ಸಂತೆಬಾಚಹಳ್ಳಿಯಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಶೀರ್ಷಿಕೆಯಡಿ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿಯಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಹಾಲಿನ ಡೈರಿ ಮುಂಭಾಗ ಹಮ್ಮಿಕೊಳ್ಳಲಾಗಿತ್ತು. ಇ ಕಾರ್ಯಕ್ರಮದ ಉದ್ದೇಶ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಿ ರೈತರ ಉತ್ಪಾದನೆ ಹೆಚ್ಚಿಸಲು ತಾಂತ್ರಿಕ ತೆಗಳ ಬಗ್ಗೆ ರೈತರಿಗೆ ಮನವರಿಕೆ ಮಾಡುವುದು.ಮತ್ತು ಕೃಷಿ ವಸ್ತುಗಳ ಪ್ರದರ್ಶನ ಮತ್ತು ವಿಜ್ಞಾನಿ ಗಳೊಂದಿಗೆ ನೇರವಾಗಿ ರೈತರ ಸಂವಾದ ಹಾಗೂ ರೈತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.
ಕೃಷಿ ಉಪಕರಣಗಳ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸಿ ರೈತರಿಗೆ ಉಪಕರಣಗಳ ಬಗ್ಗೆ ಮಾಹಿತಿಯನ್ನು ಸಹ ಒದಗಿಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯ ದಿನೇಶ್ (ರಾಜಹುಲಿ) ,ಗ್ರಾ.ಪಂ.ಉಪಾಧ್ಯಕ್ಷರಾದ ದೇವರಾಜ್ ,ಪಿಎಸಿಎಸ್ ಅಧ್ಯಕ್ಷರು ಮಣಿಯಮ್ಮ ,ಎ.ಎಸ್.ರಮೇಶ್ ,ಹೆಚ್.ಜೆ.ನಾರಾಯಣ್, ಜೆ.ಎನ್ ನಾರಾಯಣ ಗೌಡ, ಸಹಾಯಕ ಕೃಷಿ ನಿರ್ದೇಶಕರಾದ ಟಿ.ಎಸ್ .ಮಂಜುನಾಥ್ ,ಕಾ.ಅಧಿಕಾರಿ ಶ್ರೀಧರ, ಸತೀಶ್ ಜಿ .ಎಸ್ ,ಸತೀಶ್ ಚಂದ್ರ ,ಮಾನಸ ಎಂ ,ಅನಂದಕುಮಾರ್, ಜಯಶಂಕರ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.