ಶ್ರವಣಬೆಳಗೊಳ ಹೆಸರಿಗೆ ಮಾತ್ರವೇ ಪ್ಲಾಸ್ಟಿಕ್ ಮುಕ್ತ ಎಲ್ಲಿ ನೊಡಿದ್ದರು ಬರಿ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯ

ಹೆಸರಿಗೆ ಮಾತ್ರವೇ ಪ್ಲಾಸ್ಟಿಕ್ ಮುಕ್ತ ಎಲ್ಲಿ ನೊಡಿದ್ದರು ಬರಿ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯ .

ಹಾಸನ : ಹಾಸನ ಜಿಲ್ಲೆಯ ವಿಶ್ವ ಪ್ರಸಿದ್ಧ ಪ್ರವಾಸತಾಣ ಶ್ರವಣಬೆಳಗೊಳ ,ಇಲ್ಲಿ ಗೆ ದಿನನಿತ್ಯ ಬಾಹುಬಲಿ ಮೂರ್ತಿ ನೋಡಲು ಸಾವಿರಾರು ಪ್ರವಾಸಿಗಳು ಬರುತ್ತಾರೆ .
ಅದರೆ ಇಲ್ಲಿ ಯಾವುದೇ ಸ್ವಚ್ಛತೆ ಇಲ್ಲಾ .ಇಲ್ಲಿಗೆ ಬೇರೆ ಬೇರೆ ದೇಶಗಳಿಂದ ಪ್ರವಾಸಿಗಳು ಬರುತ್ತಾರೆ ಇವರ ಮುಂದೆ ನಮ್ಮ ದೇಶದ ಸ್ವಚ್ಛತೆ ಮಾನ ಕಳೆಯುತ್ತಾರೆ. 

ವಿಂದ್ಯಗಿರಿ ಪಕ್ಕದಲ್ಲಿ ಇರುವ ರಸ್ತೆ ಇದಾಗಿದ್ದು, ಸಂತೆಮೈದಾನಕ್ಕೆ ಸಂಪರ್ಕ ಕಲ್ಪಿಸುತ್ತದೆ ಈ ರಸ್ತೆಯಲ್ಲಿ ಹೊಗಬೇಕಾದರೆ ಮೂಗು ಮುಚ್ಚಿ ಹೋಗುವ ಪರಿಸ್ಥಿತಿ ಇದೆ.
ವಾರದಲ್ಲಿ ಮಂಗಳವಾರ ದಂದು ಇಲ್ಲಿ ಸಂತೆನೆಡೆಯುತ್ತದೆ ಸಂತೆಗೆ ಹೋಗಲು ಇರುವ ರಸ್ತೆ ಇದಾಗಿದ್ದು ಇದು ಸಂಪೂರ್ಣ ಕೊಳಚೆ ಗುಂಡಿಯಾಗಿದೆ .ಹೊಟೇಲ್ ಗಳ ತ್ಯಾಜ್ಯ ಪ್ಲಾಸ್ಟಿಕ್ ಕಾಲಿಬಾಟಲಿಗಳನ್ನು ಇಲ್ಲೆ ಬಿಸಾಡಿ ಕೊಚ್ಚೆ ಗುಂಡಿಮಾಡಿದ್ದರೆ.

ಈ ರಸ್ತೆ ಯ ಪಕ್ಕದಲ್ಲಿ ಜೈನ ಮುನಿಗಳ ಸಮಾಧಿ ಇದ್ದು ಇದರ ಬಳಿ ಬರುವ ಜೈನ ಮುನಿಗಳು ಸಹ ಮೂಗು ಮುಚ್ಚಿ ಬರುವ ಸ್ಥಿತಿ ಇದೆ.ಪಕ್ಕದಲ್ಲಿ ಅಂಬಿಕಾ ಶಾಲೆ ಇದ್ದು ಶಾಲ ಮಕ್ಕಳು ಸಹ ಈ ಕೊಳಚೆ ವಾಸನೆಯಲ್ಲೆ ಪಾಠ ಕೇಳುವ ಪರಿಸ್ಥಿತಿ ಇದೆ.ಇಲ್ಲಿ ಪಟ್ಟಣ ಪಂಚಾಯಿತಿ ಇದ್ದು ಇವರು ನಗರದ ತ್ಯಾಜ್ಯಗಳನ್ನು ಸಹ ಈ ಪ್ರದೇಶದಲ್ಲಿ ಸುರಿಯುತ್ತಾರೆ ಮತ್ತು ಯಾವುದೇ ಸ್ವಚ್ಛತೆ ಕಾರ್ಯ ಮಾಡುವುದಿಲ್ಲಾ ಎಲ್ಲಾ ಅಧಿಕಾರಿಗಳು ಹೆಸರಿಗೆ ಮಾತ್ರವೇ ಸ್ವಚ್ಛತೆ ಸ್ವಚ್ಛತೆ ಎಂಬ ಪಾಠಮಾಡತ್ತರೆ ಅದರೆ ಸ್ವಚ್ಛತೆ ಬಗ್ಗೆ ಸ್ವಲ್ಪವೂ ಗಮನ ಕೊಡುವುದಿಲ್ಲ.ಕೂಡಲೆ ಈ ರಸ್ತೆ ಯಲ್ಲಿ ಹರಡಿರುವ ತ್ಯಾಜ್ಯವನ್ನು ಬೇರೆ ಕಡೆಗೆ ಹಾಕಬೇಕು ಎಂದು ಸ್ಥಳೀಯ ವಾಸಿಗಳು ಅಧಿಕಾರಿಗಳಿಗೆ ಮನವಿಮಾಡಿದ್ದರೆ.

ಇವಾಗಲಾದರು ಸ್ವಚ್ಛತೆ ಮಾಡತ್ತಾರ ಕಾದು ನೋಡಬೇಕಿದೆ‌.

ದಯವಿಟ್ಟು ಈ ಜಗತ್ತು ಪ್ರಸಿದ್ದ ಪ್ರವಾಸಿ ತಾಣವನ್ನು ಸ್ವಚ್ಛ ಹಾಗು ಪ್ಲಾಸ್ಟಿಕ್ ಮುಕ್ತ ಮಾಡಿ. ನಮ್ಮ ದೇಶದ ಮಾನ ಉಳಿಸಿ ಇದು ನಮ್ಮ ಸುದ್ದಿಜಾಲ ದ ಕಳಕಳಿಯ ಮನವಿ.

Share this article

About Author

Madhu
Leave a comment

Write your comments

Visitors Counter

224168
Today
Yesterday
This Week
This Month
Last Month
All days
187
382
1513
569
6704
224168

Your IP: 18.221.187.121
2024-05-02 18:00

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles