ಸುಮಲತಾ ಅಂಬರೀಶ್ ರವರಿಗೆ ಬಿದ್ದ ಮೊದಲ ಮತವೇ ಅಸಿಂಧು.!!!!!

ಮಂಡ್ಯ ಲೋಕಸಭಾ ಅಭ್ಯರ್ಥಿ ಸುಮಲತಾ ಅಂಬರೀಶ್ ರವರಿಗೆ ಬಿದ್ದ ಮೊದಲ ಮತವೇ ಅಸಿಂಧು.!!!

ಮಂಡ್ಯ : ಲೋಕ ಅಖಾಡ ಫಲಿತಾಂಶಕ್ಕೂ ಮುನ್ನವೇ ಮಂಡ್ಯದ ಸ್ವತಂತ್ರ ಅಭ್ಯರ್ಥಿ ಸುಮಲತಾಗೆ ಚುನಾವಣಾ ಆಯೋಗ ಸಖತ್ ಶಾಕ್​ ನೀಡಿದೆ. ಹೌದು ಸುಮಲತಾಗೆ ಹಾಕಲಾಗಿದ್ದ ಮೊದಲ ಮತವನ್ನು ರದ್ದುಗೊಳಿಸಿ ಚುನಾವಣಾ ಆಯೋಗ ಆದೇಶಿಸಿದೆ. ಇದರಿಂದ ಸುಮಲತಾಗೆ ತೀವ್ರ ಮುಖಭಂಗವಾದಂತಾಗಿದೆ.

ಸಿಆರ್​ಪಿಎಫ್​ ಯೋಧರೊಬ್ಬರು ಸುಮಲತಾಗೆ ಮತ ಚಲಾಯಿಸಿದ್ದರು. ಬಳಿಕ ಮತ ಚಲಾಯಿಸಿದ ವಿವರಣೆಯನ್ನು ಸಾಮಾಜಿಕ ಜಾಲತಾಣಕ್ಕೆ ವೈರಲ್​ ಮಾಡಿದ್ದರು. ಇದನ್ನು ಶೇರ್​ ಮಾಡಿಕೊಂಡಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಎಲೆಕ್ಷನ್​​ಗೂ ಮುನ್ನವೇ ತನಗೆ ಬಿದ್ದ ಮೊದಲ ಮತ ಎಂದು ಪ್ರಚಾರ ಪಡೆದುಕೊಂಡಿದ್ದರು.

ಇದನ್ನು ಗಮನಿಸಿದ ವಕೀಲ ಕಿರಣಕುಮಾರ್ ಎಂಬುವವರು ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ನೀಡಿದ್ದರು. ಕಿರಣ ಕುಮಾರ್ ದೂರಿನ ಹಿನ್ನೆಲೆಯಲ್ಲಿ ವಿವರಣೆಗಳನ್ನು ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ ಇದೀಗ ಯೋಧ ಚಲಾಯಿಸಿದ್ದ ಮತವನ್ನು ಅಸಿಂಧುಗೊಳಿಸಿ ಆದೇಶಿಸಿದೆ.

ಮತದಾನ ಗೌಪ್ಯತೆಯ ಕಾನೂನಿನ ಪ್ರಕಾರ ಯೋಧನ ಮತವನ್ನು ಅಸಿಂಧುಗೊಳಿಸುವಂತೆ ಕೇಂದ್ರ ಚುನಾವಣಾ ಆಯೋಗ ಡಿಸಿಗೆ ಸೂಚನೆ ನೀಡಿದೆ. ಕೇಂದ್ರ ಚುನಾವಣಾ ಆಯೋಗದ ಈ ಆದೇಶದಿಂದ ಸುಮಲತಾಗೆ ಬಿದ್ದ ಮೊದಲ ಮತವೇ ಅಸಿಂಧುವಾದಂತಾಗಿದ್ದು, ಸುಮಲತಾ ತೀವ್ರ ಮುಖಭಂಗಕ್ಕಿಡಾಗಿದ್ದಾರೆ.

Share this article

About Author

Madhu
Leave a comment

Write your comments

Visitors Counter

290060
Today
Yesterday
This Week
This Month
Last Month
All days
316
166
1592
9502
3051
290060

Your IP: 216.73.216.231
2025-05-22 19:45

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles