ಕೆ ಆರ್ ಪೇಟೆ ನ್ಯೂಸ್ ರಸ್ತೆ ಕಾಮಗಾರಿ

ಕೃಷ್ಣರಾಜಪೇಟೆ ಪುರಸಭೆಯ ವ್ಯಾಪ್ತಿಯ 9ನೇ ವಾಡರ್ಿನಲ್ಲಿ 15 ಲಕ್ಷರೂ ವೆಚ್ಚದ ಕಾಂಕ್ರೀಟ್ ರಸ್ತೆ

ಅಭಿವೃದ್ಧಿ ಹಾಗೂ ಬಾಕ್ಸ್ ಚರಂಡಿ ನಿಮರ್ಾಣ ಕಾಮಗಾರಿಗೆ ಶಾಸಕ ಡಾ.ನಾರಾಯಣಗೌಡ ಭೂಮಿ ಪೂಜೆಯನ್ನು ನೆರವೇರಿಸಿದರು.

ಕಳೆದ 20 ವರ್ಷಗಳಿಂದ ಪುರಸಭೆಯ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವ ಕಾಂಗ್ರೇಸ್ ಪಟ್ಟಣದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕೃಷ್ಣರಾಜಪೇಟೆ ಹೊಸಹೊಳಲು ಅವಳಿ ಪಟ್ಟಣಗಳ 23 ವಾಡರ್ುಗಳನ್ನೂ ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಪಟ್ಟಣದ ಜನತೆಯ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ನಾರಾಯಣಗೌಡ ಹೇಳಿದರು.
ಅವರು ಪುರಸಭೆಯ ವ್ಯಾಪ್ತಿಯ 9ನೇ ವಾಡರ್ಿನಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಹಾಗೂ ಬಾಕ್ಸ್ ಚರಂಡಿ ನಿಮರ್ಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ಶಾಸಕ ಡಾ.ನಾರಾಯಣಗೌಡ ಮಾತನಾಡಿದರು.

ಪಟ್ಟಣದ ತುಂಬೆಲ್ಲಾ ಕಸಕಡ್ಡಿಗಳು ತುಂಬಿ ಚೆಲ್ಲಾಡುತ್ತಿದ್ದು ಒಳ ಚರಂಡಿಯಿಂದ ಹೊರ ಬರುತ್ತಿರುವ ತ್ಯಾಜ್ಯ ನೀರು ನದಿಯ ನೀರಿನಂತೆ ಹರಿಯುತ್ತಿದೆ. ಗಬ್ಬು ವಾಸನೆಯು ರಸ್ತೆಯಲ್ಲಿ ಓಡಾಡುವ ಜನರಿಗೆ ರಾಚುತ್ತಿದೆ. ಸಾಂಕ್ರಾಮಿಕ ರೋಗ ರುಜಿನಗಳು ಹರಡುವ ಭೀತಿಯು ಎದುರಾಗಿದೆ. ಒಳಚರಂಡಿ ಯೋಜನೆಯ ಕಾಮಗಾರಿಯು ಸಂಪೂರ್ಣಗೊಳ್ಳದಿದ್ದರೂ ಪಟ್ಟಣದ ಪ್ರಭಾವಿ ನಾಯಕರು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ವಾಣಿಜ್ಯ ಸಂಕೀರ್ಣಗಳು, ಸಮುಧಾಯ ಭವನಗಳು, ಹೋಟೆಲ್ಗಳು ಹಾಗೂ ವಿದ್ಯಾಥರ್ಿ ನಿಲಯಗಳಿಂದ ಹೊರಬರುವ ತ್ಯಾಜ್ಯ ನೀರು ಹಾಗೂ ಶೌಚಾಲಯಗಳ ಸಂಪರ್ಕವನ್ನು ಅಕ್ರಮವಾಗಿ ನೀಡಿರುವುದರಿಂದ ಪಟ್ಟಣವು ಗಬ್ಬೆದ್ದು ನಾರುವ ವಾತಾವರಣವು ನಿಮರ್ಾಣವಾಗಿದೆ. ಮೀಸಲಾತಿಯ ಗೊಂದಲವನ್ನು ಮೈಮೇಲೆ ಎಳೆದುಕೊಂಡಿರುವ ಕಾಂಗ್ರೇಸ್ ಪಕ್ಷವು ಕಳೆದ ಒಂದೂವರೆ ವರ್ಷದಿಂದ ಅಧ್ಯಕ್ಷ-ಉಪಾಧ್ಯಕ್ಷರು ಇಲ್ಲದೇ ಪುರಸಭೆಯ ಆಡಳಿತವು ಹಳ್ಳ ಹಿಡಿಯುವಂತೆ ಮಾಡಿದ್ದಾರೆ ಎಂದು ಶಾಸಕ ನಾರಾಯಣಗೌಡ ಗಂಭೀರ ಆರೋಪ ಮಾಡಿದರು.

ಕೃಷ್ಣರಾಜಪೇಟೆ ಪಟ್ಟಣದಲ್ಲಿ ಒಳ ಚರಂಡಿ ಯೋಜನೆಯು ಆರಂಭವಾಗಿ 10ವರ್ಷಗಳು ಕಳೆಯುತ್ತಿದೆ. ವತರ್ೂರು ಪ್ರಕಾಶ್ ಅವರು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದಾಗ ಚಾಲನೆ ನೀಡಿದ ಈ ಕಾಮಗಾರಿಯು ಅಂದು 12ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅನುಷ್ಠಾನಗೊಂಡಿತ್ತು. ಶುದ್ಧೀಖರಣ ಘಟಕ, ಸಂಸ್ಕರಣಾ ಘಟಕಗಳ ನಿಮರ್ಾಣಕ್ಕೆ ಅಗತ್ಯವಾದ ಭೂಮಿಯನ್ನು ನಿಗಧಿಪಡಿಸದೇ ಅವೈಜ್ಞಾನಿಕವಾಗಿ ಆರಂಭವಾದ ಒಳಚರಂಡಿ ಯೋಜನೆಯ ಕಾಮಗಾರಿಯನ್ನು ಶತಾಯಗತಾಯ ಮುಗಿಸಲು ಸಂಕಲ್ಪ ಮಾಡಿರುವ ನಾನು ಒಳಚರಂಡಿ ಯೋಜನೆಯ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ಹೆಚ್ಚುವರಿಯಾಗಿ 14ಕೋಟಿ ಹಣವನ್ನು ಮಂಜೂರು ಮಾಡಿಸಿದ್ದೇನೆ ಸಧ್ಯದಲ್ಲಿಯೇ ಕಾಮಗಾರಿಯು ಆರಂಭವಾಗಲಿದೆ ಎಂದು ತಿಳಿಸಿದ ಶಾಸಕರು ಕತ್ತರಘಟ್ಟ ಬಳಿಯ ನಿರ್ಜನ ಅರಣ್ಯಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ನಿಮರ್ಾಣಕ್ಕೆ ಭೂಮಿಯನ್ನು ಮಂಜೂರು ಮಾಡಿಸಿಕೊಟ್ಟಿದ್ದೇನೆ. ಮೈಸೂರು ರಸ್ತೆಯಲ್ಲಿ ನಿಮರ್ಾಣವಾಗಿರುವ ಜಾಕ್ವೆಲ್ ಘಟಕದಿಂದ ಹೊಸಹೊಳಲು ಜಾಕ್ವೆಲ್ಗೆ ಎರಡು ಕಿ.ಮೀ ಪೈಪ್ಲೈನ್ ಕಾಮಗಾರಿ ಹಾಗೂ ಹೊಸಹೊಳಲಿನಿಂದ ಕತ್ರಘಟ್ಟದ ಬಳಿಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪೈಪ್ ಲೈನ್ ನಿಮರ್ಾಣ ಕಾಮಗಾರಿಯು ತುತರ್ಾಗಿ ಆರಂಭವಾಗಬೇಕಾಗಿದೆ. ಪುರಸಭೆಯ ಮುಖ್ಯಾಧಿಕಾರಿಗಳು ಸೇರಿದಂತೆ ಆಡಳಿತ ಮಂಡಳಿ7ಯ ಸದಸ್ಯರು ಪಟ್ಟಣದ ಅಭಿವೃದ್ಧಿಯ ವಿಚಾರದಲ್ಲಿ ಬದ್ಧತೆಯನ್ನು ಹೊಂದಿಲ್ಲದಿರುವುದೇ ಇಷ್ಟಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಆದ್ದರಿಂದ ಈ ಭಾರಿಯ ಪುರಸಭೆಯ ಚುನಾವಣೆಯಲ್ಲಿ ಪಟ್ಟಣದ ಜನರು ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಪಟ್ಟಣದ ಸಮಗ್ರವಾದ ಅಭಿವೃದ್ಧಿಗೆ ಒತ್ತು ನೀಡಬೇಕು. ಕಳೆದ 20 ವರ್ಷಗಳಿಂದ ಪಟ್ಟಣದ ಪುರಸಭೆಯಲ್ಲಿ ಭ್ರಷ್ಠಾಚಾರ ಹಾಗೂ ದುರಾಢಳಿತ ನಡೆಸುತ್ತಿರುವ ಕಾಂಗ್ರೇಸ್ ಆಡಳಿತ ಮಂಡಳಿಯನ್ನು ಬದಲಾಯಿಸುವ ಧೃಡ ನಿಧರ್ಾರವನ್ನು ಪಟ್ಟಣದ ಜನತೆ ಮಾಡಬೇಕು ಎಂದು ಶಾಸಕ ನಾರಾಯಣಗೌಡ ಮನವಿ ಮಾಡಿದರು.

ಪಟ್ಟಣದ ವಿವಿಧ ಬಡಾವಣೆಗಳ ರಸ್ತೆಯ ಅಭಿವೃದ್ಧಿ ಜಯನಗರ ಮತ್ತು ಹೇಮಾವತಿ ಬಡಾವಣೆಯ ಪಾಕರ್ುಗಳ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥಿತ ಪೂರೈಕೆ, ಪಟ್ಟಣದ ಎಲ್ಲಾ 23 ವಾಡರ್ುಗಳ ಸ್ವಚ್ಛತೆ ಹಾಗೂ ಬೀದಿ ದೀಪಗಳ ವ್ಯವಸ್ಥಿತ ನಿರ್ವಹಣೆ ಹಾಗೂ ಪಟ್ಟಣದಲ್ಲಿ ವಾಸ ಮಾಡುತ್ತಿರುವ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ 1500 ನಿವೇಶನಗಳನ್ನು ವಿತರಣೆ ಮಾಡಲು ಕಾರ್ಯಕ್ರಮವನ್ನು ರೂಪಿಸಿದ್ದೇನೆ ಎಂದು ವಿವರಿಸಿದ ಶಾಸಕರು ನಾನು ಹಣ ಸಂಪಾದನೆ ಮಾಡಲು ರಾಜಕಾರಣ ಕ್ಷೇತ್ರಕ್ಕೆ ಬಂದಿಲ್ಲ, ತಾಲೂಕಿನ ಸಮಗ್ರವಾದ ಅಭಿವೃದ್ಧಿಯು ನನ್ನ ಮುಖ್ಯವಾದ ಗುರಿಯಾಗಿದೆ. ಯೋಗ್ಯ ಹಾಗೂ ಜನಪರವಾದ ಕಾಳಜಿಯನ್ನು ಹೊಂದಿರುವ ಜನಪ್ರತಿನಿಧಿಗಳನ್ನು ಪುರಸಭೆಯ ಅಖಾಡಕ್ಕೆ ಸ್ಪಧರ್ಿಗಳನ್ನು ನಿಲ್ಲಿಸಿ ಈ ಭಾರಿ ಜೆಡಿಎಸ್ ಪುರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡುವುದು ನನ್ನ ಮುಂದಿನ ಹೋರಾಟವಾಗಿದೆ. ಪಟ್ಟಣದ ಜನತೆ ಹೇಮಾವತಿ ಬಡಾವಣೆಯ ನಿವೇಶನಗಳ ಸಮಸ್ಯೆಯ ನಿವಾರಣೆ. ಲೋಕಾಯುಕ್ತದಿಂದ ಕಡತಗಳನ್ನು ತರಿಸಿ ನಿವೇಶನಗಳ ಸಮಸ್ಯೆಗಳಗೆ ಶಾಶ್ವತ ಪರಿಹಾರ ಕಂಡು ಹಿಡಿದು ಹೇಮಾವತಿ ಬಡಾವಣೆಯನ್ನು ಅಭಿವೃದ್ಧಿ ಪಡಿಸುವುದು ಸೇರಿದಂತೆ ದಕ್ಷ ಆಡಳಿತಕ್ಕಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಆಶೀರ್ವಧಿಸಿ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಜೆಡಿಎಸ್ ಪಕ್ಷದ ಸದಸ್ಯರಾದ ಕೆ.ಆರ್.ಹೇಮಂತ್ಕುಮಾರ್, ಕೆ.ಎಸ್.ಸಂತೋಷ್, ದಿನೇಶ್, ಪದ್ಮಾವತಿ ಪುಟ್ಟಸ್ವಾಮಿ, ಕೋಳಿ ನಾಗರಾಜು, ಹೆಚ್.ಆರ್.ಲೋಕೇಶ್, ಪಿಎಲ್ಡಿ ಬ್ಯಾಂಕಿನ ಮಾಜಿಅಧ್ಯಕ್ಷ ಕೆ.ಎಸ್.ರಾಮೇಗೌಡ, ಪುರಸಭೆಯ ಮಾಜಿಸದಸ್ಯ ಕೆ.ಆರ್.ನೀಲಕಂಠ, ಮುಖಂಡರಾದ ಹನುಮಂತರಾಜ್, ಅಶ್ರಫ್ಪಾಶ, ಚಂದ್ರಕಲಾ, ನಿಂಗಮ್ಮ, ಹೊಸಹೊಳಲು ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

Last modified on 19/07/2018

Share this article

About Author

Super User
Leave a comment

Write your comments

Visitors Counter

228469
Today
Yesterday
This Week
This Month
Last Month
All days
38
237
1223
4870
6704
228469

Your IP: 3.149.249.127
2024-05-17 07:42

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles