ಜೀವನದಲ್ಲಿ ಜಿಗುಪ್ಸೆ....ಕೆರೆಗೆ ಹಾರಿ ಆತ್ಮಹತ್ಯೆ..!

ಜೀವನದಲ್ಲಿ ಜಿಗುಪ್ಸೆ.ಕೃಷ್ಣರಾಜಪೇಟೆ ಪಟ್ಟಣದ ದೇವೀರಮ್ಮಣ್ಣಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಟೀ ಕ್ಯಾಂಟೀನ್ ಮಾಲೀಕ ರವಿ. 

ಕೆ.ಆರ್.ಪೇಟೆ:  ಪಟ್ಟಣದ ಐಯ್ಯಂಗಾರ್ಸ್ ಬೇಕರಿಯಲ್ಲಿ ಕಾಫಿ-ಟೀ ಅಂಗಡಿ ನಡೆಸುತ್ತಿದ್ದ ಪಟ್ಟಣದ ಬಸವೇಶ್ವರ ದೇವಸ್ಥಾನದ ಹಿಂಭಾಗದ ಬಡಾವಣೆಯ ನಿವಾಸಿ ಜಗನ್ನಾಥ ಅವರ ಪುತ್ರ ರವಿ(33)ದೇವೀರಮ್ಮಣ್ಣಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ರವಿ ಅವರು ಪತ್ನಿ ಕುಮಾರಿ, ಪುತ್ರಿ ಪವಿತ್ರ(13) ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬಲಗಾಲಿನ ಗ್ಯಾಂಗ್ರೀನ್ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ರವಿ ಕುಡಿತದ ಚಟಕ್ಕೆ ದಾಸನಾಗಿದ್ದನಲ್ಲದೇ ಪತ್ನಿಯು ತನ್ನ ತವರು ಮನೆಗೆ ತೆರಳಿ ಆರು ವರ್ಷಗಳಾದರೂ ಮರಳಿ ಬರದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಕುಡಿತವನ್ನೇ ಜೀವನವನ್ನಾಗಿ ಮಾಡಿಕೊಂಡಿದ್ದನು.ನಿನ್ನೆ ಸಂಜೆ ತನ್ನು ಶರ್ಟ್ ಅನ್ನು ಕಳಚಿ ಕೆರೆ ಏರಿಯ ಬಸವಣ್ಣನ ದೇವಸ್ಥಾನದ ಬಳಿ ಬಿಚ್ಚಿಟ್ಟು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಂದು ಬೆಳಿಗ್ಗೆ ಕೆರೆಯಲ್ಲಿ ತೇಲುತ್ತಿದ್ದ ರವಿಯ ಮೃತದೇಹವನ್ನು ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳ ನೆರವಿನಿಂದ ನೀರಿನಿಂದ ಹೊರತೆಗೆದು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಸಂಬಂಧಿಗಳಿಗೆ ಪಾರ್ಥಿವ ಶರೀರವನ್ನು ಒಪ್ಪಿಸಲಾಯಿತು.

Share this article

About Author

Madhu

Media

Leave a comment

Write your comments

Visitors Counter

307135
Today
Yesterday
This Week
This Month
Last Month
All days
196
936
1434
196
11219
307135

Your IP: 216.73.216.204
2025-07-01 17:24

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles