ಗೊರವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ ಇನ್ನೂ ಬಾರದ ಅಧಿಕಾರಿಗಳು,ಚಿರತೆ ಸೆರೆ ಹಿಡಿಯಲು ಕ್ರಮಕೈಗೊಂಡಿಲ್ಲಾ ಎಂದು ಗ್ರಾಮಸ್ಥರ ಕಿಡಿ.

ಕೆ.ಆರ್.ಪೇಟೆ ತಾಲ್ಲೂಕಿನ ಗೊರವಿ ಗ್ರಾಮದಲ್ಲಿ ನೆನ್ನೆ ದಾಳಿಮಾಡಿದ ಚಿರತೆ ಇಂದು ಸಹ ಅದೆ ಹಸುವನ್ನು ಎಳೆದುಕೊಂಡು ಹೋಗಿ ತಿಂದ ಘಟನೆ ನೆಡದಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಗೊರವಿ ಗ್ರಾಮದಲ್ಲಿ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಹಸುವನ್ನು ತಿಂದ ಘಟನೆ ನೆನ್ನೆ ನಡೆದಿತ್ತು. ಅದರೆ ರಾತ್ರಿ ಕೂಡಾ ಚಿರತೆ ಅಲ್ಲೆ ಇದ್ದ ಹಸುವಿನ ದೇಹವನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿ ನಂತರ ತಿಂದಿದೆ.

ನೆನ್ನೆ ಸಂಜೆ ವರೆಗೂ ಅಲ್ಲೆ ಕಾದುಕುಳಿತ್ತಿದ್ದ ಗ್ರಾಮಸ್ಥರು ಅರಣ್ಯದಿಕಾರಿಗಳು ಬಾರದ ಹಿನ್ನೆಲೆ ಮನೆಗೆ ತೆರಳಿದರು. ನಂತರ ಬೆಳ್ಳಿಗೆ ನೋಡಿದರೆ ಮತ್ತೆ ಚಿರತೆ ಹಸುವಿನ ದೇಹವನ್ನು ಸ್ವಲ್ಪ ದೂರ ಎಳೆದುಕೊಂಡು ಹೊಗಿ ನಂತರ ಕತ್ತಿನ ಭಾಗವನ್ನು ತಿಂದು ಹಾಕಿದೆ ಇದರಿಂದ ಗ್ರಾಮಸ್ಥರಲ್ಲಿ ಮತ್ತಷ್ಟು ಭಯ ಮನೆಮಾಡಿದೆ.

ಕೇವಲ ಬಂದು ನೋಡಿಕೊಂಡು ಹೊದ ಅಧಿಕಾರಿಗಳು ಚಿರತೆ ಹಿಡಿಯುವ ಯಾವುದೇ ಬೋನ್ ಕೂಡಾ ಅಳವಡಿಸಿಲ್ಲ ಕೇಳಿದರೆ ನಾಳೆ ಅಳವಡಿಸುತ್ತೆವೆ ಎಂದು ಉತ್ತರ ನೀಡುತ್ತಾರೆ.ಅದರೆ ಇಂದು ಹಸುವಿಗೆ ಹಾದ ಪರಿಸ್ಥಿತಿ ನಾಳೆ ಯಾರಾದರೂ ಗ್ರಾಮಸ್ಥರ ಅಥವಾ ಮಕ್ಕಳ ಮೇಲೆ ಚಿರತೆ ಅಲ್ಲೆ ಮಾಡಿದ್ದಾರೆ ಎನು ಗತಿ ಎಂದು ಗ್ರಾಮಸ್ಥರ ಭಯ ವ್ಯಕ್ತಪಡಿಸಿದ್ದಾರೆ.

ಕೂಡಲೆ ಚಿರತೆಯನ್ನು ಸೆರೆಹಿಡಿಯದಿದ್ದರೆ ತಾಲ್ಲೂಕಿನ ಅರಣ್ಯ ಇಲಾಖೆಯ ಕಛೇರಿಗೆ ಮುತ್ತಿಗೆ ಹಾಕುತ್ತವೆ ಎಂದು ಅಧಿಕಾರಿಗಳು ಮೇಲೆ ಅಕ್ರೊಸ ವ್ಯಕ್ತಪಡಿಸಿದ್ದಾರೆ.ಅಧಿಕಾರಿಗಳು ಇತ್ತ ಗಮನಹರಿಸುತ್ತಾರಾ ಕಾದು ನೋಡಬೇಕಿದೆ‌.

Share this article

About Author

Madhu
Leave a comment

Write your comments

Visitors Counter

336180
Today
Yesterday
This Week
This Month
Last Month
All days
605
951
2299
2070
14750
336180

Your IP: 216.73.216.24
2025-09-03 12:16

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles