ಚನ್ನರಾಯಪಟ್ಟಣ : ವಿದ್ಯುತ್ ಶಾಕ್ ಹೊಡೆದು ಒಂದೇ ಕುಟುಂಬದ ಮೂವರ ಸಾವು.
ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ. ಅಗಸರಹಳ್ಳಿಯಲ್ಲಿ ಇಂದು ಮುಂಜಾನೆ 6.30 ರ ಸುಮಾರಿನಲ್ಲಿ ಘಟನೆ ನಡೆದಿದೆ.
ಮೃತರು ತಾಯಿ ಭಾಗ್ಯಮ್ಮ, ಮಗಳು ದಾಕ್ಷಾಯಿಣಿ, ಮಗ ದಯಾನಂದ. ಮಗಳು ದಾಕ್ಷಾಯಿಣಿ ಬೆಳಗ್ಗೆ ಹೊಗೆದ ಬಟ್ಟೆಗಳನ್ಮು ಮನೆಯಿಂದ ವಿದ್ಯುತ್ ಕಂಬಕ್ಕೆ ಕಟ್ಟಲಾಗಿದ್ದ ತಂತಿಗೆ ಬಟ್ಟೆ ಒಣ ಹಾಕಲು ಹೋದಾಗ ತಂತಿಯಲ್ಲಿ ಪ್ರಸರಿಸುತ್ತಿದ್ದ ವಿದ್ಯುತ್ ಮೊದಲಿಗೆ ದಾಕ್ಷಾಯಣಿಯನ್ನು ಹಿಡಿದುಕೊಂಡಿದೆ. ಇದನ್ನು ನೋಡಿ ಗಾಬರಿಯಿಂದ ತಾಯಿ ಮಗ ಅವಳನ್ನು ಬಿಡಿಸಲು ಹೋಗಿದ್ದಾರೆ. ಅವಳನ್ನು ಮುಟ್ಟಿದ ಈರ್ವರಿಗೂ ವಿದ್ಯುತ್ ಶಾಕ್ ಹೊಡೆದು ಮೂವರೂ ಸಾವನ್ನಪಿದ್ದಾರೆ.
ಗ್ರಾಮಾಂತರ ಠಾಣೆ ವ್ಯಾಪ್ತಿ.