ಇತ್ತೀಚಿಗಿನ ಸುದ್ದಿಗಳು
- 27/09/2019 in ಹಾಸನ
- 10/09/2019 in ಮಂಡ್ಯ
- 10/09/2019 in ಹಾಸನ
- 10/09/2019 in ಹಾಸನ
- 09/09/2019 in ರಾಜ್ಯಸುದ್ದಿ
- 09/09/2019 in ಮಂಡ್ಯ
- 04/09/2019 in ರಾಜ್ಯಸುದ್ದಿ
- 04/09/2019 in ರಾಜ್ಯಸುದ್ದಿ
- 04/09/2019 in ಮಂಡ್ಯ
- 03/09/2019 in ರಾಜ್ಯಸುದ್ದಿ
- 03/09/2019 in ರಾಜ್ಯಸುದ್ದಿ
- 03/09/2019 in ರಾಜ್ಯಸುದ್ದಿ
- 03/09/2019 in ಮಂಡ್ಯ
- 03/09/2019 in ಮಂಡ್ಯ
- 03/09/2019 in ಮಂಡ್ಯ
ಸುದ್ದಿಜಾಲ
ಪರವಾನಗಿ ಇಲ್ಲದ ಪೆಟ್ಟಿ ಅಂಗಡಿಯಲ್ಲಿ ಸಿಗುವ ಅವಧಿ ಮೀರಿದ ಅಕ್ರಮ ಮಧ್ಯವನ್ನು ಸೇವಿಸಿದ ನಾಲ್ವರು ಯುವಕರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.
ಕೆ.ಆರ್.ಪೇಟೆ: ತಾಲೂಕಿನ ಕೃಷ್ಣಾಪುರ ಗ್ರಾಮದ ನಂಜೇಗೌಡರ ಮಗ ಮಹದೇವ್(50), ವೆಂಕಟರಾಂ ಅವರ ಮಗ ಸುರೇಶ್(29), ಲಿಂಗಾಪುರ ಗ್ರಾಮದ ಸಣ್ಣಯ್ಯ ಅವರ ಮಗ ತಮ್ಮಯ್ಯ(45), ಪರೇಗೌಡನಕೊಪ್ಪಲು ಗ್ರಾಮದ ಸಣ್ಣೇಗೌಡರ ಮಗ ಯೋಗೇಶ್(34) ಅವಧಿ ಮೀರಿದ ಮಧ್ಯೆ ಸೇವನೆ ಮಾಡಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಸ್ನೇಹಿತರಾಗಿದ್ದಾರೆ.
ಘಟನೆ ವಿವರ: ಕೃಷ್ಣಾಪುರ ಗ್ರಾಮದಲ್ಲಿ ಇರುವ ಹಲವು ಪೆಟ್ಟಿ ಅಂಗಡಿಗಳಲ್ಲಿ ಹಲವು ವರ್ಷಗಳಿಂದ ಪರವಾನಗಿ ಇಲ್ಲದೆ ಅವಧಿ ಮೀರಿದ ಮಧ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಅಕ್ರಮ ಮಧ್ಯ ಮಾರಾಟವನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ಹಲವು ಭಾರಿ ಹೋರಾಟ ಮಾಡಿ ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನ ವಾಗಿರುವುದಿಲ್ಲ. ಸ್ನೇಹಿತರಾದ ಮಹಾದೇವ್, ಸುರೇಶ್, ತಮ್ಮಯ್ಯ, ಯೋಗೇಶ್ ಅವರು ಮಂಗಳವಾರ ಮಧ್ಯಾಹ್ನ 4ಗಂಟೆ ಸಮಯದಲ್ಲಿ ಕೃಷ್ಣಾಪುರ ಗ್ರಾಮದಲ್ಲಿ ಸಿಗುವ ಮಧ್ಯವನ್ನು ಕೊಂಡು ಗ್ರಾಮದ ತೋಟವೊಂದರಲ್ಲಿ ಸೇವನೆ ಮಾಡಿದ ಕೆಲವೇ ನಿಮಿಷಗಳಲ್ಲಿ ಹೊಟ್ಟೆ ನೋವು, ವಾಂತಿ-ಬೇದಿ, ಕಾಣಿಸಿಕೊಂಡು ಅಸ್ವಸ್ಥಗೊಂಡರು. ತಕ್ಷಣ ಅವರನ್ನು ಕೆ.ಆರ್.ಪೇಟೆ ಪಟ್ಟಣ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಾಲ್ವರಿಗೂ ತೀವ್ರನಿಗಾ(ಐಸಿಯು) ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವಧಿ ಮೀರಿದ ಮಧ್ಯ ಸೇವನೆ ಇದಕ್ಕೆ ಕಾರಣವಿರಬೇಕೆಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದು, ಪೊಲೀಸರ ಪೂರ್ಣ ಪ್ರಮಾಣದ ತನಿಖೆಯಿಂದ ಇದರ ನಿಖರ ಕಾರಣ ತಿಳಿದು ಬರಬೇಕಾಗಿದೆ.
ಗ್ರಾಮಸ್ಥರ ಆಕ್ರೋಶ: ಕಳೆದ ಹಲವಾರು ವರ್ಷಗಳಿಂದ ಕೃಷ್ಣಾಪುರ ಗ್ರಾಮದಲ್ಲಿ ಕೆಲವು ಪೆಟ್ಟಿಗೆ ಅಂಗಡಿಗಳಲ್ಲಿ ಯಾವುದೇ ಲೈಸೆನ್ಸ್ ಪಡೆಯದೇ ಅಕ್ರಮವಾಗಿ ಕಳಫೆ ಗುಣಮಟ್ಟದ ಮಧ್ಯವನ್ನು ಮಾರಾಟಮಾಡುತ್ತಿರುವುದನ್ನು ತಡೆಗಟ್ಟುವಂತೆ ಹೋರಾಟ ಮಾಡಿದರೂ ಸಹ ಅಬಕಾರಿ ಅಧಿಕಾರಿಗಳಾಗಲಿ, ಪೊಲೀಸ್ ಅಧಿಕಾರಿಗಳಾಗಲು ಮಧ್ಯ ಮಾರಾಟವನ್ನು ತಡೆಗಟ್ಟುವಲ್ಲಿ ವಿಫಲವಾಗಿರುವುದೇ ಇಂದಿನ ದುರ್ಘಟನೆಗೆ ಕಾರಣವಾಗಿದೆ. ಗ್ರಾಮದಲ್ಲಿ ಸುಲಭವಾಗಿ ಸಿಗುವ ಮಧ್ಯವನ್ನು ಸೇವನೆ ಮಾಡಿ ಅಸ್ವಸ್ಥಗೊಂಡು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಮಹಾದೇವ್, ಸುರೇಶ್, ತಮ್ಮಯ್ಯ, ಯೋಗೇಶ್ ಅವರಿಗೆ ಏನಾದರೂ ಹೆಚ್ಚು-ಕಡಿಮೆಯಾದರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈಗಲಾದರೂ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟವನ್ನು ಬಂದ್ ಮಾಡಿಸಬೇಕು. ಅಕ್ರಮ ಮಧ್ಯ ಮಾರಾಟಗಾರರಿಂದ ಆಸ್ಪತ್ರೆಯ ಖಚರ್ು ವೆಚ್ಚಗಳನ್ನು ಭರಿಸಬೇಕೆಂದು ಕೃಷ್ಣಾಪುರ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ಗಗನಚುಕ್ಕಿ ಮಹಿಳಾ ಕಳಂಜಿ ಒಕ್ಕೂಟದ ಲಾಭಾಂಶವನ್ನು ಧಾನ್ ಪೌಂಡೇಶನ್ ಏಕೆ ಕೊಡಬೇಕು, ಕೊಡುವುದಿಲ್ಲ ಎಂದು ಒತ್ತಾಯಿಸಿ ಮಳವಳ್ಳಿ ಪಟ್ಟಣದ ಧಾನ್ ಪೌಂಡೇಶನ್ ಕಚೇರಿಗೆ ಬೀಗ ಜಡಿದು ಮಹಿಳಾ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.
ಮಳವಳ್ಳಿ: ಪಟ್ಟಣದ ಗಗನಚುಕ್ಕಿ ಮಹಿಳಾ ಕಳಂಜಿ ಒಕ್ಕೂಟ ಕಚೇರಿಯ ಮುಂದೆ ಒಕ್ಕೂಟದ ಅಧ್ಯಕ್ಷೆ ಸೌಭಾಗ್ಯಮ್ಮ ವಾಹಿನಿ ಜೊತೆ ಮಾತನಾಡಿ ಒಕ್ಕೂಟ ಸದಸ್ಯರಿಗೆ ಧಾನ್ ಪೌಂಡೇಶನ್ ವಂಚಿಸುತ್ತಿದ್ದಾರೆ ಒಕ್ಕೂಟದ ಲಾಭಾಂಶವನ್ನು ಧಾನ್ ಪೌಡೇಶನ್ ಕೊಡಬೇಕಂತೆ ಇದು ಯಾವ ನ್ಯಾಯನಾನು ಸಂಘ ಬೆಳೆಸಿದ್ದು, ಒಕ್ಕೂಟ ನಮ್ಮದು . ನಮ್ಮ ಹಣವನ್ನು ಏಕೆ ತಮಿಳುನಾಡಿನ ಸಂಸ್ಥೆಗೆ ನೀಡಬೇಕು ಎಂದು ಪ್ರಶ್ನಿಸಿದರು.ಮೊದಲು ಬೈಲಾ ವನ್ನು ಕನ್ನಡ ಮಾಡಿಸಿದ್ದರೂ ಈಗ ಇಂಗ್ಲಿಷ್ ಭಾಷೆಯಲ್ಲಿ ಮಾಡಿಸಿದ್ದು ನಮಗೆ ವಂಚನೆ ಮಾಡುತ್ತಿದ್ದಾರೆ.ನಮ್ಮ ಒಕ್ಕೂಟದ ಲಾಭಾಂಶವನ್ನು ತಮಿಳಿನಾಡಿನ ಸಂಸ್ಥೆ ಗೆ ಕಳುಹಿಸಬೇಕಂತೆ ಇದು ಯಾವ ನ್ಯಾಯಧಾನ ಪೌಂಡೇಶನ್ ಸಂಸ್ಥೆ ನಡೆಸುವ ಕಾರ್ಯಕ್ರಮ ಕ್ಕೆ ನಮ್ಮ ಒಕ್ಕೂಟ ಹಣ ಕೊಡಬೇಕು ಆದುದ್ದರಿಂದ ಇನ್ನೂ ಮುಂದೆ ನಮ್ಮ ಧಾನ್ ಪೌಂಡೇಶನ್ ಸಂಸ್ಥೆ ಯಿಂದ ಮುಕ್ತಗೊಳಿಸಿ ಎಂದು ಆರೋಪಿಸಿದರು.
ತಮಿಳುನಾಡಿನ ಮಧುರೈ ಮೂಲದ ಧಾನಫೌಂಡೇಶನ್ ಮಾರ್ಗದರ್ಶನದಲ್ಲಿ ಮಳವಳ್ಳಿ ಯಲ್ಲಿ ನಡೆಯುತ್ತಿರುವ ಸಂಸ್ಥೆ ಯಾಗಿದೆ ನಮ್ಮ ಒಕ್ಕೂಟದಲ್ಲಿ 172. ಸ್ತ್ರೀ ಶಕ್ತಿ ಸ್ವ ಸಹಾಯಸಂಘಗಳಿದ್ದು. ಇದುವರೆಗೂ 2 ಕೋಟಿ ರೂ ಯಷ್ಟು ಹಣವನ್ನು ಲಾಭ ಬಂದಿದೆ ಅದನ್ನು ವಂಚಿಸಲು ಯತ್ನ ಮಾಡುತ್ತಿದೆ ಎಂದು ಆರೋಪ ಮಾಡಿದರು
ಸ್ಥಳಕ್ಕೆ ಎ ಎಸ್ ಐ ಲೋಕೇಶ್ ಆಗಮಿಸಿ ಒಕ್ಕೂಟದವರನ್ನು ಮನವೊಲಿಸಲು ಯತ್ನಿಸಿ ದಾವ್ ಫೌಂಡೇಶನ್ ವಲಯಾಧಿಕಾರಿ ಗಜಾನನ ಹೆಗ್ಗೆಡೆ ಕಚೇರಿಗೆ ಬೇಟಿ ಸದಸ್ಯರ ಜೊತೆ ಮಾತನಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ ನಂತರ. ಒಕ್ಕೂಟದ ಎಲ್ಲಾ ನಿರ್ದೇಶಕರ ಜೊತೆ ಚರ್ಚೆ ಮಾಡಿ ದಿನಾಂಕ ನಿಗಧಿ ಪಡಿಸುವುದಾಗಿ ತಿಳಿಸಿದರು.
ಈ ಮಧ್ಯೆ ಒಕ್ಕೂಟದ ಅಧ್ಯಕ್ಷೆ ಸೌಭಾಗ್ಯ ರವರು ಮೇ 25 ರ ನಂತರ ದಿನಾಂಕ ನಿಗಧಿ ಪಡಿಸಿ ಎಂದರು.ಇದೇ ಸಂದರ್ಭದಲ್ಲಿ ಒಕ್ಕೂಟದ ಹಲವು ಸದಸ್ಯರು ಇದ್ದರು
ಇನ್ನೂ ದಾನ್ ಪೌಂಡೇಶನ್ ವಲಯಾಧಿಕಾರಿ ಗಜಾನನ ಹೆಗ್ಗಡೆ ಮಾತನಾಡಿ ಇದು ದಾನ್ ಪೌಂಢೇಶನ್ ಸಂಸ್ಥೆ ಕೆಟ್ಟ ಹೆಸರುಬರಲಿ ಎಂಬ ಪಿತೂರಿ . ನಮ್ಮ ಸಂಸ್ಥೆ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಿವಶಂಕರ್ ಹಾಗೂ ಮಹೇಂದ್ರ ರವರ ಕುತಂತ್ರವಿದು . ನಾವು ಯಾವುದೇ ರೀತಿಯ ಹಣ ವನ್ನೂ ಒಕ್ಕೂಟದಿಂದ ಪಡೆದಿಲ್ಲ. ಶಿವಶಂಕರ್ ರನ್ನು ಕೆಲಸದಿಂದ ತೆಗೆದಿದ್ದು ಹಾಗೂ ಮಹೇಂದ್ರ ರವರ ನ್ನು ವರ್ಗ ಮಾಡಿದ ಹಿನ್ನಲೆಯಲ್ಲಿ ಕೆಲವು ಸ್ವ ಸಹಾಯ ಗುಂಪುಗಳಿಗೆ ತಪ್ಪು ತಿಳುವಳಿಕೆ ನೀಡಿದ್ದಾರೆ. ಪ್ರತಿಯೊಂದಕ್ಕೂ ಲೆಕ್ಕವಿದೆ ಸದ್ಯದಲ್ಲೇ ಎಲ್ಲಾ ನಿರ್ದೆಶಕರ ಸಭೆ ಕರೆದು ಚರ್ಚೆ ಮಾಡಿ ನಂತರ ಎಲ್ಲಾ ಒಕ್ಕೂಟ ಸದಸ್ಯರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
Media
ಮಳವಳ್ಳಿತಾಲ್ಲೂಕಿನ ವಿವಿದ ಗ್ರಾಮಗಳಲ್ಲಿ ಬಸವಜಯಂತಿಯನ್ನು ಅದ್ದೂರಿ ಹಾಗೂ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಮಳವಳ್ಳಿ: ಕಾಯಕಯೋಗಿ ಕ್ರಾಂತಿಕಾರ ಜಗಜ್ಯೋತಿ ಶ್ರೀ ಬಸವೇಶ್ವರ ರವರ ಜಯಂತಿ ಕಾರ್ಯಕ್ರಮ ಹಲವು ಸಂಘಟನೆ ಗಳು , ವೀರಶೈವ ಲಿಂಗಾಯತ ಸಮುದಾಯದವರು ಸೇರಿದಂತೆ ಮಳವಳ್ಳಿತಾಲ್ಲೂಕಿನ ವಿವಿದ ಗ್ರಾಮಗಳಲ್ಲಿ ಬಸವಜಯಂತಿಯನ್ನು ಅದ್ದೂರಿ ಹಾಗೂ ವಿಜೃಂಭಣೆಯಿಂದ. ಆಚರಣೆ ಮಾಡಲಾಯಿತು. ಮಳವಳ್ಳಿ ಪಟ್ಟಣದ ಆದರ್ಶ ಕಾನ್ವೆಂಟ್ ರಸ್ತೆಯಲ್ಲಿರುವ ಶ್ರೀಬಸವೇಶ್ವರ ವೃತ್ತದಲ್ಲಿ ಬಸವಣ್ಣರವರ ಭಾವಚಿತ್ರ ವಿಟ್ಟು ಪೂಜೆ ಸಲ್ಲಿಸಿ ನಂತರ ಗಿಡಗಳನ್ನು ವಿತರಣೆ ಮೂಲಕ ಸಾಲುಮರನಾಗರಾಜು ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೀರಶೈವ ಮುಖಂಡರು , ಮಾಜಿ ಪುರಸಭೆ ಸದಸ್ಯರು ಸೇರಿದಂತೆ ಹಲವರು ಇದ್ದರು.
ಇನ್ನೂ ಶ್ರೀ ಬಸವೇಶ್ವರ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ತಮ್ಕ ಕಚೇರಿಯಲ್ಲಿ ಬಸವಣ್ಣರವರ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಬಸವ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ನಂಜುಂಡಸ್ವಾಮಿ. ಉಪಾಧ್ಯಕ್ಷ ಲೋಕೇಶ್ , ಕಾರ್ಯದರ್ಶಿ ರಾಜೇಶ್ , ಖಜಾಂಚಿ ಮಹೇಶ್, ನಾಗೇಂದ್ರ ಸೇರಿದಂತೆ ಮತ್ತಿತ್ತರರು ಇದ್ದರು ಇನ್ನೂ ತಾಲ್ಲೂಕು ವೀರಶೈವ ಯುವ ಬಳಗದವತಿಯಿಂದ. ಬಸವಣ್ಣರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಅಚರಿಸಲಾಯಿತು.
Media
ಸುಮಲತಾ ಪರವಾಗಿ ನಟ ದರ್ಶನ್ ಪ್ರಚಾರ. ಜೋಡಿ ಜೆಸಿಬಿ ಮೇಲೆ ನಿಂತು ಅಭಿಮಾನಿಗಳು ಹೂಮಳೆ.ಏ.18 ರಂದು ಮತಗಳ ಮಳೆ ಸುರಿಸಬೇಕು ಎಂದು ಮನವಿ..
ಮಂಡ್ಯ: ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಇಳಿದಿರುವ ದಚ್ಚುಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಜೋಡಿ ಜೆಸಿಬಿ ಮೇಲೆ ನಿಂತು ಅಭಿಮಾನಿಗಳು ಹೂಮಳೆ ಸುರಿಸಿದ್ದಾರೆ.ನಟ ದರ್ಶನ್ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಪ್ರಚಾರ ಮಾಡುತ್ತಿದ್ದಾರೆ. ತಾಲೂಕಿನ ಸಂತೇಬಾಚಹಳ್ಳಿ ಕ್ರಾಸ್ ಬಳಿ ಪ್ರಚಾರದ ವೇಳೆ ಅಭಿಮಾನಿಗಳು ಎರಡು ಜೆಸಿಬಿ ತರಿಸಿ, ಮೇಲಿನಿಂದ ಹೂಮಳೆ ಸುರಿಸಿದರು.ಜೋಡಿ ಜೆಸಿಬಿ ಮೂಲಕ ಹೂಮಳೆ ಸುರಿಸುತ್ತಿರುವ ದಚ್ಚು ಅಭಿಮಾನಿಗಳು ಈ ವೇಳೆ ದರ್ಶನ್, ಈಗ ಹೇಗೆ ಹೂಮಳೆ ಸುರಿಸಿದ್ದೀರೋ ಹಾಗೇ ಏ.18 ರಂದು ಮತಗಳ ಮಳೆ ಸುರಿಸಬೇಕು ಎಂದು ಮನವಿ ಮಾಡಿದರು.
ನಂತರ ಕಿಕ್ಕೇರಿಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ನಟ ದರ್ಶನ್ ಪ್ರಚಾರಕ್ಕೆ ತೆರಿಳಿದ ವೇಳೆ ನೆಚ್ಚಿನ ನಟನನ್ನ ನೊಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
Media
ನೀರು ಹಾಯಿಸುತ್ತಿದ್ದಾಗ ಏಕಾ ಏಕಿ ಹೆಜ್ಜೇನುಗಳು ದಾಳಿ .ರೈತ ಲೋಕೇಶ್ ಸ್ಥಳದಲ್ಲಿಯೇ ಸಾವು..
ಕೃಷ್ಣರಾಜಪೇಟೆ: ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಜಮೀನಿನಲ್ಲಿ ನೀರು ಹಾಯಿಸುತ್ತಿದ್ದಾಗ ಏಕಾ ಏಕಿ ಹೆಜ್ಜೇನುಗಳು ದಾಳಿ ಮಾಡಿದ್ದರಿಂದ ಲೋಕೇಶ್ ಎಂದು ರೈತ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಮೃತ ಲೋಕೇಶ್ ಅವರ ರಕ್ಷಣೆಗೆ ಮುಂದಾಗಿದ್ದ ನಾಗರಾಜು ಮತ್ತು ಕಾಳಶೆಟ್ಟಿಯವರಿಗೂ ಜೇನುಗಳು ದಾಳಿ ಮಾಡಿವೆ ಅವರು ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಲೋಕೇಶ್ ಶೆಟ್ಟಿ ಮದುವೆಯಾಗಿ ಇಬ್ಬರು ಗಂಡು ಮಕ್ಕಳಿದ್ದರು ನಾಲ್ಕು ವರ್ಷದ ಮಗು ಮತ್ತು ಆರು ವರ್ಷದ ಮಗು ಇಬ್ಬರು ಗಂಡು ಮಕ್ಕಳಿದ್ದರು ಗ್ರಾಮದಲ್ಲಿ ಸೂತಕದ ಛಾಯಾ ನಿರ್ಮಾಣವಾಗಿದೆ
ನನ್ನ ಮಂಡ್ಯ ಜನತೆ ಮಾದ್ಯಮಗಳ ಎಪಿಸೋಡ್ ಗೆ ಬದಲಾಗಲ್ಲಾ.ಮೇ 23ಕ್ಕೆ ಫಲಿತಾಂಶ ಬಂದಾಗ ವಾಹಿನಿಗಳ ಮಾಲೀಕರು ನಿರಾಸೆಗೊಳಗಾಗುತ್ತೀರಿ.ಮಾಧ್ಯಮಗಳ ವಿರುದ್ಧ ಸಿಎಂ ಅಸಮಾಧಾನ.
ಹಾಸನ: ಚನ್ನರಾಯಪಟ್ಟಣ ದಲ್ಲಿ ಇಂದು ಸಿಎಂ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವು ಏನೇ ಪ್ರಯತ್ನ ಪಟ್ಟರೂ, ಎಷ್ಟೇ ಅಪಪ್ರಚಾರ ಮಾಡಿದರೂ ಮಂಡ್ಯ ಜನತೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ದಿನ ಬೆಳಗಾದರೆ ಮಂಡ್ಯದ್ದೇ ಸುದ್ದಿ. ಚುನಾವಣೆ ಬರಿ ಮಂಡ್ಯದಲ್ಲಿ ನೆಡಯುತ್ತಿದೆ ದೇಶದಲ್ಲಿ ನೆಡಯುತ್ತಿಲ್ಲ ಎಂಬತ್ತೆ ಬಿಂಬಿಸಿ ಎಪಿಸೋಡ್ ಮಾಡಿ ಮಂಡ್ಯ ಜನರನ್ನು ಬದಲಿಸಲು ನೊಡತ್ತಿದ್ದು ವಾಹಿನಿಗಳ ಮಾಲೀಕರು ನಿರಾಸೆಗೊಳಗಾಗುತ್ತೀರಿ. ನಾನೇನು ಗಾಬರಿ ಆಗಿಲ್ಲ ಹಾಗೂ ಆತಂಕಗೊಂಡಿಲ್ಲ. ಮೇ 23ಕ್ಕೆ ಫಲಿತಾಂಶ ಬಂದಾಗ ಎಲ್ಲವೂ ಗೊತ್ತಾಗುತ್ತದೆ. ಮಂಡ್ಯದಲ್ಲಿ ಕೆಲವು ಸಮಸ್ಯೆಗಳಾಗುತ್ತಿವೆ. ಇದರಿಂದ ಅಕ್ಕಪಕ್ಕದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಮಸ್ಯೆಯಾಗದಂತೆ ನಾನೇ ಖುದ್ದು ಬಗೆಹರಿಸುತ್ತಿದ್ದೇನೆ ಎಂದು ಹೇಳಿದರು.
ನರೇಂದ್ರ ಮೋದಿಗೂ ಇದು ಸುಲಭದ ಚುನಾವಣೆ ಅಲ್ಲ. ಏಕೆಂದರೆ 2014ಕ್ಕೂ 2019ಕ್ಕೂ ಸಾಕಷ್ಟು ಬದಲಾವಣೆ ಆಗಿದೆ. ನಮ್ಮನ್ನು ಕಿಚಡಿ ಪಾರ್ಟಿ ಅಂತಾರೆ. ಅವರು ಕಳೆದ ಐದು ವರ್ಷದಲ್ಲಿ ಅಭಿವೃದ್ಧಿ ಮಾಡಿದರೆ ಪ್ರಾದೇಶಿಕ ಪಕ್ಷಗಳ ಮುಂದೆ ಹೋಗಿ ನಿಲ್ಲಬೇಕಿರಲಿಲ್ಲ. ರೈತರು ಈ ಬಿಜೆಪಿ ಅಧಿಕಾರದಿಂದ ನೊಂದಿದ್ದಾರೆ. ದೇವೇಗೌಡರಿಗೆ ರಾಷ್ಟ್ರ ರಾಜಕಾರಣದಲ್ಲಿ ವಿಶೇಷ ಶಕ್ತಿ ಬರೋ ವಾತಾವರಣ ಬರಲಿದೆ. ಹಾಗಂತ ಪ್ರಧಾನಿ ಆಗ್ತಾರೆ ಎಂದು ನಾನು ಹೇಳುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾರನ್ನು ಹಾಸನ ಗಡಿ ಹಿರೀಸಾವೆ ಚೆಕ್ ಪೋಸ್ಟ್ ನಲ್ಲಿ ತಡೆದು ಚುನಾಚಣಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಹಾಸನ: ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಹಿರೀಸಾವೆ ಚೆಕ್ ಪೋಸ್ಟ್ ಬಳಿ ಸಿಎಂ ಕಾರು ಬರುತ್ತಿದ್ದಂತೆಯೇ, ಅದನ್ನು ತಡೆದು ಪೊಲೀಸ್ ಹಾಗೂ ಚುನಾವಣಾ ಸಿಬ್ಬಂದಿ ವಾಹನವನ್ನು ತಪಾಸಣೆ ಮಾಡಿದ್ದಾರೆ.ಕುಮಾರಸ್ವಾಮಿ ಅವರು ಶಿವಮೊಗ್ಗಕ್ಕೆ ಹೋಗುವ ಮಾರ್ಗದಲ್ಲಿ ಚನ್ನರಾಯಪಟ್ಟಣದಲ್ಲಿರುವ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಮನೆಗೆ ಹೋಗಿದ್ದರು. ಅಲ್ಲಿ ಉಪಹಾರ ಸೇವನೆ ಬಳಿಕ ಕಾರ್ಯಕರ್ತರೊಂದಿಗೆ ಚುನಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ಬಳಿಕ ಅರಸೀಕೆರೆ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳಲಿದ್ದಾರೆ.
ಚನ್ನರಾಯಪಟ್ಟಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಇಂದು ಶಿವಮೊಗ್ಗದಲ್ಲಿ ಮದುಭಂಗಾರಪ್ಪ ನಾಮಪತ್ರ ಸಲ್ಲಿಸಲಿದ್ದಾರೆ. ಅಲ್ಲಿಂದ ಕುಂದಾಪುರದಲ್ಲಿ ಮೀನುಗಾರರ ಸಮಾವೇಶ ಇದೆ. ಹೀಗಾಗಿ ಗೋಕರ್ಣದಲ್ಲಿ ವಾಸ್ತವ್ಯ ಮಾಡುತ್ತೇನೆ. ಇಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮೆಲ್ಲ ಅಭ್ಯರ್ಥಿಗಳು ಯಾರು ಕಣದಲ್ಲಿದ್ದಾರೆ. ಅವರೆಲ್ಲರ ಕ್ಷೇತ್ರಗಳಿಗೂ ಭೇಟಿ ನೀಡುತ್ತೇನೆ. ನಮಗೆ ಹೆಲಿಕಾಪ್ಟರ್ ಭೇಟಿ ಬಳಸುವುದಕ್ಕೆ ಬಿಜೆಪಿ-ಕೇಂದ್ರ ಸರ್ಕಾರ ತಡೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಅತೀ ವೇಗವಾಗಿ ಚಲಿಸಿ ನಿಯಂತ್ರಣ ತಪ್ಪಿ ಅಟೊಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಕಾರು.ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆ ಕೊಪ್ಪಲು ಗೆಟ್ ಬಳಿ ಅತೀ ವೇಗವಾಗಿ ಬಂದು ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿ ಹೊಗುತ್ತಿದ್ದ ಅಟೊಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಹಾರಿ ರಸ್ತೆ ಪಕ್ಕದಲ್ಲಿ ಮಗುಚಿ ಬಿದ್ದಿದೆ .ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಅಟೊದಲ್ಲಿ ಪ್ರಯಾಣಿಸುತ್ತಿದ್ದ ಅಪ್ಪನಹಳ್ಳಿ ಒಬ್ಬ ವ್ಯಕ್ತಿಯ ಕಾಲಿ ಸ್ವಲ್ಪ ಪ್ರಮಾಣದ ಗಾಯಗಾಳಾಗಿದೆ. ಗಾಯಾಳು ಅಟೋ ಡ್ರೈವರ್ ನಾಗರಾಜು ವನ್ನು ಸಂತೇಬಾಚಹಳ್ಳಿ ಅರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ.ಒಟ್ಟು ಕಾರಿನಲ್ಲಿ ಐದ ಜನ ಯುವಕರು ಇದ್ದು ಪಾನಮತ್ತರಾಗಿದ್ದು ಸ್ಥಳದಿಂದ ಪೇರಿ ಕಿತ್ತಿದ್ದಾರೆ . ಅತೀ ವೇಗವಾಗಿ ಕಾರು ಚಾಲಾಯಿಸಿದ್ದೆ ಅಪಘಾತಕ್ಕೆ ಕಾರಣ .ಸದ್ಯಕ್ಕೆ ಕಾರು ಅನುವಿನಕಟ್ಟೆ ಗ್ರಾಮದ ಸಾಗರ್ ಎಂಬುವರದ್ದು ಎಂಬ ಮಾಹಿತಿ ಇದ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.