8ಲಕ್ಷಟನ್ ಕಬ್ಬನ್ನು ಅರೆಯುವ ಗುರಿ ಹೊಂದಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆ..

ತಾಲ್ಲೂಕಿನ ಕಿಕ್ಕೇರಿ ಸಮೀಪದ ಕೋರಮಂಡಲ್ ಸಕ್ಕರೆ ಕಾರ್ಖಾನೆಯು 2018-19ರ ಕಬ್ಬು ಹಂಗಾಮಿನಲ್ಲಿ 8ಲಕ್ಷ ಟನ್ ಕಬ್ಬನ್ನು ಅರೆಯುವ ಗುರಿಯನ್ನು ಹೊಂದಿದೆ.

ತಾಲೂಕಿನ ಕಬ್ಬು ಬೆಳೆಗಾರರು ಎಂದಿನಂತೆ ಸಕ್ಕರೆ ಕಾರ್ಖಾನೆಗೆ ನಿಯಮಿತವಾಗಿ ಕಬ್ಬು ಸರಬರಾಜು ಮಾಡುವ ಮೂಲಕ ನಿಮ್ಮ ಕಾರ್ಖಾನೆಯನ್ನು ಮುನ್ನಡೆಸಬೇಕು ಎಂದು ಕಾರ್ಖಾನೆಯ ಉಪಾಧ್ಯಕ್ಷ ರವಿರೆಡ್ಡಿ ಮನವಿ ಮಾಡಿದರು.

ಅವರು ಶುಕ್ರವಾರ ತಾಲೂಕಿನ ಮಾಕವಳ್ಳಿ ಗ್ರಾಮದ ಹೊರವಲಯಲ್ಲಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿವಿಶೇಷ ಚಂಡಿಕಾಹೋಮವನ್ನು ನೆರವೇರಿಸಿ ವೇಬ್ರಿಡ್ಜ್, ಕಬ್ಬು ಅರೆಯುವ ಯಂತ್ರ, ಎಲೆಕ್ಟ್ರಾನಿಕ್ ತೂಕದ ಯಂತ್ರ, ಕ್ರೇನ್‍ಗಳು ಸೇರಿದಂತೆ ವಿವಿಧ ಯಂತ್ರೋಪಕರಣಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಸಕ್ತ ಕಬ್ಬು ಹಂಗಾಮಿನ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. 

ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಕಳೆದ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುವ ಎಲ್ಲಾ ರೈತರ ಕಬ್ಬಿನ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿ ಮಾಡಿರುವ ದಕ್ಷಿಣ ಭಾರತದ ಏಕೈಕ ಸಕ್ಕರೆ ಕಾರ್ಖಾನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಬ್ಬು ಹಂಗಾಮಿನಲ್ಲಿ ಸಕ್ಕರೆಯ ದರವು ಕುಸಿತವಾಗಿದ್ದರೂ ಕಳೆದ ಸಾಲು ನೀಡಿರುವಂತೆ ಪ್ರಸಕ್ತ ಸಾಲಿನಲ್ಲಿ ಪ್ರತೀ ಟನ್ ಕಬ್ಬಿಗೆ 2550/= ರೂ ದರವನ್ನು ಕಬ್ಬು ಬೆಳೆಗಾರರಿಗೆ ನೀಡಲು ಕಾರ್ಖಾನೆಯ ಆಡಳಿತ ಮಂಡಳಿಯು ಬದ್ಧವಿದೆ. ರಾಜ್ಯ ಸರ್ಕಾರ ಹಾಗೂ ಭಾರತ ಸರ್ಕಾರದ ಸಕ್ಕರೆ ಮಂತ್ರಾಲಯವು ಕಬ್ಬಿನ ದರವನ್ನು ಹೆಚ್ಚಿಸಿದರೆ ಇಲ್ಲವೇ ರಾಜ್ಯ ಸರ್ಕಾರವು ನಿಗಧಿಪಡಿಸುವ ಕಬ್ಬಿನ ಬಾಕಿ ಹಣವನ್ನು ನೀಡಲು ಕಾರ್ಖಾನೆಯು ಬದ್ಧವಾಗಿದೆ ಎಂದು ವಿವರಿಸಿದ ರವಿರೆಡ್ಡಿ ಕಬ್ಬು ಬೆಳೆಗಾರರ ಹಿತದಲ್ಲಿ ಕಾರ್ಖಾನೆಯ ಅಭಿವೃದ್ಧಿಯು ಅಡಗಿದೆ ಎಂಬ ಸತ್ಯವನ್ನು ಅರಿತಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು ಸಂಪೂರ್ಣವಾಗಿ ರೈತರ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿಸಿದೆ. ಪ್ರಸಕ್ತ ಸಾಲಿನಲ್ಲಿಯೂ ಮಿಗಧಿತ ಅವಧಿಯೊಳಗೆ ಕಬ್ಬಿನ ಹಣವನ್ನು ಪಾವತಿ ಮಾಡಲು ಕಾರ್ಖಾನೆಯು ಬದ್ಧವಾಗಿದೆ ಎಂದು ಹೇಳಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಲತಾಮಂಜುನಾಥ, ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಗೌರವಾಧ್ಯಕ್ಷ ಕೆ.ಜೆ.ಅಣ್ಣಯ್ಯ, ಪ್ರಗತಿಪರ ಕಬ್ಬು ಬೆಳೆಗಾರರಾದ ಆಲೇನಹಳ್ಳಿ ಜಯರಾಂ, ಕೊಡಗಹಳ್ಳಿ ಜಯರಾಮೇಗೌಡ, ವಡಕಹಳ್ಳಿ ಕೃಷ್ಣೇಗೌಡ, ಚಿಕ್ಕತರಹಳ್ಳಿ ರಾಮಕೃಷ್ಣೇಗೌಡ, ಕಾಯಿಮಂಜೇಗೌಡ, ಅಕ್ಕಿಹೆಬ್ಬಾಳು ಎ.ಜೆ.ದಿವಾಕರ್, ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗದ ಹಿರಿಯ ಪ್ರಧಾನ ಸಹಾಯಕ ವ್ಯವಸ್ಥಾಪಕ ಕೆ.ಬಾಬೂರಾಜ್, ಎಜಿಎಂ ಗಳಾದ ಧರ್ಮಲಿಂಗಂ, ಸಂದೀಪ್ ಕೋಟ್, ಮೇಯನ್, ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ನಾಗೇಶ್, ಕಬ್ಬು ವಿಭಾಗದ ದತ್ತಾತ್ರೇಯ, ದೇವೇಗೌಡ, ಪುಟ್ಟೇಗೌಡ ಮತ್ತಿತರರು ಭಾಗವಹಿಸಿದ್ದರು. 

ಶೃಂಗೇರಿಯಿಂದ ಆಗಮಿಸಿದ್ದ ವೇದಬ್ರಹ್ಮ ಸುಬ್ರಹ್ಮಣ್ಯಸ್ವಾಮಿ ಕಲ್ಕುರ ಅವರ ನೇತೃತ್ವದ ಆಗಮಿಕರ ತಂಡವು ವಿಶೇಷ ಪೂಜಾ ವಿಧಿವಿಧಾನಗಳಲ್ಲಿ ಭಾಗಿಯಾಗಿತ್ತು. ಕಾರ್ಖಾನೆಯಲ್ಲಿ ಹಬ್ಬದ ವಾತಾವರಣವು ನೆಲೆಸಿದ್ದರೆ ರೈತರು ಹಾಗೂ ಕಬ್ಬು ಬೆಳೆಗಾರರ ಮೊಗದಲ್ಲಿ ಮಂದಹಾಸವು ಮಿನುಗುತ್ತಿತ್ತು

Last modified on 19/07/2018

Share this article

About Author

Super User
Leave a comment

Write your comments

Visitors Counter

228490
Today
Yesterday
This Week
This Month
Last Month
All days
59
237
1244
4891
6704
228490

Your IP: 18.221.229.42
2024-05-17 09:10

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles