. ಕೃಷ್ಣರಾಜಪೇಟೆ ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ಕುಮಾರ ಅವರ ಪುತ್ರ ಪ್ರಸನ್ನ(26)ಸಾಲದ ಬಾಧೆಯನ್ನು ತಾಳಲಾರದೆ ಕೆ.ಆರ್.ಪೇಟೆ ಪಟ್ಟಣದ ಎಪಿಎಂಸಿ ಆವರಣದ ಬಯಲಿನಲ್ಲಿ ನಿನ್ನೆ ತಡರಾತ್ರಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ... ಇಂದು ಬೆಳಿಗ್ಗೆ ಎಳನೀರು ವ್ಯಾಪಾರಿಗಳು ಎಪಿಎಂಸಿ ಕಾಂಪೌಂಡ್ ಒಳಗೆ ಮೃತ ದೇಹವನ್ನು ಗಮನಿಸಿ ಪೋಲಿಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮೃತ ದೇಹವನ್ನು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಎರಡು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಪ್ರಸನ್ನ ಕಬ್ಬನ್ನು ಬೆಳೆದಿದ್ದರು. ಮಾಂಬಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಎರಡು ಲಕ್ಷರೂ ಸಾಲ ಸೇರಿದಂತೆ ಎರಡು ಲಕ್ಷರೂ ಕೈ ಸಾಲವನ್ನು ಮಾಡಿದ್ದರು ಎನ್ನಲಾಗಿದೆ...ಸಾಲಗಾರರ ಕಾಟವು ಹೆಚ್ಚಾದ ಹಿನ್ನೆಲೆಯಲ್ಲಿ ಮನನೊಂದಿದ್ದ ಪ್ರಸನ್ನ ಕಷ್ಠಪಟ್ಟು ಬೆಳೆದಿದ್ದ ಕಬ್ಬಿನ ಬೆಳೆಯು ಒಣಗುತ್ತಿರುವ ಹಿನ್ನೆಲೆಯಲ್ಲಿ ಮನನೊಂದ ಪ್ರಸನ್ನ ವಿಷಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...ತಹಶೀಲ್ದಾರ್ ಎಂ.ಶಿವಮೂರ್ತಿ ಮತ್ತು ಮಾಜಿಶಾಸಕ ಡಾ.ಕೆ.ಬಿ.ಚಂದ್ರಶೇಖರ್ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಮೃತ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದರು...