ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ, ದೇವೇಗೌಡ್ರೇ ಸ್ಟಾರ್ ಪ್ರಚಾರಕರು.ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಸಂಜೆ ನಿಗದಿಯಾಗುತ್ತೆ.ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು.
ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿದ ಅನಿತಾ ಕುಮಾರಸ್ವಾಮಿ, ೪ ನೇ ವಾರದ ಹರಿಕೆ ಪೂಜೆ ನೆರವೇರಿಸಿದರು. ಮಗನ ರಾಜಕೀಯ ಭವಿಷ್ಯ ಮತ್ತು ಚುನಾವಣೆ ಗೆಲುವಿಗಾಗಿ ೫ ಮಂಗಳವಾರದ ಪೂಜೆಯ ಹರಕೆ ಕಟ್ಟಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ, ದೇವೇಗೌಡ್ರೇ ಸ್ಟಾರ್ ಪ್ರಚಾರಕರು. ಮಂಡ್ಯ ಜನ ಅವ್ರನ್ನೇ ಇಷ್ಟಪಡ್ತಾರೆ, ನಿಖಿಲ್ಗೆ ಇಲ್ಲಿನ ಜನರ ಆಶೀರ್ವಾದ ಇದೆ. ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಯನ್ನು ಸಿಎಂ ಕುಮಾರಸ್ವಾಮಿ ನೀಡಿದ್ದಾರೆ. ಅದೇ ನಿಖಿಲ್ ಗೆಲುವಿಗೆ ಸಹಕಾರವಾಗುತ್ತೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮುಖಂಡರ ಬೆಂಬಲವನ್ನು ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ. ಪಕ್ಷದ್ರೋಹಿಗಳಿಗೆ ಆ ಪಕ್ಷದ ಮುಖಂಡರು ಶಿಸ್ತುಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು. ದೇವೇಗೌಡರು ಬಹುತೇಕ ತುಮಕೂರಿನಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಅನಿತಾ ಕುಮಾರಸ್ವಾಮಿ ಇದೇ ವೇಳೆ ಹೇಳಿದರು. ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಸಂಜೆ ನಿಗದಿಯಾಗುತ್ತೆ. ಪ್ರಚಾರ ಶುರು ಮಾಡಿದ್ದೀವಿ, ಇಂದು ಮಳವಳ್ಳಿಯಲ್ಲಿ ನಿಖಿಲ್ ಪ್ರಚಾರ ಮಾಡ್ತಿದ್ದಾರೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು.