ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಿಚಿತ ಮಹಿಳೆ ಕೊಲೆ ಪ್ರಕರಣದ ಆರೋಪಿ ಬಂಧನ.

ದಿನಾಂಕ:22.07.19 ರಂದು  ರಾತ್ರಿ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯ ಮಟ್ಟನವಿಲೆ NH 75 BM Road ಬಳಿ ಸುಮಾರು 25 ರಿಂದ 30 ವಯಸ್ಸಿನ ಅಪರಿಚಿತ ಹೆಂಗಸನ್ನು ವೇಲಿನಿಂದ ಕುತ್ತಿಗೆ ಹಿಸುಕಿ ಸಾಯಿಸಿ ಬಿಸಾಕಿ ಹೋಗಿದ್ದ ಪ್ರಕರಣವನ್ನು ಭೇಧಿಸಿದ್ದು, ಪ್ರಕರಣದ ಆರೋಪಿಯಾದ ಶ್ರೀನಿವಾಸ ಎಂಬಾತನು ಸಂಬಂಧಿಯಾದ  ಮೃತೆ ಕು.ಚಿತ್ರ, 23 ವರ್ಷ ಈಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಕೆ ಗರ್ಭವತಿಯಾಗಿದ್ದು, ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಆಕೆಯನ್ನು ಪುಸಲಾಯಿಸಿ ಕರೆದುಕೊಂಡು ಬಂದು ಕೊಲೆ ಮಾಡಿ ಬಿಸಾಕಿ ಹೋಗಿರುವುದು ತನಿಖೆಯಿಂದ ಕಂಡುಬಂದಿರುತ್ತದೆ

. ಪ್ರಕರಣದಲ್ಲಿ ಆರೋಪಿ ಪತ್ತೆಗೆ ಮಾನ್ಯ ಪ್ರಭಾರ ಪೊಲೀಸ್  ಅಧೀಕ್ಷಕರಾದ ಶ್ರೀಮತಿ ನಂದಿನಿ B N ಹಾಗೂ ಹೊಳೆನರಸೀಪುರ ಡಿವೈಎಸ್ಪಿ ಶ್ರೀ ಲಕ್ಷ್ಮೇಗೌಡರವರ ಮಾರ್ಗದರ್ಶನದಲ್ಲಿ, ಚನ್ನರಾಯಪಟ್ಟಣ ವೃತ್ತ ನಿರೀಕ್ಷಕರಾದ ಶ್ರೀ ಕಾಂತರಾಜು ಹಾಗೂ ಹಿರೀಸಾವೆ ಪೊಲೀಸ್ ಉಪ ನಿರೀಕ್ಷಕರಾದ ಗಿರೀಶ್ ಹಾಗೂ ಸಿಬ್ಬಂದಿ ವರ್ಗದವರು ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕಾರ್ಯಕ್ಕೆ ಮಾನ್ಯ ಪ್ರಭಾರ ಪೊಲೀಸ್ ಅಧೀಕ್ಷಕರು ಹಾಸನ ಜಿಲ್ಲೆ ರವರು ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿರುತ್ತಾರೆ.

Share this article

About Author

Super User
Leave a comment

Write your comments

Visitors Counter

289819
Today
Yesterday
This Week
This Month
Last Month
All days
75
166
1351
9261
3051
289819

Your IP: 3.147.46.129
2025-05-22 05:24

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles