ಮಂಡ್ಯ
ಚಾಲಕನ ನಿಯಂತ್ರಣ ತಪ್ಫೀ ಆಫೆ ಆಟೋ ಪಲ್ಟಿ 7ಜನ ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯ
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ದೇವೀರಮ್ಮಣ್ಣಿ ಕೆರೆ ಏರಿಯ ಬಸವನಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಫೀ ಆಫೆ ಆಟೋ ಮೊಗಚಿ ಏರಿಯಿಂದ ಕೆಳಕ್ಕೆ ಪಲ್ಟಿಯಾಗಿ ಬಿದ್ದ ಕಾರಣ 7ಜನ ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಾಳಾಗಿದ್ದು ತಕ್ಷಣವೇ ಸಾರ್ವಜನಿಜರು ನೀಡಿದ ಮಾಹಿತಿಯ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂಧಿಗಳ ಕಾರ್ಯಾಚರಣೆ ಗಾಯಾಳುಗಳು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರ.ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು 108 ಆಂಬ್ಯುಲೆನ್ಸ್ ನಲ್ಲಿ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಗಾಯಾಳುಗಳ ಸ್ಥಳಾಂತರ.ಕೃಷ್ಣರಾಜಪೇಟೆ ಪಟ್ಟಣದಿಂದ ಅಗ್ರಹಾರಬಾಚಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಪ್ರಯಾಣಿಕರು.ಸ್ವಲ್ಪವೇ ಅಂತರದಲ್ಲಿ ತಪ್ಫೀದ ಬಾರಿ ಅನಾಹುತ ಯಾವುದೇ ಸಾವು ಸಂಭವಿಸಿಲ್ಲಾ.
ಎರಡೂ ವರ್ಷ ಕಳೆದರು ಬರಲಿಲ್ಲ ಅಂಗನವಾಡಿ ಶಿಕ್ಷಕಿ , ಸುಮ್ಮನೆ ಕೈ ಕಟ್ಟಿ ಕುಳಿತಾ ತಾಲ್ಲೂಕು ಆಡಳಿತ ಗ್ರಾಮಸ್ಥರು ರಿಂದ ಪ್ರತಿಭಟನೆ.
ಮಂಡ್ಯ ಜಿಲ್ಲೆಯ ಕೆ.ಅರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೆನಹಳ್ಳಿ ಗ್ರಾಮದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಅಂಗನವಾಡಿ ಕಾರ್ಯ ನಿರ್ವಹಿಸುತ್ತಿದೆ. ಅದರೆ ಈ ಅಂಗನವಾಡಿಗೆ ಎರಡೂ ವರ್ಷ ಗಳಿಂದ ಯಾವುದೇ ಅಂಗನವಾಡಿ ಕಾರ್ಯಕರ್ತೆ ಇಲ್ಲಾ .ಇದ್ದ ಹಳೆಯ ಶಿಕ್ಷಕಿ ರಜೆಮೇಲೆ ತೆರಳಿದ್ದಾರೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು ಹೇಳಿಕೊಂಡು ಇತ್ತ ಪಕ್ಕದ ಗ್ರಾಮ ಗೊರವಿ ಅಂಗನವಾಡಿ ಶಿಕ್ಷಕಿಯನ್ನು ಪ್ರಭಾರವಾಗಿ ನಿಯೊಜಿಸಿದೇ. ಅದರೆ ಅವರು ತಮ್ಮ ಗ್ರಾಮದ ಅಂಗನವಾಡಿಯಲ್ಲಿ ಕೆಲಸ ಇರುವುದರಿಂದ ಮೂರು ದಿನಕ್ಕೊಮ್ಮೆ ಬರತ್ತಿದ್ದು ಮಕ್ಕಳಿಗೆ ಯಾವ ರೀತಿ ಪಾಠ ಕಲಿಸುತ್ತಾರೆ. ಬೇರೆ ಶಿಕ್ಷಕಿಯನ್ನು ಸಹ ನಿಯೋಜಿಸದೆ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದು ಪೋಷಕರು ಮತ್ತು ಗ್ರಾಮಸ್ಥರು ಕಿಡಿಕಾರಿದರು.
ಅದೇ ಗ್ರಾಮದ ಹರೀಶ್ ಮಾತನಾಡಿ ನಾನೆ ಖುದ್ದಾಗಿ ಶಿಶು ಅಭಿವೃದ್ದಿ ಅದಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದರೆ ನಿಮ್ಮ ಗ್ರಾಮದ ಕೆಲಸವನ್ನು ತಡೆಹಿಡಿಯಾಲಗಿದೆ ಎಂದು ಉಡಾಪೆ ಉತ್ತರ ನೀಡುತ್ತಾರೆ. ಇ ಹಿಂದೆ ನಮ್ಮ ಗ್ರಾಮದ ಅಂಗನವಾಡಿಗೆ ಇಪ್ಪತ್ತುಕ್ಕೂ ಹೆಚ್ಚು ಮಕ್ಕಳ ಹಾಜರಾತಿ ಇತ್ತು ಇಂದು ಕೇವಲ ಎರಡು ಮೂರು ಮಕ್ಕಳಿಗೆ ಸೀಮಿತವಾಗಿದೆ ಅಲ್ಲದೇ ನಮ್ಮ ಗ್ರಾಮದ ಅಂಗನವಾಡಿಗೆ ಶಿಕ್ಷಕಿ ಇಲ್ಲದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈಗಾಗಲೇ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ಇದೆ ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ಘಟನೆ ಗಳು ಪೋಷಕರ ಮೇಲೆ ಪರಿಣಾಮ ಬಿರಿ ಸರ್ಕಾರಿ ಶಾಲೆಗಳು ಮುಚ್ಚುವುದರಲ್ಲಿ ಸಂದೇಹ ವಿಲ್ಲ ಎಂದರು.ಮತ್ತು ಕೊಠಡಿಯ ಕಿಟಕಿ ಬಾಗಿಲುಗಳ ಮುರಿದಿದ್ದು ಕಾಗದದ ಹಾಳೆಗಳಿಂದ ಮುಚ್ಚಲಾಗಿದೆ ಮಳೆ ಬಂದರೆ ಮಕ್ಕಳು ಮಳೆ ನೀರಿನಲ್ಲಿ ಸ್ನಾನ ಮಾಡು ಸ್ಥಿತಿ ಇದೆ ಕೂಡಲೆ ದುರಸ್ತಿ ಕೆಲಸಮಾಡಿಸಬೇಕು ಎಂದರು.
ನಂತರ ಮಾತನಾಡಿದ ವೆಂಕಟೇಶ ನಮ್ಮ ಗ್ರಾಮದಲ್ಲಿಯೇ ಅನೇಕ ವಿದ್ಯಾವಂತ ಹೆಣ್ಣು ಮಕ್ಕಳ ಇದ್ದು ಅವರಿಗೆ ಈ ಕೆಲಸ ನೀಡಿದರೆ ಮಕ್ಕಳ ಭವಿಷ್ಯ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸಿದಂತೆ ಅಗುತ್ತದೆ ಎಂದರು .ನಂತರ ಮಾತನಾಡಿದ ಮಂಜು ನಮ್ಮ ಗ್ರಾಮದ ಅಂಗನವಾಡಿಗೆ ಶಿಕ್ಷಕಿಯನ್ನು ನಿಯೋಜಿಸಿದ ಹೊದರೆ ಅಂಗನವಾಡಿಗೆ ಬೀಗ ಜಡಿದು ತಾಲೂಕು ಶಿಶು ಅಭಿವೃದ್ದಿ ಅಧಿಕಾರಿಗಳು ಮುಂದೆ ದರಣಿ ಕುರುತ್ತೆವೆ ಎಂದು ಎಚ್ಚರಿಕೆ ನೀಡಿದರು ಪ್ರತಿಭಟನೆ ಯಲ್ಲಿ ವೆಂಕಟೇಶ್, ವಾಸು, ಮಂಜು, ಶಶಿಕಲಾ ಮತ್ತಿತರು ಇದ್ದರು.
ತಾಲ್ಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆಯ ರಾಸುಗಳ ಸುಂಕ ಮನ್ನಾ ಮಾಡಿದ ತಾಲ್ಲೂಕು ಆಡಳಿತ.
ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಹೇಮಗಿರಿ ದನಗಳ ಜಾತ್ರೆಯ ಸುಂಕಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿಯಿಂದ ಬಾಗವಹಿಸಿದ್ದ ಬಿಡ್ ದಾರರು.ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರಾಸುಗಳ ಸುಂಕಹರಾಜು ನಿಲ್ಲಿಸಿ ರಾಸುಗಳಿಗೆ ಸುಂಕ ಮನ್ನಾ ಮಾಡಿದ ತಾಲ್ಲೂಕು ಆಡಳಿತ. ಜಾತ್ರಾ ಕಾಲದ ಅಂಗಡಿ ಮುಂಗಟ್ಟುಗಳು, ಗೊಬ್ಬರ ಮತ್ತು ವಾಹನಗಳ ಸುಂಕವನ್ನು ಮಾತ್ರ ಹರಾಜು ಮೂಲಕ ಅಂತಿಮಗೊಳಿಸಿದ ತಹಶೀಲ್ದಾರ್ ಎಂ.ಶಿವಮೂರ್ತಿ.ಉಪತಹಶೀಲ್ದಾರ್ ಚಂದ್ರಶೇಖರ್, ರಾಜಶ್ವನಿರೀಕ್ಷಕಿ ಚಂದ್ರಕಲಾ ಪ್ರಕಾಶ್, ಗ್ರಾಮಲೆಕ್ಕಾಧಿಕಾರಿ ಹರೀಶ್, ಮುಜರಾಯಿ ಗುಮಾಸ್ತೆ ಚಂದ್ರಕಲಾ ಸೇರಿದಂತೆ ಬಂಡಿಹೊಳೆ, ಕುಪ್ಪಹಳ್ಳಿ, ನಾಟನಹಳ್ಳಿ, ಲಕ್ಷ್ಮೀಪುರ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಬಿಲ್ಲೇನಹಳ್ಳಿ ಗ್ರಾಮದ ಶ್ರೀಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವಕ್ಕೆ ಮೊದಲ ಪೂಜೆ ಸಲ್ಲಿಸಲು ಶಾಸಕ ಮತ್ತು ತಾಪಂ ಸದಸ್ಯರ ನಡುವೆ ಮಾತಿನ ಚಕಮುಕಿ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಿಲ್ಲೇನಹಳ್ಳಿ ಗ್ರಾಮದ ಶ್ರೀಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶಾಸಕ ನಾರಾಯಣಗೌಡರು ರಥಕ್ಕೆ ಪೂಜೆ ಸಲ್ಲಿಸಲು ಮುಂದಾದಾಗ ಸ್ವಪಕ್ಷೀಯ ತಾಪಂ ಸದಸ್ಯ ದಿನೇಶ್ ವಿರೋಧ ವ್ಯಕ್ತಪಡಿಸಿ ನಾನೇ ಪೂಜೆ ಸಲ್ಲಿಸುವುದಾಗಿ ಹೇಳಿದಾಗ ಇವರಿಬ್ಬರ ನಡುವೆ ಮಾತಿನ ಚಕಮುಕಿ ನಡೆದಿದೆ. ಇನ್ನೇನೋ ಕೈಕೈ ಮಿಲಾಯಿಸುವ ಹಂತಕ್ಕೆ ಬರುವಷ್ಟರಲ್ಲಿ ಪಟ್ಟಣದ ಪೊಲೀಸ್ ಠಾಣೆಯ ಎಸ್ಐ ವೆಂಕಟೇಶ್ ಮಧ್ಯಪ್ರವೇಶಿಸಿ ತಾಪಂ ಸದಸ್ಯ ದಿನೇಶ್ರನ್ನು ಶಾಸಕರಿಂದ ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಬೇಕಾದರೇ ತಳ್ಳಾಟ ನಡೆದಿದೆ. ದಿನೇಶ್ರನ್ನು ದೂರವಿಟ್ಟು ಶಿಷ್ಠಚಾರದಂತೆ ನಾರಾಯಣಗೌಡ ಪೂಜೆ ನೆರವೇರಿಸಿದ ಮೇಲೆ ದಿನೇಶ್ ಪೂಜೆ ಸಲ್ಲಿಸಿದ್ದಾರೆ. ಇವರಿಬ್ಬರು ಸ್ವಪಕ್ಷಿಯರಾಗಿದ್ದು, ಚುನಾವಣೆ ಪೂರ್ವವೇ ಇವರಿಬ್ಬರ ನಡುವೆ ಬಿನ್ನಭೀಪ್ರಾಯವಿತ್ತು. ರಥದ ಚಾಲನೆಯ ಪೂಜೆ ವಿಚಾರವಾಗಿ ಇವರ ಭಿನ್ನಾಭಿಪ್ರಾಯಗಳು ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಸಿಕ್ಕಿತು.
.
ಕೆ.ಆರ್.ಪೇಟೆ.ತಾಲೂಕಿನ ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಬಿಲ್ಲೇನಹಳ್ಳಿ ಗ್ರಾಮದ ಶ್ರೀಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯಿತು.ಶಾಸಕ ನಾರಾಯಣಗೌಡ ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಗೋವುಗಳ ರಕ್ಷಕ ಗವಿರಂಗನಾಥಸ್ವಾಮಿಯ ರಥೋತ್ಸವವು ತಾಲೂಕಿನಲ್ಲಿ ನೂತನ ವರ್ಷದ ಮೊದಲ ರಥೋತ್ಸವಾಗಿದ್ದು, ರಾಜ್ಯಾದ್ಯಂತ ಭಕ್ತರು ಆಗಮಿಸಿದರು. ರಥೋತ್ಸವದ ಹಿನ್ನಲೆ ರಥವನ್ನು ವಿವಿಧ ಫಲಪುಷ್ಪಲಂಕಾರ, ತಳಿರು ತೋರಣಗಳಿಂದ ಅಲಂಕರಿಸಿಲಾಗಿತ್ತು. ಉತ್ಸವ ಮೂತರ್ಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಆರ್ಚಕರ ತಂಡ ವಿಷೇಷ ಪೂಜಾ ಪುನಾಸ್ಕರವನ್ನು ನೆರವೇರಿಸಿತು. ಶಾಸಕ ನಾರಾಯಣಗೌಡ ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು ದೇವಸ್ಥಾನದಿಂದ ಚಾಲನೆಗೊಂಡ ರಥೋತ್ಸವ ರಥ ಬೀದಿಯಲ್ಲಿ ಸಂಚರಿಸಿತು. ಸಹಸ್ರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ಹಣ್ಣು, ಜವನ ಎಸೆದು ದೇವರ ಕೃಪೆಗೆ ಪಾತ್ರರಾದರು. ಜಾನಪದ ಕಲಾತಂಡಗಳಾದ ವೀರಾಗಾಸೆ, ಕರವಾಳಿಯ ಮೂಲದ ಚಂಡಮದ್ದಾಳೆ, ಗಾರುಡಿ ಗೊಂಬೆ, ಡೊಳ್ಳು ಕಣಿತ, ಕೀಲು ಕುದುರೆ ಸೇರಿದಂತೆ ಹಲವು ಪ್ರಕಾರದ ಜಾನಪದ ಕುಣಿತ ರಥೋತ್ಸವಕ್ಕೆ ಮೆರಗು ನೀಡಿತು. ಪೋಷಕರು ತಮ್ಮ ಮಕ್ಕಳಿಗೆ ಕಿವಿಚುಚ್ಚಿಸುವ ಮತ್ತು ಕೇಶ ಮಂಡನೆ ಜತಗೆ ದೇವಸ್ಥಾನದ ಬಳಿ ನೈವೇದ್ಯ ಸಿದ್ಧಪಡಿಸಿ ದೇವರಿಗೆ ಸಮಪರ್ಿಸಿವುದು ಸೇರಿದಂತೆ ಹಲವು ರೀತಿಯ ಹರಕೆ ತೀರಿಸಿ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ಮೊರೆಯಿಟ್ಟರು. ರಥವು ಮರಳಿ ಸ್ವಸ್ಥಾನ ತಲುಪಿತು. ಆಗಮಿಕ ಭಕ್ತರಿಗೆ ಅನ್ನಸಂತರ್ಪಣೆ, ಮಜ್ಜಿಗೆ, ಪಾನಕ ವಿತರಣೆಯನ್ನು ದೇವಸ್ಥಾನದ ಸಮಿತಿಯಿಂದ ಮಾಡಲಾಯಿತು.
ದೇವಸ್ಥಾನದ ಸಮೀಪದಲ್ಲಿರುವ ಕೆರೆಗೆ ನೂತನವಾಗಿ ಐದು ಬೋಟಿಂಗ ವ್ಯವಸ್ಥೆ ಮಾಡಲಾಗಿದೆ. ಇದು ಭಕ್ತರನ್ನು ಆಕಷರ್ಿಸುತ್ತಿದ್ದು, ಆಗಮಿಸಿದ ಭಕ್ತರು ಬೋಟಿಂಗ್ನಲ್ಲಿ ಸಂಚರಿಸಿ ಮನೆರಂಜನೆ ಪಡೆಯುತ್ತಿದ್ದಾರೆ. ತಹಸೀಲ್ದಾರ್ ಶಿವಮೂತರ್ಿ, ಜಿಪಂ ಸದಸ್ಯ ಎಚ್.ಟಿ.ಮಂಜು, ತಾಪಂ ಉಪಾಧ್ಯಕ್ಷ ಜಾನಕೀರಾಮ್, ಸದಸ್ಯ ದಿನೇಶ್, ಮೋಹನ್, ಮನ್ಮುಲ್ ನಿದರ್ೇಶಕ ಡಾಲು ರವಿ ಸೇರಿದಂತೆ ಹಲವು ಮುಖಂಡರ ಪೂಜೆಯಲ್ಲಿ ಪಾಳ್ಗೊಂಡಿದ್ದರು.
ಕೆ.ಆರ್.ಪೇಟೆ ತಾಲೂಕಿನ ಕ್ಯಾತನಹಳ್ಳಿ ರಸ್ತೆಯ ತಿರುವಿನಲ್ಲಿ ಗೂಡ್ಸ್ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಪರಿಣಾಮ ಪ್ರಯಾಣಿಸುತ್ತಿದ್ದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ನಾಗಮಂಗಲ ಟೌನಿನ ಅಮ್ಜಾದ್ ಖಾನ್(43) ಮೃತಪಟ್ಟ ವ್ಯಕ್ತಿ.
ಅಮ್ಜಾದ್ ಸೇರಿದಂತೆ ಮೂವರು ಮಡಕೆ ಕ್ಯಾತನಹಳ್ಳಿ ಗ್ರಾಮದ ಮಾವಿನ ತೋಟಕ್ಕೆ ಔಷಧಿ ಸಿಂಪರಣೆ ಮಾಡಲು ಕ್ಯಾತನಹಳ್ಳಿ ಮುಖ್ಯರಸ್ತೆಯ ಕೆರೆಯ ಏರಿಯ ತಿರುವಿನಲ್ಲಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ ಹೊಡೆದ ಪರಿಣಾಮ ಪ್ರಯಾಣಿಸುತ್ತಿದ್ದ ಅಮ್ಜಾದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಚಾಲಕ ಸೇರಿದಂತೆ ಉಳಿದ ಮೂವರು ಪ್ರಯಾಣಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಮೃತ ದೇಹ ಪಟ್ಟಣದ ಸಕರ್ಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮ ಪಂಚಾಯತಿ ನೂತನ ಉಪಾದ್ಯಕ್ಷರಾಗಿ ಸೊಳ್ಳೇಪುರ ಜಯರಾಮು ಅವಿರೋಧವಾಗಿ ಆಯ್ಕೆಯಾದರು.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಗಣ್ಣ ರಾಜೀನಾಮೆಯಿಂದ ತೇರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಸ್ಪರ್ಧಿಸದ ಕಾರಣ ಸೊಳ್ಳೆಪುರ ಜಯರಾಮು ಅವಿರೋಧವಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅದ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್ ರವರು ಸೇರಿದಂತೆ ನೂರಾರು ಜನ ನೂತನ ಉಪಾದ್ಯಕ್ಷರಿಗೆ ಶುಭಕೋರಿದರು.ಈ ಸಂದರ್ಭದಲ್ಲಿ ಕಿಕ್ಕೇರಿ ಪಟ್ಟಣದ ಜನತೆ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಯಾದ ಇಓ ಚಂದ್ರಮೌಳಿ, ಗ್ರಾಮ ಪಂಚಾಯಿತಿ ಪಿ ಡಿ ಓ ಕೆಂಪೇಗೌಡ, ಅದ್ಯಕ್ಷರಾದ ಮಹದೇವಮ್ಮ, ನಾಗಣ್ಣ, ಚಂದ್ರಶೇಖರ್, ಮಣೀಶ್, ರಾಜೇಶ್ ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.