ಮೈಸೂರು
ಜಿಲ್ಲಾಡಳಿತದಿಂದ ನಾಡಹಬ್ಬ ಮೈಸೂರು ದಸರಾ 2018ರ ಅಧಿಕೃತ ಲಾಂಛನ ಬಿಡುಗಡೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2018 ನೇ ಸಾಲಿನ ದಸರಾ ಮಹೋತ್ಸವದ ಲಾಂಛನ ಜಿಲ್ಲಾಡಳಿತದಿಂದ ಬಿಡುಗಡೆ ಮಾಡಿದೆ 'MysuruDasara2018' ಟ್ವಿಟರ್ ಖಾತೆ ಮೂಲಕ ಪ್ರಕಟಣೆ ಮೈಸೂರು ದಸರಾವನ್ನು ಈ ಬಾರಿ ಸರಳ ವ್ಯಕ್ತಿ ಸುಧಾಮೂರ್ತಿಯವರು ಚಾಲನೆ ನೀಡಲ್ಲಿದ್ದಾರೆ ಅ.10ರಿಂದ 19 ರವರೆಗೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ.
ಕೃಷ್ಣರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಕೆ.ಮಹೇಶ್ಚಂದ್ರ ಅಪಹರಣ ಪ್ರಕರಣ ಬೇಧಿಸಿದ ಕೆ.ಆರ್.ನಗರ ಪೋಲಿಸರು
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಕೆ.ಮಹೇಶ್ಚಂದ್ರ ಅಪಹರಣ ಪ್ರಕರಣ ಬೇಧಿಸಿದ ಕೆ.ಆರ್.ನಗರ ಪೋಲಿಸರು.ತಾಲೂಕಿನ ಶೀಳನೆರೆ ಗ್ರಾಮದವರಾದ ರೈಲ್ವೆ ಇಲಾಖೆಯಲ್ಲಿ ಸ್ಡೋರ್ ಕೀಪರ್ ಕೆಲಸ ಮಾಡುತ್ತಿದ್ದ ದಿ. ನಾಗಣ್ಣಗೌಡರ ಮಗ ಯೋಗೇಂದ್ರ ಕೆ.ಎನ್ (೩೦), ಶೀಳನೆರೆ ತಾ.ಪಂ ಸದಸ್ಯ ನಿಂಗರಾಜು ಎಸ್.ಕೆ. ಎಂಬುವರ ಮಗ ದೀಪು@ ದೀಪಕ್ ಎಸ್.ಎನ್. (೨೯), ದಿ.ಚಿಕ್ಕನಂಜೇಗೌಡರ ಮಗ ಚಂದು ಎಸ್.ಸಿ.(೨೪), ಪಟ್ಟಣದ ಮುಸ್ಲಿಂ ಬ್ಲಾಕ್ ನಿವಾಸಿ ನಾಗೇಗೌಡರ ಮಗ ಸೋಮಶೇಖರ್ (೩೧) ಮತ್ತು ಕಿಕ್ಕೇರಿ ಗ್ರಾಮದ ಲಕ್ಷ್ಮಣ ಎಂಬುವರ ಮಗ ಶ್ರೇಯಸ್ @ ಕರಿಯ್ಯ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ತಹಸೀಲ್ದಾರ್ ಕೆ.ಮಹೇಶ್ಚಂದ್ರ ಕೆಲಸ ಮುಗಿಸಿಕೊಂಡು ಕೆ.ಆರ್.ನಗರದ ಮನೆಗೆ ತೆರಳುವಾಗ ರಾತ್ರಿ ವೇಳೆ ಚಿಕ್ಕವಡ್ಡರಗುಡಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇವರನ್ನು ಅಪಹರಣ ಮಾಡಿದ್ದರು. ಬೆಳಗ್ಗೆ ಅಪಹರಣ ಮಾಡಿದವರು ತಾಲೂಕಿನ ತೆಂಡೇಕೆರೆ ಬಳಿ ಬಿಟ್ಟು ಪ್ರಾಣ ಬೆದರಿಕೆ ಹೊಡ್ಡಿ ತೆರಳಿದ್ದರು. ಮಹೇಶ್ಚಂದ್ರ ಅವರು ಪಟ್ಟಣದ ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಇವರನ್ನ ಡಿ.ಸಿ ರಾಧಿಕಾ ಧೀರ್ಘ ಕಾಲದ ರಜೆ ನೀಡಿ ಕಳಿಸಿದ್ದರು. ಕೆ.ಆರ್.ನಗರ ಪೊಲೀಸರು ಪ್ರಕರಣದ ಬೆನ್ನತ್ತಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆರೋಪಿಗಳೆಲ್ಲ ವಿದ್ಯಾವಂತರಾಗಿದ್ದು, ಎಲ್ಲಾ ರೈಲ್ವೆ ಇಲಾಖೆ ಸೇರಿದಂತೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅದರಲ್ಲೂ ಮೂವರು ಶೀಳನೆರೆ ಗ್ರಾಮದವರಾಗಿದ್ದಾರೆ. ಎಲ್ಲರೂ ಸ್ನೇಹಿತರಾಗಿದ್ದಾರೆ. ರೈತರ ಸಾಲ ಮನ್ನಾಗೆ ಒತ್ತಾಯಿಸಿ ತಹಸೀಲ್ದಾರರನ್ನು ಒತ್ತಾಯಾಗಿಟ್ಟುಕೊಂಡು ಸರ್ಕಾರಕ್ಕೆ ಒತ್ತಡ ತರುವ ಸಲುವಾಗಿ ಅಪಹರಣ ಮಾಡಿದ್ದಾಗಿ ಆರೋಪಿಗಳು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಪೊಲೀಸರು ಕೆ.ಆರ್.ನಗರದ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.