ಸಂಪೂರ್ಣ ಸಾಕ್ಷರತೆ ಸಾಧಿಸಲು ಕರಾರುವಕ್ಕಾದ ಯೋಜನೆ ಹಾಕಿಕೊಂಡು ಕೆಲಸ ಮಾಡುವಂತೆ ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ವಿಜಯ್ ಖಡಕ್ ಸೂಚನೆ.
ಮಂಡ್ಯ: ಮಂಡ್ಯದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ವಿಜಯ್ ನಿಮಗೆ ನೀಡುತ್ತಿರುವ ಹಣ ಸಾರ್ವಜನಿಕರ ತೆರಿಗೆಯ ಹಣವಾಗಿದ್ದು ಒಂದೊಂದು ರೂಪಾಯಿ ಯನ್ನು ಅನಕ್ಷರಸ್ಥರ ಕಲಿಕೆಯ ಉಪಯೋಗಕ್ಕೆ ಬಳಸಬೇಕು. ಶೇಕಡಾ 100 ಗುರಿಯನ್ನು ಸಾಧಿಸಲು ಅಗತ್ಯವಾದ ಯೋಜನೆಯನ್ನು ಹಾಕಿಕೊಂಡು ಕಾರ್ಯಕ್ರಮದ ಸಾಧನೆಗಾಗಿ ತಾಲ್ಲೂಕು ಹಂತದ ಅಧಿಕಾರಿಗಳ ಸಹಕಾರದಿಂದ ಸಾಧಿಸಬೇಕಾದ ಗ್ತಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಗತಿ ಸಾಧಿಸುವ ಮೂಲಕ ಸಂಪೂರ್ಣ ಸಾಕ್ಷರತಾ ಗ್ರಾಮ /ಪಂಚಾಯತಿ ಎಂದು ಘೋಷಿಸಿ ಕಾರ್ಯ ಸಾಧನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ನುಖರಾಗಬೇಕು ಎಂದು ತಿಳಿಸಿದರು. ಈಗಾಗಲೇ ಮೊದಲ ಹಂತದಲ್ಲಿ ಹಣಕಾಸನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ್ದು ತಾಲ್ಲೂಕು ಹಂತಕ್ಕೂ ಹಣ ನೀಡಲಾಗಿದೆ ಸಮೀಕ್ಷೆಯಂತೆ ಮ್ಯಾಚಿಂಗ್ ಬ್ಯಾಚಿಂಗ್ ಪಟ್ಟಿ ಬೋಧಕರ ಪಟ್ಟಿ. ಮುಖ್ಯ ತರಬೇತುದಾರರಿಗೆ ತರಬೇತಿ. ಬೋಧಕರ ತರಬೇತಿ ಕಲಿಕಾ ಕೇಂದ್ರಗಳ ಪ್ರಾರಂಭ ಹೀಗೆ ಶಿಸ್ತು ಬದ್ದವಾಗಿ ಕೆಲಸ ಮಾಡಿ ಅನಕ್ಷರಸ್ಥರನ್ನು ನವ ಸಾಕ್ಷರರನ್ನಾಗಿ ಮಾಡುವ ಮೂಲಕ ಪುಣ್ಯದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ರಾಜ್ಯ ಸಂಪನ್ಮೂಲ ಅಧಿಕಾರಿ ವೆಂಕಟೇಶ್. ಅಕೌಂಟ್ ಆಫೀಸರ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ರಿಜ್ವಾನಾ ಕೌಸರ್ ಜಿಲ್ಲಾ ಕಾರ್ಯಕ್ರಮ ಸಹಾಯಕ ರಮೇಶ್ ಹಾಗೂ ಎಲ್ಲಾ ತಾಲ್ಲೂಕಿನ ಸಂಯೋಜಕರು ಹಾಜರಿದ್ದರು.