ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿ ಗಾಣಾಳು ಗ್ರಾಮದಲ್ಲಿ ನಾಲ್ಕು ಕಾಡಾನೆಗಳು ದಾಳಿ ಮಾಡಿ ರೈತರ ಬಾಳೆ, ತೆಂಗು ಬೆಳೆಯನ್ನು ನಾಶ ಮಾಡಿವೆ.
ಗ್ರಾಮದ ಪಕ್ಕದಲ್ಲೇ ಇರುವ ಲಿಂಗೇಗೌಡರ ಮಗ ಮಹದೇವು ರವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿರುವ ಬಾಳೆ ತೋಟಕ್ಕೆ ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ನುಗ್ಗಿ ಬಂದ ಆನೆಗಳ ಗುಂಪೊಂದು ಗೊನೆ ಬಿಟ್ಟಿದ್ದ ಒಂದು ಎಕರೆಯಲ್ಲಿ ಬೆಳೆದಿದ್ದ ಬಾಳೆಗಿಡಗಳನ್ನು ಮುರಿದು ಹಾಕಿವೆ.
ಮೊದಲೇ ರೈತ ಬೆಳೆದ ಬೆಳೆಗೆ ಬೆಲೆ ಇಲ್ಲದಿರುವ ಸಮಯದಲ್ಲಿ ಕೈಗೆ ಬಂದ ಬೆಳೆ ಸ್ವಲ್ಪವಾದರೂ ಸಮಸ್ಯೆಗಳನ್ನು ನೀಗಿಸಬಹುದು ಎಂಬ ಭರವಸೆಯಲ್ಲಿ ಜೀವನ ನೆಡೆಸುತ್ತಿರುವ ರೈತರ ಬದುಕು ನುಂಗಲಾರದ ತುತ್ತಾಗಿದೆ.
ಹಾನಿಗೊಳಗಾದ ಜಮೀನಿನ ಮಾಲಿಕ ಮಹದೇವು ಮಾತನಾಡಿ , ಅರಣ್ಯದ ಸುತ್ತಲೂ ಸೋಲಾರ್ ಬೇಲಿ ನಿರ್ಮಿಸಿ ಕಾಡಾನೆಗಳ ಹಾವಳಿ ತಪ್ಪಿಸಬೇಕು ,ರೈತರ ಬದುಕು ಕಷ್ಟ ಕಾರವಾಗಿದೆ ಎಂದು ಅರಣ್ಯಾದಿಕಾರಿಗಳಿಗೆ ಮನವಿ ಮಾಡಿದರು.
ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ರೈತರ ಬಳಿ ಮಾಹಿತಿ ಪಡೆದು, ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ
Last modified on 25/07/2018