ಗವಿಮಠದ ನೂತನ ಪೀಠಾಧಿಪತಿಗಳಾಗಿ ಶ್ರೀ ಸ್ವತಂತ್ರ ಚನ್ನವೀರ ಸ್ವಾಮೀಜಿಗಳ ನೇಮಕ.

ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣಪ್ರಸಿದ್ಧ ಶರಣಶ್ರದ್ಧಾಕೇಂದ್ರ ಕಾಪನಹಳ್ಳಿ ಗವಿಮಠದ ಪೀಠಾಧಿಪತಿಗಳಾಗಿ ಮಠದ ಅರ್ಚಕರಿಗೆ ಧೀಕ್ಷೆ ನೀಡಿ ಖಾವಿಬಟ್ಟೆ ಹಾಕಿಸಿ ಪೀಠಕ್ಕೆ ಕೂರಿಸಿದ ಕೆಂಗೇರಿಯ ಬಂಡೆಮಠದ ಶ್ರೀಗಳು.ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿಗಳೆಂದು ಹೊಸದಾಗಿ ನಾಮಕರಣ .

ಕೆ.ಆರ್.ಪೇಟೆ: ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಶರಣ ಶ್ರದ್ಧಾಕೇಂದ್ರವಾದ ಕಾಪನಹಳ್ಳಿ ಗವಿಮಠದ ನೂತನ ಪೀಠಾಧಿಪತಿಗಳಾಗಿ ಶ್ರೀ.ಸ್ವತಂತ್ರ ಚನ್ನವೀರ ಸ್ವಾಮೀಜಿಗಳ ನೇಮಕ.ಶ್ರೀಮಠದ ವ್ಯಾಪ್ತಿಯ ಒಂಭತ್ತು ಹಳ್ಳಿಗಳ ಸದ್ಭಕ್ತರ ಸಮ್ಮುಖದಲ್ಲಿ ಕೆಂಗೇರಿಯ ಬಂಡೆಮಠದ ಶ್ರೀಗಳಿಂದ ಸ್ವಾಮೀಜಿಗಳಾಗಿ ಧೀಕ್ಷೆ ಸ್ವೀಕರಿಸಿದ ಗವಿಮಠದ ಅರ್ಚಕ ಚನ್ನವೀರಯ್ಯ.ಅರ್ಚಕ ಚನ್ನವೀರಯ್ಯ ಅವರನ್ನು ಶ್ರೀ ಸ್ವತಂತ್ರ ಚನ್ನವೀರಸ್ವಾಮಿಗಳಾಗಿ ಬದಲಾದ ನಾಮಕರಣ.ಗವಿಮಠದ ಸೇವಕನಾಗಿ ನಿಷ್ಠೆಯಿಂದ ಶ್ರೀಮಠವನ್ನು ಮುನ್ನಡೆಸುತ್ತೇನೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಖಾಲಿ ಉಳಿದಿದ್ದ ಶ್ರೀಮಠದ ಪೀಠಾಧಿಪತಿಗಳ ಸ್ಥಾನ.ಹಾರನಹಳ್ಳಿ ಕೋಡಿಮಠದ ಶಾಖಾಮಠವೆಂದು ಕೆ.ಆರ್.ಪೇಟೆ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವ ಕೋಡಿಶ್ರೀಗಳು.ಗವಿಮಠದ ಸದ್ಭಕ್ತರು ಹಾಗೂ ಸ್ವತಂತ್ರ ಸಿದ್ಧಲಿಂಗೇಶ್ವರರ ಪ್ರೇರಣೆಯಂತೆ ಗವಿಮಠದ ಶ್ರೀಗಳಾಗಿ ಅಧಿಕಾರ ಸ್ವೀಕರಿಸಿದ್ದೇನೆ. ನಾನು ವೇದ, ಮಂತ್ರ ಸಂಸ್ಕೃತಾಭ್ಯಾಸ ಮಾಡಿಲ್ಲ.ಆದರೆ ಕಳೆದ 18ವರ್ಷಗಳಿಂದ ಶ್ರೀಮಠದಲ್ಲಿ ಅರ್ಚಕನಾಗಿ ಕೆಲಸ ಮಾಡಿದ ಅನುಭವವಿದೆ. ಶ್ರೀ ಮಠದ ಅಭಿವೃದ್ಧಿಯೇ ನನ್ನ ಮೂಲಮಂತ್ರವಾಗಿದೆ. ಗವಿಮಠವನ್ನೇ ಜನತೆ ಹಾಗೂ ಭಕ್ತರ ಮನೆಬಾಗಿಲಿಗೆ ಕೊಂಡೊಯ್ದು ಬಿಕ್ಷೆಬೇಡಿಕೊಂಡು ಜೋಳಿಗೆಯಲ್ಲಿ ಬಂದ ಹಣದಿಂದ ಶ್ರೀಮಠವನ್ನು ಮುನ್ನಡೆಸುತ್ತೇನೆ. ಕಾಪನಹಳ್ಳಿ ಗವಿಮಠದಲ್ಲಿ ಕೇವಲ ಸಾಮಾನ್ಯ ಅರ್ಚಕನಾಗಿದ್ದ ನಾನು ಮಠದ ಸ್ವಾಮೀಜಿಯಾಗುತ್ತೇನೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ.ಎಲ್ಲಾ ಸಿದ್ಧಲಿಂಗಪ್ಪನ ಇಚ್ಛೆ.ಹೊಸವಿವಾದ ಹುಟ್ಟು ಹಾಕಿದ ಗವಿಮಠದ ಉತ್ತರಾಧಿಕಾರಿ ನೇಮಕ.ಈ ಹಿಂದೆ ಮಠದ ಪೀಠಾಧ್ಯಕ್ಷರಾಗಿದ್ದ ದಿವಂಗತ ಶ್ರೀ ಚಂದ್ರಶೇಖರ ಸ್ವಾಮೀಜಿಗಳ ಸಹೋದರ ಬಸವರಾಜಸ್ವಾಮಿಗಳಿಂದ ನಡೆದ ಪೀಠಾಧಿಪತಿ ನೇಮಕ.ಸ್ಥಳೀಯಚಮುಖಂಡರ ಬೆಂಬಲ ಹಾಗೂ ಮನದಾಸೆಯನ್ನು ಪುರಸ್ಕರಿಸಿ ಅರ್ಚಕ ಚನ್ನವೀರಯ್ಯ ಅವರನ್ನೇ ಸ್ವಾಮೀಜಿಗಳಾಗಿ ಧೀಕ್ಷೆ ನೀಡಿ ಖಾವಿಬಟ್ಟೆ ಹಾಕಿಸಿ ಹೊಸದಾಗಿ ಶ್ರೀ ಸ್ವತಂತ್ರ ಚನ್ನವೀರಸ್ವಾಮೀಜಿಗಳೆಂದು ನಾಮಕರಣ ಮಾಡಿ ಪೀಠಾಧಿಪತಿ ಸ್ಥಾನದಲ್ಲಿ ಕೂರಿಸಿದ ಕೆಂಗೇರಿಯ ಬಂಡೆಮಠದ ಶ್ರೀಗಳು. ಗವಿಮಠದ ಸದ್ಭಕ್ತರಲ್ಲಿ ಬುಗಿಲೆದ್ದ ಭಿನ್ನಮತ.ಕೋಡಿಮಠದ ಶ್ರೀಗಳ ನಡೆ ಇನ್ನೂ ನಿಗೂಢ.

Share this article

About Author

Madhu
Leave a comment

Write your comments

Visitors Counter

336282
Today
Yesterday
This Week
This Month
Last Month
All days
707
951
2401
2172
14750
336282

Your IP: 216.73.216.24
2025-09-03 14:13

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles