Madhu

Madhu

ಕಚೇರಿಗೆ ಅಲೆಸುವ ಅಧಿಕಾರಿಗಳಿಗೆ ಸಾರ್ವಜನಿಕರ ಕಷ್ಟ ಏನು ಎಂದು ತಿಳಿಸಲು ಶಾಸಕ ಡಾ.ಕೆ ಅನ್ಬದಾನಿ ಗ್ರಾಮ ವಾಸ್ತವ್ಯ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ದಲಿತ ಜಯರಾಜುಮನೆಯಲ್ಲಿ ವಾಸ್ತವ್ಯ ಹೂಡಿದಿದ್ದ ಶಾಸಕ ಡಾ.ಕೆ ಅನ್ಬದಾನಿ. ಇದೆ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಸಾರ್ವಜನಿಕರನ್ನು ಕಚೇರಿಗೆ ಅಲೆಸುವ ಅಧಿಕಾರಿಗಳಿಗೆ ಸಾರ್ವಜನಿಕರ ಕಷ್ಟ ಏನು ಎಂದು ತಿಳಿಸಲು  ಗ್ರಾಮ ವಾಸ್ತವ್ಯ ಹೂಡುತ್ತಿದ್ದೇನೆ ಎಂದು ಶಾಸಕ ಡಾ.ಕೆ ಅನ್ಬದಾನಿ ತಿಳಿಸಿದರು.          ಮಳವಳ್ಳಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಜಯರಾಜು ಎಂಬ ದಲಿತರ ಮನೆಯೊಂದರಲ್ಲಿ ವಾಸ್ತವ್ಯ , ಮಾಜಿ ಸಚಿವ ಬಿ ಸೋಮಶೇಖರ್ ರವರ ಗ್ರಾಮವೂ ಸಹ ಆಗಿದ್ದು, ಈ ಗ್ರಾಮ ಅಭಿವೃದ್ಧಿ ಯಾಗದ ಕಾರಣ ಈ ಗ್ರಾಮದಲ್ಲಿ ವಾಸ್ತವ್ಯ ಹೂಡುತ್ತಿರುವುದಾಗಿ ತಿಳಿಸಿದರು. ಸಾರ್ವಜನಿಕರನ್ನು ಅಧಿಕಾರಿಗಳು ಕಚೇರಿಯಲ್ಲಿ ಉಡಾಫೆ ರೀತಿಯಲ್ಲಿ ಕಾಣುತ್ತಾರೆ ಜನರ ಕಷ್ಟ ಅಧಿಕಾರಿಗಳಿಗೆ ಅರ್ಥವಾಗಲಿ  ಅನ್ನುವುದಕೋಸ್ಕರ  ಅಧಿಕಾರಿಗಳ ಜೊತೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲು ಸೂಚಿಸಿದ್ದೇನೆ. ಈ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆ ಇದೆ ಅದನ್ನು ಶೀಘ್ರವೇ ಬಗೆಹರಿಸುತ್ತೇನೆ ಎಂದರು.

  ಅಧಿಕಾರಗಳನ್ನು ಬೆಳಗಾವಿ ವರ್ಗಾವಣೆ ಮಾಡುವುದಾಗಿ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ,ಹೌದು ಸಾರ್ವಜನಿಕರ ಕೆಲಸ ಮಾಡದವರಿಗೆ ಇಲ್ಲಿ ಜಾಗವಿಲ್ಲ ಅವರನ್ನು ದೂರದ ಊರಿಗೆ ವರ್ಗಾವಣೆ ಮಾಡಿದಾಗ ಅವರಿಗೂ ಕಷ್ಟ ಅರ್ಥವಾಗುತ್ತದೆ. ಅದಕ್ಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ ಎಂದರು. ಇನ್ನೂ ಪಿಡಿಒಗಳ ಸಭೆಯಲ್ಲೂ ನರೇಗಾ ಯೋಜನೆಯಡಿ ಸಾಕಷ್ಟು ಕಾರ್ಯಕ್ರಮವಿದೆ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು . ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

ಮಾಕವಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ರವಿಕುಮಾರ್ ಎಂ ಸಿ ಯವರು ಅವಿರೊದವಾಗಿ ಆಯ್ಕೆ

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲ್ಲೂಕಿನ ಮಾಕವಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ರವಿಕುಮಾರ್ ಎಂ ಸಿ ಯವರು ಅವಿರೊದವಾಗಿ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಕೃಷ್ಣ ಮೂರ್ತಿ ಆಯ್ಕೆಯಾದರು ಒಟ್ಟು ಹನ್ನೊಂದು  ಸದ್ಯಸರಲ್ಲಿ ಯಾರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ಕಾರಣ ರವಿ ಕುಮಾರ್ ರವರು ಅವಿರೊದವಾಗಿ ಆಯ್ಕೆಯಾದರು.ಕೆಆರ್ ಪೇಟೆ ತಾಲ್ಲೂಕಿನ ವಿಜಯವಾಣಿ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿರುವ ರವಿ ಕುಮಾರ್ ಎಂ.ಸಿ.ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಗ್ರಾಮಸ್ಥರು ಅಭಿನಂದಿಸಿದರು.ಪಟೇಲ್ ದೇವೇಗೌಡ,ಎಂ ಅರ್ ಮಂಜಣ್ಣ, ನಾಗೇಂದ್ರ, ದ್ಯಾವರಸಣ್ಣ ಮತ್ತು ಯುವ ನಾಯಕ ಮನು ಮತ್ತಿತರರು ಹಾಜರಿದ್ದರು.

ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಜೈಲ್ ಭರೋ ಚಳುವಳಿ ಕಾರ್ಯಕ್ರಮ 

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಜನವಾದಿ ಮಹಿಳೆ ಸಂಘಟನೆ ಮತ್ತು ವಿವಿದ ಸಂಘಟನೆಗಳ ವತಿಯಿಂದ ಮಳವಳ್ಳಿಪಟ್ಟಣದ  ತಾಲ್ಲೂಕು ಕಚೇರಿ ಮುಂದೆ  ಜೈಲ್ ಭರೋ ಚಳುವಳಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.  ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದಿಂದ ಹೊರಟಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ  ಪ್ರಮುಖ ಬೀದಿಗಳ ಮೂಲಕ ಸಾಗಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಅವರನ್ನು ತಡೆದರು ನಂತರ ಪೊಲೀಸರಿಗೂ ಪ್ರತಿಭಟನಾಕಾರರು ದಿಕ್ಕಾರ ಕೂಗಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ದೇವಿ , ಮೋದಿರವರು ನಮ್ಮ ತೆರಿಗೆ ಪಡೆದ ಹಣದಲ್ಲಿ ವಿದೇಶ ಸುತ್ತಿ ಮೋಜು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಕಚೇರಿಗೆ ಪ್ರತಿ ಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದರು.ಪೊಲೀಸರು ನೂರಾರು ಪ್ರತಿಭಟನೆಕಾರರನ್ನು ಬಂಧಿಸಿದರು. ಪ್ರತಿಭಟನೆಯಲ್ಲಿ  ಕರ್ನಾಟಕ  ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಎಲ್ ಭರತ್ ರಾಜ್, ಸಿಐಟಿಯು ಜಿಲ್ಲಾ ಧ್ಯಕ್ಷ ಜಿ.ರಾಮಕೃಷ್ಣ, ಸುಶೀಲ, ಸುನೀತಾ, ತಿಮ್ಮೇಗೌಡ, ಬಸವರಾಜು,  ನೂರಾರು  ಕೂಲಿಕಾರರು ಸೇರಿದಂತೆ ಮತ್ತಿತ್ತರರು ಇದ್ದರು.

ಸಂತೆಬಾಚಹಳ್ಳಿಯಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಶೀರ್ಷಿಕೆಯಡಿ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿಯಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಹಾಲಿನ ಡೈರಿ ಮುಂಭಾಗ ಹಮ್ಮಿಕೊಳ್ಳಲಾಗಿತ್ತು. ಇ ಕಾರ್ಯಕ್ರಮದ ಉದ್ದೇಶ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಿ ರೈತರ ಉತ್ಪಾದನೆ ಹೆಚ್ಚಿಸಲು ತಾಂತ್ರಿಕ ತೆಗಳ ಬಗ್ಗೆ ರೈತರಿಗೆ ಮನವರಿಕೆ ಮಾಡುವುದು.ಮತ್ತು ಕೃಷಿ ವಸ್ತುಗಳ ಪ್ರದರ್ಶನ ಮತ್ತು ವಿಜ್ಞಾನಿ ಗಳೊಂದಿಗೆ ನೇರವಾಗಿ ರೈತರ ಸಂವಾದ ಹಾಗೂ ರೈತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

ಕೃಷಿ ಉಪಕರಣಗಳ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸಿ ರೈತರಿಗೆ ಉಪಕರಣಗಳ ಬಗ್ಗೆ ಮಾಹಿತಿಯನ್ನು ಸಹ ಒದಗಿಸಲಾಯಿತು.

 

ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯ ದಿನೇಶ್ (ರಾಜಹುಲಿ) ,ಗ್ರಾ.ಪಂ.ಉಪಾಧ್ಯಕ್ಷರಾದ ದೇವರಾಜ್ ,ಪಿಎಸಿಎಸ್ ಅಧ್ಯಕ್ಷರು ಮಣಿಯಮ್ಮ ,ಎ.ಎಸ್.ರಮೇಶ್ ,ಹೆಚ್.ಜೆ.ನಾರಾಯಣ್, ಜೆ.ಎನ್ ನಾರಾಯಣ ಗೌಡ, ಸಹಾಯಕ ಕೃಷಿ ನಿರ್ದೇಶಕರಾದ ಟಿ.ಎಸ್ .ಮಂಜುನಾಥ್ ,ಕಾ.ಅಧಿಕಾರಿ ಶ್ರೀಧರ, ಸತೀಶ್ ಜಿ .ಎಸ್ ,ಸತೀಶ್ ಚಂದ್ರ ,ಮಾನಸ ಎಂ ,ಅನಂದಕುಮಾರ್, ಜಯಶಂಕರ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

 

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಫಲಾನುಭವಿಗಳಿಗೆ ಶಾಸಕ ನಾರಾಯಣಗೌಡ ಕೊಳವೆಬಾವಿ ಸಾಮಗ್ರಿಗಳನ್ನು ವಿತರಣೆ ಮಾಡಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಫಲಾನುಭವಿಗಳಿಗೆ ಶಾಸಕ ನಾರಾಯಣಗೌಡ ಕೊಳವೆಬಾವಿ ಸಾಮಗ್ರಿಗಳನ್ನು ವಿತರಣೆ ಮಾಡಿದರು.ಬಳಿಕ ಮಾತನಾಡಿದ ಅವರು ದಲಿತ ಬಂಧುಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗಬೇಕು. ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.


ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಉಪಾಧ್ಯಕ್ಷೆ ಗಾಯಿತ್ರಿರೇವಣ್ಣ, ಜೆಡಿಎಸ್ ಮುಖಂಡರಾದ ಕೆಟಿ.ಗಂಗಾಧರ್, ಕೃಷ್ಣೇಗೌಡ, ಮರೀಗೌಡ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಹೇಮಂತ್ ಕುಮಾರ್, ಉಪಾಧ್ಯಕ್ಷ ಹನುಮಂತು, ಜಿಲ್ಲಾ ಯುವ ಜೆಡಿಎಸ್ ಉಪಾಧ್ಯಕ್ಷ ಶ್ರೀಧರ್ ಸಿರಿವಂತ, ಬಂಡಿಹೊಳೆ ಕೃಷ್ಣಮೂರ್ತಿ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಸಂಯೋಜಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  ದುಗ್ಗನಹಳ್ಳಿ ಗ್ರಾಮ ಸೇರಿದಂತೆ ಹಲವು ಹಳ್ಳಿಗಳ ಸಾರಿಗೆ ಸಂಪರ್ಕಕ್ಕೆ ಶಾಸಕ ಡಾ.ಕೆ ಅನ್ನದಾನಿರವರು ಚಾಲನೆ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಗ್ರಾಮ ಸೇರಿದಂತೆ ಹಲವು ಹಳ್ಳಿಗಳ ಸಾರಿಗೆ ಸಂಪರ್ಕಕ್ಕೆ ಶಾಸಕ ಡಾ.ಕೆ ಅನ್ನದಾನಿ ರವರು ಚಾಲನೆ ನೀಡಿ. ನಂತರ ಮಾತನಾಡಿ,  ಮುಖ್ಯಮಂತ್ರಿ ಕುಮಾರಸ್ವಾಮಿ ರವರು ನೇತೃತ್ವದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ , ಈಗಾಗಲೇ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ರವರ ಜೊತೆ ಚರ್ಚೆ ನಡೆಸಿದ್ದು, ಮಳವಳ್ಳಿ ತಾಲ್ಲೂಕು  ಹಿಂದುಳಿದ ತಾಲ್ಲೂಕು ಆದುದ್ದರಿಂದ  ಪ್ರತಿ ಹಳ್ಳಿಗೂ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಮೊದಲ ಹಂತವಾಗಿ ಇಂದು ದುಗ್ಗನಹಳ್ಳಿ , ಹಂಚಿಪುರ, ಕೋರೆಗಾಲ, ಮಾರ್ಗವಾಗಿ ಬರಲಿದೆ, ನಂತರ ಹಂತ ಹಂತವಾಗಿ  ಕಲ್ಪಿಸಲಾಗುವುದು. ಸಾರಿಗೆ ಬಸ್ ಎಂದರೆ ನಮ್ಮ ಬಸ್ ಎಂದು ಸಾರ್ವಜನಿಕರು ತಿಳಿದುಕೊಂಡು  ಸಾರಿಗೆ ಈಗಾಗಲೇ 500 ಕೋಟಿ ನಷ್ಠದಲ್ಲಿದ್ದು  ಸಾರ್ವಜನಿಕರು ಸಹ ಸಾರಿಗೆ ಇಲಾಖೆಗೆ ಆದಾಯ ಬರುವ ನಿಟ್ಟಿನಲ್ಲಿ  ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.  ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಡಿಪೋ ಮ್ಯಾನೇಜರ್ ಶಾಂತಕುಮಾರ್, ದುಗ್ಗನಹಳ್ಳಿನಾಗರಾಜು, ಹನುಮಂತ, ಸೇರಿದಂತೆ ಮತ್ತಿತ್ತರರು ಇದ್ದರು

 

ಶಾಸಕ ಡಾ.ಕೆ ಅನ್ನದಾನಿರವರು ರಾಜಕೀಯ ಮಾಡದೆ ಅಭಿವೃದ್ಧಿ ಕೆಲಸವನ್ನು ಮಾಡಿ ಇಲ್ಲದಿದ್ದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಪಿಡಿಒಗಳು ರಾಜಕೀಯ ಮಾಡದೆ ಅಭಿವೃದ್ಧಿ ಕೆಲಸವನ್ನು ಮಾಡಿ ಇಲ್ಲದಿದ್ದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಡಾ.ಕೆ ಅನ್ನದಾನಿ ರವರು ಪಿಡಿಒಗಳಿಗೆ ಎಚ್ಚರಿಕೆ ನೀಡಿದರು. ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಡಾ.ಕೆ ಅನ್ನದಾನಿ ಅಧ್ಯಕ್ಷತೆಯಲ್ಲಿ ಪಿಡಿಒ ಗಳ ಸಭೆ ಕರೆದು ಮಾತನಾಡಿ , ಪ್ರತಿಯೊಂದು ಗ್ರಾಮದಲ್ಲೂ ಸ್ವಚ್ಚತೆ ಇಲ್ಲದೆ ಚರಂಡಿಗಳು ಗಬ್ಬುನಾರುತ್ತಿದೆ. ಏಕೆ ಉದಾಸೀನಾ ನಿಮಗೆ  ಇದು ಕೊನೆ ಎಚ್ಚರಿಕೆ ,ಇನ್ನೂ ಮುಂದೆ ಸಾರ್ವಜನಿಕ ರಿಂದ ಯಾವುದೇ ತೊಂದರೆಯಾದರೆ  ಕೂಡಲೇ ಕ್ರಮಕೈಗೊಳ್ಳುತ್ತೇನೆ , ಸಾರ್ವಜನಿಕರನ್ನು ಏಕೆ ಅಲೆಸುತ್ತೀರಾ, ನಿಮ್ಮ ಕೈಯಲ್ಲಿ ಕೆಲಸವಾಗಿದ್ದರೆ ಅದನ್ನು ತಿಳಿಸಿ, ಇನ್ನೂ ಮುಂದೆ ಈ ರೀತಿ ನಡೆಯಬಾರದು ಎಂದು ಎಚ್ಚರಿಸಿದರು. ನಿಮ್ಮ ಸಮಸ್ಯೆ ಇದ್ದರೆ ನನಗೆ ತಿಳಿಸಿ ಎಂದರು. ಇದಕ್ಕೂ ಉತ್ತರಿಸಿದ ಪಿಡಿಒ ಸಂಘದ ಅಧ್ಯಕ್ಷ  ರುದ್ರಯ್ಯ ಮಾತನಾಡಿ, ನಾವು ಚರಂಡಿಗಳ ಸ್ವಚ್ಚತಾ ಮಾಡಿಸುತ್ತಿದ್ದೇವೆ. ಇದಲ್ಲದೆ ಚರಂಡಿ ಮಾಡಲು ಸರಿಯಾಗಿ ಎಂ ಸೆಂಡ್  ಸರಜರಾಜುಯಾಗುತ್ತಿಲ್ಲ, ಎಂದು ದೂರಿದರು.

 ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯಾನಿರ್ವಾಹಣಾಧಿಕಾರಿ ಸತೀಸ್ ಹಾಗೂ ತಾಲ್ಲೂಕಿನ ಎಲ್ಲಾ ಪಂಚಾಯಿತಿ ಪಿಡಿಒಗಳು ಹಾಜರಿದ್ದರು

ದೇವರಾಜ್ ಅರಸು ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯ ಪರಿಕರಗಳನ್ನು ವಿತರಿಸದೇ ಶಾಸಕರು ಬಂದು ಫಲಾನುಭವಿಗಳಿಗೆ ವಿತರುಸುತ್ತಾರೆ ಎಂದು ಬಡ ರೈತರನ್ನು ಕಾಯುಸುತ್ತಿದ್ದಾರೆ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಗಂಗಾ ಕಲ್ಯಾಣ ಯೋಜನೆಯ ಅಡಿಯ ಪರಿಕರಗಳನ್ನು ವಿತರಿಸದೆ ಪ್ರವಾಸಿ ಮಂದಿರದ ಬಳಿ ಕಾಯಿಸಿದ ಘಟನೆ ನಡೆಯಿತು.ಶಾಸಕರು ಬಂದು ಫಲಾನುಭವಿಗಳಿಗೆ ವಿತರುಸುತ್ತಾರೆ ಎಂದು ಬಡ ರೈತರನ್ನು ಬಕ ಪಕ್ಷಿಗಳು ರೀತಿ ಕಾಯುತ್ತಿದ್ದಾರೆ.

ಒಟ್ಟು 27ಜನ ಫಲಾನುಭವಿಗಳಿಗೆ ದೇವರಾಜ್ ಅರಸು ಅಭಿವೃದ್ಧಿ ನಿಗಮದಿಂದ ವಿತರಿಸಬೇಕಿದ್ದ ಪಂಪ್ ಸೆಟ್,ಕೇಬಲ್, ಪೈಪ್ ಮತ್ತು ಬೋರ್ಡ್ ಗಳನ್ನು ವಿತರುಸುತ್ತಾರೆ ಎಂದು ಒಟ್ಟು 27ಜನ ಫಲಾನುಭವಿಗಳು ಅವರ ವಸ್ತುಗಳನ್ನು ಕೊಂಡುಹೊಗಲು ಅಟೊ ,ಚಾಲಕರು ಸಹ ಮೂರು ದಿನಗಳಿಂದಲೂ ಕಾಯತ್ತಿದ್ದಾರೆ.

ಅಧಿಕಾರಿಗಳು ಫಲಾನುಭವಿಗಳ ಮನೆಗಳ ಬಳಿ ಇಳಿಸಬೇಕಿದ್ದ ವಸ್ತುಗಳನ್ನು ಪ್ರವಾಸಿ ಮಂದಿರದಲ್ಲಿ ಇಳಿಸಿ ಬಡ ರೈತರನ್ನು ಕಾಯುಸುತ್ತಿದ್ದಾರೆ.ಕೂಡಲೇ ವಿತರಿಸಬೇಕು ಎಂದು ಫಲಾನುಭವಿಗಳು ಅಧಿಕಾರಿಗಳು ವಿರುದ್ಧ ಗುಡುಗ್ಗಿದ್ದರೆ.

 

 

ತಮಿಳುನಾಡಿನ ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಇನ್ನಿಲ್ಲ

ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾವೇರಿ ಆಸ್ಪತ್ರೆ ವೈದ್ಯರು ಸೋಮವಾರವೇ 24 ಗಂಟೆಗಳ ಕಾಲ ಯಾವ ಭರವಸೆಗಳನ್ನು ನೀಡೋದಕ್ಕೆ ಸಾಧ್ಯವಿಲ್ಲ. ಕ್ಷಣ ಕ್ಷಣಕ್ಕೂ ಕರುನಾನಿಧಿ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಸ್ಪಷ್ಟಪಡಿಸಿತ್ತು.

ಕಾವೇರಿ ಆಸ್ಪತ್ರೆಯ ಮುಂದೆ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ. ಪೊಲೀಸ್ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದು, ಆಸ್ಪತ್ರೆಯ ಸುತ್ತಮುತ್ತ 1,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.

ಹುಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದು ಒಂದು ಗೂಡ್ಸ್ ಆಟೋ ಸೇರಿದಂತೆ ನಾಲ್ಕು ಬೈಕ್‌ಗಳು, ಒಂದು ಅಂಗಡಿ ಜಖಂ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ  ಹುಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದು ಒಂದು ಗೂಡ್ಸ್ ಆಟೋ ಸೇರಿದಂತೆ ನಾಲ್ಕು ಬೈಕ್‌ಗಳು ಮತ್ತು ಒಂದು ಅಂಗಡಿ ಜಖಂಗೊಂಡ ಘಟನೆ ನಡೆದಿದೆ.ಮಧ್ಯಾಹ್ನ ಮೇವು ತುಂಬಿದ್ದ ಲಾರಿಯ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದ್ದು, ಅಂಗಡಿಯಲ್ಲಿದ್ದ ಗ್ರಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿಯ ಹಿಂಭಾಗ ಗೂಡ್ಸ್ ಆಟೋಗೆ ಡಿಕ್ಕಿ ಹೊಡೆಯಲಾಗಿ, ಆಟೋ ರಸ್ತೆ ಬದಿಯಲ್ಲಿ ನಿಂತಿದ್ದ ಬೈಕ್‌ಗಳಿಗೆ ಗುದ್ದಿದೆ. ಈ ಸಂದರ್ಭದಲ್ಲಿ ಬೈಕ್, ಆಟೋ ಸೇರಿದಂತೆ ಅಂಗಡಿಯೂ ಜಖಂ ಆಗಿದೆ. ಎನ್ನಲಾಗಿದೆ.ಯಾವುದೇ ಪ್ರಾಣ ಹಾನಿಯಾಗಿಲ್ಲಾ.ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು,ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Page 22 of 28

Visitors Counter

224467
Today
Yesterday
This Week
This Month
Last Month
All days
114
372
1812
868
6704
224467

Your IP: 18.223.20.57
2024-05-03 15:08

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles