ಇತ್ತೀಚಿಗಿನ ಸುದ್ದಿಗಳು

ಸುದ್ದಿಜಾಲ

ಸುದ್ದಿಜಾಲ

Rate this item
(0 votes)

ಪ್ರಕೃತಿ ವಿಕೋಪದಿಂದ ರೈತ ಬೆಳೆದಿದ್ದ ಬಾಳೆ ಸಂಪೂರ್ಣ ನಾಶವಾಗಿದೆ ಪರಿಹಾರದ ಹಣ ನೋಡಿ ರೈತ ಕಂಗಾಲಾಗಿದ್ದಾನೆ ..

 ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ವಿಜಯ ಹೊಸಹಳ್ಳಿ ಗ್ರಾಮದ ಸಿದ್ದೇಗೌಡರ ಮಗ ಸಿದ್ದಲಿಂಗೇಗೌಡ (40) ಸರ್ವೆ ನಂಬರ್ 12/5 ರಲ್ಲಿ ಸುಮಾರು 2:30 ಎಲ್ಲಿ ಗುಂಟೆಯಲ್ಲಿ ಬೆಳೆದಿದ್ದ ಬಾಳೆ ಜೂನ್ ತಿಂಗಳಲ್ಲಿ ಪ್ರಕೃತಿ ವಿಕೋಪದಿಂದ ಮಳೆಯಿಂದ ಒಂದು ಎಕರೆ ಸಂಪೂರ್ಣ ಬೆಳೆ ನಾಶವಾಗಿದೆ , 1 ಲಕ್ಷಕ್ಕೂ ಹೆಚ್ಚು ಬಾಳೆ ಬೆಳೆ ನಾಶವಾಗಿತ್ತು . ಸಂಬಂಧಪಟ್ಟ ಅಧಿಕಾರಿಗಳು ನನ್ನ ಬೆಳೆದಿದ್ದ ಬೆಳೆಯನ್ನು ವೀಕ್ಷಣೆ ಮಾಡಿ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದರು , ಪರಿಹಾರ ಧನ ಸಹಾಯ ನೋಡಿ ನನಗೆ ದಿಕ್ಕು ತೋಚದಂತಾಗಿದೆ ,ಕೇವಲ 1350 ರೂಪಾಯಿಗಳನ್ನು ಪರಿಹಾರದ ಹಣ ಎಂದು
ಕೃಷ್ಣರಾಜಪೇಟೆ ಪಟ್ಟಣದ ತಹಸೀಲ್ದಾರ್ ನೀಡಿದ್ದಾರೆ , ನಾನು ಸಾಲ ಮಾಡಿ ಬೆಳೆದಿದ್ದ ಬೆಳೆಗೆ ತಕ್ಕ ಬೆಲೆ ಸಿಕ್ಕಿಲ್ಲದ ಕಾರಣ ,ನಾನು ಮತ್ತೆ ಆ ಚೆಕ್ಕನ್ನು ತಹಸೀಲ್ದಾರರಿಗೆ ನೀಡಿದ್ದೇನೆ ಹೆಚ್ಚಿನ ಪರಿಹಾರಕ್ಕೆ ನಾನು ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತಿದ್ದೇನೆ ಎಂದು ರೈತ ಹೇಳಿಕೊಂಡಿದ್ದಾನೆ.

 

Last modified on 28/08/2019
Rate this item
(0 votes)

ಕೆ.ಆರ್.ಪೇಟೆ:  ಅಪರಿಚಿತ ಕಾರು ಡಿಕ್ಕಿ ಪಾದಚಾರಿ ಮಹಿಳೆಗೆ ಗಂಭೀರ ಗಾಯ...

ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹರಪನಹಳ್ಳಿ ಯ ಬಳಿ ಘಟನೆ....

ರಸ್ತೆ ಬದಿಯಲ್ಲಿ ನೆಡೆದು ಹೊಗುತ್ತಿದ್ದ ಪಾದಚಾರಿ ಗೆ ಅಪರಿಚಿತ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ...

ಹರಪನಹಳ್ಳಿ ಗ್ರಾಮದ ಭಾಗ್ಯಮ್ಮ (40) ಪಾದಚಾರಿ ಮಹಿಳೆ....

ಪಟ್ಟಣದ ಸರ್ಕಾರಿ ಆಸ್ಪತ್ರೆ ಗೆ ರವಾನೆ..

ತಲೆ ಗಂಭೀರ ಸ್ವರೂಪದ ಗಾಯ ..

Last modified on 19/08/2019
Rate this item
(0 votes)

ಮಳವಳ್ಳಿ: 35 ವರ್ಷದ ಮಹಿಳೆಯೊಬ್ಬಳನ್ನು ದುಷ್ಕರ್ಮಿಗಳು ಕೊಲೆ ಮಾಡಿ ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಹುಲ್ಲಂಬಳ್ಳಿ ಗ್ರಾಮದ ಬಳಿ ನಡೆದಿದೆ.

ಟಿ.ನರಸೀಪುರಕ್ಕೆ ತೆರಳುವ ಮುಖ್ಯರಸ್ತೆ ಬದಿಯಲ್ಲಿ ಮೃತದೇಹದ ಮೇಲೆ ಒಕ್ಕಣೆ ಮಾಡಿದ ರಾಗಿ ಸಂಡು ಸುರಿದು ಹೋಗಿದ್ದು. ರಸ್ತೆಬದಿಯಲ್ಲಿ ಮೃತಳ ವೇಲ್ ಸಹ ಇದ್ದು , ಇದಲ್ಲದೆ ಶವದ ಪಕ್ಕ ಎರಡು ಕಲ್ಲುಗಳನ್ನು ಸಹ ಇಟ್ಟಿದ್ದು, ಯಾವರೀತಿ ನಡೆದಿದೆ ಎಂಬ ಸತ್ಯಾಂಶ ಪೊಲೀಸರ ತನಿಖೆಯಿಂದಲೇ ಹೊರಬೀಳಬೇಕಾಗಿದೆ . ಈ ಹಿಂದೆ ಚಿಕ್ಕಬಾಗಿಲು ಗ್ರಾಮದಲ್ಲಿ ವ್ಯಕ್ತಿನೊಬ್ಬನ ತಲೆಕಡಿದು ಪೊಲೀಸ್ ಠಾಣೆ ಗೆ ಬಂದಿದ್ದ ಆರೋಪಿಯ ಗ್ರಾಮದ ಪಕ್ಕದ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದ್ದು, ಬೆಳಕವಾಡಿ ಪೊಲೀಸ ಸಬ್ ಇನ್ಸ್ ಪೆಕ್ಟರ್ ಉಮಾವತಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ

Last modified on 17/08/2019
Rate this item
(0 votes)

ಮಳವಳ್ಳಿ:  ಕಾಲೇಜು ವಿದ್ಯಾರ್ಥಿಯೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿರುವ ಘಟನೆ

Rate this item
(0 votes)

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದ ಶ್ರೀ ಶ್ರೀ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿಯವರು ೨೪ ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.

ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಚಾಲನೆ ಮಾಡಿದರು .

ನಂತರ ಮಾತನಾಡಿದ ಶ್ರೀ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಯವರು ಎಲ್ಲ ಧರ್ಮಗಳು ಒಗ್ಗೂಡಬೇಕು ಅವರವರ ಧರ್ಮಗಳಲ್ಲಿ ಎಲ್ಲ ಸಮಾನತೆಯಿಂದ ನೋಡಿಕೊಳ್ಳಬೇಕು .ಧರ್ಮವನ್ನು ಒಡೆಯಲು ಯಾರೂ ಹೋಗಬಾರದು . ಅತಿ ಹೆಚ್ಚು ಶರಣರು ಹುಟ್ಟಿ ಬಂದಿರುವುದು ಉತ್ತರ ಕರ್ನಾಟಕದಲ್ಲಿ ಆದರೆ ಈಗ ದುಃಖದ ಸಂಗತಿ ಎದುರಾಗಿದೆ .ವರುಣನ ಆರ್ಭಟದಿಂದ ಕರ್ನಾಟಕ ತತ್ತರಿಸಿ ಹೋಗಿದೆ .ನೆರೆ ಸಂತ್ರಸ್ತರಿಗೆ ನಮ್ಮ ಮಠದಿಂದ ೫೦ಸಾವಿರ ಧನ ಸಹಾಯ ಮಾಡುತ್ತಿದ್ದೇವೆ,ಭಕ್ತಾದಿಗಳು ಸಹ ಹೆಚ್ಚಿನ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿದರು .ನೆರೆ ಸಂತಸ್ತರಲ್ಲಿ ಸತ್ತವರಿಗೆ ಒಂದು ನಿಮಿಷ ಮೌನಾಚರಣೆಯನ್ನು ಮಾಡಲಾಯಿತು .ಪಾಂಡವಪುರ ತಾಲ್ಲೂಕಿನ ಎಲ್ಲ ಅಖಿಲ ಭಾರತ ವೀರಶೈವ ಲಿಂಗಾಯಿತ ಪದಾಧಿಕಾರಿಗಳಿಗೆ ಗುರುಸಿದ್ದೇಶ್ವರ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಎಲ್ಲರಿಗೂ ಸನ್ಮಾನವನ್ನು ಮಾಡಲಾಯಿತು .

೫೦೦ ಹೆಚ್ಚು ಭಕ್ತಾದಿಗಳು ಹಾಜರಿದ್ದರು ಎಲ್ಲರಿಗೂ ಮಠದಿಂದ ಉಪಹಾರವನ್ನು ಮಾಡಿಸಲಾಯಿತು..ಇದೇ ಸಂದರ್ಭದಲ್ಲಿ ಅಕ್ಕಪಕ್ಕದ ಊರಿನ ಭಕ್ತಾದಿಗಳು ಹಾಜರಿದ್ದರು .

Rate this item
(0 votes)

ಕೆ ಆರ್ ಪೇಟೆ: ಶಾಲ ಮಕ್ಕಳಿಗೆ ಅವಶ್ಯವಿರುವ ಟೇಬಲ್ ಚೇರ್ ಮತ್ತು ಪುಸ್ತಕಗಳನ್ನು ಸಮಾಜ ಸೇವಕ ಅಮಚಹಳ್ಳಿ ಮಹೇಶ್ ವಿತರಣೆ ಮಾಡಿದರು.

ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಮಚಹಳ್ಳಿ ಗ್ರಾಮದಲ್ಲಿ 73 ಸ್ವತಂತ್ರ ದಿನವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು..

ಶಾಲಾಸಮಿತಿ ಅದ್ಯಕ್ಷ ಮೋಹನ್ ಧ್ವಜಾರೋಹಣ ಮಾಡಿ ನಂತರ ಮಕ್ಕಳಿಗೆ ದೇಶದ ಬಗ್ಗೆ ಮತ್ತು ಸ್ವತಂತ್ರ ಹೋರಾಟಗಾರರ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು..

ನಂತರ ಶಾಲ ಮುಖ್ಯ ಶಿಕ್ಷಕ ಮೋಹನ್ ಮಾತನಾಡಿ ಮಕ್ಕಳಿಗೆ ದೇಶ ಪ್ರೇಮದ ಬಗ್ಗೆ ತಿಳಿಹೇಳಿದರು.

ನಂತರ ಸಮಾಜ ಸೇವಕ ಮಹೇಶ್ ಶಾಲಾಮಕ್ಕಳಿಗೆ ಉಪಯುಕ್ತ ಬೆಂಚ್ ಮತ್ತು ಟೇಬಲ್ ವಿತರಣೆ ಮಾಡಿದರು..

ಆನಂತರ ಗ್ರಾಮದ ಬಸವೇಶ್ವರ ಯುವಕ ಮಂಡಳಿ ವತಿಯಿಂದ ಮಕ್ಕಳಿಗೆ ಬುಕ್, ಪೆನ್ ವಿತರಣೆ ಮಾಡಲಾಯಿತು. ಮತ್ತು ಗ್ರಾಮದ ಮಂಜೇಗೌಡ ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು ..

ಕಾರ್ಯಕ್ರಮದಲ್ಲಿ ,ಶ್ರೀಮತಿ ರೇಖಾ,ರಂಜನ್ ,ಮಂಜೇಗೌಡ,ಗೀರಿಶ್ ,ಅನಿತ ಮತ್ತು ಶಾಲಮಕ್ಕಳು ಗ್ರಾಮಸ್ಥರು ಹಾಜರಿದ್ದರು...

Rate this item
(0 votes)

ನಾಯಸಿಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ 73 ಸ್ವಾತಂತ್ರ ದಿನವನ್ನು ಸಡಗರ ಸಂಭ್ರಮದಿಂದ ಅಚರಣೆ ಮಾಡಲಾಯಿತು.

ಸಂತೇಬಾಚಹಳ್ಳಿ:ಹೋಬಳಿಯ ನಾಯಸಿಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ 73 ಸ್ವಾತಂತ್ರ ದಿನವನ್ನು ಸಡಗರ ಸಂಭ್ರಮದಿಂದ ಅಚರಣೆ ಮಾಡಲಾಯಿತು.ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಾರತಿ ಶ್ರೀಧರ್ ರವರು ಧ್ವಜಾರೋಹಣ ಮಾಡಿದರು.

 

ಗ್ರಾಮದ ಹಿರಿಯ ಮರಿಲಿಂಗೇಗೌಡರು ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಕಳೆದಿದೆ ನಮ್ಮ ದೇಶದ ಉನ್ನತಿಗೆ ಮಕ್ಕಳ ದೇಶಪ್ರೆಮವನ್ನು ತಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು.

ನಂತರ ಮುಖ್ಯ ಶಿಕ್ಷಕಿ ಮಹಾಲಕ್ಷ್ಮಿ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಸಾವಿರಾರು ಜನ ತಮ್ಮ ಪ್ರಾಣವನ್ನು ಸಮರ್ಪಣೆ ಮಾಡಿದ್ದಾರೆ ಮತ್ತು ಅವರ ಬಲಿದಾನದಿಂದ ಇಂದು ನಾವು 73 ಸ್ವಾತಂತ್ರ್ಯ ದಿನ ಅಚರಣೆ ಮಾಡುತ್ತಿದ್ದವೆ ‌. ಎಂದು ಮಕ್ಕಳಿಗೆ ಸ್ವತಂತ್ರ ಹೊರಟಗಾರ ಬಗ್ಗೆ ತಿಳಿಸಿಕೊಟ್ಟರು.

ಗ್ರಾಮದ ಮಂಜೇಗೌಡ ಪುತ್ರ ಪ್ರಸನ್ನ ಶಾಲಮಕ್ಕಳಿಗೆ ಪುಸ್ತಕ ಮತ್ತು ಪೆನ್ ವಿತರಣೆ ಮಾಡಿದರು.ನಂತರ ಎಲ್ಲಾ ಮಕ್ಕಳಿಗೆ ಸಿಹಿ ತಿನಿಸು ವಿತರಣೆ ಮಾಡಲಾಯಿತು .


 ಕಾರ್ಯಕ್ರಮದಲ್ಲಿ:  ಶಾಲೆ ಸಹ ಶಿಕ್ಷಕಿ ಮಂಜುಳ, ಅಂಗನವಾಡಿ ಶಿಕ್ಷಕಿ ಸುಕನ್ಯಾ, ಮಂಜುಳಮ್ಮ,ಲಕ್ಷ್ಮಮ್ಮ, ಭಾಗ್ಯಮ್ಮ,ಶೊಭ,ಮತ್ತಿತರ ಗ್ರಾಮಸ್ಥರು ಹಾಜರಿದ್ದರು..

Page 4 of 42

Visitors Counter

286262
Today
Yesterday
This Week
This Month
Last Month
All days
236
384
2635
5704
3051
286262

Your IP: 18.218.189.170
2025-05-11 13:01

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles