Madhu

Madhu

ಕೆ.ಅರ್.ಎಸ್. ಪೋಲಿಸ್ ಠಾಣೆ ವ್ಯಾಪ್ತಿಯ ನ್ಯೂ ಬ್ರಿಡ್ಜ್ ಕೆಳಭಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರುವ ವ್ಯಕ್ತಿಯ ಶವ ಪತ್ತೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಅರ್.ಎಸ್. ಪೋಲಿಸ್ ಠಾಣೆ ವ್ಯಾಪ್ತಿಯ ನ್ಯೂ ಬ್ರಿಡ್ಜ್ ಕೆಳಭಾಗದಲ್ಲಿ ವ್ಯಕ್ತಿಯ ಶವ ಸಿಕ್ಕಿದ್ದು ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರುತ್ತಾನೆ. ವ್ಯಕ್ತಿಯು ಕೆ.ಆರ್.ಸಾಗರ ಪೊಲೀಸ್ ಠಾಣಾ ಸರಹದ್ದಿನ ನ್ಯೂ ಬ್ರಿಡ್ಜ್ ಸೇತುವೆ ಕೆಳಭಾಗದಲ್ಲಿ ವಿಷ ಕುಡಿದು ಸತ್ತಿರುತ್ತಾನೆ ಈತನ ಹೆಸರು ವಿಳಾಸ ಗೊತ್ತಿರುವುದಿಲ್ಲ ಈತನಿಗೆ ಸುಮಾರು 40 ರಿಂದ 45 ವರ್ಷ ವಯಸ್ಸಾಗಿದ್ದು ನೀಲಿ ಬಣ್ಣದ. ತುಂಬು ತೋಳಿನ ಶರ್ಟ್ ಮತ್ತು ಡಾರ್ಕ್ ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಬಿಳಿಯ ಬನಿಯನ್ ಧರಿಸುತ್ತಾರೆ.

ನಿಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾವುದಾದರೂ ಗಂಡಸ್ಸು ಕಾಣೆಯಾಗಿರುವ ಪ್ರಕರಣ ದಾಖಲಾಗಿದ್ದಲ್ಲಿ ಈ ಕೆಳಕಂಡ ದೂರವಾಣಿ ನಂಬರ್ ಗೆ ಸಂರ್ಪಕಿಸಲು ಕೋರಿದೆ .
ಕೆ.ಆರ್.ಸಾಗರ ಪೊಲೀಸ್ ಠಾಣೆ
08236 -257233
Mobile no 9480804856 

ಮಳವಳ್ಳಿ ಪಟ್ಟಣದಲ್ಲಿ ಸಾಲುಮರನಾಗರಾಜು ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ. ಅಜಾತಶತ್ರು ಹಾಗೂ ಮಾಜಿ ಪ್ರದಾನಿ ಅಟಲ್ ಬಿಹಾರ ವಾಜಪೇಯಿಯವರಿಗೆ ಭಾವ ಪೂರ್ವ ಶ್ರದ್ಧಾಂಜಲಿ ಸಭೆ. 

 ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಮುಂಭಾಗ ಸಾಲುಮರನಾಗರಾಜು ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ. ಅಜಾತಶತ್ರು  ಮಾಜಿ ಪ್ರದಾನಿ ಅಟಲ್ ಬಿಹಾರ ವಾಜಪೇಯಿಯವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿ ನಂತರ ಒಂದು ನಿಮಿಷ ಮೌನ ಅಚರಿಸಲಾಯಿತು. ನಂತರ ಬಿಜೆಪಿ ಮುಖಂಡ ಆಶೋಕ ಕ್ಯಾತನಹಳ್ಳಿ ಮಾತನಾಡಿ , ಅಟಲ್ ಬಿಹಾರ್ ವಾಜಪೇಯಿಯವರು ಅಜಾತಶತ್ರುವಾಗಿ ಹೆಸರುವಾಸಿಯಾಗಿದ್ದು,  ದೇಶದಲ್ಲಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ,  ವಾಜಪೇಯಿ ರವರು ಬಿಜೆಪಿ ಪಕ್ಷ ದಲ್ಲಿ ನಾಯಕರಾಗಿ ಹಲವು ಬಾರಿ ಕೇಂದ್ರ ಸಚಿವರಾಗಿ .ನಂತರ ಪ್ರಧಾನಮಂತ್ರಿ ಯಾಗಿ ದೇಶದ ಅಭಿವೃದ್ಧಿಗೆ ಸಾಕಷ್ಟು ಹೆಸರು ಮಾಡಿದರು ಇದಲ್ಲದೆ  ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ  ಪ್ರಮುಖ ಕಾರಣರಾಗಿದ್ದರು ಎಂದರು.

ಸಭೆಯಲ್ಲಿ ಸಾಲುಮರನಾಗರಾಜು, ಕಸ್ತೂರಿಸಿರಿಗನ್ನಡ ವೇದಿಕೆ ಅಧ್ಯಕ್ಷೆ ನಾಗರತ್ನಮ್ಮ , ಸಂದೇಶ್, ನಾಗೇಗೌಡ, ಸೇರಿದಂತೆ ಮತ್ತಿತ್ತರರು ಇದ್ದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರುಗಳ ಸಿದ್ಧಾಂತ, ಆದರ್ಶಗಳನ್ನು ಯುವ ಸಮುದಾಯ ಮೈಗೂಡಿಸಿಕೊಂಡು ಜೀವನ ನಡೆಸಬೇಕು ಎಂದು ಶಾಸಕ ಕೆ.ಸಿ. ನಾರಾಯಣಗೌಡ ಕರೆ ನೀಡಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ.ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ 72 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಕೆ.ಸಿ. ನಾರಾಯಣಗೌಡರು,ಭಾರತ ದೇಶ ಹಿಂದಿನಿಂದಲೂ ಬಹಳ ಸಂಪತ್ಭರಿತ ದೇಶವಾಗಿದ್ದು, ಸಂಪತ್ತನ್ನು ವಿದೇಶಿಯರು ಲೂಟಿ ಮಾಡಲು ವ್ಯಾಪಾರದ ನೆಪದಲ್ಲಿ ಬಂದು ಇಲ್ಲಿನ ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ನೂರಾರು ವರ್ಷಗಳ ಕಾಲ ನಮ್ಮನ್ನು ಫರಕೀಯರು ಗುಲಾಮರಂತೆ ನಡೆಸಿಕೊಂಡು ಸ್ವತಂತ್ರ ಹೀನರನ್ನಾಗಿ ಮಾಡಿ, ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಬ್ರಿಟಿಷ್ ರೂಲ್ ತಂದು ನಮ್ಮನ್ನು ಆಳ್ವಿಕೆ ಮಾಡಿ ನಮ್ಮನ್ನ ಗುಲಾಮರನ್ನಾಗಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಬ್ರಿಟಿಷರು ದೇಶದ ಸಂಪತ್ತನ್ನು ಲೂಟಿ ಮಾಡಿದ್ದಾರೆ. ನಮ್ಮ ಲಕ್ಷಾಂತರ ಜನರ ರಕ್ತದ ಓಕುಳಿ ಆಡಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಎಲ್ಲರನ್ನೂ ಬಂಧನ, ಮರಣದಂಡನೆ ಅಂತಹ ಕಠಿಣ ಶಿಕ್ಷೆಯನ್ನು ನೀಡಿ ಧ್ವನಿ ಇಲ್ಲದಂತೆ ಮಾಡಿದ್ದರು. ಸ್ವಾತಂತ್ರಯ ಹೋರಾಟಗಾರರು ಬ್ರಿಟಿಷರ ಗುಂಡೇಟಿಗೂ ಹೆದರದೆ ಪ್ರಾಣಭಯ ತೊರೆದು ಬ್ರಿಟಿಷರ್ ವಿರುದ್ದ ಹೋರಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.ದೇಶದೊಳಗೆ ಯಾರು ನುಸಿಯದಂತೆ ಕಾಯುತ್ತಿರುವ ಸೈನ್ಯಕ್ಕೆ ಕುಟುಂದಲ್ಲಿ ಒಬ್ಬರಾದರೂ ಸೈನ್ಯಕ್ಕೆ ಸೇರುವ ಮನಸ್ಸು ಮಾಡಬೇಕು. ಈ ಮೂಲಕ ದೇಶದ ಗಡಿ ಭದ್ರತೆಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಪಟ್ಟಣದ ದೇವೀರಮ್ಮಣ್ಣಿ ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರ ಹಿತರಕ್ಷಣಾ ಸಂಘದ ವತಿಯಿಂದ ಶಾಸಕ ನಾರಾಯಣಗೌಡರಿಗೆ ಬಂಗಾರದ ಮನುಷ್ಯ ಎಂಬ ಬಿರುದನ್ನು ಪ್ರಾದನ ಮಾಡಿ ಗೌರವಿಸಲಾಯಿತು. ತಾಲೂಕು ಆಡಳಿತದ ವತಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ತಹಸೀಲ್ದಾರ್ ಶಿವಮೂತರ್ಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವದ ಸಂದೇಶ ನೀಡಿದರು. ಸರ್ಕಲ್ ಇನ್ಸ್ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಪಟ್ಟಣ ಠಾಣೆಯ ಪಿಎಸ್ಐ ವೆಂಕಟೇಶ್, ಗ್ರಾಮಾಂತರ ಠಾಣೆಯ ಪಿಎಸ್ಐ ಗಿರೀಶ್ಕುಮಾರ್ ರಾಷ್ಟ್ರದ್ವಜಕ್ಕೆ ವಂದನೆ ಸಲ್ಲಿಸಿದರು.ಶತಮಾನದ ಶಾಲೆಯ ಆವರಣದಿಂದ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ರಾಷ್ಟ್ರ ನಾಯಕರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣೆಗೆ ನಡೆಸಿ ಮುಖ್ಯ ವೇದಿಕೆ ಕರೆ ತರಲಾಯಿತು. ಮೆರವಣಿಗೆಯಲ್ಲಿ ಹಲವು ಜನಪದ ಪ್ರಕಾರದ ಕುಣಿತಗಳು ಮೆರವಣಿಗೆಗೆ ಸಾಥ್ ನೀಡಿದವು. ವಿವಿಧ ಶಾಲಾ ಮಕ್ಕಳು ಸ್ವಾತಂತ್ರ್ಯ ಹೋರಾಟದ ಸಂಗೀತಕ್ಕೆ ಹೆಜ್ಜೆ ಹಾಕಿ ನೃತ್ಯ ಸೇರಿದಂತೆ ಹಲವು ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾದವು.

ಜಿಪಂ ಸದಸ್ಯ ರಾಮದಾಸ್, ತಾ.ಪಂ ಅಧ್ಯಕ್ಷೆ ಜಯಲಕ್ಷ್ಮೀಸ್ವಾಮಿನಾಯಕ್, ಉಪಾಧ್ಯಕ್ಷ ಎ.ಎನ್.ಜಾನಕೀರಾಂ, ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಎಚ್.ಎಸ್. ರಾಜು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಂ, ತಾ.ಪಂ ಇಓ ವೈ.ಎಂ.ಚಂದ್ರಮೌಳಿ ಸೇರಿದಂತೆ ತಾಲೂಕಿನ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

 ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದಾರೆ ಬಡ ಮಹಿಳೆ ಮನೆಯಲ್ಲೇ ವಿಶ್ರಾಂತಿ ಶಾಲೆಯಿಂದಲು ಸಹ ಯಾವುದೇ ಆಸ್ಪತ್ರೆ ವೆಚ್ಚವನ್ನು ನೀಡಿಲ್ಲಾ.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಬಳ್ಳೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಬುಧವಾರ ಸಾಂಬಾರ್ ಕುಕ್ಕರ್ ಸಿಡಿದು ಅಡುಗೆ ತಯಾರಕಿ ಸುಜಾತ(೪೨) ಮೈ ಮೇಲೆ ಬಿದ್ದು ಇವರ ಕೈ, ಎದೆ, ಹೊಟ್ಟೆ, ಕಾಲು ಸಂಪೂರ್ಣ ದೇಹ ಸುಟ್ಟಿದೆ ಅಂದು ಶಾಲೆಯಲ್ಲಿ ಮುಖ್ಯ ಶಿಕ್ಷಕರಿಲ್ಲದ ಕಾರಣ, ಸಹ ಅಡುಗೆ ತಯಾರಕರು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ‌.ಇವರ ಆಸ್ಪತ್ರೆ ಖರ್ಚಿಗೆ ಪರದಾಡುವ ಪರಿಸ್ಥಿತಿ ಇದೆ ಇವರು ಬಡ ರೈತ ಕುಟುಂಬದ ಮಹಿಳೆಯಾಗಿದ್ದು ಚಿಕಿತ್ಸೆ ಪಡೆಯಲು ಇವರ ಬಳಿ ಹಣವಿಲ್ಲಾ ಆದರಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಮಹಿಳೆ.

ಬಡ ಕುಟುಂಬದ ಮಹಿಳೆ ಆದರಿಂದ ಆಸ್ಪತ್ರೆ ಖರ್ಚಿಗೆ ಪರದಾಡುತ್ತಿದ್ದಾರೆ.ಒಮ್ಮೆಯೂ ತಾಲ್ಲೂಕು ಶಿಕ್ಷಣಾದಿಕಾರಿಗಳು ಕೂಡ ಮಹಿಳೆ ನೋಡಲು ತೆರಳಿಲ್ಲ.ಶಾಲೆ ವತಿಯಿಂದ ಯಾವುದೇ ಆಸ್ಪತ್ರೆ ವೆಚ್ಚವನ್ನು ನೀಡಿಲ್ಲ.ಸರ್ಕಾರದಿಂದ ಹಣ ಸಹಾಯದ ನಿರೀಕ್ಷೆಯಲ್ಲಿರುವ ಬಡ ಮಹಿಳೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷವಾದರೂ ದೇಶದ ಜನರ ಸಮಸ್ಯೆಗಳು ಇನ್ನೂ ಬಗೆಹರಿಯದಿರುವುದು ನೋವಿನ ಸಂಗತಿ ಎಂದು ಶಾಸಕ ಡಾ.ಕೆ.ಅನ್ನದಾನಿ ವಿಷಾದ ವ್ಯಕ್ತಪಡಿಸಿದರು.     

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷವಾದರೂ ದೇಶದ ಜನರ ಸಮಸ್ಯೆಗಳು ಇನ್ನೂ ಬಗೆಹರಿಯದಿರುವುದು ನೋವಿನ ಸಂಗತಿ ,ಯಾರಿಗೆ ಬಂತು ಎಲ್ಲಿಗೆ ಬಂತ ಸ್ವಾತಂತ್ರ್ಯ ಎನ್ನುವ ಸ್ಥಿತಿಯಲ್ಲಿ ನಾವೆಲ್ಲರೂ ಇದ್ದೇವೆ. ಇಷ್ಠು ವರ್ಷವಾದರೂ ಇನ್ನೂ ಬಡತನ, ಮೂಲಭೂತ ಸೌಕರ್ಯಗಳು ಇನ್ನೂ ಸಿಗುತ್ತಿಲ್ಲ , ರೈತರು ಇನ್ನೂ ನೀರನ್ನು ಬಿಕ್ಷೆ ರೀತಿಯಲ್ಲಿ ಬೇಡವ ಪರಿಸ್ಥಿತಿ ಬಂದಿದೆ ಎಂದರೆ ನಮ್ಮ ಸ್ವಾತಂತ್ರ್ಯ ಎಲ್ಲಿದೆ ಎನ್ನುವ ಪ್ರಶ್ನೆ ಕಾಡುತ್ತದೆ ಎಂದರು.  ಇದಕ್ಕೂ ಮುನ್ನ ತಾಲ್ಲೂಕು ಪಂಚಾಯಿತಿ ಮುಂಬಾಗದಿಂದ ಶಾಲಾ ಮಕ್ಕಳು ಸೇರಿದಂತೆ ಭಾರತಾಂಭೆ  ಭಾವಚಿತ್ರವನ್ನು ಮೆರವಣಿಗೆಯಲ್ಲಿ ಪ್ರಮುಖ ಬೀದಿಗಳ ಮೂಲಕ ಕ್ರೀಡಾಂಗಣಕ್ಕೆ ಕರೆತರಲಾಯಿತು. ನಂತರ ಧ್ವಜಾರೋಹಣ ವನ್ನು ತಹಸೀಲ್ದಾರ್ ದಿನೇಶ್ ಚಂದ್ ನೇರವರಿಸಿದರು.

ಕಾರ್ಯಕ್ರಮವನ್ಜು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್. ವಿಶ್ವಾಸ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಸದಸ್ಯ ರಾದ ಹನುಮಂತ, ಪುರಸಭಾಧ್ಯಕ್ಷ ರಿಯಾಜಿನ್, ಪುರಸಭೆಸದಸ್ಯರುಗಳು, ಜಿ.ಪಂಸದಸ್ಯರು. ತಾ.ಪಂ ಸದಸ್ಯರುಗಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

 ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ವೇತನ ಬಿಡುಗಡೆಗೆ ಆಗ್ರಹಿಸಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಂಡ್ಯ ಜಿಲ್ಲೆಯ ಕೆ.ಅರ್.ಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ವೇತನ ಬಿಡುಗಡೆಗೆ ಆಗ್ರಹಿಸಿ ತಾಲೂಕು ಘಟಕದ ಅಧ್ಯಕ್ಷ ಮೋದೂರು ನಾಗರಾಜು ನೇತೃತ್ವದಲ್ಲಿ ಧರಣಿ ನಡೆಸಿ ಕಳೆದ ಹತ್ತಾರು ತಿಂಗಳಿನಿಂದ ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ನೀಡದ ಸರಕಾರದ ಹಾಗೂ ಗ್ರಾಮ ಪಂಚಾಯಿತಿ ಪಿಡಿಓಗಳ ನಿರ್ಲಕ್ಷ್ಯವನ್ನು ಖಂಡಿಸಿದರು.ಸಂಬಳ ನೀಡದೇ ಇರುವ ಕಾರಣ ಜೀವನ ನಡೆಸಲು ಕಷ್ಟಕರವಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಕ್ಕೆ ತೊಂದರೆಯಾಗುತ್ತಿದೆ. ಜೀವನ ನಿರ್ವಹಣೆಗಾಗಿ ಬಡ್ಡಿ ಸಾಲ ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಹಾಗಾಗಿ ಕೂಡಲೇ ಕಳೆದ 10 ರಿಂದ 15 ತಿಂಗಳಿನಿಂದ ಬಾಕಿ ಇರುವ ಎಲ್ಲಾ ವೇತನವನ್ನು ಕೂಡಲೇ ಬಿಡುಗಡೆ ಮಾಡಿ ಅನುಕುಇಲ ಮಾಡಿಕೊಡಬೇಕೆಂದು ನಾಗರಾಜು ಸರಕಾರವನ್ನು ಒತ್ತಾಯ ಮಾಡಿದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಉಪಾಧ್ಯಕ್ಷ ಎಂ.ಕೆ.ಕುಮಾರ್, ಕಾರ್ಯದರ್ಶಿ ನಂಜಯ್ಯ, ಖಜಾಂಚಿ ರಾಮಕೃಷ್ಣ ಮೂರ್ತಿ, ಗೌರವಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ವೆಂಕಟೇಶ್, ಸಹ ಕಾರ್ಯದರ್ಶಿಗಳಾದ ರವಿ, ಗಿರೀಶ್, ಕೃಷ್ಣ ಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಾಲೆಗಳಲ್ಲಿ ನೀರು ಬಿಟ್ಟರೆ ಸಾಲದು ಅದು ಸರಿಯಾಗಿ ಹರಿಯುತ್ತಿದೆಯೆ ಎಂದು ರಾತ್ರಿ ವೇಳೆ ಗಸ್ತು ಮಾಡಬೇಕೆಂದು ಶಾಸಕ ಡಾ.ಕೆ ಅನ್ನದಾನಿ ಅಧಿಕಾರಿಗಳಿಗೆ ಸೂಚಿಸಿದರು.       ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗೇಟ್ ಬಳಿ ಇರುವ ಕೆ.ಆರ್.ಎಸ್.ಎಂ ಮತ್ತು ಎಂಐಪಿ ವಿಭಾಗ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ  ಕಚೇರಿಯಲ್ಲಿ ಶಾಸಕ ಡಾ.ಅನ್ನದಾನಿರವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರ ಸಭೆಯಲ್ಲಿ ಮಾತ‌ನಾಡಿ, ರಾತ್ರಿಗಸ್ತು ವೇಳೆಯಲ್ಲಿ  ಪೊಲೀಸ್ ಸೆಕ್ಯೂರಿಟಿ  ಬೇಕಾದರೆ ತೆಗೆದುಕೊಳ್ಳಿ ಎಂದರು.  ಇನ್ನೂ  ಸತ್ತೇಗಾಲದಿಂದ ಇಗ್ಗಲೂರು ಗ್ರಾಮದವರೆಗೂ 450 ಕೋಟಿ ರೂ ರಾಮನಗರ ಜಿಲ್ಲೆಗೆ ಕುಡಿಯುವ ನೀರು ಯೋಜನೆಯಾಗುತ್ತಿದೆ ಅದಕ್ಕೆ ನಮ್ಮ ತಾಲ್ಲೂಕಿನ ಜನರಿಗೆ ನೀರು ತಲುಪುವ ವ್ಯವಸ್ಥೆಯ ಯೋಜನೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕಿನ ಎಲ್ಲಾನಾಲೆಗಳಿಗೂ ಹರಿದು ಈ ಬಾರಿ  ರೈತರ ಬೆಳೆಯನ್ನು ಬೆಳೆಯುವುದಕ್ಕೆ ನೀರು ನೀಡಬೇಕು  ಅದಲ್ಲದೆ  ರೈತರಿಗೂ ಬೆಳೆ ಬೆಳೆಯುವ ಬಗ್ಗೆ  ಮನವರಿಕೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆ ಮುಗಿದ ಬಳಿಕ ಆಗಸನಪುರ, ಹುಸ್ಕೂರು ಬಳಿ ನಾಲೆಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಲಾಯಿತು.   ಕಾವೇರಿ ನೀರಾವರಿ ನಿಗಮದ ಇಇ ರಾಮಕೃಷ್ಣ, ಜಿ.ಪಂ ಸದಸ್ಯ ರವಿ,  ಸಿದ್ದರಾಜು ಸೇರಿದಂತೆ ಎಲ್ಲಾ ಸಬ್ ಡಿವಿಜನ್ ನ ಇಂಜಿನಿಯರ್ ಗಳು ಹಾಜರಿದ್ದರು.

 ಕಾಲು ಜಾರಿ ಹೇಮಾವತಿ ಕಾಲುವೆಯಲ್ಲಿ ಕೊಚ್ಚಿಹೋದ ರೈತ ಮಹಿಳೆ
ಮಂಡ್ಯ ಜಿಲ್ಲೆಯ ಕೆ.ಅರ್. ಪೇಟೆ ತಾಲ್ಲೂಕಿನ ಶೀಳನೆರೆ ಗ್ರಾಮದ ಶಂಕರೇಗೌಡರ ಪತ್ನಿ ಸುಧಾಮಣಿ (50) ಮೃತ ಮಹಿಳೆ.ಜಮೀನಿನ ಬಳಿ ಕೃಷಿ ಚಟುವಟಿಕೆ ಮುಗಿದ ನಂತರ ಸಮೀಪದಲ್ಲಿ ಇರುವ ಹೇಮಾವತಿ ಕಾಲುವೆಯ ಸೋಪಾನ ಕಟ್ಟೆಯಲ್ಲಿ ಕೈಕಾಲು ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಡಿದ್ದಾರೆ.
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ಕೆ.ಆರ್.ಪೇಟೆ ತಾಲ್ಲೂಕು ಪಂಚಾಯಿತಿಯ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಸ್.ರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಪಂಚಾಯಿತಿಯ ಸ್ಥಾಯಿ ಸಮಿತಿಯ ಈ ಹಿಂದಿನ ಅಧ್ಯಕ್ಷರಾಗಿದ್ದ ಎಂ.ಎನ್.ವಿಜಯಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಹೆಚ್.ಎಸ್.ರಾಜು ಅವರು ಅವಿರೋಧವಾಗಿ ಆಯ್ಕೆಯಾದರು.ನಂತರ ನೂತನ ಅಧ್ಯಕ್ಷ ರಾಜು ಅವರು ಮಾತನಾಡಿ ನನ್ನನ್ನು ಗುರುತಿಸಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅದ್ಯಕ್ಷ ಸ್ಥಾನ ನೀಡಿರುವ ಶಾಸಕ ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು, ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ.ಮಂಜು, ಹಾಗೂ ಎಲ್ಲಾ ತಾಲ್ಲೂಕು ಪಂಚಾಯಿತಿ ಸದಸ್ಯರಿಗೂ ಆಬಾರಿಯಾಗಿದ್ದೇನೆ. ನನಗೆ ಸಿಕ್ಕಿರುವ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಕೆಲಸ ಮಾಡುವ ಮೂಲಕ ಒಳ್ಳೆಯ ಹೆಸರು ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ರಾಜು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ, ಇಒ ಚಂದ್ರಮೌಳಿ ಹಾಗೂ ಜೆಡಿಎಸ್ ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು ಅಭಿನಂದಿಸಿದರು.

ಕೆರೆ ಕಟ್ಟೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ  ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಕಾವೇರಿ ನೀರಾವರಿ ಕೊನೆಭಾಗದ ವ್ಯವಸಾಯಗಾರರ ಹೋರಾಟ ಸಮಿತಿ ವತಿಯಿಂದ  ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗ್ರಾಮದ ಕಾವೇರಿ ಬೃಹತ್ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆಹಾಕಿಪ್ರತಿಭಟನೆ .

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕೊನೆಭಾಗಕ್ಕೆ ಮತ್ತು ಕೆರೆ ಕಟ್ಟೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಕಾವೇರಿ ನೀರಾವರಿ ಕೊನೆಭಾಗದ ವ್ಯವಸಾಯಗಾರರ ಹೋರಾಟ ಸಮಿತಿ ವತಿಯಿಂದ  ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗ್ರಾಮದ ಕಾವೇರಿ ಬೃಹತ್ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಲಾಯಿತು. ಸರ್ಕಾರಗಳ ವಿರುದ್ದ ಘೋಷಣೆ ಕೂಗಿದರು.ಇದೇ ಸಂದರ್ಭದಲ್ಲಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾಧು ಮಾತನಾಡಿ, 5ಎ, 6ನಾಲೆಯ ತೂಬಿನಲ್ಲಿ  ನೀರೆತ್ತಿ ದುಗ್ಗನಹಳ್ಳಿ ಪಿಕ್ ಅಫ್ ಮೂಲಕ ದಡದಪುರ ,ಬಂಡೂರು, ಗಟ್ಟಿಕೊಪ್ಪಲು,ಸಸಿಯಾಲಪುರ ಕಲ್ಲಾರೇಪುರ ಗ್ರಾಮಗಳ ವ್ಯವಸಾಯಕ್ಕೆನೀರು ಹರಿಸಬೇಕು. ಮಾರೇಹಳ್ಳಿ ,ಮಳವಳ್ಳಿ ,ಗಂಗಾಧರನಕೆರೆಗೆ ನೀರು ತುಂಬಿಸಿ ಆ ಭಾಗದ ಭೂಮಿಗೆ ನೀರು ಪೂರೈಸಬೇಕು, ತಕ್ಷಣ ನೀರು ಕೊಡದಿದ್ದರೆ ತಮ್ಮ ಇಲಾಖೆಯ ಜವಾಬ್ದಾರಿಯಲ್ಲಿ ಭತ್ತದ ಸಸಿ ಬೆಳೆಸಿ ಸೆಪ್ಟೆಂಬರ್‌  2 ನೇ ವಾರ ಎಲ್ಲಾ ಬೇಸಾಯಗಾರರಿಗೂ ಸಸಿ ಹಂಚಿಕೆ ಮಾಡಬೇಕು. ಇದಲ್ಲದೆ ಕೆರೆಕಟ್ಟೆ ಕಾಲುವೆ ತೋಳ್ಗಾಲುವೆಗಳಲ್ಲಿ ಬೆಳೆದಿರುವ ಗಿಡಗಳನ್ನು ತೆಗೆಸಿ ಗಲೀಜು ಮತ್ತು ಹೂಳನ್ನು ಎತ್ತಿಸಬೇಕು ಎಂದು ಒತ್ತಾಯಿಸಿದರು. ಹೊಸ ಸರ್ಕಾರ ಬಂದರೂ ರೈತರ ಕಷ್ಟವನ್ನು ನೋಡುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ  ಕೂಲಿಕಾರರ ಸಂಘದ ತಾಲ್ಲೂಕು ಅಧ್ಯಕ್ಷ  ಶಿವಮಲ್ಲಯ್ಯ, ಬಂಡೂರು ಗ್ರಾಮಪಂಚಾಯಿತಿ ಅಧ್ಯಕ್ಷ ನಾಗರಾಜು, ಬಸವರಾಜು, ಟಿ.ಹೆಚ್ ಆನಂದ್, ಎನ್ ಶಿವಕುಮಾರ್ , ಪಾಪಣ್ಣ, ಸೇರಿದಂತೆ ಮತ್ತಿತ್ತರರು ಇದ್ದರು.

Page 20 of 28

Visitors Counter

224478
Today
Yesterday
This Week
This Month
Last Month
All days
125
372
1823
879
6704
224478

Your IP: 18.217.8.82
2024-05-03 18:41

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles