯಲಕ್ಷ್ಮಿ ಎಂಬುವವರಿಗೆ ಸೇರಿದ ಮನೆ...

ಸತತವಾಗಿ ಮಳೆ ಸುರಿಯುತ್ತಿರವ ಮಳೆಗೆ ಮನೆ ಗೊಡೆ ಕುಸಿದು ಪರಿಣಾಮ ಮನೆಯಲ್ಲಿ ಇದ್ದ ರಾಗಿ ಅಕ್ಕಿ ದಿನಸಿ ಮತ್ತು ಅಡುಗೆ ಪಾತ್ರೆ ಗಳು ಹಾಳಗಿವೆ..

ಮನೆಯಲ್ಲಿ ತಾಯಿ ಮಗಳು ಇಬ್ಬರೆ ಇದ್ದರು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ...


ಅಕ್ಕಪಕ್ಕದ ಮನೆಯವರು ಕೂಡಲೇ ಸಹಾಯ ಮಾಡಿ ತಾಯಿ ಮತ್ತು ಮಗಳನ್ನು ರಕ್ಷಿಸಿದ್ದಾರೆ..

ಇವರು ಅದಿಕರ್ನಾಟಕ ಜನಾಂಗಕ್ಕೆ ಸೇರಿದ್ದ ಇವರ ಗಂಡ ಅನಾರೋಗ್ಯದ ಕಾರಣ ತಿರಿಹೊಗಿದ್ದು ,ಇವರ ಸಹಾಯ ಮಾಡಲು ಯಾರು ಇಲ್ಲದ ಕಾರಣ ತಾಲೂಕು ಅಡಳಿತ ಇತ್ತ ಗಮನಹರಿಸಿ ಪರಿಹಾರ ಕೊಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು..

Last modified on 10/08/2019
Rate this item
(0 votes)

ಪತ್ನಿ ಶೀಲ ಶಂಕಿಸಿ ತಲೆ ಮೇಲೆ ಗುಂಡುಕಲ್ಲು ಎತ್ತಿಹಾಕಿ ಹತ್ಯೆ... ಪಾಂಡವಪುರ ಪಟ್ಟಣದ ಉರ್ದು ಸರ್ಕಾರಿ ಶಾಲೆ ಬಳಿ ನಡೆದಿರೋ ಘಟನೆ... ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಮಂಗಳ (33) ಹತ್ಯೆಗೊಳಗಾದ ಗೃಹಿಣಿ....

ಆರೋಪಿ ಪತಿ ನಾರಾಯಣ (40) ಎಂಬಾತನನ್ನು ಬಂಧಿಸಿರುವ ಪೊಲೀಸರು...

ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮುಗಿಸಿಕೊಂಡು ಮನೆಯಲ್ಲಿ ಮಲಗಿದ್ದ ವೇಳೆ ಗುಂಡು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಪತಿ...

ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಂಗಳ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಗೃಹಿಣಿ ಕೊನೆಯುಸಿರು...

ಗೃಹಿಣಿ ಸಹೋದರನಿಂದ ಪೊಲೀಸರಿಗೆ ದೂರು...ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ...

Last modified on 10/08/2019
Rate this item
(0 votes)

ಪಟ್ಟಣದ ಪುರಸಭಾ ಮುಖ್ಯ ಅಧಿಕಾರಿಯಾದ ಸತೀಶ್ ಕುಮಾರ್ ಅವರ ನೇತೃತ್ವದಲ್ಲಿ ಅಂಗಡಿಗಳು ಮೇಲೆ ದಾಳಿ 220 ಕೆಜಿಗೂ ಹೆಚ್ಚು ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ ..

ನಂತರ ಮಾತನಾಡಿದ ಸತೀಶ್ ಕುಮಾರ್ ಅವರು ಬೆಳಿಗ್ಗೆ ಎರಡು ಅಂಗಡಿಯ ಮೇಲೆ ದಾಳಿ ಮಾಡಿದ್ದೇವೆ . ಪರಿಸರ ಹಾಳಾಗುತ್ತಿದ್ದು ದಿನನಿತ್ಯ ಪ್ಲಾಸ್ಟಿಕನ್ನು ಬಳಕೆಯಿಂದ ಹಲವಾರು ಕಾಯಿಲೆಗಳು ಬರುತ್ತಿದ್ದು , ದಿನೇ ದಿನೆ ಮಳೆ ಬರುತ್ತಿದ್ದು ಪ್ಲಾಸ್ಟಿಕ್ ಬಳಕೆಯಿಂದ ಮಲೇರಿಯಾ ಕಾಯಿಲೆಗಳು ಉಂಟಾಗುತ್ತದೆ , ಪರಿಸರ ಸಮೃದ್ಧಿ ಅಧಿಕಾರಿಯಾದ ರಕ್ಷಿತ್, ಆರೋಗ್ಯ ನಿರೀಕ್ಷಕರಾದ ನರಸಿಂಹಯ್ಯ H.R, ಹಾಗೂ ಪುರಸಭ ಸಿಬ್ಬಂದಿಗಳ ಸಮ್ಮುಖದಲ್ಲಿ ಆಲೆ ಕಳೆದ ಎರಡು ದಿನಗಳಿಂದಲೂ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡಿದ್ದೇವೆ  ಪೊಲೀಸ್ ಅಧಿಕಾರಿಗಳ ಸಹಾಯದಿಂದ ಸಮುದಾಯ ಭವನದ ಮೇಲೆ ದಾಳಿ ಮಾಡಿ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.ಈ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಬೇಕಾಗುತ್ತದೆ ಎಂದು ಮನವಿಯನ್ನು ಮಾಡಿದರು

Last modified on 10/08/2019
Rate this item
(0 votes)

ಮಳವಳ್ಳಿ: ಬೆನುಮನಹಳ್ಳಿ ಕುಮಾರ್ ಹತ್ಯೆ ಮಸುವ ಮುನ್ನವೇ ಮತ್ತೆ ಪುಂಡರ ಅಟ್ಟಹಾಸ ಮರುಕಳಿಸಿದ್ದು ಹಾಡುಹಗಲೇ ನಾಲ್ವರು ದುಷ್ಕರ್ಮಿಗಳಿಂದ ವ್ಯಕ್ತಿಯೊಬ್ಬನ್ನು ಲಾಂಗ್ ನಿಂದ ಕೊಚ್ಚಿ ಭೀಕರ ಕೊಲೆ ಮಾಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ. ಹಲಗೂರು ಗ್ರಾಮದಲ್ಲಿ ನಡೆದಿದೆ

ರಾಮನಗರಜಿಲ್ಲೆಯ ಕನಕಪುರ ತಾಲ್ಲೂಕು ದಾಳಿಂಬ ಗ್ರಾಮ ರಾಮು (30) ಕೊಲೆಯಾದ ವ್ಯಕ್ತಿ

ಹಲಗೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಿಕೆ ಪ್ರಾವಿಷನ್ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ
ಕಳೆದ ಮೂರು ದಿನಗಳ ಹಿಂದೆ ಬಾರ್ ಯೊಂದರಲ್ಲಿ ಬೆನುಮನಹಳ್ಳಿ ಕುಮಾರ್ ಹತ್ಯೆಯ ಆರೋಪಿ ಕೀರ್ತಿ ಹಾಗೂ ಮೃತ ರಾಮು ನಡುವೆ ಜಗಳವಾಗಿ ಕೀರ್ತಿ ಮೇಲೆ ನಡೆಸಿದ್ದು, ಕೀರ್ತಿ ಆಸ್ವತ್ರೆಗೆ ಸೇರಿದ್ದು ಅಸ್ವತ್ರೆಯಲ್ಲೇ ಆಸ್ಪತ್ರೆಯಲ್ಲಿ ಸ್ಕೆಚ್ ಹಾಕಿ ಪ್ರಮೋದ ಹಾಗೂ ಸ್ನೇಹಿತರು ಸೇರಿ ಮುಖಕ್ಕೆ ಬಟ್ಟೆಕಟ್ಟಿಕೊಂಡು, ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಬಿ.ಕೆ ಪ್ರಾವಿಜನ್ ಸ್ಟೋರ್ ನ ಒಳಕ್ಕೆ ಲಾಂಗ್ ನೊಂದಿಗೆ ಅಂಗಡಿಯಲ್ಲಿದ್ದ ರಾಮು ವಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು ಎನ್ನಲಾಗಿದೆ
ಬೆಂಗಳೂರಿನಿಂದ ಬಂದು ನಾಲ್ವರು ದುಷ್ಕರ್ಮಿಗಳ ಮರಣಾತಿಂಕ ಹಲ್ಲೆ ನಡೆಸಿದ್ದು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಗೆ ಸಾಗಿಸುವ ಮಧ್ಯೆ ಮಾರ್ಗದಲ್ಲಿ ಸಾವನ್ನಿಪ್ಪಿದ್ದ ಎನ್ನಲಾಗಿದೆ. ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಯ ಶವಗಾರದಲ್ಲಿ ಹಿಡಲಾಗಿದೆ

ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ

Rate this item
(0 votes)

ಡೆಂಗ್ಯೂ ಜ್ವರಕ್ಕೆ ಅಗಸರಹಳ್ಳಿ ಗ್ರಾಮದ ಶಾಲಾ ಬಾಲಕಿ ಸಾವು, ಮತ್ತೊಬ್ಬ ಬಾಲಕಿ ತೀವ್ರ ಅಸ್ವಸ್ಥ... ಬಲಿ....ಅಗಸರಹಳ್ಳಿ ಗ್ರಾಮದ ರವಿಕುಮಾರ್ ರಾಣಿ ದಂಪತಿಗಳ ಪುತ್ರಿ ಕೆ.ಆರ್.ಪೇಟೆ ಪಟ್ಟಣದ ಪ್ರಿಯದರ್ಶಿನಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೇಮಾವತಿ(7) ಮೃತ ದುರ್ದೈವಿಯಾಗಿದ್ದಾರೆ... ಈಕೆಯ ಸಹೋದರಿ ಪ್ರೇರಣ(5)ಕೂಡ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಎಸ್ ಎಸ್ ಆಸ್ಪತ್ರೆಯಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹೇಮಾವತಿ ಮತ್ತು ಪ್ರೇರಣಾ ಸಹೋದರಿಯರು ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಅಪೋಲೋ ಆಸ್ಪತ್ರೆಯಲ್ಲಿ ಸ್ಥಳಾಂತರಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಹೇಮಾವತಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರೆ ಈಕೆಯ ಸಹೋದರಿ ತೀವ್ರವಾಗಿ ಅಸ್ವಸ್ಥರಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಅಗಸರಹಳ್ಳಿ ಗ್ರಾಮದಲ್ಲಿ ಆತಂಕವು ಮನೆ ಮಾಡಿದೆ..

Last modified on 10/08/2019
Rate this item
(0 votes)

ಸಾಲದ ಬಾಧೆ ತಾಳಲಾರದೆ ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿ ಗ್ರಾಮದ ಹೊರವಲಯದ ತೋಟಗಾರಿಕೆ ಫಾರಂ ಬಳಿ ಪ್ರಗತಿಪರ ರೈತ ಎಂ.ಆರ್.ಯೋಗೇಶ್ (45)ನೇಣಿಗೆ ಶರಣು... ಕೃಷ್ಣರಾಜಪೇಟೆ ತಾಲ್ಲೂಕಿನ ಮುರುಕನಹಳ್ಳಿ ಗ್ರಾಮದ ರಾಮೇಗೌಡರ ಪುತ್ರನಾದ ಯೋಗೇಶ್ ಕೃಷಿ ಚಟುವಟಿಕೆಗಳಿಗೆ ಹಾಗೂ ತಮ್ಮ ಮಗಳ ಮದುವೆಗೆ 10ಲಕ್ಷರೂಪಾಯಿಗಳಿಗೂ ಹೆಚ್ಚಿನ ಸಾಲ ಮಾಡಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ ಮುಂಜಾನೆ ಎದ್ದು ಜಮೀನಿಗೆ ಹೋದಾಗ ಮನನೊಂದಿದ್ದ ಯೋಗೇಶ್ ಅಲ್ಲಿಯೇ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಗ್ರಾಮಾಂತರ ಠಾಣೆಯ ಪೋಲಿಸರಿಗೆ ಗ್ರಾಮದ ಮುಖಂಡ ಸುದ್ಧಿಯನ್ನು ಮುಟ್ಟಿಸಿದ್ದು ಸಬ್ ಇನ್ಸ್ ಪೆಕ್ಟರ್ ಆನಂದೇಗೌಡ ಸ್ಥಳಕ್ಜೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ... ಮೃತರ ಬಂಧುಗಳ ಆಕ್ರಂಧನವು ಮುಗಿಲು ಮುಟ್ಟಿದೆ....

Rate this item
(0 votes)

ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸಧ್ಯದಲ್ಲಿಯೇ ನಡೆಯಲಿರುವ ಉಪಚುನಾವಣೆಯಲ್ಲಿ ಬಿಎಸ್ ಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಹೋರಾಟ ನೀಡಲಾಗುವುದು... ದೇಶದ ಅತೀ ದೊಡ್ಡ 3ನೇ ಪಕ್ಷವಾಗಿರುವ ಬಿ.ಎಸ್.ಪಿ ಅಭ್ಯರ್ಥಿಯನ್ನು ತಾಲ್ಲೂಕಿನ ಪ್ರಜ್ಞಾವಂತ ಮತದಾರರು ಗೆಲ್ಲಿಸಿ ಆಶೀರ್ವದಿಸಬೇಕು ಎಂದು ರಾಜ್ಯ ಬಿಎಸ್ ಪಿ ಪ್ರಧಾನ ಕಾರ್ಯದರ್ಶಿ ಡಾ.ಕೃಷ್ಣಮೂರ್ತಿ ಮನವಿ ಮಾಡಿದರು...ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿ ಪಕ್ಷವು ಜೆಡಿಎಸ್ ಪಕ್ಷದೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಪಕ್ಷಕ್ಕೆ ಅಕ್ಕ ಮಾಯಾವತಿ ಅವರು ಬೆಂಬಲಿಸಿದ್ದರು. ಬದಲಾಗಿರುವ ರಾಜಕಾರಣದಿಂದಾಗಿ ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಎಲ್ಲಾ 17ಸ್ಥಾನಗಳಲ್ಲಿಯೂ ಬಿಎಸ್ ಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಹೋರಾಟ ನೀಡಲಾಗುವುದು ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ನಡೆಯುವುದು ಶತಸಿದ್ಧವಾಗಿರುವುದರಿಂದ ಕಾರ್ಯಕರ್ತರು ಈಗಿನಿಂದಲೇ ಪಕ್ಷದ ಸಂಘಟನೆಯ ಕಡೆಗೆ ಗಮನಹರಿಸಿ ಆನೆಯ ಗುರುತಿಗೆ ಭರ್ಜರಿ ಗೆಲುವು ತಂದುಕೊಡಬೇಕು ಎಂದು ಕೃಷ್ಣಮೂರ್ತಿ ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಬಿಎಸ್ ಪಿ ಮುಖಂಡರಾದ ಹರಿಹರಪುರ ಶಿವಕುಮಾರ್, ಚಿಕ್ಕಗಾಡಿಗನಹಳ್ಳಿ ಚೆಲುವರಾಜು, ಬಸ್ತಿ ಪ್ರದೀಪ ಮತ್ತಿತರರು ಉಪಸ್ಥಿತರಿದ್ದರು....

Page 4 of 34

Visitors Counter

220414
Today
Yesterday
This Week
This Month
Last Month
All days
132
274
2031
3519
4244
220414

Your IP: 3.12.34.178
2024-04-19 18:27

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles