ರಾಜ್ಯಸುದ್ದಿ

ಹಾಸನದ ದಶಕದ ರಾಜಕೀಯ ದ್ವೇಷ ಕೊನೆಯಾಗುತ್ತಾ.!  ರೇವಣ್ಣ ವಿರುದ್ಧ ಕಾಂಗ್ರೆಸ್ಸಿಗರ ‘ಆಣೆ ಅಸ್ತ್ರ.

ಹಾಸನ : ಹಾಸನದ ರಾಜಕಾರಣದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಾಜಿ ಸಂಧಾನದ ಮಾತುಕತೆಗೆ ಕುಳಿತುಕೊಳ್ಳಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಸಂಧಾನ ನಡೆಯುತ್ತಿದ್ದು, ಹಳೆಯ ದ್ವೇಷ ಮರೆತು ಜೆಡಿಎಸ್ ಬೆಂಬಲಿಸುವಂತೆ ಮನವೊಲಿಸಲು ಮುಂದಾಗಿದ್ದಾರೆ.

ಸಚಿವ ಹೆಚ್.ಡಿ.ರೇವಣ್ಣರ ಸಮ್ಮುಖದಲ್ಲಿ ಜೆಡಿಎಸ್ ನಾಯಕರಿಂದ ಕಾಂಗ್ರೆಸ್ ಮುಖಂಡರುಗಳಿಗೆ, ಕಾರ್ಯಕರ್ತರಿಗೆ ಏನೆಲ್ಲಾ ಸಮಸ್ಯೆ ಆಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ತೀರ್ಮಾನಿಸಿದ್ದಾರೆ. ಈ ವೇಳೆ ವಿಪರೀತ ದೇವರನ್ನು ನಂಬುವ ರೇವಣ್ಣ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದೆ ಯಾವುದೇ ತೊಂದರೆ ಕೊಡಲ್ಲ ಅಂತ ಸಚಿವರು ಆಣೆ ಪ್ರಮಾಣ ಮಾಡಲಿ ಎಂದು ಒತ್ತಾಯಿಸಲು ಕೈ ಪಡೆ ಸಜ್ಜುಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇತ್ತ ದೋಸ್ತಿಗಳು ಕೈ ಕೊಟ್ಟರೆ ಮಗನ ಗೆಲುವು ಕಷ್ಟ ಎಂದು ಭಾವಿಸಿದ ರೇವಣ್ಣ ಸಿದ್ದರಾಮಯ್ಯ ನಿವಾಸದಲ್ಲಿ ಇಂದು ರಾಜೀ ಪಂಚಾಯ್ತಿಗೆ ಹಾಜರಾಗಲು ಒಪ್ಪಿದ್ದಾರೆ. ಕೇವಲ ಬಾಯಿ ಮಾತಿಗೆ ಹಾಸನದ ದಶಕದ ರಾಜಕೀಯ ದ್ವೇಷ ಕೊನೆಯಾಗುತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

Rate this item
(1 Vote)
ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ, ದೇವೇಗೌಡ್ರೇ ಸ್ಟಾರ್ ಪ್ರಚಾರಕರು.ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಸಂಜೆ ನಿಗದಿಯಾಗುತ್ತೆ.ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು. 
 
ಮದ್ದೂರಿನ‌ ಹೊಳೆ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿದ ಅನಿತಾ ಕುಮಾರಸ್ವಾಮಿ, ೪ ನೇ ವಾರದ ಹರಿಕೆ ಪೂಜೆ ನೆರವೇರಿಸಿದರು. ಮಗನ ರಾಜಕೀಯ ಭವಿಷ್ಯ ಮತ್ತು ಚುನಾವಣೆ ಗೆಲುವಿಗಾಗಿ ೫ ಮಂಗಳವಾರದ ಪೂಜೆಯ ಹರಕೆ ಕಟ್ಟಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ, ದೇವೇಗೌಡ್ರೇ ಸ್ಟಾರ್ ಪ್ರಚಾರಕರು. ಮಂಡ್ಯ ಜನ ಅವ್ರನ್ನೇ ಇಷ್ಟಪಡ್ತಾರೆ, ನಿಖಿಲ್​ಗೆ ಇಲ್ಲಿನ ಜನರ ಆಶೀರ್ವಾದ ಇದೆ. ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಯನ್ನು ಸಿಎಂ ಕುಮಾರಸ್ವಾಮಿ ನೀಡಿದ್ದಾರೆ. ಅದೇ ನಿಖಿಲ್ ಗೆಲುವಿಗೆ ಸಹಕಾರವಾಗುತ್ತೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಮುಖಂಡರ ಬೆಂಬಲವನ್ನು ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ. ಪಕ್ಷದ್ರೋಹಿಗಳಿಗೆ ಆ ಪಕ್ಷದ ಮುಖಂಡರು ಶಿಸ್ತುಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು. ದೇವೇಗೌಡರು ಬಹುತೇಕ ತುಮಕೂರಿನಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಅನಿತಾ ಕುಮಾರಸ್ವಾಮಿ ಇದೇ ವೇಳೆ ಹೇಳಿದರು. ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಸಂಜೆ ನಿಗದಿಯಾಗುತ್ತೆ. ಪ್ರಚಾರ ಶುರು ಮಾಡಿದ್ದೀವಿ, ಇಂದು ಮಳವಳ್ಳಿಯಲ್ಲಿ ನಿಖಿಲ್ ಪ್ರಚಾರ ಮಾಡ್ತಿದ್ದಾರೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು. 


 




Rate this item
(0 votes)

 ಚಲನಚಿತ್ರ ಮಂಡಳಿಯವರು ಗೌರವದಿಂದ ಮನೆಯಲಿರಬೇಕು, ಅದನ್ನ ಬಿಟ್ಟು ದೇವೇಗೌಡರು, ಕುಮಾರಣ್ಣನ ಬಗ್ಗೆ ಟೀಕೆ ಮಾಡಿದರೇ ನಿಮ್ಮ ಆಸ್ತಿ, ಅಂತಸ್ತು ಸೇರಿದಂತೆ ಎಲ್ಲವನ್ನೂ ತನಿಖೆ ಮಾಡಿಸುತ್ತೇವೆ ಎಂದು ಶಾಸಕ ನಾರಾಯಣಗೌಡ..ನಟ ದರ್ಶನ್, ಯಶ್ ಸೇರಿದಂತೆ ಸುಮಲತಾ ಅಂಬರೀಷ್ ಪರವಾಗಿ ನಿಲ್ಲುವ ಎಲ್ಲಾ ನಟ, ನಿಮರ್ಾಪಕರಿಗೆ ಎಚ್ಚರಿಕೆ ನೀಡಿದ್ದಾರೆ.

ಕೆ.ಆರ್.ಪೇಟೆ: ಪಟ್ಟಣದ ಶಾಸಕರ ನಿವಾಸದ ಬಳಿ ಮೈದಾನದಲ್ಲಿ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ಅಂಬರೀಷ್ ಪರವಾಗಿ ನಿಲ್ಲುವ ಎಲ್ಲಾ ಚಲನಚಿತ್ರಕ್ಕೆ ಸಂಬಂಧಿಸಿ ಎಲ್ಲಾ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದರು.ನಮ್ಮ ದೇವೇಗೌಡರು, ಕುಮಾರಣ್ಣನ ಬಗ್ಗೆ ಟೀಕಿಸುವ ಚಲನಚಿತ್ರ ನಟರಿಗೆ ತಕ್ಕ ಪಾಠ ಕಲಿಸುತ್ತೇವೆ, ಅದನ್ನು ಶೀಘ್ರದಲ್ಲಿ ತೋರಿಸುತ್ತೇವೆ. ಅವರಿಗೆ ರಾಜಕಾರಣ ಬಗ್ಗೆ ಮಾತನಾಡೋಕೆ ಏನು ಹಕ್ಕಿದೆ. ಅವರ ಕೊಡುಗೆ ಏನಿದೆ. ಅವರಿಗೂ ರಾಜಕರಣಕ್ಕೂ ಸಂಬಂಧವಿಲ್ಲ. ಗೌರವದಲ್ಲಿ ಮನೆಲ್ಲಿದ್ದು, ಸಿನಿಮಾ ತೆಗೆಯಿರಿ. ನಮ್ಮ ರಾಜಕಾರಣಕ್ಕೆ ಮಧ್ಯಪ್ರವೇಶಿಸಿಬೇಡಿ. ಅಂಬರೀಷ್ಣ್ಣನ ಬಗ್ಗೆ ಗೌರವವಿದೆ. ಅವರನ್ನು ನಮ್ಮ ಜಿಲ್ಲೆಯವರು ಹೇಗೆ ಬೆಳಸಬೇಕಿತ್ತು, ಹಾಗೆ ನಾವು ಬೆಳಿಸಿದ್ದೇವಿ. ನಿಮ್ಮಿಂದ ನಾವು ಕಲಿಯುವುದು ಏನಿಲ್ಲ ಎಂದು ಚಲನಚಿತ್ರ ಮಂಡಳಿಯವರಿಗೆ ಎಚ್ಚರಿಕೆ ನೀಡಿದರು.

ಮತ್ತೊಮ್ಮೆ ದೇಶದ ಪ್ರಧಾನಿಯಾಗೋ ಅವಕಾಶ ನಮ್ಮ ಮಣ್ಣಿನ ಮಗ ದೇವೇಗೌಡರಿಗೆ ಬಂದಿದೆ. ಹಾಗಾಗಿ ಈ ಬಾರಿ ಜಿಲ್ಲೆಯ ಲೋಕಸಭೆ ಅಭ್ಯತರ್ಿ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು. ಅದು ನಮ್ಮ ತಾಲೂಕಿನಲ್ಲಿಯೇ ಹೆಚ್ಚು ಅಂತರ ನೀಡಬೇಕು. ಜಿಲ್ಲೆಯ ಎಲ್ಲಾ ನಾಯಕರು ಸೇರಿ ನಿಖಿಲ್ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿ ಅಭ್ಯಥರ್ಿ ಮಾಡಿದ್ದೇವೆ. ಇದು ಕುಮಾರಸ್ವಾಮಿಗೆ ಇಷ್ಟವಿರಲಿಲ್ಲ. ನಮ್ಮೆಲ್ಲರ ಒತ್ತಡದಿಂದ ಒಪ್ಪಿದ್ದಾರೆ ಎಂದು ತಿಳಿಸಿದರು.

ದೇವೇಗೌಡರ ಕುಟುಂಬದ ಬಳಿ ನಮ್ಮ ಬಗ್ಗೆ ಇಲ್ಲಸ್ಲಲದ ಆರೋಪವನ್ನು ನಮ್ಮ ಕ್ಷೇತ್ರದ ಮುಖಂಡರು ಮಾಡುತ್ತಾರೆ. ದೇವೇಗೌಡರು, ಅವರ ಕುಟುಂಬದ ಸದಸ್ಯರು ನನಗೆ ಹೊಡೆದರು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ದೇವೇಗೌಡರ ಕುಟುಂಬದ ಸದಸ್ಯ, ದೇವೇಗೌಡರ ಮನೆ ಚಾಡಿ ಹೇಳುವವರ ಮನೆ, ದೇವೇಗೌಡರ ಫೋಟೋ ಕೂಡ ಇಲ್ಲ. ತಾಲುಕಿನಲ್ಲಿ ದೇವೇಗೌಡರನ್ನು ಪ್ರತಿದಿನ ಪೂಜಿಸುವವನು ನಾನು ಎಂದು ಶಾಸಕ ನಾರಾಯಣಗೌಡ ಹೇಳಿದರು.

ಬಿಡುತ್ತೇನೆ ಎಂದು ಸುಳ್ಳು ಸುದ್ದಿಯನ್ನು ಕ್ಷೇತ್ರದಲ್ಲಿ ಹಬ್ಬಿಸುತ್ತಿದ್ದಾರೆ. ನನ್ನ ಶರೀರದಲ್ಲಿ ರಕ್ತ ಇರುವರೆಗೂ ಪಕ್ಷವನ್ನು ಬಿಡುವ ಪ್ರಶ್ನೆಯಿಲ್ಲ. ಅವುಗಳಿಗೆ ಜನ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.ಕಾಂಗ್ರೆಸ್ ರಾಜ್ಯ ನಾಯಕರು ಮೈತ್ರಿ ಅಭ್ಯಥರ್ಿಯನ್ನು ಗೆಲ್ಲಿಸುವ ಸಲುವಾಗಿ ಜಿಲ್ಲೆಗೆ ಪ್ರಚಾರಕ್ಕೆ ಬರಲಿದ್ದಾರೆ. ಆದರೆ, ಸ್ಥಳೀಯ ನಾಯಕರು ಸ್ವತಂತ್ರ ಅಭ್ಯಥರ್ಿ ಸುಮಲತಾ ಪರ ನಿಲ್ಲುತ್ತಿದ್ದಾರೆ. ಅವರು ಇನ್ನೆರಡು ದಿನ ಹಾರಾಡತ್ತಾರೆ ಬಳಿಕ ಮೂಲೆ ಸೇರುತ್ತಾರೆ ಎಂದು ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದರು.

ಸಬೆಯಲ್ಲಿ ತಾಲೂಕು ಅಧ್ಯಕ್ಷ ವೆಂಕಟಸುಬ್ಬೇಗೌಡ, ಜಿಪಂ ಸದಸ್ಯ ಎಚ್.ಟಿ.ಮಂಜು, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭಾಕರ್, ಮುಖಂಡ ಶ್ರೀನಿವಾಸ್, ತಾಪಂ ಮಾಜಿ ಉಪಾಧ್ಯಕ್ಷ ಜಾನಕೀರಾಮ್, ಸ್ಥಾಯಿಸಮಿತಿ ಅಧ್ಯಕ್ಷ ರಾಜು, ತಾಪಂ ಸದಸ್ಯ ವಿಜಯಕುಮಾರ್, ಮೋಹನ್, ಎಪಿಎಂಸಿ ಅಧ್ಯಕ್ಷ ನಾಗರಾಜು, ಪುರಸಭೆ ಸದಸ್ಯರಾದ ಸಂತೋಷ್, ಹೇ ಮಂತ್ಕುಂಆರ್, ದಿನೇಶ್, ನಾಗರಾಜು ಸೇರಿದಂತೆ ಹಲವರಿದ್ದರು.


 
Rate this item
(2 votes)

ಅಕಾಲಿಕ ಮರಣ ಹೊಂದಿದ ಗುತ್ತಿಗೆದಾರ ಎಂ ಎಸ್ ಕೃಷ್ಣ (ಭಗವಾನ್ಎಲೆಕ್ಟ್ರಿಕಲ್ಸ್) ರವರ ಪತ್ನಿ ಶಶಿಕಲಾ ರವರಿಗೆ ಗುತ್ತಿಗೆದಾರರ ಸಂಘದ ಕೇಂದ್ರ ಕರ್ಯಾಕಾರಿಣಿ ಸಮಿತಿ ಸದಸ್ಯರಾದ ಕೆಂಪರಾಜು.ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ವಿತರಣೆ ಮಾಡಿದರು.

ಮಂಡ್ಯ : ತಾಲ್ಲೂಕಿನ  ಶ್ರೀ ಭಗವಾನ್ಎಲೆಕ್ಟ್ರಿಕಲ್ಸ್ ನ ಎಂ.ಎಸ್.ಕೃಷ್ಣ ರವರು ಅಕಾಲಿಕವಾಗಿ ಮೃತಪಟ್ಟಿದ್ದರು ಇವರ ಕುಟುಂಬಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದ್ಯಸರಾದ ಕೆಂಪರಾಜು .ಎನ್ ಮಳವಳ್ಳಿ ರವರು ಎಂ.ಎಸ್.ಕೃಷ್ಣ ರವರ ಮರಣ ಪರಿಹಾರ ಚೆಕ್ ನ್ನು ಅವರ ಪತ್ನಿಯಾದ ಶಶಿಕಲಾ ರವರಿಗೆ ರಾಗಿಮುದ್ದನ ಹಳ್ಳಿಯ ಅವರ ಮನೆಯೆಲ್ಲಿ   ಕೆಂದ್ರ ಸಮಿತಿಯ ಸದಸ್ಯರಾದ ಸಂಪತ್ ಕುಮಾರ್ ಸಲಹಾಸಮಿತಿ ಸದಸ್ಯರಾದ ದೇವಿಪ್ರಸಾದ್ ತಾಲ್ಲೂಕು ಅಧ್ಯಕ್ಷ ರಾದ ರಾಜು HS, ಕಾರ್ಯದರ್ಶಿ ರಮೇಶ್ SG, ಮಂಡ್ಯ ಜಿಲ್ಲೆಯ ಪದಾಧಿಕಾರಿಗಳು ಮತ್ತು  ತಾಲ್ಲೂಕಿನ ಗುತ್ತಿಗೆದಾರರ ಸಮ್ಮುಖದಲ್ಲಿ ಕೆಂಪರಾಜ .ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ಅನ್ನು ಅವರ ಪತ್ನಿ ಶಶಿಕಲಾ ರವರಿಗೆ ವಿತರಣೆ ಮಾಡಿದರು.

 

ಪ್ರಥಮ ಮಹಿಳಾ ಜಗದ್ಗುರು ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ(74) ಲಿಂಗೈಕ್ಯ.

ಬೆಂಗಳೂರು:  ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ(74) ಇಂದು ಲಿಂಗೈಕ್ಯರಾಗಿದ್ದಾರೆ.ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3.30ಕ್ಕೆ ಲಿಂಗೈಕ್ಯರಾಗಿದ್ದಾರೆ.ವಯೋ ಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಅವರು ಬಳಲುತ್ತಿದ್ದರು. ಹೀಗಾಗಿ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮಾರ್ಚ್ 10ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಾತೆ ಮಹಾದೇವಿ ಮಾರ್ಚ್ 13, 1946ರಂದು ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಜನಿಸಿದ್ದರು. ಇವರ ಮೂಲ ಹೆಸರು ರತ್ನ ಆಗಿದ್ದು, ದೀಕ್ಷೆ ಪಡೆದ ಬಳಿಕ ಮಾತೆ ಮಹಾದೇವಿ ಎಂದು ಗುರುತಿಸಿಕೊಂಡಿದ್ದರು.ಮಾತೆ ಮಹಾದೇವಿ ಗುರು ಲಿಂಗಾನಂದ ಅವರಿಂದ ಪ್ರಭಾವಿತರಾಗಿ ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಇವರನ್ನು ಪ್ರಥಮ ಮಹಿಳಾ ಜಗದ್ಗುರು ಎಂದು ಭಕ್ತರು ಗುರುತಿಸಿದ್ದಾರೆ.

 
Rate this item
(1 Vote)

ನಿಖಿಲ್ ಸ್ಪರ್ಧೆಯಿಂದ ಲಕ್ಷ್ಮಿ ಅಶ್ವಿನ್ ಗೌಡರಿಗೆ ಅನ್ಯಾಯವಾಗಿಲ್ಲ.ಐಆರ್‍ಎಸ್‍ನಿಂದ ಸ್ವಯಂ ನಿವೃತ್ತಿ ಪಡೆದಿದ್ದ ಲಕ್ಷ್ಮಿ ಅವರು ತಮ್ಮ ವೃತ್ತಿಗೆ ಮರಳುತ್ತಿದ್ದಾರೆ..ಸಿಎಂ 

ಮಂಡ್ಯ: ಮಂಡ್ಯದ ಅಧಿಕೃತ ಅಭ್ಯರ್ಥಿ  ಘೋಷಿಸಲು ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ಮಾತನಾಡುತ್ತ, ನಾನು ಹುಟ್ಟಿದ್ದು ಹಾಸನದಲ್ಲಿ. ರಾಜಕೀಯವಾಗಿ ನನಗೆ ಜನ್ಮ ಕೊಟ್ಟಿದ್ದು ರಾಮನಗರದ ಜನತೆ. ರಾಜಕೀಯವಾಗಿ ನನ್ನನ್ನು ಹೆಮ್ಮರವಾಗಿ ಬೆಳೆಸಿದ್ದು ಮಂಡ್ಯದ ಜನತೆ. ಈ ಜನತೆಯ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ ಎಂದು ತಿಳಿಸಿ.ಲಕ್ಷ್ಮಿ ಅಶ್ವಿನ್ ಗೌಡರಿಗೆ ಮೋಸ ಮಾಡಿ ನಿಖಿಲ್‍ಗೆ ಟಿಕೆಟ್ ನೀಡಲಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಬಂದಿರೋದು ನನ್ನ ಗಮನಕ್ಕೆ ಬಂದಿದೆ. ಆದ್ರೆ ಹೆಚ್ಚಿನ ಜನರಿಗೆ ಹಿಂದಿನ ವಿಷಯ ಗೊತ್ತಿಲ್ಲ. ಮಳವಳ್ಳಿಯ ಜೆಡಿಎಸ್ ಅಧ್ಯಕ್ಷ ಕೆಂಚಪ್ಪನವರ ಪುತ್ರಿ, ನಾಗಮಂಗಲದ ಸೊಸೆ ಲಕ್ಷ್ಮಿ ಅಶ್ವಿನ್ ಗೌಡ ವಿಧಾನಸಭಾ ಚುನಾವಣಾ ಅಭ್ಯರ್ಥಿ ಆಗಬೇಕೆಂದು ಭೇಟಿ ಮಾಡಿದ್ದರು. ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ನೀಡಬೇಕೆಂದು ಮೊದಲ ಭೇಟಿಯಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲಿಂದಲೇ ನಮ್ಮ ಪರಿಚಯವಾಗಿತ್ತು ಎಂದರು.

ದೇವೇಗೌಡರ ಕುಟುಂಬ ಲಕ್ಷ್ಮಿ ಅಶ್ವಿನ್ ಗೌಡರಿಗೆ ಮೋಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾವು ದೇವರನ್ನು ನಂಬಿಕೊಂಡು ಬದುಕುವ ಜೀವಿಗಳು. ಲಕ್ಷ್ಮಿ ಅವರ ಪತಿ ಐಆರ್‍ಎಸ್ ಅಧಿಕಾರಿಯಾಗಿದ್ದು, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರುವಂತಹ ಕೆಲ ಸುದ್ದಿಗಳು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಸ್ವಯಂ ನಿವೃತ್ತಿ ಪಡೆದಿದ್ದ ಲಕ್ಷ್ಮಿ ಅಶ್ವಿನ್ ಗೌಡ ಮತ್ತೆ ತಮ್ಮ ಉದ್ಯೋಗಕ್ಕೆ ಹಾಜರಾಗಲು ಇಚ್ಛಿಸಿದ್ದಾರೆ. ಕಳೆದ ವಾರ ದೆಹಲಿಗೆ ಹೋದಾಗ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ. ಮತ್ತೊಮ್ಮೆ ಕೆಲಸಕ್ಕೆ ಸೇರಬೇಕೆಂದು ಕೇಳುತ್ತಿದ್ದು, ಅವಕಾಶ ನೀಡಿ ಎಂದು ಕೇಳಿಕೊಂಡಿದ್ದೇನೆ. ಆರು ತಿಂಗಳ ಹಿಂದೆ ನಾಲ್ಕು ವರ್ಷದ ಅವಧಿಗೆ ಲಕ್ಷ್ಮಿ ಅಶ್ವಿನ್ ಗೌಡರನ್ನು ನೇಮಿಸಲು ಪಕ್ಷ ಮುಂದಾಗಿತ್ತು. ರಾಜಕೀಯ ಅನುಭವದ ಆಗಬೇಕಾದ್ರೆ ಎಂಎಲ್‍ಸಿ ಗೆ ಅರ್ಜಿ ಸಲ್ಲಿಸಲು ತಂಗಿಗೆ ಹೇಳಿದ್ದಂತೆ ಸಲಹೆ ನೀಡಿದ್ದೆ. ನಮ್ಮ ಕುಟುಂಬದಿಂದ ಯಾವ ಮಹಿಳೆಗೂ ಅನ್ಯಾಯವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಕಳೆದ ಎರಡೂವರೆ ತಿಂಗಳಿನಿಂದ ಮಾಧ್ಯಮಗಳಲ್ಲಿ ಸುದ್ದಿಯನ್ನು ನೋಡಿ ಮನಸ್ಸಿಗೆ ತುಂಬಾ ನೋವಾಗಿದೆ. ಮಂಡ್ಯದಲ್ಲಿಯೇ ಈ ರೀತಿಯ ವಾತಾವರಣ ನಿರ್ಮಾಣ ಆಗುತ್ತೆ ಅಂದುಕೊಂಡಿರಲಿಲ್ಲ. ನಿಖಿಲ್ ಕುಮಾರಸ್ವಾಮಿಯನ್ನು ಉಪಚುನಾವಣೆ ನಿಲ್ಲಿಸಬೇಕೆಂದು ರವೀಂದ್ರ ಶ್ರೀಕಂಠಯ್ಯ ಎಂದು ಹೇಳಿದಾಗ ನನಗೆ ಒಂದು ಕ್ಷಣ ನಡುಕ ಉಂಟಾಯಿತು. ಇಂದು ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸಬೇಕೆಂಬ ಮನಸ್ಸು ನನಗಿರಲಿಲ್ಲ. ಆದ್ರೆ ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಖಿಲ್ ಚುನಾವಣೆಗೆ ನಿಂತಿದ್ದಾನೆ. ಮಾಧ್ಯಮಗಳಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಮಂಡ್ಯ ಕ್ಷೇತ್ರದ ಸಂಚಿಕೆಗಳನ್ನು ಪ್ರಸಾರ ಮಾಡಲಾಗುತ್ತಿದ್ದು, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದರು.

Rate this item
(1 Vote)
 ಮೇಲುಕೋಟೆ ಚಲುವನಾರಾಯಣ ಸ್ವಾಮಿಗೆ ಪೂಜೆ ಸಲ್ಲಿಸಿ ಸುಮಲತಾ ಅಂಬರೀಶ್ ಅಬ್ಬರದ ಪ್ರಚಾರ.
 
ಹೌದು, ಪಾಂಡವಪುರ ತಾಲೂಕಿನ ಮೇಲುಕೋಟೆಗೆ ತಮ್ಮ ಬೆಂಬಲಿಗರ ಜೊತೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಚಾರ ಮಾಡಿದರು. ತೆರೆದ ವಾಹನದಲ್ಲಿ ರೋಡ್ ಶೋ ಮಾಡಿದ ಸುಮಲತಾ, ಮೇಲುಕೋಟೆ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚಾರ ಮಾಡಿದರು. ಇದೇ ಸಂದರ್ಭದಲ್ಲಿ ಮೇಲುಕೋಟೆ ಗ್ರಾಮಸ್ಥರು ಸುಮಲತಾ ಅಂಬರೀಶ್​ಗೆ ಗೌರವ ಪೂರ್ವಕವಾಗಿ ಸನ್ಮಾನ ಮಾಡಿದರು.ನಂತರ ಮಾತನಾಡಿದ ಅವರು, ಸ್ಪರ್ಧೆಯ ದಿನಾಂಕವನ್ನು ಮಾರ್ಚ್ 18ರಂದು ಹೇಳುತ್ತೇನೆ. ಕೈ ಪಕ್ಷ ನನಗೆ ಮೋಸ ಮಾಡ್ತಿಲ್ಲ, ಪಕ್ಷಕ್ಕೆ ಮೋಸ ಆಗ್ತಿದೆ. ಕಾರ್ಯಕರ್ತರಿಗೆ ಮೋಸ ಆಗ್ತಿದೆ ಎಂದರು. ನಾನು ಎಂದು ಕೈ ಮುಖಂಡರು ಇಲ್ಲದಿದ್ರು ಒಂಟಿ ಅಲ್ಲ. ನನ್ನ ಜೊತೆ ಜನ ಇದ್ದಾರೆ. ಅಂಬಿ ಸಂಪಾದನೆ ಮಾಡಿದ ಈ ಜನರನ್ನು ನಂಬಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು. 
Last modified on 14/03/2019
Rate this item
(1 Vote)

ಸಾಲಬಾಧೆ ತಾಳಲಾರದೆ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ.ಖಾಸಗಿ ಬ್ಯಾಂಕುಗಳು ಕಿರುಕುಳ ಹಿಂಸೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆ.

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ಸಾಲಬಾಧೆ ಖಾಸಗಿ ಬ್ಯಾಂಕುಗಳು ಕಿರುಕುಳ ಹಿಂಸೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ .ಡಿಂಕಾ ಗ್ರಾಮದಲ್ಲಿ ವಾಸ ಮಾಡಿಕೊಂಡು ಕೂಲಿ ಮಾಡುತ್ತಿದ್ದ ಶಿವಕುಮಾರ್ ಇವರ ಹೆಂಡತಿಯಾದ ರುದ್ರಮ್ಮ (53) ನೇಣು ಬಿಗಿದುಕೊಂಡು ಸಾವಿಗೀಡಾದ ದುರ್ದೈವಿ.ಗ್ರಾಮಶಕ್ತಿ ಬ್ಯಾಂಕ್ ನಲ್ಲಿ 50 ಸಾವಿರ , ಫ್ಯೂಚರ್ ಪ್ರವೇಟ್ ಲಿಮಿಟೆಡ್ 50 ಸಾವಿರ, ಮತ್ತು ಕೈ ಸಾಲ 2ಲಕ್ಷ , ಸೇರಿದಂತೆ ಸಾಲ ಮಾಡಿದ್ದರು.

ಘಟನೆಯ ವಿವರ :
ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ರುದ್ರಮ್ಮ ಗ್ರಾಮಶಕ್ತಿ ಬ್ಯಾಂಕ್ ನಲ್ಲಿ 50 ಸಾವಿರ , ಫ್ಯೂಚರ್ ಪ್ರವೇಟ್ ಲಿಮಿಟೆಡ್ 50 ಸಾವಿರ, ಮತ್ತು ಕೈ ಸಾಲ 2ಲಕ್ಷ ಸಾಲ ಮಾಡಿದ್ದರು. ಕೂಲಿ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಜೀವನ ಮಾಡುವುದಕ್ಕೆ ಸಾಲದೆ ಮಾಡಿದ ಸಾಲ ತೀರಿಸಲು ಕಷ್ಟವಾದ ಪರಿಸ್ಥಿತಿಯಲ್ಲಿ  ಜೀವನ ಸಾಗಿಸುತ್ತಿದ್ದು. ಖಾಸಗಿ ಬ್ಯಾಂಕ್  ಫ್ಯೂಚರ್ ಪ್ರವೇಟ್ ಲಿಮಿಟೆಡ್ ಮತ್ತು ಗ್ರಾಮಶಕ್ತಿ ಬ್ಯಾಂಕಿನ ಸಿಬ್ಬಂದಿ ಗಳು ದಿನನಿತ್ಯ ಮನೆಯ ಬಳಿ ಬಂದು  ಕಿರುಕುಳ ಕೊಡುತ್ತಿದ್ದರು .ಸಾಲ ತೀರಿಸುವುದಾಗಿ ರುದ್ರಮ್ಮ ಹೇಳಿ ಸ್ವಲ್ಪ ದಿನಗಳ ಕಾಲಾವಕಾಶ ಕೇಳಿದರು. ಕೇಳದೆ ಬ್ಯಾಂಕಿನವರು ದಿನ ನಿತ್ಯ ಮನೆ ಹತ್ತಿರ ಮತ್ತು ಕೆಲಸ ಮಾಡುತ್ತಿರುವ ಹೊಲದ ಹತ್ತಿರ ಬಂದು ಕಿರುಕುಳ ಕೊಡುತ್ತಿದ್ದರೂ ಕಿರುಕುಳದ ಹಿಂಸೆಯನ್ನು ತಾಳಲಾರದೆ ಇಂದು ಬೆಳಿಗ್ಗೆ 12 ಗಂಟೆಯಲ್ಲಿ ತಮ್ಮ ಜಮೀನಿನ ಬಳಿ ಹೋಗಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ.ತುಂಬಾ ಕಡು ಬಡವರಾಗಿದ್ದು ರುದ್ರಮ್ಮನ ಮಗನಾದ ಮಲ್ಲಿಕಾರ್ಜುನ ಘಟನೆಯ ಮಾಹಿತಿಯನ್ನು ತಿಳಿಸಿದ್ದಾರೆ .ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

Page 10 of 41

Visitors Counter

307052
Today
Yesterday
This Week
This Month
Last Month
All days
113
936
1351
113
11219
307052

Your IP: 216.73.216.180
2025-07-01 11:45

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles