ನಿಖಿಲ್ ಸ್ಪರ್ಧೆಯಿಂದ ಲಕ್ಷ್ಮಿ ಅಶ್ವಿನ್ ಗೌಡರಿಗೆ ಅನ್ಯಾಯವಾಗಿಲ್ಲ...ಹೆಚ್.ಡಿ.ಕುಮಾರಸ್ವಾಮಿ

ನಿಖಿಲ್ ಸ್ಪರ್ಧೆಯಿಂದ ಲಕ್ಷ್ಮಿ ಅಶ್ವಿನ್ ಗೌಡರಿಗೆ ಅನ್ಯಾಯವಾಗಿಲ್ಲ.ಐಆರ್‍ಎಸ್‍ನಿಂದ ಸ್ವಯಂ ನಿವೃತ್ತಿ ಪಡೆದಿದ್ದ ಲಕ್ಷ್ಮಿ ಅವರು ತಮ್ಮ ವೃತ್ತಿಗೆ ಮರಳುತ್ತಿದ್ದಾರೆ..ಸಿಎಂ 

ಮಂಡ್ಯ: ಮಂಡ್ಯದ ಅಧಿಕೃತ ಅಭ್ಯರ್ಥಿ  ಘೋಷಿಸಲು ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ಮಾತನಾಡುತ್ತ, ನಾನು ಹುಟ್ಟಿದ್ದು ಹಾಸನದಲ್ಲಿ. ರಾಜಕೀಯವಾಗಿ ನನಗೆ ಜನ್ಮ ಕೊಟ್ಟಿದ್ದು ರಾಮನಗರದ ಜನತೆ. ರಾಜಕೀಯವಾಗಿ ನನ್ನನ್ನು ಹೆಮ್ಮರವಾಗಿ ಬೆಳೆಸಿದ್ದು ಮಂಡ್ಯದ ಜನತೆ. ಈ ಜನತೆಯ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ ಎಂದು ತಿಳಿಸಿ.ಲಕ್ಷ್ಮಿ ಅಶ್ವಿನ್ ಗೌಡರಿಗೆ ಮೋಸ ಮಾಡಿ ನಿಖಿಲ್‍ಗೆ ಟಿಕೆಟ್ ನೀಡಲಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಬಂದಿರೋದು ನನ್ನ ಗಮನಕ್ಕೆ ಬಂದಿದೆ. ಆದ್ರೆ ಹೆಚ್ಚಿನ ಜನರಿಗೆ ಹಿಂದಿನ ವಿಷಯ ಗೊತ್ತಿಲ್ಲ. ಮಳವಳ್ಳಿಯ ಜೆಡಿಎಸ್ ಅಧ್ಯಕ್ಷ ಕೆಂಚಪ್ಪನವರ ಪುತ್ರಿ, ನಾಗಮಂಗಲದ ಸೊಸೆ ಲಕ್ಷ್ಮಿ ಅಶ್ವಿನ್ ಗೌಡ ವಿಧಾನಸಭಾ ಚುನಾವಣಾ ಅಭ್ಯರ್ಥಿ ಆಗಬೇಕೆಂದು ಭೇಟಿ ಮಾಡಿದ್ದರು. ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ನೀಡಬೇಕೆಂದು ಮೊದಲ ಭೇಟಿಯಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲಿಂದಲೇ ನಮ್ಮ ಪರಿಚಯವಾಗಿತ್ತು ಎಂದರು.

ದೇವೇಗೌಡರ ಕುಟುಂಬ ಲಕ್ಷ್ಮಿ ಅಶ್ವಿನ್ ಗೌಡರಿಗೆ ಮೋಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾವು ದೇವರನ್ನು ನಂಬಿಕೊಂಡು ಬದುಕುವ ಜೀವಿಗಳು. ಲಕ್ಷ್ಮಿ ಅವರ ಪತಿ ಐಆರ್‍ಎಸ್ ಅಧಿಕಾರಿಯಾಗಿದ್ದು, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರುವಂತಹ ಕೆಲ ಸುದ್ದಿಗಳು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಸ್ವಯಂ ನಿವೃತ್ತಿ ಪಡೆದಿದ್ದ ಲಕ್ಷ್ಮಿ ಅಶ್ವಿನ್ ಗೌಡ ಮತ್ತೆ ತಮ್ಮ ಉದ್ಯೋಗಕ್ಕೆ ಹಾಜರಾಗಲು ಇಚ್ಛಿಸಿದ್ದಾರೆ. ಕಳೆದ ವಾರ ದೆಹಲಿಗೆ ಹೋದಾಗ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ. ಮತ್ತೊಮ್ಮೆ ಕೆಲಸಕ್ಕೆ ಸೇರಬೇಕೆಂದು ಕೇಳುತ್ತಿದ್ದು, ಅವಕಾಶ ನೀಡಿ ಎಂದು ಕೇಳಿಕೊಂಡಿದ್ದೇನೆ. ಆರು ತಿಂಗಳ ಹಿಂದೆ ನಾಲ್ಕು ವರ್ಷದ ಅವಧಿಗೆ ಲಕ್ಷ್ಮಿ ಅಶ್ವಿನ್ ಗೌಡರನ್ನು ನೇಮಿಸಲು ಪಕ್ಷ ಮುಂದಾಗಿತ್ತು. ರಾಜಕೀಯ ಅನುಭವದ ಆಗಬೇಕಾದ್ರೆ ಎಂಎಲ್‍ಸಿ ಗೆ ಅರ್ಜಿ ಸಲ್ಲಿಸಲು ತಂಗಿಗೆ ಹೇಳಿದ್ದಂತೆ ಸಲಹೆ ನೀಡಿದ್ದೆ. ನಮ್ಮ ಕುಟುಂಬದಿಂದ ಯಾವ ಮಹಿಳೆಗೂ ಅನ್ಯಾಯವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಕಳೆದ ಎರಡೂವರೆ ತಿಂಗಳಿನಿಂದ ಮಾಧ್ಯಮಗಳಲ್ಲಿ ಸುದ್ದಿಯನ್ನು ನೋಡಿ ಮನಸ್ಸಿಗೆ ತುಂಬಾ ನೋವಾಗಿದೆ. ಮಂಡ್ಯದಲ್ಲಿಯೇ ಈ ರೀತಿಯ ವಾತಾವರಣ ನಿರ್ಮಾಣ ಆಗುತ್ತೆ ಅಂದುಕೊಂಡಿರಲಿಲ್ಲ. ನಿಖಿಲ್ ಕುಮಾರಸ್ವಾಮಿಯನ್ನು ಉಪಚುನಾವಣೆ ನಿಲ್ಲಿಸಬೇಕೆಂದು ರವೀಂದ್ರ ಶ್ರೀಕಂಠಯ್ಯ ಎಂದು ಹೇಳಿದಾಗ ನನಗೆ ಒಂದು ಕ್ಷಣ ನಡುಕ ಉಂಟಾಯಿತು. ಇಂದು ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸಬೇಕೆಂಬ ಮನಸ್ಸು ನನಗಿರಲಿಲ್ಲ. ಆದ್ರೆ ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಖಿಲ್ ಚುನಾವಣೆಗೆ ನಿಂತಿದ್ದಾನೆ. ಮಾಧ್ಯಮಗಳಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಮಂಡ್ಯ ಕ್ಷೇತ್ರದ ಸಂಚಿಕೆಗಳನ್ನು ಪ್ರಸಾರ ಮಾಡಲಾಗುತ್ತಿದ್ದು, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದರು.

Share this article

About Author

Madhu
Leave a comment

Write your comments

Visitors Counter

279026
Today
Yesterday
This Week
This Month
Last Month
All days
54
50
251
1519
6128
279026

Your IP: 18.97.9.174
2025-04-24 12:47

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles