ರಥೋತ್ಸವಕ್ಕೆ ಮೊದಲ ಪೂಜೆ ಸಲ್ಲಿಸಲು ಶಾಸಕ ನಾರಾಯಣಗೌಡ ಮತ್ತು ತಾಪಂ ಸದಸ್ಯ ದಿನೇಶ್ ನಡುವೆ ಮಾತಿನ ಚಕಮುಕಿ.

ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಬಿಲ್ಲೇನಹಳ್ಳಿ ಗ್ರಾಮದ ಶ್ರೀಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವಕ್ಕೆ ಮೊದಲ ಪೂಜೆ ಸಲ್ಲಿಸಲು ಶಾಸಕ ಮತ್ತು ತಾಪಂ ಸದಸ್ಯರ ನಡುವೆ ಮಾತಿನ ಚಕಮುಕಿ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಿಲ್ಲೇನಹಳ್ಳಿ ಗ್ರಾಮದ ಶ್ರೀಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶಾಸಕ ನಾರಾಯಣಗೌಡರು ರಥಕ್ಕೆ ಪೂಜೆ ಸಲ್ಲಿಸಲು ಮುಂದಾದಾಗ ಸ್ವಪಕ್ಷೀಯ ತಾಪಂ ಸದಸ್ಯ ದಿನೇಶ್ ವಿರೋಧ ವ್ಯಕ್ತಪಡಿಸಿ ನಾನೇ ಪೂಜೆ ಸಲ್ಲಿಸುವುದಾಗಿ ಹೇಳಿದಾಗ ಇವರಿಬ್ಬರ ನಡುವೆ ಮಾತಿನ ಚಕಮುಕಿ ನಡೆದಿದೆ. ಇನ್ನೇನೋ ಕೈಕೈ ಮಿಲಾಯಿಸುವ ಹಂತಕ್ಕೆ ಬರುವಷ್ಟರಲ್ಲಿ ಪಟ್ಟಣದ ಪೊಲೀಸ್ ಠಾಣೆಯ ಎಸ್ಐ ವೆಂಕಟೇಶ್ ಮಧ್ಯಪ್ರವೇಶಿಸಿ ತಾಪಂ ಸದಸ್ಯ ದಿನೇಶ್ರನ್ನು ಶಾಸಕರಿಂದ ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಬೇಕಾದರೇ ತಳ್ಳಾಟ ನಡೆದಿದೆ. ದಿನೇಶ್ರನ್ನು ದೂರವಿಟ್ಟು ಶಿಷ್ಠಚಾರದಂತೆ ನಾರಾಯಣಗೌಡ ಪೂಜೆ ನೆರವೇರಿಸಿದ ಮೇಲೆ ದಿನೇಶ್ ಪೂಜೆ ಸಲ್ಲಿಸಿದ್ದಾರೆ. ಇವರಿಬ್ಬರು ಸ್ವಪಕ್ಷಿಯರಾಗಿದ್ದು, ಚುನಾವಣೆ ಪೂರ್ವವೇ ಇವರಿಬ್ಬರ ನಡುವೆ ಬಿನ್ನಭೀಪ್ರಾಯವಿತ್ತು. ರಥದ ಚಾಲನೆಯ ಪೂಜೆ ವಿಚಾರವಾಗಿ ಇವರ ಭಿನ್ನಾಭಿಪ್ರಾಯಗಳು ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಸಿಕ್ಕಿತು. 

.

Share this article

About Author

Madhu
Leave a comment

Write your comments

Visitors Counter

308366
Today
Yesterday
This Week
This Month
Last Month
All days
203
784
2665
1427
11219
308366

Your IP: 216.73.216.61
2025-07-03 13:54

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles