ಮಂಡ್ಯ: ಬೈಕ್ ಮತ್ತು ಕಾರ್ ಮುಖಾ ಮುಖಿ ಡಿಕ್ಕಿ ಸ್ಥಳದಲ್ಲೇ ಬೈಕ್ ಸವಾರ ಸಾವು ಇಬ್ಬರ ಸ್ಥಿತಿ ಚಿಂತಾಜನಕ.
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಪೆಟ್ರೋಲಿಯ ಬಕ್ ಕ್ರಾಸ್ ಬಳಿ ಘಟನೆ.
ಚನ್ನರಾಯಪಟ್ಟ ಕಡೆಯಿಂದ ಇಟಿಯಾಸ್ ಕಾರ್ ನಲ್ಲಿ ನಾಲ್ಕು ಜನರು ಬರುತ್ತಿದ್ದು ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರನಿಗೆ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಬೈಕ್ ಸವಾರ ಸಾವನ್ನಪ್ಪಿದ್ದು. ಕಾರಿನಲಿದ್ದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಸ್ಥಳಕ್ಕೆ ಕಿಕ್ಕೇರಿ ಪೋಲೀಸ್ ಠಾಣೆಯ ಪಿ ಎಸ್ ಐ ಚಂದ್ರಶೇಖರ್ ಮತ್ತು ಎ ಎಸ್ ಐ ಸುರೇಂದ್ರನಾಥ್, ಸಿಬ್ಬಂದಿಗಳಾದ ರೇವಣ್ಣ, ಬೆಟಿ ನೀಡಿ ಸ್ಥಳ ಪರಿಶೀಲನೆ ನೆಡೆಸಿದರು. ಗಾಯಾಳುಗಳನ್ನು ಕೃಷ್ಣರಾಜಪೇಟೆ ಸರ್ಕಾರಿ ಆಸ್ಪತ್ರೆ ರವಾಹನೆ ಮಾಡಲಾಯಿತು.