ಹಾಡ ಹಗಲೇ ಅಪ್ಪ-ಮಗಳನ್ನ ಕೊಲೆ ಮಾಡಿದ್ದ ಅಳಿಯ ಅಂದರ್ .

  ಹಾಡ ಹಗಲೇ ಅಪ್ಪ-ಮಗಳನ್ನ ಕೊಲೆ ಮಾಡಿದ್ದ ಅಳಿಯನನ್ನ 20 ದಿನಗಳ ಬಳಿಕ ಕೊನೆಗೂ ಎಡೆಮುರಿ ಕಟ್ಟುವಲ್ಲಿ ಚನ್ನರಾಯಪಟ್ಟಣ ಪೊಲೀಸ್ರು ಯಶಸ್ವಿಯಾಗಿದ್ದಾರೆ.        

ಹಾಸನ: ಚನ್ನರಾಯಪಟ್ಟಣ ಪಟ್ಟಣ ದಲ್ಲಿ ಜ.30ರಂದು ಸಂಜೆ 4.30ರಲ್ಲಿ ವಿಚ್ಚೇಧನಕ್ಕಾಗಿ ಕರೆಸಿಕೊಂಡಿದ್ದ ನಂದಿಶ್ ಬಳಿಕ ವಕೀಲರ ಕಚೇರಿಗೆ ತರೆಳಿ ವಾಪಸ್ ಹೊರಬರುವ ವೇಳೆ ಪತ್ನಿ ದಿವ್ಯಾ ಮತ್ತು ಮಾವ ಪ್ರಕಾಶ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪರಿಣಾಮ ರಕ್ತಾಸಿಕ್ತವಾಗಿ ಮಾವ ಸ್ಥಳದಲ್ಲಿಯೇ ಮೃತಪಟ್ಟರೇ, ಹೆಚ್ಚಿನ ಚಿಕಿತ್ಸೆ ಸ್ಪಂದಿಸದೇ ಪತ್ನಿ ದಿವ್ಯಾ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ರು.ಪ್ರಕರಣವಾದ ಬಳಿಕ ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ, ಎರಡು ಪ್ರತ್ಯೇಕ ತಂಡಗಳನ್ನ ರಚಿಸಿ ತನಿಖೆ ಆರಂಭಿಸಿದ್ರು. ಕಳೆದ 20 ದಿನಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ನೆನ್ನೆ ಚನ್ನರಾಯಪಟ್ಟಣದ ಉದಯಪುರದ ಫಾಮ್ ಹೌಸ್ ಒಂದರಲ್ಲಿ ಅಡಗಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸ್ರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

ಚಾಕು ತೋರಿಸಿ ಬೆದರಿಸಿದ್ದ ಆರೋಪಿ: ಬಹುತೇಕ ಮಂದಿ ಪೊಲೀಸ್ರ ಲಾಠಿ ಏಟು ತಿನ್ನೋತನಕ ಹಲವು ಕೃತ್ಯವನ್ನ ಮಾಡ್ತಾನೆ ಇರ್ತಾರೆ. ಇವನು ಕೂಡಾ ಮಾಡಿರೋದು ಅದೇ. ಎರಡು ಕೊಲೆ ಮಾಡಿರೋ ನಾನು ಇದುವರೆಗೂ ಪೊಲೀಸ್ ಕೈಗೆ ಸಿಕ್ಕಿಲ್ಲ ಎಂಬ ಧಿಮಾಕಿನಲ್ಲಿ ತಲೆ ಮರೆಸಿಕೊಂಡಿದ್ದು, ಫೆ.16ರಂದು ಹೊಟ್ಟೆಹಸಿವು ತಾಳಲಾರದೇ ಕೈಯಲ್ಲಿ ದುಡ್ಡಿಲ್ಲದೇ ಉದಯಪುರದ ಸಮೀಪವಿರುವ ಮಾಂಸಹಾರಿ ಹೋಟೆಲ್ ಒಂದಕ್ಕೆ ಹೋಗಿ ಮಾಲೀಕರಿಗೆ ಚಾಕು ತೋರಿಸಿ ಬಳಿಕ ಹೆದ್ರಿಸಿ-ಬೆದರಿಸಿ ಮಾಂಸಹಾರಿ ಊಟವನ್ನ ಪಾರ್ಸಲ್ ಮಾಡಿಸಿಕೊಂಡು ಹೋಗಿದ್ದನಂತೆ.

ಮಸ್ತಿಯಲ್ಲಿ ಕಾದು ಕುಳಿತಿದ್ದ ಪೊಲೀಸ್ರು: ಈ ಬಗ್ಗೆ ಹೋಟೇಲ್ ಮಾಲೀಕ ಚನ್ನರಾಯಪಟ್ಟಣದ ಪೊಲೀಸ್ರಿಗೆ ದೂರು ನೀಡಿದ್ರಂತೆ. ತಕ್ಷಣ ದೂರಿಗೆ ಸ್ಪಂದಿಸಿದ ಪೊಲೀಸ್ರು, ನಂದಿಶನ ಪೋಟೋವನ್ನ ತೋರಿಸಿದಾಗ ಮಾಲೀಕ, ಹೌದು ಸಾರ್ ಇವನೇ ಬಂದಿದ್ದು, ನಾವು ಬಾಗಿಲು ಹಾಕುವ ಸಮಯಕ್ಕೆ ಬಂದು, ಚಾಕು ತೋರಿಸಿ ಬೆದರಿಸಿ ಊಟವನ್ನ ಕಟ್ಟಿಸಿಕೊಂಡು ಇತ್ತಕಡೆ ಹೋದ ಅಂತ ಮಾಹಿತಿ ನೀಡಿದ್ರಂತೆ. ಮತ್ತೇ ಇದೇ ಸ್ಥಳಕ್ಕೆ ಬಂದೇ ಬರುತ್ತಾನೆ ಎಂಬ ಸುಳಿವಿನ ಮೇಲೆ ಮಫ್ತಿಯಲ್ಲಿ ಕಾದು ಕುಳಿತಿದ್ರು ಪೊಲೀಸ್ರು. ಬಳಿಕ ಮತ್ತೆ ಮರುದಿನ ಆತ ಹೋಟೆಲ್ ಸಮೀಪ ಬಂದು, ವಾಪಸ್ ಫಾಮ್ ಹೌಸ್ ಗೆ ಹೋಗುವ ವೇಳೆ ಪೊಲೀಸ್ರನ್ನ ನೋಡಿ ಓಡಿ ಹೋಗಲು ಯತ್ನಿಸಿದ್ದಾನೆ. ಆದ್ರೆ ಆತನ ಪ್ರಯತ್ನ ವಿಫಲವಾಗಿ ಕೊನೆಗೆ ಪೊಲೀಸ್ರ ಬಲೆಗೆ ಬಿದ್ದಿದ್ದಾನೆ.

ಮಹಜರು ಮಾಡಲು ಬಂದಾಗ ಛೀ..ಥೂ ಎಂದ ನಾಗರೀಕರು: ಕರುಣೆಯಿಲ್ಲದೇ ಕಟುಕನಂತೆ ಕುರಿ-ಕೋಳಿಯನ್ನ ಕತ್ತರಿಸುವ ಹಾಗೇ ಮಾರಕಾಸ್ತ್ರಗಳಿಂದ ಕೊಲೆಗೈದಿದ್ದ ನಂದಿಶನನ್ನ ಎಡೆಮುರಿ ಕಟ್ಟಿ ಎಳೆದು ತಂದಿದ್ದ ಪೊಲೀಸ್ರು, ನಾಯಿಗೆ ಚೈನಾಕುವಂತೆ, ಈತನ ಕೈಗೆ ಕಬ್ಬಿಣದ ಕೋಳ ತೊಡಿಸಿ ಮಹಜರು ಮಾಡಲು ರಸ್ತೆಯಲ್ಲಿಯೇ ಮೆರವಣಿಗೆ ಮಾಡಿಸಿಯೇ ಕರೆದುಕೊಂಡು ಬಂದು ಕೊಲೆ ಮಾಡಿದ್ದ ಸ್ಥಳದಲ್ಲಿಯೇ ಆರೋಪಿಯನ್ನ ಮಂಡಿಯೂರಿ ಕೂರಿಸಿದ್ದಾರೆ. ಕೊಲೆ ಮಾಡಿದ ಆರೋಪಿಯನ್ನ ನೋಡಿದ ಸ್ಥಳೀಯರು ಸ್ಥಳದಲ್ಲಿಯೇ ಛೀ…ಥೂ…ಅಂತ ಮಂಗಳಾರತಿ ಮಾಡಿದ್ದಾರೆ. ಇಂತಹ ಕೊಲೆಗಡುಕನಿಗೆ ಕಾನೂನಿನಡಿ ತಕ್ಕ ಶಿಕ್ಷೆಯನ್ನ ಕೊಡಿ ಅಂತ ಆಗ್ರಹಿಸಿದ್ದಾರೆ.
 
ವಿಚ್ಚೇಧನ ಕೇಳಿದ್ದೇ ಬಹುದೊಡ್ಡ ಅಪರಾಧವಂತೆ: ಒಟ್ಟಾರೆ, ಪ್ರೀತಿಸಿ ಮದುವೆಯಾಗಿ, ಕೆಲಸ ವರ್ಷಗಳ ಬಳಿಕ ಕುಡಿತಕ್ಕೆ ದಾಸನಾಗಿದ್ದ ನಂದೀಶ್ ಗೆ ಹಲವಾರು ಬಾರಿ ಯಲಿಯೂರು ಗ್ರಾಮದ ಮುಖಂಡರು ಬುದ್ದಿವಾದ ಹೇಳಿದ್ರು ಕೇಳದೇ ಹೆಂಡತಿಗೆ ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ. ಇವನ ಕಿರುಕುಳಕ್ಕೆ ಬೇಸತ್ತು ದಿವ್ಯಾ ನಿನ್ನ ಸಹವಾಸವೇ ಬೇಡ, ನನಗೆ ನಿನ್ನಿಂದ ಮುಕ್ತಿ ಬೇಕು ಎಂದು ವಿಚ್ಚೇಧನಕ್ಕೆ ಬೇಡಿಕೆ ಇಟ್ಟಿದ್ಲು. ಆದ್ರೆ ಇದನ್ನೇ ದೊಡ್ಡ ಅಪರಾಧವೆಂಬಂತೆ ಭಾವಿಸಿದ ನಂದಿಶ್, ಕೊಲೆ ಮಾಡಲು ನಿರ್ಧರಿಸಿ, ಪತ್ನಿ ಮತ್ತು ಮಾವನನ್ನ ಚನ್ನರಾಯಪಟ್ಟಣಕ್ಕೆ ಕರೆಸಿಕೊಂಡು ಬರ್ಬರವಾಗಿ ಕೊಲೆ ಮಾಡಿಬಿಟ್ಟ.
 
ಕುಡಿತ ಏನೆಲ್ಲಾ ಮಾಡಿಬಿಡ್ತು ನೋಡಿ, ತನ್ನ ಹೆಂಡತಿ-ಮಾವನನ್ನ ಕೊಲೆ ಮಾಡಿ, ತಾನೂ ಜೀವಂತ ವಿದ್ರು ಕೂಡಾ ಸಮಾಜದಲ್ಲಿ ತಲೆ ಎತ್ತಿ ಬದುಕಲು ಸಾಧ್ಯವಾಗದೇ ಜೀವನವನ್ನ ಹಾಳುಮಾಡಿಕೊಂಡು ಸದ್ಯ ಜೈಲಿನಲ್ಲಿ ಮುದ್ದೆ ಮುರಿಯಲು ಹೊರಟಿದ್ದಾನೆ. ಪಾಪಾ ಆ ಮುಗ್ದ ಮಕ್ಕಳಿಬ್ಬರು ಇತ್ತ ತಾಯಿಯನ್ನ ಕಳೆದುಕೊಂಡು ಬದುಕಿರುವ ಅಪ್ಪನನ್ನ ಕಳೆದುಕೊಂಡು ಮುಂದೆ ಬದುಕುವುದಾದ್ರು ಹೇಗೆ ಹೇಳಿ…..ಕುಡಿತ ಸಂಸಾರವನ್ನೇ ಹಾಳು ಮಾಡುತ್ತೆ ಅನ್ನೋದಿಕ್ಕೆ ಇದಕ್ಕಿಂತ ಸ್ಪಷ್ಪ ಉದಾಹರಣೆ ಬೇಕಿಲ್ಲ ಅನಿಸುತ್ತೆ ಅಲ್ವಾ….
 

Share this article

About Author

Madhu
Leave a comment

Write your comments

Visitors Counter

336065
Today
Yesterday
This Week
This Month
Last Month
All days
490
951
2184
1955
14750
336065

Your IP: 216.73.216.24
2025-09-03 10:28

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles