ಕೆ.ಆರ್.ಪೇಟೆ ಪಟ್ಟಣದಲ್ಲಿ ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ

ಕೆ.ಆರ್.ಪೇಟೆ,ಜೂ.3: ಕೆ.ಆರ್.ಪೇಟೆ ಪಟ್ಟಣದಲ್ಲಿ ತಾಲೂಕು ಆಡಳಿತವು ಇಂದು ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ

ಪಟ್ಟಣದ ಮಿನಿವಿಧಾನಸೌಧದ ಹೊರ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ನಾರಾಯಣಗೌಡ ಮಾತನಾಡಿ ನಾಡಪ್ರಭು ಕೆಂಪೇಗೌಡರ ಅವರನ್ನು ಕುರಿತು ಮಾಡನಾಡಿ 15 ನೇ ಶತಮಾನದಲ್ಲಿಯೇ ನಾಡಿಗೆ ಬೃಹತ ನಗರ ನಿಮರ್ಾಣದ ಕನಸು ಕಂಡಿದ ಮಹಾ ವ್ಯಕ್ತಿ ಕೆಂಪೇಗೌಡ ಎಂದು ತಿಳಿಸಿದರು. ಅಂದಿನ ದಿನಗಳಲ್ಲಿಯೇ ಎಲ್ಲಾ ಕುಲ, ಧರ್ಮ, ಜಾತಿಯವರು ಒಂದೇ ಎಂದು ಜಾತ್ಯಾತೀತ ಸೈದ್ಧಾಂತಿಕ ನೆಲಗಟ್ಟಿನ ಬೀಜವನ್ನು ಸಮಾಜಕ್ಕೆ ಬಿತ್ತಿ ಪೋಷಣೆ ಮಾಡಿದ ಮೇರು ವ್ಯಕ್ತಿ ಕೆಂಪೇಗೌಡ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.

ನಾಡಪ್ರಭು ಕೆಂಪೇಗೌಡರು ಬೆಂಗಳೂರು ಮಹಾನಗರದ ನಿಮರ್ಾತೃ ನಾಡಪ್ರಭು ಕೆಂಪೇಗೌಡರು ಕೇವಲ ಒಂದು ಜಾತಿಗೆ ಸೇರಿದ ಮಹಾನುಭಾವರಲ್ಲ, ಅವರು ಇಡೀ ಸಮಾಜದ ಸ್ವತ್ತು, ನಾಡಿನ ಉದ್ಧಾರಕ್ಕಾಗಿ ಹಲವಾರು ಜನಪರವಾದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ ಕೆರೆ ಕಟ್ಟೆಗಳನ್ನು ನಿಮರ್ಿಸಿದ ಕೆಂಪೇಗೌಡರ ಜಯಂತ್ಯೋತ್ಸವ ಸಮಾರಂಭವನ್ನು ಎಲ್ಲರೂ ಒಂದಾಗಿ ಹಬ್ಬದಂತೆ ಆಚರಿಸಬೇಕು ಎಂದು ಶಾಸಕರು ಹೇಳಿದರು.

ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಪದ್ಮೇಶ್ ನಾಡಪ್ರಭು ಕೆಂಪೇಗೌಡರನ್ನು ಕುರಿತು ಪ್ರಧಾನ ಉಪನ್ಯಾಸ ನೀಡಿ ಕೆಂಪೇಗೌಡರ ದೂರದೃಷ್ಠಿತ್ವದಿಂದ ಇಂದು ಬೆಂಗಳೂರು ವಿಶ್ವದಾದ್ಯಂತ ಪ್ರಸಿದ್ದಯಾಗಲು ಸಾಧ್ಯವಾಗಿದೆ. ಹುಟ್ಟಿನಲ್ಲಿ ಒಕ್ಕಲಿಗರಾದರೂ ಸಹ ಎಲ್ಲಾ ಜನಾಂಗದವರಿಗೂ ಪ್ರತ್ಯೇಕ ವೃತ್ತಿಯಾಧಾರಿತ ಪೇಟೆಗಳನ್ನು ನಿಮರ್ಿಸಿಕೊಡುವ ಮೂಲಕ ಅವರ ವೃತ್ತಿಯ ಅಭಿವೃದ್ಧಿಗೆ ಬೆಂಬಲ ನೀಡುತ್ತಿದ್ದರು. ಇದಕ್ಕೆ ಉದಾಹರಣೆಯಾಗಿ ಬೆಂಗಳೂರಿನಲ್ಲಿ ಇಂದಿಗೂ ಬಳೇಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಬಿನ್ನಿಪೇಟೆ, ಗಾಣಿಗರಪೇಟೆ, ಕಬ್ಬನ್ಪೇಟೆ ಮತ್ತಿತರರ ಪೇಟೆಗಳೇ ಸಾಕ್ಷಿಯಾಗಿವೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀಸ್ವಾಮಿನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಹಶೀಲ್ದಾರ್ ಗುರುಸಿದ್ಧಯ್ಯ ಹಿರೇಮಠ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಾಯಿತ್ರಿರೇವಣ್ಣ, ಸದಸ್ಯರಾದ ಬಿ.ಎಲ್.ದೇವರಾಜು, ಹೆಚ್.ಟಿ.ಮಂಜು, ರಾಮದಾಸ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ವಿಜಯಕುಮಾರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ತಾಲೂಕು ಕನರ್ಾಟಕ ರಕ್ಷಣಾ ವೇಧಿಕೆಯ ಅಧ್ಯಕ್ಷ ಹೊನ್ನೇನಹಳ್ಳಿ ಡಿ.ಎಸ್.ವೇಣು, ಉಪಾಧ್ಯಕ್ಷ ಕೆ.ಟಿ.ಶ್ರೀನಿವಾಸ್, ಕಾರ್ಯದಶರ್ಿ ಟೆಂಪೋ ಶ್ರೀನಿವಾಸ್, ಜಯಕನರ್ಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಕೆ.ಎಸ್.ಕುಮಾರ್, ಉಪಾಧ್ಯಕ್ಷ ಹೊನ್ನೇನಹಳ್ಳಿ ಎಸ್.ರವಿ ಸೇರಿದಂತೆ ತಾಲೂಕಿನ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕೆಂಪೇಗೌಡರ ಆಳೆತ್ತರದ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಜಾನಪದ ಕಲಾತಂಡಗಳ ಮೂಲಕ ವೇದಿಕೆಯವರೆಗೆ ಅದ್ದೂರಿ ಮೆರವಣಿಗೆಯಲ್ಲಿ ತರಲಾಯಿತು. ಡೊಳ್ಳುಕುಣಿತ ಮತ್ತು ತಮಟೆಯ ಸದ್ದಿಗೆ ಶಾಸಕ ನಾರಾಯಣಗೌಡ ಮತ್ತು ಜನಪ್ರತಿನಿಧಿಗಳು ಹೆಜ್ಜೆ ಹಾಕಿ ನೃತ್ಯ ಮಾಡಿದ್ದು ವಿಶೇಷವಾಗಿತ್ತು. ಭಾವಚಿತ್ರವನ್ನು ತೆರೆದ ವಾಹನದಲ್ಲಿ ಜನಪದ ಕಲಾತಂಡಗಳ ಅದ್ದೂರಿ ಮೆರವಣಿಗೆಯಲ್ಲಿ ಕೊಂಡೊಯ್ಯುವ ಸಂದರ್ಭದಲ್ಲಿ ಮಾರ್ಗದುದ್ದಕ್ಕೂ ಡೊಳ್ಳು ಮತ್ತು ತಮಟೆಯ ಸದ್ದಿಗೆ ಲಯಬದ್ಧವಾದ ತಾಳ ಹಾಕಿ ಅಭಿಮಾನಿಗಳೊಂದಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು.

Last modified on 19/07/2018

Share this article

About Author

Super User
Leave a comment

Write your comments

Visitors Counter

289791
Today
Yesterday
This Week
This Month
Last Month
All days
47
166
1323
9233
3051
289791

Your IP: 216.73.216.233
2025-05-22 04:18

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles